Tag: Narmada Dam

  • 3 ದಶಕಗಳ ಕಾಲ ನರ್ಮದಾ ಅಣೆಕಟ್ಟು ಯೋಜನೆ ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಯಾತ್ರೆ ಮಾಡ್ತಿದ್ದೀರಾ: ರಾಗಾ ವಿರುದ್ಧ ಮೋದಿ ಕಿಡಿ

    3 ದಶಕಗಳ ಕಾಲ ನರ್ಮದಾ ಅಣೆಕಟ್ಟು ಯೋಜನೆ ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಯಾತ್ರೆ ಮಾಡ್ತಿದ್ದೀರಾ: ರಾಗಾ ವಿರುದ್ಧ ಮೋದಿ ಕಿಡಿ

    ಗಾಂಧಿನಗರ: ನರ್ಮದಾ ಅಣೆಕಟ್ಟು ಯೋಜನೆಯನ್ನು (Narmada dam project) 3 ದಶಕಗಳವರೆಗೆ ಸ್ಥಗಿತಗೊಳಸಿದ ಮಹಿಳೆಯೊಂದಿಗೆ ನೀವು ಯಾತ್ರೆಯನ್ನು ಮಾಡುತ್ತಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ನರ್ಮದಾ ಬಚಾವೋ ಆಂದೊಲನದ (Narmada Bachao Andolan) ಕಾರ್ಯಕರ್ತೆ ಮೇಧಾ ಪಾಟ್ಕರ್ (Medha Patkar) ಅವರೊಂದಿಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕಿಡಿಕಾರಿದ್ದಾರೆ.

    ಗುಜರಾತ್‌ನ (Gujarat) ರಾಜ್‌ಕೋಟ್ ಜಿಲ್ಲೆಯ ಧೋರಾಜಿ ಪಟ್ಟಣದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ವಿಳಂಬವಾಯಿತು. ಏಕೆಂದರೆ ಅನೇಕರು ಅದನ್ನು ಸ್ಥಗಿತಗೊಳಿಸಲು ಯತ್ನಿಸಿದರು ಎಂದು ಹೇಳಿದರು.

    ಬರಪೀಡಿತ ಪ್ರದೇಶವಾದ ಕಚ್ ಹಾಗೂ ಕಥಿಯವಾಡ (ಸೌರಾಷ್ಟ್ರ ಪ್ರದೇಶ)ದ ದಾಹ ನೀಗಿಸಲು ನರ್ಮದಾ ಯೋಜನೆ ಒಂದೇ ಪರಿಹಾರವಾಗಿದೆ. ನರ್ಮದಾ ವಿರೋಧಿ ಹೋರಾಟಗಾರ್ತಿ ಮಹಿಳೆಯೊಂದಿಗೆ ಕಾಂಗ್ರೆಸ್ ಮುಖಂಡರೊಬ್ಬರು ಹೇಗೆ ಪಾದಯಾತ್ರೆ ನಡೆಸಲು ಸಾಧ್ಯ? ಇವರು ಕಾನೂನು ಅಡೆತಡೆಗಳನ್ನು ಸೃಷ್ಟಿಸಿ 3 ದಶಕಗಳಿಂದ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಯಿ, ಮಗಳ ವ್ಯತ್ಯಾಸ ಗೊತ್ತಿಲ್ಲದವರು ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರೆ: ಭೀಮಾಶಂಕರ್

    ಕಾಂಗ್ರೆಸ್ ನಾಯಕರು ನಿಮ್ಮ ಬಳಿ ಮತ ಕೇಳಲು ಬಂದಾಗ ನರ್ಮದಾ ಯೋಜನೆಯನ್ನು ವಿರೋಧಿಸಿದ ಮಹಿಳೆಯೊಂದಿಗೆ ಪಾದಯಾತ್ರೆ ಮಾಡಿ ಯಾವ ನೈತಿಕತೆಯ ಆಧಾರದ ಮೇಲೆ ಮತ ಕೇಳುತ್ತಿದ್ದೀರಿ ಎಂದು ಅವರ ಬಳಿ ಪ್ರಶ್ನೆ ಮಾಡಿ ಎಂದು ಗುಜರಾತ್ ಜನರೊಂದಿಗೆ ಮೋದಿ ಕೇಳಿಕೊಂಡರು.

    ಗುಜರಾತ್‌ನ ಬಿಜೆಪಿ ಸರ್ಕಾರ ಚೆಕ್‌ಡ್ಯಾಮ್‌ಗಳ ನಿರ್ಮಾಣ, ಹೊಸ ಬಾವಿಗಳು ಮತ್ತು ಕೆರೆಗಳನ್ನು ಕೊರೆಸುವುದು ಮತ್ತು ಪೈಪ್‌ಲೈನ್‌ಗಳ ಮೂಲಕ ನೀರು ಒದಗಿಸುವಂತಹ ವಿವಿಧ ಯೋಜನೆಗಳ ಮೂಲಕ ನೀರಿನ ಕೊರತೆಯನ್ನು ಪರಿಹರಿಸಲು 20 ವರ್ಷಗಳ ಕಾಲ ಶ್ರಮಿಸಿದೆ. ಇದೀಗ ಇಡೀ ಕಚ್ ಹಾಗೂ ಕಥಿಯವಾಡ ಪ್ರದೇಶ ಈ ಪೈಪ್‌ಲೈನ್‌ಗಳ ಜಾಲದ ಮೂಲಕ ನೀರನ್ನು ಪಡೆಯುತ್ತಿವೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ತರುವಲ್ಲಿ ನಾವು ಕೆಲಸ ಮಾಡುತ್ತೇವೆ. ಅಭಿವೃದ್ಧಿಗೆ ನೀರು ಮತ್ತು ವಿದ್ಯುತ್ ಅಗತ್ಯ ಎಂಬುದು ನಮಗೆ ತಿಳಿದಿದೆ ಎಂದರು.

    ಶನಿವಾರ ನರ್ಮದಾ ಬಚಾವೋ ಆಂದೋಲನದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಯಿಂದ 7 ಬಂಡಾಯ ಶಾಸಕರು ಅಮಾನತು

    Live Tv
    [brid partner=56869869 player=32851 video=960834 autoplay=true]

  • ವಿಶ್ವಬ್ಯಾಂಕ್ ಸಹಕಾರ ನೀಡದೇ ಇದ್ರೂ, ಗುಜರಾತ್ ದೇವಾಲಯಗಳ ಸಹಕಾರದಿಂದ ಯೋಜನೆ ಪೂರ್ಣಗೊಳಿಸಿದ್ದೇವೆ: ಮೋದಿ

    ವಿಶ್ವಬ್ಯಾಂಕ್ ಸಹಕಾರ ನೀಡದೇ ಇದ್ರೂ, ಗುಜರಾತ್ ದೇವಾಲಯಗಳ ಸಹಕಾರದಿಂದ ಯೋಜನೆ ಪೂರ್ಣಗೊಳಿಸಿದ್ದೇವೆ: ಮೋದಿ

    ಅಹಮದಾಬಾದ್: ವಿಶ್ವ ಬ್ಯಾಂಕ್ ನರ್ಮದಾ ನದಿ ಅಣೆಕಟ್ಟು ಯೋಜನೆಗೆ ಆರ್ಥಿಕ ಸಹಾಯವನ್ನು ಮಾಡಲು ನಿರಾಕರಿಸಿದರೂ ನಾವು ಈಗ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ನರ್ಮದಾ ಡ್ಯಾಂ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಬ್ಯಾಂಕ್ ಈ ಯೋಜನೆ ನಿರ್ಮಿಸಲು ಹಣಕಾಸಿನ ಸಹಾಯ ನೀಡದ ಕಾರಣ ಸರ್ಕಾರಕ್ಕೆ ಸಂಕಷ್ಟವಾಗಿತ್ತು. ಆದರೆ ಗುಜರಾತ್ ದೇವಾಲಯಗಳು ಆರ್ಥಿಕ ಸಹಾಯ ಮಾಡಿದ ಕಾರಣ ವಿಶ್ವದ ದೊಡ್ಡ ಅಣೆಕಟ್ಟು ನಿರ್ಮಾಣವಾಗಿದೆ. ಸ್ವಾಮೀಜಿಗಳು ಮತ್ತು ಸಂತರು ಈ ಅಣೆಕಟ್ಟು ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

    ಈ ಯೋಜನೆಯಿಂದ ಹೊಸ ಮೈಲಿಗಲ್ಲು ನಿರ್ಮಾಣವಾಗಿದ್ದು. ಅಣೆಕಟ್ಟು ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್ ಕಾಂಕ್ರೀಟ್‍ನಿಂದ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಾಗೂ ಕಾಂಡ್ಲಾ ದಿಂದ ಕೊಹಿಮಾ ವರೆಗೆ ರಸ್ತೆಯನ್ನು ನಿರ್ಮಾಣ ಮಾಡುಬಹುದು ಎಂದು ಮೋದಿ ಹೇಳಿದರು.

    ನರ್ಮದಾ ಸರ್ದಾರ್ ಅಣೆಕಟ್ಟನ್ನು ಗುಜರಾತ್‍ನ ಜೀವನಾಡಿ ಎಂದು ಕರೆಯಲಾಗಿದ್ದು, ಕೃಷಿಯನ್ನು ಮೂಲ ವೃತ್ತಿಯಾಗಿ ಸ್ವೀಕರಿಸಿರುವ ರೈತ ಕುಟುಂಬಗಳ ಆರ್ಥಿಕ ಸಾಮರ್ಥ್ಯ ಉತ್ತಮಗೊಳ್ಳುತ್ತದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮೊದಲು ಪ್ರಧಾನಿ ತಮ್ಮ ತಾಯಿಯ ಬಳಿ ತೆರಳಿ ಅರ್ಶೀವಾದವನ್ನು ಪಡೆದಿದ್ದರು.

    ನರ್ಮದಾ ನದಿಯ ಅಣೆಕಟ್ಟು ಯೋಜನೆಯನ್ನು ಕಳೆದ ಆರು ದಶಕಗಳ ಹಿಂದೆ ಆಗಿನ ಪ್ರಧಾನಿಗಳಾದ ಪಂಡಿತ್ ನೆಹರೂ ಅವರು 1961, ಏಪ್ರಿಲ್ 05 ರಂದು ಶಂಕು ಸ್ಥಾಪನೆಯನ್ನು ಮಾಡಿದ್ದರು. ಅಣೆಕಟ್ಟು ನಿರ್ಮಾಣ ಕಾರ್ಯವನ್ನು 1987 ರಲ್ಲಿ ಪ್ರಾರಂಭಿಸಲಾಗಿತ್ತು. ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್ ರಾಜ್ಯಗಳ ನೀರು ಹಂಚಿಕೆ ವಿವಾದಗಳಿಂದ ಈ ಅಣೆಕಟ್ಟು ನಿರ್ಮಾಣ ಕಾಮಗಾರಿ ಹಲವು ಬಾರಿ ಸ್ಥಗಿತಗೊಂಡಿತ್ತು.

    ಈ ಮಧ್ಯೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ವಿತರಣೆ ಮಾಡದ್ದಕ್ಕೆ ಸುಪ್ರೀಂ ಕೋರ್ಟ್ ನಿಂದ ನಿರ್ಮಾಣ ಕಾರ್ಯಕ್ಕೆ ತಡೆ ಸಿಕ್ಕಿತ್ತು. ನಂತರ ಎಲ್ಲ ಅಡೆ ತಡೆಗಳು ನಿವಾರಣೆಯಾಗಿ ಇಂದು ಯೋಜನೆ ಲೋಕಾರ್ಪಣೆಯಾಗಿದೆ.

    ಸರ್ಧಾರ್ ಸರೋವರ ಡ್ಯಾಂ ವಿಶೇಷತೆಗಳು:
    1) ಅಮೆರಿಕದ ವಿಶ್ವದ ಅತೀದೊಡ್ಡ ಅಣೆಕಟ್ಟು ಗ್ರ್ಯಾಂಡ್‍ಕೂಲೀ ಡ್ಯಾಂ ನಂತರ ಭಾರತದ ಸರ್ದಾರ್ ಸರೋವರ ಅಣೆಕಟ್ಟು ವಿಶ್ವದ ಎರಡನೇ ಅತೀದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆ ಪಡೆದಿದೆ.

    2) ಸುಮಾರು 1.2 ಕಿ.ಮೀ ಉದ್ದವನ್ನು ಹೊಂದಿರುವ ಅಣೆಕಟ್ಟು, ನೆಲದಿಂದ ಸುಮಾರು 163 ಮೀಟರ್ ಎತ್ತರವನ್ನು ಹೊಂದಿದೆ. ಯೋಜನೆಯ ನದಿಯ ತಳದಲ್ಲಿ(1200 ಮೆಗಾ ವ್ಯಾಟ್) ಹಾಗೂ ನಾಲೆಯಲ್ಲಿ (250 ಮೆಗಾ ವ್ಯಾಟ್) ಎರಡು ವಿದ್ಯುತ್ ಉತ್ಪಾದನ ಘಟಕಗಳನ್ನು ಅಳವಡಿಸಲಾಗಿದ್ದು, ಸುಮಾರು 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

    3) ಈ ಡ್ಯಾಂ ನಿಂದ ಈಗಾಗಲೇ 16 ಸಾವಿರ ಕೋಟಿ ರೂ. ಹಣ ಬಂದಿದೆ. ಡ್ಯಾಂ ನಿರ್ಮಾಣಕ್ಕೆ ವೆಚ್ಚ ಮಾಡಿದ ಹಣದ ಎರಡು ಪಟ್ಟು ಹಣ ಈಗಾಗಲೇ ಬಂದಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಡ್ಯಾಂ ಪ್ರತಿ ಗೇಟ್ ಸುಮಾರು 450 ಟನ್ ತೂಕವನ್ನು ಹೊಂದಿದೆ. ಇದನ್ನು ಮುಚ್ಚಲು ಕನಿಷ್ಠ ಒಂದು ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.

    4) ಸರ್ದಾರ್ ಡ್ಯಾಂ ವಿದ್ಯುತ್ ಘಟಕದಿಂದ ಉತ್ಪಾದಿಸಿರುವ ವಿದ್ಯುತ್ ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಕ್ರಮವಾಗಿ ಶೇ.57, ಶೇ.27 ಮತ್ತು 16 ರಷ್ಟು ವಿದ್ಯುತ್ ಹಂಚಿಕೊಳ್ಳಲಿವೆ.

    5) ಈ ಯೋಜನೆಯ ಪ್ರದೇಶದಲ್ಲಿ ಹೆಚ್ಚು ಅರಣ್ಯವು ಮುಳುಗಡೆಯಾಗಿದೆ. ಪರಿಸರವಾದಿಗಳು ಡ್ಯಾಂ ಗೇಟ್‍ಗಳನ್ನು ತೆರೆದಿಡುವಂತೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುವರೆಗೂ ಗೇಟ್‍ಗಳನ್ನು ತೆರೆದಿಡಲಾಗುತ್ತದೆ.

    6) ಈ ಯೋಜನೆಯ ನಿರ್ಮಾಣದಿಂದ ಮಧ್ಯ ಪ್ರದೇಶದ ಸುಮಾರು 192 ಹಳ್ಳಿಗಳಿಗೆ ಸೇರಿದ 40 ಸಾವಿರ ಕುಟುಂಬಗಳು ನಿರಾಶ್ರಿತವಾಗಿದೆ ಎಂದು ನರ್ಮದಾ ಬಚಾವೋ ಆಂದೋಲನ ಚಳವಳಿಗಾರರು ಮಾಹಿತಿ ನೀಡಿದ್ದಾರೆ. ಈ ಯೋಜನೆಯಿಂದ ಸುಮಾರು 18,386 ಕುಟುಂಬಗಳು ನಿರಾಶ್ರಿತವಾಗಿವೆ ಎಂದು ಸರ್ಕಾರ ಮಾಹಿತಿ ನೀಡಿವೆ.

    7) ಅಣೆಕಟ್ಟೆಯ ಎತ್ತರವನ್ನು 121.92 ಮೀಟರ್‍ನಿಂದ 138.68 ಮೀಟರ್ ಏರಿಸಲು ನರ್ಮದಾ ನಿಯಂತ್ರಣ ಪ್ರಾಧಿಕಾರ 2014ರಲ್ಲಿ ಅನುಮತಿ ನೀಡಿತ್ತು.

    8) ನರ್ಮದಾ ಬಚಾವೋ ಚಳವಳಿಯ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಯೋಜನೆಯ ನಿರಾಶ್ರಿತರಿಗೆ ಪುನರ್ವಸತಿಯನ್ನು ನೀಡಿದ ನಂತರ ಸರ್ಧಾರ್ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ 1996 ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. ನಂತರ ಅವರ ಮನವಿಯನ್ನು ಪರಿಶೀಲಿಸಿದ ಕೋರ್ಟ್ 2000 ರಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿತ ಬಳಿಕ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿ ಯೋಜನೆಗೆ ಅನುಮತಿಯನ್ನು ನೀಡಿತ್ತು.

    9) ಎತ್ತರವನ್ನು 138.68 ಮೀಟರ್ ಏರಿಸಿದ ಪರಿಣಾಮ  ಡ್ಯಾಂನಲ್ಲಿ 47.3 ದಶಲಕ್ಷ ಹೆಕ್ಟೆರ್ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ.

    10) ಈ ಯೋಜನೆಯು ಇನ್ನೂ ಪೂರ್ಣಗೊಂಡಿಲ್ಲ ಎಂದು ಗುಜರಾತ್ ರಾಜ್ಯ ಕಾಂಗ್ರೆಸ್ ಘಟಕವು ಆರೋಪಿಸಿದೆ. ಗುಜರಾತ್‍ನಲ್ಲಿ ಸುಮಾರು 22 ವರ್ಷಗಳಿಂದ ನಿರಂತರವಾಗಿ ಬಿಜೆಪಿ ಪಕ್ಷವು ಆಡಳಿತ ನಡೆಸುತ್ತಿದ್ದರೂ ಸುಮಾರು 43 ಸಾವಿರ ಕಿಲೋ ಮೀಟರ್ ಉದ್ದದ ನಾಲೆಗಳು ಇನ್ನೂ ನಿರ್ಮಾಣಗೊಳ್ಳ ಬೇಕಿದೆ ಎಂಬ ಮಾಹಿತಿಯನ್ನು ನೀಡಿದೆ.