Tag: nasik

  • ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಮುಂಬೈ: 2027ರಲ್ಲಿ ಪೂರ್ಣ ಕುಂಭಮೇಳವು (Kumbh Mela) ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ತಿಳಿಸಿದ್ದಾರೆ.

    ಮುಂಬೈನಲ್ಲಿ ನಡೆದ ನಾಸ್ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2027ರಲ್ಲಿ, ನಾವು ನಾಸಿಕ್‌ನಲ್ಲಿ ಕುಂಭಮೇಳವನ್ನು ನಡೆಸುತ್ತೇವೆ. ಪ್ರಯಾಗ್‌ರಾಜ್ ಕುಂಭವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು ಮತ್ತು ನಾಸಿಕ್‌ನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನಡೆಸುತ್ತೇವೆ. 2015ರಲ್ಲಿ ಕುಂಭಮೇಳ ಆಯೋಜಿಸಿದ ಅನುಭವ ನನಗಿದೆ. ಆದರೆ ನಾಸಿಕ್‌ನಲ್ಲಿ ನಡೆಯುವ ಕುಂಭಮೇಳವು ತಾಂತ್ರಿಕವಾಗಿ ಮುಂದುವರಿದ ಕುಂಭವಾಗಲಿದೆ ಎಂದರು. ಇದನ್ನೂ ಓದಿ: `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್

    2027ರ ಪೂರ್ಣ ಕುಂಭಮೇಳವು ನಾಸಿಕ್‌ನಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಗೋದಾವರಿ ನದಿಯ ದಡದಲ್ಲಿರುವ ತ್ರಯಂಬಕೇಶ್ವರದಲ್ಲಿ ನಡೆಯಲಿದೆ. ನಾಸಿಕ್ ಕುಂಭಮೇಳವು 2027ರ ಜು.17 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 17ರಂದು ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಮಹಾರಾಷ್ಟ್ರ ಸರ್ಕಾರವು 2027ರಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ತಯಾರಿಯನ್ನು ನಡೆಸುತ್ತಿದೆ. ರಸ್ತೆ, ಸಂಚಾರ ನಿರ್ವಹಣೆ ಮತ್ತು ಸಂಪರ್ಕವನ್ನು ಯೋಜನೆಗಳನ್ನು ಚರ್ಚಿಸಲು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಷಾ ಪತಂಕರ್ ಮಹೈಸ್ಕರ್ ನಾಸಿಕ್‌ಗೆ ಭೇಟಿ ನೀಡಿದ್ದರು. ಪಾರ್ಕಿಂಗ್ ಪ್ರದೇಶದಿಂದ ಕುಂಭಸ್ಥಳಕ್ಕೆ ಯಾತ್ರಿಕರನ್ನು ಕರೆದೊಯ್ಯಲು ವಿಶೇಷ ಬಸ್‌ಗಳನ್ನು ವ್ಯವಸ್ಥೆಗೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

    ನಾಸಿಕ್ ಮಹಾನಗರ ಪಾಲಿಕೆಯು ಮೂಲಸೌಕರ್ಯ ಸುಧಾರಣೆಗಾಗಿ 7,500 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಕುಂಭಮೇಳದ ಪೂರ್ವತಯಾರಿ ಕಾರ್ಯವು ಎಪ್ರಿಲ್‌ನಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಿಕೆಶಿಗೆ ಕರಿಬೆಕ್ಕುಗಳ ಕಾಟ, ಕರ್ನಾಟಕದಲ್ಲಿ ಡಿಕೆಶಿ ಕೂಡ ಒಬ್ಬ ಏಕನಾಥ್ ಶಿಂಧೆ : ಆರ್.ಅಶೋಕ್

  • ಈರುಳ್ಳಿ ಬೆಲೆ ದಿಢೀರ್‌ ಏರಿಕೆಯಾಗಿದ್ದೇಕೆ?

    ಈರುಳ್ಳಿ ಬೆಲೆ ದಿಢೀರ್‌ ಏರಿಕೆಯಾಗಿದ್ದೇಕೆ?

    ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ (Onion Price) ಗಗನಕ್ಕೇರಿದೆ. ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಬಂಪರ್‌ ಆಫರ್‌ ಸಿಕ್ಕಂತಾಗಿದೆ. ಏಕೆಂದರೆ ಈರುಳ್ಳಿ ಬೆಲೆ ಏರುತ್ತಲೇ ಹೋಯಿತೇ ಹೊರತು ಕಡಿಮೆಯಂತು ಆಗಲೇ ಇಲ್ಲ. ಈರುಳ್ಳಿ ಬಳಸದೇ ಅಡುಗೆ ಮಾಡಿದರೆ ಉತ್ತಮ ಎನ್ನುವಂತಾಗಿದೆ.

    ಸಗಟು ಮಾರುಕಟ್ಟೆಗಳಲ್ಲಿ ಕಿಲೋಗ್ರಾಂಗೆ 40-60 ರೂಪಾಯಿ ಇದ್ದ ಬೆಲೆ ಈಗ ಶತಕದಂಚಿನಲ್ಲಿದೆ. ಸಮಯಕ್ಕೆ ಸರಿಯಾಗಿ ಮಳೆ, ಬಿಸಿಲು, ಚಳಿ ಋತುಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇದು ಮುಖ್ಯವಾಗಿ ಕೃಷಿಕರ ಮೇಲೆ ಭಾರೀ ಪರಿಣಾಮ ಬೀರಿದೆ. ಆಯಾ ಕಾಲಕ್ಕನುಗುಣವಾಗಿ ರೈತ ಬೆಳೆಗಳನ್ನು ಬೆಳೆಯುತ್ತಾನೆ. ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವಂತಹ ಬದಲಾವಣೆಗಳಿಂದ ರೈತ ತಾನು ಬೆಳೆದ ಬೆಳೆಯಲ್ಲಿ ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾನೆ. ಮಾತ್ರವಲ್ಲದೇ ಬೆಳೆ ನಾಶದಿಂದ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಿದ್ದಾನೆ.

    ಈಗೀಗ ಮಳೆಯಂತೂ ಸೂಚನೆಯಿಲ್ಲದೇ ಬರುತ್ತದೆ. ಇದರಿಂದಾಗಿ ಬೆಳೆಗಳು ಕೊಳೆತು ಹಾಳಾಗುತ್ತದೆ. ಇತ್ತೀಚಿಗಿನ ಮಳೆಯು ಈರುಳ್ಳಿ ಬೆಳೆಯನ್ನು ಮುಕ್ಕಾಲು ಭಾಗ ಹಾಳುಗೆಡವಿದೆ. ಅನೇಕ ಕಡೆಯಲ್ಲಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ಮಳೆಯಿಂದ ಕೊಳೆತು ಹೋಗಿದೆ. ಭಾರತದ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ರಾಜ್ಯವೆಂದರೆ ಅದು ಮಹಾರಾಷ್ಟ್ರ. ನ.20 ರಂದು ಅಲ್ಲಿ ಚುನಾವಣೆ ನಡೆಯಲಿರುವ ಕಾರಣ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಪುಣೆ, ದೆಹಲಿ, ಚಂಡೀಗಢ ಮತ್ತು ಇತರ ಕೆಲವು ನಗರಗಳಲ್ಲಿನ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆಜಿ ಗೆ ರೂ 100 ರೂ. ಆಗಿದೆ.

    ಈರುಳ್ಳಿ ಬೆಲೆ ಏಕೆ ಏರುತ್ತಿದೆ?
    ಭಾರತದ ಅತಿದೊಡ್ಡ ಈರುಳ್ಳಿ ಉತ್ಪಾದಿಸುವ ಜಿಲ್ಲೆಯಾದ ಮಹಾರಾಷ್ಟ್ರದ ನಾಸಿಕ್‌ನ ಸಗಟು ಮಾರುಕಟ್ಟೆಯ ವ್ಯಾಪಾರಿಗಳು, ರೈತರ ಪೂರೈಕೆಯಲ್ಲಿನ ಕುಸಿತದಿಂದ ಹೀಗಾಗಿದೆ ಎಂದು ಹೇಳಿದ್ದಾರೆ. ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲಗಾಂವ್ ಸಗಟು ಮಾರುಕಟ್ಟೆಗೆ ಪ್ರತಿನಿತ್ಯ 200-250 ಟನ್ ಈರುಳ್ಳಿ ಬರುತ್ತಿದೆ. ಕಳೆದ ವರ್ಷ ಸುಮಾರು 1,000 ಟನ್‌ಗಳಷ್ಟು ಬರುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಪ್ರಮಾಣ ಕಡಿಮೆಯಾಗಿದೆ.

    ಈರುಳ್ಳಿ ಪೂರೈಕೆಯನ್ನು ಯಾವಾಗ ಪ್ರಾರಂಭಿಸಲಾಗುತ್ತದೆ ?
    ಒಂದು ವರ್ಷದಲ್ಲಿ ಈರುಳ್ಳಿಯನ್ನು ಮೂರು ಅವಧಿಗಳಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ರೈತರು ತಮ್ಮ ಖಾರಿಫ್ ಈರುಳ್ಳಿ ಬೆಳೆಯನ್ನು ಜೂನ್ ಮತ್ತು ಜುಲೈನಲ್ಲಿ ಬಿತ್ತನೆ ಮಾಡುತ್ತಾರೆ. ಅಕ್ಟೋಬರ್‌ನಿಂದ ಕೊಯ್ಲು ಮಾಡುತ್ತಾರೆ. ಆದಾಗ್ಯೂ, ಈ ವರ್ಷ ಅಕ್ಟೋಬರ್ ಮಧ್ಯದಲ್ಲಿ ಮತ್ತು ದೀಪಾವಳಿ ಸಮಯದ ಅಕ್ಟೋಬರ್ ಕೊನೆಯಲ್ಲಿ ಬೀಳುವ ಮಳೆಯಿಂದಾಗಿ ವಿಳಂಬವಾಯಿತು.

    ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಬಿತ್ತಲಾಗುತ್ತದೆ ಮತ್ತು ಡಿಸೆಂಬರ್ ನಂತರ ಕೊಯ್ಲು ಮಾಡಲಾಗುತ್ತದೆ. ಎಲ್ಲಾ ಪ್ರಮುಖ ರಬಿ ಬೆಳೆಯನ್ನು ಡಿಸೆಂಬರ್‌ನಿಂದ ಜನವರಿವರೆಗೆ ಬಿತ್ತಲಾಗುತ್ತದೆ ಮತ್ತು ಮಾರ್ಚ್ ನಂತರ ಕೊಯ್ಲು ಮಾಡಲಾಗುತ್ತದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಖಾರಿಫ್‌ ಬೆಳೆ ಕಟಾವು ಮೇಲೆ ಭಾರಿ ಪರಿಣಾಮ ಬೀರಿದೆ. ಭಾರತದಾದ್ಯಂತ, ಕಳೆದ ವರ್ಷದ 2.85 ಲಕ್ಷ ಹೆಕ್ಟೇರ್‌ಗಳಿಗೆ ಹೋಲಿಸಿದರೆ 3.82 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಖಾರಿಫ್ ಬಿತ್ತನೆಯಾಗಿದೆ ಎಂದು ವರದಿಯಾಗಿದೆ. 2023 ರಲ್ಲಿ 1.66 ಲಕ್ಷ ಹೆಕ್ಟೇರ್‌ಗಳಿಗೆ ಹೋಲಿಸಿದರೆ, ತಡವಾಗಿ ಖಾರಿಫ್ ಬಿತ್ತನೆಯು 0.55 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿತ್ತು.

    ಖಾರಿಫ್ ಬೆಳೆಗೆ (ಮಳೆಗಾಲದಲ್ಲಿ ಬೆಳೆಯುವ ಬೆಳೆ) ಮೀಸಲಾಗಿರುವ ಸರಾಸರಿಗಿಂತ ಹೆಚ್ಚಿನ ವಿಸ್ತೀರ್ಣವನ್ನು ಗಮನಿಸಿದರೆ, ಮುಂದಿನ ಕೆಲವು ದಿನಗಳಲ್ಲಿ ಬೆಲೆಗಳು ಗಣನೀಯವಾಗಿ ಕುಸಿಯಬಹುದು. ವಿಶೇಷವಾಗಿ ಮುಂಬರುವ ವರ್ಷದಲ್ಲಿ,ರಬಿ ಬೆಳೆ (ಚಳಿಗಾಲದಲ್ಲಿ ಬೆಳೆಯುವ ಬೆಳೆ) ರೈತರಿಗೆ ಸವಾಲಾಗಿದೆ ಎಂದು ಹೇಳಬಹುದು. ಗಮನಾರ್ಹವಾಗಿ, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಇತ್ತೀಚೆಗೆ ಭಾರತೀಯ ಈರುಳ್ಳಿಗೆ ರಫ್ತು ಬೇಡಿಕೆ ಹೆಚ್ಚಿದೆ. ಆದರೆ ಸದ್ಯದ ಪ್ರಮಾಣ ತಮ್ಮ ಬೇಡಿಕೆ ಈಡೇರಿಕೆಗೆ ಸಮರ್ಪಕವಾಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

    ಮಹಾರಾಷ್ಟ್ರದಲ್ಲಿ ಚುನಾವಣಾ ವಿಷಯವಾಗಬಹುದೇ?
    2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಬಿಜೆಪಿ ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರಿಂದ ಗಮನಾರ್ಹ ಹಿನ್ನಡೆಯನ್ನು ಎದುರಿಸಿತು. ಕಡಿಮೆ ಈರುಳ್ಳಿ ಬೆಲೆ ಮತ್ತು ವಿವಾದಾತ್ಮಕ ರಫ್ತು ನಿಷೇಧದ ಸಂಯೋಜನೆಯು ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು. ರಾಜ್ಯದ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮೈತ್ರಿಕೂಟವು 12 ಸ್ಥಾನಗಳನ್ನು ಕಳೆದುಕೊಳ್ಳಲು ಕಾರಣವಾಯಿತು. ರಫ್ತು ನಿಷೇಧವನ್ನು ಅಂತಿಮವಾಗಿ ತೆಗೆದುಹಾಕಲಾಯಿತು ಆದರೆ ರಾಜಕೀಯ ಹಾನಿಯನ್ನು ಈಗಾಗಲೇ ಮಾಡಲಾಗಿದೆ.

    ಡಿ. 7, 2023 ರಿಂದ ಕೇಂದ್ರ ಸರ್ಕಾರವು ಈರುಳ್ಳಿ ಮೇಲೆ ರಫ್ತು ನಿಷೇಧವನ್ನು ವಿಧಿಸಿತು. ಏರುತ್ತಿರುವ ದೇಶೀಯ ಬೆಲೆಗಳನ್ನು ತಡೆಗಟ್ಟಲು ಮತ್ತು ಕೊರತೆಯನ್ನು ತಡೆಯುವ ಗುರಿಯನ್ನು ಹೊಂದಿದೆ. ನಿಷೇಧವನ್ನು ಮಾರ್ಚ್ 2024 ರಲ್ಲಿ ವಿಸ್ತರಿಸಲಾಯಿತು. ಆದರೆ ಮೇ 4, 2024 ರಂದು ನಿಷೇಧವನ್ನು ತೆಗೆದುಹಾಕಲಾಯಿತು . ಮಹಾರಾಷ್ಟ್ರದ ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಸರ್ಕಾರವು ಪ್ರತಿ ಮೆಟ್ರಿಕ್ ಟನ್‌ಗೆ 550 ಡಾಲರ್‌ ಕನಿಷ್ಠ ರಫ್ತು ಬೆಲೆ (MEP) ಮತ್ತು 40 ಪ್ರತಿಶತ ರಫ್ತು ಸುಂಕವನ್ನು ವಿಧಿಸಿತು. ಆದರೂ MEP ಅನ್ನು ಈಗ ತೆಗೆದು ಹಾಕಲಾಗಿದೆ.ಮಹಾರಾಷ್ಟ್ರದ ರೈತರು, ವಿಶೇಷವಾಗಿ ಈರುಳ್ಳಿ-ಉತ್ಪಾದನಾ ಪ್ರದೇಶಗಳಾದ ಧೂಲೆ, ದಿಂಡೋರಿ, ಅಹ್ಮದ್‌ನಗರ, ಪುಣೆ ಮತ್ತು ನಾಸಿಕ್‌ಗಳಲ್ಲಿ ರಫ್ತು ನಿರ್ಬಂಧಗಳು ತಮ್ಮ ಜೀವನೋಪಾಯಕ್ಕೆ ಹೊಡೆತ ನೀಡಿದ್ದರಿಂದ ತೀವ್ರ ನಷ್ಟವನ್ನು ಅನುಭವಿಸಿದರು. ಗುಜರಾತ್‌ನಲ್ಲಿ ಏಪ್ರಿಲ್‌ನಲ್ಲಿ ಈರುಳ್ಳಿ ರಫ್ತು ನಿಷೇಧವನ್ನು ತೆಗೆದುಹಾಕಿದ್ದರೆ ಮಹಾರಾಷ್ಟ್ರದಲ್ಲಿ ರಫ್ತು ನಿಷೇಧವನ್ನು ಮುಂದುವರೆಸಲಾಗಿತ್ತು.

    ಬಿಜೆಪಿ ನೇತೃತ್ವದ ಕೇಂದ್ರವು ಗುಜರಾತ್‌ನ ಈರುಳ್ಳಿ ರೈತರಿಗೆ ಆದ್ಯತೆ ನೀಡುತ್ತಿದೆ ಎಂದು ರಾಜ್ಯದ ರೈತರು ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತವು ಈ ವರ್ಷದ ಜುಲೈವರೆಗೆ 2024-25 ಹಣಕಾಸು ವರ್ಷದಲ್ಲಿ 2,60,000 ಟನ್ ಈರುಳ್ಳಿಯನ್ನು ರಫ್ತು ಮಾಡಿದೆ, ಹಿಂದಿನ ಆರ್ಥಿಕ ವರ್ಷದಲ್ಲಿ 1,71,700 ಟನ್‌ಗಳು. ಈರುಳ್ಳಿ ಭಾರತಕ್ಕೆ ಗಮನಾರ್ಹವಾದ ಆದಾಯವನ್ನು ಗಳಿಸುವ ಪ್ರಮುಖ ರಫ್ತು ಸರಕು. ರಫ್ತು ನಿಷೇಧದಿಂದ ಉಂಟಾದ ಅಡ್ಡಿ ಮತ್ತು ಮಹಾರಾಷ್ಟ್ರದಲ್ಲಿ ಅದರ ಹಿಂತೆಗೆದುಕೊಳ್ಳುವಿಕೆಯ ನಂತರದ ಗೊಂದಲವು ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಬಗ್ಗೆ ಅನೇಕ ರೈತರಿಗೆ ನಿರಾಸೆ ಮಾಡಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಲೋಕಸಭೆ ಚುನಾವಣೆಯಲ್ಲಿ ಮಹಾಯುತಿಯ ಕಳಪೆ ಪ್ರದರ್ಶನದ ಹಿಂದೆ ಈರುಳ್ಳಿ ರೈತರಲ್ಲಿ ಕಡಿಮೆ ಬೆಲೆಯ ಅಸಮಾಧಾನವು ಒಂದು ಕಾರಣ ಎಂದು ಒಪ್ಪಿಕೊಂಡಿದ್ದಾರೆ.

    ಬಿಜೆಪಿ ನೇತೃತ್ವದ ಕೇಂದ್ರವು ಮಹಾರಾಷ್ಟ್ರದ ಈರುಳ್ಳಿ ರೈತರಿಗಿಂತ ಗುಜರಾತ್‌ನ ಈರುಳ್ಳಿ ರೈತರಿಗೆ ಒಲವು ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ರಾಜ್ಯದ ಈರುಳ್ಳಿ ರೈತರಲ್ಲಿ ಉಳಿದಿರುವ ಅಸಮಾಧಾನವನ್ನು ಆಡಳಿತ ಮೈತ್ರಿಕೂಟವು ಎಷ್ಟು ಚೆನ್ನಾಗಿ ಪರಿಹರಿಸುತ್ತದೆ ಎಂಬುದರ ಮೇಲೆ ಫಲಿತಾಂಶವು ನಿರ್ಧಾರವಾಗಲಿದೆ.

  • ಆಕ್ಸಿಜನ್ ಸೋರಿಕೆ ದುರಂತಕ್ಕೆ ಮೋದಿ ಸಂತಾಪ -ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಆಕ್ಸಿಜನ್ ಸೋರಿಕೆ ದುರಂತಕ್ಕೆ ಮೋದಿ ಸಂತಾಪ -ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಮುಂಬೈ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಮಧ್ಯೆ ಆಕ್ಸಿಜನ್ ಸಮಸ್ಯೆ ಪದೇ ಪದೇ ಕಾಡುತ್ತಿದೆ. ಇದರ ಮಧ್ಯೆ ಬುಧವಾರ ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ದುರಂತ ನಡೆದಿದ್ದು, ಆಕ್ಸಿಜನ್ ಟ್ಯಾಂಕ್ ಸೋರಿಕೆ ಹಿನ್ನೆಲೆ 22 ಜನ ರೋಗಿಗಳು ಪ್ರಾಣ ಬಿಟ್ಟಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

    ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಲೀಕ್ ಆಗಿದ್ದರಿಂದ 30 ನಿಮಿಷ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಆಕ್ಸಿಜನ್ ವ್ಯವಸ್ಥೆಯಲ್ಲಿದ್ದ 22 ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ದುರಂತಕ್ಕೆ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಮೃತ ಕುಟುಂಬದ ಸದಸ್ಯರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಘೋಷಿಸಿದ್ದಾರೆ.

    ಆಸ್ಪತ್ರೆಯಲ್ಲಿ ಒಟ್ಟು 23 ರೋಗಿಗಳು ಆಕ್ಸಿಜನ್ ವೆಂಟಿಲೇಟರ್ ನಲ್ಲಿದ್ದರು. ಇನ್ನು ಆಸ್ಪತ್ರೆಯಲ್ಲಿದ್ದ 171 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆಕ್ಸಿಜನ್ ಸೋರಿಕೆಯ ನಿಯಂತ್ರಿಸಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

    ನಾಸಿಕ್ ನಲ್ಲಿ ಇದುವರೆಗೂ 2,56,586 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯ 44,279 ಜನ ಕೊರೊನಾಗೆ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ನಾಸಿಕ್ ನಲ್ಲಿ ಕೊರೊನಾ 2,672 ಜನರನ್ನ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಮತ್ತು ಬೆಡ್ ಸಮಸ್ಯೆಯುಂಟಾಗಿದೆ.

    ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‍ಗಳು ಬರಿದಾಗಲಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

  • ಆಕ್ಸಿಜನ್ ಟ್ಯಾಂಕ್ ಲೀಕ್, ಪೂರೈಕೆ ಸ್ಥಗಿತ – 22 ರೋಗಿಗಳ ಸಾವು

    ಆಕ್ಸಿಜನ್ ಟ್ಯಾಂಕ್ ಲೀಕ್, ಪೂರೈಕೆ ಸ್ಥಗಿತ – 22 ರೋಗಿಗಳ ಸಾವು

    – ಆಕ್ಸಿಜನ್ ವೆಂಟಿಲೇಟರ್ ನಲ್ಲಿ 23 ರೋಗಿಗಳು

    ಮುಂಬೈ: ದೇಶದಲ್ಲಿ ಆಕ್ಸಿಜನ್ ಸಮಸ್ಯೆ ಕ್ಷಣ ಕ್ಷಣಕ್ಕೂ ಭಯಂಕರ ರೂಪ ಪಡೆಯುತ್ತಿದೆ. ಬುಧವಾರ ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ದುರಂತ ನಡೆದಿದ್ದು, ಆಕ್ಸಿಜನ್ ಟ್ಯಾಂಕ್ ಸೋರಿಕೆ ಹಿನ್ನೆಲೆ 22 ರೋಗಿಗಳು ಪ್ರಾಣ ಬಿಟ್ಟಿದ್ದಾರೆ.

    ನಾಸಿಕ್ ನಗರದ ಡಾ.ಝಾಕೀರ್ ಹುಸೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಲೀಕ್ ಆಗಿದ್ದರಿಂದ 30 ನಿಮಿಷ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಆಕ್ಸಿಜನ್ ವ್ಯವಸ್ಥೆಯಲ್ಲಿದ್ದ 22 ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 23 ರೋಗಿಗಳು ಆಕ್ಸಿಜನ್ ವೆಂಟಿಲೇಟರ್ ನಲ್ಲಿದ್ದರು. ಇನ್ನು ಆಸ್ಪತ್ರೆಯಲ್ಲಿದ್ದ 171 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆಕ್ಸಿಜನ್ ಸೋರಿಕೆಯ ನಿಯಂತ್ರಿಸಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

    ನಾಸಿಕ್ ನಲ್ಲಿ ಇದುವರೆಗೂ 2,56,586 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯ 44,279 ಜನ ಕೊರೊನಾಗೆ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ನಾಸಿಕ್ ನಲ್ಲಿ ಕೊರೊನಾ 2,672 ಜನರನ್ನ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಮತ್ತು ಬೆಡ್ ಸಮಸ್ಯೆಯುಂಟಾಗಿದೆ.

    ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ವಿಪರೀತ ಹಂತ ತಲುಪಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕದ ಸಿಲಿಂಡರ್‍ಗಳು ಬರಿದಾಗಲಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆತಂಕ ವ್ಯಕ್ತಪಡಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

  • ಬಿಜೆಪಿ ಮಾಜಿ ಎಂಎಲ್‍ಸಿಯಿಂದ ಸೇನೆಗೆ 20 ಲಕ್ಷ ರೂ. ಮೌಲ್ಯದ ಆಭರಣ ದೇಣಿಗೆ!

    ಬಿಜೆಪಿ ಮಾಜಿ ಎಂಎಲ್‍ಸಿಯಿಂದ ಸೇನೆಗೆ 20 ಲಕ್ಷ ರೂ. ಮೌಲ್ಯದ ಆಭರಣ ದೇಣಿಗೆ!

    ನಾಸಿಕ್: ಭಾರತೀಯ ಜನತಾ ಪಕ್ಷದ ಮಾಜಿ ಎಂಎಲ್‍ಸಿ ನಿಶಿಗಂಧಾ ಮೊಗಲ್ ಅವರು ಭಾರತೀಯ ಸೇನೆಗೆ ಚಿನ್ನದ ಆಭರಣಗಳನ್ನು ದೇಣಿಗೆ ನೀಡುವ ಮೂಲಕ ದೇಶ ಭಕ್ತಿ ಮೆರೆದಿದ್ದಾರೆ.

    ನಿಶಿಗಂಧಾ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಈ ಮಹಾನ್ ಕೆಲಸವೊಂದನ್ನು ಮಾಡಿದ್ದಾರೆ. ತಮ್ಮ 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಭಾರತೀಯ ಸೈನ್ಯಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿನ್ನಾಭರಣಗಳನ್ನು ಯುದ್ಧ ಹಾಗೂ ಇನ್ನಿತರ ಹೋರಾಟಗಳಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ಹಾಗೂ ನಿವೃತ್ತ ಯೋಧರ ಅನುಕೂಲಕ್ಕಾಗಿ ಬಳಸುವಂತೆ ನಿಶಿಗಂಧಾ ತಿಳಿಸಿದ್ದಾರೆ.

    ಇತ್ತ ನಿಶಿಗಂಧಾ ಅವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಕೂಡ ಬರೆದಿದ್ದಾರೆ. ನಮ್ಮ ದೇಶದ ಸೇನೆ ಹಾಗೂ ಸೈನಿಕರಿಗೆ ತಾನು ಏನಾದರೂ ಒಳ್ಳೆಯದು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೆ. ಈ ವೇಳೆ ಆಭರಣಗಳನ್ನು ದಾನ ಮಾಡಿದರೆ ಹೇಗೆ ಎಂಬ ಆಲೋಚನೆ ಉಂಟಾಯಿತು. ಅಲ್ಲದೆ ಚಿನ್ನಾಭರಣಗಳನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದೆ ಎಂದ ಅವರು, ಈ ಸಂಬಂಧ ಪ್ರಧಾನಿ ಪತ್ರ ಬರೆದಿರುವುದು ನಿಜಕ್ಕೂ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ನಿಶಿಗಂಧಾ ಹೇಳಿದರು.

    ನಿಶಿಗಂಧಾ ಅವರು 1996 ರಿಂದ 2000 ವರೆಗೆ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸಿದ್ದರು. ನನ್ನ ಜೀವನದುದ್ದಕ್ಕೂ ದೇಶ ಕಾಯುವ ಯೋಧರಿಗಾಗಿ ಏನಾದರೂ ಕೊಡುಗೆ ನಿಡಬೇಕು ಎಂಬ ಕನಸು ಕಂಡಿದ್ದು, ಸದ್ಯ ಅದನ್ನು ಘೋಷಣೆ ಕೂಡ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಕುಟುಂಬ ಕೂಡ ಬೆಂಬಲವಾಗಿ ನಿಂತಿದ್ದು, ತುಂಬಾನೇ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

  • ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

    ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

    ಮುಂಬೈ (ನಾಸಿಕ್): ಪಾಕ್ ಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಭಾರತದ ಹೆಮ್ಮೆಯ ಪುತ್ರ, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಭಾನುವಾರ ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ತಿಳಿಸಿದೆ.

    ಈ ಪುರಸ್ಕಾರದ ಜೊತೆಗೆ 2.51 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನೂ ಕೂಡ ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ಅಭಿನಂದನ್ ಅವರಿಗೆ ನೀಡಿ ಗೌರವಿಸಲಿದೆ. ಈ ಪುರಸ್ಕಾರವನ್ನು ಮಹಾವೀರ ಜಯಂತಿ ದಿನ (ಏಪ್ರಿಲ್ 17) ಪ್ರಧಾನ ಮಾಡಲಾಗುವುದು ಎಂದು ಮಹಾ ಸಮಿತಿಯ ನಿರ್ವಾಹಕ ಪರಾಸ್ ಲೊಹಾಡೆ ತಿಳಿಸಿದ್ದು, ಈ ಮೂಲಕ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲು ಜೈನ ಮಹಾಸಮಿತಿ ನಿರ್ಧರಿಸಿದೆ.

    ಹಾಗೆಯೇ ಈ ಅತ್ಯುತ್ತಮ ಪುರಸ್ಕಾರ ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವೀರಯೋಧ ಅಭಿನಂದನ್ ಅವರು ಪಾತ್ರರಾಗಲಿದ್ದಾರೆ. ಪಾಕಿಸ್ತಾನದ ಎಫ್-16 ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ಮಿಗ್-21 ವಿಮಾನದ ಪೈಲಟ್ ಅಭಿನಂದನ್ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ನವದೆಹಲಿಯಲ್ಲಿ ಮಹಾಸಮಿತಿಯ ಅಧ್ಯಕ್ಷ ಮುನೀಂದ್ರ ಜೈನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಲೂನ್ ನುಂಗಿ 8 ತಿಂಗಳ ಮಗು ದುರ್ಮರಣ!

    ಬಲೂನ್ ನುಂಗಿ 8 ತಿಂಗಳ ಮಗು ದುರ್ಮರಣ!

    ನಾಸಿಕ್: ರಬ್ಬರ್ ಬಲೂನ್ ನುಂಗಿ 8 ತಿಂಗಳ ಮಗು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ ಸಿಡ್ಕೋ ವ್ಯಾಪ್ತಿಯ ಹನುಮಾನ್ ನಗರದಲ್ಲಿ ಗುರುವಾರ ನಡೆದಿದೆ.

    ನಗರದ ಮನೆಯಲ್ಲಿ ರಬ್ಬರ್ ಬಲೂನ್‍ನೊಂದಿಗೆ ಆಟವಾಡುತ್ತಾ ಮಗು ಬಲೂನನ್ನು ನುಂಗಿದೆ. ಇದರಿಂದ ಮಗು ಉಸಿರುಗಟ್ಟಿ ಒದ್ದಾಡುತ್ತಿತ್ತು. ಇದನ್ನು ನೋಡಿದ ಪೋಷಕರು ಆತಂಕಕ್ಕೊಳಗಾಗಿ ಕೂಡಲೇ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಲ್ಲಿನ ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯತೆ ಇದೆ ಅಂತ ನಗರದ ಸಿವಿಲ್ ಆಸ್ಪತ್ರೆಗೆ ಮಗುವನ್ನು ಕರೆದುಕೊಮಡು ಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ತಂದೆ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದರಾದ್ರೂ, ಅದಾಗಲೇ ಮಗು ಮೃತಪಟ್ಟಿದೆ ಅಂತ ವೈದ್ಯರು ಖಚಿತಪಡಿಸಿದ್ದರು ಅಂತ ಅಂಬದ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಗು ಬಲೂನನ್ನು ನುಂಗುತ್ತಿದ್ದಂತೆಯೇ ಆತನ ಉಸಿರಾಟಕ್ಕೆ ತೊಂದರೆಯಾಗಿದೆ. ಹೀಗಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಅಂತ ಆಸ್ಪತ್ರೆಯ ಮೆಡಿಕಲ್ ಆಫಿಸರ್ ಡಾ. ಆನಂದ್ ಪವಾರ್ ತಿಳಿಸಿದ್ದಾರೆ.

    ಸದ್ಯ ಆಕಸ್ಮಿಕವಾಗಿ ಮಗು ಸಾವನಪ್ಪಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಂದೆ ಮೂಲತಃ ಉತ್ತರಪ್ರದೇಶದವರಾಗಿದ್ದು, ನಾಸಿಕ್ ನಲ್ಲಿ ಕಾರ್ಮಿಕರಾಗಿದ್ದಾರೆ. ಹೀಗಾಗಿ ಅವರು ನಾಸಿಕ್ ನಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.