Tag: Naseer Hussain

  • ಐಎಎಸ್‌ ಅಧಿಕಾರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಪಾಕ್‌ ಪ್ರೇಮಿ ಮುನಾವರ್!

    ಐಎಎಸ್‌ ಅಧಿಕಾರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಪಾಕ್‌ ಪ್ರೇಮಿ ಮುನಾವರ್!

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿ ಪಾಕ್ ಪ್ರೇಮ ಮೆರೆದಿದ್ದ ಮುನಾವರ್ ಅಹಮದ್‌ (Munawar Ahmad) ಐಎಎಸ್‌ ಅಧಿಕಾರಿಯ (IAS Officer) ಮನೆಯಲ್ಲಿ ಬಾಡಿಗೆ ಇದ್ದ.

    ಹೌದು. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿರುವ ಜಯಮಹಲ್ 1ನೇ ಕ್ರಾಸ್‌ನ ನಂಬರ್ 27ಸಿ ನಂಬರ್‌ನ ಮನೆಯಲ್ಲಿ ಆರೋಪಿ ಮುನಾವರ್ ಕುಟುಂಬದೊಂದಿಗೆ ವಾಸವಾಗಿದ್ದ.

    ಮುನಾವರ್ ನೆಲೆಸಿದ್ದ ಮನೆ ಜೆ.ಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ ಆರೋಪಿ ಮನೆಗೆ ಜೆಸಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುನಾವರ್‌ ಬಂಧನದ ಬೆನ್ನಲ್ಲೇ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದಾರೆ. ಇದನ್ನೂ ಓದಿ: ಮುಕ್ಕಾಲು ಗಂಟೆಯಲ್ಲಿ ಬರೋಬ್ಬರಿ 10 ಬಸ್ಸಿನಲ್ಲಿ ಬಾಂಬರ್‌ ಸಂಚಾರ!

    ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ (Syed Naseer Hussain) ಬೆಂಬಲಿಗರಾದ ಬ್ಯಾಡಗಿಯ ಮೊಹಮ್ಮದ್‌ ಶಾಫಿ ನಾಶಿಪುಡಿ, ಬೆಂಗಳೂರಿನ ಮುನಾವರ್ ಅಹ್ಮದ್, ದೆಹಲಿಯ ಮೊಹಮ್ಮದ್‌ ಇಲ್ತಾಜ್ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದರು. ಬಂಧಿತ ಮೂವರ ಪೈಕಿ ನಾಶೀಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್‌ಗೆ ಇಬ್ಬರು ಆರೋಪಿಗಳಿಗೂ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್‌ ನೀರು!

    ಸದ್ಯ ಮೂವರನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವ ಪರ ಏನು? ಅವರ ಉದ್ದೇಶ ಏನಾಗಿತ್ತು? ಈ ವೇಳೆ ಬೇರೆ ಯಾರಾದರೂ ಇವರಿಗೆ ಬೆಂಬಲ ನೀಡಿದ್ರಾ? ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಆಕಸ್ಮಿಕವೇ? ಅಥವಾ ಉದ್ದೇಶ ಪೂರ್ವಕವೇ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ.

     

  • ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳು ಮೂರು ದಿನ ಪೊಲೀಸ್ ಕಸ್ಟಡಿಗೆ

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳು ಮೂರು ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಮೂರು ದಿನ  ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

    ಇಂದು ಸಂಜೆ ಅಶೋಕನಗರ ಪೊಲೀಸರು ದೆಹಲಿ ಮೂಲದ ಇಲ್ತಾಜ್, ಆರ್‌ ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಪೊಲೀಸರು ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

    ಘಟನೆ ಏನು..?: 2024ರ ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ (Nasser Hussain) ಅವರು ಬೆಂಬಲಿಗರೊಂದಿಗೆ ವಿಧಾನಸೌಧದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಸೀರ್ ಹುಸೇನ್ ಅವರ ಕಿರು ಸಂದರ್ಶನ ಮಾಡಲು ಮುಂದಾದಾಗ ಅವರ ಬೆಂಬಲಿಗರಿದ್ದ ಗುಂಪಿನಿಂದ ʼಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆ ಕೇಳಿಬಂದಿತ್ತು. ಈ ಸುದ್ದಿಯನ್ನು ಪಬ್ಲಿಕ್‌ ಟಿವಿ ಬ್ರೇಕ್‌ ಮಾಡಿತ್ತು. ಆದರೆ ಕಾಂಗ್ರೆಸ್‌ ನಾಯಕರು ಮಾಧ್ಯಮ ವರದಿ ಸುಳ್ಳೆಂದು ಹೇಳುತ್ತಲೇ ಬಂದರು.

    ಈ ನಡುವೆ ಪೊಲೀಸರು ಘೋಷಣೆ ಕೂಗಿರುವುದಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು. ಇದೀಗ FSL ವರದಿಯಲ್ಲಿ ಪಾಕ್‌ ಪರ ಘೋಷಣೆ ಕೂಗಿರುವುದು ದೃಢಪಟ್ಟ ನಂತರ ಮೂವರ ಬಂಧನ ಮಾಡಲಾಗಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೊಷಣೆ ಆರೋಪ- ಮೂವರ ಬಂಧನ

    ಈ ಸಂಬಂಧ ಸೆಂಟ್ರಲ್‌ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿʼಪಾಕಿಸ್ತಾನ ಜಿಂದಾಬಾದ್‌ʼ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ FSL ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಪಾಕ್‌ ಪರ ಘೋಷಣೆ – FSL ವರದಿ ಇನ್ನೂ ಬಂದಿಲ್ಲ, ಬಂದ ನಂತರ ಕ್ರಮ : ಪರಮೇಶ್ವರ್‌

    ಪಾಕ್‌ ಪರ ಘೋಷಣೆ – FSL ವರದಿ ಇನ್ನೂ ಬಂದಿಲ್ಲ, ಬಂದ ನಂತರ ಕ್ರಮ : ಪರಮೇಶ್ವರ್‌

    ಬೆಂಗಳೂರು: ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿ ಇನ್ನೂ ಬಂದಿಲ್ಲ. ವರದಿ ಬಂದ ನಂತರ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ (G Parmeshwar) ಹೇಳಿದ್ದಾರೆ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ (RameshwaramCafeBlast) ಪ್ರಕರಣ ಸೇರಿದಂತೆ ಪರಮೇಶ್ವರ್‌ ಇಂದು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದರು.

     

    ಸಭೆಯ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಎಫ್‌ಎಸ್‌ಎಲ್‌ ವರದಿಗೆ ಕಾಯುತ್ತಿದ್ದೇವೆ. ವರದಿಯಲ್ಲಿ ಕೃತ್ಯ ಎಸಗಿದ್ದು ಸಾಬೀತಾದರೇ ಅವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ. ವರದಿ ಬರುವವರೆಗೂ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.  ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ – ರಥಯಾತ್ರೆಗೆ ಹೈಕೋರ್ಟ್ ಅಸ್ತು

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತನಿಖಾ ತಂಡದ ಇನ್ಸ್‌ಪೆಕ್ಟರ್‌, ಎಸಿಪಿ, ಡಿಸಿಪಿ ಸೇರಿದಂತೆ ಎಲ್ಲ ಸದಸ್ಯರು ಹಾಜರಿರಬೇಕೆಂದು ಸೂಚಿಸಲಾಗಿತ್ತು. ಇದನ್ನೂ ಓದಿ: ಒತ್ತುವರಿ ತೆರವು – ಮದ್ಯದ ಉದ್ಯಮಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಧ್ವಂಸ

     

    ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ (Naseer Hussain) ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದು ವಿವಾದಕ್ಕೆ ಕಾರಣವಾಗಿದೆ.

  • ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ – ಬಿಜೆಪಿ ನಾಯಕರ ವಿರುದ್ಧ ನಲಪಾಡ್ ದೂರು

    ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ – ಬಿಜೆಪಿ ನಾಯಕರ ವಿರುದ್ಧ ನಲಪಾಡ್ ದೂರು

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಆರೋಪ ಹೊರಿಸಿದ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ (Congress) ಯುವ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ದೂರು ನೀಡಿದ್ದಾರೆ.

    ಪ್ರಚೋದನಾಕಾರಿ ಹೇಳಿಕೆ ಕೊಟ್ಟು ಸಮಾಜ ಒಡೆಯಲು ಯತ್ನಿಸುತ್ತಿರುವ ಬಿಜೆಪಿ (BJP) ನಾಯಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನಲಪಾಡ್ ಕಮೀಷನರ್ ಕಚೇರಿಯಲ್ಲಿ ದೂರು ನೀಡಿದ್ದಾರೆ. ವಕೀಲ ಶತಬೀಷ್ ಶಿವಣ್ಣ ಜೊತೆ ಆಗಮಿಸಿ ಸತ್ಯಾಂಶ ಹೊರಬರುವ ಮುನ್ನವೇ ಸುಳ್ಳು ಹಬ್ಬಿಸಿದ್ದಾರೆ ಎಂದು ನಲಪಾಡ್ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ:  ರೈತನಿಗೆ ಅವಮಾನ – ಕ್ಷಮೆಯಾಚಿಸಿ ಉಲ್ಟಾ ಹೊಡೆದ ಬಿಎಂಆರ್‌ಸಿಎಲ್

    ಆರ್ ಅಶೋಕ್, ಅಶ್ವಥ್ ನಾರಾಯಣ್, ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ದೂರು ಕೊಡಲು ಬಂದಿದ್ದೇವೆ. ನಾಸೀರ್ ಹುಸೇನ್ ಜಿಂದಾಬಾದ್ ಎಂಬುದನ್ನು ತಿರುಚಿ ಹೇಳಲಾಗುತ್ತಿದೆ. ಅದನ್ನು ಪಾಕಿಸ್ತಾನ ಜಿಂದಾಬಾದ್ ಎಂದು ತಿರುಚಿ ಹೇಳಿ ಸಮಾಜ ಒಡೆದುಹಾಕುವ ಹೇಳಿಕೆ ನೀಡಿದ್ದಾರೆ. ಕಮ್ಯೂನಲ್ ವಿಚಾರದ ಬಗ್ಗೆ ದಂಗೆ ಹಚ್ಚಲು ಈ ರೀತಿ ಮಾಡಲಾಗುತ್ತಿದೆ. ರಾಜಕೀಯ ಮಾಡಿ ಈ ರೀತಿ ಹಬ್ಬಿಸಲಾಗುತ್ತಿದೆ. ಒಂದೇ ಒಂದು ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

    ನಾವೆಲ್ಲಾ ಭಾರತೀಯರು, ಕನ್ನಡಿಗರು. ಒಂದು ಸಮಾಜವನ್ನು ಟಾರ್ಗೆಟ್ ಮಾಡಿ ಅವನನ್ನು ಜೀವನ ಮಾಡಲು ಬಿಡುತ್ತಿಲ್ಲ. ಒಬ್ಬ ಸಂಸದ ಗೆದ್ದಾಗ ಜಿಂದಾಬಾದ್ ಹಾಕೋಕು ಬಿಟ್ಟಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ ಮಾಡಿದ್ದೇವೆ. ಮೂರು ಸೀಟ್ ಗೆದ್ದಿರುವುದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಉರ್ಕೊಂಡು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ, ಡಿಕೆಶಿ ಇರೋವರೆಗೂ ನಮ್ಮ ಶಾಸಕರನ್ನು ಖರೀದಿ ಮಾಡಲು ಆಗಲ್ಲ. ಎಷ್ಟೇ ಕೋಟಿ ಕೊಡುತ್ತೇನೆ ಅಂದರೂ ನಮ್ಮ ಶಾಸಕರು ಸೋತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನೀರಿನ ಕೊರತೆ – ಲೋಡ್ ಶೆ‌ಡ್ಡಿಂಗ್ ಭೀತಿ

  • ಪಾಕ್‌ ಜಿಂದಾಬಾದ್‌ ಘೋಷಣೆ – ಸುಮೊಟೋ ಕೇಸ್‌ ದಾಖಲಿಸಿದ ಪೊಲೀಸರು

    ಪಾಕ್‌ ಜಿಂದಾಬಾದ್‌ ಘೋಷಣೆ – ಸುಮೊಟೋ ಕೇಸ್‌ ದಾಖಲಿಸಿದ ಪೊಲೀಸರು

    ಬೆಂಗಳೂರು: ವಿಧಾನಸೌಧದಲ್ಲಿ (Vidhana Soudha) ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

    153 ಬಿ(ರಾಷ್ಟ್ರೀಯ ಸಮಗ್ರತೆ ಧಕ್ಕೆ ನೀಡಿದ ಹೇಳಿಕೆ) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಆರೋಪದ ಅಡಿ ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ. ವಿಧಾನಸೌಧ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ.

     

    ವಿಪಕ್ಷಗಳು ಪ್ರತಿಭಟನೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಈಗ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

     

    ದೂರಿನಲ್ಲಿ ಏನಿದೆ?
    ರಾಜ್ಯಸಭಾ ಚುನಾವಣೆ ನಂತರ ನಾಸೀರ್ ಹುಸೇನ್ (Naseer Hussain) ಅವರ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ 6:30 ರ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ವಿಧಾನಸೌಧದ ಪೂರ್ವ ದ್ವಾರದ ಬಳಿ ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿದ ಎಂಬ ಸುದ್ದಿ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಬರುತ್ತಿದೆ. ಈ ಸಂಬಂಧವಾಗಿ ಲಭ್ಯವಿರುವ ಪೂಟೇಜ್‌ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

    ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಬೆನ್ನಲ್ಲೇ ಬುಧವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕಲು ವಿಪಕ್ಷ ಬಿಜೆಪಿ ಕರೆ ನೀಡಿದೆ.

     

  • ಸಾರ್ವಜನಿಕ ಉದ್ಯಮಗಳ ಸಮಿತಿಗೆ ಚುನಾವಣೆ – ಅತಿ ಹೆಚ್ಚು ಮತಗಳನ್ನು ಪಡೆದ ಸಂಸದ ನಾಸೀರ್ ಹುಸೇನ್

    ಸಾರ್ವಜನಿಕ ಉದ್ಯಮಗಳ ಸಮಿತಿಗೆ ಚುನಾವಣೆ – ಅತಿ ಹೆಚ್ಚು ಮತಗಳನ್ನು ಪಡೆದ ಸಂಸದ ನಾಸೀರ್ ಹುಸೇನ್

    ನವದೆಹಲಿ: ಸಾರ್ವಜನಿಕ ಖಾತೆಗಳ ಸಮಿತಿ ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿಗೆ ನಡೆದ ಚುನಾವಣೆಯಲ್ಲಿ ರಾಜ್ಯಸಭೆ ಸಂಸದ ಸೈಯದ್ ನಾಸೀರ್ ಹುಸೇನ್ (Naseer Hussain), ಡಿಎಂಕೆ ಸಂಸದ ತಿರುಚ್ಚಿ ಶಿವ (Tiruchi Siva) ಅತ್ಯಂತ ಹೆಚ್ಚು ಮತಗಳನ್ನು ಪಡೆಯುವ ‌ಮೂಲಕ ಆಯ್ಕೆಯಾಗಿದ್ದಾರೆ‌.

    ಸಾರ್ವಜನಿಕ ಖಾತೆಗಳ ಸಮಿತಿಗೆ ನಡೆದ ಚುನಾವಣೆಯಲ್ಲಿ ಸಂಸದ ತಿರುಚ್ಚಿ ಶಿವ ಹೆಚ್ಚಿನ ಮತಗಳನ್ನು ಪಡೆದರೆ, ಸಾರ್ವಜನಿಕ ಉದ್ಯಮಗಳ ಸಮಿತಿಗೆ ನಡೆದ ಚುನಾವಣೆಯಲ್ಲಿ ನಾಸೀರ್ ಹುಸೇನ್ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಇನ್ನು ಈ ಸಮಿತಿಗೆ ರಾಧಾ ಮೋಹನ್ ದಾಸ್ ಅಗರವಾಲ್, ಅನಿಲ್ ಜೈನ್, ಪ್ರಕಾಶ್ ಜಾವಡೇಕರ್, ಅಮರ್ ಪಟ್ನಾಯಕ್, ವಿಜಯಸಾಯಿ ರೆಡ್ಡಿ , ಬಿನೋಯ್ ವಿಶ್ವಂ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಹಾಸನದ ವಿಷಯದಲ್ಲಿ ನನ್ನ ಸ್ಟ್ಯಾಂಡ್ ಬದಲಾಗಲ್ಲ: ಹೆಚ್‍ಡಿಕೆ

    ಸಾರ್ವಜನಿಕ ಖಾತೆಗಳ ಸಮಿತಿಗೆ ಶಕ್ತಿಸಿನ್ಹ್ ಗೋಹಿಲ್, ಕೆ. ಲಕ್ಷ್ಮಣ್, ಸುಖೇಂದು ಶೇಖರ್ ರೇ, ಎಂ ತಂಬಿದುರೈ, ಘನಶ್ಯಾಮ್ ತಿವಾರಿ, ಸುಧಾಂಶು ತ್ರಿವೇದಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ನಾಲ್ಕನೇಯ ಬಾರಿ ಗೆಲ್ತಾರಾ ಖಾದರ್‌ ? ಮಂಗಳೂರಿನಲ್ಲಿ ಈ ಬಾರಿ ಬಿಜೆಪಿ ಕೊಡುತ್ತಾ ಠಕ್ಕರ್‌?