Tag: Narayanpur Reservoir

  • ಕೊನೆಗೂ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆದ ಕೆಪಿಸಿ ಅಧಿಕಾರಿಗಳು

    ಕೊನೆಗೂ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆದ ಕೆಪಿಸಿ ಅಧಿಕಾರಿಗಳು

    ರಾಯಚೂರು: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್‌ಗಳನ್ನು ತೆಗೆಯುವಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ಇಂಜಿನಿಯರ್‌ಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

    ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ಅನ್ನು ತೆರೆಯಲು 4 ದಿನಗಳಿಂದ ಸತತ ಪ್ರಯತ್ನ ನಡೆಸಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಒಂದು ಗೇಟನ್ನು ಸಹ ತೆಗೆಯಲು ಸಾಧ್ಯವಾಗಿರಲಿಲ್ಲ. ಈಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಗೇಟ್‌ಗಳನ್ನು ತೆಗೆಯಲಾಗುತ್ತಿದೆ. ಇದನ್ನೂ ಓದಿ: ವಾಜಪೇಯಿಗೆ ಬಿಜೆಪಿ ಸರ್ಕಾರದಿಂದ ಅಗೌರವ – ಅಟಲ್ ಸಾರಿಗೆ ಸ್ಥಗಿತ: ಎಎಪಿ ಖಂಡನೆ

    ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರಿನ ಹೊರಹರಿವು ಇಳಿಕೆಯಾಗಿದ್ದರಿಂದ ಗೇಟ್‌ಗಳನ್ನು ಮೇಲೆ ಎತ್ತಲು ಸಾಧ್ಯವಾಗಿದೆ. ಸದ್ಯ ಕೃಷ್ಣಾ ನದಿಗೆ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಪ್ರವಾಹ ಭೀತಿ ತಗ್ಗಿದೆ. ಇದನ್ನೂ ಓದಿ: ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ, ಆದರೆ ….. : ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

    ಕೆಪಿಸಿ ಇಂಜಿನಿಯರ್‌ಗಳ ಯಡವಟ್ಟಿನಿಂದಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆಗೆಯಲು ಆಗಿರಲಿಲ್ಲ. ಹೀಗಾಗಿ ಪ್ರವಾಹ ಭೀತಿ ಎದುರಾಗಿತ್ತು. ಕೊನೆಗೂ 4 ದಿನಗಳ ಬಳಿಕ ಗೇಟ್‌ಗಳನ್ನು ತೆಗೆಯಲು ಸಾಧ್ಯವಾಗಿದೆ. 194 ಗೇಟ್‌ಗಳಲ್ಲಿ 90 ಗೇಟ್ ಮಾತ್ರ ತೆರೆಯಲಾಗಿತ್ತು. ಈಗ ನೀರಿನ ಹೊರಹರಿವಿನ ಆಧಾರದ ಮೇಲೆ ಉಳಿದ ಗೇಟ್‌ಗಳನ್ನು ತೆಗೆಯಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‍ಗಳು ಲಾಕ್ – ರಾಯಚೂರಿನಲ್ಲಿ ಹೆಚ್ಚಾದ ಪ್ರವಾಹ ಭೀತಿ

    ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‍ಗಳು ಲಾಕ್ – ರಾಯಚೂರಿನಲ್ಲಿ ಹೆಚ್ಚಾದ ಪ್ರವಾಹ ಭೀತಿ

    ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದೆಡೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಇನ್ನೊಂದೆಡೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‍ನ 104 ಗೇಟ್‍ಗಳು ಓಪನ್ ಆಗದೇ ಪ್ರವಾಹ ಭೀತಿ ಹೆಚ್ಚಾಗಿದೆ.

    ರಾಯಚೂರು ತಾಲೂಕಿನ ಗುರ್ಜಾಪುರ ಬಳಿ ಆರ್‌ಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕಾಗಿ ನಿರ್ಮಿಸಿರುವ 1.5 ಟಿಎಂಸಿ ಸಾಮಥ್ರ್ಯದ ಬ್ರಿಡ್ಜ್ ಕಂ ಬ್ಯಾರೇಜ್‍ನ ಕ್ರಸ್ಟ್ ಗೇಟ್‍ಗಳನ್ನು ತೆಗೆಯುವುದು ಅಸಾಧ್ಯವಾಗಿರುವ ಹಿನ್ನೆಲೆ ಹಿನ್ನೀರಿನಿಂದ ಗುರ್ಜಾಪುರ, ಅರಷಿಣಿಗಿ, ತಿಮ್ಮಾಪುರ ಸೇರಿ ಹಲವು ಗ್ರಾಮಗಳು ಹಾಗೂ ಜಮೀನಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕೆಪಿಸಿ, ಆರ್‍ಟಿಪಿಎಸ್ ಅಧಿಕಾರಿಗಳ ಉಸ್ತುವಾರಿಯಲ್ಲಾದ ಯಡವಟ್ಟಿನಿಂದ ಪ್ರವಾಹ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ

    ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಹಿತಿಯಿದ್ದರು ಗೇಟ್ ತೆರೆಯದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಗೇಟ್‍ಗಳನ್ನು ತೆರೆಯುವುದು ಅಸಾಧ್ಯವಾಗಿದೆ. ಒಟ್ಟು 194 ಗೇಟ್‍ಗಳಲ್ಲಿ 90 ಗೇಟ್ ಮಾತ್ರ ಇದುವರೆಗೆ ತೆರೆದಿದ್ದು, ಇನ್ನೂ 104 ಗೇಟ್ ಬಂದ್ ಆಗಿವೆ. ಹೀಗಾಗಿ ಬ್ರಿಡ್ಜ್ ಕಂ ಬ್ಯಾರೇಜ್‍ನ ಹಿನ್ನೀರು ಗ್ರಾಮಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಕೆಪಿಸಿ ಅಧಿಕಾರಿಗಳು ಕೇರಳದಿಂದ ಡೈವಿಂಗ್ ತಂಡವನ್ನ ಕರೆಸಿದ್ದು ನಾಲ್ಕು ಜೆಸಿಬಿ, ಒಂದು ಹಿಟಾಚಿ ಬಳಸಿ ಗೇಟ್ ತೆರೆಯಲು ಹರಸಾಹಸ ಪಡುತ್ತಿದ್ದಾರೆ. ಗೇಟ್ ತೆರೆಯಲು ಆಗದೇ ಸಿಬ್ಬಂದಿ ಪರದಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಗ್ಗಿತು ಮಳೆ – ಕೃಷ್ಣಾ ನದಿಗೆ 3.69 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ತಗ್ಗಿತು ಮಳೆ – ಕೃಷ್ಣಾ ನದಿಗೆ 3.69 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ರಾಯಚೂರು: ಕರ್ನಾಟಕವನ್ನು ಮತ್ತೊಮ್ಮೆ ಹಿಂಡಿಹಿಪ್ಪೆ ಮಾಡಿದ್ದ ಮಳೆಯಬ್ಬರ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಕೃಷ್ಣಾ ನದಿಗೆ 3 ಲಕ್ಷ 69 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

    ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇವತ್ತು ಆರೆಂಜ್, ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದರೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಬದಲು ಕಡಿಮೆ ಮಳೆ ನಿರೀಕ್ಷೆಯ ಯಲ್ಲೋ ಅಲರ್ಟ್ ಜಾರಿಯಲ್ಲಿದೆ. ಇತ್ತ ಮಹಾರಾಷ್ಟ್ರದಲ್ಲೂ ಮಳೆ ತಗ್ಗಿದ್ದು, ಅಲ್ಲಿಂದ ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ತಗ್ಗಿದೆ.

    ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದಿಂದ 3 ಲಕ್ಷ 69 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿಯ ಪಾತ್ರದ ಜನರಿಗೆ ಪ್ರವಾಹ ಭೀತಿ ಶುರುವಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮ ಬಳಿ ಕೃಷ್ಣಾ ನದಿಗೆ ಭೀಮಾನದಿ ಸಂಗಮವಾಗಲಿದ್ದು, ಭೀಮಾನದಿ ಅಪಾಯಮಟ್ಟದಲ್ಲಿ ಹರಿದುಬರುತ್ತಿದೆ. ಕೃಷ್ಣ ನದಿಯ ಪ್ರವಾಹದಿಂದ ಶೀಲಹಳ್ಳಿ, ಹೂವಿನ ಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ದೇವದುರ್ಗ ಮತ್ತು ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ.

    ತುಂಗಭದ್ರಾ ನದಿಗೆ 1 ಲಕ್ಷ 22 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನದಿ ಪಾತ್ರದ ಜನರಲ್ಲಿ ಇನ್ನೂ ಆತಂಕ ಮೂಡಿಸಿದೆ. ಇದರಿಂದ ಅವಶ್ಯಕತೆ ಬಿದ್ದರೆ ರಕ್ಷಣಾ ಕಾರ್ಯಕ್ಕಾಗಿ ರಾಯಚೂರಿಗೆ ಸೇನಾ ಪಡೆಯನ್ನು ಕರೆಯಿಸಿಕೊಳ್ಳಲಾಗಿದೆ. ಒಬ್ಬರು ಕರ್ನಲ್, ಇಬ್ಬರು ಮೇಜರ್ ಹಾಗೂ ಮೂರು ಜನ ಜೆಸಿಒ ಮತ್ತು 37 ಜನ ಜವಾನರ ತಂಡ ಜಿಲ್ಲೆಗೆ ಬಂದಿದ್ದು, ಇವತ್ತು ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ.