ನವದೆಹಲಿ: ದೀಪಾವಳಿಗೂ (Diwali) ಮುನ್ನವೇ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ರೈತರಿಗೆ (Farmers) ಸಿಹಿ ಸುದ್ದಿ ಕೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ (PM KISAN) ಪ್ರಧಾನಿ ನರೇಂದ್ರಮೋದಿ ಅವರು ಸೋಮವಾರ ಒಟ್ಟು 16 ಸಾವಿರ ಕೋಟಿ ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸುವ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ.
ಇದರಿಂದ ಅರ್ಹ ರೈತರ ಖಾತೆಗೆ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ಗಳಂತೆ ವರ್ಷಕ್ಕೆ 6 ಸಾವಿರ ಹಣ ಸಂದಾಯವಾಗಲಿದೆ. ಒಟ್ಟಾರೆಯಾಗಿ ಅರ್ಹ ರೈತ ಕುಟುಂಬಗಳು (Farmers Family) ಈ ಯೋಜನೆಯಿಂದ ಸುಮಾರು 2 ಲಕ್ಷ ಕೋಟಿ ಪ್ರಯೋಜನ ಪಡೆಯಲಿವೆ. ಇದನ್ನೂ ಓದಿ: ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡುಗಡೆ
ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ?:
ಪಿಎಂ ಕಿಸಾನ್ ಸಮ್ಮಾನ್ (PM KISASN Samman) ನಿಧಿಯನ್ನು 2019ರ ಫೆಬ್ರವರಿ 24 ರಂದು ಜಾರಿಗೊಳಿಸಲಾಯಿತು. ಈ ಯೋಜನೆ ಮೂಲಕ ರೈತರಿಗೆ ವರ್ಷಕ್ಕೆ 6,000 ರೂ. ಪ್ರೋತ್ಸಾಹ ಧನ ನೀಡಿ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ 6 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ 11 ಕಂತುಗಳಲ್ಲಿ ರೈತರ ಖಾತೆಗೆ ಹಣ ಬಿಡುಗಡೆಗೊಳಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕೊನೆಯ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಬೇರೆಯವರೊಂದಿಗೆ ಲೈಂಗಿಕತೆಗೆ ಒಪ್ಪದ ಪತ್ನಿ ಮೇಲೆ ಪತಿಯಿಂದ ಹಲ್ಲೆ
ಫಲಾನುಭವಿ ಪರಿಶೀಲಿಸೋದು ಹೇಗೆ?
* ಮೊದಲು ಪಿಎಂ ಕಿಸಾನ್ https://pmkisan.gov.in/ ವೆಬ್‌ಸೈಟ್ ಪ್ರವೇಶಿಸಬೇಕು.
* ನಂತರ ಪಾವತಿ ಯಶಸ್ಸು ಎಂದು ತೋರಿಸುವ ಟ್ಯಾಬ್ ಕೆಳಗೆ ನಕ್ಷೆ ನೋಡುತ್ತೀರಿ.
* ಅದಾದ ಬಳಿಕ ಬಲ ಭಾಗದಲ್ಲಿ ಹಳದಿ ಬಣ್ಣದಲ್ಲಿ ಕಾಣುವ ಡ್ಯಾಶ್‌ಬೋರ್ಡ್ ಅನ್ನು ಕ್ಲಿಕ್ ಮಾಡಬೇಕು.
* ನಂತರ ಹೊಸ ಪುಟಕ್ಕೆ ತೆರೆದುಕೊಳ್ಳುತ್ತದೆ.
* ನಂತರ ವಿಲೇಜ್ (ಗ್ರಾಮ) ಡ್ಯಾಶ್‌ಬೋರ್ಡ್‌ಗೆ ತೆರಳಿ ಆ ಪುಟದಲ್ಲಿ ಕೇಳುವ ಮಾಹಿತಿ ಭರ್ತಿ ಮಾಡಬೇಕು.
* ನಂತರ ರಾಜ್ಯ, ಜಿಲ್ಲೆ ಹಾಗೂ ನಿಮ್ಮೂರಿನ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ, ವೀಕ್ಷಣೆ ಬಟನ್ ಕ್ಲಿಕ್ ಮಾಡಬೇಕು.
* ಆಮೇಲೆ ನೀವು ಫಲಾನುಭವಿಗಳಾಗಿದ್ದೇರೋ ಇಲ್ಲವೋ ಎಂದು ಪರಿಶೀಲಿಸಬಹದು.
Live Tv
[brid partner=56869869 player=32851 video=960834 autoplay=true]
ಮುಂಬೈ: 2023ಕ್ಕೆ ಪಾಕಿಸ್ತಾನ ಆಯೋಜಿಸುವ ಏಷ್ಯಾಕಪ್ ಏಕದಿನ ಕ್ರಿಕೆಟ್ (ODI AisaCup Cricket) ಟೂರ್ನಿಗೆ ಭಾರತ ತಂಡವನ್ನು (Team India) ಪಾಕಿಸ್ತಾನಕ್ಕೆ (Pakistana) ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಕ್ತವಾಗಿದೆ.
ಹೌದು. ಭಾರತ ತಂಡವು 2006ರಲ್ಲಿ ರಾಹುಲ್ ದ್ರಾವಿಡ್ (Rahul Dravid) ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ನಂತರ ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.
ಇದೀಗ 2023ರಲ್ಲಿ ಪಾಕಿಸ್ತಾನವು ತನ್ನ ದೇಶದಲ್ಲಿ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿ ಆಯೋಜಿಸಲು ನಿರ್ಧರಿಸಿದೆ. ಆ ನಂತರ ಭಾರತದಲ್ಲಿ ಐಸಿಸಿ (ICC) ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ನಡುವೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾವನ್ನು (Team India) ಕಳುಹಿಸಲು ಮುಕ್ತವಾಗಿದೆ ಎನ್ನುವ ನಿರ್ಧಾರ ಪ್ರಕಟಿಸಿದೆ.
ಕೇಂದ್ರ ಸರ್ಕಾರ (Central Government Of India) ಒಪ್ಪಿಗೆ ಸೂಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದೇ ತಿಂಗಳ ಅಕ್ಟೋಬರ್ 18ರಂದು ಬಿಸಿಸಿಐ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. ಇದನ್ನೂ ಓದಿ: ಶಿಫಾಲಿ, ದೀಪ್ತಿ ಆಟಕ್ಕೆ ಥಾಯ್ಲೆಂಡ್ ಥಂಡಾ – ಏಷ್ಯಾಕಪ್ ಫೈನಲ್‍ಗೆ ಭಾರತ
ಇತ್ತೀಚೆಗೆ ನಡೆದ ಟಿ20 (T20) ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಲೀಗ್ ಫೋರ್ ಹಂತದಲ್ಲಿ ಸೋಲನ್ನು ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದಿತ್ತು.
Live Tv
[brid partner=56869869 player=32851 video=960834 autoplay=true]
ಧಾರವಾಡ: ಡಿಸೆಂಬರ್ ತಿಂಗಳ ಅಂತ್ಯದೊಳಗೆ ಧಾರವಾಡ (Dharwad) ಐಐಟಿ (IIT) ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.
ಪ್ರತಿಷ್ಠಿತ ಧಾರವಾಡದ ʻಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ʼಉದ್ಘಾಟನಾ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದು ತ್ರಿಬಲ್ ಐಟಿ (IIIT) ಸಂಸ್ಥೆ ಕ್ಯಾಂಪಸ್ ಉದ್ಘಾಟಿಸಿದ್ದಾರೆ. ಇದೇ ವೇಳೆ ತ್ರಿಬಲ್ ಐಟಿ (IIIT) ಅಷ್ಟೇ ಅಲ್ಲ, ಐಐಟಿ (IIT) ಸಂಸ್ಥೆಯ ಕ್ಯಾಂಪಸ್ ಕೂಡ ಉದ್ಘಾಟನೆಗೆ ತಯಾರಾಗಿದೆ. ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಧಾರವಾಡ ಐಐಟಿ (IIT) ಸಂಸ್ಥೆ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಜಾವ ಮಲ ವಿಸರ್ಜನೆಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ
ಧಾರವಾಡದ ಎರಡು ಪ್ರತಿಷ್ಠಿತ ಸಂಸ್ಥೆಗಳ ಕ್ಯಾಂಪಸ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲು ಬಂದಿದ್ದರು. ಆದಗ ʻಈ ಎರಡು ಸಂಸ್ಥೆಗಳ ಕ್ಯಾಂಪಸ್ 5 ವರ್ಷದ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳ್ಳಲಿದೆಯಾ?ʼ ಎಂದು ಪ್ರಶ್ನಿಸಿದ್ದರು. ಇಂದು ಎರಡು ಸಂಸ್ಥೆಗಳ ಕ್ಯಾಂಪಸ್ ತಯಾರಿಗಿ ನಿಂತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಪ್ರಗತಿ ಕಾಣುತ್ತಿದ್ದು, ಈ ಸಮಯದಲ್ಲಿ ಧಾರವಾಡದಲ್ಲಿ ಐಐಐ-ಟಿ (IIIT) ಕಾರ್ಯಾರಂಭ ಮಾಡುತ್ತಿರುವುದು ಅತ್ಯಂತ ಸಂತಸ ಮೂಡಿಸಿದೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai), ಸಂಸ್ಥೆಯ ನಿರ್ದೇಶಕರಾದ ಪ್ರೊ.ಕವಿ ಮಹೇಶ್, ಕುಲಸಚಿವರ ಪ್ರೊ.ಚೆನ್ನಪ್ಪ ಅಕ್ಕಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧಾ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ರಾಷ್ಟ್ರಪತಿ ಮುರ್ಮುಗೆ ಪೌರ ಸನ್ಮಾನ: ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹುಬ್ಬಳ್ಳಿ-ಧಾರವಾಡದ ಜನತೆಯ ಪರವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಪೌರ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಧಾರವಾಡದಲ್ಲಿ ಇದೊಂದು ಐತಿಹಾಸಿಕ ಕ್ಷಣ. ರಾಷ್ಟ್ರಪತಿ ಮುರ್ಮು ಅವರಿಗೆ ನಮ್ಮ ಮಹಾನಗರ ಪಾಲಿಕೆಯಿಂದ ಸನ್ಮಾನಿಸಿದ್ದು ಅತ್ಯಂತ ಹೆಮ್ಮೆ. 35 ವರ್ಷದ ಬಳಿಕ ರಾಷ್ಟ್ರಪತಿಗಳಿಗೆ ಸನ್ಮಾನ ಮಾಡುವ ಅವಕಾಶ ಅವಳಿ ನಗರ ಪಾಲಿಕೆಗೆ ದೊರೆತಿರುವುದು ಗೌರವದ ಸಂಗತಿ ಎಂದು ಅಭಿಪ್ರಾಯಪಟ್ಟರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಗೂ ಬಿಜೆಪಿಯವರು ಸೇರಿ ಇಡೀ ದೇಶವನ್ನ ಬರ್ಬಾದು ಮಾಡಿಬಿಟ್ಟರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ತಮ್ಮ ಪತ್ರಿಕಾ ಹೇಳಿಕೆಯಲ್ಲಿಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ, ಈ ಬಾರಿ ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿಯನ್ನು ಕಿತ್ತೆಸೆದು ನೆಮ್ಮದಿಯ ನಾಳೆಗಳ ಕುರಿತು ಯೋಚಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!
ಪ್ರಕಟಣೆಯಲ್ಲಿ ಏನಿದೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹಿಂದೆ ವಿರೋಧ ಪಕ್ಷದವರಿದ್ದಾರೆ ಎಂದು ಹೇಳಿ ಜನರನ್ನು ಬಿಜೆಪಿಯವರು ದಾರಿ ತಪ್ಪಿಸಲು ನೋಡುತ್ತಿದ್ದಾರೆ. ಸರ್ಕಾರ ನಡೆಸುವವರಿಗೆ ಸಣ್ಣ ಲಜ್ಜೆ ಮತ್ತು ಕಾನೂನಿನ ತಿಳುವಳಿಕೆ ಇದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ.
ಕೆಂಪಣ್ಣ ಒಬ್ಬರೇ ನನ್ನನ್ನ ಭೇಟಿ ಮಾಡಿರಲಿಲ್ಲ. ಗುತ್ತಿಗೆದಾರರ ಸಂಘದ 50ಕ್ಕೂ ಹೆಚ್ಚು ಜನ ಭೇಟಿ ಮಾಡಿದ್ದರು. ಸಿದ್ದರಾಮಯ್ಯನವರನ್ನು ಯಾಕೆ ಭೇಟಿ ಮಾಡಿದರು ಎಂದು ಬೊಮ್ಮಾಯಿಯವರಾದಿಯಾಗಿ, ಅನೇಕ ಸಚಿವರು ಮಾತನಾಡಿದ್ದಾರೆ. ಗುತ್ತಿಗೆದಾರರ ಸಂಘದವರು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿದ್ದರು. ಆದರೆ ಸಮಸ್ಯೆ ಬಗೆಹರಿಯುವ ಬದಲು, ಗುತ್ತಿಗೆದಾರರ ಸಂಘವನ್ನೆ ಒಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವನ್ನು ಅವರು ಮಾಡುತ್ತಿದ್ದಾರೆ. ಜೊತೆಗೆ ಬಿಬಿಎಂಪಿಯಲ್ಲಿ ಶೇ.40 ರಷ್ಟಿದ್ದ ಕಮಿಷನ್ ದಂಧೆ, ಈಗ 50 ಪರ್ಸೆಂಟ್‌ಗೆ ತಲುಪಿದೆ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ, ಇದು ವಚನ ವಂಚನೆ: ಸಿದ್ದರಾಮಯ್ಯ
ಗುತ್ತಿಗೆದಾರರ ಸಂಘದವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಚೌಕಿದಾರ್ ಎಂದು ತನ್ನನ್ನು ಹೊಗಳಿಕೊಂಡ ಮೋದಿಯವರಾಗಲಿ, ರಾಜ್ಯ ಬಿಜೆಪಿ ಸರ್ಕಾರವಾಗಲಿ ಅವರ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇವತ್ತು ಈ ಸಮಸ್ಯೆ ಬರುತ್ತಿರಲಿಲ್ಲ. ಬೆಳಗಾವಿಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.
ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಹೇಗಿದೆ ಎಂದು ಜನರು ನೋಡ್ತಿದ್ದಾರೆ. ಪ್ರಧಾನಿ ಬಂದು ಹೋದ ಮಾರನೇ ದಿನವೇ ಹಾಕಿದ್ದ ಟಾರು ಕಿತ್ತು ಬರುತ್ತದೆ. ಮಡಿಕೇರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಅದನ್ನು ನೋಡಲು ಹೋದರೆ ಟಾರ್ಪಾಲಿನಿಂದ ಮರೆ ಮಾಡಿ ಕಳ್ಳತನವನ್ನು ಮುಚ್ಚಿಹಾಕಲು ನೋಡುತ್ತೀರಿ. ನಿಮ್ಮ ಗೂಂಡಾಗಳನ್ನು ಬಿಟ್ಟು ದಾಂಧಲೆ ಎಬ್ಬಿಸಲು ನೋಡಿ ಜನರ ಗಮನ ಬೇರೆಡೆ ಸೆಳೆಯಲು ನೋಡುತ್ತೀರಿ. ಇದನ್ನೂ ಓದಿ: ಅಮೆರಿಕದ ವಿರುದ್ಧ ಬೆಂಗಳೂರಿನಲ್ಲಿ ಚೀನಾ ಕಾರ್ಯಕ್ರಮ – ಸಿದ್ದರಾಮಯ್ಯ, ಮಹಾದೇವಪ್ಪ ಮುಖ್ಯ ಅತಿಥಿ
ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳಿಂದ ಎಷ್ಟು ಜನರನ್ನ ಕೊಂದಿದ್ದೀರಿ ಎಂಬ ಲೆಕ್ಕವನ್ನು ಜನರಿಗೆ ಕೊಡಿ. ಹೆಚ್ಚೂ ಕಡಿಮೆ ರಾಜ್ಯದ ಹೈಕೋರ್ಟ್ ವಾರದಲ್ಲಿ ಎರಡು ದಿನ ಗುಂಡಿ ಮುಚ್ಚಿ ಎಂದು ತಾಕೀತು ಮಾಡುತ್ತಿದೆ. ಗುಂಡಿ ಮುಚ್ಚಿದ ಮಾರನೇ ದಿನವೇ ಮತ್ತೆ ಗುಂಡಿ ಬೀಳುತ್ತಿವೆ. ಆ ಗುಂಡಿಗೆ ಬಿದ್ದು ಯಾರದೋ ಮನೆಯ ಮಗ ಮರಣ ಹೊಂದುತ್ತಾನೆ. ಯಾರದೋ ಮನೆಯ ದೀಪ ಆರಿ ಹೋಗುತ್ತದೆ. ನಿಮಗೆ ಏನಾದರೂ ಮನುಷ್ಯತ್ವ ಇದ್ದರೆ ಇಂಥವೆಲ್ಲ ಕಣ್ಣಿಗೆ ಕಾಣುತ್ತದೆ. ಇದನ್ನೂ ಓದಿ: ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ
ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನೀರಾವರಿ ಪಿಡಬ್ಲ್ಯೂಡಿ, ಸಾರಿಗೆ, ಸಬ್ ರಿಜಿಸ್ಟಾರ್, ಅರಣ್ಯ ಇಲಾಖೆ, ಹೀಗೆ ಎಲ್ಲ ಕಡೆಯೂ ಲಂಚ ರಾಕ್ಷಸ ಕುಣಿಯುತ್ತಿದ್ದಾನೆ. ಹೀಗಿದ್ದಾಗ ಸಾಮಾನ್ಯ ಜನರು ಯಾರ ಬಳಿಗೆ ಹೋಗಬೇಕು? ವಿರೋಧ ಪಕ್ಷದ ನಾಯಕರ ಬಳಿಯೂ ಬರಲು ಸಾಧ್ಯವಾಗದಿದ್ದರೆ ಜನ ಹತಾಶರಾಗಿ ಕೈಗೆ ಕಲ್ಲು, ದೊಣ್ಣೆಗಳನ್ನು ತೆಗೆದುಕೊಂಡು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂಬುದು ನೆನಪಿರಲಿ.
ನಮ್ಮ ಸರ್ಕಾರದ ಅವಧಿಯಲ್ಲಿ ನೀವು ಒತ್ತಾಯ ಮಾಡಿದ ಪ್ರಕರಣಗಳನ್ನೆಲ್ಲ ನಾವು ಸಿಬಿಐಗೆ ವಹಿಸಿದ್ದೆವು. ಯಾಕೆಂದರೆ ನಮಗೆ ನಮ್ಮ ಮೇಲೆ ನಂಬುಗೆ ಇತ್ತು. ಆದರೆ ನಾವು ಕಳೆದ 3 ವರ್ಷಗಳಲ್ಲಿ ಎಷ್ಟು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇವೆ. ನೀವು ಒಂದಾದರೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೀರಾ?
40 ಪರ್ಸೆಂಟ್ ಕೇಸನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಅವರು ತನಿಖೆ ಮಾಡಲಿ. ಗುತ್ತಿಗೆದಾರರ ಸಂಘದವರ ಬೇಡಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆಯೆ? ಅವರು ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿ ಎಂದಿದ್ದಾರೆ. ನ್ಯಾಯಾಂಗ ತನಿಖೆ ಎಂಬುದು ಅಸಾಂವಿಧಾನಿಕ ಪ್ರಕ್ರಿಯೆ ಏನಲ್ಲವಲ್ಲ? ನಿಮಗೆ ಭಯ ಇಲ್ಲದಿದ್ದರೆ ಕೊಡಿ ನ್ಯಾಯಾಂಗ ತನಿಖೆಗೆ, ಅವರೂ ಸಿದ್ಧರಿದ್ದಾರೆ. ತನಿಖೆಯ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದವರು ಏನಾದರೂ ಸುಳ್ಳು ಹೇಳಿದ್ದರಾದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ.
ಅದು ಬಿಟ್ಟು ನೀವು ನಮ್ಮನ್ನು ಬಿಟ್ಟು ವಿರೋಧ ಪಕ್ಷದವರ ಬಳಿಗೆ ಏಕೆ ಹೋದಿರಿ ಎಂದು ನಿರ್ಬಂಧಿಸುವುದಕ್ಕೆ, ನೀವು ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೀರೊ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿದ್ದೀರೊ? ನಿಮಗೆ ಇರುವಷ್ಟೇ ಹಕ್ಕು, ಕರ್ತವ್ಯಗಳು ನನಗೂ ಇವೆ.
ಇನ್ನೂ ಮೋದಿಯವರ ಕನಸಿನ ಸ್ಮಾರ್ಟ್ಸಿಟಿಗಳ ಭ್ರಷ್ಟಾಚಾರ ಕೂಡ ಮುಗಿಲು ಮುಟ್ಟಿದೆ. ಸ್ಮಾರ್ಟ್ ಸಿಟಿ ಎಂದ ಮಂಗಳೂರು ಯಾಕೆ ಒಂದೇ ಮಳೆಗೆ ಮುಳುಗಿ ಹೋಗುತ್ತಿದೆ? ಬೆಂಗಳೂರಿನ ರಸ್ತೆಗಳು, ಕಾಲುವೆಗಳು ಏನಾಗಿವೆ ಎಂದು ಜನರು ನೋಡುತ್ತಿದ್ದಾರೆ.
ವಿರೋಧ ಪಕ್ಷಗಳನ್ನು ಆಪರೇಷನ್ ಮಾಡುವ ಉದ್ದೇಶದಿಂದ ಪೆಗಾಸಸ್ ಗೂಢಾಚಾರಿಕೆ ಮಾಡಲಾಯಿತು. ಆದರೆ ಈಗ ಕೇಂದ್ರ ಸರ್ಕಾರ ಸಮಿತಿಗೆ ಸಹಕರಿಸಿಲ್ಲ ಎಂದು ವರದಿ ನೀಡಿದೆ. ಇದನ್ನು ನೋಡಿದರೆ ಕೇಂದ್ರ ದೇಶದಲ್ಲಿ ಹಿಟ್ಲರ್ ಗಿರಿ ನಡೆಸುತ್ತಿದೆ ಎಂದು ಅರ್ಥವಾಗುತ್ತದೆ. ಈ ಎಲ್ಲವನ್ನೂ ನೋಡಿದರೆ ಕಾರ್ಪೊರೇಟ್ ಪರವಾಗಿ ಕೆಲಸ ಮಾಡಲು ಹಣ ಕೊಟ್ಟು ಖರೀದಿಸಿ ರಚಿಸುತ್ತಿರುವ ಬಿಜೆಪಿ ಸರ್ಕಾರಗಳಿಂದ ಈ ದೇಶದ ಜನರಿಗೆ ಯಾವ ನ್ಯಾಯವೂ ಸಿಗುವುದಿಲ್ಲ. ದೇಶದ ಯುವಜನರು ಉದ್ಯೋಗವಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ಅನಾಥರಾಗುತ್ತಾರೆ.
ಈಗಾಗಲೇ ಅಭಿವೃದ್ಧಿಯಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದಿದೆ. ತಲಾದಾಯದಲ್ಲಿ ಭಾರತಕ್ಕಿಂತ ಹಿಂದೆ ಇದ್ದ ಚೀನಾ ಇಂದು ಭಾರತಕ್ಕಿಂತ ಬಹಳ ಮುಂದೆ ಇದೆ. ಕಳೆದ ವರ್ಷದ ದಾಖಲೆಗಳಂತೆ ಭಾರತೀಯರ ತಲಾದಾಯ ಸುಮಾರು 1.5 ಲಕ್ಷ ರೂಪಾಯಿಗಳಿದ್ದರೆ. ಚೀನಾದವರ ತಲಾದಾಯವನ್ನು ರೂಪಾಯಿಗಳಿಗೆ ಪರಿವರ್ತಿಸಿದರೆ ಸುಮಾರು 10.5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಈಗ ಬಾಂಗ್ಲಾದ ಜನರ ತಲಾದಾಯ ಭಾರತೀಯರ ತಲಾದಾಯವನ್ನೂ ಮೀರಿ ಮುಂದಕ್ಕೆ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕೋಲಾರ: 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಿದರೆ ಮಾತ್ರ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯಲಾಗುವುದು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಹೇಳಿದಂತೆ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುತ್ತಿದ್ದೇನೆ. ಇಂದು ಭಾನುವಾರ ರಜೆಯ ದಿನವಾದ್ದರಿಂದ ನಾಳೆ ಬೆಳಗ್ಗೆ 11 ಗಂಟೆಗೆ ಮಾನನಷ್ಟ ಮೊಕದ್ದಮ್ಮೆ ಹೂಡಲಿದ್ದು, ಸಂಘದವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ
ಒಂದು ವೇಳೆ ಗುತ್ತಿಗೆದಾರರು ರಾಜಿಗೆ ಬಂದ್ರೆ ಪತ್ರದ ಮೂಲಕ ಕ್ಷಮಾಪಣೆ ಪತ್ರ ನೀಡಬೇಕು. ಆರೋಪ ಮಾಡಿದವರು ಪ್ರಧಾನಿಗಳಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಬೇಕು. ಅಲ್ಲದೇ ಲೋಕಾಯುಕ್ತ ಹಾಗೂ ಗವರ್ನರ್‌ಗೆ ತಮ್ಮ ಬಳಿಯಿರುವ ದಾಖಲೆಗಳನ್ನ ನೀಡಿದ್ರೆ ಕೇಸ್ ವಾಪಸ್ ಪಡೆಯಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಇಂಡಿಯಾ- ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್- ಭಾರತದ ಗೆಲುವಿಗೆ ದರ್ಗಾದಲ್ಲಿ ಪ್ರಾರ್ಥನೆ
ನೋಟಿಸ್ ಸರ್ವ್ ಮಾಡಿದ 8 ದಿನಗಳಲ್ಲಿ ದಾಖಲೆ ನೀಡಿದ್ರೆ ಗುತ್ತಿಗೆದಾರರ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನ ಮಾಡಲಾಗುವುದು. ಒಂದು ವೇಳೆ ದಾಖಲೆ ಒದಗಿಸದಿದ್ದರೆ ಮಾನನಷ್ಟ ಮೊಕದ್ದೊಮ್ಮೆ ಜೊತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಲಾರದಲ್ಲಿ ನಾನು ಹೇಳಿದಂತೆ ಕಾಮಗಾರಿಗಳನ್ನ ಪರಿಶೀಲನೆ ಮಾಡಲಾಗುವುದು. ಆಯಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಮುಂದಿನ ವಾರದಲ್ಲಿ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೇ ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ಮುಖಂಡರಿಂದ ರಾಜೀನಾಮೆಗೆ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳ ಬಳಿ ಏನಾದ್ರು ದಾಖಲೆಗಳಿದ್ದರೆ ಕೊಡಲಿ. ಅದು ಬಿಟ್ಟು ರಾಜೀನಾಮೆ ಕೇಳುವ ಹಕ್ಕು ಅವರಿಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]