Tag: naresh

  • ದುಬೈನಲ್ಲಿ ನಟ ನರೇಶ್-ಪವಿತ್ರಾ ಲೋಕೇಶ್ ಹನಿಮೂನ್: ಸತ್ಯ ಹೇಳ್ತೀನಿ ಅಂದ ನಟ

    ದುಬೈನಲ್ಲಿ ನಟ ನರೇಶ್-ಪವಿತ್ರಾ ಲೋಕೇಶ್ ಹನಿಮೂನ್: ಸತ್ಯ ಹೇಳ್ತೀನಿ ಅಂದ ನಟ

    ನಿನ್ನೆಯಷ್ಟೇ ನಟ ನರೇಶ್ (Naresh) ತಮ್ಮ ಮದುವೆ (Marriage) ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪವಿತ್ರಾ ಲೋಕೇಶ್ (Pavitra Lokesh) ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದೇನೆ ಎನ್ನುವ ಅರ್ಥದಲ್ಲಿ ಅದನ್ನು ಬಿಂಬಿಸಿದ್ದರು. ತೆಲುಗು ಮಾಧ್ಯಮಗಳು ಈ ವಿಡಿಯೋ ಹಿಂದೆ ಬಿದ್ದಿದ್ದವು. ಅದು ರೀಲ್ ಅಥವಾ ರಿಯಲ್  ಎನ್ನುವ ಸತ್ಯವನ್ನು ಪತ್ತೆ ಹಚ್ಚಲು ಕಸರತ್ತು ಮಾಡಿದ್ದವು. ಈ ನಡುವೆ ತೆಲುಗು ನ್ಯೂಸ್ ಚಾನೆಲ್ ವೊಂದು ನರೇಶ್ ಹನಿಮೂನ್ ಟ್ರಿಪ್ (Honeymoon) ಮಾಡಿರುವ ವಿಡಿಯೋವನ್ನು ಪ್ರಸಾರ ಮಾಡಿದೆ. ನರೇಶ್ ಮತ್ತು ಪವಿತ್ರಾ ದುಬೈಗೆ (Dubai) ಹೋಗಿದ್ದ ವಿಡಿಯೋ ಅದಾಗಿದೆ. ಇದು ಕೂಡ ಅಸಲಿಯಾ? ಅಥವಾ ಸಿನಿಮಾದ ದೃಶ್ಯವಾ ಗೊತ್ತಿಲ್ಲ. ಆದರೆ, ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟನೆ ಕೊಡುವುದಾಗಿಯೂ ನರೇಶ್ ತಿಳಿಸಿದ್ದಾರೆ.

    ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ತೆಲುಗು ನಟ ನರೇಶ್. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಇದೀಗ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ನರೇಶ್.

    ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ ನರೇಶ್. ಸಪ್ತಪದಿ ತುಳಿಯುವುದರಿಂದ ಹಿಡಿದ ಮದುವೆಯಲ್ಲಿ ಮಾಡಬಹುದಾದ ಎಲ್ಲ ಸಂಪ್ರದಾಯಗಳನ್ನು ಮಾಡಿದ್ದಾರೆ. ಆ ಕ್ಷಣಗಳನ್ನು ವಿಡಿಯೋ ಮಾಡಿ, ಅದನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ನಿಜವಾಗಿಯೂ ನರೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ನರೇಶ್ ಆಪ್ತರ ಪ್ರಕಾರ ಇನ್ನೂ ನರೇಶ್ ಅವರಿಗೆ ಡಿವೋರ್ಸ್ ಸಿಕ್ಕಿಲ್ಲ. ಪತ್ನಿ ರಮ್ಯಾ ವಿಚ್ಛೇದನ ನೀಡುವುದಿಲ್ಲವೆಂದು ಘೋಷಿಸಿದ್ದಾರೆ. ಡಿವೋರ್ಸ್ ಸಿಗದೇ ನರೇಶ್ ಮದುವೆ ಆಗುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಆಗಿದ್ದರೆ ಅದಕ್ಕೆ ಮಾನ್ಯತೆ ಇಲ್ಲ. ಅಲ್ಲದೇ ಅದೊಂದು ಅಪರಾಧ ಕೂಡ ಆಗಲಿದೆ. ಈ ಮದುವೆ ವಿರುದ್ಧ ರಮ್ಯಾ ಕೋರ್ಟ್ ಮೆಟ್ಟಿಲು ಹತ್ತಬಹುದು. ಇಷ್ಟೆಲ್ಲ ನರೇಶ್ ಅವರಿಗೂ ಗೊತ್ತಿದೆ, ಪವಿತ್ರಾ ಲೋಕೇಶ್ ಅವರಿಗೂ ಗೊತ್ತಿದೆ. ಇಷ್ಟಿದ್ದೂ ಮದುವೆಯಾದರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

    ಈ ಮದುವೆ ವಿರುದ್ಧ ರಮ್ಯಾ ಕೋರ್ಟಿಗೆ ಹೋದರೆ, ಅದು ಸಿನಿಮಾಗಾಗಿ ತಗೆದಿರುವ ದೃಶ್ಯವೆಂದು ಹೇಳಿ ಬಚಾವ್ ಆಗಬಹುದು. ರಮ್ಯಾ ಸುಮ್ಮನಾದರೆ ಅದನ್ನೇ ಮದುವೆ ಎಂದು ಅಂದುಕೊಳ್ಳಬಹುದು ಎನ್ನುವ ಮಾತುಗಳು ಕೂಡ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ನರೇಶ್, ಈ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಭಾರೀ ಸುದ್ದಿಯಂತೂ ಮಾಡಿದ್ದಾರೆ.

  • 108 ಪ್ರಶ್ನೆಗಳನ್ನು ಮೂಡಿಸಿದ ನಟಿ ಪವಿತ್ರಾ ಲೋಕೇಶ್- ನರೇಶ್ ಮ್ಯಾರೇಜ್

    108 ಪ್ರಶ್ನೆಗಳನ್ನು ಮೂಡಿಸಿದ ನಟಿ ಪವಿತ್ರಾ ಲೋಕೇಶ್- ನರೇಶ್ ಮ್ಯಾರೇಜ್

    ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ (Pavitra Lokesh) ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ (marriage) ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ತೆಲುಗು ನಟ ನರೇಶ್ (Naresh). ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಇದೀಗ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ನರೇಶ್.

    ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ ನರೇಶ್. ಸಪ್ತಪದಿ ತುಳಿಯುವುದರಿಂದ ಹಿಡಿದ ಮದುವೆಯಲ್ಲಿ ಮಾಡಬಹುದಾದ ಎಲ್ಲ ಸಂಪ್ರದಾಯಗಳನ್ನು ಮಾಡಿದ್ದಾರೆ. ಆ ಕ್ಷಣಗಳನ್ನು ವಿಡಿಯೋ ಮಾಡಿ, ಅದನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ನಿಜವಾಗಿಯೂ ನರೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ನರೇಶ್ ಆಪ್ತರ ಪ್ರಕಾರ ಇನ್ನೂ ನರೇಶ್ ಅವರಿಗೆ ಡಿವೋರ್ಸ್ ಸಿಕ್ಕಿಲ್ಲ. ಪತ್ನಿ ರಮ್ಯಾ ವಿಚ್ಛೇದನ ನೀಡುವುದಿಲ್ಲವೆಂದು ಘೋಷಿಸಿದ್ದಾರೆ. ಡಿವೋರ್ಸ್ ಸಿಗದೇ ನರೇಶ್ ಮದುವೆ ಆಗುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಆಗಿದ್ದರೆ ಅದಕ್ಕೆ ಮಾನ್ಯತೆ ಇಲ್ಲ. ಅಲ್ಲದೇ ಅದೊಂದು ಅಪರಾಧ ಕೂಡ ಆಗಲಿದೆ. ಈ ಮದುವೆ ವಿರುದ್ಧ ರಮ್ಯಾ ಕೋರ್ಟ್ ಮೆಟ್ಟಿಲು ಹತ್ತಬಹುದು. ಇಷ್ಟೆಲ್ಲ ನರೇಶ್ ಅವರಿಗೂ ಗೊತ್ತಿದೆ, ಪವಿತ್ರಾ ಲೋಕೇಶ್ ಅವರಿಗೂ ಗೊತ್ತಿದೆ. ಇಷ್ಟಿದ್ದೂ ಮದುವೆಯಾದರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

    ಈ ಮದುವೆ ವಿರುದ್ಧ ರಮ್ಯಾ ಕೋರ್ಟಿಗೆ ಹೋದರೆ, ಅದು ಸಿನಿಮಾಗಾಗಿ ತಗೆದಿರುವ ದೃಶ್ಯವೆಂದು ಹೇಳಿ ಬಚಾವ್ ಆಗಬಹುದು. ರಮ್ಯಾ ಸುಮ್ಮನಾದರೆ ಅದನ್ನೇ ಮದುವೆ ಎಂದು ಅಂದುಕೊಳ್ಳಬಹುದು ಎನ್ನುವ ಮಾತುಗಳು ಕೂಡ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ನರೇಶ್, ಈ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಭಾರೀ ಸುದ್ದಿಯಂತೂ ಮಾಡಿದ್ದಾರೆ.

  • ಪವಿತ್ರಾ ಲೋಕೇಶ್-ನರೇಶ್ ಮದುವೆ ವಿಡಿಯೋ: ಏನಿದು ಹುಚ್ಚಾಟ ಅಂತಿದ್ದಾರೆ ಫ್ಯಾನ್ಸ್

    ಪವಿತ್ರಾ ಲೋಕೇಶ್-ನರೇಶ್ ಮದುವೆ ವಿಡಿಯೋ: ಏನಿದು ಹುಚ್ಚಾಟ ಅಂತಿದ್ದಾರೆ ಫ್ಯಾನ್ಸ್

    ನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಜೊತೆ ಮದುವೆಯಾದ (Marriage) ವಿಡಿಯೋವನ್ನು ತೆಲುಗು ನಟ ನರೇಶ್ (Naresh) ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ “ಒಂದು ಪವಿತ್ರ ಬಂಧ.. ಎರಡು ಮನಸುಗಳು.. ಮೂರು ಮುಳ್ಳುಗಳು.. ಏಳು ಪಾದಗಳು” ಎಂದು ಬರೆದುಕೊಂಡಿದ್ದಾರೆ. ಈ ಪದಗಳೇ ಹಲವು ಚರ್ಚೆಗಳನ್ನು ಹುಟ್ಟು ಹಾಕಿವೆ. ಹೊಸ ವರ್ಷದ ದಿನದಂದು ಪವಿತ್ರಾ ಕೆನ್ನೆಗೆ ಮುತ್ತಿಡುವ ಹಾಗೂ ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡು ವಿಡಿಯೋವೊಂದನ್ನು ನರೇಶ್ ಪೋಸ್ಟ್ ಮಾಡಿದ್ದರು. ಇದೀಗ ಮದುವೆಯಾದ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ.

    ಅಧಿಕೃತವಾಗಿ ರಮ್ಯಾ ಅವರೊಂದಿಗೆ ನರೇಶ್ ಡಿವೋರ್ಸ್ ಪಡೆದಿಲ್ಲ. ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯನ್ನು ಆಗುವಂತಿಲ್ಲ. ಆದರೆ, ಸಿನಿಮಾ ದೃಶ್ಯದಲ್ಲೇ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರಂತೆ ನರೇಶ್. ಇಂದು ಹಂಚಿಕೊಂಡಿರುವ ವಿಡಿಯೋ ಸಿನಿಮಾವೊಂದರ ದೃಶ್ಯವಾಗಿದ್ದರೂ, ಅಧಿಕೃತ ಮದುವೆ ಎನ್ನುವಂತೆಯೇ ಶಾಸ್ತ್ರಗಳನ್ನು ಮಾಡಲಾಗಿದೆಯಂತೆ. ಹಾಗಾಗಿ ಮುಂದೊಂದು ದಿನ ಇದು ನಿಜವಾದ ದೃಶ್ಯವಾದರೂ ಅಚ್ಚರಿ ಪಡಬೇಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

    ಪವಿತ್ರಾ ಲೋಕೇಶ್ ಮೇಲೆ ಒಲವಿರುವ ಕುರಿತು ನರೇಶ್ ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ಆರೋಪ ಕೂಡ ಮಾಡಿದ್ದರು. ಅಲ್ಲದೇ, ಹೊಸ ವರ್ಷದ ದಿನದಂದು ತಾವು ಮದುವೆ ಆಗಲಿದ್ದೇವೆ ಎಂದು ಸ್ವತಃ ನರೇಶ್ ಅವರು ವಿಡಿಯೋವೊಂದನ್ನು ಹಾಕುವ ಮೂಲಕ ಹೇಳಿದ್ದರು. ಈಗ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿ ತಲೆಗೆ ಹುಳು ಬಿಟ್ಟಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ

    ಮೂಲಗಳ ಪ್ರಕಾರ ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿಸಿದ್ದಾರಂತೆ ನಿರ್ದೇಶಕರು. ಆ ಸಿನಿಮಾದಲ್ಲಿ ಇಬ್ಬರೂ ಮದುವೆ ಆಗುವ ಸನ್ನಿವೇಶ ಕೂಡ ಇದೆಯಂತೆ. ಸದ್ಯ ಹರಿಬಿಟ್ಟಿರುವ ವಿಡಿಯೋ ಕೂಡ ಸಿನಿಮಾದ ದೃಶ್ಯವೆಂದು ಹೇಳಲಾಗುತ್ತಿದೆ.

    ನರೇಶ್ ಹಂಚಿಕೊಂಡಿರುವ ಮದುವೆ ವಿಡಿಯೋಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಗಳು ಕೂಡ ಬಂದಿವೆ. ಗೊಂದಲ ಆಗುವಂತೆ ನರೇಶ್ ಬರೆದುಕೊಂಡಿದ್ದರಿಂದ ‘ಇದು ರಿಯಲ್ ಸ್ಟೋರಿನಾ? ರೀಲ್ ಸ್ಟೋರಿನಾ?’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದು ಇಬ್ಬರೂ ಮಾಡುತ್ತಿರುವ ಹುಚ್ಚಾಟ ಎಂದೂ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅವರಿಬ್ಬರೇ ಉತ್ತರ ಕೊಡಬೇಕಿದೆ. ಮುಂದಿನ ದಿನಗಳಲ್ಲಿ ಈ ವಿಡಿಯೋ ಅಸಲಿ ಬಣ್ಣವನ್ನು ಅವರೇ ಬಯಲು ಮಾಡಬಹುದು.

  • ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ : ರೀಲ್ ನಲ್ಲಿ ರಿಯಲ್ ಸ್ಟೋರಿ

    ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ : ರೀಲ್ ನಲ್ಲಿ ರಿಯಲ್ ಸ್ಟೋರಿ

    ತೆಲುಗು ನಟ ನರೇಶ್ (Naresh) ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಇಬ್ಬರೂ ಕಲಾವಿದರು ಮದುವೆಯಾಗಿರುವ (Marriage) ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಜೀವನ ಪರ್ಯಂತ ಖುಷಿಯಾಗಿರಲು ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.

    ಪವಿತ್ರಾ ಲೋಕೇಶ್ ಮೇಲೆ ಒಲವಿರುವ ಕುರಿತು ನರೇಶ್ ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ಆರೋಪ ಕೂಡ ಮಾಡಿದ್ದರು. ಅಲ್ಲದೇ, ಹೊಸ ವರ್ಷದ ದಿನದಂದು ತಾವು ಮದುವೆ ಆಗಲಿದ್ದೇವೆ ಎಂದು ಸ್ವತಃ ನರೇಶ್ ಅವರು ವಿಡಿಯೋವೊಂದನ್ನು ಹಾಕುವ ಮೂಲಕ ಹೇಳಿದ್ದರು. ಈಗ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿ ತಲೆಗೆ ಹುಳು ಬಿಟ್ಟಿದ್ದಾರೆ.

    ಮೂಲಗಳ ಪ್ರಕಾರ ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿಸಿದ್ದಾರಂತೆ ನಿರ್ದೇಶಕರು. ಆ ಸಿನಿಮಾದಲ್ಲಿ ಇಬ್ಬರೂ ಮದುವೆ ಆಗುವ ಸನ್ನಿವೇಶ ಕೂಡ ಇದೆಯಂತೆ. ಸದ್ಯ ಹರಿಬಿಟ್ಟಿರುವ ವಿಡಿಯೋ ಕೂಡ ಸಿನಿಮಾದ ದೃಶ್ಯವೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ

    ನರೇಶ್ ಹಂಚಿಕೊಂಡಿರುವ ಮದುವೆ ವಿಡಿಯೋಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಗಳು ಕೂಡ ಬಂದಿವೆ. ಗೊಂದಲ ಆಗುವಂತೆ ನರೇಶ್ ಬರೆದುಕೊಂಡಿದ್ದರಿಂದ ‘ಇದು ರಿಯಲ್ ಸ್ಟೋರಿನಾ? ರೀಲ್ ಸ್ಟೋರಿನಾ?’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರಿಬ್ಬರೇ ಉತ್ತರ ಕೊಡಬೇಕಿದೆ. ಮುಂದಿನ ದಿನಗಳಲ್ಲಿ ಈ ವಿಡಿಯೋ ಅಸಲಿ ಬಣ್ಣವನ್ನು ಅವರೇ ಬಯಲು ಮಾಡಬಹುದು.

  • Special- ಪವಿತ್ರಾ ಲೋಕೇಶ್, ನರೇಶ್ ಲವ್ ಸ್ಟೋರಿಗೆ ಅವರೇ ನಾಯಕ-ನಾಯಕಿ

    Special- ಪವಿತ್ರಾ ಲೋಕೇಶ್, ನರೇಶ್ ಲವ್ ಸ್ಟೋರಿಗೆ ಅವರೇ ನಾಯಕ-ನಾಯಕಿ

    ತೆಲುಗಿನ ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಸಂಬಂಧದ (Love Story) ಕುರಿತು ಯಾವ ವಿಷಯವೂ ಗುಟ್ಟಾಗಿ ಉಳಿದಿಲ್ಲ. ಕೆಲವನ್ನು ನರೇಶ್ ಪತ್ನಿ ರಮ್ಯಾ ಬಿಚ್ಚಿಟ್ಟಿದ್ದರೆ, ಇನ್ನೂ ಕೆಲವನ್ನು ನರೇಶ್ ಅವರೇ ಹೇಳಿಕೊಂಡಿದ್ದಾರೆ. ಮತ್ತಷ್ಟು ವಿಷಯಗಳು ಮಾಧ್ಯಮಗಳ ಕಾರಣದಿಂದಾಗಿ ಬಹಿರಂಗಗೊಂಡಿವೆ. ಈ ಸಂಬಂಧದ ಮೇಲೆಯೇ ತೆಲುಗಿನಲ್ಲಿ ಸಿನಿಮಾ (Cinema) ಮಾಡುತ್ತಿದ್ದಾರೆ ನಿರ್ದೇಶಕ ಎಂ.ಆರ್.ರಾಜು. ಈ ಸಿನಿಮಾಗೆ ಸ್ವತಃ ಪವಿತ್ರಾ ಲೋಕೇಶ್ ಮತ್ತು ನರೇಶ್ ನಾಯಕ ಹಾಗೂ ನಾಯಕಿ ಎನ್ನಲಾಗುತ್ತಿದೆ.

    ಒಂದು ಮೂಲಗಳ ಪ್ರಕಾರ ಈಗಾಗಲೇ ಸದ್ದಿಲ್ಲದೇ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಜು. ಬಹುತೇಕ ಶೂಟಿಂಗ್ ಮುಗಿಸಿ ಸಂಕಲನದ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ.  ಹೊಸ ವರ್ಷದ ದಿನದಂದು ನರೇಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಗೆ ಮುತ್ತಿಡುವ ಮೂಲಕ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಆ ವಿಡಿಯೋ ಇದೇ ಸಿನಿಮಾದ್ದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

    ಈ ಸಿನಿಮಾದಲ್ಲಿ ನರೇಶ್ ಬದುಕು, ಎರಡನೇ ಪತ್ನಿ ರಮ್ಯಾ ಜೊತೆಗಿನ ಮದುವೆ. ಅದಕ್ಕೂ ಮೊದಲಿನ ಮದುವೆ ಹಾಗೂ ಪವಿತ್ರಾ ಲೋಕೇಶ್ ತಮ್ಮ ಬಾಳಿನಲ್ಲಿ ಬಂದದ್ದು ಹೇಗೆ? ಹೀಗೆ ಎಲ್ಲ ಸಂಗತಿಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರಂತೆ. ಸದ್ಯದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಹೊಂದಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಸುದ್ದಿ ಬಿಸಿ ಬಿಸಿ ದೋಸೆಯಂತೆಯೂ ಖರ್ಚಾಗುತ್ತಿದೆ.

    ಈ ಸಿನಿಮಾ ಬಗ್ಗೆ ನಿರ್ದೇಶಕರಾಗಲಿ ಅಥವಾ ನರೇಶ್ ಮತ್ತು ಪವಿತ್ರಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಿನಿಮಾ ಸಿದ್ಧವಾಗಿದ್ದು ಸತ್ಯ ಎನ್ನುತ್ತಾರೆ ಅವರ ಆಪ್ತರು. ಆ ವಿಡಿಯೋ ತುಣುಕನ್ನೇ ಅವರು ಹೊಸ ವರ್ಷದ ದಿನದಂದು ಹಂಚಿಕೊಂಡಿದ್ದು ಎಂದೂ ಹೇಳುತ್ತಾರೆ. ತಮ್ಮ ಪ್ರೇಮವನ್ನು ನರೇಶ್ ಸಾಬೀತು ಪಡಿಸುತ್ತಾ ಬಂದರೂ, ಪವಿತ್ರಾ ಮಾತ್ರ ಅಧಿಕೃತವಾಗಿ ಈವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಾಗಿ ಸಿನಿಮಾ ಬಗ್ಗೆ ಕುತೂಹಲವಂತೂ ಮೂಡಿದೆ.

  • ಈ ವಾರ ಸಿನಿ ಸುನಾಮಿ : ಹನ್ನೊಂದು ಚಿತ್ರಗಳು ಬಿಡುಗಡೆ

    ಈ ವಾರ ಸಿನಿ ಸುನಾಮಿ : ಹನ್ನೊಂದು ಚಿತ್ರಗಳು ಬಿಡುಗಡೆ

    ಸ್ಯಾಂಡಲ್ ವುಡ್ ನಲ್ಲಿ ಈ ವಾರ ಬರೋಬ್ಬರಿ ಹನ್ನೊಂದು ಚಿತ್ರಗಳು (Movie) ಬಿಡುಗಡೆ (Release) ಆಗುತ್ತಿವೆ. ಈ ಮೂಲಕ ನೋಡುಗನನ್ನೇ ಚಿತ್ರಗಳು ಬೆಚ್ಚಿ ಬೀಳಿಸಿವೆ. ಇತ್ತೀಚಿನ ದಿನಗಳಲ್ಲಿ ವಾರಕ್ಕೆ ನಾಲ್ಕೈದು ಚಿತ್ರಗಳು ರಿಲೀಸ್ ಆಗುವುದು ಸಾಮಾನ್ಯವಾಗಿತ್ತು. ಆದರೆ, ಈ ವಾರ ಹನ್ನೊಂದು ಚಿತ್ರಗಳು ರಿಲೀಸ್ ಆಗುವ ಮೂಲಕ ನಿರ್ಮಾಪಕರಲ್ಲಿ ಆತಂಕ ಮೂಡಿಸಿವೆ. ಕನ್ನಡದ ಹನ್ನೊಂದು ಚಿತ್ರಗಳ ಜೊತೆ ತೆಲುಗು, ತಮಿಳು ಮತ್ತು ಮಲಯಾಳಂ ಹಾಗೂ ಹಿಂದಿ ಚಿತ್ರಗಳು ಕೂಡ ಥಿಯೇಟರ್ ನಲ್ಲಿವೆ. ಹೀಗಾಗಿ ಕನ್ನಡದ ಪ್ರೇಕ್ಷಕ ಗೊಂದಲದಲ್ಲಿದ್ದಾನೆ.

    ಈ ವರ್ಷ ಶುರುವಾಗಿ ಇನ್ನೂ ಎರಡು ತಿಂಗಳು ಪೂರ್ತಿಯಾಗಿಲ್ಲ. ಆಗಲೇ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಐವತ್ತರ ಸಮೀಪವಿದೆ. ಈವರೆಗೂ ಕನ್ನಡದಲ್ಲೇ 47 ಚಿತ್ರಗಳು ಬಿಡುಗಡೆ ಆಗಿವೆ. ಈ ವಾರ ಸೌತ್ ಇಂಡಿಯನ್ ಹೀರೋ, ಸಂಭ್ರಮ, ಪಲಾರ್, ಜ್ಯೂಲಿಯಟ್ 2, ಹೊಟ್ಟೆಪಾಡು, ಗೌಳಿ, ಕ್ಯಾಂಪಸ್ ಕ್ರಾಂತಿ, ಅಸ್ತಿರ, ಅಂತರಂಗ, ಆರ್ಟಿಕಲ್ 370 ಮತ್ತು 1975 ಚಿತ್ರಗಳು ತೆರೆಗೆ ಬರುತ್ತಿವೆ. ಇದನ್ನೂ ಓದಿ: ‘ಪೆಂಟಗನ್’ ಸಿನಿಮಾದ 3ನೇ ಕಥೆಯ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್

    ಬಹುತೇಕ ಚಿತ್ರಗಳು ಹೊಸಬರದ್ದೇ ಆದರೂ, ಹೊಸ ಮತ್ತು ವಿಭಿನ್ನ ರೀತಿಯ ಕಾರಣಗಳಿಂದಾಗಿ ಕೆಲ ಚಿತ್ರಗಳು ಗಮನ ಸೆಳೆದಿವೆ. ಬಹುವರ್ಷಗಳ ನಂತರ ಶ್ರೀನಗರ ಕಿಟ್ಟಿ (Srinagar Kitty) ನಟನೆಯ ಚಿತ್ರ ತೆರೆ ಕಾಣುತ್ತಿದೆ. ಅಲ್ಲದೇ, ಈಗಾಗಲೇ ಫಸ್ಟ್ ರಾಂಕ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನರೇಶ್ (Naresh) ನಿರ್ದೇಶನದ ಮತ್ತೊಂದು ಚಿತ್ರ ತೆರೆ ಕಾಣುತ್ತಿದೆ. ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಪಲಾರ್ ಚಿತ್ರ ಕೂಡ ಈ ವಾರ ಬೆಳ್ಳಿತೆರೆಯಲ್ಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪವಿತ್ರಾ ಲೋಕೇಶ್ ಗೆಳೆತನ : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನರೇಶ್

    ಪವಿತ್ರಾ ಲೋಕೇಶ್ ಗೆಳೆತನ : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನರೇಶ್

    ನ್ನಡದ ನಟಿ ಪವಿತ್ರಾ ಲೋಕೇಶ್ (Pavithra Lokesh) ವಿಷಯದಲ್ಲಿ ಮತ್ತೆ ಗರಂ ಆಗಿದ್ದಾರೆ ತೆಲುಗು ನಟ ನರೇಶ್ (Naresh). ‘ನಾವಿಬ್ಬರೂ ಏನಾದರೂ ಮಾಡ್ಕೊಳ್ತಿವಿ. ಅದನ್ನು ಕೇಳೋಕೆ ನೀವ್ಯಾರು?’ ಎಂದು ಸಾರ್ವಜನಿಕವಾಗಿಯೇ ಪ್ರಶ್ನೆ ಮಾಡಿದ್ದು, ತಮ್ಮ ಮತ್ತು ಪವಿತ್ರಾ ಲೋಕೇಶ್ ಸಂಬಂಧಕ್ಕೆ ಚ್ಯುತಿ ತರುತ್ತಿರುವವರ ಬಗ್ಗೆ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಕಾನೂನು ಮೂಲಕವೇ ಅವರಿಗೆಲ್ಲ ಉತ್ತರ ಕೊಡುವುದಾಗಿ ಅಬ್ಬರಿಸಿದ್ದಾರೆ.

    ಪವಿತ್ರಾ ಲೋಕೇಶ್ ಮತ್ತು ನರೇಶ್ ಬಗ್ಗೆ ಕೆಲವರು ರಸವತ್ತಾಗಿ ಕಥೆಗಳನ್ನು ಕಟ್ಟಿ ಹೇಳುತ್ತಿದ್ದಾರಂತೆ. ಕೆಟ್ಟದ್ದಾಗಿ ಟ್ರೋಲ್ ಮಾಡುತ್ತಿದ್ದಾರಂತೆ. ಅಲ್ಲದೇ, ಕೆಲವರು ಸುಳ್ಳು ಸುದ್ದಿಗಳನ್ನೂ ಪ್ರಕಟಿಸುತ್ತಿದ್ದಾರೆ. ಇದರಿಂದ ಬೇಸತ್ತು ಹೋಗಿರುವ ನರೇಶ್, ತಮ್ಮ ಮಾನಹಾನಿ ಮಾಡುವವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಅವರ ವಿರುದ್ಧ ದೂರು (complaint) ಕೂಡ ನೀಡಿದ್ದಾರೆ.

    ನರೇಶ್ ಅವರ ಮಲ ತಂದೆ ಕೃಷ್ಣ ನಿಧನರಾದಾಗ ಪವಿತ್ರಾ ಮತ್ತು ನರೇಶ್ ದೂರದಿಂದ ಮಾಡಿದ ಕಣ್ ಸನ್ನೆಗಳು ಸಖತ್ ಟ್ರೋಲ್ ಆಗಿದ್ದವು. ತಂದೆಯ ಶವದ ಮುಂದೆ ಆ ರೀತಿಯಲ್ಲಿ ನಡೆದುಕೊಂಡಿದ್ದಕ್ಕಾಗಿ ಪವಿತ್ರಾ ಲೋಕೇಶ್ ಮೇಲೆ ಕೃಷ್ಣ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಿತ್ತು. ಇದು ನರೇಶ್ ಕೋಪಕ್ಕೂ ಕಾರಣವಾಗಿತ್ತು. ಪವಿತ್ರಾ ಮೇಲೆ ಅವರ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಲು ಕಾರಣ ಟ್ರೋಲ್ ಪೇಜ್ ಗಳು ಎನ್ನುವುದೇ ಈಗಿನ ದೂರಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ನರೇಶ್ ಅವರ ಮಾನಹಾನಿ ಮಾಡುವುದಕ್ಕಾಗಿಯೇ ಕೆಲವರು ನೇಮಕವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ಯಾರು ಕುಮ್ಮಕ್ಕು ಕೊಡುತ್ತಿದ್ದಾರೆ ಎನ್ನುವುದು ನರೇಶ್ ಅವರಿಗೆ ಗೊತ್ತಿದೆಯಂತೆ. ಹಾಗಾಗಿ ಸಾಕ್ಷಿ ಸಮೇತವಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ನರೇಶ್.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಮ್ಯಾಗೆ ಕ್ರಿಮಿನಲ್ ಜೊತೆ ಲಿಂಕ್ ಇದೆ : ಮಾಧ್ಯಮಗೋಷ್ಠಿಯಲ್ಲಿ ಬಾಂಬ್ ಸಿಡಿಸಿದ ನಟ ನರೇಶ್

    ರಮ್ಯಾಗೆ ಕ್ರಿಮಿನಲ್ ಜೊತೆ ಲಿಂಕ್ ಇದೆ : ಮಾಧ್ಯಮಗೋಷ್ಠಿಯಲ್ಲಿ ಬಾಂಬ್ ಸಿಡಿಸಿದ ನಟ ನರೇಶ್

    ತೆಲುಗಿನ (Tollywood) ಖ್ಯಾತ ನಟ ನರೇಶ್ (Naresh) ಮತ್ತು ಅವರ ಪತ್ನಿ ರಮ್ಯಾ (Ramya Raghupathi) ರಗಳೆ ಮುಗಿಯುವಂತೆ ಕಾಣುತ್ತಿಲ್ಲ. ಪತ್ನಿಯಿಂದ ತಮಗೆ ಕಿರುಕುಳ ಆಗುತ್ತಿದೆ. ಬೇಗ ಡಿವೋರ್ಸ್ ಕೊಡಿ ಎಂದು ಮೊನ್ನೆಯಷ್ಟೇ ನಟ ನರೇಶ್ ಕೋರ್ಟ್ ಗೆ ಮೊರೆ ಹೋಗಿದ್ದರು. ಇದೀಗ ನಿನ್ನೆ ಪತ್ರಿಕಾಗೋಷ್ಠಿ ಮಾಡಿ, ರಮ್ಯಾ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದಾರೆ. ರಮ್ಯಾರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳುವುದರ ಜೊತೆಗೆ ಆಕೆಗೆ ಕ್ರಿಮಿನಲ್ ಜೊತೆ ಒಡನಾಟ ಇರುವುದಾಗಿ ಮಾತನಾಡಿದ್ದಾರೆ.

    ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ನರೇಶ್, ‘ಜೀವನದಲ್ಲಿ ನನಗೆ ಬೇಸರವಾಗಿ ಸನ್ಯಾಸತ್ವ ತಗೆದುಕೊಳ್ಳಬೇಕು ಎಂದು ಹೊರಟಾಗ ಭೇಟಿಯಾದವರು ರಮ್ಯಾ. ತಮಗೆ ಶುಗರ್ ಇದೆ, ನನ್ನಂಥವಳನ್ನು ಯಾರು ಮದುವೆ ಆಗುತ್ತಾರೆ ಎಂದು ಕಣ್ಣೀರಿಟ್ಟಳು. ಅಲ್ಲದೇ, ನನ್ನ ತಾಯಿಯು ಕೂಡ ಆಕೆಯ ಬಗ್ಗೆ ಒಲವು ತೋರಿದ್ದರಿಂದ ಮದುವೆಯಾದೆ. ಆನಂತರದ ರಮ್ಯಾನೇ ಬೇರೆ ಇದ್ದಳು. ಕಂಠಪೂರ್ತಿ ಕುಡಿದು ಬರುತ್ತಿದ್ದಳು. ಗಲಾಟೆ ಮಾಡುತ್ತಿದ್ದಳು’ ಎಂದೆಲ್ಲ ಆರೋಪಿಸಿದ್ದಾರೆ. ಇದನ್ನೂ ಓದಿ: ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

    ಮುಂದುವರೆದು ಮಾತನಾಡಿದ ಅವರು, ‘ಆಕೆ ಮಾಡಿದ ಎಲ್ಲ ರಂಪಾಟವನ್ನೂ ಸಹಿಸಿಕೊಂಡು ಬಂದೆ. ಬ್ಯುಸಿನೆಸ್ ಮಾಡುತ್ತೇನೆ ಅಂದ್ಳು. ಅದಕ್ಕೂ ಸಪೋರ್ಟ್ ಮಾಡಿದೆ. ಬ್ಯುಸಿನೆಸ್ ಹೆಸರಲ್ಲಿ ಓಡಾಡೋಕೆ ಶುರು ಮಾಡಿದಳು. ಹದಿನೈದು ದಿನ ಮಾತ್ರ ಮನೆಯಲ್ಲಿ ಇರುತ್ತಿದ್ದಳು. ಹೇಳ್ತಾ ಹೋದರೆ ತುಂಬಾನೇ ಇದೆ. ಹೀಗಾಗಿ ರಮ್ಯಾ ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ನಾನೂ ಹೇಳಬೇಕಾಗಿದ್ದು ತುಂಬಾ ಇದೆ. ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಎಚ್ಚರಿಕೆಯನ್ನೂ ನರೇಶ್ ಕೊಟ್ಟಿದ್ದಾರೆ.

    ರಮ್ಯಾ ಅವರು ಕ್ರಿಮಿನಲ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದೂ ನರೇಶ್ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಅನ್ನು ಟ್ರ್ಯಾಪ್ ಮಾಡಿಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ನಾನು ಯಾರ ಜೊತೆ ಬೇಕಾದರೂ ಇರುತ್ತೇನೆ. ಅದು ನನ್ನ ಸ್ವಾತಂತ್ರ್ಯ. ಆದರೆ, ತೊಂದರೆ ಮಾಡುವುದನ್ನು ನಾನು ಸಹಿಸಲ್ಲ. ಪವಿತ್ರಾಳ ಮೇಲೆ ಸ್ಟ್ರಿಂಗ್ ಆಪರೇಷನ್ ಮಾಡಿಸ್ತೀಯಾ, ಇದೇ ರೀತಿ ಮುಂದುವರೆದರೆ ಬೇರೆ ರೀತಿಯಲ್ಲೇ ನಾನು ಉತ್ತರ ಕೊಡುತ್ತೇನೆ’ ಎಂದು ನರೇಶ್ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 10 ಕೋಟಿ ಸೆಟಲ್ ಮೆಂಟ್ ಗೆ ಬೇಡಿಕೆ ಇಟ್ಟಿದ್ದಾರೆ ರಮ್ಯಾ : ನರೇಶ್ ಆರೋಪ

    10 ಕೋಟಿ ಸೆಟಲ್ ಮೆಂಟ್ ಗೆ ಬೇಡಿಕೆ ಇಟ್ಟಿದ್ದಾರೆ ರಮ್ಯಾ : ನರೇಶ್ ಆರೋಪ

    ಮ್ಮಿಂದ ವಿಚ್ಚೇದನ ಪಡೆಯುವುದಕ್ಕಾಗಿ ಪತ್ನಿ ರಮ್ಯಾ ಬರೋಬ್ಬರಿ 10 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ನಟ ನರೇಶ್ ಆರೋಪ ಮಾಡಿದ್ದಾರೆ. ತಮ್ಮ ಸಂಬಂಧಿಕರೊಬ್ಬರ ಮೂಲಕ ರಮ್ಯಾ ಈ ಬೇಡಿಕೆ ಇಟ್ಟಿದ್ದು, ಅವರು ರಾಜಕಾರಣಿಯೂ ಆಗಿರುವುದರಿಂದ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ದುಡ್ಡಿಗಾಗಿ ಈ ಎಲ್ಲ ರಾದ್ದಾಂತಗಳು ನಡೆಯುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

    ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ ಗಲಾಟೆ ಬೂದಿ ಮುಚ್ಚಿದ ಕೆಂಡದಂತೆ ಆಗಾಗ್ಗೆ ನಿಗಿನಿಗಿಸುತ್ತದೆ. ಈವರೆಗೂ ಸುಮ್ಮನೆ ಇದ್ದ ನರೇಶ್, ಇದೀಗ ಏಕಾಏಕಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಹೆಂಡತಿ ವಿಪರೀತಿ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಲ್ಲಲ್ಲು ಹಲವರು ನನ್ನ ಮನೆ ಸುತ್ತ ತಿರುಗುತ್ತಾರೆ. ರಮ್ಯಾಯಿಂದ ಆಗಿ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿ ಎಂದು ಅವರು ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ರಮ್ಯಾ ಮತ್ತು ನರೇಶ್ ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ನರೇಶ್ ವಿಚ್ಚೇದನೆ ಕೊಡಲು ಒಪ್ಪಿದರೂ, ರಮ್ಯಾ ನಿರಾಕರಿಸುತ್ತಿ‍ದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ಮತ್ತೆ ತಾವು ನರೇಶ್ ಜೊತೆ ಬದುಕು ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗಲು ನರೇಶ್ ನನ್ನು ಬಿಡುವುದಿಲ್ಲ ಎಂದು ಮಾಧ್ಯಮಗಳ ಮುಂದೆಯೂ ಹೇಳಿಕೊಂಡಿದ್ದಾರೆ. ಡಿವೋರ್ಸ್ ಕೇಸ್ ಜಟಿಲವಾಗುತ್ತಿದ್ದಂತೆಯೇ ಮತ್ತೆ ನರೇಶ್ ಕೋರ್ಟ್ ಮುಂದೆ ನಿಂತಿದ್ದಾರೆ.

    ರಮ್ಯಾ ಈಗಾಗಲೇ ನರೇಶ್ ಮನೆ ಸೇರಿದ್ದಾರೆ. ಅದೇ ಮನೆಯಲ್ಲೇ ವಾಸ ಮಾಡುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ದೂರ ಆಗುವ ಪ್ರಶ್ನೆಯೇ ಇಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ಈ ಹಠವೇ ನರೇಶ್ ಗೆ ನುಂಗಲಾರದ ತುಪ್ಪವಾಗಿದೆ. ರಮ್ಯಾ ಅವರಿಂದ ದೂರವಾಗಿ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಅವರು ಹೊಸ ವರ್ಷದಂದು ಪವಿತ್ರಾಗೆ ಮುತ್ತು ಕೊಟ್ಟಿದ್ದ ವಿಡಿಯೋವನ್ನು ರಿಲೀಸ್ ಮಾಡಿದ್ದರು ಎಂದು ಹೇಳಲಾಗಿತ್ತು.

    ಈ ನಡೆಗೆ ವಿರೋಧವನ್ನೂ ವ್ಯಕ್ತ ಪಡಿಸಿದ್ದ ರಮ್ಯಾ, ಈ ವಿಡಿಯೋ ಆಚೆ ಬಂದ ನಂತರ ಮತ್ತಷ್ಟು ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರನ್ನೂ ಸುಖವಾಗಿ ಇರುವುದಕ್ಕೆ ಬಿಡುವುದಿಲ್ಲ ಎಂದು ಅವರು ಶಪಥ ಮಾಡಿದ್ದಾರೆ. ಹಾಗಾಗಿಯೇ ಸೀದಾ ನರೇಶ್ ಮನೆಗೆ ಬಂದು ರಮ್ಯಾ ಠಿಕಾಣಿ ಹೂಡಿದ್ದಾರೆ. ರಮ್ಯಾ ಮನೆಗೆ ಬರುತ್ತಿದ್ದಂತೆಯೇ ನರೇಶ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಮ್ಯಾ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದ ನಟ ನರೇಶ್

    ರಮ್ಯಾ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದ ನಟ ನರೇಶ್

    ತೆಲುಗು ನಟ ನರೇಶ್ (Naresh) ಮತ್ತು ಪತ್ನಿ ರಮ್ಯಾ ರಘುಪತಿ (Ramya Raghupathi) ಗಲಾಟೆ ಬೂದಿ ಮುಚ್ಚಿದ ಕೆಂಡದಂತೆ ಆಗಾಗ್ಗೆ ನಿಗಿನಿಗಿಸುತ್ತದೆ. ಈವರೆಗೂ ಸುಮ್ಮನೆ ಇದ್ದ ನರೇಶ್, ಇದೀಗ ಏಕಾಏಕಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಹೆಂಡತಿ ವಿಪರೀತ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಲ್ಲಲ್ಲು ಹಲವರು ನನ್ನ ಮನೆ ಸುತ್ತ ತಿರುಗುತ್ತಾರೆ. ರಮ್ಯಾಳಿಂದ ಆಗಿ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿ ಎಂದು ಅವರು ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.

    ರಮ್ಯಾ ಮತ್ತು ನರೇಶ್ ಡಿವೋರ್ಸ್ (Divorced) ಕೇಸ್ ಕೋರ್ಟಿನಲ್ಲಿದೆ. ನರೇಶ್ ವಿಚ್ಚೇದನ ಕೊಡಲು ಒಪ್ಪಿದರೂ, ರಮ್ಯಾ ನಿರಾಕರಿಸುತ್ತಿ‍ದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ಮತ್ತೆ ತಾವು ನರೇಶ್ ಜೊತೆ ಬದುಕು ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗಲು ನರೇಶ್ ನನ್ನು ಬಿಡುವುದಿಲ್ಲ ಎಂದು ಮಾಧ್ಯಮಗಳ ಮುಂದೆಯೂ ಹೇಳಿಕೊಂಡಿದ್ದಾರೆ. ಡಿವೋರ್ಸ್ ಕೇಸ್ ಜಟಿಲವಾಗುತ್ತಿದ್ದಂತೆಯೇ ಮತ್ತೆ ನರೇಶ್ ಕೋರ್ಟ್ ಮುಂದೆ ನಿಂತಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ರಮ್ಯಾ ಈಗಾಗಲೇ ನರೇಶ್ ಮನೆ ಸೇರಿದ್ದಾರೆ. ಅದೇ ಮನೆಯಲ್ಲೇ ವಾಸ ಮಾಡುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ದೂರ ಆಗುವ ಪ್ರಶ್ನೆಯೇ ಇಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ಈ ಹಠವೇ ನರೇಶ್ ಗೆ ನುಂಗಲಾರದ ತುಪ್ಪವಾಗಿದೆ. ರಮ್ಯಾ ಅವರಿಂದ ದೂರವಾಗಿ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಅವರು ಹೊಸ ವರ್ಷದಂದು ಪವಿತ್ರಾಗೆ ಮುತ್ತು ಕೊಟ್ಟಿದ್ದ ವಿಡಿಯೋವನ್ನು ರಿಲೀಸ್ ಮಾಡಿದ್ದರು ಎಂದು ಹೇಳಲಾಗಿತ್ತು.

    ಈ ನಡೆಗೆ ವಿರೋಧವನ್ನೂ ವ್ಯಕ್ತ ಪಡಿಸಿದ್ದ ರಮ್ಯಾ, ಈ ವಿಡಿಯೋ ಆಚೆ ಬಂದ ನಂತರ ಮತ್ತಷ್ಟು ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರನ್ನೂ ಸುಖವಾಗಿ ಇರುವುದಕ್ಕೆ ಬಿಡುವುದಿಲ್ಲ ಎಂದು ಅವರು ಶಪಥ ಮಾಡಿದ್ದಾರೆ. ಹಾಗಾಗಿಯೇ ಸೀದಾ ನರೇಶ್ ಮನೆಗೆ ಬಂದು ರಮ್ಯಾ ಠಿಕಾಣಿ ಹೂಡಿದ್ದಾರೆ. ರಮ್ಯಾ ಮನೆಗೆ ಬರುತ್ತಿದ್ದಂತೆಯೇ ನರೇಶ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k