Tag: narendra

  • ಕಾಣೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

    ಧಾರವಾಡ: ಕಾಣೆಯಾಗಿದ್ದ ಬಾಲಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ (Dharawada) ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ನರೇಂದ್ರ (Naredra) ಗ್ರಾಮದ ಮೈಲಾರ ಹುಲಮನಿ (12) ಶವವಾಗಿ ಪತ್ತೆಯಾದ ಬಾಲಕ. ಮಂಗಳವಾರ ಮೈಲಾರ ಮನೆಯಿಂದ ಬಾಲಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ಸಹ ನಡೆಸಲಾಗಿತ್ತು. ಆದರೆ, ಇಂದು (ಗುರುವಾರ) ಬೆಳಗಿನಜಾವ ಬಾಲಕ ಮೈಲಾರ, ನರೇಂದ್ರ ಗ್ರಾಮದ ದ್ಯಾಮಡ್ಡಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ: ಶಿವರಾಜ್ ತಂಗಡಗಿ ಘೋಷಣೆ

    ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಬಾಲಕನ ಶವವನ್ನು ಹೊರತೆಗೆದು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ

  • ಮೂಡಿಗೆರೆ ಹಾಲಿ ಶಾಸಕನಿಗೆ ಟಿಕೆಟ್ ಇಲ್ಲ – ಗ್ರಂಥಪಾಲಕ ಬಿಜೆಪಿ ಅಭ್ಯರ್ಥಿ?

    ಮೂಡಿಗೆರೆ ಹಾಲಿ ಶಾಸಕನಿಗೆ ಟಿಕೆಟ್ ಇಲ್ಲ – ಗ್ರಂಥಪಾಲಕ ಬಿಜೆಪಿ ಅಭ್ಯರ್ಥಿ?

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರದ (Mudigere Assembly Constituency) ಬಿಜೆಪಿ ಅಭ್ಯರ್ಥಿಯಾಗಲು ನಗರದ ಐಡಿಎಸ್‌ಜಿ ಕಾಲೇಜಿನ ಗ್ರಂಥಪಾಲಕ ಶೀಘ್ರವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದಾರೆ.

    ಆರ್‌ಎಸ್‌ಎಸ್‌ (RSS) ಕಟ್ಟಾಳು ನರೇಂದ್ರ (Narendra) ಅವರೇ ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಎಂದು ಬಿಂಬಿತವಾಗಿದೆ. ಹಾಗಾಗಿ ಆರ್‌ಆರ್‌ಎಸ್‌ ಈಗಾಗಲೇ ಅವರನ್ನು ಸಂಘದ ಎಲ್ಲಾ ಹುದ್ದೆಯಿಂದ ಮುಕ್ತಿಗೊಳಿಸಿದೆ.

    ಟಿಕೆಟ್ ಘೋಷಣೆಯಾದ ಕೂಡಲೇ ಗ್ರಂಥಪಾಲಕರ ಹುದ್ದೆಗೂ ನರೇಂದ್ರ ರಾಜೀನಾಮೆ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ. ಮೂಡಿಗೆರೆಯಲ್ಲಿ ಮೂರು ಬಾರಿ ಶಾಸಕರಾಗಿರುವ ಎಂ.ಪಿ.ಕುಮಾರಸ್ವಾಮಿ ಹಾಲಿ ಶಾಸಕರಾಗಿದ್ದಾರೆ. ಆದರೂ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಲು ಮುಂದಾಗಿದೆ. ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ (MP Kumaraswamy) ಪಕ್ಷದೊಳಗೆ ತೀವ್ರ ವಿರೋಧ ಇರುವುದರಿಂದ ಬಿಜೆಪಿ ಗುಜರಾತ್ ಮಾದರಿಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಲು ಚಿಂತಿಸಿದೆ.

    ಗುಜರಾತ್ ಮಾಡೆಲ್ (Gujarat Model) ಜಾರಿಯಾಗಿದ್ದೇ ಆದಲ್ಲಿ ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೂಡಿಗೆರೆಯಲ್ಲಿ ಹಾಲಿ ಐದಾರು ಜನ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ನರೇಂದ್ರ ಹೆಸರು ಅಚ್ಚರಿ ಎಂಬಂತೆ ಹೊರಬಿದ್ದಿದೆ. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

    ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನರೇಂದ್ರ ಅವರಿಗೆ ಕ್ಷೇತ್ರದಲ್ಲಿ ಓಡಾಡುವಂತೆ ಸೂಚಿಸಿದ್ದು, ಸಂಘದ ಎಲ್ಲಾ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕೂಡ ಹಲವು ಬಾರಿ ಕುಮಾರಸ್ವಾಮಿ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್-ಜೆಡಿಎಸ್ ಸೇರುತ್ತಾರೆಂಬ ಊಹಾಪೋಹಗಳು ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಯಾಗಿದ್ದವು. ಕ್ಷೇತ್ರದಲ್ಲಿ ಬಿಜೆಪಿಗರೇ ಶಾಸಕ ಕುಮಾರಸ್ವಾಮಿಯನ್ನು ಒಪ್ಪಲು ಸುತಾರಾಂ ಸಿದ್ಧರಿಲ್ಲ. ಹಾಗಾಗಿ ಮೀಸಲು ಕ್ಷೇತ್ರ ಹಾಗೂ ಹಿಂದುತ್ವದ ಬೆಲ್ಟ್ ಆಗಿರುವ ಮಲೆನಾಡಲ್ಲಿ ಗೆಲ್ಲುವ ಕುದುರೆಗೆ ಬಿಜೆಪಿ ಮಣೆ ಹಾಕಲು ಮುಂದಾಗಿದೆ.

    ಹಲವು ದಶಕಗಳಿಂದ ಸಂಘದ ಕಾರ್ಯಕರ್ತರಾಗಿರುವ ನರೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸಲು ಎಲ್ಲಾ ಸಿದ್ಧತೆ ನಡೆಸಿದೆ. ಟಿಕೆಟ್ ಘೋಷಣೆಯಾದ ಕೂಡಲೇ ನರೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಆದರೆ ದೀಪಕ್ ದೊಡ್ಡಯ್ಯ, ವಿಜಯ್‍ಕುಮಾರ್ ಹಾಗೂ ವಿಭಾ ಸುಷ್ಮಾ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಸಂಘವೇ ನರೇಂದ್ರ ಅವರಿಗೆ ಕ್ಷೇತ್ರದಲ್ಲಿ ಓಡಾಡಲು ಸೂಚಿಸಿರುವುದರಿಂದ ಉಳಿದವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

    ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

    – ಗ್ರಾಮಸ್ಥರಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ
    – ಬೆಂಗಳೂರಿಂದ ಬಂದವರು ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ

    ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕೆ ಗ್ರಾಮಗಳೇ ಕ್ರಮ ಕೈಗೊಳ್ಳುತ್ತಿದ್ದು, ಹೊರ ರಾಜ್ಯ, ಜಿಲ್ಲೆಗಳಿಂದ ಯಾರಾದರೂ ಗ್ರಾಮಕ್ಕೆ ಬಂದರೆ ಭಾರೀ ಪ್ರಮಾಣದ ದಂಡ ವಿಧಿಸುವುದಾಗಿ ಎಚ್ಚರಿಗೆ ನೀಡಿವೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗ್ರಾಮ ಹಾಗೂ ಪುಣಜನೂರಿನ ಮೂಕನಪಾಳ್ಯದ ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ. ಕೇರಳ, ಕೊರೊನಾ ಹಾಟ್ ಸ್ಪಾಟ್ ತಮಿಳುನಾಡು, ರಾಜ್ಯದ ಬೆಂಗಳೂರು, ಮೈಸೂರಿನಿಂದ ಗ್ರಾಮಕ್ಕೆ ಯಾರಾದರೂ ಬಂದರೆ 10 ಸಾವಿರ ರೂ ದಂಡ, ಬಂದವರನ್ನು ಹಿಡಿದು ಕೊಟ್ಟರೆ 2 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ವ್ಯಕ್ತಿ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಜಾಗೃತಿ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಭೆ ಕರೆಯುವ ಮೂಲಕ ಜನರೇ ಕೊರೊನಾ ಹೊಡೆದೊಡಿಸಲು ಸಾಕಷ್ಟು ಜಾಗೃತಿ ವಹಿಸಿತ್ತಿದ್ದಾರೆ.

    ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ
    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಈಗ ಬೆಂಗಳೂರಿನಿಂದ ಸಾಕಷ್ಟು ಜನ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹವರಿಗೆ ಶಾಸಕ ನರೇಂದ್ರ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಶಾಸಕರು, ಬೆಂಗಳೂರಿನಿಂದ ಜಿಲ್ಲೆಗೆ 3800ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಇವರೆಲ್ಲ ಕಡ್ಡಾಯವಾಗಿ ಖುದ್ದಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ತಪಾಸಣೆಗೆ ಒಳಗಾಗದೆ ಅಣ್ಣ, ತಮ್ಮ, ಸಂಬಂಧಿ ಬಚ್ಚಿಡುವ ಪ್ರಯತ್ನ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಜರುಗಿಸಲಾಗುವುದು. ಯುವಕರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಡಿ. ಇದರಿಂದ ಕೊರೊನಾ ಆತಂಕ ಹೆಚ್ಚಾಗಬಹುದು. ಈಗಾಗಲೇ ಕ್ರಿಕೆಟ್ ಆಡಿದ ಒಬ್ಬ ಯುವಕನಿಗೆ ಕೊರೊನಾ ಬಂದಿದ್ದು, ಇದರಿಂದ 30 ರಿಂದ 40 ಮಂದಿಗೆ ಕೊರೊನಾ ಆತಂಕ ಎದುರಾಗಿದೆ ಎಂದು ಸಲಹೆ ನೀಡಿದ್ದಾರೆ.

    ಚಾಮರಾಜನಗರದ ಹಲವೆಡೆ ಮಾರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾರೂ ಮಾರಿಹಬ್ಬ, ಜಾತ್ರೆ ಮಾಡ್ಬೇಡಿ ಇದರಿಂದ ರೋಗ ಉಲ್ಬಣ ಆಗುತ್ತೆದೆ. ಬೆಂಗಳೂರಿನಿಂದ ಬಂದ ಯುವಕರು ಕೆಲಸಕ್ಕೆ ಹೋಗ್ತಿಲ್ಲ, ಜನರನ್ನು ಗುಂಪುಗೂಡಿಸಿ ಜೂಜಾಟವಾಡುತ್ತಿದ್ದಾರೆ. ಇದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ನಾನು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.

    ಮಾದಪ್ಪನ ಸನ್ನಿದಿಯಲ್ಲಷ್ಟೇ ತಪಾಸಣೆ ನಡೀತಿದೆ, ಬರುವ ಭಕ್ತಾದಿಗಳು ಬೆಟ್ಟದಲ್ಲಿ ಓಡಾಡಿ ನಂತರ ದರ್ಶನಕ್ಕೆ ಹೋಗ್ತಾರೆ, ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಇದೆ. ಇಂದಿನಿಂದಲೇ ಮಾದಪ್ಪನ ತಾಳಬೆಟ್ಟದಲ್ಲಿ ತಪಾಸಣೆ ಆರಂಭಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟಿದ್ದೇನೆ. ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಬ್ಬರ ತಪಾಸಣೆ ನಡೆಸಿ ರೋಗ ಲಕ್ಷಣವಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

  • ಹಾಸನದಲ್ಲಿ ಕೊಹ್ಲಿಗಾಗಿ ಕಾಯ್ತಿದೆ ಚಿನ್ನದ ಮೈಕ್ರೋ ವಿಶ್ವಕಪ್

    ಹಾಸನದಲ್ಲಿ ಕೊಹ್ಲಿಗಾಗಿ ಕಾಯ್ತಿದೆ ಚಿನ್ನದ ಮೈಕ್ರೋ ವಿಶ್ವಕಪ್

    ಹಾಸನ: ವಿಶ್ವದೆಲ್ಲೆಡೆ ಈಗ ಕ್ರಿಕೆಟ್ ಜ್ವರ. ಇಂಗ್ಲೆಂಡ್‍ನಲ್ಲಿ ಇಂದು ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಮ್ಮ ದೇಶ ಗೆದ್ದು ಬೃಹತ್ ಕಪ್ಪನ್ನು ಆಟಗಾರರು ಎತ್ತಿಹಿಡಿಯಬೇಕು ಎಂಬುದು ಪ್ರತಿಯೊಬ್ಬ ಭಾರತೀಯರ ಆಶಯವಾಗಿದೆ. ಭಾರತ ಅಲ್ಲಿ ಗೆದ್ದು ಬರಲಿ, ಗೆದ್ದು ಅಲ್ಲಿ ವಿಶ್ವಕಪ್ ಎತ್ತಿ ಹಿಡಿದಲ್ಲಿ ಹಾಸನದಲ್ಲಿಯೂ ಕೂಡ ಅವರಿಗಾಗಿ ಒಂದು ಮಿನಿ ವಿಶ್ವಕಪ್ ಕಾಯುತ್ತಿದೆ.

    ಹೌದು. ಕಾಲು ಇಂಚು ಎತ್ತರವಿರುವ ಇನ್ನೂರು ಮಿಲಿ ತೂಕದ ಚೋಟಾ ಚಿನ್ನದ ವಿಶ್ವಕಪ್. ಹಾಸನದ ಕ್ರಿಕೆಟ್ ಪ್ರೇಮಿಯೊಬ್ಬರು ತಮ್ಮ ಕೈಚಳಕದಿಂದ ಈ ಮೈಕ್ರೋ ವಿಶ್ವಕಪ್ ಮಾಡಿದ್ದಾರೆ. ಹಾಸಸನ ನಗರದ ಹೊಸಲೈನ್ ರಸ್ತೆ ನಿವಾಸಿ ನರೇಂದ್ರ ತಮ್ಮ ಕೈಚಳಕದಿಂದ ಈ ರೀತಿ ವಿಶ್ವಕಪ್‍ನ ತದ್ರೂಪಿ ಮೈಕ್ರೋ ವಿಶ್ವಕಪ್ ತಯಾರಿಸಿದ್ದಾರೆ.

    ಮೂಲತಃ ವಿಶ್ವಕರ್ಮರಾದ ನರೇಂದ್ರರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಈ ಹಿಂದೆಯೂ ಕೂಡ ಕಳೆದ ವಿಶ್ವಕಪ್‍ನಲ್ಲಿ ಬೆಳ್ಳಿಯ ವಿಶ್ವಕಪ್ ಮಾಡಿದ್ದ ನರೆಂದ್ರ ಅವರು ಈ ಬಾರಿ ಚಿನ್ನದ ಮೈಕ್ರೋ ವಿಶ್ವಕಪ್ ತಮ್ಮ ಕೈಯಾರೆ ಮಾಡಿದ್ದಾರೆ. ಅತೀ ಸಣ್ಣ ಕರಕುಶಲ ಕೆಲಸ ಮಾಡಿರುವ ನರೇಂದ್ರರವರ ಈ ಕೆಲಸಕ್ಕೆ ಪತ್ನಿಯ ಶಹಬ್ಬಾಸ್‍ಗಿರಿ ಕೂಡ ಸಿಕ್ಕಿದೆ.

    ಅಂದ ಹಾಗೆ ಇಂಗ್ಲೆಂಡ್‍ನಲ್ಲಿ ಭಾರತ- ಪಾಕಿಸ್ತಾನ ನಡವಿನ ಪಂದ್ಯದಲ್ಲಿ ಭಾರತ ವಿಶ್ವ ಕಪ್ ಗೆದ್ದು ಕಪ್ಪನ್ನು ಎತ್ತಿ ಹಿಡದರೆ ಈ ಮೈಕ್ರೋ ವಿಶ್ವಕಪ್ ಅನ್ನು ಕೂಡ ನಮ್ಮ ತಂಡದ ನಾಯಕ ವಿರಾಟ್ ಕೋಹ್ಲಿಗೆ ನೀಡುತ್ತೇನೆ ಎಂದು ನರೇಂದ್ರ ತಮ್ಮ ಮನದಾಳದ ಮಾತು ಆಡಿದ್ದಾರೆ.