Tag: Narayanapura

  • ಪ್ರೀತಿಸಿದಾಕೆಯ ಕೊಲೆ – 6 ತಿಂಗಳ ಬಳಿಕ ಸಿಕ್ಕ ಸಾಕ್ಷಿಯಿಂದ ಲವ್ವರ್ ಅಂದರ್

    ಪ್ರೀತಿಸಿದಾಕೆಯ ಕೊಲೆ – 6 ತಿಂಗಳ ಬಳಿಕ ಸಿಕ್ಕ ಸಾಕ್ಷಿಯಿಂದ ಲವ್ವರ್ ಅಂದರ್

    ಗದಗ: ಇದೊಂದು ಮಣ್ಣಲ್ಲಿ ಮಣ್ಣಾಗಿದ್ದ ಪಾಗಲ್ ಪ್ರೇಮಿಯ ಕೊಲೆ ಪ್ರಕರಣ. ಇದೀಗ ಪೊಲೀಸರ ಚಾಣಾಕ್ಷತನದಿಂದ 6 ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದು, ಸಿನಿಮೀಯ ರೀತಿಯಲ್ಲಿ ಸಾಕ್ಷಿ ನಾಶ ಮಾಡಿದ್ದ ಖತರ್ನಾಕ್ ಕಿಲಾಡಿ ಪ್ರಿಯಕರ (Lover) ಪೊಲೀಸರ ಅತಿಥಿಯಾಗಿದ್ದಾನೆ.

    ಹೌದು, ಗದಗ (Gadag) ಜಿಲ್ಲೆಯಲ್ಲಿ ಪ್ರೀತಿ ಬಲೆಗೆ ಬಿದ್ದ ಯುವತಿ ಕೊಲೆ ಪ್ರಕರಣವು ಬೆಚ್ಚಿ ಬೀಳಿಸಿದೆ. 2025 ಜನವರಿ 12ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವತಿ ನಾಪತ್ತೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಕಾಣೆಯಾಗಿದ್ದ ಯುವತಿಯು 6 ತಿಂಗಳ ಬಳಿಕ ಮೂಳೆಗಳ ರೂಪದಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಿಯಕರನೇ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: Ghaziabad| ಏರ್‌ ಇಂಡಿಯಾ ಟೇಕಾಫ್‌ ವೇಳೆ ತಾಂತ್ರಿಕ ದೋಷ – ತಪ್ಪಿದ ಅನಾಹುತ

    ನಾರಾಯಣಪುರ (Narayanapura) ಗ್ರಾಮದ ಸತೀಶ್ ಹಿರೇಮಠ ಬಂಧಿತ ಆರೋಪಿ. ಅದೇ ಗ್ರಾಮದ ಮಧುಶ್ರೀ ಅಂಗಡಿ ಎಂಬ ಕೊಲೆಯಾಗಿದ್ದ ಯುವತಿ. ಈ ಕೊಲೆ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತೀಶ್ ಹಾಗೂ ಮಧುಶ್ರೀ ಇಬ್ಬರು 6 ವರ್ಷಗಳಿಂದ ಪ್ರೀತಿ ಮಾಡ್ತಿದ್ದರು. ಯುವತಿ ಮನೆಯಲ್ಲಿ ಇಬ್ಬರ ವಿಷಯ ಗೊತ್ತಾಗಿ, ಆಕೆಯನ್ನು ಗದಗ ನಗರದ ಪಂಚಾಕಯನಗರದ ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು ಎಂದಿದ್ದಾರೆ.

    ಇಷ್ಟಾದರೂ ಇಬ್ಬರು ಮತ್ತೆ ಒಂದಾಗಿದ್ದರು. ನನ್ನನ್ನು ಮದುವೆಯಾಗು ಎಂದು ಸತೀಶ್ ಜೊತೆ ಯುವತಿ ಜಗಳವಾಡಿದ್ದಳು. ಜಗಳ ವಿಕೋಪಕ್ಕೆ ತಿರುಗಿ ಆಕೆ ಧರಿಸಿದ್ದ ಶಾಲ್‌ನಿಂದಲೇ ಕುತ್ತಿಗೆ ಬಿಗಿದು ಆರೋಪಿ ಕೊಲೆ ಮಾಡಿದ್ದ. ನಂತರ ನಾರಾಯಣಪುರ ಗ್ರಾಮದಲ್ಲಿರುವ ಆತನ ಜಮೀನಿನ ಬಳಿ ಹಳ್ಳದ ದಂಡೆಯಲ್ಲಿ ಯುವತಿ ಶವ ಹೂತು ಹಾಕಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನ ಕರೆಯಲು ಅಶೋಕ್ ಆಗ್ರಹ

    ತನಿಖೆಗಿಳಿದ ಪೊಲೀಸರಿಗೆ ಯುವತಿಯ ಮೃತದೇಹದ ಗುರುತು ಸಿಗದ ರೀತಿಯಲ್ಲಿ ಬರೀ ಮೂಳೆಗಳು ದೊರೆತಿದ್ದು, ಜೂ. 16ರಂದು ವಿಧಿವಿಜ್ಞಾನ ತಜ್ಞರು ಮೂಳೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಿದ್ದರು ಎಂದು ಕೊಲೆ ಪ್ರಕರಣದ ತನಿಖೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಯುವತಿಯ ಕೊಲೆ ಮಾಡಿ ಪ್ರಕರಣದ ದಿಕ್ಕನ್ನೇ ಬದಲಿಸಿ, ತನಿಖೆಯ ಹಾದಿ ತಪ್ಪಿಸಿದ್ದ ಆರೋಪಿಗೆ ಪೊಲೀಸರು ಜೈಲಿನ ಹಾದಿ ತೋರಿಸಿದ್ದಾರೆ. ಇದನ್ನೂ ಓದಿ: ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು

    ಏನಿದು ಪ್ರಕರಣ?
    2025ರ ಜನವರಿ 12ರಂದು ಯುವತಿಯ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಸತೀಶ್ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು.

    ವಿಚಾರಣೆ ವೇಳೆ ಸತೀಶ್, ಆಕೆ ನನ್ನನ್ನು ಭೇಟಿಯೇ ಆಗಿಲ್ಲ ಎಂದಿದ್ದ. ನಂತರ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದೆ. ದಾರಿ ಮಧ್ಯೆ ಆಕೆ ಬೈಕ್‌ನಿಂದ ಕೆಳಗಿಳಿದು ಹೋಗಿದ್ದಳು. ನಂತರ ಅಪಘಾತದಲ್ಲಿ ತೀರಿ ಹೋಗಿದ್ದ ಆಕೆಯನ್ನು ಮಣ್ಣು ಮಾಡಿದೆ ಎಂದು ಹೇಳುತ್ತ ತನಿಖೆಯ ದಿಕ್ಕನ್ನೇ ಬದಲಿಸಿದ್ದ. ಇದನ್ನೂ ಓದಿ: ಕಾಂತಾರ ಶೂಟಿಂಗ್‌ – ಯಾವುದೇ ಅವಘಡ ಸಂಭವಿಸಿಲ್ಲ: ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

    ಯುವತಿ ನಾಪತ್ತೆಯಾಗಿದ್ದಳೋ, ಕೊಲೆಯಾಗಿದ್ದಾಳೋ ಎಂಬುದು ತನಿಖೆಯನ್ನು ಪೊಲೀಸರಿಗೆ ಚಾಲೆಂಜಿಂಗ್ ಆಗಿತ್ತು. ಆರೋಪಿಯ ಸಂಶಯಾಸ್ಪದ ನಡವಳಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಚಲನವಲನ ಗಮನಿಸಿದ ಪೊಲೀಸರು ಪುನಃ ವಿಚಾರಣೆ ಆರಂಭಿಸಿದ್ದರು.

    ಈ ವೇಳೆ 2024ರ ಡಿಸೆಂಬರ್ 16ರ ರಾತ್ರಿ 10ರ ಸುಮಾರಿಗೆ ಆರೋಪಿ ಸತೀಶ್, ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಿರುಗಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವೀಡಿಯೋ ಕೊಲೆ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಿ ದೊರೆತಿತ್ತು. ಈ ಕುರಿತು ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸಂಶಯ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿಯನ್ನು ವಿಚಾರಿಸಿದಾಗ ನಿಜಾಂಶ ಬಾಯಿ ಬಿಟ್ಟಿದ್ದಾನೆ. ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈ ಪ್ರಕರಣದ ತನಿಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಪ್ರಭುಗೌಡ ಕಿರೇದಳ್ಳಿ, ಮಹಾಂತೇಶ್ ಸಜ್ಜನ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್ ಸಿಂಧೆ, ಪಿಎಸ್‌ಐ ಮಾರುತಿ ಜೋಗದಂಡಕರ್, ಸಿಬ್ಬಂದಿ ಎನ್.ಡಿ.ಹುಬ್ಬಳ್ಳಿ, ಸಂತೋಷ್ ದೋಣಿ, ನವೀನ್ ದೇವಪೂರ, ಪರಶುರಾಮ್ ದೊಡ್ಡಮನಿ, ಅಶೋಕ್ ಗದಗ, ನಾಗರಾಜ್ ಬರಡಿ, ಅಕ್ಷಯ್ ಬಾದಾಮಿ ಭಾಗವಹಿಸಿದ್ದರು. ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಬಹುಮಾನ ಘೋಷಿಸಿದ್ದಾರೆ.

  • ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ – ನಾರಾಯಣಪುರ ಡ್ಯಾಂಗೆ 42 ಪೊಲೀಸ್ ಸಿಬ್ಬಂದಿ ನಿಯೋಜನೆ

    ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ – ನಾರಾಯಣಪುರ ಡ್ಯಾಂಗೆ 42 ಪೊಲೀಸ್ ಸಿಬ್ಬಂದಿ ನಿಯೋಜನೆ

    ಯಾದಗಿರಿ: ಭಾರತ (India) ಮತ್ತು ಪಾಕಿಸ್ತಾದ (Pakistan) ಯುದ್ಧ ಭೀತಿ ಹಾಗೂ ರಾಷ್ಟ್ರದ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ನಾರಾಯಣಪುರದ (Narayanapura) ಬಸವಸಾಗರ ಡ್ಯಾಂನಲ್ಲಿ (Basava Sagar Reservoir) 42 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯ ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ಸರ್ಕಾರ ರಾಜ್ಯದ 17 ಡ್ಯಾಂಗಳಿಗೆ ಭದ್ರತೆ ಕಲ್ಪಿಸುವಂತೆ ಸೂಚಿಸಿದ್ದು, ನಾರಾಯಣಪುರ ಡ್ಯಾಂನಲ್ಲಿ ಭದ್ರತೆ ವಹಿಸಲಾಗಿದೆ. ಡ್ಯಾಂನ 4 ಗೇಟ್‌ಗಳಲ್ಲಿ ಪೊಲೀಸರು ನಿಗಾವಹಿಸಿದ್ದು, ಯಾದಗಿರಿ, ರಾಯಚೂರು, ವಿಜಯಪುರ ಸೇರಿ 42 ಪೊಲೀಸರನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ರಾಜ್ಯದ ಎಲ್ಲಾ 17 ಅಣೆಕಟ್ಟೆಗಳಿಗೆ ಭದ್ರತೆ ಒದಗಿಸಲು ಸರ್ಕಾರ ಆದೇಶ

    ಸದ್ಯ ಡ್ಯಾಂಗಳ ಸುರಕ್ಷತೆ ದೃಷ್ಟಿಯಿಂದ ಭದ್ರತೆ ಹೆಚ್ಚಿಸಲಾಗಿದ್ದು, ಡ್ಯಾಂ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಡ್ಯಾಂ ಒಳಗೆ ಯಾರಿಗೂ ಪ್ರವೇಶವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಹೆಚ್ಚಿನ ಭದ್ರತೆ ಒದಗಿಸಲು ಸರ್ಕಾರ ಆದೇಶಿಸಿದೆ. ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟೆಗಳಿಗೆ ಭದ್ರತೆ ನೀಡಲು ಸೂಚನೆ ನೀಡಿದೆ.

    ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೇ ಹೊಣೆಗಾರರು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

    ಯಾವ್ಯಾವ ಅಣೆಕಟ್ಟೆಗಳು?
    ಕಾವೇರಿ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕರ್ನಾಟಕ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕೃಷ್ಣ ಭಾಗ್ಯ ಜಲನಿಗಮ ನಿಯಮಿತ- ಬೆಂಗಳೂರು, ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ- ಬೆಂಗಳೂರು, ಮುಖ್ಯ ಎಂಜಿನಿಯರ್ ನೀರಾವರಿ ದಕ್ಷಿಣ- ಮೈಸೂರು, ಹೇಮಾವತಿ ನಾಲಾವಲಯ- ತುಮಕೂರು, ಹೇಮಾವತಿ ಯೋಜನೆ- ಗೊರೂರು, ನೀರಾವರಿ ಉತ್ತರ- ಬೆಳಗಾವಿ, ತುಂಗಾ ಮೇಲ್ದಂಡೆ- ಶಿವಮೊಗ್ಗ, ಮಲಪ್ರಭಾ ಯೋಜನಾ ವಲಯ- ಧಾರವಾಡ, ಮುನಿರಾಬಾದ್ ನೀರಾವರಿ ಕೇಂದ್ರ ವಲಯ, ನೀರಾವರಿ ಯೋಜನಾ ವಲಯ- ಕಲಬುರಗಿ, ಭದ್ರಾ ಮೇಲ್ದಂಡೆ ಯೋಜನೆ- ಚಿತ್ರದುರ್ಗ, ಆಲಮಟ್ಟಿ ಅಣೆಕಟ್ಟು ವಲಯ, ಕಾಲುವೆ 1 ಭೀಮರಾಯನಗುಡಿ, ಕಾಲುವೆ 2- ರಾಂಪುರ, ನಾರಾಯಣಪುರ ಅಣೆಕಟ್ಟು.ಇದನ್ನೂ ಓದಿ: ಪಾಕ್‌ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?

  • ಐಇಡಿ ಬ್ಲಾಸ್ಟ್- ಬಸ್‍ನಲ್ಲಿದ್ದ ಮೂವರು ಯೋಧರು, ಓರ್ವ ಪೊಲೀಸ್ ಹುತಾತ್ಮ

    ಐಇಡಿ ಬ್ಲಾಸ್ಟ್- ಬಸ್‍ನಲ್ಲಿದ್ದ ಮೂವರು ಯೋಧರು, ಓರ್ವ ಪೊಲೀಸ್ ಹುತಾತ್ಮ

    – ಒಟ್ಟು 14 ಜನರಿಗೆ ಗಾಯ

    ರಾಯ್‍ಪುರ: ಛತ್ತಿಸ್‍ಗಡದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಮೂವರು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್(ಡಿಆರ್ ಜಿ) ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. ಅಲ್ಲದೆ 14 ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ.

    ಛತ್ತಿಸ್‍ಗಡದ ನಾರಾಯಣಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನಕ್ಸಲರು ನಡೆಸಿದ ಐಇಡಿ ಬ್ಲಾಸ್ಟ್ ನಿಂದಾಗಿ ಮೂವರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. 14 ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಐಜಿ ಬಸ್ತಾರ್.ಪಿ.ಸುಂದರ್‍ರಾಜ್ ತಿಳಿಸಿದ್ದಾರೆ.

    ಬಸ್‍ನಲ್ಲಿ ಒಟ್ಟು 27 ಡಿಆರ್ ಜಿ ಸಿಬ್ಬಂದಿ ನಾರಾಯಣಪುರದ ಕಡೇನಾರ್ ನಿಂದ ಕನ್ಹಾರ್ ಗಾಂವ್‍ಗೆ ತೆರಳುತ್ತಿದ್ದಾಗ ನಕ್ಸಲರು ಐಇಡಿ ಬ್ಲಾಸ್ಟ್ ಮಾಡಿದ್ದಾರೆ ಎಂದು ಐಟಿಬಿಪಿ ಮಾಹಿತಿ ನೀಡಿದೆ. ಐಟಿಬಿಪಿಯ 45ನೇ ಬೆಟಾಲಿಯನ್ ಸಿಬ್ಬಂದಿಗೆ ಗಾಯಗಳಾಗಿದ್ದು, ಘಟನೆ ನಡೆದ ಇಡೀ ಪ್ರದೇಶವನ್ನು ಸುತ್ತುವರಿದು ಹುಡುಕಾಟ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.