Tag: Narthan

  • ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಕೆಡಿ’ ಚಿತ್ರದ (KD Film) ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಈ ನಡುವೆ ಅವರ ಮುಂಬರುವ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಭೈರತಿ ರಣಗಲ್’ (Bhairathi Rangal) ನಿರ್ದೇಶಕ ನರ್ತನ್ ಜೊತೆ ಧ್ರುವ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ: ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಕೆವಿಎನ್ ಪ್ರೊಡಕ್ಷನ್ ಸಾರಥ್ಯದಲ್ಲಿ ಧ್ರುವ ಮತ್ತು ನರ್ತನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ ಎಂಬುದು ಸದ್ಯದ ಟಾಕ್. ಮಫ್ತಿ, ಭೈರತಿ ರಣಗಲ್ ಚಿತ್ರ ನಿರ್ದೇಶನ ಮಾಡಿ ಗೆದ್ದಿರುವ ನರ್ತನ್ ಈಗ ಧ್ರುವಗೆ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಮೂಲಗಳ ಪ್ರಕಾರ, ನರ್ತನ್ (Narthan) ಚಿತ್ರದ ಕಥೆ ಬರೆಯುತ್ತಿದ್ದು, ಪ್ರಾರಂಭಿಕ ಹಂತದಲ್ಲಿದೆ. ವಿದೇಶದಲ್ಲಿರುವ ಧ್ರುವ ವಾಪಸ್ ಬಂದ್ಮೇಲೆ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯಲಿದೆ. ಆ ನಂತರ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ ಎಂಬುದು ಸದ್ಯದ ಅಪ್‌ಡೇಟ್.

    ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಮತ್ತು ಧ್ರುವ ಜೊತೆಯಾದ್ರೆ ಸಿನಿಮಾ ಸಖತ್ ಆಗಿರುತ್ತದೆ ಎಂಬುದು ಅಭಿಮಾನಿಗಳ ಲೆಕ್ಕಚಾರ. ಹೀಗಾಗಿ ಇಬ್ಬರೂ ಒಟ್ಟಿಗೆ ಚಿತ್ರ ಮಾಡಲಿ, ಬೇಗ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಡಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

  • ‘ಭೈರತಿ ರಣಗಲ್’ ಶೂಟಿಂಗ್ ಮುಗಿದಿದ್ದು ಶೇ.70 ರಷ್ಟು: ನಿರ್ದೇಶಕ ನರ್ತನ್

    ಭೈರತಿ ರಣಗಲ್‍ (Bhairati Rangal) ಚಿತ್ರ ಆರು ವರ್ಷಗಳ ಹಿಂದೆ ಬಿಡುಗಡೆಯಾದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್‍ ಎಂದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಆದರೆ, ‘ಮಫ್ತಿ’ ಚಿತ್ರ ಮಾಡುವಾಗ ಈ ಚಿತ್ರದಲ್ಲಿ ನಟಿಸಬೇಕಾ?  ಎಂಬ ಗೊಂದಲ ನನ್ನಗಿತ್ತು. ‘ಏಕೆಂದರೆ, ಆ ಚಿತ್ರದಲ್ಲಿ ನನ್ನ ಪಾತ್ರ ಬರುವುದೇ ಇಂಟರ್‌ ವೆಲ್ ನಂತರ. ಶ್ರೀಮುರಳಿ ಈ ಚಿತ್ರದಲ್ಲಿ ಇನ್ನೊಂದು ಪಾತ್ರವನ್ನು ಮಾಡುತ್ತಿದ್ದರು. ಮುರಳಿ ನನ್ನ ಮಾವನ ಮಗ. ಇಲ್ಲ ಎನ್ನುವಂತೆಯೂ ಇರಲಿಲ್ಲ. ಹಾಗಿರುವಾಗ, ಏನು ಮಾಡುವುದು ಎಂಬ ಪ್ರಶ್ನೆ ಇದ್ದೇ ಇತ್ತು. ಅಂತಹ ಸಂದರ್ಭದಲ್ಲಿ ನಿರ್ದೇಶಕ ನರ್ತನ್ (Narthan) ಬಂದು ನೀವು ಈ ಪಾತ್ರ ಮಾಡಿ ಎಂದರು. ನನಗೊಂದು ಧೈರ್ಯ ಬಂತು.  ಆನಂತರ “ಮಫ್ತಿ”  ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಅಭಿನಯಿಸುವಾಗಲೇ ಅದೇನೋ ಆ ಪಾತ್ರವನ್ನು ಇಷ್ಟಪಡತೊಡಗಿದೆ. ಅದಕ್ಕೆ ಆ ಹೆಸರು ಸಹ ಕಾರಣ. ಈ ತರಹದ ಹೆಸರು ಕೇಳೋಕೆ ಸಾಧ್ಯ ಇಲ್ಲ. ಇನ್ನು, ಸಂಭಾಷಣೆ ಚೆನ್ನಾಗಿತ್ತು. ಅಲ್ಲಿದ್ದ ಭೈರತಿ ರಣಗಲ್‍ನ ಸಣ್ಣ ಕಥೆಯನ್ನು ಇಲ್ಲಿ ಬೆಳೆಸಿದ್ದಾರೆ. ಯಾಕೆ ಅವನು ಭೈರತಿ ರಣಗಲ್‍ ಆಗುತ್ತಾನೆ. ಜನರಿಗೆ ಯಾಕೆ ಅವನನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ಬಹಳ ಚೆನ್ನಾಗಿದೆ ಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕ ನರ್ತನ್‍’ ಎಂದರು ಶಿವಣ್ಣ.

    ಶಿವಣ್ಣ (Shivaraj Kumar) ಈ ಚಿತ್ರದಲ್ಲಿ ಆ ಡ್ರೆಸ್‍ ಯಾಕೆ ಹಾಕುತ್ತಾರೆ? ಎನ್ನುವುದೇ ಚಿತ್ರದ ಕಥೆ ಎಂದು ಮಾತನಾಡಿದ ನಿರ್ದೇಶಕ ನರ್ತನ್‍, ‘‘ಮಫ್ತಿ’ ಚಿತ್ರ ಮಾಡುವಾಗಲೇ, ಆ ಪಾತ್ರದ ತೂಕ ಹೆಚ್ಚಿತ್ತು. ಚಿತ್ರ ನೋಡಿದಾಗ ಜನರಿಗೆ ಸಾಕಾಗಲಿಲ್ಲ. ಏಕೆಂದರೆ, ಶಿವಣ್ಣ ಅವರ ಪಾತ್ರ ಇಂಟರ್‍ವೆಲ್‍ ನಂತರ ಬರುತ್ತದೆ. ಈ ಪಾತ್ರವನ್ನು ಇಷ್ಟಕ್ಕೇ ಮುಗಿಸಬಾರದು, ಇದರ ಹಿನ್ನೆಲೆ ಏನಾದರೂ ಬರೆಯಬೇಕು ಎಂದಾಗ ರಣಗಲ್‍ ಹಿಂದಿನ ಕಥೆ  ಸೃಷ್ಟಿಯಾಯಿತು. ಪೆನ್‍ ಹಿಡಿದಾಗ ಬಹಳ ಸಲೀಸಾಗಿ ಕಥೆ ಸೃಷ್ಟಿಯಾಯಿತು. “ಭೈರತಿ ರಣಗಲ್‍” ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲಾಕ್‍ ಡ್ರೆಸ್‍ ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ. ಈ ಸಿನಿಮಾ ಬರೆದುಕೊಂಡು ಕಥೆ ಹೇಳಿದಾಗ, ಶಿವಣ್ಣ ಹಾಗೂ ಗೀತಕ್ಕ ಅವರು ಬೇರೇನೂ ಕೇಳಲಿಲ್ಲ. ಮಾಡು ಎಂದು ಹುರಿದುಂಬಿಸಿದರು.ಈಗಾಗಲೇ 70 ರಷ್ಟು ಚಿತ್ರ ಮುಗಿದಿದೆ. ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.

    ನಮ್ಮ ಚಿತ್ರ ಆಗಸ್ಟ್ 15 ರಂದು ತೆರೆಗೆ ಬರುತ್ತಿದೆ. ಆಗಸ್ಟ್ ನಲ್ಲಿ ಸಾಲುಸಾಲು ರಜೆಗಳಿದೆ. ಸಾಮಾನ್ಯವಾಗಿ ಸತತವಾಗಿ ರಜೆ ಸಿಕ್ಕರೆ, ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ದೃಷ್ಟಿಯಿಂದ ಆಗಸ್ಟ್  15 ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕಿ ಗೀತಾ ಶಿವರಾಜಕುಮಾರ್ ತಿಳಿಸಿದರು.

    ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍ , ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. “ಭೈರತಿ ರಣಗಲ್”  ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

  • ಹೊಂಬಾಳೆ ಸಂಸ್ಥೆ ಬ್ಯಾನರ್ ನಲ್ಲಿ ಧ್ರುವ ಸರ್ಜಾ ಸಿನಿಮಾ

    ಹೊಂಬಾಳೆ ಸಂಸ್ಥೆ ಬ್ಯಾನರ್ ನಲ್ಲಿ ಧ್ರುವ ಸರ್ಜಾ ಸಿನಿಮಾ

    ಹೊಂಬಾಳೆಯ ಅದೊಂದು ನಿರ್ಧಾರ ಟಾಲಿವುಡ್‌ನಲ್ಲಿ ಸಂಚಲ ಮೂಡಿಸಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಹೊಂಬಾಳೆ ಸಂಸ್ಥೆ (Hombale Films) ಸಜ್ಜಾಗ್ತಿದೆ. ವಿಜಯ್ ಕಿರಂಗದೂರ್ ಮುಂದಿನ ಪ್ಲಾನ್ ಏನು..? ಟಾಲಿವುಡ್‌ನಲ್ಯಾಕೆ ಟಾಕ್ ಶುರುವಾಗಿದೆ? ಧ್ರುವ ಸಿನಿಮಾಗೆ (Dhruva Sarja) ಆ್ಯಕ್ಷನ್ ಕಟ್ ಹೇಳೋದು ಯಾರು..? ಹೇಗಿರಲಿದೆ ಧ್ರುವ ಸರ್ಜಾ ಮುಂದಿನ ಸಿನಿಮಾ ಅನ್ನೊ ಎಕ್ಸ್ಕ್ಲೂಸಿವ್ ಅಪ್‌ಡೇಟ್ ಇಲ್ಲಿದೆ.

    ಸಲಾರ್ ಸೂಪರ್ ಸಕ್ಸಸ್ ಸಂಭ್ರಮ ಸವಿದ ಹೊಂಬಾಳೆ ಟೀಮ್ ಈಗ ಮತ್ತೊಂದು ಮಹಾಯಜ್ಞಕ್ಕೆ ಸಜ್ಜಾಗ್ತಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕ್ಕೆ ರೆಡಿಯಾಗ್ತಿದೆ. ಧ್ರುವ ಸರ್ಜಾ ಜೊತೆ ಸಿನಿಮಾ ಮಾಡೋಕ್ಕೆ ಮೊದಲ ಹಂತದ ಮಾತು-ಕತೆ ಮುಗಿಸಿದೆ. ಫಸ್ಟ್ ಮೀಟಿಂಗ್‌ನಲ್ಲಿ ಒಂದಿಷ್ಟು ವಿಚಾರಗಳನ್ನ ಫೈನಲ್ ಮಾಡಿರುವ ನಿರ್ಮಾಣ ಸಂಸ್ಥೆ ಈಗ ಮುಂದುವರಿದ ಭಾಗದ ಕೆಲಸಗಳಲ್ಲಿ ಬ್ಯೂಸಿಯಾಗಿದೆ. ಹೊಂಬಾಳೆ ನೆಕ್ಸ್ಟ್ ಪ್ರಾಜೆಕ್ಟ್ ಪ್ಲಾನಿಂಗ್ ಸಿನಿ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲಿದೆ.

    ಕೆಜಿಎಫ್, ಕಾಂತಾರ, ಸಲಾರ್ ಮೂಲಕ ಸೂಪರ್ ಹಿಟ್ ಹೊಡೆದ ಹೊಂಬಾಳೆ ಕನ್ನಡ ಹೀರೋ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ಧಾರ ಮಾಡ್ತು. ಹೊಂಬಾಳೆ ಈ ಬಾರಿ ಆಯ್ಕೆ ಮಾಡಿಕೊಂಡ ಹೀರೋ ಧ್ರುವಾ ಸರ್ಜಾ, ಮಾರ್ಟಿನ್ ಹೀರೋ ಜೊತೆಗೆ ಜನ ಮೆಚ್ಚುವ ಕಂಟೆಂಟ್ ತರುವ ನಿರ್ಧಾರ ನಿರ್ಮಾಪಕರದಾಗಿತ್ತು. ಇದರ ಭಾಗವಾಗಿ ಮಫ್ತಿ ಸಾರಥಿ ನರ್ತನ್ ಜೊತೆ ಕತೆ ಕೇಳುವ ಕೆಲಸ ಮಾಡಿ ಮುಗಿಸಿಯಾಗಿದೆ. ಸದ್ಯ ನರ್ತನ್ ಶಿವಣ್ಣನ ಭೈರತಿ ರಣಗಲ್ ಸಿನಿಮಾ ಮಾಡ್ತಿದ್ದಾರೆ.

    ಭೈರತಿ ರಣಗಲ್ ಬಳಿಕ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೊ ಟಾಕ್ ಇದೆ. ಆದ್ರೆ ಇನ್ನೂ ಅನೌನ್ಸ್ ಆಗಿಲ್ಲ. ಹಾಗೇನಾದ್ರು ನರ್ತನ್ ರಾಮ್‌ಚರಣ್ ಸಿನಿಮಾ ಮಾಡಿದ್ರೆ ಪ್ಲಾನ್ ಬಿಗೆ ಹೊಂಬಾಳೆ ರೆಡಿಯಾಗ್ತಿದೆ. ಜೂನಿಯರ್ ಎನ್‌ಟಿಆರ್ ಜೊತೆಗೆ ಸದ್ಯ ದೇವರ ಕೆಲಸ ಮುಗಿಸಿರುವ ಕೊರಟಾಲ ಶಿವ ಜೊತೆ ಕೂಡ ಸಿನಿಮಾ ಮಾಡುವ ತಯಾರಿ ಆಗ್ತಿದೆ. ದೇವರ ಮುಗಿದ್ಮೇಲೆ ಧ್ರುವ ಜೊತೆ ಶಿವ ಸೇರುವ ಲಕ್ಷಣಗಳು ಕೂಡ ಕಾಣಿಸ್ತಿದೆ. ಆದ್ರೆ ಇನ್ನೂ ಯಾವುದಕ್ಕೂ ಹೊಂಬಾಳೆ ಅಂತಿಮ ಷರ ಬರೆದಿಲ್ಲ.

    ಈ ಇಬ್ಬರು ಡೈರೆಕ್ಟರ್‌ಗಳಲ್ಲಿ ಧ್ರುವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳೋವರು ಯಾರು ಅನ್ನೊದು ಸದ್ಯದ ಪ್ರಶ್ನೆ. ಪೊಗರು ಮೂಲಕ ಪ್ಯಾನ್ ಇಂಡಿಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ರು ಧ್ರುವ. ಈಗ ಮಾರ್ಟಿನ್ ಮತ್ತು ಕೆಡಿ ಮೂಲಕ ಮತ್ತೆ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಲು ಸಜ್ಜಾಗ್ತಿದ್ದರೆ. ಕೆಡಿ 2 ಬಗ್ಗೆ ಕೂಡ ಟಾಕ್ ಜೋರಾಗಿದೆ. ಜೋಗಿ ಪ್ರೇಮ್ ಕೂಡ ಪಾರ್ಟ್ 2 ಬಗ್ಗೆ ಕೆಲಸ ಮಾಡ್ತಿದ್ದಾರೆ. ಈ ವರ್ಷ ಧ್ರುವ ಸರ್ಜಾ ಅಭಿನಯದ 2 ಸಿನಿಮಾಗಳು ಥೇಟರ್‌ಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ.

    ಮಾಸ್ ಅಭಿಮಾನಿ ಬಳಗ ಹೊಂದಿರುವ ಧ್ರುವ, ಸಿನಿಮಾಗಳನ್ನ ಅದ್ಬುತವಾಗಿ ನಿರ್ಮಿಸಿ ಜನರಿಗೆ ತಲುಪಿಸುವ ಹೊಂಬಾಳೆ ಸಂಸ್ಥೆ ಇವರಿಬ್ಬರ ಕಾಂಬೋ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಈ ಜೋಡಿ ಮೂಲಕ ಮತ್ತೊಂದು ಸೂಪರ್ ಡೂಪರ್ ಪ್ಯಾನ್ ಇಂಡಿಯಾ ಸಿನಿಮಾ ಬರಲಿ ಅನ್ನೊದು ಕನ್ನಡ ಸಿನಿಪ್ರೇಕ್ಷಕರ ನಿರೀಕ್ಷೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಫೀಶಿಯಲ್ ಅನೌನ್ಸ್ಮೆಂಟ್ ಕೂಡ ನಿಮ್ಮ ಮುಂದೆ ಬರಲಿದೆ. ಅಲ್ಲಿವರೆಗೆ ಪ್ರಶ್ನೆಗಳು ಪ್ರಶ್ನೆಗಳಾಗೆ ಉಳಿಯಲಿದೆ.

  • ‘ಭೈರತಿ ರಣಗಲ್’ ಶೂಟಿಂಗ್ ನಲ್ಲಿ ಭಾಗಿಯಾದ ಶಿವರಾಜ್ ಕುಮಾರ್

    ‘ಭೈರತಿ ರಣಗಲ್’ ಶೂಟಿಂಗ್ ನಲ್ಲಿ ಭಾಗಿಯಾದ ಶಿವರಾಜ್ ಕುಮಾರ್

    ಫ್ತಿ ಸಿನಿಮಾದ ಪಾತ್ರವೊಂದರ ಹೆಸರನ್ನು ಇಟ್ಟುಕೊಂಡು ನಿರ್ದೇಶಕ ನರ್ತನ್ (Narthan) ‘ಭೈರತಿ ರಣಗಲ್’ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮುಹೂರ್ತ ಕೂಡ ನೆಡೆದಿತ್ತು. ಇಂದಿನಿಂದ ಚಿತ್ರೀಕರಣ (Shooting) ಆರಂಭಿಸಿದ್ದಾರೆ ನರ್ತನ್. ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ (Shivaraj Kumar) ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ.

    ಮಫ್ತಿ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಭೈರತಿ ರಣಗಲ್ (Bhairati Rangal) ಹೆಸರಿನ ಪಾತ್ರ ಮಾಡಿದ್ದರು. ಮಫ್ತಿ ಸಿನಿಮಾ ಹಿಟ್ ಕೂಡ ಆಗಿತ್ತು. ಇದೀಗ ಆ ಪಾತ್ರವನ್ನಿಟ್ಟುಕೊಂಡು ನರ್ತನ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಇದನ್ನೂ ಓದಿ:ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಈ ನಡುವೆ ಶಿವರಾಜ್ ಕುಮಾರ್ ಮತ್ತು ರಜನಿಕಾಂತ್ ಕಾಂಬಿನೇಷನ್ ನ ಜೈಲರ್ ಸಿನಿಮಾ ರಿಲೀಸ್ ಆಗುತ್ತಿದ್ದು, ದಕ್ಷಿಣದ ಹೆಸರಾಂತ ಸ್ಟಾರ್ ನಟರೇ ಈ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಟ್ಟು ಹತ್ತು ನಿಮಿಷಗಳ ಕಾಲ ತೆರೆಯ ಮೇಲೆ ಕಾಣಲಿದ್ದಾರಂತೆ. ಹತ್ತು ನಿಮಿಷವಿದ್ದರೂ ಕಥೆಗೆ ಮತ್ತೊಂದು ತೂಕವನ್ನು ಕೊಡುವಂತ ಪಾತ್ರ ಅದಾಗಿದೆಯಂತೆ. ಅಷ್ಟರ ಮಟ್ಟಿಗೆ ಪಾತ್ರ ಪವರ್ ಫುಲ್ ಆಗಿದೆ ಎನ್ನುವುದು ಶಿವಣ್ಣ ಮಾತು.

     

    ‘ಜೈಲರ್’ (Jailer) ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bhairathi Ranagal: ಶಿವಣ್ಣನ ಸಿನಿಮಾದಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್

    Bhairathi Ranagal: ಶಿವಣ್ಣನ ಸಿನಿಮಾದಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್

    ‘ಮಫ್ತಿ’ ನೋಡಿ ಮೆಚ್ಚಿಕೊಂಡ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಅವರು ‘ಭೈರತಿ ರಣಗಲ್’ (Bhairathi Ranagal) ಸಿನಿಮಾ ಅಪ್‌ಡೇಟ್ ಕೊಡುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಎದುರಾಳಿಯಾಗಿ ಬಾಲಿವುಡ್ ನಟ ರಾಹುಲ್ ಬೋಸ್ (Rahul Bose) ನಟಿಸಲಿದ್ದಾರೆ.

    ನರ್ತನ್ ನಿರ್ದೇಶನ, ಗೀತಾ ಪಿಕ್ಚರ್ ನಿರ್ಮಾಣದಲ್ಲಿ ‘ಭೈರತಿ ರಣಗಲ್’ ಪ್ರೀಕ್ವೆಲ್ ಮೂಡಿ ಬರುತ್ತಿದೆ. ಇದು ‘ಮಫ್ತಿ’ (Mufti) ಸಿನಿಮಾ ಹಿನ್ನೆಲೆ ಚಿತ್ರವಾಗಿ ಮೂಡಿ ಬರಲಿದೆ. ಈಗಾಗಲೇ ಕಥೆ ಸಿದ್ಧವಾಗಿದ್ದು, ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ.

    ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಮುಂದೆ ಘರ್ಜಿಸಲು ಬಹುಭಾಷಾ ನಟ ರಾಹುಲ್ ಬೋಸ್ (Rahul Bose) ಬರುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣಗೆ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ರಾಹುಲ್ ಭಾಗದ ಕಥೆ ಕೇಳಿ ಥ್ರಿಲ್ ಆಗಿ, ಈ ಚಿತ್ರದ ಭಾಗವಾಗಲು ರಾಹುಲ್ ಓಕೆ ಎಂದಿದ್ದಾರಂತೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    8 ವರ್ಷಗಳ ಹಿಂದೆ ‘ನಿರುತ್ತರ’ ಎಂಬ ಸಿನಿಮಾದಲ್ಲಿ ರಾಹುಲ್ ಬೋಸ್ ನಟಿಸಿದ್ದರು. 8 ವರ್ಷಗಳ ಬಳಿಕ ‘ಭೈರತಿ ರಣಗಲ್’ ಮೂಲಕ ರಾಹುಲ್ ಬೋಸ್ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ.

  • ಭೈರತಿ ರಣಗಲ್ ಶಿವಣ್ಣಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೋಡಿ?

    ಭೈರತಿ ರಣಗಲ್ ಶಿವಣ್ಣಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೋಡಿ?

    ಶಿವರಾಜ್ ಕುಮಾರ್ (Shivraj Kumar) ನಟನೆಯ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ (Bhairati Rangal) ಸಿನಿಮಾಗೆ ಮೇ 26ರಂದು ಚಾಲನೆ ನೀಡಲಾಗಿದೆ. ಸಿನಿಮಾ ಶೂಟಿಂಗ್ ಸಿದ್ಧತೆಯ ಬೆನ್ನಲ್ಲೇ ಈ‌‌ ಚಿತ್ರಕ್ಕೆ ನಾಯಕಿ ಯಾರಿರಬಹುದು ಎನ್ನುವ ಕುತೂಹಲ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ನರ್ತನ್ (Narthan) ನಿರ್ದೇಶನದ ಮಫ್ತಿ ಸಕ್ಸಸ್ ನಂತರ ಈ ಚಿತ್ರದ ಸೀಕ್ವೇಲ್ ಭೈರತಿ ರಣಗಲ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಶಿವಣ್ಣಗೆ ನಾಯಕಿಯಾಗುವ ಆ ಲಕ್ಕಿ ನಟಿ ಯಾರು ಎಂಬುದಕ್ಕೆ ಸುಳಿವು ಸಿಕ್ಕಿದ್ದು, ಶಿವಣ್ಣ ಜೊತೆ ತಮನ್ನಾ ಭಾಟಿಯಾ ಡ್ಯುಯೇಟ್ ಹಾಡೋದಕ್ಕೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭೈರತಿ ರಣಗಲ್ ಚಿತ್ರದಲ್ಲಿ ನಾಯಕಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದ್ದು, ಮಿಲ್ಕಿ ಬ್ಯೂಟಿ ತಮನ್ನಾರನ್ನ (Tamannaah Bhatia) ಚಿತ್ರತಂಡ ಫೈನಲ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ನಿನ್ನೆ ಶುಕ್ರವಾರ (ಮೇ 26) ನಡೆದ ಚಿತ್ರದ ಪ್ರೆಸ್ ಮೀಟ್ ನಲ್ಲಿ, ನಾಯಕಿಯ ಆಯ್ಕೆ ಬಗ್ಗೆ ನಿರ್ದೇಶನ ನರ್ತನ್ ರಿಯಾಕ್ಟ್ ಮಾಡಿದ್ದರು. ನಮಗೆ ಶಿವಣ್ಣ ಅವರ ಡೇಟ್ ತುಂಬಾ ಮುಖ್ಯ. ಆ ಡೇಟು ಪ್ಲಸ್ ರೇಟು ಮ್ಯಾಚ್ ಆದರೆ ಯಾರಾದರೂ ಓಕೆ ಅಂತಾ ನಗುತ್ತಾ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದರು. ಬಳಿಕ ಶಿವಣ್ಣ ಮಾತನಾಡಿ, ನಾಯಕಿಯ ಪಾತ್ರಕ್ಕೆ ಯಾರು ಸೂಟ್ ಆಗುತ್ತಾರೋ ಅವರೇ ಹಾಕಿಕೊಳ್ತೀವಿ. ಅದಕ್ಕೆ ಕನ್ನಡ ನಟಿ ಪರಭಾಷಾ ನಟಿ ಎಂಬುದು ಇಲ್ಲ. ಆ ಪಾತ್ರಕ್ಕೆ ಹೊಂದುವಂತಹ ನಟಿಯನ್ನ ಆಯ್ಕೆ ಮಾಡ್ತೀವಿ ಅಂತಾ ತಿಳಿಸಿದ್ದರು. ಕನ್ನಡದ ನಟಿಯನ್ನ ಹಾಕಬಾರದು ಅಂತಾ ಏನಿಲ್ಲ. ನಮ್ಮ ಭಾಷೆಯ ನಟಿ ಸೂಟ್ ಆಗುತ್ತಾರೆ ಅಂದರೆ ಚಿತ್ರಕ್ಕೆ ಹಾಕಿಕೊಳ್ಳಲು ಯಾವುದೇ ಬೇಸರವಿಲ್ಲ. ಆದರೆ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅದೊಂದು ಪ್ರಬುದ್ಧ ಪಾತ್ರ ಎಂದು ಹೇಳಿದ್ದರು.

    ಈ ಬೆನ್ನಲ್ಲೇ ತಮನ್ನಾ ಅವರು ಶಿವಣ್ಣಗೆ ಜೋಡಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ ಅಷ್ಟಕ್ಕೂ ಈ ವಿಚಾರ ನಿಜಾನಾ? ಅಥವಾ ಗಾಳಿಸುದ್ದಿ ನಾ? ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ. ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿರುವ ಪ್ರಕಾರ ಬಹುತೇಕ ತಮನ್ನಾ ಅವರೇ ಆಗಲಿದ್ದಾರೆ ಎನ್ನಲಾಗುತ್ತಿದೆ.

  • ಇದು ಭೈರತಿ ರಣಗಲ್ ಸಿನಿಮಾ ಟೀಮ್

    ಇದು ಭೈರತಿ ರಣಗಲ್ ಸಿನಿಮಾ ಟೀಮ್

    ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ (Geeta) ಶಿವರಾಜಕುಮಾರ್  ಅವರು ನಿರ್ಮಿಸುತ್ತಿರುವ, ನರ್ತನ್ (Narthan) ನಿರ್ದೇಶನದ, ಶಿವರಾಜಕುಮಾರ್ ((Shivaraj Kumar)) ನಾಯಕರಾಗಿ ನಟಿಸುತ್ತಿರುವ ‘ಭೈರತಿ ರಣಗಲ್’ (Bhairati Rangal) ಚಿತ್ರದ ಮುಹೂರ್ತ ಸಮಾರಂಭ ಗವಿಪುರದ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಮಫ್ತಿ ಚಿತ್ರದ ಶಿವರಾಜಕುಮಾರ್ ಅವರ ಭೈರತಿ ರಣಗಲ್ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್. ಮಫ್ತಿ ಚಿತ್ರದಲ್ಲಿ ಮಧ್ಯಾಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್ ಆಗಿದ್ದು ಹೇಗೆ ಎಂದು ತಿಳಿಯುತ್ತದೆ.  ಶಿವರಾಜಕುಮಾರ್ ಅವರು ಈ ಚಿತ್ರದ ನಾಯಕರಾಗಲು ಒಪ್ಪಿರುವುದು ಹಾಗೂ ಗೀತಾ ಶಿವರಾಜಕುಮಾರ್ ಅವರು ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇಂದು ಮುಹೂರ್ತ ನೆರವೇರಿದೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ನಿರ್ದೇಶಕ ನರ್ತನ್ ತಿಳಿಸಿದರು.

    ಮಫ್ತಿ ಚಿತ್ರದ ಭೈರತಿ ರಣಗಲ್ ನನಗೆ ಇಷ್ಟವಾದ ಪಾತ್ರ. ಈ ಚಿತ್ರವನ್ನು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿದ್ದೇವೆ.  ಚಿತ್ರದ ಪ್ರಾರಂಭಕ್ಕೆ ಸಮಯ ಈಗ ಕೂಡಿ ಬಂದಿದೆ. ಮಫ್ತಿ ಬಂದು ಆರು ವರ್ಷಗಳಾಗಿದೆ. ಈಗಲೂ ನಾನು ಹಾಗೆ ಇದ್ದೀನಿ. ಹಾಗಾಗಿ ಈ ಪಾತ್ರ ಮಾಡಲು ಅನುಕೂಲವಾಗುತ್ತದೆ. ಪ್ರೀಕ್ವೆಲ್ ಆಗಿರುವುದರಿಂದ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತೇನೆ. ನರ್ತನ್ ಕಥೆ ಚಿನ್ನಾಗಿ ಮಾಡಿಕೊಂಡಿದ್ದಾರೆ ಎಂದರು ನಾಯಕ ಶಿವರಾಜಕುಮಾರ್. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ಭೈರತಿ ರಣಗಲ್ ಚಿತ್ರವನ್ನು ನಮ್ಮ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಬೇಕೆಂದು ಮೊದಲೆ ನಿರ್ಧಾರವಾಗಿತ್ತು. ಈಗ ಚಿತ್ರ ಆರಂಭವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಗೀತಾ ಶಿವರಾಜಕುಮಾರ್. ನಿವೇದಿತಾ ಶಿವರಾಜಕುಮಾರ್,  ಕೆ.ಪಿ.ಶ್ರೀಕಾಂತ್, ಛಾಯಾಗ್ರಹಕ ನವೀನ್ ಕುಮಾರ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ‘ಭೈರತಿ ರಣಗಲ್’ಗೆ ಡೇಟು ರೇಟಿನ ನಾಯಕಿ ಬೇಕಂತೆ

    ‘ಭೈರತಿ ರಣಗಲ್’ಗೆ ಡೇಟು ರೇಟಿನ ನಾಯಕಿ ಬೇಕಂತೆ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹವಾ ಕ್ರಿಯೇಟ್ ಮಾಡಿದ ಚಿತ್ರ ಅಂದರೆ ‘ಮಫ್ತಿ’ (Mufti) ಸಿನಿಮಾ. ಶಿವಣ್ಣ- ನರ್ತನ್ (Narthan) ಕಾಂಬೋದಲ್ಲಿ ಈ ಚಿತ್ರ ಕಮಾಲ್ ಮಾಡಿತ್ತು. ಇದೀಗ ಇದೇ ಸಿನಿಮಾದ ಪ್ರೀಕ್ವೆಲ್ ಜೊತೆ ಮಫ್ತಿ ಜೋಡಿ ‘ಭೈರತಿ ರಣಗಲ್’ ಸಿನಿಮಾ ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. ಹಾಗಾದರೆ ಶಿವಣ್ಣಗೆ ಜೋಡಿಯಾಗೋ ಆ ನಾಯಕಿ ಯಾರು.? ಈ ಬಗ್ಗೆ ಸ್ವತಃ ಶಿವಣ್ಣ- ನಿರ್ದೇಶಕ ನರ್ತನ್ ಸ್ಪಷ್ಟನೆ ನೀಡಿದ್ದಾರೆ.

    ‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ (Shivarajkumar) ಅಬ್ಬರಿಸಿದ್ದರು. ‘ಮಫ್ತಿ’ ಪಾರ್ಟ್ 2 ಆಗಿರೋ ‘ಭೈರತಿ ರಣಗಲ್’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಸದ್ಯ ‘ಭೈರತಿ ರಣಗಲ್’ (Bhairathi Rangal) ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಬಂಡೆಮಹಾಕಾಳಿ ದೇವಸ್ಥಾನದಲ್ಲಿ (Bande Mahakali) ಶಿವಣ್ಣ ಸಿನಿಮಾದ ಅದ್ದೂರಿ ಮುಹೂರ್ತ ಕೂಡ ಮಾಡಲಾಯ್ತು. ಶಿವಣ್ಣಗೆ ನಾಯಕಿಯಾಗೋ (Heroine) ಆ ನಟಿ ಯಾರು.? ಕನ್ನಡದ ಯುವನಟಿಗೆ ಚಾನ್ಸ್ ಸಿಗುತ್ತಾ.? ಅಥವಾ ಪರಭಾಷಾ ನಟಿ ಶಿವರಾಜ್‌ಕುಮಾರ್ ಜೋಡಿಯಾಗುತ್ತಾರಾ? ಈ ವಿಚಾರಕ್ಕೆ ಇದೀಗ ಉತ್ತರ ಸಿಕ್ಕಿದೆ.

    ನಮಗೆ ಶಿವಣ್ಣ ಅವರ ಡೇಟ್ ತುಂಬಾ ಮುಖ್ಯ. ಆ ಡೇಟು ಪ್ಲಸ್ ರೇಟು ಮ್ಯಾಚ್ ಆದರೆ ಯಾರಾದರೂ ಓಕೆ ಅಂತಾ ನಗುತ್ತಾ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಶಿವಣ್ಣ ಮಾತನಾಡಿ, ನಾಯಕಿಯ ಪಾತ್ರಕ್ಕೆ ಯಾರು ಸೂಟ್ ಆಗುತ್ತಾರೋ ಅವರೇ ಹಾಕಿಕೊಳ್ತೀವಿ. ಅದಕ್ಕೆ ಕನ್ನಡ ನಟಿ ಪರಭಾಷಾ ನಟಿ ಎಂಬುದು ಇಲ್ಲ. ಆ ಪಾತ್ರಕ್ಕೆ ಹೊಂದುವಂತಹ ನಟಿಯನ್ನ ಆಯ್ಕೆ ಮಾಡ್ತೀವಿ ಅಂತಾ ತಿಳಿಸಿದ್ದಾರೆ. 100% ಕನ್ನಡದ ನಟಿಯನ್ನ ಹಾಕಬಾರದು ಅಂತಾ ಏನಿಲ್ಲ. ನಮ್ಮ ಭಾಷೆಯ ನಟಿ ಸೂಟ್ ಆಗುತ್ತಾರೆ ಅಂದರೆ ಚಿತ್ರಕ್ಕೆ ಹಾಕಿಕೊಳ್ಳಲು ಯಾವುದೇ ಬೇಸರವಿಲ್ಲ. ಆದರೆ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅದೊಂದು ಪ್ರಬುದ್ಧ ಪಾತ್ರ ಎಂದು ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ‘ಭೈರತಿ ರಣಗಲ್’ ಸಿನಿಮಾ ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ. ಬಳ್ಳಾರಿ ಸುತ್ತಮುತ್ತ ಶೂಟಿಂಗ್ ಮಾಡಲಿದ್ದಾರೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ‘ಭೈರತಿ ರಣಗಲ್’ ಚಿತ್ರ ನಿರ್ಮಾಣವಾಗಲಿದೆ.

  • ‘ಭೈರತಿ ರಣಗಲ್’ ಚಿತ್ರಕ್ಕೆ ಮುಹೂರ್ತ : ಕಥೆ ರಹಸ್ಯ ಬಿಚ್ಚಿಟ್ಟ ಶಿವಣ್ಣ

    ‘ಭೈರತಿ ರಣಗಲ್’ ಚಿತ್ರಕ್ಕೆ ಮುಹೂರ್ತ : ಕಥೆ ರಹಸ್ಯ ಬಿಚ್ಚಿಟ್ಟ ಶಿವಣ್ಣ

    ವೇದ ಸಿನಿಮಾ ನಂತರ ಶಿವರಾಜ್ ಕುಮಾರ್ ಬ್ಯಾನರ್ ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿತ್ತು. ‘ಭೈರತಿ ರಣಗಲ್’ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ನಿರ್ದೇಶಕ ನರ್ತನ್, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಮುಹೂರ್ತ (Muhurta) ಸಮಾರಂಭದಲ್ಲಿ ಭಾಗಿಯಾಗಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ‘ನರ್ತನ್ ನಿರ್ದೇಶನ ಅಂದರೆ, ಸೈಲೆನ್ಸ್ ಅಲ್ಲಿ ವೈಯಲೆನ್ಸ್ ಇರುತ್ತದೆ. ಇದು ಸಸ್ಪೆನ್ಸ್ ಅಂಶಗಳನ್ನು ಹೊಂದಿರುವಂತಹ ಸಿನಿಮಾ. ಶಿವಣ್ಣನಿಗೆ 61 ವರ್ಷ ವಯಸ್ಸಾದರೂ ಇನ್ನೂ ಯುದ್ಧಕ್ಕೆ ಕಳುಹಿಸ್ತಾನೆ ಇದ್ದಾರೆ. ಈ ಸಿನಿಮಾವನ್ನು ಗೀತಾ ಪಿಕ್ಚರ್ಸ್ ನಲ್ಲಿ ಮಾಡಬೇಕು ಎನ್ನುವುದು ಹಲವು ದಿನಗಳ ಹಿಂದಿನ ನಿರ್ಧಾರವಾಗಿತ್ತು. ಈಗ ಅದಕ್ಕೆ ಚಾಲನೆ ಸಿಕ್ಕಿದೆ’ ಎಂದರು. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ (Geeta Pictures) ನಿರ್ಮಾಣವಾಗುತ್ತಿರುವ 2ನೇ ಸಿನಿಮಾವಿದು.  ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಐದು ವರ್ಷಗಳ ನಂತರ ಮಫ್ತಿ (Mufti) ಸಿನಿಮಾದ ಭೈರತಿ ರಣಗಲ್ (Bhairati Rangal) ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು.

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

  • Exclusive: ರಾಮ್ ಚರಣ್ ಜೊತೆ ‘ಮಫ್ತಿ’ ನಿರ್ದೇಶಕನ ಸಿನಿಮಾ? ನರ್ತನ್ ಸ್ಪಷ್ಟನೆ

    Exclusive: ರಾಮ್ ಚರಣ್ ಜೊತೆ ‘ಮಫ್ತಿ’ ನಿರ್ದೇಶಕನ ಸಿನಿಮಾ? ನರ್ತನ್ ಸ್ಪಷ್ಟನೆ

    ನ್ನಡದ ಹೆಸರಾಂತ ನಿರ್ದೇಶಕ ನರ್ತನ್ ‘ಮಫ್ತಿ’ (Mufti) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸೈ ಎನಿಸಿಕೊಂಡರು. ಸದ್ಯ ‘ಭೈರತಿ ರಣಗಲ್’ (Bhairathi Rangal) ಸಿನಿಮಾಗೆ ತಯಾರಿ ಮಾಡ್ತಿರುವ ಈ ಸಂದರ್ಭದಲ್ಲಿ ರಾಮ್ ಚರಣ್ ಜೊತೆ ಸಿನಿಮಾ ಮಾಡುವ ಬಗ್ಗೆ ನರ್ತನ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    2017ರಲ್ಲಿ ‘ಮಫ್ತಿ’ (Mufti) ಸಿನಿಮಾಗೆ ಶಿವರಾಜ್‌ಕುಮಾರ್ (Shivarajkumar) ನಿರ್ದೇಶನ ಮಾಡುವ ಮೂಲಕ ಬೆಳಕಿಗೆ ಬಂದ ಪ್ರತಿಭೆ ನರ್ತನ್. ಮೊದಲ ಸಿನಿಮಾದಲ್ಲೇ ತಾನೆಂತಹ ನಿರ್ದೇಶಕ ಎಂಬುದನ್ನ ಸಾಬೀತುಪಡಿಸಿದ್ದರು. ಮಫ್ತಿ ಚಿತ್ರ ಗಲ್ಲಾಪೆಟ್ಟಿಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೆಟ್ ಮಾಡ್ತು. ಶಿವಣ್ಣ, ಶ್ರೀಮುರಳಿ ನಟನೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಿತ್ತೋ ಅದೇ ತರಹ ನರ್ತನ್ ಕಥೆ, ಡೈರೆಕ್ಷನ್‌ಗೆ ಕೂಡ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಇದನ್ನೂ ಓದಿ:ರಸ್ತೆ ಅಪಘಾತ : ಕಿರುತೆರೆ ಖ್ಯಾತ ನಟಿ ವೈಭವಿ ಉಪಾಧ್ಯಾಯ ದುರ್ಮರಣ

    ‘ಮಫ್ತಿ’ ಸಿನಿಮಾದ ಪ್ರೀಕ್ವೇಲ್ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ‘ಭೈರತಿ ರಣಗಲ್’ ಚಿತ್ರದ ಮೂಲಕ ಅಸಲಿ ಕಥೆಯನ್ನ ಬಿಚ್ಚಿಡಲು ನರ್ತನ್ ಸಿದ್ಧತೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡ ಹವಾ ಕ್ರಿಯೇಟ್ ಮಾಡಿದೆ. ‘ಭೈರತಿ ರಣಗಲ್’ ಸಿನಿಮಾ ಇದೇ ಮೇ 26ಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಜೂನ್ ಮೊದಲ ವಾರದಲ್ಲಿ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಹೀಗಿರುವಾಗ ರಾಮ್ ಚರಣ್ (Ramcharan) ಜೊತೆ ನರ್ತನ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಅಷ್ಟಕ್ಕೂ ಈ ವಿಚಾರ ನಿಜಾನಾ.? ಈ ಬಗ್ಗೆ ನಿರ್ದೇಶಕ ನರ್ತನ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    ನಟ ರಾಮ್ ಚರಣ್ ಅವರನ್ನ ಭೇಟಿಯಾಗಿ ಕಥೆ ಹೇಳಿರುವದು ನಿಜ, ಒಂದಿಷ್ಟು ಹಂತದ ಮಾತುಕತೆಯಾಗಿದೆ. ಆದರೆ ರಾಮ್ ಚರಣ್ ಜೊತೆ ಸಿನಿಮಾ ಮಾಡುವ ಬಗ್ಗೆ ಫೈನಲ್ ಆಗಿಲ್ಲ. ‘ಭೈರತಿ ರಣಗಲ್’ ಸಿನಿಮಾ ಮುಗಿಯುವವರೆಗೂ ಬೇರೆ ಪ್ರಾಜೆಕ್ಟ್ ಮಾಡೋದಕ್ಕೆ ಹೋಗಲ್ಲ. ಸದ್ಯ ನನ್ನ ಗಮನ ಏನೇ ಇದ್ದರೂ ಶಿವಣ್ಣ ಜೊತೆಗಿನ ಸಿನಿಮಾ ಅಂತಾ ನರ್ತನ್ (Narthan) ಸ್ಪಷ್ಟನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಮ್ ಚರಣ್ ಜೊತೆಗಿನ ಸಿನಿಮಾ ಅಂತಿಮ ಆಗಿದ್ದಲ್ಲಿ ಅಧಿಕೃತವಾಗಿ ತಿಳಿಸುವೆ ಎಂದು ಮಾತನಾಡಿದ್ದಾರೆ.

    ಶೃತಿ ನಾಗೇಶ್, ಪಬ್ಲಿಕ್‌ ಟಿವಿ ಡಿಜಿಟಲ್