Tag: Nashik

  • ಭಾರತದ ಮೋಸ್ಟ್‌ ಡೇಂಜರಸ್‌ ಫೋರ್ಟ್‌ – ಹರಿಹರ ಕೋಟೆ ಹತ್ತಲು ಡಬಲ್‌ ಗುಂಡಿಗೆ ಬೇಕು!

    ಭಾರತದ ಮೋಸ್ಟ್‌ ಡೇಂಜರಸ್‌ ಫೋರ್ಟ್‌ – ಹರಿಹರ ಕೋಟೆ ಹತ್ತಲು ಡಬಲ್‌ ಗುಂಡಿಗೆ ಬೇಕು!

    ಭಾರತ ಕೇವಲ ಪ್ರಕೃತಿದತ್ತವಾದ ಹಾಗೂ ಆಧ್ಯಾತ್ಮಿಕತೆಯಿಂದ ಕೂಡಿರುವ ಸ್ಥಳಗಳಿಗೆ ಮಾತ್ರ ಫೇಮಸ್‌ ಅಲ್ಲ, ಬದಲಾಗಿ ವಿಶ್ವದ ಸಾಹಸಿಗರನ್ನು ರೋಮಾಂಚಕಗೊಳಿಸುವ ಸಾಹಸ ತಾಣಗಳನ್ನು ಕೂಡ ನಮ್ಮ ದೇಶ ಹೊಂದಿದೆ. ಅಂತಹದೇ ಒಂದು ಸಾಹಸಮಯವಾದ ಕೋಟೆ ಎಂದರೆ ಅದು ಹರಿಹರ ಕೋಟೆ. ಈ ಕೋಟೆಯನ್ನು ಭಾರತದ ಮೋಸ್ಟ್‌ ಡೇಂಜರಸ್‌ ಫೋರ್ಟ್ ಎಂದು ಕರೆಯಲಾಗುತ್ತದೆ. ಡಬಲ್‌ ಗುಂಡಿಗೆ ಇರುವವರು ಮಾತ್ರ ಈ ಕೋಟೆಯನ್ನು ಹತ್ತಲು ಸಾಧ್ಯ. ಟ್ರೆಕ್ಕಿಂಗ್‌ ಮಾಡುವವರಿಗೆ ಈ ಕೋಟೆ ನೆಚ್ಚಿನ ತಾಣವಾಗಿದೆ. ಹಾಗಿದ್ರೆ ಎಲ್ಲಿದೆ ಈ ಹರಿಹರ ಫೋರ್ಟ್‌? ತಲುಪುವುದು ಹೇಗೆ? ಇತಿಹಾಸವೇನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

    ಹರಿಹರ ಕೋಟೆ ಎಲ್ಲಿದೆ?
    ಹರಿಹರ ಕೋಟೆಯನ್ನು ಹರ್ಷಗಡ್‌ ಕೋಟೆ ಎಂದು ಕೂಡ ಕರೆಯುತ್ತಾರೆ. ಇದು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಘೋಟಿಯಿಂದ ಕೇವಲ 40 ಕಿ.ಮೀ ದೂರದಲ್ಲಿದೆ. ಬಂಡೆಯಿಂದ ಕತ್ತರಿಸಿದ ವಿಶಿಷ್ಟವಾದ ಮೆಟ್ಟಿಲುಗಳನ್ನು ಈ ಕೋಟೆ ಹೊಂದಿದೆಯಾದರೂ, ಸ್ವಲ್ಪ ಅಜಾಗರೂಕತೆಯಿಂದ ಕಾಲು ಜಾರಿದರೆ ಪಾತಾಳಕ್ಕೆ ಬೀಳುವ ಸಾಧ್ಯತೆಯಿದೆ. ಟ್ರೆಕ್ಕಿಂಗ್‌ ಮಾಡಲು ತೆರಳಿದ ಹಲವಾರು ಮಂದಿ ಈ ಕೋಟೆ ಹತ್ತುವ ಸಮಯದಲ್ಲಿ ಆಯತಪ್ಪಿ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಇತಿಹಾಸವೇನು?
    ಹರಿಹರ ಕೋಟೆಯನ್ನು ದೊಡ್ಡದಾದ ಪರ್ವತದ ಮೇಲೆ ನಿರ್ಮಿಸಲಾಗಿದೆ. ಇದು ಬ್ರಿಟಿಷರು ನೆಲಸಮ ಮಾಡಲು ಬಯಸಿದ ಕೋಟೆಯಾಗಿತ್ತು. ಆ ಸಮಯದಲ್ಲಿ ಬ್ರಿಟಿಷರು ಈ ಕೋಟೆಯ ಬಾಗಿಲನ್ನು ಫಿರಂಗಿಗಳಿಂದ ಸ್ಫೋಟಿಸೋದಕ್ಕೆ ಪ್ಲ್ಯಾನ್ ಮಾಡಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ, ಏಕೆಂದರೆ ಈ ಕೋಟೆಯನ್ನು ಅಷ್ಟೊಂದು ಸ್ಟ್ರಾಂಗ್ ಆಗಿ ನಿರ್ಮಿಸಲಾಗಿದೆ. ಹಾಗಾಗಿಯೇ ಸಾವಿರಾರು ವರ್ಷಗಳ ನಂತರವೂ ಈ ಕೋಟೆ ಇನ್ನೂ ಭದ್ರವಾಗಿ ನಿಂತಿದೆ. ಇತಿಹಾಸದ ಪ್ರಕಾರ, ಶಿವಾಜಿ ಮಹಾರಾಜರು ತಮ್ಮ ಅಮೂಲ್ಯವಾದ ಆಯುಧಗಳು, ಸಂಪತ್ತನ್ನು ಈ ಕೋಟೆಯಲ್ಲಿ ಇಡುತ್ತಿದ್ದರು ಎನ್ನಲಾಗಿದೆ. ಯಾದವ ರಾಜವಂಶದ ಅವಧಿಯಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಕೋಟೆಯ ಮೇಲ್ಭಾಗದಲ್ಲಿ ಶಿವನಿಗೆ ಸಮರ್ಪಿತವಾದ ಆಲಯವಿದೆ. ಹರಿಹರವನ್ನು ʼದಕ್ಷಿಣ ಕಾಶಿʼ ಎಂದೇ ಕರೆಯುತ್ತಾರೆ.

    ಕಠಿಣ ಚಾರಣ:
    ಹರಿಹರ ಕೋಟೆಯ ಚಾರಣವು ಸಮುದ್ರಮಟ್ಟದಿಂದ ಸುಮಾರು 3,676 ಅಡಿ ಎತ್ತರದಲ್ಲಿದೆ. ಬಂಡೆಯಿಂದ ಕತ್ತರಿಸಿದ ಮೆಟ್ಟಿಲುಗಳನ್ನು ಈ ಕೋಟೆ ಒಳಗೊಂಡಿವೆ. ಇಲ್ಲಿನ ಅನೇಕ ಮೆಟ್ಟಿಲುಗಳು ಸವೆದುಹೋಗಿವೆ. ನೀವು ಮುಖ್ಯ ದ್ವಾರವನ್ನು ತಲುಪಿದ ನಂತರ ಸುರುಳಿಯಾಕಾರದ ಬಂಡೆಗಳನ್ನು ಕತ್ತರಿಸಿದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಒಂದು ಸಮಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ಈ ಕೋಟೆಯ ಮೆಟ್ಟಿಗಳನ್ನು ಹತ್ತಬಹುದಾಗಿದೆ. ಹರಿಹರ ಕೋಟೆಯು ಕ್ಲಿಷ್ಟಕರವಾದ ಟ್ರೆಕ್ಕಿಂಗ್ ತಾಣವಾಗಿದೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ಆದಷ್ಟು ತಪ್ಪಿಸಬೇಕು.

    ಈ ಹರಿಹರ ಕೋಟೆ ಚಾರಣವು ಸಾಮಾನ್ಯವಾಗಿ 3.5 ರಿಂದ 4 ಕಿಲೋಮೀಟರ್‌ಗಳಷ್ಟಿದ್ದು,ಒಟ್ಟು 7 ರಿಂದ 8 ಕಿ.ಮೀ ಇದೆ. ನೀವು ಆಯ್ಕೆಮಾಡುವ ಮೂಲ ಗ್ರಾಮವನ್ನು ಅವಲಂಬಿಸಿ ಚಾರಣದ ಅವಧಿ ನಿರ್ಧರಿಸಲಾಗುತ್ತದೆ. ನೀವು ನಿರ್ಗುಡ್‌ಪದಾ ಅಥವಾ ಕೋಟಂವಾಡಿಯಿಂದ ಚಾರಣ ಪ್ರಾರಂಭಿಸಿದರೆ ಸುಮಾರು 3.4 ರಿಂದ 3.5 ಕಿಲೋಮೀಟರ್ ದೂರ ಚಾರಣ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಹರ್ಷೇವಾಡಿಯಿಂದ ಚಾರಣ ಮಾಡಲು ಬಯಸಿದರೆ ಸುಮಾರು 2.5 ಕಿಲೋಮೀಟರ್ ದೂರ ಚಾರಣ ಮಾಡಬೇಕಾಗುತ್ತದೆ.

    ಹರಿಹರ ಕೋಟೆ ತಲುಪೋದು ಹೇಗೆ?
    ಹರಿಹರ ಕೋಟೆಯನ್ನು ತಲುಪಲು, ಮೊದಲು ನೀವು ಮಹಾರಾಷ್ಟ್ರದ ನಾಸಿಕ್ ರೈಲ್ವೆ ನಿಲ್ದಾಣಕ್ಕೆ ಬರಬೇಕು. ನಂತರ ಇಲ್ಲಿಂದ ಸರ್ಕಾರಿ ಬಸ್ ಹಿಡಿಯಬೇಕು. ಅದು ನಿಮ್ಮನ್ನು ನೇರವಾಗಿ ಬ್ರಹ್ಮಕೇಶ್ವರ ದೇವಸ್ಥಾನಕ್ಕೆ ಕರೆದೊಯ್ಯುತ್ತದೆ. ದೇವಾಲಯದ ಬಳಿ ಲಾಕರ್ ಕೊಠಡಿಗಳು ಲಭ್ಯವಿದೆ. ಅಲ್ಲಿ ನೀವು ನಿಮ್ಮ ವಸ್ತುಗಳನ್ನು ಇಡಬಹುದು.ಆಹಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಯಾಕಂದ್ರೆ ಇಲ್ಲಿ ಸಾಲು ಸಾಲು ಹೊಟೇಲ್‌ಗಳು ಕಾಣಸಿಗುತ್ತವೆ.

    ಬ್ರಹ್ಮಕೇಶ್ವರ ದೇವಸ್ಥಾನದಿಂದ ನೇರವಾಗಿ ಆಟೋ ಮೂಲಕ ಹರ್ಸೆವಾಡಿಯನ್ನು ತಲುಪಿ. ಬಳಿಕ ಹರಿಹರ ಕೋಟೆಗೆ ಟಿಕೆಟ್ ತೆಗೆದುಕೊಳ್ಳಬೇಕು. ಅದರ ನಂತರ ನೀವು ಹರಿಹರ ಕೋಟೆಗೆ ಟ್ರೆಕ್ಕಿಂಗ್ ಪ್ರಾರಂಭಿಸಬಹುದು. ಈ ಕೋಟೆಯು ಎರಡು ಬದಿಗಳಿಂದ ನೇರವಾಗಿ 90 ಡಿಗ್ರಿಗಳಷ್ಟು ದೂರದಲ್ಲಿದೆ. ಕೋಟೆಯ ದ್ವಾರವನ್ನು ತಲುಪಲು, ಒಂದು ಮೀಟರ್ ಅಗಲದ 117 ಮೆಟ್ಟಿಲುಗಳನ್ನು ಹತ್ತಬೇಕು.

    ಜನಪ್ರಿಯ ಟ್ರೆಕ್ಕಿಂಗ್ ತಾಣ:
    ಪ್ರತಿಯೊಂದು ಕೋಟೆಯೂ ತನ್ನದೇ ಆದ ವಿಶೇಷತೆಗಳನ್ನ ಹೊಂದಿದೆ. ಸದ್ಯ ಸೋಶಿಯಲ್ ಮೀಡಿಯಾದಿಂದಾಗಿ ಈ ಹರಿಹರ ಕೋಟೆಯು ಚಾರಣ ತಾಣವಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದನ್ನು ತಪ್ಪಿಸಬೇಕು. ಯಾಕಂದರೆ ಈ ಕೋಟೆ ಮಳೆಗಾಲದಲ್ಲಿ ತುಂಬಾ ಜಾರುವುದರಿಂದ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಈ ಹರಿಹರ ಕೋಟೆ ಸಾಹಸ ಪ್ರಿಯರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.

    ಹರಿಹರ ಕೋಟೆ ಹತ್ತೋವಾಗ ಬಹಳಷ್ಟು ಕೋತಿಗಳು ಕಾಣಸಿಗುತ್ತವೆ. ಆದ್ದರಿಂದ ಯಾವುದೇ ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಡಿ ಮತ್ತು ಕೋತಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಏಕೆಂದರೆ ಕೋತಿಗಳಿಂದಾಗಿ ಟ್ರೆಕ್ಕಿಂಗ ವೇಳೆ ನೀವು ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವ ಚಾನ್ಸ್‌ ಕೂಡ ಇದೆ.

    ಈ ಕೋಟೆಯ ತುತ್ತ ತುದಿ ತಲುಪಿದ ಮೇಲೆ ಪರ್ವತಗಳನ್ನು ಸುತ್ತಲೂ ಪೋಣಿಸಿಟ್ಟಂತೆ ಕಾಣುತ್ತದೆ. ಹರಿಹರ ಕೋಟೆಯ ತುತ್ತ ತುದಿಯನ್ನು ತಲುಪಿದರೆ, ನೀವು ಮೋಡಗಳ ನಡುವೆ ಇದ್ದಂತೆ ಭಾಸವಾಗುತ್ತದೆ. ಆದರೆ ಪರ್ವತಾರೋಹಣದ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ಪರ್ವತದ ಮೆಟ್ಟಿಲುಗಳು ನೇರವಾಗಿವೆ, ಇದರಿಂದ ಮೆಟ್ಟಿಲು ಏರುವುದು ಕಷ್ಟ. ಆದ್ದರಿಂದ ಕೋಟೆಯನ್ನು ಹತ್ತಬೇಕಾದರೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು.

  • ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ

    ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ

    ಮುಂಬೈ: ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nashik) ನಡೆದ ರಸ್ತೆ ಅಪಘಾತದಲ್ಲಿ (Accident) ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ ಎರಡು ವರ್ಷದ ಮಗು ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ.

    ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಬಳಿಕ ಪಕ್ಕದಲ್ಲಿದ್ದ ಸಣ್ಣ ಕಾಲುವೆಗೆ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸಾವಿಗೀಡಾಗಿದ್ದಾರೆ. ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು

    ಕಾರಿನಲ್ಲಿದ್ದವರು ನಾಸಿಕ್ ನಗರದಲ್ಲಿ ಸಂಬಂಧಿಕರೊಬ್ಬರ ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಿ ವಾಪಸ್‌ ಆಗುತ್ತಿದ್ದರು. ಈ ವೇಳೆ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಸಣ್ಣ ಕಾಲುವೆಗೆ ಕಾರು ಉರುಳಿ ಬಿದ್ದಿದೆ.

    ಕಾಲುವೆಗೆ ಕಾರು ಬೀಳುತ್ತಿದ್ದಂತೆ ಕಾರಿನೊಳಗೆ ನೀರು ತುಂಬಿದೆ. ಇದರಿಂದ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು

  • ಜುವೆಲ್ಲರಿ ಮಳಿಗೆ ಮೇಲೆ ಐಟಿ ದಾಳಿ – 26 ಕೋಟಿ ನಗದು ಜಪ್ತಿ

    ಜುವೆಲ್ಲರಿ ಮಳಿಗೆ ಮೇಲೆ ಐಟಿ ದಾಳಿ – 26 ಕೋಟಿ ನಗದು ಜಪ್ತಿ

    ಮುಂಬೈ: ಆದಾಯ ತೆರಿಗೆ (Income Tax) ಇಲಾಖೆ ನಾಸಿಕ್‌ನಲ್ಲಿರುವ (Nashik) ಪ್ರಸಿದ್ಧ ಜುವೆಲ್ಲರಿ ಅಂಗಡಿ ಮೇಲೆ ದಾಳಿ ನಡೆಸಿ 26 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿದೆ.

    ಅಕ್ರಮ ವಹಿವಾಟು ನಡೆಸಿದ ಆರೋಪದ ಮೇಲೆ ಸುರಾನಾ ಜ್ಯುವೆಲರ್ಸ್ (Surana Jewellers) ಮೇಲೆ ದಾಳಿ ನಡೆಸಿದೆ. ಈ ವೇಳೆ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ – 11 ಭಕ್ತರು ದುರ್ಮರಣ, 10 ಜನರಿಗೆ ಗಾಯ

    ನಗದು ಹಣವನ್ನು ಹಲವು ಚೀಲಗಳಲ್ಲಿ ತುಂಬಿ ಇಡಲಾಗಿತ್ತು.  ಅಧಿಕಾರಿಗಳು ಕಚೇರಿಗೆ ತಂದು ಜೋಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.

     

  • Photo Gallery: ನಾಸಿಕ್‌ನ ಶ್ರೀ ಕಾಲ ರಾಮಮಂದಿರದಲ್ಲಿ ಮೋದಿ ಪ್ರಾರ್ಥನೆ

    Photo Gallery: ನಾಸಿಕ್‌ನ ಶ್ರೀ ಕಾಲ ರಾಮಮಂದಿರದಲ್ಲಿ ಮೋದಿ ಪ್ರಾರ್ಥನೆ

    ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಶ್ರೀ ಕಾಲ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ರೋಡ್‌ಶೋನಲ್ಲಿ ಭಾಗವಹಿಸಿದರು. ಈ ವೇಳೆ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್‌ ಸಾಥ್‌ ನೀಡಿದರು.

    ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಶ್ರೀ ಕಾಲ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು.

    ಶ್ರೀ ಕಾಲ ರಾಮಮಂದಿರದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಕೆ.

    ಶ್ರೀ ಕಾಲ ರಾಮಮಂದಿರದಲ್ಲಿ ಮೋದಿ ಪ್ರಾರ್ಥನೆ.

    ಪ್ರಾರ್ಥನೆಗೂ ಮುನ್ನ ಕಾಲ ರಾಮಮಂದಿರದಲ್ಲಿ ಪ್ರಧಾನಿ ಮೋದಿ ಸ್ವಚ್ಛತಾ ಕಾರ್ಯ ನಡೆಸಿದರು.

    ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಮೋದಿ ಅವರು ವಿವೇಕಾನಂದರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು.

    ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಧಾನಿ ಮೋದಿ ರೋಡ್‌ಶೋ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್‌ ಜೊತೆಯಲ್ಲಿದ್ದರು.

    ಪ್ರಧಾನಿ ಮೋದಿಗೆ ಮಹಾರಾಷ್ಟ್ರ ಜನರಿಂದ ಅದ್ಧೂರಿ ಸ್ವಾಗತ.

    ಮೋದಿ ರೋಡ್‌ಶೋ ವೇಳೆ ರಾರಾಜಿಸಿದ ಶ್ರೀರಾಮ ಚಿತ್ರದ ಧ್ವಜಗಳು.

    ಜನಸ್ತೋಮದ ಮಧ್ಯೆ ಮೋದಿಗೆ ಕೈ ಬೀಸಿ ಸ್ವಾಗತಿಸಿದ ಚಿಣ್ಣರು.

    ರೋಡ್‌ಶೋ ವೇಳೆ ಜನರತ್ತ ಕೈ ಬೀಸಿದ ಪ್ರಧಾನಿ ಮೋದಿ.

  • ರಸ್ತೆಬದಿ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ – ನಾಲ್ವರು ಸಾವು

    ರಸ್ತೆಬದಿ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ – ನಾಲ್ವರು ಸಾವು

    ಮುಂಬೈ: ರಸ್ತೆಬದಿ ನಿಂತಿದ್ದ ಕಂಟೈನರ್ ಟ್ರಕ್‌ಗೆ (Container Truck) ಕಾರೊಂದು (Car) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್ (Nashik) ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ನಡೆದಿದೆ.

    ಕಾರು ನಾಸಿಕ್‌ನಿಂದ ಧುಲೆ (Dhule) ಕಡೆಗೆ ತೆರಳುತ್ತಿದ್ದ ಸಂದರ್ಭ ಚಂದವಾಡ ತಾಲೂಕಿನ ಮಲ್ಸಾನೆ ಶಿವಾರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ರಿಪೇರಿಗಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್‌ ಮಾಡಿ ಹತ್ಯೆ

    ಮೃತರನ್ನು ಕಿರಣ್ ಅಹಿರಾರಾವ್ (47), ಕೃಷ್ಣಕಾಂತ್ ಮಾಲಿ (43), ಪ್ರವೀಣ್ ಪವಾರ್ (38) ಮತ್ತು ಅನಿಲ್ ಪಾಟೀಲ್ (38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮೂಲತಃ ಧುಲೆ ನಿವಾಸಿಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

    ಟೈರ್ ಪಂಚರ್ ಆದ ಕಾರಣ ಕಂಟೈನರ್ ಅನ್ನು ರಸ್ತೆಬದಿ ನಿಲ್ಲಿಸಿದ ಸಂದರ್ಭ ಘಟನೆ ನಡೆದಿದ್ದು, ಅಪಘಾತದಿಂದಾಗಿ ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದನ್ನೂ ಓದಿ: ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಮಾಂಸ ಕಳ್ಳಸಾಗಣೆ ಮಾಡ್ತಿದ್ದಾನೆಂದು ಶಂಕಿಸಿ ಥಳಿಸಿ ವ್ಯಕ್ತಿಯ ಹತ್ಯೆ

    ಗೋಮಾಂಸ ಕಳ್ಳಸಾಗಣೆ ಮಾಡ್ತಿದ್ದಾನೆಂದು ಶಂಕಿಸಿ ಥಳಿಸಿ ವ್ಯಕ್ತಿಯ ಹತ್ಯೆ

    ಮುಂಬೈ: ಗೋಮಾಂಸ ಕಳ್ಳಸಾಗಣೆ (Beef Smuggling) ಮಾಡುತ್ತಿದ್ದಾನೆ ಎಂದು ಶಂಕಿಸಿ ಗೋರಕ್ಷಕರ ಗುಂಪೊಂದು ಶನಿವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nashik) ನಡೆದಿದೆ.

    ಮುಂಬೈನ ಕುರ್ಲಾದ ಅಫಾನ್ ಅನ್ಸಾರಿ (32) ಕೊಲೆಯಾದ ವ್ಯಕ್ತಿ. ಅನ್ಸಾರಿ ತನ್ನ ಸಹಾಯಕ ನಾಸಿರ್ ಶೇಖ್ ಜೊತೆ ಕಾರಿನಲ್ಲಿ ಮಾಂಸವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅನ್ಸಾರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10-15 ಜನ ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಇಬ್ಬರ ಮೇಲೆ ಗಂಭೀರ ದಾಳಿ ಮಾಡಿದ್ದಾರೆ. ಇದರಿಂದ ಅನ್ಸಾರಿ ಸಾವನ್ನಪ್ಪಿದ್ದು, ಆತನ ಸಹಾಯಕ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, 11 ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದ್ದಕ್ಕೆ ಕಲ್ಲು ಎಸೆದು ಶಕ್ತಿ ಪ್ರದರ್ಶಿಸಿದ ಮಹಿಳೆ – 5 ಸಾವಿರ ದಂಡ ಕಟ್ಟಿ ಅದೇ ಬಸ್‍ನಲ್ಲಿ ಪ್ರಯಾಣ

    ಮಾರ್ಚ್‌ನಲ್ಲಿಯೂ ಇದೇ ರೀತಿಯ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿತ್ತು. ಗೋಮಾಂಸ ಸಾಗಿಸುತ್ತಿದ್ದಾನೆ ಎಂಬ ಶಂಕೆಯ ಮೇಲೆ ನಸೀಮ್ ಖುರೇಷಿ ಎಂದು ಗುರುತಿಸಲಾದ (56) ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸರಪಂಚ್ ಸುಶೀಲ್ ಸಿಂಗ್, ಗ್ರಾಮಸ್ಥರಾದ ರವಿ ಸಾಹ್ ಹಾಗೂ ಉಜ್ವಲ್ ಶರ್ಮಾರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಭೀಕರ ಅಪಘಾತ – ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮಸಣಕ್ಕೆ

  • ನಾಸಿಕ್‌ನ ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಕ್ರಿಯೆ ಆರಂಭ

    ನಾಸಿಕ್‌ನ ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಕ್ರಿಯೆ ಆರಂಭ

    ನವದೆಹಲಿ: ಆಂಜನೇಯನ ಜನ್ಮಸ್ಥಳ ಎಂದು ಪರಿಗಣಿಸಲಾಗುವ ನಾಸಿಕ್‌ನ (Nashik) ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. 377 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಗಿರಿ (Brahmagiri) ಟ್ರೆಕ್ಕಿಂಗ್ ಪಾಯಿಂಟ್‌ನಿಂದ ಅಂಜನೇರಿ ಬೆಟ್ಟಗಳಿಗೆ (Anjaneri Hills) ಮುಂದಿನ ಎರಡು ವರ್ಷದ ಅವಧಿಯಲ್ಲಿ ರೋಪ್‌ವೇ (Ropeway) ನಿರ್ಮಿಸಲು ತಿರ್ಮಾನಿಸಿದೆ.

    ಕೇಂದ್ರ ಸರ್ಕಾರದ ಪ್ರಮುಖ ‘ಪರ್ವತ್ಮಾಲಾ’ (Parvatmala) ಯೋಜನೆಯಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶುಕ್ರವಾರ ಯೋಜನೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಅಂಜನೇರಿ ಬೆಟ್ಟಗಳು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಇದು ಯಾತ್ರಿಕರು ಮತ್ತು ಚಾರಣಿಗರು ಭೇಟಿ ನೀಡುವ ಗುಹೆ ಮತ್ತು ಅಂಜನಿ ಮಾತಾ ದೇವಾಲಯವನ್ನು ಹೊಂದಿದೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

    ಸುಮಾರು 4,200 ಅಡಿ ಎತ್ತರದಲ್ಲಿರುವ ದೇವಾಲಯವನ್ನು ತಲುಪಲು ಓರ್ವ ವ್ಯಕ್ತಿ ಮೂರು ಪರ್ವತಗಳನ್ನು ಏರಬೇಕಾಗಿದೆ. ಈ ಹಿನ್ನೆಲೆ ರೋಪ್‌ವೇ ನಿರ್ಮಾಣವಾದರೆ 5.7 ಕಿ.ಮೀ ಉದ್ದದ ರೋಪ್‌ವೇ ಮೂರು ಪರ್ವತಗಳನ್ನು ದಾಟಿ ಕೆಲವೇ ನಿಮಿಷಗಳಲ್ಲಿ ಬೆಟ್ಟದ ತುದಿಗೆ ಕರೆದೊಯ್ಯಲಿದೆ. ಇದನ್ನೂ ಓದಿ: ವೀಲ್‌ಚೇರ್ ಕೊರತೆ – ಸ್ಕೂಟಿಯಲ್ಲೇ ಆಸ್ಪತ್ರೆಯೊಳಗೆ ರೋಗಿಯನ್ನು ಕರೆದೊಯ್ದ ವ್ಯಕ್ತಿ

    ಕೇಂದ್ರವು 2024ರ ವೇಳೆಗೆ ಒಟ್ಟು 90 ಕಿ.ಮೀನ 18 ರೋಪ್‌ವೇ ಯೋಜನೆಗಳನ್ನು ಯೋಜಿಸುತ್ತಿದೆ. ಶ್ರೀನಗರದ ಶಂಕರಾಚಾರ್ಯ ದೇವಸ್ಥಾನಕ್ಕೆ 1 ಕಿ.ಮೀ ರೋಪ್‌ವೇ, ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನೂಲ್‌ನ ಶ್ರೀಶೈಲಂ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ, ಲೇಹ್ ಅರಮನೆ, ಗ್ವಾಲಿಯರ್ ಕೋಟೆ, ಕೇದಾರನಾಥ ದೇವಾಲಯ, ಉತ್ತರಾಖಂಡದ ಹೇಮಕುಂಡ್ ಸಾಹಿಬ್‌ಗೆ ಮತ್ತು ತಮಿಳುನಾಡಿನಲ್ಲಿರುವ ಜನಪ್ರಿಯ ಗಿರಿಧಾಮ ಕೊಡೈಕೆನಾಲ್‌ಗೆ 12 ಕಿ.ಮೀ ರೋಪ್‌ವೇ ಯೋಜನೆಯನ್ನು ಯೋಜಿಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ

    ಕರ್ನಾಟಕದ (Karnataka) ಉಡುಪಿ (Udupi) ಜಿಲ್ಲೆಯ ಕೊಡಚಾದ್ರಿ ಬೆಟ್ಟಗಳಿಗೆ 7 ಕಿ.ಮೀ ರೋಪ್‌ವೇ ಮತ್ತು ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ಬಿಜ್ಲಿ ಮಹಾದೇವ ದೇವಸ್ಥಾನಕ್ಕೆ 3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ ಮತ್ತೊಂದು ರೋಪ್‌ವೇ ನಿರ್ಮಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್

  • ಗುಂಡು ಹಾರಿಸಿ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನ ಹತ್ಯೆ

    ಗುಂಡು ಹಾರಿಸಿ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನ ಹತ್ಯೆ

    ಮುಂಬೈ: ಅಫ್ಘಾನಿಸ್ತಾನ ಮೂಲದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಮಹಾರಾಷ್ಟ್ರದ ನಾಸಿಕ್‍ನಲ್ಲಿ ಮಂಗಳವಾರ ಗುಂಡಿಕ್ಕಿ ಕೊಲ್ಲಲಾಗಿದೆ.

    ಸೂಫಿ ಬಾಬಾ ಎಂದೇ ಖ್ವಾಜಾ ಸಯ್ಯದ್ ಚಿಶ್ತಿ ಅವರು ಫೇಮಸ್ ಆಗಿದ್ದರು. ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿ ಪ್ರದೇಶದ ತೆರೆದ ಜಾಗದಲ್ಲಿ ಹಣೆಗೆ ಗುಂಡು ಹಾರಿಸಿ ಸೂಫಿ ಬಾಬಾನನ್ನು ಕೊಲ್ಲಲಾಗಿದೆ. ಸೂಫಿ ಬಾಬಾ ಅವರನ್ನು ಕೊಂದ ನಂತರ ಆರೋಪಿ ಬಳಸುತ್ತಿದ್ದ ಎಸ್‍ಯುವಿಯನ್ನು ವಶಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗೆ SDRF ತಂಡ ಆಗಮನ

    ಈ ಪ್ರಕರಣದ ಪ್ರಮುಖ ಆರೋಪಿ ಸೂಫಿ ಬಾಬಾನ ಚಾಲಕನೇ ಎಂದು ಹೇಳಲಾಗುತ್ತಿದೆ. ಸಯ್ಯದ್ ಚಿಶ್ತಿ ಹಲವಾರು ವರ್ಷಗಳಿಂದ ನಾಸಿಕ್‍ನ ಯೋಲಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಈ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ

    Live Tv
    [brid partner=56869869 player=32851 video=960834 autoplay=true]

  • ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ಮುಂಬೈ: ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್‍ನಲ್ಲಿ ನಡೆಸಲಾದ ಧರ್ಮ ಸಂಸದ್‍ನಲ್ಲಿ ಭಾರೀ ಗಲಾಟೆ ನಡೆದಿದೆ.

    ಹನುಮ ಜನ್ಮಸ್ಥಳದ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಮುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಇದಕ್ಕೆ ಗೋವಿಂದಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

    ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಗ್ರಹಕ್ಕೆ ಕಾರಣವಾಯ್ತು. ಕೂಡಲೇ ಕ್ಷಮೆಗೆ ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾದ್ರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ್ರು.

    ಕೊನೆಗೆ ಉಳಿದವರು ಸಮಾಧಾನ ಮಾಡೋ ಕೆಲಸ ಮಾಡಿದ್ರು. ಆದರೆ ನಾನು ಹಲ್ಲೆ ಮಾಡಲು ಯತ್ನಿಸಿಲ್ಲ. ಅವರೇ ಹಲ್ಲೆ ಮಾಡಿದರು ಅಂತಾ ನಾಟಕ ಮಾಡಿದ್ದಾರೆ ಎಂದು ಸುಧೀರ್ ದಾಸರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಧರ್ಮಸಂಸದ್‍ನಲ್ಲಿ ಭಾಗವಹಿಸದಂತೆ ಗೋವಿಂದಾನಂದ ಸ್ವಾಮೀಜಿಗೆ ತಡೆ ಒಡ್ಡಲು ಮಹಾರಾಷ್ಟ್ರ ಪೊಲೀಸರು ನೋಡಿದ್ರು. ನೀವು ಹನುಮನ ಜನ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದೀರಿ. ಇದರಿಂದ ಅಂಜನೇರಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನೀವು ಧರ್ಮಸಂಸದ್‍ನಲ್ಲಿ ಭಾಗವಹಿಸಬೇಡಿ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ರು.

    ಇದಕ್ಕೆ ಡೋಂಟ್‍ಕೇರ್ ಎಂದ ಸ್ವಾಮೀಜಿ ಧರ್ಮಸಂಸದ್‍ನಲ್ಲಿ ಪಾಲ್ಗೊಂಡ್ರು. ಆದರೆ ಅಲ್ಲೂ ಮಹಾರಾಷ್ಟ್ರದ ಸ್ವಾಮೀಜಿಗಳು ಕಿರಿಕ್ ಮಾಡಿದ್ರು. ಕೊನೆಗೆ ಸಭೆಯೂ ಅರ್ಧಕ್ಕೆ ಮೊಟಕಾಯ್ತು.

  • ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

    ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

    – ಹಿಂದೂ ಸಂಘಟನೆಗಳಿಂದ ಲವ್ ಜಿಹಾದ್ ಆರೋಪ
    – ಮದುವೆಗೆ ತೀವ್ರ ವಿರೋಧ, ಪ್ರತಿಭಟನೆ

    ಮುಂಬೈ: ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಾಹ ಸಮಾರಂಭವನ್ನು ರದ್ದುಗೊಳಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದ್ರೆ ಮದುವೆ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಳಿಕ ದೊಡ್ಡ ಸಂಚಲನವೇ ಸೃಷ್ಟಿಯಾಗಿದ್ದರಿಂದ ಕುಟುಂಬಸ್ಥರು ಮದುವೆ ನಿರ್ಧಾರದಿಂದ ಸದ್ಯ ಹಿಂದೆ ಸರಿದಿದ್ದಾರೆ.

    ನಾಸಿಕ್ ನಗರದ ರಸಿಕಾ (28) ಮದುವೆ ಗೆಳೆಯ ಆಸೀಫ್ ಜೊತೆ ನಿಶ್ಚಯವಾಗಿತ್ತು. ರಸಿಕಾ ದಿವ್ಯಾಂಗ ಆಗಿದ್ದರಿಂದ ಲವ್ ಜಿಹಾದ್ ಮಾಡಲಾಗ್ತಿದೆ ಎಂದು ಆರೋಪಿಸಿ ಸ್ಥಳೀಯ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇಷ್ಟೆಲ್ಲ ವಿವಾದ ಗಲಾಟೆ ನಂತ್ರವೂ ಪೋಷಕರು ಮಗಳ ನಿರ್ಧಾರದ ಪರ ನಿಂತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಸಿಕಾ ತಂದೆ ಪ್ರಸಾದ್, ನನ್ನ ಮಗಳು ದಿವ್ಯಾಂಗ ಆಗಿರೋದರಿಂದ ಆಕೆಯ ಮದುವೆ ವಿಳಂಬವಾಗಿರುವ ವಿಷಯ ನಮ್ಮ ಸಮುದಾಯದ ಎಲ್ಲರಿಗೂ ಗೊತ್ತು. ಕೊನೆಗೆ ಮಗಳು ತನ್ನ ಇಚ್ಛೆಯನ್ನು ನಮ್ಮ ಮುಂದೆ ಹೇಳಿಕೊಂಡಿದ್ದಳು. ಇತ್ತ ಆಸೀಫ್ ಕುಟುಂಬಸ್ಥರು ಮಗಳನ್ನು ಸೊಸೆ ಮಾಡಿಕೊಳ್ಳಲು ಒಪ್ಪಿದ್ದರು. ಇಲ್ಲಿ ಯಾವುದೇ ಬಲವಂತ ಧರ್ಮ ಪರಿವರ್ತನೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ನೆರೆಹೊರೆಯವರ ಸಮ್ಮುಖದಲ್ಲಿ ಹಿಂದೂ ಜೋಡಿಯ ಮದ್ವೆ

    ಇಬ್ಬರು ವಯಸ್ಕರು ಪರಸ್ಪರ ಪ್ರೀತಿಸಿದ್ದಾರೆ. ನಾವು ಅವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ಮುಂದಾಗಿದ್ದೇವೆ. ಇನ್ನೂ ಆಸೀಫ್ ಕುಟುಂಬಸ್ಥರು ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಒಪ್ಪಿಗೆ ಸೂಚಿಸಿರೋದು ವಿಶೇಷ ಎಂದು ಪ್ರಸಾದ್ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:  ಮಾದರಿಯಾಯ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಸರಳ ಮದುವೆ

    ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮದುವೆಯನ್ನು ರದ್ದುಗೊಳಿಸಲಾಗಿದೆ. ಎರಡೂ ಕುಟುಂಬಗಳು ಮುಂದೆ ಮದುವೆ ನಡೆಸುತ್ತಾ ವಿಷಯ ತಿಳಿದು ಬಂದಿಲ್ಲ. ಇದನ್ನೂ ಓದಿ: ಮುಸ್ಲಿಂ ತಂದೆಯಿಂದ ಹಿಂದೂ ಸಂಪ್ರದಾಯದಂತೆ ದತ್ತು ಮಗನ ಮದ್ವೆ