Tag: naresh

  • ಥಾಯ್ಲೆಂಡ್ ನಲ್ಲಿ ಕಾಣಿಸಿಕೊಂಡ ಪವಿತ್ರಾ ಲೋಕೇಶ್-ನರೇಶ್

    ಥಾಯ್ಲೆಂಡ್ ನಲ್ಲಿ ಕಾಣಿಸಿಕೊಂಡ ಪವಿತ್ರಾ ಲೋಕೇಶ್-ನರೇಶ್

    ತೆಲುಗಿನ ಖ್ಯಾತ ಹಿರಿಯ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಥಾಯ್ಲೆಂಡ್ (Thailand)ಗೆ ಹಾರಿದ್ದಾರೆ. ವಿದೇಶದಲ್ಲಿ ಎಂಜಾಯ್ ಮಾಡ್ತಿರೋ ಫೋಟೋವನ್ನು ಸ್ವತಃ ಲೋಕೇಶ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದು ಐವತ್ತು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ತಮಗೆ ಸಹಾಯಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದ್ದಾರೆ.

    ಸಹಜೀವನದಲ್ಲಿದ್ದೇವೆ

    ನರೇಶ್ (Naresh) ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ನಡುವಿನ ಸಂಬಂಧವೇನು ಎನ್ನುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪರೋಕ್ಷವಾಗಿ ಅವರಿಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವಂತೆ ತೋರಿಸುತ್ತಲೇ ಬಂದರು. ಈ ಹಿಂದೆಯಷ್ಟೇ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್ ಶಿಪ್ (Live in relationship) ಅನ್ನು ಮದುವೆಗೆ ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಅಂದ್ಕೊಳ್ಳಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದುಕೊಂಡೇ ಹೇಳಿದ್ದರು.

    ಮದುವೆಯ (Marriage) ಕುರಿತಾಗಿಯೂ ಮಾತನಾಡಿದ ಅವರು, ‘ಬಹುಪತ್ನಿತ್ವ ತಪ್ಪು ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ ಬಲವಂತವಾಗಿ ಯಾರೊಂದಿಗೂ ಬದುಕುವುದಕ್ಕೆ ಆಗುವುದಿಲ್ಲ. ಸಮಾಜಕ್ಕೆ ಹೆದರಿ ತುಂಬಾ ಜನ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ಯಾರೂ ಸುಖವಾಗಿ ಇಲ್ಲ. ಕಿರುಕುಳದ ನಡುವೆಯೂ ಬದುಕು ನಡೆಸುವುದು ನನ್ನ ಮಟ್ಟಿಗೆ ತಪ್ಪು’ ಎಂದಿದ್ದರು ನರೇಶ್.

    ಮುಂದುವರೆದು ಮಾತನಾಡಿದ್ದ ನರೇಶ್, ‘ತುಂಬಾ ಜನರು ನನಗೆ ಮದುವೆ ಆಗಿದ್ದೀರಾ ಎಂದು ಕೇಳುತ್ತಾರೆ. ಮದುವೆ ಅಂದರೆ ಏನು? ಉಂಗುರು ಬದಲಾಯಿಸಿಕೊಳ್ಳುವುದಾ ಅಥವಾ ತಾಳಿ ಕಟ್ಟುವುದಾ? ಇದೆಲ್ಲವೂ ಸಂಪ್ರದಾಯವಷ್ಟೇ. ಒಟ್ಟಿಗೆ ಖುಷಿಯಾಗಿ ಇರುವುದೇ ಮದುವೆ. ನಾವಿಬ್ಬರೂ ಆ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇಬ್ಬರೂ ನೆಮ್ಮದಿಯಾಗಿ ಇದ್ದೇವೆ’ ಎಂದಿದ್ದರು.

  • ರಮ್ಯಾ ರಘುಪತಿಗೆ ಕೋರ್ಟ್ ಶಾಕ್: ನಟ ನರೇಶ್ ಪ್ರತಿಕ್ರಿಯೆ ಏನು?

    ರಮ್ಯಾ ರಘುಪತಿಗೆ ಕೋರ್ಟ್ ಶಾಕ್: ನಟ ನರೇಶ್ ಪ್ರತಿಕ್ರಿಯೆ ಏನು?

    ಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಟನೆಯ ‘ಮತ್ತೆ ಮದುವೆ’ ಚಿತ್ರದ ಬಗ್ಗೆ ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಆ ಸಿನಿಮಾದಲ್ಲಿ ತಮ್ಮ ಮಾನಹಾನಿ ಮಾಡುವಂತಹ ಅಂಶಗಳು ಇವೆ. ಹಾಗಾಗಿ ಓಟಿಟಿಯಲ್ಲಿರುವ ಚಿತ್ರವನ್ನು ತೆಗೆದು ಹಾಕಬೇಕು ಎಂದು ರಮ್ಯಾ ಅರ್ಜಿ ಸಲ್ಲಿಸಿದ್ದರು. ಈ ವಿಷಯದಲ್ಲಿ ನರೇಶ್ ಪರ ತೀರ್ಪು ಬಂದಿತ್ತು. ಅಲ್ಲದೇ, ರಮ್ಯಾ ಅವರು ನಮ್ಮ ಮನೆಗೆ ಬಂದು ತೊಂದರೆ ನೀಡುತ್ತಿದ್ದಾರೆ. ಅವರು ಮನೆಗೆ ಬಾರದಂತೆ ನಿರ್ದೇಶನ ನೀಡಬೇಕು ಎಂದು ನರೇಶ್ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಇದರಲ್ಲೂ ನರೇಶ್ ಗೆ ಜಯ ಸಿಕ್ಕಿತ್ತು.

    ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ನರೇಶ್, ‘ನ್ಯಾಯಕ್ಕೆ ಜಯ ಸಿಕ್ಕಿದೆ. ರಮ್ಯಾ ಜೊತೆಗಿನ ಡಿವೋರ್ಸ್ ಗೆ ಈ ತೀರ್ಪು ಸಹಾಯಕ್ಕೆ ಬರುತ್ತದೆ. ಆದಷ್ಟು ಬೇಗ ಆಕೆಯಿಂದ ದೂರವಾಗಿ ಪವಿತ್ರಾ ಅವರ ಜೊತೆ ನೆಮ್ಮದಿಯಾಗಿ ಬದುಕುವೆ. ರಮ್ಯಾ ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ಸಾಲಗಾರರು ಮನೆಗೆ ಬರುತ್ತಿದ್ದರು. ಹಾಗಾಗಿ ನಮ್ಮ ಕುಟುಂಬ ಕೋರ್ಟಿಗೆ ಅರ್ಜಿ ಸಲ್ಲಿಸಬೇಕಾಯಿತು ಎಂದಿದ್ದಾರೆ.

    ಏನಿದು ಪ್ರಕರಣ?

    ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ (Naresh) ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಸಿನಿಮಾ ಮಾಡಿದ್ದಾರೆ. ಅದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಈ ಹಿಂದೆ ಸಿನಿಮಾ (Matte Maduve ) ರಿಲೀಸ್ ವೇಳೆಯೂ ರಮ್ಯಾ ಇದೇ ರೀತಿಯಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದರು. ಸಿನಿಮಾದ ಕಥೆಯು ತಮ್ಮ ಜೀವನದ ಅನೇಕ ಘಟನೆಗಳನ್ನು ಹೋಲುತ್ತದೆ. ಹಾಗಾಗಿ ಚಿತ್ರವು ರಿಲೀಸ್ ಆಗಬಾರದು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು. ಆಗಲೂ ಕೂಡ ರಮ್ಯಾಗೆ (Ramya Raghupathi) ಹಿನ್ನೆಡೆಯಾಗಿತ್ತು. ಸಿನಿಮಾದಲ್ಲಿ ಕಾಲ್ಪನಿಕ ಕಥೆಯಂದು ಹಾಕಲಾಗಿದೆ. ಸೆನ್ಸಾರ್ ಮಂಡಳಿ ಕೂಡ ಅದಕ್ಕೆ ಒಪ್ಪಿ ಪತ್ರ ಕೊಟ್ಟಿದೆ ಎಂದು ಕೋರ್ಟ್ (Court) ಅಭಿಪ್ರಾಯ ಪಟ್ಟಿತ್ತು.

    ಜೂನ್ 23 ರಿಂದ ಮತ್ತೆ ಮದುವೆ ಸಿನಿಮಾ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು.

    ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

    ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ನರೇಶ್-ರಮ್ಯಾ ಡಿವೋರ್ಸ್: ನ್ಯಾಯಾಲಯ ಹೇಳಿದ್ದೇನು?

    ನಟ ನರೇಶ್-ರಮ್ಯಾ ಡಿವೋರ್ಸ್: ನ್ಯಾಯಾಲಯ ಹೇಳಿದ್ದೇನು?

    ತೆಲುಗಿನ ನಟ ನರೇಶ್ (Naresh) ಮತ್ತು ಬೆಂಗಳೂರಿನ ರಮ್ಯಾ ರಘುಪತಿ (Ramya Raghupathi) ಡಿವೋರ್ಸ್ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು (Court) ‘ಕಳೆದ ಆರು ವರ್ಷಗಳಿಂದ ರಮ್ಯಾ ಮತ್ತು ನರೇಶ್ ಪರಸ್ಪರ ಪ್ರತ್ಯೇಕವಾಗಿಯೇ ವಾಸಿಸುತ್ತಿರುವ ಕಾರಣದಿಂದಾಗಿ ಮದುವೆ ಅನೂರ್ಜಿತಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ. ಹೀಗಾಗಿ ಅತೀ ಶೀಘ್ರದಲ್ಲೇ ನರೇಶ್ ಮತ್ತು ರಮ್ಯಾ ಅಧಿಕೃತವಾಗಿ ದೂರವಾಗಲಿದ್ದಾರೆ.

    ಈ ಅರ್ಜಿಯ ಜೊತೆಗೆ ನರೇಶ್ ಮತ್ತು ಕುಟುಂಬದವರು ರಮ್ಯಾ ತಮ್ಮ ನಿವಾಸಕ್ಕೆ ಅಧಿಕೃತವಾಗಿ ಪ್ರವೇಶ ಮಾಡುವುದನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೂ ಆದೇಶ ಹೊರಡಿಸಿದ್ದು ನರೇಶ್ ಅವರ ನಿವಾಸವನ್ನು ಪ್ರವೇಶಿಸುವುದಕ್ಕೆ ರಮ್ಯಾ ಅವರಿಗೆ ಕೋರ್ಟ್ ನಿರ್ಬಂಧ ಹೇರಿದೆ.

    ಸಿನಿಮಾ ವಿಷ್ಯದಲ್ಲೂ ರಮ್ಯಾಗೆ ಶಾಕ್

    ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಸಿನಿಮಾ ಮಾಡಿದ್ದಾರೆ. ಅದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಈ ಹಿಂದೆ ಸಿನಿಮಾ ರಿಲೀಸ್ ವೇಳೆಯೂ ರಮ್ಯಾ ಇದೇ ರೀತಿಯಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದರು. ಸಿನಿಮಾದ ಕಥೆಯು ತಮ್ಮ ಜೀವನದ ಅನೇಕ ಘಟನೆಗಳನ್ನು ಹೋಲುತ್ತದೆ. ಹಾಗಾಗಿ ಚಿತ್ರವು ರಿಲೀಸ್ ಆಗಬಾರದು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು. ಆಗಲೂ ಕೂಡ ರಮ್ಯಾಗೆ ಹಿನ್ನೆಡೆಯಾಗಿತ್ತು. ಸಿನಿಮಾದಲ್ಲಿ ಕಾಲ್ಪನಿಕ ಕಥೆಯಂದು ಹಾಕಲಾಗಿದೆ. ಸೆನ್ಸಾರ್ ಮಂಡಳಿ ಕೂಡ ಅದಕ್ಕೆ ಒಪ್ಪಿ ಪತ್ರ ಕೊಟ್ಟಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತ್ತು.

    ಜೂನ್ 23 ರಿಂದ ಮತ್ತೆ ಮದುವೆ ಸಿನಿಮಾ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು.

    ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

    ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

    ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪವಿತ್ರಾ ಲೋಕೇಶ್-ನರೇಶ್ ಮತ್ತೆ ಮದುವೆ: ಪತ್ನಿ ರಮ್ಯಾಗೆ ಬಿಗ್ ಶಾಕ್ ನೀಡಿದ ಕೋರ್ಟ್

    ಪವಿತ್ರಾ ಲೋಕೇಶ್-ನರೇಶ್ ಮತ್ತೆ ಮದುವೆ: ಪತ್ನಿ ರಮ್ಯಾಗೆ ಬಿಗ್ ಶಾಕ್ ನೀಡಿದ ಕೋರ್ಟ್

    ಮ್ಮ ಜೀವನದ ಕಥೆಯನ್ನೇ ಪತಿ ನರೇಶ್ (Naresh) ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಸಿನಿಮಾ ಮಾಡಿದ್ದಾರೆ. ಅದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಈ ಹಿಂದೆ ಸಿನಿಮಾ (Matte Maduve ) ರಿಲೀಸ್ ವೇಳೆಯೂ ರಮ್ಯಾ ಇದೇ ರೀತಿಯಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದರು. ಸಿನಿಮಾದ ಕಥೆಯು ತಮ್ಮ ಜೀವನದ ಅನೇಕ ಘಟನೆಗಳನ್ನು ಹೋಲುತ್ತದೆ. ಹಾಗಾಗಿ ಚಿತ್ರವು ರಿಲೀಸ್ ಆಗಬಾರದು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು. ಆಗಲೂ ಕೂಡ ರಮ್ಯಾಗೆ (Ramya Raghupathi) ಹಿನ್ನೆಡೆಯಾಗಿತ್ತು. ಸಿನಿಮಾದಲ್ಲಿ ಕಾಲ್ಪನಿಕ ಕಥೆಯಂದು ಹಾಕಲಾಗಿದೆ. ಸೆನ್ಸಾರ್ ಮಂಡಳಿ ಕೂಡ ಅದಕ್ಕೆ ಒಪ್ಪಿ ಪತ್ರ ಕೊಟ್ಟಿದೆ ಎಂದು ಕೋರ್ಟ್ (Court) ಅಭಿಪ್ರಾಯ ಪಟ್ಟಿತ್ತು.

    ಜೂನ್ 23 ರಿಂದ ಮತ್ತೆ ಮದುವೆ ಸಿನಿಮಾ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಇದನ್ನೂ ಓದಿ:ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

    ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

    ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ನರೇಶ್-ಪವಿತ್ರಾಗೆ ಶಾಕ್ : ಗನ್ ಲೈಸೆನ್ಸ್ ಕೇಳಿದ ನಟ

    ನಟ ನರೇಶ್-ಪವಿತ್ರಾಗೆ ಶಾಕ್ : ಗನ್ ಲೈಸೆನ್ಸ್ ಕೇಳಿದ ನಟ

    ತೆಲುಗಿನ ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಒಟ್ಟಾಗಿ ನಟಿಸಿದ್ದ ಮತ್ತೆ ಮದುವೆಗೆ ಬ್ರೇಕ್ ಬಿದ್ದಿದೆ. ಮೊನ್ನೆಯಷ್ಟೇ ಈ ಸಿನಿಮಾ ಪ್ರೈಮ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ದಿಢೀರ್ ಅಂತ ನಾಪತ್ತೆಯಾಗಿದೆ. ಈ ನಡುವೆಯೇ ನರೇಶ್ ತಮ್ಮ ಆತ್ಮ ರಕ್ಷಣೆಗಾಗಿ ಗನ್ (Gun) ಲೈಸೆನ್ಸ್ ನೀಡುವಂತೆ ಅರ್ಜಿ ಹಾಕಿಕೊಂಡಿದ್ದಾರೆ.

    ತನ್ನನ್ನೇ ಗುರಿಯಾಗಿರಿಸಿಕೊಂಡು ಮತ್ತೆ ಮದುವೆ ಸಿನಿಮಾ ಮಾಡಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ಕೋರ್ಟ್ ಮೆಟ್ಟಿಲು ಏರಿದ್ದರು. ತನ್ನ ಸಂಸಾರದ ಬಗ್ಗೆ ಅವಹೇಳನ ಮಾಡುವಂತಹ ದೃಶ್ಯಗಳನ್ನು ಅದರಲ್ಲಿ ಹಾಕಿದ್ದಾರೆ ಎಂದು ರಮ್ಯಾ ಮಾತನಾಡಿದ್ದರು. ಈ ಸಿನಿಮಾ ಬಿಡುಗಡೆ ಆಗದಂತೆ ತಡೆಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಮಾನ್ಯವಾಗಿರಲಿಲ್ಲ.

    ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆಯೇ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದ ರಮ್ಯಾ, ಓಟಿಟಿಯಿಂದ ಆ ಸಿನಿಮಾವನ್ನು ತೆಗೆದುಹಾಕುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಓಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾವನ್ನು ತೆಗೆದುಹಾಕಲಾಗಿದೆ. ಈ ಮೂಲಕ ನರೇಶ್ ಅವರಿಗೆ ಹಿನ್ನೆಡೆಯಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

    ಇತ್ತ ಥಿಯೇಟರ್ ನಲ್ಲೂ ಸಿನಿಮಾ ಓಡಲಿಲ್ಲ. ಅಂದುಕೊಂಡಷ್ಟು ಕಾಸೂ ಮಾಡಲಿಲ್ಲ. ಹಲವಾರು ಕೋಟಿ ಖರ್ಚು ಮಾಡಿ ತಯಾರಿಸಿದ್ದ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ತೆಲುಗು ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ರಿಲೀಸ್ ಮಾಡಿದ್ದರೂ, ಎರಡೂ ಭಾಷೆಗಳ ಪ್ರೇಕ್ಷಕರು ಸಿನಿಮಾ ನೋಡಲಿಲ್ಲ. ಹಾಗಾಗಿ ನರೇಶ್ ಅವರಿಗೆ ಭಾರೀ ಪೆಟ್ಟು ಬಿದ್ದಿತ್ತು.

    ಸಿನಿಮಾ ಸೋತ ನೋವು ಒಂದು ಕಡೆಯಾದರೆ, ರಮ್ಯಾ ಅವರು ನಿರಂತರ ಬೆನ್ನುಬಿದ್ದಿದ್ದಾರೆ. ಹಾಗಾಗಿ ತಮಗೆ ಭಯದ ವಾತಾವರಣ ಕಾಡುತ್ತಿದೆ ಎನ್ನುವುದು ನರೇಶ್ ವಾದ. ಹೀಗಾಗಿಯೇ ತಮಗೆ ಜೀವ ಬೆದರಿಕೆಯಿದೆ ಎಂದೂ, ಆತ್ಮರಕ್ಷಣೆಗಾಗಿ ಗನ್ ಪರವಾನಿಗೆ ನೀಡುವಂತೆ ಶ್ರೀಸತ್ಯಸಾಯಿ ಜಿಲ್ಲಾ ಎಸ್ಪಿ ಮಾಧವರೆಡ್ಡಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ತಾವು ನಕ್ಸಲ್ಸ್ ಹಿಟ್ ಲಿಸ್ಟ್ ನಲ್ಲಿ ಇದ್ದೆ ಎನ್ನುವುದನ್ನು ನೆನಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದಿನಿಂದ ಓಟಿಟಿಯಲ್ಲೂ ನೋಡಬಹುದು ಪವಿತ್ರಾ-ನರೇಶ್ ‘ಮತ್ತೆ ಮದುವೆ’

    ಇಂದಿನಿಂದ ಓಟಿಟಿಯಲ್ಲೂ ನೋಡಬಹುದು ಪವಿತ್ರಾ-ನರೇಶ್ ‘ಮತ್ತೆ ಮದುವೆ’

    ತೆಲುಗಿನ ನಟ ನರೇಶ್ ಕೃಷ್ಣ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅಭಿನಯದ ‘ಮತ್ತೆ ಮದುವೆ’ (Matte Maduve) ಸಿನಿಮಾ ಒಟಿಟಿ ಎಂಟ್ರಿ ಆಗಿದೆ. ಇಂದಿನಿಂದ (ಜೂ.23) ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು.

    ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.  ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

    ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಇಂದಿನಿಂದ ಅಮೇಜಾನ್ ನಲ್ಲಿ ನೋಡಬಹುದು.

  • ಒಟಿಟಿಗೆ ಲಗ್ಗೆ ಇಟ್ಟ ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’

    ಒಟಿಟಿಗೆ ಲಗ್ಗೆ ಇಟ್ಟ ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’

    ತೆಲುಗಿನ ನಟ ನರೇಶ್ ಕೃಷ್ಣ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅಭಿನಯದ ‘ಮತ್ತೆ ಮದುವೆ’ ಸಿನಿಮಾ ಒಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 23ಕ್ಕೆ ಪ್ರತಿಷ್ಠಿತ ಒಟಿಟಿ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗಲಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು.

    ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

    ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

  • ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ನ್ನಡತಿ, ಬಹುಭಾಷಾ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರು ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪವಿತ್ರಾ ಲೋಕೇಶ್ ಅವರು ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ (Phd) ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಲೋಕೇಶ್ ಅರ್ಜಿ ಸಲ್ಲಿಸಿದ್ದಾರೆ.

    ‘ಮಳ್ಳಿ ಪೆಳ್ಳಿ’ (Malli Pelli) ಸಿನಿಮಾ, ವೈಯಕ್ತಿಕ ಜೀವನ ವಿವಾದದ ನಡುವೆ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆಯಲು ಹಂಪಿಯ ವಿದ್ಯಾನಗರಕ್ಕೆ ಆಗಮಿಸಿದ ಪವಿತ್ರಾ ಲೋಕೇಶ್‌ಗೆ ನರೇಶ್ ಬಾಬು (Naresh Babu) ಸಾಥ್ ನೀಡಿದ್ದರು. ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಬೆಳಗಾವಿ (Belaghavi) ವಿಸ್ತರಣಾ ಕೇಂದ್ರದ ಮೂಲಕ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಂಶೋಧನೆಗೆ ಪವಿತ್ರ ಲೋಕೇಶ್ ಮುಂದಾಗಿದ್ದಾರೆ. ಇದನ್ನೂ ಓದಿ:ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್‌ ನೀಡಿ ಸ್ವಾಗತಿಸಿದ ಡಾಲಿ

    ಸದ್ಯ ‘ಮಳ್ಳಿ ಪೆಳ್ಳಿ’ ಚಿತ್ರದಲ್ಲಿ ನರೇಶ್ ಜೊತೆಯಾಗಿ ನಟಿಸಿರುವ ಪವಿತ್ರಾ ಲೋಕೇಶ್ ಅವರು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕನ್ನಡ ಸಾಹಿತ್ಯದತ್ತ ತೊಡಗಿಕೊಳ್ಳಲಿದ್ದಾರಾ? ಇದರ ನಡುವೆ ನಟನೆಯಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರಾ? ಅನ್ನೋ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

  • ಮಕ್ಕಳು ಮಾಡ್ಕೋತೀರಾ? : ನರೇಶ್-ಪವಿತ್ರಾ ಲೋಕೇಶ್ ಖಡಕ್ ಉತ್ತರ

    ಮಕ್ಕಳು ಮಾಡ್ಕೋತೀರಾ? : ನರೇಶ್-ಪವಿತ್ರಾ ಲೋಕೇಶ್ ಖಡಕ್ ಉತ್ತರ

    ನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಮತ್ತು ಸತಿ ಪತಿಗಳಂತೆಯೇ ಬದುಕುತ್ತಿರುವ ವಿಷಯವನ್ನು ಮೊನ್ನೆಯಷ್ಟೇ ಬಹಿರಂಗ ಪಡಿಸಿದ್ದಾರೆ. ಹಾಗಾಗಿ ತೆಲುಗಿನ ಮಾಧ್ಯಮವೊಂದು ಈ ಇಬ್ಬರಿಗೂ ಮಕ್ಕಳು (Children) ಹೊಂದುವ ಕುರಿತು ಪ್ರಶ್ನೆ ಮಾಡಿದೆ. ಮೊದ ಮೊದಲ ಈ ಪ್ರಶ್ನೆಗೆ ಉತ್ತರಿಸಲು ಮೀನಾಮೇಷ ಎಣಿಸುವ ಈ ಜೋಡಿ ಆ ನಂತರ ಖಡಕ್ ಆಗಿ ಉತ್ತರ ನೀಡಿದೆ.

    ಈಗಾಗಲೇ ಪವಿತ್ರಾ ಲೋಕೇಶ್ ಅವರಿಗೆ ಎರಡು ಮಕ್ಕಳಿವೆ. ನರೇಶ್ ಅವರಿಗೆ ಒಂದು ಮಗು ಇದೆ ಎಂದು ಹೇಳಲಾಗುತ್ತಿದೆ. ಆದರೂ, ನರೇಶ್ ಮತ್ತು ಪವಿತ್ರಾ ಜೋಡಿ ಮಗು ಹೊಂದಲು ಆಲೋಚನೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿದ್ದು ಸಹಜ. ಈ ಪ್ರಶ್ನೆಗೆ ಉತ್ತರಿಸಿರುವ ನರೇಶ್, ‘ದೈಹಿಕವಾಗಿ ಮಗು ಮಾಡಿಕೊಳ್ಳುವಂತಹ ಸಾಮರ್ಥ್ಯ ಇಬ್ಬರಿಗೂ ಇದೆ. ಆದರೆ, ಮಗು ಹೊಂದುವುದೇ ಜೀವನವಲ್ಲ. ನಮಗಾಗಿ ಈಗಾಗಲೇ ಮಕ್ಕಳು ಕಾದಿವೆ’ ಎಂದು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಮಗುವಿನ ವಿಚಾರವನ್ನು ಮಾತನಾಡಲು ಮೊದ ಮೊದಲು ಪವಿತ್ರಾ ಲೋಕೇಶ್ ನಿರಾಕರಿಸಿದರೂ ನಂತರ, ‘ಈಗಾಗಲೇ ಸಮಾಜದಲ್ಲಿ ತಂದೆ ತಾಯಿ ಇಲ್ಲದ ಸಾಕಷ್ಟು ಮಕ್ಕಳಿವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಪಡೆಯುವ ಮೂಲಕ ಸಮಾಜಕ್ಕೆ ಸಂದೇಶ ನೀಡುವುದರಲ್ಲಿ ಏನಿದೆ? ನಾವು ಜೋಡಿಯಾಗಿ ಮಾಡುವ ಕೆಲಸ ಸಾಕಷ್ಟಿವೆ. ಅವುಗಳನ್ನು ಮಾಡುತ್ತೇವೆ’ ಎಂದಿದ್ದಾರೆ.

    ರಿಲೇಷನ್ ಶಿಪ್, ಮದುವೆ (Marriage), ಜೀವನ ಎಲ್ಲದರ ಬಗ್ಗೆಯೂ ಮಾಧ್ಯಮಗಳ ಮುಂದೆ ಇಬ್ಬರೂ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಮಕ್ಕಳನ್ನು ಮಾಡಿಕೊಳ್ಳುವಂತಹ ಯೋಚನೆ ಇಲ್ಲವೆಂದೂ ಹೇಳಿಕೊಂಡಿದ್ದಾರೆ. ಈಗೇನಾದರೂ ಮಕ್ಕಳನ್ನು ಹೊಂದಿದರೆ, ಅವರು 20 ವರ್ಷಕ್ಕೆ ಕಾಲಿಡುವಾಗ ನಾವು 60 ದಾಟಿರುತ್ತೇವೆ ಎಂದೂ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.

  • ಮತ್ತೆ ಮದುವೆಗೆ 10 ಕೋಟಿ ಸಂಭಾವನೆ ಪಡೆದ ಪವಿತ್ರಾ ಲೋಕೇಶ್

    ಮತ್ತೆ ಮದುವೆಗೆ 10 ಕೋಟಿ ಸಂಭಾವನೆ ಪಡೆದ ಪವಿತ್ರಾ ಲೋಕೇಶ್

    ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ಕಾಂಬಿನೇಷನ್ ನ ಮಳ್ಳಿ ಪೆಳ್ಳಿ ಸಿನಿಮಾ ರಿಲೀಸ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಸಿನಿಮಾಗಾಗಿ ಪವಿತ್ರಾ ಲೋಕೇಶ್ ಪಡೆದಿದ್ದಾರೆ ಎನ್ನಲಾದ ಸಂಭಾವನೆ ಮಾತ್ರ ಬಲು ಜೋರಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾಗಾಗಿ ಅವರು ಈವರೆಗೂ ಪಡೆಯದೇ ಇರುವಂತಹ ದುಬಾರಿ ಸಂಭಾವನೆ (Salary) ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಸಾಮಾನ್ಯವಾಗಿ ಪವಿತ್ರಾ ಲೋಕೇಶ್ ಒಂದು ದಿನಕ್ಕೆ 50 ರಿಂದ 60 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಆದರೆ, ಮಳ್ಳಿ ಪೆಳ್ಳಿ ಚಿತ್ರಕ್ಕಾಗಿ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದು ನಿಜವೇ ಆಗಿದ್ದರೆ, ಈ ಚಿತ್ರಕ್ಕಾಗಿ ಅವರು ಎಷ್ಟು ದಿನ ಕೆಲಸ ಮಾಡಿರಬಹುದು ಮತ್ತು ದಿನಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

    ಈಗಾಗಲೇ ಅವರೇ ಘೋಷಣೆ ಮಾಡಿಕೊಂಡಂತೆ ಇಬ್ಬರೂ ಸಹಜೀವನ ನಡೆಸುತ್ತಿದ್ದಾರಂತೆ. ಒಂದು ರೀತಿಯಲ್ಲಿ ಗಂಡ ಹೆಂಡತಿ ರೀತಿಯಲ್ಲೇ ಬದುಕುತ್ತಿದ್ದಾರಂತೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸ್ವತಃ ನರೇಶ್ (Naresh) ಅವರೆ. ಹಾಗಾಗಿ ಈ ಪ್ರಮಾಣದಲ್ಲಿ ಸಂಭಾವನೆ ಹರಿದು ಬಂತಾ ಎನ್ನುವುದಕ್ಕೆ ಯಾವುದೇ ಉತ್ತರವಿಲ್ಲ.

    ರಿಲೇಷನ್ ಶಿಪ್, ಮದುವೆ, ಜೀವನ ಎಲ್ಲದರ ಬಗ್ಗೆಯೂ ಮಾಧ್ಯಮಗಳ ಮುಂದೆ ಇಬ್ಬರೂ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಮಕ್ಕಳನ್ನು ಮಾಡಿಕೊಳ್ಳುವಂತಹ ಯೋಚನೆ ಇಲ್ಲವೆಂದೂ ಮಾತನಾಡಿದ್ದಾರೆ. ಆದರೆ, ಸಂಭಾವನೆ ವಿಚಾರ ಈವರೆಗೂ ಇಬ್ಬರೂ ಹೇಳಿಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.