ಕನ್ನಡ ಚಿತ್ರರಂಗ ಮತ್ತು ಟಾಲಿವುಡ್ ಸದ್ಯದ ಹಾಟ್ ಟಾಪಿಕ್ ಅಂದ್ರೆ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಚಾರ. ಇವರಿಬ್ಬರ ಆಫೇರ್ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗ್ತಿರುವ ಬೆನ್ನಲ್ಲೇ ನೆಟ್ಟಿರ ಕೆಂಗಣ್ಣಿಗೆ ಈ ಜೋಡಿ ಗುರಿಯಾಗಿದ್ದಾರೆ.
ಟಾಲಿವುಡ್‌ನ ಸ್ಟಾರ್ ವಿಜಯ್ ನಿರ್ಮಲಾ ಅವರ ಮಗ ನಟ ನರೇಶ್‌ಗೆ ಈಗಾಗಲೇ 3 ಮದುವೆಯಾಗಿದೆ. ಸದ್ಯ ಪವಿತ್ರಾ ಲೋಕೇಶ್ ಜತೆಗಿನ ನಾಲ್ಕನೇ ಮದುವೆಯ ವಿಚಾರವಾಗಿ ಸಖತ್ ಸೌಂಡ್ ಮಾಡ್ತಿದ್ದಾರೆ. ಅಫೇರ್ ವಿಚಾರವಾಗಿ ಹಾಟ್ ಟಾಪಿಕ್ ಆಗಿರುವ ಈ ಜೋಡಿ ಇಷ್ಟು ಬೇಗ ಅಣ್ಣ ತಂಗಿ ಆದ್ರಾ ಅಂತಾ ಪ್ರೇಕ್ಷಕರು ಪ್ರಶ್ನೆಸುತ್ತಿದ್ದಾರೆ. ಇದನ್ನೂ ಓದಿ:`ಮಹಾಭಾರತ’ ಖ್ಯಾತಿಯ ನಟ ರಸಿಕ್ ದವೆ ವಿಧಿವಶ
ಇದೀಗ ಮತ್ತೊಮ್ಮೆ ನರೇಶ್ ಮತ್ತು ಪವಿತ್ರಾ ವಿಚಾರ ಸದ್ದು ಮಾಡಲು ರವಿತೇಜಾ ನಟನೆಯ `ರಾಮ್‌ರಾವ್ ಆನ್‌ಡ್ಯೂಟಿ’ ಚಿತ್ರ. ನಿನ್ನೇಯಷ್ಟೇ ತೆರೆಕಂಡಿದೆ. ನಿಜಜೀವನದಲ್ಲಿ ಜೋಡಿಯಾಗಿ ಗುರುತಿಸಿಕೊಳ್ತಿರುವ ನರೇಶ್ ಮತ್ತು ಪವಿತ್ರಾ ಈ ಚಿತ್ರದಲ್ಲಿ ಅಣ್ಣ ತಂಗಿಯಾಗಿ ನಟಿಸಿದ್ದಾರೆ. ಒಡಹುಟ್ಟಿದವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಅಂತಾ ಸಿನಿಮಾ ನೋಡಿದವರು ತಮಾಷೆ ಮಾಡುತ್ತಿದ್ದಾರೆ.
ನಿಜಜೀವನದಲ್ಲಿ ಇಬ್ಬರೂ ಜತೆಯಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಎಲ್ಲಾ ಕಡೆ ಮದುವೆಯ ವಿಚಾರವಾಗಿ ಸಾಕಷ್ಟು ರಂಪಾಟವಾಗಿರುವ ಪ್ರೇಕ್ಷಕರಿಗೂ ತಿಳಿದಿದೆ. ತೆರೆಯ ಮೇಲೆ ಅಣ್ಣ ತಂಗಿ ಪಾತ್ರ ನೋಡಿ ಫ್ಯಾನ್ಸ್ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಈ ಜೋಡಿ ಸಖತ್ ಸೌಂಡ್ ಮಾಡ್ತಿದೆ.
Live Tv
[brid partner=56869869 player=32851 video=960834 autoplay=true]
ತೆಲುಗು ನಟ ನರೇಶ್ ಮತ್ತು ಬೆಂಗಳೂರಿನ ರಮ್ಯಾ ದಾಂಪತ್ಯದ ವಿವಾದ ಬೀದಿರಂಪ ಆಗಿತ್ತು. ನರೇಶ್ ಅವರ ಮೇಲೆ ರಮ್ಯಾ ಅವರು ಹಲವು ಆರೋಪಗಳನ್ನು ಮಾಡಿದ್ದರು. ಅಲ್ಲದೇ, ಮೈಸೂರಿನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದಾಗ, ಅವರ ಮೇಲೆ ಚೆಪ್ಪಲಿ ಎಸೆಯುವಂತಹ ಪ್ರಯತ್ನ ಕೂಡ ಮಾಡಿದ್ದರು. ಒಂದು ವಾರಗಳ ಕಾಲ ಭಾರೀ ಸದ್ದು ಮಾಡಿದ್ದ ವಿವಾದ, ಒಂದು ವಾರದಿಂದ ತಣ್ಣಗಾಗಿದೆ.
ಈ ಕುರಿತು ಮಾತನಾಡಿರುವ ನರೇಶ್, ‘ರಮ್ಯಾ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಕೆಲ ಪ್ರಭಾವಿಗಳು ಅವರೊಂದಿಗೆ ಸೇರಿಕೊಂಡು ಈ ರೀತಿ ಗಲಾಟೆ ಮಾಡಿಸುತ್ತಿದ್ದಾರೆ. ರಮ್ಯಾ ಮತ್ತು ನನ್ನ ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ಹಾಗಾಗಿ ಇನ್ಮುಂದೆ ಯಾವುದೇ ಹೇಳಿಕೆಯನ್ನು ಕೊಡಲಾರೆ. ನಾನು ಕೋರ್ಟ್ ನಲ್ಲೇ ಹೋರಾಟ ಮಾಡಿ ನ್ಯಾಯ ಪಡೆಯುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಾಥ್
ಪವಿತ್ರಾ ಲೋಕೇಶ್ ಮತ್ತು ನರೇಶ್ ಮೈಸೂರಿನ ಹೋಟೆಲ್ ವೊಂದರಲ್ಲಿ ತಂಗಿದ್ದಾಗ ರಮ್ಯಾ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿರುವ ವಿಚಾರವನ್ನೂ ಅವರು ಗಂಭೀರವಾಗಿ ತಗೆದುಕೊಂಡಿದ್ದಾರಂತೆ. ಹಾಗಾಗಿ ಕೋರ್ಟ್ ಮೊರೆ ಹೋಗುವುದಾಗಿ ಅವರು ಆಪ್ತರ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗಲಾಟೆಯ ನಂತರ ಪವಿತ್ರಾ ಲೋಕೇಶ್ ಮತ್ತು ನರೇಶ್ ಹೈದರಾಬಾದ್ ನಲ್ಲೇ ಉಳಿದುಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ.
Live Tv
[brid partner=56869869 player=32851 video=960834 autoplay=true]
ನಟ ಸುಚೇಂದ್ರ ಪ್ರಸಾದ್ ಅವರನ್ನು ತಾವು ಮದುವೆನೇ ಆಗಿಲ್ಲ. ಮದುವೆ ಆಗದೇ ಡಿವೋರ್ಸ್ ಕೊಡುವ ಮಾತೆಲ್ಲಿಂದ ಬರುತ್ತೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು ನಟಿ ಪವಿತ್ರಾ ಲೋಕೇಶ್. ತೆಲುಗು ನಟ ನರೇಶ್ ಅವರ ಜೊತೆ ಪವಿತ್ರಾ ಲೋಕೇಶ್ ವಾಸಿಸುತ್ತಿದ್ದಾರೆ ಎಂದು ಸುದ್ದಿ ಆಯಿತು. ಈ ಕಾರಣದಿಂದಾಗಿಯೇ ಅವರು ಸುಚೇಂದ್ರ ಪ್ರಸಾದ್ ಅವರನ್ನು ತೊರೆದಿದ್ದಾರೆ ಎಂದೂ ಹೇಳಲಾಗಿತ್ತು. ಈ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದ ಪವಿತ್ರಾ ಲೋಕೇಶ್, ತಾವು ಸುಚೇಂದ್ರ ಪ್ರಸಾದ್ ಜೊತೆ ಮದುವೆಯನ್ನೇ ಆಗಿಲ್ಲ ಎಂದು ಹೇಳಿದ್ದರು.
16 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮತ್ತು ಎರಡು ಮಕ್ಕಳ ತಾಯಿಯೂ ಆಗಿದ್ದ ಪವಿತ್ರಾ ಲೋಕೇಶ್ ಅವರು ಆಡಿದ ಮಾತಿಗೆ ಈವರೆಗೂ ಸುಚೇಂದ್ರ ಪ್ರಸಾದ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ನಡೆದದ್ದೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದರು. ಇತ್ತೀಚೆಗೆ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪವಿತ್ರಾ ಲೋಕೇಶ್ ಅವರೇ ತಮ್ಮ ಹೆಂಡತಿ ಎನ್ನುವುದನ್ನು ಪುರಾವೆ ಸಮೇತ ವಿವರಿಸಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ನಾನು ಹಿಂದೂ ವಿವಾಹದ ಸಂಪ್ರದಾಯದಂತೆ ಮದುವೆ ಆಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಅವರ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಅಂತಿದೆ. ಅಲ್ಲದೇ, ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದಾರೆ. ನಾವೂ ಒಟ್ಟಿಗೆ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಗಂಡ ಹೆಂಡತಿ ಅನ್ನೋ ಕಾರಣಕ್ಕಾಗಿಯೇ ಹೋಗಿದ್ದೇವೆ. ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ ಎಂದಿದ್ದಾರೆ. ಆದರೆ, ಮದುವೆ ನೋಂದಣಿ ಪತ್ರ ಮಾತ್ರ ಮಾಡಿಸಿಲ್ಲ ಎಂದಿದ್ದಾರೆ.
ಮದುವೆ ನೋಂದಣಿ ಪತ್ರ ಭಾರತದಲ್ಲಿ ಕಡ್ಡಾಯವಲ್ಲ ಎಂದು ಹೇಳಿರುವ ಅವರು, ಅದೊಂದು ವಿದೇಶಿ ಸಂಸ್ಕೃತಿ. ನಮ್ಮಲ್ಲಿ ಮದುವೆ ನೋಂದಣಿ ಕಡ್ಡಯವಲ್ಲ ಎನ್ನುವ ಕಾರಣಕ್ಕೆ ಸುಮ್ಮನಾಗಿದ್ದೆ ಎನ್ನುವು ಸುಚೇಂದ್ರ ಪ್ರಸಾದ್, ಆ ನೋಂದಣಿಯನ್ನು ಮಾಡಿಸುವುದು ಈಗ ನನಗೆ ಸುಲಭ ಎಂದೂ ಅವರು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಂದೇ ಹೋಟೆಲ್ ನಲ್ಲಿ ಸಿಕ್ಕಿಹಾಕಿಕೊಂಡ ನಂತರ ಪವಿತ್ರಾ ಲೋಕೇಶ್ ಚಿತ್ರಣವೇ ಬದಲಾಗಿದೆ ಎನ್ನುವ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಹರಡಿದೆ. ತಮ್ಮಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ತಾವು ಬರೀ ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದವರು ಮೈಸೂರು ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಪವಿತ್ರಾ ಮೇಲಿದ್ದ ಇಮೇಜ್ ಬದಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಪರಿಣಾಮ ಪವಿತ್ರಾ ಅವರನ್ನು ಹಲವು ಸಿನಿಮಾಗಳಿಂದ ಕೈ ಬಿಡಲಾಗುತ್ತಿದೆ ಅಂತೆ.
ತೆಲುಗು ಮತ್ತು ತಮಿಳಿನ ಹಲವು ಸ್ಟಾರ್ ಸಿನಿಮಾಗಳಿಗೆ ಪವಿತ್ರಾ ಲೋಕೇಶ್ ತಾಯಿ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರಂತೆ. ಆದರೆ, ಈ ಪ್ರಕರಣದ ನಂತರ ಅವರನ್ನು ಕೈ ಬಿಡಲಾಗುತ್ತಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ತಾಯಿ ಪಾತ್ರಕ್ಕೆ ಅವರು ಆಯ್ಕೆಯಾಗಿದ್ದರಿಂದ ಹಾಗಾಗಿ ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನರೇಶ್, ರಮ್ಯಾ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ಇದೀಗ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್
ಪ್ರಕರಣ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗುತ್ತಿದ್ದಂತೆಯೇ ರಮ್ಯಾ ಕೂಡ ಅಲ್ಲೊಂದು ಪತ್ರಿಕಾಗೋಷ್ಠಿ ಮಾಡಲು ಸಿದ್ಧತೆ ನಡೆಸಿದ್ದಾರೆ. ರಮ್ಯಾ ಏನಾದರೂ ಮಾಧ್ಯಮಗೋಷ್ಠಿ ಮಾಡಿದರೆ, ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗಲಿದೆ. ದಿನಕ್ಕೊಂದು ರೀತಿಯಲ್ಲಿ ಘಟನೆಯು ತಿರುವುದು ಪಡೆದುಕೊಳ್ಳುತ್ತಿರುವುದು ವಿಶೇಷ.
Live Tv
[brid partner=56869869 player=32851 video=960834 autoplay=true]
ತೆಲುಗು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿರುವ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ಇದೀಗ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಮೈಸೂರು ಹೋಟೆಲ್ ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಿಕ್ಕಾಕಿಕೊಂಡ ನಂತರ ಅವರು ಹೈದರಾಬಾದ್ ಗೆ ಹೋಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ನರೇಶ್ ಪತ್ನಿ ರಮ್ಯಾ ಕೂಡ ಹೈದರಾಬಾದ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿ ಮಾಡಲಿದ್ದಾರಂತೆ.
ಈ ಹೈಡ್ರಾಮಾದ ನಡುವೆಯೇ ವಿವಾದಿತ ತಾರೆ, ತೆಲುಗು ನಟಿ ಶ್ರೀರೆಡ್ಡಿ ಎಂಟ್ರಿ ಪಡೆದಿದ್ದಾರೆ. ಈ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರೆಡ್ಡಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು ಈ ಸಂದರ್ಭವನ್ನು ನೆನಪಿಸಿಕೊಂಡು ಲೈವ್ ಮಾಡಿರುವ ಶ್ರೀರೆಡ್ಡಿ ಮತ್ತೆ ನರೇಶ್ ಹಾಗೂ ಪವಿತ್ರಾ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ನಾನು ಮೀಟೂ ವಿರುದ್ಧ ಪ್ರತಿಭಟನೆ ನಡೆಸಿದಾಗ ನರೇಶ್, ಆ್ಯಸಿಡ್‌ನಿಂದ ಕೈ ತೊಳಯಬೇಕು ಎಂದು ಕಾಮೆಂಟ್ ಮಾಡಿದ್ದರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ
ಯಾರ ಬದುಕಿನಲ್ಲೂ ಯಾರು ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ಪವಿತ್ರಾ ಲೋಕೇಶ್ ಕುರಿತಾಗಿಯೂ ಮಾತನಾಡಿರುವ ಶ್ರೀರೆಡ್ಡಿ, ರಮ್ಯಾ ಅವರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಹಿಳೆ ಅಂದಾಕ್ಷಣ ಅವರ ಶೀಲವನ್ನು ಶಂಕಿಸಲಾಗುತ್ತದೆ. ರಮ್ಯಾ ಮೇಲೂ ಅದೇ ಆಗಿದೆ. ಆದರೆ, ನಿಜವಾಗಿಯೂ ಜನರ ಮುಂದೆ ಬೆತ್ತಲೆ ಆದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನರೇಶ್ ಅವರನ್ನು ಕೇಳಿದ್ದಾರೆ.
ಶ್ರೀರೆಡ್ಡಿ ಲೈವ್ ಗೆ ಬಂದು ಮತ್ತೆ ಹಲವು ಕಲಾವಿದರ ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ. ಅವರು ಜೀವನವೂ ಇದೇ ಹಾದಿಯಲ್ಲಿದೆ. ಮುಂದೆ ಜನರಿಗೂ ಗೊತ್ತಾಗಲಿದೆ ಎಂದು ಅಬ್ಬರಿಸಿದ್ದಾರೆ. ಶ್ರೀರೆಡ್ಡಿ ಲೈವ್ ಗೆ ಬರುತ್ತಿದ್ದಂತೆಯೇ ಮೀಟೂ ಚಳವಳಿ ಮತ್ತೆ ಆರಂಭವಾಗಲಿದೆಯಾ ಅನ್ನುವ ಅನುಮಾನವನ್ನಂತೂ ಅವರು ಹುಟ್ಟು ಹಾಕಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನಗುತ್ತಾ ಹೋಗಿದ್ದೆ ಇಂದು ನನಗೆ ಸಿಕ್ಕ ಜಯ ಎಂದು ಪತಿ ನರೇಶ್ ವಿರುದ್ಧ ರಮ್ಯಾ ರಘುಪತಿ ವ್ಯಂಗ್ಯವಾಡಿದ್ದಾರೆ.
ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧ ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್‍ವೊಂದರಲ್ಲಿ ಒಂದೇ ರೂಮ್‍ನಲ್ಲಿ ತಂಗಿದ್ದ ಪವಿತ್ರಾ ಲೋಕೇಶ್, ನರೇಶ್ ಮೇಲೆ ರಮ್ಯಾ ರಘುಪತಿ ಅವರು ಚಪ್ಪಲಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದರು. ಬಳಿಕ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿ ರಾತ್ರಿ ಎಲ್ಲ ಒಂದೇ ರೂಮ್‍ನಲ್ಲಿದ್ದರು. ಅವರು ಮಾಡಿರುವ ತಪ್ಪನ್ನು ಹೇಗೆ ಮರೆಮಾಚಿಕೊಂಡು ಹೋಗಬೇಕು ಎಂದು ತಿಳಿಯದೇ ನಗುತ್ತಾ ಹೋದರು. ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಗುತ್ತಾ ಹೋಗಿದ್ದೆ, ಇಂದು ನನಗೆ ಸಿಕ್ಕ ಜಯ ಎಂದಿದ್ದಾರೆ. ಇದನ್ನೂ ಓದಿ: ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ರಮ್ಯಾ
ಕಳೆದ ಹತ್ತು ವರ್ಷದಿಂದ ಇದೇ ಯಾತನೆ ಅನುಭವಿಸುತ್ತಿದ್ದೇನೆ. ಮದುವೆಯಾದ ಕೇವಲ ಒಂದು ವರ್ಷ ಚೆನ್ನಾಗಿದ್ದೆವು. ಆದರೆ ನಮ್ಮ ಸಂಸಾರದಲ್ಲಿ ಬಿರುಕು ಮೂಡಲು ಹೊರಗಿನ ವ್ಯಕ್ತಿಯೇ ಕಾರಣವಾಗಿದ್ದಾರೆ. ಒಂದೊಂದು ತಿಂಗಳು ಒಂದೊಂದು ಹುಡುಗಿಯರ ಜೊತೆಗೆ ನಾಟಕವಾಡುತ್ತಾನೆ. ನಮ್ಮ ಅತ್ತೆ ಇಲ್ಲದೇ ಇರುವ ಕಾರಣ ಈಗ ನನಗೆ ಡಿವೋರ್ಸ್ ನೋಟಿಸ್ ನೀಡಿದ್ದಾನೆ. ನಾನು ಹಿಂದೂ ಕುಟುಂಬದಲ್ಲಿ ಜನಿಸಿದ್ದು, ನನಗೆ ಈ ಡಿವೋರ್ಸ್ ಮೇಲೆ ನಂಬಿಕೆ ಇಲ್ಲ. ಒಂದು ಸರಿ ಮದುವೆಯಾದ ನಂತರ ಕಷ್ಟವಾದರೂ, ಸುಖವಾದರೂ ನಿಭಾಯಿಸಿಕೊಂಡು ಹೋಗುತ್ತೇನೆ. ನನ್ನ ಮಗನಿಗೂ ಡಿವೋರ್ಸ್ ನೀಡುವುದು ಇಷ್ಟವಿಲ್ಲ. ಇದರ ಪರಿಣಾಮವಾಗಿ ಪ್ರತಿ ದಿನ ನನ್ನ ಮಗ ಅಳುತ್ತಿದ್ದಾನೆ ಎಂದು ಅಸಮಾಧಾನ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಮಗನನ್ನು ಕಸ್ಟಡಿಗೆ ಕೇಳಿದ್ದಾರೆ. ಕೇವಲ 10 ದಿನಕ್ಕೊಮ್ಮೆ ರೈಡ್‍ಗೆ ಕರೆದುಕೊಂಡು ಹೋಗಿ, ಪಿಜ್ಜಾ ಕೊಡಿಸಿಬಿಟ್ಟರೆ ತಂದೆಯಾಗುವುದಿಲ್ಲ. ಪ್ರತಿ ಕ್ಷಣ ಮಗನೊಂದಿಗೆ ನಿಂತು ಸರಿಯಾದ ದಾರಿಯಲ್ಲಿ ನಡೆಸುವವನೇ ನಿಜವಾದ ಅಪ್ಪ. ನಮ್ಮ ಅತ್ತೆ ಇದ್ದಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎಷ್ಟೋ ನ್ಯಾಯ ಪಂಚಾಯಿತಿಯನ್ನು ಮಾಡಿ ನಮ್ಮ ಅತ್ತೆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಆದರೆ ಈಗ ನಾನು ರಸ್ತೆಯಲ್ಲಿ ನಿಂತಿದ್ದೇನೆ ಎಂದು ಅಳಲು ತೋಡಿಕೊಂಡರಿದ್ದಾರೆ. ಇದನ್ನೂ ಓದಿ: ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು
ನರೇಶ್ ರಾಜಕೀಯ ಪ್ರವೇಶ ಮಾಡುವ ಸಲುವಾಗಿ ನನ್ನನ್ನು ಮದುವೆಯಾದರು. ಆದರೆ ರಾಜಕೀಯ ಪ್ರವೇಶಿಸಲು ಸಾಧ್ಯವಾಗದ ಕಾರಣ ಜಗಳ ಆರಂಭವಾಯಿತು. ಮೊದಲು ನಾನು ಅವರಿಗೆ ರಾಜಲಕ್ಷ್ಮಿಯಾಗಿದ್ದೆ. ಆದರೆ ನಂತರದ ದಿನಗಳಲ್ಲಿ ನಾನು ದರಿದ್ರ್ಯಾ ಆಗಿಬಿಟ್ಟೆ. ನಿನ್ನಿಂದ ನನಗೆ ಯಾವುದೇ ಲಾಭವಿಲ್ಲ ಎಂದು ನರೇಶ್ ನನ್ನನ್ನು ನಿಂದಿಸುತ್ತಿದ್ದರು. ಹಿಂದೆ ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಅರಿಶಿನ, ಕುಂಕುಮ ಹಾಗೂ ಸೀರೆ ನೀಡಲು ಆಗಲಿಲ್ಲ ಎಂದು ಬೇಸರಗೊಂಡಿದ್ದೆ. ಆದರೆ ಇಂದು ನಾನು ಕೊಡದೇ ಇದ್ದಿದ್ದೆ ಒಳ್ಳೆಯದಾಯಿತು ಎಂದು ಭಾವಿಸುತ್ತೇನೆ ಎಂದಿದ್ದಾರೆ.
ನನ್ನ ಬಾಳಿಗೆ ಮುಳ್ಳಾಗಲು ಪವಿತ್ರಾ ಲೋಕೇಶ್ ಕಾರಣ ಎಂದು ಹೇಳುವುದಿಲ್ಲ. ಪವಿತ್ರಾ ಲೋಕೇಶ್ 6 ತಿಂಗಳು ತನ್ನ ಗಂಡನೊಂದಿಗೆ ಚೆನ್ನಾಗಿದ್ದರೆ, ಇನ್ನೂ 6 ತಿಂಗಳು ಚೆನ್ನಾಗಿರುವುದಿಲ್ಲ ಎಂದು ಅವರ ಪತಿ ಸುಚೇಂದ್ರ ಲೋಕೇಶ್ ಅವರೇ ಹೇಳಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧಕ್ಕೆ ಅರ್ಥವಿಲ್ಲ. ನನ್ನ ಮಗನಿಗೆ ಕಣ್ಣೀರು ತರಿಸಲು ಬಿಡುವುದಿಲ್ಲ. ಕರ್ನಾಟಕದ ಜನತೆ ನನ್ನೊಂದಿಗಿದ್ದಾರೆ. ಕಾನೂನಿನ ಪ್ರಕಾರವಾಗಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ಖಂಡಿತವಾಗಿಯೂ ಇದಕ್ಕೆ ಕೋರ್ಟ್‍ನಲ್ಲಿ ಉತ್ತರ ನೀಡುತ್ತೇನೆ ಮತ್ತು ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಮೈಸೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇದ್ದ ಹೋಟೆಲ್ ಮುಂದೆ ರಮ್ಯಾ ರಘುಪತಿ ಅವರು ದೊಡ್ಡ ಹೈಡ್ರಾಮಾ ಮಾಡಿದ್ದಾರೆ.
ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಂದೇ ರೂಮ್‌ನಲ್ಲಿದ್ದರು. ಹೀಗಾಗಿ ರೂಮ್ ಬಳಿಯೇ ಕಾದು ಕುಳಿತಿದ್ದ ರಮ್ಯಾ ರಘುಪತಿ, ಪತಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕೂಡಲೇ ಪೊಲೀಸರು ರಮ್ಯಾ ರಘುಪತಿಯನ್ನು ತಡೆದಿದ್ದಾರೆ. ಇದನ್ನೂ ಓದಿ: ನಟಿ ಪವಿತ್ರಾ ಲೋಕೇಶ್ ಭಾವನೆ ಘಾಸಿಗೊಳಿಸಲಾರೆ ಎಂದ ಸುಚೇಂದ್ರ ಪ್ರಸಾದ್
ನಟಿ ಪವಿತ್ರಾ ಲೋಕೇಶ್ ಮತ್ತು ನಟ ಸುಚೇಂದ್ರ ಪ್ರಸಾದ್ ಸಹಜೀವನದ ಕುರುಹುವಾಗಿ ಈ ದಂಪತಿಗೆ ಎರಡು ಮಕ್ಕಳು ಇದ್ದಾರೆ. ಈ ಮಕ್ಕಳ ಬಗ್ಗೆ ಪ್ರಥಮ ಬಾರಿಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ನಟ ಸುಚೇಂದ್ರ ಪ್ರಸಾದ್. ಆರು ವರ್ಷಗಳಿಂದ ದೂರವೇ ಇರುವ ಈ ಜೋಡಿಯು ಈವರೆಗೂ ಈ ಗುಟ್ಟನ್ನು ಯಾರೊಂದಿಗೆ ಹಂಚಿಕೊಂಡಿರಲಿಲ್ಲ. ಈಗ ಎಲ್ಲವೂ ಬಟಾಬಯಲು ಆದ ಪರಿಣಾಮ ಮಕ್ಕಳ ಮನಸ್ಥಿತಿಯ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ಸುಚೇಂದ್ರ ಪ್ರಸಾದ್.
ಈವರೆಗೂ ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಮದುವೆಯಾಗಿದ್ದಾರೆ ಎಂದು ನಂಬಲಾಗಿತ್ತು. ಮುದ್ದಾದ ಎರಡು ಮಕ್ಕಳು ಇರುವ ಕಾರಣದಿಂದಾಗಿ ಸತಿಪತಿ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂದೂ ಅಂದುಕೊಳ್ಳಲಾಗಿತ್ತು. ಆದರೆ, ತಮ್ಮ ನಡುವೆ ಯಾವುದೂ ಸರಿಯಿಲ್ಲವೆಂದು ನಿನ್ನೆಯಷ್ಟೇ ಪವಿತ್ರಾ ಲೋಕೇಶ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆರು ವರ್ಷಗಳಿಂದ ತಾವು ದೂರವಿರುವುದಾಗಿಯೂ ತಿಳಿಸಿದರು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಸುಚೇಂದ್ರ ಪ್ರಸಾದ್ ಆತಂಕ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್
ಮಾಧ್ಯಮದೊಂದಿಗೆ ಮಾತನಾಡಿರುವ ಸುಚೇಂದ್ರ ಪ್ರಸಾದ್, ‘ಪವಿತ್ರಾ ಲೋಕೇಶ್ ಅವರ ಭಾವನೆಯನ್ನು ಗೌರವಿಸುತ್ತೇನೆ. ಆದರೆ, ಎರಡು ಮಕ್ಕಳಿವೆ. ಅವುಗಳನ್ನು ನೆನಪಿಸಿಕೊಂಡರೆ ದುಃಖವಾಗುತ್ತದೆ. ಮನಸು ವಿಚಲಿತವಾಗುತ್ತದೆ. ಮಕ್ಕಳ ಕಾರಣದಿಂದಾಗಿಯೂ ಅಂತಹ ನಿರ್ಧಾರ ತಗೆದುಕೊಳ್ಳಬಾರದಿತ್ತು. ಯಾವ ಕಾಲದಲ್ಲಿ ಏನು ನಡೆಯಬೇಕೋ ಅದು ನಡೆಯುತ್ತದೆ. ಆದರೆ, ಮಕ್ಕಳಿಗೆ ಅದರಿಂದ ತೊಂದರೆ ಆಗಬಾರದು ಎಂದು ಮಾತನಾಡಿದ್ದಾರೆ.
ತೆಲುಗು ನಟ ನರೇಶ್ ಮತ್ತು ಅವರ ಪತ್ನಿ ರಮ್ಯಾ ಕೌಟುಂಬಿಕ ಗಲಾಟೆಯು ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಶ್ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದೆ. ತನ್ನ ಪಾಡಿಗೆ ತಾನು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಸುಚೇಂದ್ರ ಪ್ರಸಾದ್ ಅವರನ್ನು ಸುಖಾಸುಮ್ಮನೆ ಎಳೆತಂದು, ಅವರ ಖಾಸಗಿ ವಿಚಾರಗಳನ್ನು ಬಹಿರಂಗವಾಗಿ ಮಾತಾಡುವಂತಾಗಿದೆ. ಅಲ್ಲದೇ, ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಅವರ ವೈಹಿವಾಹಿಕ ಜೀವನ ಕುರಿತು ಇದೀಗ ಚರ್ಚೆ ಶುರುವಾಗಿದೆ.
ಸುಚೇಂದ್ರ ಪ್ರಸಾದ್ ಅವರ ಧ್ವನಿ ಎನ್ನಲಾದ ಆಡಿಯೋವೊಂದರಲ್ಲಿ ‘ಪವಿತ್ರಾ ಲೋಕೇಶ್ ದುಡ್ಡಿಗಾಗಿ ನರೇಶ್ ಹಿಂದೆ ಹೋಗಿದ್ದಾರೆ’ ಎನ್ನುವ ಅರ್ಥದಲ್ಲಿ ಮಾತನಾಡಲಾಗಿತ್ತು. ನರೇಶ್ ಜೊತೆ ಪವಿತ್ರಾ ಆರು ತಿಂಗಳು ಕೂಡ ಇರುವುದಿಲ್ಲ ಎನ್ನುವ ಮಾತುಗಳೂ ಇದ್ದವು. ಈ ಕುರಿತು ಪವಿತ್ರಾ ಲೋಕೇಶ್ ಕೂಡ ತಿರುಗೇಟು ನೀಡಿದ್ದಾರೆ. ನನಗೆ ಹಣದ ಆಸೆ ಇದ್ದರೆ ಏನೂ ಇಲ್ಲದೇ ಇದ್ದ ಸುಚೇಂದ್ರ ಪ್ರಸಾದ್ ಜೊತೆ ಜೀವನ ನಡೆಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ
ಸುಚೇಂದ್ರ ಪ್ರಸಾದ್ ಅವರ ಜೊತೆ ಹನ್ನೊಂದು ತಿಂಗಳು ಕಾಲ ಜೀವನ ನಡೆಸಿದರೂ, ಅವರೊಂದಿಗೆ ನನ್ನ ಮದುವೆ ಆಗಿಲ್ಲವೆಂದು ಪವಿತ್ರಾ ಲೋಕೇಶ್ ಹೇಳಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಎರಡು ಮಕ್ಕಳ ದಂಪತಿ ಹೀಗೆ ಹೇಳಬಹುದೆ? ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ, ಈ ಕುರಿತು ಸುಚೇಂದ್ರ ಪ್ರಸಾದ್ ಕೂಲ್ ಆಗಿಯೇ ಉತ್ತರಿಸಿದ್ದು, ಪವಿತ್ರಾ ಲೋಕೇಶ್ ಹೇಳಿಕೆಗೆ ಗೌರವ ಕೊಡುವುದಾಗಿ ತಿಳಿಸಿದ್ದಾರೆ. ಈ ಕುರಿತು ನಾನೇನೂ ಮಾತನಾಡಲಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಸಂಬಂಧದ ಪ್ರಕರಣ ಹಲವು ರೂಪಗಳನ್ನು ಪಡೆದುಕೊಂಡಿದೆ. ಪವಿತ್ರಾಗಾಗಿ ತಮ್ಮ ಪತಿ ತಮಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ ನಂತರ, ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪವಿತ್ರಾ ಕೊರಳಲ್ಲಿರುವ ಅನೇಕ ಒಡವೆಗಳು ತಮ್ಮವೇ ಎಂದೂ ರಮ್ಯಾ ಹೇಳಿಕೆ ನೀಡಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.
‘ಬೇರೆ ಯಾರದೋ ಒಡವೆಯನ್ನು ಹಾಕಿಕೊಂಡು ಮರೆಯುವಂತಹ ಗತಿ ನನಗೆ ಬಂದಿಲ್ಲ. ನನ್ನಲ್ಲಿಯೇ ಬಹಳಷ್ಟು ಒಡವೆಗಳಿವೆ. ನಾನು ಕಷ್ಟಪಟ್ಟು ಸಂಪಾದನೆ ಮಾಡಿದ ಒಡವೆಗಳು ಅವು. ನನ್ನ ತಾಯಿ ಕಾಲೇಜು ದಿನಗಳಲ್ಲಿ ನನಗೊಂದು ಚೈನ್ ಮತ್ತು ಉಂಗುರು ಕೊಟ್ಟಿದ್ದರು. ಆಮೇಲೆ ಸಂಪಾದನೆ ಮಾಡಿ ಸಾಕಷ್ಟು ಒಡವೆಗಳನ್ನು ಖರೀದಿಸಿದ್ದೇನೆ. ಅವುಗಳನ್ನು ನಾನೇ ಖರೀದಿಸಿದ್ದೇನೆ ಎನ್ನುವುದಕ್ಕೆ ನನ್ನ ಬಳಿ ರಸೀದಿ ಇದೆ’ ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ
ಒಬ್ಬರ ಒಡವೆ ಮತ್ತೊಬ್ಬರ ಒಡವೆ ರೀತಿಯಲ್ಲಿ ಇರಬಾರದು ಅಂತಿದೆಯಾ ಎಂದು ಪ್ರಶ್ನೆಯನ್ನೂ ಮಾಡಿರುವ ಪವಿತ್ರಾ ಲೋಕೇಶ್, “ಐಶ್ವರ್ಯ ರೈ ಹಾಕಿದ ಒಡವೆ ನನ್ನ ಬಳಿ ಇದ್ದರೆ, ಅದು ಅವರದ್ದು ಹೇಗೆ ಆಗುತ್ತದೆ? ನರೇಶ್ ಅವರಷ್ಟು ನಾನು ಶ್ರೀಮಂತ ಅಲ್ಲದೇ ಇರಬಹುದು. ಆದರೆ, ನೂರಾರು ಸಿನಿಮಾಗಳಲ್ಲಿ ನಟಿಸಿ ಸಂಪಾದಿಸಿದ್ದೇನೆ. ಅದರಿಂದಲೇ ಅನೇಕ ಒಡವೆಗಳನ್ನು ಖರೀದಿಸಿರುವೆ. ಕಂತಿನ ರೂಪದಲ್ಲಿ ಕೆಲವು ಒಡವೆಗಳನ್ನು ಖರೀದಿಸಿದ್ದೇನೆ’ ಎಂದಿದ್ದಾರೆ ಪವಿತ್ರಾ ಲೋಕೇಶ್.
ರಮ್ಯಾ ಮಾಡುತ್ತಿರುವ ಎಲ್ಲ ಆರೋಪಗಳಲ್ಲೂ ಹುರುಳಿಲ್ಲ. ನನ್ನ ಹೆಸರನ್ನು ಅವರು ಹಾಳು ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ನಾನೂ ಕೂಡ ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. ತಮ್ಮ ಕೌಟುಂಬಿಕ ಕಲಹದಲ್ಲಿ ತಮ್ಮನ್ನು ಎಳೆತಂದಿರುವುದಕ್ಕೆ ತುಂಬಾ ನೋವಾಗಿದೆ ಎಂದೂ ಪವಿತ್ರಾ ಮಾತನಾಡಿದ್ದಾರೆ.