Tag: Narega works

  • ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ: ಈಶ್ವರಪ್ಪ

    ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ: ಈಶ್ವರಪ್ಪ

    ಚಿಕ್ಕೋಡಿ: ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ. ಸಿಇಒ ಕಡೆಯಿಂದ ವರದಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.

    ಚಿಕ್ಕೋಡಿ ಪಟ್ಟಣದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಜಲಪ್ರವಾಹದ ಕುರಿತು ರಿಪೋರ್ಟ್ ತರಸಿಕೊಳ್ಳುತ್ತಿದ್ದೇನೆ. ಆ ರಿಪೋರ್ಟ್ ಬಂದ ಕೂಡಲೇ ಪರಿಹಾರದ ಕುರಿತು ಸಿಎಂ ಜೊತೆಗೆ ಚರ್ಚೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

    ಆನಂದ್ ಸಿಂಗ್ ರಾಜೀನಾಮೆ ಕೊಡ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗ ಸಚಿವ ಸಂಪುಟ ಹೊಸದಾಗಿ ಆಗಿದೆ. ಈ ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್ ನಿಂದ ಬಂದವರು ಕಾರಣ ಅವರ ಋಣ ನಾವು ತಿರಿಸಬೇಕು. ಅವರು ಬರಲಿಲ್ಲ ಅಂದ್ರೇ ಈ ಸರ್ಕಾರ ಬರ್ತಿರಲಿಲ್ಲ. ಅಷ್ಟು ಜನರಿಗೆ ಮಂತ್ರಿ ಸ್ಥಾನ ಕೊಟ್ಟು ಉಳಿದಿದ್ರಲ್ಲಿ ನಾವು ಹಂಚಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಬ್ರೂ ಇಬ್ರೂ ಸಮಸ್ಯೆ ಇದೆ ಅದನ್ನ ಮುಖ್ಯಮಂತ್ರಿ ಬಗೆ ಹರಿಸುತ್ತಾರೆ. ಇದ್ರಲ್ಲಿ ಆನಂದ್ ಸಿಂಗ್ ಅವರ ಸಮಸ್ಯೆ ಕೂಡ ಪರಿಹಾರ ಆಗುತ್ತೆ ಎಂದು ಹೇಳಿದರು.

    ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಗ್ಪುರನಲ್ಲಿ ಟ್ರೈನಿಂಗ್ ಕೊಟ್ಟಿದ್ದಕ್ಕೆ ಆ ಪದ ನನ್ನ ಬಾಯಲ್ಲಿ ಬರಬಾರದಿತ್ತು ಅಂತಾ ಹೇಳಿದ್ದೇನೆ. ಆದ್ರೇ ಹರಿಪ್ರಸಾದ್ ನನಗೆ ಜೋಕರ್ ಅಂದ್ರೂ, ಪ್ರಧಾನಿ ಮೋದಿಗೆ ಸುಲಭ ಶೌಚಾಲಯಕ್ಕಿಡಬೇಕು ಅಂದ್ರೂ ಇದನ್ನ ಕಾಂಗ್ರೆಸ್‍ನವರು ಒಪ್ಪುವುದಾದ್ರೇ ಸರಿ. ಇಲ್ಲ ಅಂದ್ರೇ ಇಟಲಿ ಯೂನಿವರ್ಸಿಟಿಯಲ್ಲಿ ಅವರಿಗೆ ಕೊಟ್ಟ ಟ್ರೇನಿಂಗ್ ನಿಂದ ಕ್ಷಮೆ ಕೇಳಲ್ಲಾ ಅನ್ಕೊತ್ತೀನಿ. ಕಾಂಗ್ರೆಸ್‍ನವರು ಪ್ರತಿಭಟನೆ ಮಾಡಲಿ ಬಿಡಿ, ಬೇಡ ಅಂದವರು ಯಾರು? ಕೆಟ್ಟು ಕನಸು ಬೀಳ್ತಿರುವುದು ಸಿದ್ದರಾಮಯ್ಯನವರಿಗೆ, ನನಗೆ ಕನಸು ಬೀಳುತ್ತಿಲ್ಲ ಎಂದು ಹೇಳಿದರು.

  • ನರೇಗ ಕೂಲಿ ಕೆಲಸ ಮಾಡ್ತಿದ್ದ ಎಂಎಸ್ಸಿ ಪದವೀಧರೆ- ಸಚಿವರಿಂದ ಉದ್ಯೋಗದ ಭರವಸೆ

    ನರೇಗ ಕೂಲಿ ಕೆಲಸ ಮಾಡ್ತಿದ್ದ ಎಂಎಸ್ಸಿ ಪದವೀಧರೆ- ಸಚಿವರಿಂದ ಉದ್ಯೋಗದ ಭರವಸೆ

    – ಕೊರೊನಾ ಸಂಕಷ್ಟದಲ್ಲಿ ಪೋಷಕರಿಗೆ ನೆರವಾಗ್ತಿರೋ ಮಗಳು

    ಚಿತ್ರದುರ್ಗ: ಲಾಕ್‍ಡೌನ್ ಆದಾಗಿನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಎಂ.ಎಸ್ಸಿ ಪದವೀಧರೆ ದೀಪಶ್ರೀ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕೂಲಿ ಕೆಲಸ ಮಾಡಲು ಪೋಷಕರೊಂದಿಗೆ ಬರುತ್ತಿದ್ದಾರೆ.

    ಇದನ್ನು ಗಮನಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಪದವೀಧರೆಯ ಕೆಲಸವನ್ನು ಮೆಚ್ಚಿ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಎಂಎಸ್ಸಿ ಮಾಡಿರುವ ದೀಪಶ್ರೀ ಅವರ ತಂದೆ-ತಾಯಿಯೊಂದಿಗೆ ನಿತ್ಯ ಬಂದು ನರೇಗ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

    ಸಚಿವ ಕೆ.ಎಸ್. ಈಶ್ವರಪ್ಪ ಅವರು ಶುಕ್ರವಾರ ಸಂಜೆ ನರೇಗಾ ಕಾಮಗಾರಿ ವೀಕ್ಷಿಸಲು ಬಂದಾಗ, ವಿದ್ಯಾರ್ಥಿನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಕೊರೊನಾ ಬಿಕ್ಕಟ್ಟು ಮುಗಿದ ನಂತರ ವಿದ್ಯಾರ್ಥಿನಿಗೆ ನನ್ನನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಿ ಉದ್ಯೋಗ ಕೊಡಿಸುತ್ತೇನೆ ಎಂದು ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಯೋಗೀಶ್ ಅವರಿಗೆ ಸೂಚಿಸಿದ್ದಾರೆ.

    ಸಚಿವರು ಯುವತಿಯ ಬಗ್ಗೆ ತಿಳಿದುಕೊಂಡು ಯಾಕಮ್ಮ ಓದಿ ಕೂಲಿ ಕೆಲಸ ಮಾಡುತ್ತೀದ್ದೀಯಾ ನಿನಗೆ ಸರ್ಕಾರಿ ಉದ್ಯೋಗ ಮಾಡುವ ಗುರಿ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ. ಆಗ ಮುಂಬರುವ ಜೀವನದಲ್ಲಿ ಉಪನ್ಯಾಸಕಿ ಆಗುವ ಬಯಕೆ ಇದೆ ಎಂದು ದೀಪಶ್ರೀ ಪ್ರತಿಕ್ರಿಯಿಸಿದ್ದಾರೆ ಹಾಗೂ ಕೊರೊನಾ ಸಂಕಷ್ಟದ ಕಾಲದಲ್ಲಿ ತಂದೆ-ತಾಯಿಗೆ ನೆರವಾಗುವ ಉದ್ದೇಶದಿಂದ ನರೇಗಾ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದು ದೀಪಶ್ರೀ ತಿಳಿಸಿದ್ದಾರೆ.