Tag: Narottam Mishra

  • ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇತ್ತೇ? ಮಧ್ಯಪ್ರದೇಶ ಸಚಿವರಿಗೆ ಸ್ವರಾ ಭಾಸ್ಕರ್ ಪ್ರಶ್ನೆ

    ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇತ್ತೇ? ಮಧ್ಯಪ್ರದೇಶ ಸಚಿವರಿಗೆ ಸ್ವರಾ ಭಾಸ್ಕರ್ ಪ್ರಶ್ನೆ

    ಭೋಪಾಲ್: ಮಾನಸಿಕ ಅಸ್ವಸ್ಥರಾಗಿರೋ ಹಿರಿಯ ನಾಗರಿಕರೊಬ್ಬರನ್ನು ತನ್ನ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡನೊಬ್ಬ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಾಮಪುರದಲ್ಲಿ ನಡೆದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವೃದ್ಧನ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ವ್ಯಕ್ತಿ ಮುಸ್ಲಿಮನಾಗಿದ್ದರೆ, ಅವನ ಹತ್ಯೆಗೆ ನಿಮ್ಮ ಸಮ್ಮತಿ ಇತ್ತೇ? ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾರಿಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ನೀಮುಚ್ ಘಟನೆಯ ಕುರಿತು ನರೋತ್ತಮ್ ಮಿಶ್ರಾ ಅವರು ಪ್ರತಿಕ್ರಿಯಿಸಿ, ವೃದ್ಧನಿಗೆ ವಯಸ್ಸಾಗಿತ್ತು. ಮಾನಸಿಕ ಅಸ್ವಸ್ಥರಾಗಿದ್ದರು. ತಮ್ಮನ್ನು ತಾವು ಪರಿಚಯಿಸಿಕೊಳ್ಳುವಷ್ಟು ಶಕ್ತರಾಗಿರಲಿಲ್ಲ. ಅವರ ಕುಟುಂಬದವರೇ ಅವರ ಮಾನಸಿಕ ಸ್ಥಿತಿಯ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

    ಈಗಾಗಲೇ ಆರೋಪಿಯನ್ನು ಪೊಲೀಸರು ಗುರುತಿಸಿ ಅವನನ್ನು ಬಂಧಿಸಿದ್ದು, ಅವನ ವಿರುದ್ಧ ಐಪಿಸಿ ಸೆಕ್ಷನ್ 304 (ನರಹತ್ಯೆ), 302 (ಕೊಲೆಗೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಮೃತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಸ್ವರಾ ಅವರು, ಹಾಗಿದ್ದರೆ ಆತ ತನ್ನನ್ನು ತಾನು ಮುಸ್ಲಿಂ ಎಂದು ಪರಿಚಯಿಸಿಕೊಂಡಿದ್ದಿದ್ದರೆ, ಆತನನ್ನು ಹತ್ಯೆ ಮಾಡುವುದಕ್ಕೇ ನಿಮ್ಮ ಸಮ್ಮತಿ ಇತ್ತೇ? ಮಧ್ಯ ಪ್ರದೇಶದ ಗೃಹ ಸಚಿವರಿಂದ ಇದೆಂತಹ ಸಂದೇಶ ರವಾನೆಯಾಗಿದೆ? ಈ ಘಟನೆಯಲ್ಲಿ ಕಾನೂನನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್

    ಆರೋಪಿಯು, ಭವಾರ್‍ಲಾಲ್ ಜೈನ್ ಎಂಬ ವೃದ್ಧನಿಗೆ `ನೀನು ಮೊಹಮ್ಮದ್? ಎಂದು ಪ್ರಶ್ನಿಸಿ, ಆಧಾರ್ ಕಾರ್ಡ್ ತೋರಿಸಲು ಒತ್ತಾಯಿಸಿ ಹಲ್ಲೆ ನಡೆಸಿದ್ದ. ಈ ದೃಶ್ಯದ ವೀಡಿಯೋ ಸಿಸಿಟಿವಿವೊಂದರಲ್ಲಿ ಸೆರೆಯಾಗಿತ್ತು. ನಂತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  • ಕಪಾಳಕ್ಕೆ ಹೊಡೆದು ಮಾನಸಿಕ ಅಸ್ವಸ್ಥ ವೃದ್ಧನ ಹತ್ಯೆ – ಬಿಜೆಪಿ ಮುಖಂಡನಿಂದ ಕೃತ್ಯ

    ಕಪಾಳಕ್ಕೆ ಹೊಡೆದು ಮಾನಸಿಕ ಅಸ್ವಸ್ಥ ವೃದ್ಧನ ಹತ್ಯೆ – ಬಿಜೆಪಿ ಮುಖಂಡನಿಂದ ಕೃತ್ಯ

    ಭೂಪಾಲ್: ಮಾನಸಿಕ ಅಸ್ವಸ್ಥರಾಗಿರೋ ಹಿರಿಯ ನಾಗರಿಕರೊಬ್ಬರನ್ನು ತನ್ನ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಾನಸ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಿನೇಶ್ ಕುಶ್ವಾಹ (38) ಬಂಧಿತ ಆರೋಪಿ. ಕೊಲೆಯಾದ ಹಿರಿಯ ನಾಗರಿಕ ಭವಾರ್‌ಲಾಲ್ ಜೈನ್ (65) ರಟ್ಲಾಮ್ ಜಿಲ್ಲೆಯ ಸರಸಿ ಗ್ರಾಮದ ನಿವಾಸಿ. ಇವರು ಮೇ 16ರಂದು ಚಿತ್ತೋರ್‌ಗಢದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋದ ಮೇಲೆ ನಾಪತ್ತೆಯಾಗಿದ್ದರು. ಇವರ ಶವ ಗುರುವಾರ ಸಂಜೆ ನೀಮುಚ್ ಜಿಲ್ಲೆಯ ಮಾನಸ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಪುರ ರಸ್ತೆಯಲ್ಲಿ ಸಿಕ್ಕಿದೆ. ಇದನ್ನೂ ಓದಿ: ಇಂಟರ್‌ವ್ಯೂಗೆಂದು ಹೋದ ಯುವತಿ, ಟ್ಯಾಲಿಕ್ಲಾಸ್‌ಗೆ ಹೋಗ್ತೀನೆಂದಿದ್ದ ಯುವಕ – ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?

    CRIME

    ಆರೋಪಿಯು, ಭವಾರ್‌ಲಾಲ್ ಜೈನ್ ಅವರಿಗೆ `ನೀನು ಮೊಹಮ್ಮದ್ ಎಂದು ಹೆಸರಿಸಿ, ಗುರುತಿಗೆ ಆಧಾರ್ ಕಾರ್ಡ್ ತೋರಿಸಲು ಒತ್ತಾಯಿಸಿ ಪದೇ ಪದೇ ಕಪಾಳಮೋಕ್ಷ ಮಾಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿಮಾಚಲ ಉಪಸಭಾಧ್ಯಕ್ಷರಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಆರೋಪ

    ಶವ ಸಂಸ್ಕಾರದ ಬಳಿಕ ಕುಟುಂಬ ಸದಸ್ಯರಿಗೆ ಜೈನ್ ಅವರ ಮೇಲೆ ಉದ್ದೇಶಪೂರ್ವಕ ಹಲ್ಲೆ ನಡೆದಿರುವ ದೃಶ್ಯದ ವೀಡಿಯೋ ಲಭಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಹುಶಃ ಈ ವೀಡಿಯೋ ಮೇ 19ರಂದು ಚಿತ್ರೀಕರಿಸಲಾಗಿದೆ. ತನಿಖೆ ನಡೆಸಿದಾಗ ಆರೋಪಿಯ ಗುರುತು ಸಿಕ್ಕಿ, ಬಂಧಿಸಲಾಗಿದೆ ಎಂದು ಮಾನಸ ಪೊಲೀಸ್ ಠಾಣೆಯ ಅಧಿಕಾರಿ ಕೆ.ಎಲ್.ಡಾಂಗಿ ತಿಳಿಸಿದ್ದಾರೆ.

    KILLING CRIME

    ಆರೋಪಿ ಬಿಜೆಪಿಯ ಕಾರ್ಯಕರ್ತ ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಕಿಡಿಕಾರಿದ್ದಾರೆ.

  • ಕಾಶ್ಮೀರ್‌ ಫೈಲ್ಸ್‌ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ IAS ಅಧಿಕಾರಿ ನಿಯಾಜ್‌ ಖಾನ್‌ಗೆ ನೋಟಿಸ್‌: MP ಗೃಹ ಸಚಿವ

    ಕಾಶ್ಮೀರ್‌ ಫೈಲ್ಸ್‌ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ IAS ಅಧಿಕಾರಿ ನಿಯಾಜ್‌ ಖಾನ್‌ಗೆ ನೋಟಿಸ್‌: MP ಗೃಹ ಸಚಿವ

    ಭೋಪಾಲ್: ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಐಎಎಸ್‌ ಅಧಿಕಾರಿಗೆ ಮಧ್ಯಪ್ರದೇಶ ಸರ್ಕಾರ ನೋಟಿಸ್‌ ಜಾರಿ ಮಾಡಲಿದೆ ಎಂದು ಗೃಹ ಸಚಿವ ನರೋತ್ತಮ್‌ ಮಿಶ್ರಾ ತಿಳಿಸಿದ್ದಾರೆ.

    ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿರುವ ಐಎಎಸ್‌ ಅಧಿಕಾರಿ ನಿಯಾಜ್‌ ಖಾನ್‌ ಅವರು ಈಚೆಗೆ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ಟ್ವೀಟ್‌ ಮಾಡಿದ್ದರು. ದಿ ಕಾಶ್ಮೀರ್‌ ಫೈಲ್ಸ್‌ನಂತೆಯೇ, ದೇಶದ ಅನೇಕ ರಾಜ್ಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಮರ ಹತ್ಯೆಯಾಗಿರುವ ಕುರಿತು ಸಿನಿಮಾ ನಿರ್ಮಿಸಬೇಕು. ಮುಸ್ಲಿಂ ಸಮುದಾಯದವರು ಕೀಟಗಳಲ್ಲ. ಅವರು ಸಹ ಈ ದೇಶದ ನಾಗರಿಕರು ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿ

    ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮಿಶ್ರಾ ಅವರು, ನಾನು ಖಾನ್ ಅವರ ಟ್ವೀಟ್‌ಗಳನ್ನು ನೋಡಿದ್ದೇನೆ. ಇದು ಗಂಭೀರ ವಿಷಯವಾಗಿದೆ. ಅವರು ಸರ್ಕಾರಿ ಅಧಿಕಾರಿಗಳಿಗೆ ನಿಗದಿಪಡಿಸಿದ ಮಿತಿಯನ್ನು ದಾಟಿ ನಿಯಮ ಉಲ್ಲಂಘಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಅವರ ಉತ್ತರವನ್ನು ಕೇಳಲಿದೆ ಎಂದು ತಿಳಿಸಿದ್ದಾರೆ.

    ಅಧಿಕಾರಿ ಟ್ವೀಟ್‌ನಲ್ಲೇನಿತ್ತು?
    ಕಾಶ್ಮೀರ್ ಫೈಲ್ಸ್ ಬ್ರಾಹ್ಮಣರ ನೋವನ್ನು ತೋರಿಸುತ್ತದೆ. ಕಾಶ್ಮೀರದಲ್ಲಿ ಎಲ್ಲ ಗೌರವಗಳೊಂದಿಗೆ ಸುರಕ್ಷಿತವಾಗಿ ಬದುಕಲು ಅವರಿಗೆ ಅವಕಾಶ ನೀಡಬೇಕು. ಹಲವಾರು ರಾಜ್ಯಗಳಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಹತ್ಯೆಗಳನ್ನು ತೋರಿಸಲು ನಿರ್ಮಾಪಕರು ಸಿನಿಮಾವೊಂದನ್ನು ಮಾಡಬೇಕು. ಚಿತ್ರವು 150 ಕೋಟಿ ರೂಪಾಯಿಗಳ ಆದಾಯದ ಗಡಿಯನ್ನು ಮುಟ್ಟಿದ್ದಕ್ಕಾಗಿ ಚಿತ್ರದ ನಿರ್ಮಾಪಕರನ್ನು ಅಭಿನಂದಿಸಿದ್ದರು. ಇದನ್ನೂ ಓದಿ : ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ಜನರು ಕಾಶ್ಮೀರಿ ಬ್ರಾಹ್ಮಣರ ಭಾವನೆಗಳಿಗೆ ಹೆಚ್ಚಿನ ಗೌರವವನ್ನು ನೀಡಿರುವುದರಿಂದ ಚಲನಚಿತ್ರ ನಿರ್ಮಾಪಕರು ಎಲ್ಲಾಗಳಿಕೆಯನ್ನು ಬ್ರಾಹ್ಮಣ ಮಕ್ಕಳ ಶಿಕ್ಷಣಕ್ಕೆ ವರ್ಗಾಯಿಸಬೇಕು. ಕಾಶ್ಮೀರದಲ್ಲಿ ಅವರಿಗೆ ಮನೆಗಳನ್ನು ನಿರ್ಮಿಸಬೇಕು ಎಂದು ಟ್ವೀಟ್‌ ಮಾಡಿದ್ದರು.

  • ಮಧ್ಯಪ್ರದೇಶದಲ್ಲಿ ಹಿಜಬ್‌ ವಿವಾದ ಇಲ್ಲ, ನಿಷೇಧ ಪ್ರಸ್ತಾಪವೂ ಇಲ್ಲ: ಗೃಹ ಸಚಿವ

    ಮಧ್ಯಪ್ರದೇಶದಲ್ಲಿ ಹಿಜಬ್‌ ವಿವಾದ ಇಲ್ಲ, ನಿಷೇಧ ಪ್ರಸ್ತಾಪವೂ ಇಲ್ಲ: ಗೃಹ ಸಚಿವ

    ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್‌ ಧರಿಸುವುದನ್ನು ನಿಷೇಧಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಬುಧವಾರ ತಿಳಿಸಿದೆ.

    ಮಧ್ಯಪ್ರದೇಶದಲ್ಲಿ ಹಿಜಬ್‌ ಕುರಿತು ಯಾವುದೇ ವಿವಾದ ಇಲ್ಲ. ಹಿಜಬ್‌ ನಿಷೇಧಿಸುವ ಸಂಬಂಧ ಯಾವುದೇ ಪ್ರಸ್ತಾವನೆ ಪರಿಗಣಿಸುತ್ತಿಲ್ಲ. ಈ ಸಂಬಂಧ ಯಾವುದೇ ಗೊಂದಲ ಬೇಡ ಎಂದು ಗೃಹ ಸಚಿವ ನರೋತ್ತಮ್‌ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಪರಿಸ್ಥಿತಿ ಬಿಗಡಾಯಿಸಲು ಕಾಂಗ್ರೆಸ್ ನಾಯಕರು ಕಾರಣ: ಬಿಸಿ ನಾಗೇಶ್

    ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮರ್‌ ಅವರು ಹಿಜಬ್‌ ವಿರೋಧಿ ಪ್ರತಿಭಟನಾಕಾರರನ್ನು ಬೆಂಬಲಿಸಿ, ಹಿಜಬ್‌ ನಿಷೇಧ ಕುರಿತು ನಿನ್ನೆ ಮಾತನಾಡಿದ್ದರು. ಆದರೆ ಇಂದು ಈ ಸಂಬಂಧ ಯಾವುದೇ ಪ್ರಸ್ತಾಪ ಪರಿಗಣಿಸುವುದಿಲ್ಲ ಎಂದು ಸಚಿವ ಮಿಶ್ರಾ ಅವರು ಸ್ಪಷ್ಟಪಡಿಸಿದ್ದಾರೆ.

    ನಂತರ ಪ್ರತಿಕ್ರಿಯಿಸಿರುವ ಇಂದರ್‌ ಸಿಂಗ್‌, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೊಸ ಸಮವಸ್ತ್ರ ನಿಯಮವನ್ನು ನಾವು ಅಳವಡಿಸುತ್ತಿಲ್ಲ. ಈಗಿರುವ ಸಮವಸ್ತ್ರ ನಿಯಮವೇ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೋಪಿ ಧರಿಸಿ ಸಂಸತ್ತಿಗೆ ಹೋಗಬಹುದು ಎಂದರೆ ಹಿಜಬ್ ಯಾಕೆ ಧರಿಸಬಾರದು: ಓವೈಸಿ

    ಉಡುಪಿಯ ಕಾಲೇಜೊಂದರಲ್ಲಿ ಹಿಜಬ್‌-ಕೇಸರ ಶಾಲು ವಿವಾದ ಹುಟ್ಟುಕೊಂಡಿದ್ದು, ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಹಿಜಬ್‌-ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ಈ ಸಂಬಂಧ ಪರ-ವಿರೋಧದ ಚರ್ಚೆಯಾಗುತ್ತಿದೆ. ವಿವಾದ ಸದ್ಯ ಹೈಕೋರ್ಟ್‌ ಅಂಗಳದಲ್ಲಿದ್ದು, ಇನ್ನಷ್ಟೇ ತೀರ್ಪು ಹೊರಬೀಳಬೇಕಾಗಿದೆ.

  • ರಾಷ್ಟ್ರಧ್ವಜಗಳನ್ನು ಮುದ್ರಿಸಿದ ಉತ್ಪನ್ನಗಳ ಮಾರಾಟ – ಅಮೆಜಾನ್ ವಿರುದ್ಧ ಎಫ್‍ಐಆರ್

    ರಾಷ್ಟ್ರಧ್ವಜಗಳನ್ನು ಮುದ್ರಿಸಿದ ಉತ್ಪನ್ನಗಳ ಮಾರಾಟ – ಅಮೆಜಾನ್ ವಿರುದ್ಧ ಎಫ್‍ಐಆರ್

    ಭೋಪಾಲ್: ಮಧ್ಯಪ್ರದೇಶ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅಮೆಜಾನ್ ವಿರುದ್ಧ ಭಾರತೀಯ ಧ್ವಜವಿರುವ ಉತ್ಪನ್ನಗಳನ್ನು ಒದಗಿಸಿರುವುದಾಗಿ ಆರೋಪಿಸಿ ಎಫ್‍ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

    ರಾಷ್ಟ್ರಧ್ವಜಗಳನ್ನು ಮುದ್ರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿರುವ ಆರೋಪದ ಮೇಲೆ ಇ-ಕಾಮರ್ಸ್ ಪ್ಲಾಟ್‍ಫಾರ್ಮ್ ಅಮೆಜಾನ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಸರ್ಕಾರ ಪೊಲೀಸರಿಗೆ ಸೂಚಿಸಿದೆ. ಇದನ್ನೂ ಓದಿ: ಕಿಕ್‌ ಸ್ಟಾರ್ಟ್‌ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ

    ಅಮೆಜಾನ್ ಮಾರಾಟ ಮಾಡುವ ಉತ್ಪನ್ನಗಳ ಮೇಲೆ ರಾಷ್ಟ್ರಧ್ವಜವನ್ನು ಮುದ್ರಿಸಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಅದರಲ್ಲೂ ಶೂಗಳ ಮೇಲೆ ಮುದ್ರಿಸಿರುವುದು ಸಹಿಸಲಸಾಧ್ಯ. ಹೀಗಾಗಿ ಅಮೆಜಾನ್ ಅಧಿಕಾರಿಗಳು ಹಾಗೂ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸಲು ನಾನು ಜಿಡಿಪಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ

  • ಮಧುಬನ್ ಹಾಡು ತೆಗೆದು 3 ದಿನದಲ್ಲಿ ಕ್ಷಮೆ ಕೇಳಿ – ಮಧ್ಯಪ್ರದೇಶ ಸಚಿವ ಎಚ್ಚರಿಕೆ

    ಮಧುಬನ್ ಹಾಡು ತೆಗೆದು 3 ದಿನದಲ್ಲಿ ಕ್ಷಮೆ ಕೇಳಿ – ಮಧ್ಯಪ್ರದೇಶ ಸಚಿವ ಎಚ್ಚರಿಕೆ

    ಭೋಪಾಲ್: ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಬಾಲಿವುಡ್ ನಟಿ ಸನ್ನಿ ಲಿಯೋನ್, ಗಾಯಕರಾದ ಶರೀಬ ಮತ್ತು ತೋಶಿ ಅವರಿಗೆ, ‘ಮಧುಬನ್ ಮೇ ರಾಧಿಕಾ ಜೈಸೆ ಜಂಗಲ್ ಮೆ ನಾಚೇ ಮೋರ್’ ಹಾಡನ್ನು ತೆಗೆದು 3 ದಿನದಲ್ಲಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಾಡು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಕೆಲವರು ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಹಿಂದೂಗಳು ಮಾ ರಾಧೆಯನ್ನು ಪೂಜಿಸುತ್ತಾರೆ. ಇಂತಹ ಹಾಡುಗಳಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ಈ ಹಾಡಿನ ಆರಂಭಿಕ ಕೆಲವು ಸಾಲುಗಳು 1960 ರ ‘ಕೊಹಿನೂರ್’ ಚಿತ್ರದ ಸಾಂಪ್ರದಾಯಿಕ ಮಧುಬನ್ ಮೇ ರಾಧಿಕಾ ನಾಚಿ ರೇ ಹಾಡಿನೊಂದಿಗೆ ಹೊಂದಾಣಿಕೆ ಆಗುತ್ತದೆ. ಈ ಹಾಡನ್ನು ಮೊಹಮ್ಮದ್ ರಫಿ ಅವರು ಹಾಡಿದ್ದು ಈ ಹಾಡಿನ ಮುಖ್ಯ ಭೂಮಿಕೆಯ ಪಾತ್ರದಲ್ಲಿ ದಿವಂಗತ ದಿಲೀಪ್ ಕುಮಾರ್ ಕಾಣಿಸಿಕೊಂಡಿದ್ದರು.

    ಇದೇ ಶನಿವಾರದಂದು ಮಥುರಾದಲ್ಲಿ ಹಿಂದೂ ಅರ್ಚಕರು ಸನ್ನಿ ಲಿಯೋನ್ ಅವರ ಈ ಆಲ್ಬಂ ಹಾಡನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದರು. ಈ ಹಾಡಿನಲ್ಲಿ ಅಶ್ಲೀಲ ನೃತ್ಯ ಮಾಡುವ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

    ಈ ಹಿಂದೆ ಮಿಶ್ರಾ ಅವರು ಅಕ್ಟೋಬರ್‍ನಲ್ಲಿ, ಮಂಗಳಸೂತ್ರದ ‘ಆಕ್ಷೇಪಾರ್ಹ ಮತ್ತು ಅಶ್ಲೀಲ’ ಚಿತ್ರಣವಿರುವ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಫ್ಯಾಷನ್ ಮತ್ತು ಆಭರಣ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರಿಗೆ 24 ಗಂಟೆಗಳ ಕಾಲಾವಧಿ ನೀಡಿದ್ದು, ಇಲ್ಲದಿದ್ದರೆ ಶಾಸನಬದ್ಧ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಬೇಕಿದ್ರೆ ರಾಹುಲ್‌ ಗಾಂಧಿಯನ್ನು ಕಾಮಿಡಿ ಶೋಗೆ ಆಹ್ವಾನಿಸಿ: ಮಧ್ಯಪ್ರದೇಶ ಸಚಿವ ಲೇವಡಿ

    ಬೇಕಿದ್ರೆ ರಾಹುಲ್‌ ಗಾಂಧಿಯನ್ನು ಕಾಮಿಡಿ ಶೋಗೆ ಆಹ್ವಾನಿಸಿ: ಮಧ್ಯಪ್ರದೇಶ ಸಚಿವ ಲೇವಡಿ

    ಭೋಪಾಲ್: ಕಾಮಿಡಿಯನ್‌ ಕುಣಾಲ್‌ ಕಮ್ರಾ ಮತ್ತು ಮುನವ್ವರ್‌ ಫಾರೂಕಿ ಅವರನ್ನು ಸ್ಟ್ಯಾಂಡ್‌ ಅಪ್‌ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ವಾಗ್ದಾಳಿ ನಡೆದಿದ್ದಾರೆ.

    ದಿಗ್ವಿಜಯ್‌ ಸಿಂಗ್‌ ಅವರು ಬೇಕಿದ್ದರೆ ರಾಹುಲ್‌ ಗಾಂಧಿ ಅವರನ್ನು ಕಾಮಿಡಿ ಶೋಗೆ ಆಹ್ವಾನಿಸಲಿ ಎಂದು ಸಚಿವ ನರೋತ್ತಮ್‌ ಮಿಶ್ರಾ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ಕೆಲವರು ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ ಧರ್ಮದ ದೇವರುಗಳನ್ನು ಟೀಕಿಸಲು ಹೊರಟಿದ್ದಾರೆ. ಅಂತಹವರನ್ನು ಜೈಲಿಗೆ ಹಾಕುವುದು ಖಂಡಿತ. ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

    ಕುನಾಲ್‌ ಮತ್ತು ಮುನವ್ವರ್‌ ಅವರಿಂದ ಸ್ಟ್ಯಾಂಡ್‌ ಅಪ್‌ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಟ್ವೀಟ್‌ ಮಾಡಿ ತಿಳಿಸಿದ್ದರು. ಇದಕ್ಕೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್

    ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಸಚಿವ ಮಿಶ್ರಾ ಆಗ್ರಹಿಸಿದ್ದರು. ಪೊಲೀಸರು ನೋಟಿಸ್‌ ನೀಡಿದ ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದಕ್ಕೆ ಕಾಂಗ್ರೆಸ್‌ ಹಾಗೂ ಕಾಮಿಡಿಯನ್‌ಗಳು ವಿರೋಧಿಸಿದ್ದರು.

  • ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ಮುಂಬೈ: ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ ಎಂದು ಹೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಹಾಸ್ಯನಟ ವೀರ್ ದಾಸ್ ಅವರಿಗೆ ರಾಜ್ಯದಲ್ಲಿ ಯಾವುದೇ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದಿಲ್ಲ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

    vir das

    ಅಮೇರಿಕಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೀರ್ ದಾಸ್ ಅವರು ಆ ವೀಡಿಯೋವನ್ನು ತಮ್ಮ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದರು. ಮಹಿಳೆಯನ್ನು ಗೌರವಿಸುವ, ರಾತ್ರಿಯಲ್ಲಿ ಮಹಿಳೆ ಮೇಲೆ ಅತ್ತಾಚಾರ ಮಾಡುವ ದೇಶದಿಂದ ನಾನು ಬಂದಿದ್ದೇನೆ. ಅಲ್ಲಿ ಮಾಸ್ಕ್ ಹಾಕಿಕೊಂಡು ಮಕ್ಕಳು ಕೈ ಮುಗುಯುವಾಗ, ನಾಯಕರು ಮಾಸ್ಕ್ ಇಲ್ಲದೇ ಅಪ್ಪಿಕೊಳ್ಳುತ್ತಾರೆ. ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರದಿಂದ ಬಂದಿದ್ದೇನೆ. 75 ವರ್ಷದ ಮುದುಕರಿಂದ 150 ವರ್ಷದ ಹಳೆಯದಾದ ಐಡಿಯಾಗಳನ್ನು ಕೇಳಲಾಗುತ್ತದೆ ಎಂದು ವೀರ್ ದಾಸ್ ವೀಡಿಯೋದಲ್ಲಿ ಹೇಳಿದ್ದರು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ವೀರ್ ದಾಸ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಈ ಬಗ್ಗೆ ವೀರ್ ದಾಸ್ ಅವರು, ಭಾರತ ದೇಶವನ್ನು ಅವಮಾನಗೊಳಿಸಬೇಕೆಂಬ ಉದ್ದೇಶವನ್ನು ನಾನು ಹೊಂದಿಲ್ಲ. ವಿಭಿನ್ನವಾದಂತಹ ಕೆಲಸಗಳನ್ನು ಮಾಡುವ ಎರಡು ಪ್ರತ್ಯೇಕ ಭಾರತದ ದ್ವಂದ್ವತೆಯನ್ನು ಅಲ್ಲಿ ವಿವರಿಸಲಾಗಿದೆ. ಯಾವುದೇ ದೇಶದಲ್ಲಿಯೂ ಬೆಳಕು ಮತ್ತು ಕತ್ತಲೆ, ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಅದೇನೂ ಗುಟ್ಟಲ್ಲ. ನಾವು ಶ್ರೇಷ್ಠರು ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಮನವಿ ಮಾಡಿದ್ದರು. ನಮ್ಮನ್ನು ಶ್ರೇಷ್ಠರು ಎಂದು ಹೇಳುವುದರ ಮೇಲೆ ಕೇಂದ್ರೀಕರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನಾವೆಲ್ಲರೂ ಪ್ರೀತಿಸುವ, ನಂಬುವ ಮತ್ತು ಹೆಮ್ಮೆಪಡುವ ದೇಶಕ್ಕೆ ದೇಶಭಕ್ತಿಯ ಚಪ್ಪಾಳೆ ಹೊಡೆಯುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು. ಇದಕ್ಕೆ ಟಿಎಂಸಿ ಸದಸ್ಯರಾದ ಮಹುವಾ ಮೊಯಿತ್ರಾ ಮತ್ತು ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಅವರು ಬೆಂಬಲ ನೀಡಿದ್ದರು. ಇದನ್ನೂ ಓದಿ:  ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

    ಸದ್ಯ ಈ ಕುರಿತಂತೆ ನರೋತ್ತಮ್ ಮಿಶ್ರಾ ಅವರು, “ಅಂತಹ ಹಾಸ್ಯಗಾರರಿಗೆ ರಾಜ್ಯದಲ್ಲಿ ಹಾಸ್ಯ ಪ್ರದರ್ಶನ ನೀಡಲು ನಾವು ಅನುಮತಿ ನೀಡುವುದಿಲ್ಲ. ಅವರು ಕ್ಷಮೆಯಾಚಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ. ಇದೇ ಭಾರತವನ್ನು “ಅವಮಾನ” ಮಾಡಲು ಪ್ರಯತ್ನಿಸುವ ಕೆಲವು ಹಾಸ್ಯಗಾರರಿದ್ದಾರೆ ಮತ್ತು ಅವರಿಗೆ ಕಪಿಲ್ ಸಿಬಲ್ ಮತ್ತು ಇತರ ಕಾಂಗ್ರೆಸ್ ಜನರಂತಹ ಕೆಲವು ಬೆಂಬಲಿಗರಿದ್ದಾರೆ ಎಂದು ಕಿಡಿಕಾರಿದರು.

  • ನೆರೆ ವೀಕ್ಷಣೆಗೆ ತೆರಳಿದ ಗೃಹ ಸಚಿವ ಪ್ರವಾಹದಲ್ಲಿ ಸಿಲುಕಿ ಪರದಾಟ- ಏರ್‌ಲಿಫ್ಟ್‌ನಿಂದ ರಕ್ಷಣೆ

    ನೆರೆ ವೀಕ್ಷಣೆಗೆ ತೆರಳಿದ ಗೃಹ ಸಚಿವ ಪ್ರವಾಹದಲ್ಲಿ ಸಿಲುಕಿ ಪರದಾಟ- ಏರ್‌ಲಿಫ್ಟ್‌ನಿಂದ ರಕ್ಷಣೆ

    ಭೋಪಾಲ್: ಪ್ರವಾಹದಲ್ಲಿ ಸಿಲುಕಿದ್ದ ಮಧ್ಯಪ್ರದೇಶದ ಗೃಹ ಸಚಿವ ನಾರೋತ್ತಮ್ ಮಿಶ್ರಾ ಅವರನ್ನು ಭಾರತೀಯ ವಾಯು ಸೇನೆಯವರು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್‌ ಮಾಡಿ ರಕ್ಷಿಸಿದ್ದಾರೆ.

    ಮಧ್ಯ ಪ್ರದೇಶದ ದಟಿಯಾ ಜಿಲ್ಲೆಯ ಕೊಟ್ರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರವಾಹ ವೀಕ್ಷಣೆಗೆಂದು ಸಚಿವ ಮಿಶ್ರಾ ಅವರು ಎಸ್‍ಡಿಆರ್‍ಎಫ್ ನ ಮೋಟರ್ ಬೋಟ್‍ನಲ್ಲಿ ತೆರಳಿದ್ದರು. ಈ ವೇಳೆ ಬೋಟ್ ಬೃಹತ್ ಮರದಲ್ಲಿ ಸಿಲುಕಿದೆ. ಬಳಿಕ ಸಚಿವರು ಎಸ್‍ಡಿಆರ್‍ಎಫ್ ರಕ್ಷಣಾ ತಂಡದ ನಾಲ್ವರು ಮಹಿಳೆಯರೂ ಸೇರಿ 9 ಮಂದಿ ಜೊತೆ ಪಂಚಾಯಿತಿ ಕಟ್ಟಡಕ್ಕೆ ತೆರಳಿದ್ದಾರೆ.

    ಹೆಲಿಕಾಪ್ಟರ್ ಮೂಲಕ ಮೊದಲು ಪಂಚಾಯಿತಿ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದ್ದು, ಬಳಿಕ ಮಿಶ್ರಾ ಅವರನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ದಟಿಯಾದಲ್ಲಿರುವ ಅವರ ಮನೆಗೆ ತಲುಪಿಸಲಾಗಿದೆ. ಈ ಮೂಲಕ ನೆರೆ ವೀಕ್ಷಣೆಗೆ ತೆರಳಿದ ಸಚಿವರೇ ಪ್ರವಾಹದಲ್ಲಿ ಸಿಲುಕಿ ಪರದಾಡಿರುವ ಘಟನೆ ನಡೆದಿದೆ.