Tag: Narthan

  • ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ಕೊಟ್ಟ ದಿಲ್ ರಾಜು?

    ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ಕೊಟ್ಟ ದಿಲ್ ರಾಜು?

    ಶ್ ಮುಂದಿನ ಸಿನಿಮಾ ಬಗ್ಗೆ ಏನೆಲ್ಲ ಸುದ್ದಿಗಳು ಹರಡಿದರೂ, ಅವರು ಮಾತ್ರ ಯಾವುದೇ ಮಾಹಿತಿ ಕೊಡದೇ ಕುತೂಹಲದ ಮೇಲೆ ಕುತೂಹಲ ಹುಟ್ಟಿಸುತ್ತಿದ್ದಾರೆ. ಮುಂದಿನ ಚಿತ್ರವನ್ನು ಅವರು ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಜೊತೆ ಮಾಡುವುದು ಪಕ್ಕಾವಾದರೂ, ಅಧಿಕೃತವಾಗಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಈ ಸಿನಿಮಾದ ನಿರ್ಮಾಪಕರು ಕೆವಿಎನ್ ಪ್ರೊಡಕ್ಷನ್ ಎಂದು ಗೊತ್ತಾಗಿದ್ದರೂ, ಅವರು ಕೂಡ ಮಾಹಿತಿ ಬಿಟ್ಟು ಕೊಡುತ್ತಿಲ್ಲ.

    ಈ ಮಧ್ಯೆ ತೆಲುಗು ಸಿನಿಮಾ ರಂಗದಿಂದ ಮತ್ತೊಂದು ಖಡಕ್ ಸುದ್ದಿ ಬಂದಿದೆ. ದಕ್ಷಿಣದ ಖ್ಯಾತ ನಿರ್ಮಾಪಕ, ಬಹುಕೋಟಿ ಬಜೆಟ್ ಸಿನಿಮಾ ಮಾಡುವ ದಿಲ್ ರಾಜು ಅವರು ಯಶ್ ಗಾಗಿ ಒಂದು ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾವನ್ನು ತೆಲುಗು ನಿರ್ದೇಶಕರೇ ನಿರ್ದೇಶನ ಮಾಡಿದರೂ, ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಯಶ್ ಅವರಿಗೆ ದಿಲ್ ರಾಜು 100 ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದಾರಂತೆ. ಇದನ್ನೂ ಓದಿ: ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ

    ಈ ಹಿಂದೆಯೂ ಕೂಡ ಯಶ್ ಅವರು ನೂರಾರು ಕೋಟಿ ರೂಪಾಯಿಯ ಬಾಲಿವುಡ್ ಆಫರ್ ತಿರಸ್ಕರಿಸಿದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಪ್ರಮಾಣದ ಸಿನಿಮಾವನ್ನು ಅವರು ಬಿಡಲು ಕಾರಣ ಏನು? ಎಂಬ ಪ್ರಶ್ನೆ ಕೂಡ ಮೂಡಿತ್ತು. ಈಗ ಮತ್ತೆ ನೂರು ಕೋಟಿ ರೂಪಾಯಿ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಅಂದುಕಂಡಂತೆ ಆದರೆ, ದಕ್ಷಿಣದಲ್ಲೇ ಈ ಪ್ರಮಾಣದಲ್ಲಿ ಸಂಭಾವನೆ ಪಡೆಯುವ ಬೆರಳಣಿಕೆಯ ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ. ಆದರೆ, ನರ್ತನ್ ಸಿನಿಮಾವಾದ ನಂತರ ದಿಲ್ ರಾಜು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    Live Tv

  • ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ನ್ಯಾಷನಲ್ ಸ್ಟಾರ್ ಯಶ್, `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ಗಮನ ಯಶ್ ಮುಂದಿನ ಚಿತ್ರದ ಮೇಲಿದೆ. ರಾಕಿಭಾಯ್ ನೆಕ್ಸ್ಟ್‌ ಸಿನಿಮಾ ಯಾವುದು, ಅವರ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಡೀಟೈಲ್ಸ್.‌

    ಚಿತ್ರರಂಗದಲ್ಲಿ ಯಶ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. `ಕೆಜಿಎಫ್ 2′ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. `ಮಫ್ತಿ’ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರೋದಕ್ಕೆ ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ.

    ನ್ಯಾಷನಲ್ ಸ್ಟಾರ್ ಯಶ್ ಮತ್ತು ಮಪ್ತಿ ನಿರ್ದೇಶಕ ನರ್ತನ್ ಸಿನಿಮಾಗೆ ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಕೈ ಜೋಡಿಸಿದೆ. ಇದರ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ದಕ್ಷಿಣದ ಸ್ಟಾರ್ ನಾಯಕಿಯನ್ನೇ ಆಯ್ಕೆ ಮಾಡಿದ್ದಾರೆ. ಕರಾವಳಿ ಮೂಲದ ನಟಿ ದಕ್ಷಿಣ ಭಾರತದ ಬೊಟ್ಟಬೊಮ್ಮ ಸುಂದರಿ ಪೂಜಾ ಹೆಗ್ಡೆ ಯಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಪತ್ನಿ ನಯನತಾರಾ ತಪ್ಪಿಗೆ ಪತಿ ವಿಘ್ನೇಶ್ ಶಿವನ್ ಕ್ಷಮೆಯಾಚನೆ

    ನಟಿ ಪೂಜಾ ಹೆಗ್ಡೆ, ಕರ್ನಾಟಕದ ಮೂಲದವರಾಗಿದ್ದರೂ, ಬೆಳೆದಿದ್ದೆಲ್ಲಾ ಮುಂಬೈನಲ್ಲಿ ಸೌತ್ ಮತ್ತು ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಿರೋ ಬ್ಯೂಟಿ ಇವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲೂ ನಟಿಸಿಲ್ಲ. ಇದೀಗ ಆ ಕಾಲ ಕೂಡಿ ಬಂದಿದೆ. ಯಶ್‌ಗೆ ನಾಯಕಿಯಾಗುವ ಮೂಲಕ ಪೂಜಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಪೂಜಾ ನಿಜವಾಗಲೂ ಕನ್ನಡಕ್ಕೆ ಬರುತ್ತಾರಾ, ಯಶ್ ಜೊತೆ ಪೂಜಾ ಜೋಡಿ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಅಂತಾ ಕಾದುನೋಡಬೇಕಿದೆ.

  • ಕೆಜಿಎಫ್ 2 ಚಿತ್ರದ 50ನೇ ದಿನಕ್ಕೆ ಯಶ್ ನಟನೆಯ ಹೊಸ ಸಿನಿಮಾ ಅನೌನ್ಸ್?

    ಕೆಜಿಎಫ್ 2 ಚಿತ್ರದ 50ನೇ ದಿನಕ್ಕೆ ಯಶ್ ನಟನೆಯ ಹೊಸ ಸಿನಿಮಾ ಅನೌನ್ಸ್?

    ಕೆಜಿಎಫ್ 2 ಸಿನಿಮಾ ಯಶಸ್ಸಿನ ನಂತರ ಎಲ್ಲರ ಚಿತ್ರ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ನೆಟ್ಟಿದೆ. ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಎರಡು ಚಿತ್ರಗಳನ್ನು ಘೋಷಿಸಿ ಆಗಿದೆ. ಈಗಾಗಲೇ ಅವರು ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ನಂತರ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎನ್ನುವುದು ಮೊನ್ನೆಯಷ್ಟೇ ನಿಕ್ಕಿ ಆಗಿದೆ. ಆದರೆ, ಯಶ್ ನಡೆ ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಕೆಜಿಎಫ್ 2 ಸಿನಿಮಾದ ನಿರ್ಮಾಪಕರು ನಾಲ್ಕು ಸಿನಿಮಾಗಳನ್ನು ಘೋಷಿಸಿದ್ದರೆ, ಪ್ರಶಾಂತ್ ನೀಲ್ ಎರಡು ಚಿತ್ರಗಳನ್ನೂ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅಲ್ಲದೇ, ಮತ್ತೊಂದು ಚಿತ್ರವನ್ನು ಶ್ರೀಮುರುಳಿ ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಆದರೆ, ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಗುಟ್ಟನ್ನು ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ನಿರ್ದೇಶಕ ನರ್ತನ್ ಜತೆ ಯಶ್ ಸಿನಿಮಾ ಮಾಡಬೇಕಿತ್ತು. ಆದರೆ, ಅದು ತಡವಾಗುತ್ತಲೇ ಬರುತ್ತಿದೆ. ಬಹುಶಃ ಯಶ್ ಅವರ ಮುಂದಿನ ಸಿನಿಮಾ ಇದೇ ಎನ್ನಲಾಗುತ್ತಿದೆ. ಈಗಾಗಲೇ ನರ್ತನ್ ಮತ್ತು ಟೀಮ್ ಹಲವು ಬದಲಾವಣೆಗಳ ಜತೆ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಯಶ್ ಕೂಡ ಕಥೆ ಹೆಣೆಯುವಲ್ಲಿ ತಮ್ಮ ಸಲಹೆಗಳನ್ನು ನೀಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಈ ಎಲ್ಲವುಗಳ ನಡುವೆ ಕೆಜಿಎಫ್ 2 ರಿಲೀಸ್ ಆಗಿ 50 ದಿನ ಪೂರೈಸುವ ಸಂದರ್ಭದಲ್ಲಿ ಯಶ್ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ ಎನ್ನುವುದು ಈಗಿರುವ ಲೆಟೆಸ್ಟ್ ಮಾಹಿತಿ. ನರ್ತನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕೆವಿಎನ್ ಪ್ರೊಡಕ್ಷನ್ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವುದು ಸಿಕ್ಕಿರುವ ಮಾಹಿತಿ. ಆದರೆ, ಈ ಕುರಿತು ಈವರೆಗೂ ಯಾರಿಗೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

  • ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಕೆಜಿಎಫ್ 2 ನಂತರ ಭಾರತೀಯ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಪ್ರಶ್ನೆ, ಯಶ್ ನಟನೆಯ ಮುಂದಿನ ಸಿನಿಮಾ ಯಾವುದು? ನಿರ್ದೇಶಕರು ಯಾರು? ಯಾವ ಕಥೆಯನ್ನು ಅವರು ಒಪ್ಪಲಿದ್ದಾರೆ ಎನ್ನುವುದು. ಹಲವು ಬಾರಿ ಸ್ವತಃ ಯಶ್ ಅವರಿಗೆ ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಾಗಿ ‘ಕಥೆ ಗಟ್ಟಿಯಾಗುತ್ತಿದೆ. ದೊಡ್ಡದಾಗಿಯೇ ಕನಸು ಕಾಣುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಹೇಳುತ್ತೇನೆ’ ಎಂದು. ಇದರ ಹೊರತಾಗಿ ಅವರು ಬೇರೆ ಏನೂ ಹೇಳಿಲ್ಲ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಆದರೆ, ಯಶ್ ಮುಂದಿನ ಸಿನಿಮಾ ಕುರಿತಾಗಿ ಈಗಷ್ಟು ಸುದ್ದಿ ಸಿಕ್ಕಿವೆ. ಗಾಂಧಿನಗರದಲ್ಲಿ ಭಾರೀ ಬಜೆಟ್ ಚಿತ್ರಗಳನ್ನು ಮಾಡುತ್ತಿರುವ ಮತ್ತು ಆರ್.ಆರ್.ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಿರುವ ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಸಿನಿಮಾ ಮಾಡಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈಗಾಗಲೇ ಮಾತುಕತೆ ಗೋವಾದಿಂದ ಶುರುವಾಗಿದೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಮೊನ್ನೆಯಷ್ಟೇ ಯಶ್ ಅವರು ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಕೆವಿಎನ್ ಪ್ರೊಡಕ್ಷನ್ ವೆಂಕಟ್ ಕೊನಂಕಿ ಕೂಡ ಹಾಜರಿದ್ದರು. ಹೀಗಾಗಿ ಅವತ್ತು ಒಂದು ಹಂತದ ಮಾತುಕತೆ ಕೂಡ ಮುಗಿದಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಿದರೆ ನರ್ತನ್ ಅವರು ನಿರ್ದೇಶನ ಈ ಚಿತ್ರಕ್ಕೆ ಇರಲಿದೆ ಎನ್ನುವುದು ಪ್ರಾರ್ಥಮಿಕ ಮಾಹಿತಿ. ಆದರೆ, ಅಧಿಕೃತವಾಗಿ ಯಶ್ ಅವರಾಗಲಿ ಕೆವಿಎನ್ ಪ್ರೊಡಕ್ಷನ್ ಆಗಲಿ ಈ ಕುರಿತು ಹೇಳಿಕೊಂಡಿಲ್ಲ.