ಬೆಂಗಳೂರು: ಇನ್ಫೋಸಿಸ್ (Infosys) ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ (Narayanamurthy) ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ (Tirupati) ಬಂಗಾರದ ಶಂಖವನ್ನು ಕಾಣಿಕೆ ನೀಡಿದ್ದಾರೆ.
ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊದಲಿನಿಂದಲೂ ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ.
ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ನಲವತ್ತು ವರ್ಷಗಳಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ನೀಡಿದ್ದಾರೆ.
– ಶಾಲೆಯ ನಿರ್ಮಾಣವನ್ನು ಉತ್ತಮ ಗುಣಮಟ್ಟದಲ್ಲಿ ಮಾಡಬೇಕು ಎಂದು ಸೂಚಿಸಿದ್ದೇನೆ
ವಿಜಯಪುರ: ಡಾ.ಸುಧಾಮೂರ್ತಿ ಮತ್ತು ಡಾ.ನಾರಾಯಣಮೂರ್ತಿರನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು ಎಂದು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.
ಪದ್ಮಶ್ರೀ ಕಾಕಾ ಕಾರ್ ಖಾನಿಸ್ ಪ್ರೌಢಶಾಲೆ ನಿರ್ಮಾಣ ಕಾಮಗಾರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಅದಕ್ಕೂ ಮೊದಲು ಮಾಧ್ಯಮಗಳೊಂದಿದಗೆ ಮಾತನಾಡಿದ ಅವರು, ಈ ಶಾಲೆ ನಿರ್ಮಿಸುವ ಕಾರ್ಯ 6 ತಿಂಗಳಲ್ಲಿ ಮುಗಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಚಟುವಟಿಕೆಗಳು ಪ್ರಾರಂಭ ಆಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
2020-21ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಅಡಿಯಲ್ಲಿ 10 ಕೋಟಿ ರೂ. ಅನುದಾನ ಮಾಡಲಾಗಿತ್ತು. ಅದರಲ್ಲಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ದೈಹಿಕ ಶಿಕ್ಷಣ ವಿಭಾಗದ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ:ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು
1933 ರಲ್ಲಿ ಗಾಂಧೀಜಿಯವರಿಂದ ಪ್ರೇರಣೆ ಪಡೆದು ಕಾಕಾ ಕಾರಖಾನೀಸ ಅವರು ಹರಿಜನ ಕನ್ಯಾ ಮಂದಿರ ಮತ್ತು ಹರಿಜನ ಗಂಡು ಮಕ್ಕಳ ಹಾಸ್ಟೆಲ್ ಪ್ರಾರಂಭ ಮಾಡಿ 236 ಮಕ್ಕಳನ್ನು ಓದಿಸಿ ಕರ್ನಾಟಕದ ಗಾಂಧಿ ಅನಿಸಿಕೊಂಡರು. ದೀನ ದಲಿತರ ಉದ್ಧಾರಕ್ಕಾಗಿ ಅವರ ಜೀವನವನ್ನೇ ಮುಡುಪಾಗಿಟ್ಟವರು ಎಂದು ನೆನೆಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಸನಗೌಡ ಪಾಟೀಲ ವಹಿಸಿದ್ದರು. ಈ ಕಟ್ಟಡವು 2020-21 ನೇ ಸಾಲಿನ 5054-ಎಸ್.ಸಿ.ಪಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ.ಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಇದನ್ನೂ ಓದಿ:ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ
ಕಟ್ಟಡದಲ್ಲಿ ಏನಿದೆ?
ಕಟ್ಟಡದ ನೆಲಮಹಡಿ(1140,00 ಚಿ.ಮೀ), ಮೊದಲ ಮಹಡಿ (1180,00 ಚಿ.ಮೀ), ಎರಡನೇ ಮಹಡಿ (980,00 ಚ.ಮೀ) ಹಾಗೂ ಟೆರೆಸ್ ಮಹಡಿ (50.00 ಚ.ಮೀ) ಒಟ್ಟು 3350.00 ಚ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಶಾಲೆಗೆ ಅವಶ್ಯವಿರುವ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ನೆಲ ಮಹಡಿಯು ಅಡ್ಮಿನಿಸ್ಟ್ರೇಟಿವ್ ಆಫೀಸ್, ರಿಸರ್ಚ್ ಸೆಂಟರ್, ಪ್ರಿನ್ಸಿಪಲ್ ಚೇಂಬರ್, ಕ್ಲಾಸ್ ರೂಮ್ಸ್-4, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಯೋಗಾ ಸೆಂಟರ್, ಲೇಡಿಸ್ ವೇಟಿಂಗ್ ರೂಮ್ ಗಳನ್ನು ಒಳಗೊಂಡಿರುತ್ತದೆ.
ಯಾವ ಸೌಲಭ್ಯವಿದೆ?
ಮೊದಲನೇ ಮಹಡಿಯ ಕಾನ್ಫರನ್ಸ್ ರೂಮ್, ಲೈಬ್ರರಿ, ಮ್ಯಾನೇಜಮೆಂಟ್ ರೂಮ್, ಸ್ಟಾಫ್ ರೂಮ್, ಕ್ಲಾಸ್ ರೂಮ್ಸ್-4, ಹೆಲ್ತ್ ಸೆಂಟರ್, ಸ್ಟೋರ್ ಮತ್ತು ರೆಕಾಡ್ರ್ಸ್, ಇಂಡೋರ್ ಸ್ಪೋಟ್ರ್ಸ ಫೆಸಿಲಿಟ, ಜೆಂಟ್ಸ್ ವೇಟಿಂಗ್ ರೂಮ್ ಗಳನ್ನು ಒಳಗೊಂಡಿರುತ್ತದೆ. ಎರಡನೇ ಮಹಡಿಯ ರೆಸೋನನ್ಸ್ ಸೆಂಟರ್, ಡಿಜಿಟಲ್ ಲೈಬ್ರರಿ, ಮ್ಯಾನೇಜಮೆಂಟ್ ರೂಮ್, ಕ್ಲಾಸ್ ರೂಮ್ಸ್-4, ಮಲ್ಟಿ ಪರಪಸ್ ಹಾಲ್ ಗಳನ್ನು ಒಳಗೊಂಡಿದ್ದು, ಮೂರನೇ ಮಹಡಿಯು ಸ್ಟೇರಕೇಸ್ ಹೆಡ್ ರೂಮ್ಸ್ ಗಳಿರುತ್ತದೆ. ಇದನ್ನೂ ಓದಿ:ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ರಮೇಶ್ ಜಿಗಜಿಣಗಿ, ಜಿಲ್ಲಾಧಿಕಾರಿ ಪಿ, ಸುನೀಲ್ ಕುಮಾರ್, ಪೆÇಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಮುಖಂಡರುಗಳಾದ ಗೋಪಾಲನಾಯಕ್, ಅಡಿವೆಪ್ಪ ಸಾಲಗಲ್, ಸಿದ್ದು ರಾಯಣ್ಣವರ, ರಮೇಶ್ ಆಸಂಗಿ, ಶಂಕರ್, ಭೀರಪ್ಪ ಅರ್ಧಾವೂರ, ಹಾಗೂ ಇತರೆ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ರಾಯಚೂರು: ಕೊರೊನಾ ಲಾಕ್‍ಡೌನ್ ಬಳಿಕ ರಾಯರ ಭಕ್ತರಿಗೆ ಅನುಕೂಲವಾಗಲಿ ಅಂತ ಇನ್ಫೋಸಿಸ್ ಫೌಂಡೇಶನ್ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದೆ.
ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿಗಳಿಂದ ಆಹಾರ ಧಾನ್ಯ ವಿತರಣೆಯಾಗಿದ್ದು, ಅಕ್ಕಿ ,ಬೇಳೆ, ಅಡುಗೆ ಎಣ್ಣೆ ಸೇರಿ ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನ ಬೆಂಗಳೂರಿನಿಂದ ರವಾನೆ ಮಾಡಿದ್ದಾರೆ.
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಇನ್ಫೋಸಿಸ್ ಫೌಂಡೇಶನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ನೀಡಿದ ಆಹಾರ ಧಾನ್ಯಗಳನ್ನ ಮಠ ಭಕ್ತರ ಪ್ರಸಾದಕ್ಕೆ ಬಳಕೆ ಮಾಡಲಿದೆ. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್ಗೆ ರಿಲೀಫ್
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ನರಸೀಪುರ ಗ್ರಾಮದ ಖ್ಯಾತ ನಾಟಿ ವೈದ್ಯ ನಾರಾಯಣಮೂರ್ತಿ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತ ನಾರಾಯಣಮೂರ್ತಿ ಅವರಿಗೆ 80 ವರ್ಷ ವಯಸ್ಸಾಗಿತ್ತು. ತಡ ರಾತ್ರಿ ಮನೆಯಲ್ಲಿ ಇದ್ದ ವೇಳೆ ನಾರಾಯಣಮೂರ್ತಿ ಅವರಿಗೆ ಹೃದಯಾಘಾತವಾಗಿದೆ. ಈ ವೇಳೆ ಕುಟುಂಬಸ್ಥರು ತಕ್ಷಣವೇ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ನಾರಾಯಣಮೂರ್ತಿ ಅವರು ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಿದ್ದರು.
ಇವರಿಂದ ಔಷಧಿ ಪಡೆದ ಕೆಲವರು ಕಾಯಿಲೆಯಿಂದ ಗುಣಮುಖರಾಗಿದ್ದರು. ಹೀಗಾಗಿ ಇವರ ಬಳಿ ಔಷಧಿ ಪಡೆಯಲು ದೇಶದ ವಿವಿಧೆಡೆಗಳಿಂದ ಪ್ರತಿದಿನ ಸಾವಿರಾರು ಮಂದಿ ಆಗಮಿಸಿ ಔಷಧಿ ಪಡೆಯುತ್ತಿದ್ದರು. ಲಕ್ಷಾಂತರ ಮಂದಿ ರೋಗಿಗಳಿಗೆ ಔಷಧಿ ನೀಡಿರುವ ನಾರಾಯಣಮೂರ್ತಿ ಅವರು ರೋಗಿಗಳ ಪಾಲಿಗೆ ದೈವ ಸ್ವರೂಪದಂತಿದ್ದರು. ಇದೀಗ ನಾಟಿ ವೈದ್ಯ ಮೃತಪಟ್ಟಿರುವುದು ರೋಗಿಗಳ ಪಾಲಿಗೆ ತುಂಬಲಾರದ ನಷ್ಟವಾಗಿದೆ.