Tag: narsingi

  • ಇಂಟರ್ವ್ಯೂ ನಲ್ಲಿ ಆಯ್ಕೆಯಾಗ್ಲಿಲ್ಲವೆಂದು ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ

    ಇಂಟರ್ವ್ಯೂ ನಲ್ಲಿ ಆಯ್ಕೆಯಾಗ್ಲಿಲ್ಲವೆಂದು ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ

     

    ಹೈದರಾಬಾದ್: ಇಂಟರ್ವ್ಯೂ ನಲ್ಲಿ ಆಯ್ಕೆಯಾಗದೆ ಸಂಸ್ಥೆಯಲ್ಲಿ ಕೆಲಸ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾದ ಮಹಿಳೆಯೊಬ್ಬರು ತನ್ನ ಅಪಾರ್ಟ್‍ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನರ್ಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಹಿಳೆ ಶಮ್ಶಾಬಾದ್‍ನಲ್ಲಿ ಇಂಟರ್ವ್ಯೂ ಗೆ ಹಾಜರಾಗಿದ್ದು, ಅದರಲ್ಲಿ ಆಯ್ಕೆಯಾಗಿಲ್ಲವೆಂದು ಖಿನ್ನತೆಗೊಳಗಾಗಿದ್ದರು. ಹೀಗಾಗಿ ತನ್ನ ಅಪಾರ್ಟ್‍ಮೆಂಟ್ ಗೆ ಹಿಂದಿರುಗಿ ಕಟ್ಟಡದ 18ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಸಾಂದರ್ಭಿಕ ಚಿತ್ರ

    ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರೀಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

    ಇದನ್ನೂ ಓದಿ: ಇಂಗ್ಲೀಷ್ ಪರೀಕ್ಷೆಗೆ ಓದಿ 8ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿನಿಯರು