Tag: Narcotics Control Bureau

  • ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 14 ಕೋಟಿ ಮೌಲ್ಯದ ಗಾಂಜಾ ಸೀಜ್ – ಮಹಿಳೆ ಅರೆಸ್ಟ್

    ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 14 ಕೋಟಿ ಮೌಲ್ಯದ ಗಾಂಜಾ ಸೀಜ್ – ಮಹಿಳೆ ಅರೆಸ್ಟ್

    – 40 ಕೆ.ಜಿ ಗಾಂಜಾ ವಶಪಡಿಸಿಕೊಂಡ ಎನ್‌ಸಿಬಿ

    ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Rajiv Gandhi International Airport) ಬುಧವಾರ ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್‌ನಿಂದ 14 ಕೋಟಿ ರೂ. ಮೌಲ್ಯದ 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು (Hydroponic Ganja) ಎನ್‌ಸಿಬಿ (Narcotics Control Bureau) ವಶಪಡಿಸಿಕೊಂಡಿದ್ದು, ಮಹಿಳೆಯನ್ನು ಬಂಧಿಸಿದೆ.

    ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ ಎನ್‌ಸಿಬಿ, ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಎನ್‌ಸಿಬಿ ಅಧಿಕಾರಿಗಳು ಮಹಿಳೆಯನ್ನು ತಡೆದು ಆಕೆಯ ಎರಡು ಚೆಕ್-ಇನ್ ಬ್ಯಾಗ್‌ಗಳಿಂದ 40 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ತಿರುಪತಿಯಲ್ಲಿ ಮದುವೆ ಆಗುವ ಕನ್ನಡಿಗರಿಗೆ ಗುಡ್‌ನ್ಯೂಸ್ – ತಿರುಮಲದ ಕಲ್ಯಾಣ ಮಂಟಪದಲ್ಲಿ ಮೊದಲ ಮದುವೆ

    ಬ್ಯಾಂಕಾಕ್‌ನಿಂದ ನೇರವಾಗಿ ವಿವಿಧ ಭಾರತೀಯ ವಿಮಾನ ನಿಲ್ದಾಣಗಳಿಗೆ ಬರುವ ಪ್ರಯಾಣಿಕರಿಂದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿರುವ ಅನೇಕ ನಿದರ್ಶನಗಳು ಇರುವುದರಿಂದ ಮಹಿಳೆ ಯಾರಿಗೂ ಅನುಮಾನ ಬಾರದಂತೆ ಬ್ಯಾಂಕಾಕ್‌ನಿಂದ ಕಳ್ಳಸಾಗಣೆ ಮಾಡಿ ದುಬೈ ಮೂಲಕ ಭಾರತಕ್ಕೆ ಬಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಥೈಲ್ಯಾಂಡ್ ಮತ್ತು ಭಾರತದಲ್ಲಿ ಮಹಿಳೆಗಿರುವ ಲಿಂಕ್ ಅನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‌ಸಿಬಿ ಮಾಹಿತಿ ನೀಡಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್‌

  • ಶಾರುಖ್ ಪುತ್ರನ ಡ್ರಗ್ಸ್ ಕೇಸಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ

    ಶಾರುಖ್ ಪುತ್ರನ ಡ್ರಗ್ಸ್ ಕೇಸಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ

    ಮುಂಬೈ: ನನಗೆ ಹಾಗೂ ನನ್ನ ಕುಟುಂಬಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬೆದರಿಕೆಗಳು ಬರುತ್ತಿವೆ ಎಂದು ಮುಂಬೈನ ಎನ್‍ಸಿಬಿ (Narcotics Control Bureau) ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.

    ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಅವರು, ನಕಲಿ ಟ್ವಿಟ್ಟರ್ ಖಾತೆಯ ಮೂಲಕ ಬೆದರಿಕೆಗಳು ಬರುತ್ತಿವೆ. ನನಗೆ ಹಾಗೂ ನನ್ನ ಕುಟುಂಬದ ಮೇಲೆ ದಾಳಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ 25 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪವನ್ನು ವಾಂಖೆಡೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಿಬಿಐ (CBI) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರೊಂದಿಗೆ ಮಾತುಕತೆ ನಡೆಸಿ ಸಮೀರ್ ವಾಂಖೆಡೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎನ್‍ಸಿಬಿ ಆರೋಪಿಸಿದೆ.

    ಆರೋಪಿಯ ಕುಟುಂಬದೊಂದಿಗೆ ವಾಂಖೆಡೆ ಮಾತನಾಡಿರುವುದು ಎನ್‍ಸಿಬಿಯ ನೀತಿ ನಿಯಮಗಳಿಗೆ ವಿರುದ್ಧವಾಗಿದೆ. ತನಿಖಾಧಿಕಾರಿಯು ಆರೋಪಿಯ ಕುಟುಂಬದೊಂದಿಗೆ ಮಾತನಾಡುವ ಅಗತ್ಯ ಏನಿತ್ತು? ಎಂದು ನ್ಯಾಯಾಲಯದಲ್ಲಿ ಸಿಬಿಐ ವಾದಿಸಿತ್ತು. ಅಲ್ಲದೆ ಶಾರುಖ್ ಖಾನ್ ಅವರೊಂದಿಗೆ ಸಂಪರ್ಕಿಸಿದ್ದ ಮೊಬೈಲ್ ನೀಡಲು ನಿರಾಕರಿಸಿದ್ದರು. ಅಧಿಕಾರಿಗಳಿಗೆ ಹೆದರಿಸುವ ಪ್ರಯತ್ನ ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.

    ಸಿಬಿಐ ಕ್ರಮದ ವಿರುದ್ಧ ವಾಂಖೆಡೆ ಬಾಂಬೆ ಹೈಕೋರ್ಟ್ (Bombay High Court) ಮೊರೆ ಹೋಗಿದ್ದರು. ಅಲ್ಲಿಂದ ಅವರಿಗೆ ಮೇ 22 ರ ವರೆಗೆ ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿತ್ತು. ಬಳಿಕ ಕೋರ್ಟ್ ಜೂನ್ 8 ರವರೆಗೆ ಬಂಧಿಸದಂತೆ ವಿಸ್ತರಿಸಿದೆ. ಇದನ್ನೂ ಓದಿ: ಅರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರಕ್ಕೆ ಗಲಾಟೆ – ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ