Tag: Narayanpur Dam

  • ರಾಯಚೂರು | ನಾರಾಯಣಪುರಿಂದ ಕೃಷ್ಣಾ ನದಿಗೆ 1.03 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

    ರಾಯಚೂರು | ನಾರಾಯಣಪುರಿಂದ ಕೃಷ್ಣಾ ನದಿಗೆ 1.03 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

    ರಾಯಚೂರು: ನಿರಂತರ ಮಳೆಯಿಂದಾಗಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ (Narayanpur Dam) ಒಳಹರಿವು ಹೆಚ್ಚಾಗಿದ್ದು, ಕೃಷ್ಣಾ ನದಿಗೆ (Krishna River) 1,03,440 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.ಇದನ್ನೂ ಓದಿ: ನಿರ್ಮಾಣಕ್ಕೆ ಮುಂದಾದ ನಟಿ ಸೀತಾ ಹರ್ಷವರ್ಧನ್

    ಜಿಲ್ಲೆಯಲ್ಲಿ 3-4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ನಾರಾಯಣಪುರ ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್ ಒಳಹರಿವು ಹೆಚ್ಚಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಜಲಾಶಯದಲ್ಲಿ 33.313 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ 32.51 ಟಿಎಂಸಿ ನೀರು ಸಂಗ್ರಹವಾಗಿದೆ.

    ಜಲಾಶಯದ 24 ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಿಂದ ಕೃಷ್ಣಾ ನದಿಗೆ 1,03,440 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಮೈದುಂಬಿ ಹರಿಯುತ್ತಿದೆ. ಸಾರ್ವಜನಿಕರಿಗೆ ನದಿ ಪಾತ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.ಇದನ್ನೂ ಓದಿ: ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ

  • ಕೃಷ್ಣೆಯ ಅಬ್ಬರಕ್ಕೆ  ಶೀಲಹಳ್ಳಿ ಸೇತುವೆ ಮುಳುಗಡೆ  – ಲಿಂಗಸುಗೂರಿಗೆ ಬರಬೇಕದರೆ 45 ಕಿ.ಮೀ. ಸುತ್ತಬೇಕು

    ಕೃಷ್ಣೆಯ ಅಬ್ಬರಕ್ಕೆ ಶೀಲಹಳ್ಳಿ ಸೇತುವೆ ಮುಳುಗಡೆ – ಲಿಂಗಸುಗೂರಿಗೆ ಬರಬೇಕದರೆ 45 ಕಿ.ಮೀ. ಸುತ್ತಬೇಕು

    ರಾಯಚೂರು: ಕೃಷ್ಣಾ ನದಿಯಲ್ಲಿ (Krishna River) ಕ್ಷಣದಿಂದ ಕ್ಷಣಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆ ರಾಯಚೂರಿನ (Raichuru) ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.

    ನಾರಾಯಣಪುರ ಜಲಾಶಯದಿಂದ (Narayanpur Dam) ಕೃಷ್ಣಾ‌ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆಯಾಗಿದ್ದು, ಒಳಹರಿವು ಹೆಚ್ಚಳವಾಗುತ್ತಿರುವುರಿಂದ ಇಂದು ರಾತ್ರಿಯ ಒಳಗಡೆ 2 ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅಪಾರ ಪ್ರಮಾಣದ ನೀರಿನಿಂದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ರಾಯಚೂರಿಗೆ ಘೋಷಣೆಯಾಗದ ಏಮ್ಸ್ – ಹೋರಾಟಗಾರರಿಂದ ಅಸಮಾಧಾನ

    ಲಿಂಗಸುಗೂರಿನ ಶೀಲಹಳ್ಳಿ-ಹಂಚಿನಾಳ ಮಧ್ಯದ ಸೇತುವೆ ಮುಳುಗಡೆಯಾಗಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಶೀಲಹಳ್ಳಿಯಿಂದ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಈಗ ಜಲದುರ್ಗ ಮಾರ್ಗವಾಗಿ ತಾಲೂಕು ಕೇಂದ್ರಕ್ಕೆ ಬರಲು ಗ್ರಾಮಸ್ಥರು 45 ಕಿ.ಮೀ ಸುತ್ತವರೆದು ಬರಬೇಕಿದೆ.

    ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ರಾಯಚೂರು ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳಿಗೆ ಪ್ರವಾಹ (Flood) ಭೀತಿ ಎದುರಾಗಿದೆ.