Tag: narayanagowda

  • ಕರವೇ ನಾರಾಯಣಗೌಡ ಜೈಲ್‌ ಗೇಟ್‌ನಲ್ಲಿ ಮತ್ತೆ ಅರೆಸ್ಟ್‌

    ಕರವೇ ನಾರಾಯಣಗೌಡ ಜೈಲ್‌ ಗೇಟ್‌ನಲ್ಲಿ ಮತ್ತೆ ಅರೆಸ್ಟ್‌

    ಬೆಂಗಳೂರು: ಕನ್ನಡ ನಾಮಫಲಕ (Kannada Nameplate) ಹೋರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (KaRaVe) ರಾಜ್ಯಾಧ್ಯಕ್ಷ ನಾರಾಯಣ ಗೌಡ (Narayana Gowda) ಮತ್ತೆ ಅರೆಸ್ಟ್‌ ಆಗಿದ್ದಾರೆ.

    ಶನಿವಾರ ಜಾಮೀನು (Bail) ಸಿಕ್ಕಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ (Parappana Agrahara) ನಾರಾಯಣ ಗೌಡ ಬಿಡುಗಡೆಯಾಗಿದ್ದರು. ಬಿಡುಗಡೆ ಆಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್‌ ಪೊಲೀಸರು ನಾರಾಯಣ ಗೌಡರನ್ನು ಜೈಲಿನ ಮೊದಲ ಗೇಟ್‌ನಲ್ಲೇ ವಶಕ್ಕೆ ಪಡೆದಿದ್ದಾರೆ.  ಇದನ್ನೂ ಓದಿ: ಅಶ್ಲೀಲ ಪದ ಬಳಸುತ್ತಿದ್ದ, ಖಾಸಗಿ ಅಂಗ ಮುಟ್ಟುತ್ತಿದ್ದ – ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಮೋದಿ ಕಚೇರಿಗೆ ಪತ್ರ

    2017ರ ಸಾರ್ವಜನಿಕ ಆಸ್ತಿನಾಶ, ಅಧಿಕಾರಿಗಳಿಗೆ ಅಡ್ಡಿ ಪ್ರಕರಣದಲ್ಲಿ ಮತ್ತೆ ನಾರಾಯಣ ಗೌಡರನ್ನು ಬಂಧಿಸಲಾಗಿದೆ. ಪೊಲೀಸರು ನಾರಾಯಣಗೌಡರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಕೋರ್ಟ್‌ ಆದೇಶದ ಮೇಲೆ ನಾರಾಯಣ ಗೌಡ ಇಂದೇ ಬಿಡುಗಡೆಯಾಗುತ್ತಾರೋ ಇಲ್ಲವೋ ಎನ್ನುವುದು ನಿರ್ಧಾರವಾಗಲಿದೆ.

    ಪರಪ್ಪನ ಅಗ್ರಹಾರದ ಬಳಿ 40ಕ್ಕೂ ಹೆಚ್ಚು ಸಿಬ್ಬಂದಿ ಮತ್ತು 4 ಕೆಎಸ್‌ಆರ್‌ಪಿ ಪಡೆಯನ್ನು ನಿಯೋಜನೆ ಮಾಡುವ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶನಿವಾರ ನಾರಾಯಣಗೌಡ ಸೇರಿ 28 ಮಂದಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಮಂತ್ರಾಕ್ಷತೆಯಲ್ಲಿ ಅನ್ನಭಾಗ್ಯದ ಅಕ್ಕಿ ಹುಡುಕಿದ್ದ ಡಿಕೆಶಿಗೆ ದೋಸ್ತಿಗಳು ತಿರುಗೇಟು

     

  • ಮಂಡ್ಯ ಉಸ್ತುವಾರಿ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ: ಗೋಪಾಲಯ್ಯ

    ಮಂಡ್ಯ ಉಸ್ತುವಾರಿ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ: ಗೋಪಾಲಯ್ಯ

    ಮಂಡ್ಯ: ಹಾಸನ, ಮಂಡ್ಯ ಜನರ ಋಣ ನನ್ನ ಮೇಲಿದೆ. ಮಂಡ್ಯ (Mandya), ಹಾಸನ (Hassan) ಜಿಲ್ಲೆಯ ಜನರು ಯಾರ ಬರಲಿ ಅವರಿಗೆ ಸ್ಪಂದಿಸುತ್ತೇನೆ ಎಂದು ಸಚಿವ ಕೆ. ಗೋಪಾಲಯ್ಯ (K Gopalaiah) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಉಸ್ತುವಾರಿ ವಹಿಸಿಕೊಳ್ಳಲು ನಕಾರ ಮಾಡಿದರು. ಮುಖ್ಯಮಂತ್ರಿಗಳು ಕೊಟ್ಟ ಜವಾಬ್ದಾರಿಯನ್ನು ಮಾಡಿದ್ದೇನೆ. ಮತ್ತೆ ಉಸ್ತುವಾರಿ ಹೊಣೆ ವಹಿಸಿಕೊಳ್ಳುವ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಸರ್ಕಾರ, ಸಿಎಂ, ಪಕ್ಷದ ಅಧ್ಯಕ್ಷರು ಕೊಡುವ ಜವಾಬ್ದಾರಿ ನಿರ್ವಹಿಸುವುದು ನನ್ನ ಕರ್ತವ್ಯ. ಮಂಡ್ಯ ಉಸ್ತುವಾರಿ ವಿಚಾರ ನಾನು ಮಾತನಾಡಲ್ಲ ಎಂದು ಹೇಳಿದರು.

    ಕೆ.ಗೋಪಾಲಯ್ಯರಿಗೆ ಉಸ್ತುವಾರಿ ಕೊಡಲಿ ಎಂಬ ನಾರಾಯಣಗೌಡರ (Narayana Gowda) ಹೇಳಿಕೆಗೂ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಅವರು, ಮಂಡ್ಯ, ಹಾಸನ ಜಿಲ್ಲೆಯ ಜನರು ಯಾರ ಬರಲಿ ಅವರಿಗೆ ಸ್ಪಂದಿಸುತ್ತೇನೆ. ಉಸ್ತುವಾರಿ ವಿಚಾರವಾಗಿ ನಾನು ಏನನ್ನು ಮಾತನಾಡಲ್ಲ. ಉಸ್ತುವಾರಿ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಬಲಿಷ್ಠವಾಗಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗೊಂದಲ ಏನಿಲ್ಲ, ಕಂದಾಯ ಸಚಿವರ ಅಶೋಕರನ್ನೇ (R Ashok) ಮೊದಲು ಮುಖ್ಯಮಂತ್ರಿಗಳು ನೇಮಕ ಮಾಡಿದರು. ಅವರ ಕಾರ್ಯ ಒತ್ತಡದಿಂದ ಅವರು ಹೋಗಿರಲಿಲ್ಲ. ನನ್ನನ್ನು ಕೆಲವು ದಿನ ಇರಲು ಹೇಳಿದ್ದರು. ನಾನಿದ್ದಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಯಾವ ರೀತಿ ಎಲ್ಲರ ಜೊತೆ ಬೆರೆತಿದ್ದೆ, ಅಲ್ಲಿಯೂ ಸಹ ಬೆರಿತಿದ್ದೆ. ನಮ್ಮಲ್ಲಿ ಇರುವಂತಹ ಎಲ್ಲರೂ ಸಮರ್ಥರೇ ಎಂದರು. ಇದನ್ನೂ ಓದಿ: ಸ್ವಂತ ಅಳಿಯನನ್ನೇ ಕಿಡ್ನ್ಯಾಪ್‌ ಮಾಡಿದ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR

    ಹಿಂದೆ ನಾರಾಯಣಗೌಡರು ಇದ್ದರು, ಸಮರ್ಥರೇ. ಅಶೋಕ್ ಅವರು ಬಿಜೆಪಿಯಲ್ಲಿ ಹಿರಿಯರು, ನಮಗಿಂತ ದೊಡ್ಡವರು, ದೊಡ್ಡದಾದ ಕಂದಾಯ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆ ತಂದಿದ್ದಾರೆ. ನಾನಲ್ಲ, ಪಕ್ಷದಲ್ಲಿ ಪ್ರತಿಯೊಬ್ಬರು ಸಮರ್ಥರಾಗಿದ್ದಾರೆ. ನಾನೇ ಸ್ವತಃ ಒಂದು ಜಿಲ್ಲೆ ಸಾಕು ಅಂತ ಕೇಳಿದ್ದೆ. ನಾನು ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲಿ ಯಾರು ಬೇಕಾದರೂ ನಿರ್ವಹಿಸಬೇಕಾದ ಶಕ್ತಿಯಿದೆ. ನಮ್ಮ ಪಕ್ಷದಲ್ಲಿ ಸಚಿವ ಸಂಪುಟದ ಎಲ್ಲಾ ಸಚಿವರು ಸಮರ್ಥರಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕ್ರಿಕೆಟ್ ಟೂರ್ನಿ ವೇಳೆ ಕಿರಿಕ್ ಮಾಡಿ ಇಬ್ಬರ ಹತ್ಯೆ ಪ್ರಕರಣ – ಆರೋಪಿತರ ಕಾಲಿಗೆ ಪೊಲೀಸರ ಗುಂಡೇಟು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾರಾಯಣಗೌಡ ಬಣದ 12 ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

    ನಾರಾಯಣಗೌಡ ಬಣದ 12 ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

    ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಾರಾಯಣಗೌಡ (Narayana Gowda) ಬಣದ 8 ರಿಂದ 12 ಮಂದಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ (FIR) ದಾಖಲಿಸಲಾಗಿದೆ.

    ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆ (Hirebagewadi Police Station) ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬೆಳಗಾವಿ ಪ್ರವೇಶಕ್ಕೆ ಅವಕಾಶ ಸಿಗದಕ್ಕೆ ಹಿರೇಬಾಗೇವಾಡಿ ಟೋಲ್‍ಗೇಟ್ ಬಳಿ ಕಲ್ಲು ತೂರಾಟ ನಡೆಸಲಾಗಿತ್ತು. ಮಹಾರಾಷ್ಟ್ರ ನೋಂದಣಿಯ ಲಾರಿಯ ಮೇಲೆ ಕಲ್ಲು ತೂರಿ ಗಾಜು ಪುಡಿ ಪುಡಿ ಮಾಡಲಾಗಿತ್ತು. ಇದನ್ನೂ ಓದಿ: ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಭಾರೀ ಏರಿಕೆ!

    ಅಲ್ಲದೇ ಈ ವೇಳೆ ಕೆಲವು ವಾಹನಗಳ ನಂಬರ್ ಪ್ಲೇಟ್ ಕಿತ್ತು, ಮಸಿ ಬಳಿದ ಆರೋಪ ಕೇಳಿಬಂದಿತ್ತು. ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಕೃತ್ಯ ಎಸಗಿ ತಕ್ಷಣವೇ ಗುಂಪಿನಲ್ಲಿ ಓಡಿ ಹೋಗಿದಕ್ಕೆ ಗುರುತು ಪತ್ತೆ ಆಗದ್ದಕ್ಕೆ ಬಂಧನ ಸಾಧ್ಯವಾಗಿಲ್ಲ.

    ಐಪಿಸಿ ಸೆಕ್ಷನ್ 143, 147, 341, 427, 149 ಅಡಿ 12 ಜನರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಕ್ರೀಡಾ ವಿವಿ ಸ್ಥಾಪನೆಗೆ ಕ್ರಮ: ನಾರಾಯಣ ಗೌಡ

    ರಾಜ್ಯದಲ್ಲಿ ಕ್ರೀಡಾ ವಿವಿ ಸ್ಥಾಪನೆಗೆ ಕ್ರಮ: ನಾರಾಯಣ ಗೌಡ

    ಬೆಳಗಾವಿ: ಕರ್ನಾಟಕದಲ್ಲಿ ಶೀಘ್ರದಲ್ಲೇ ಕ್ರೀಡಾ ವಿವಿ ಸ್ಥಾಪನೆಗೆ ಕ್ರಮವಹಿಸುವುದಾಗಿ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

    ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೊಡಗಿನಿಂದಲೂ ಪ್ರಸ್ತಾವನೆ ಬಂದಿದೆ. ಆದರೆ ವಿವಿ ಸ್ಥಾಪನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿಯಮಗಳ ಅನ್ವಯ ಪರಿಶೀಲನೆ ನಡೆಸಿ ಸೂಕ್ತ ಜಾಗದಲ್ಲಿ ರಾಜ್ಯದ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ – ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಕೊಡಗು ಕ್ರೀಡೆ ಮೂಲಕ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಜಿಲ್ಲೆ.‌ ಕೊಡಗು ಜಿಲ್ಲೆಗೆ ವಿವಿಧ ಕ್ರೀಡಾ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ಇಲಾಖೆಯಿಂದ 2.18 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅಲ್ಲದೇ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹಾಕಿ ಟರ್ಫ್ ನಿರ್ಮಿಸಲಾಗಿದೆ. ಇಲ್ಲಿನ ಕ್ರೀಡಾ ಶಾಲೆಯಲ್ಲಿ ಒಟ್ಟು 290 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

  • ರಾಗಿಣಿ ಈ ರೀತಿ ಅಂತ ಗೊತ್ತಿರಲಿಲ್ಲ: ನಾರಾಯಣ ಗೌಡ

    ರಾಗಿಣಿ ಈ ರೀತಿ ಅಂತ ಗೊತ್ತಿರಲಿಲ್ಲ: ನಾರಾಯಣ ಗೌಡ

    ಚಾಮರಾಜನಗರ: ನಟಿ ರಾಗಿಣಿ ದ್ವಿವೇದಿ ಅವರು ಈ ರೀತಿ ಅಂತ ನನಗೆ ಗೊತ್ತಿರಲಿಲ್ಲ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ್ ಗೌಡ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗಕ್ಕೂ ನನಗೂ ಟಚ್ ಕಡಿಮೆ ಇದೆ. ಚಿತ್ರ ನಟಿ ರಾಗಿಣಿಯನ್ನ ಪ್ರಚಾರಕ್ಕೆ ನಾವು ಕರೆಸಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ನನ್ನ ಕೆಲವು ಸ್ನೇಹಿತರು ಪ್ರಚಾರಕ್ಕೆ ಕರೆಸಿದ್ದರು. ಆದರೆ ರಾಗಿಣಿ ಈ ರೀತಿ ಎಂದು ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

    ಶಿವಪ್ರಕಾಶ್ ಅವರು ರಾಗಿಣಿ ಜೊತೆ ಮೂರು ವರ್ಷ ಕೆಲಸ ಮಾಡಿದ್ದಾರೆ. ಅವರ ಹೆಸರು ಸಹ ಕೇಳಿ ಬರುತ್ತಿದೆ. ಇದರ ಬಗ್ಗೆಯೂ ಸಹ ನನಗೆ ಗೊತ್ತಿಲ್ಲ. ನನ್ನ ಚುನಾವಣಾ ಪ್ರಚಾರಕ್ಕೆ ಅವರನ್ನ ಕರೆಸಿರಲಿಲ್ಲ. ಪ್ರಚಾರಕ್ಕೆ ಬಂದ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಪ್ರಶ್ನಿಸಿದರು. ಇದೇ ವೇಳೆ ರಾಗಿಣಿ ಪರವಾಗಿ ನಮ್ಮ ಪಕ್ಷದಲ್ಲಿ ಯಾರೂ ಇಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಂಡ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲೂ ಗಾಂಜಾ ಮಾರಾಟ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾಗಮಂಗಲದಲ್ಲಿ ಗಾಂಜಾ ಮಾರಾಟ ಇದ್ದರೆ ಹಿಡಿದುಕೊಡಲಿ. ಇಲ್ಲವಾದ್ರೆ ನಮಗೆ ಟಿಪ್ಸ್ ಕೊಡಲಿ. ಎಂದು ಸಚಿವರು ಗರಂ ಆದರು.

  • ಕರ್ನಾಟಕ ಬಂದ್‍ಗೆ ಕರವೇ ಬೆಂಬಲವಿಲ್ಲ: ನಾರಾಯಣಗೌಡ

    ಕರ್ನಾಟಕ ಬಂದ್‍ಗೆ ಕರವೇ ಬೆಂಬಲವಿಲ್ಲ: ನಾರಾಯಣಗೌಡ

    ಬೆಳಗಾವಿ/ಚಿಕ್ಕೋಡಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿರುವ ಫೆಬ್ರವರಿ 13ರ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

    ಬಂದ್ ಕುರಿತು ಚಿಕ್ಕೋಡಿಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಗೌಡರು, ಸರೋಜಿನಿ ಮಹಿಷಿ ವರದಿ ಜಾರಿ ವಿಚಾರವಾಗಿ ಕರವೇ ಹೋರಾಟ ಮುಂದುವರಿಯಲಿದೆ. ಆದರೆ ನಾಳೆ ನಡೆಯುವ ಬಂದ್‍ಗೆ ಯಾವುದೇ ಬೆಂಬಲವನ್ನು ಕರವೇ ನೀಡುವುದಿಲ್ಲ. ಕೆಲ ಕನ್ನಡ ಸಂಘಟನೆಗಳು ಮಾತು ಮಾತಿಗೂ ಬಂದ್ ಕರೆ ನೀಡುತ್ತಿವೆ. ಇದರ ನಷ್ಟ ಕನ್ನಡಿಗರಿಗೆ ಆಗುತ್ತಿದೆ ಎಂದು ತಿಳಿಸಿದರು.

    ಮಾರ್ಚ್ ತಿಂಗಳಲ್ಲಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ರ‍್ಯಾಲಿಯನ್ನು ಕರವೇ ಆಯೋಜನೆ ಮಾಡಲಿದೆ. ರ‍್ಯಾಲಿ ಮೂಲಕ ಮುಖ್ಯಮಂತ್ರಿಗಳಿಗೆ ವರದಿ ಜಾರಿ ಮಾಡಬೇಕು ಎಂದು ಒತ್ತಡ ಹಾಕಲಾಗುವುದು ಹಾಗೂ ನಾಳೆಯ ಬಂದ್‍ನಲ್ಲಿ ಯಾವುದೇ ಕರವೇ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ನಾರಾಯಣಗೌಡ ಸ್ಪಷ್ಟ ಪಡಿಸಿದರು.

  • ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ಮಂಡ್ಯ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಕೆ.ಆರ್ ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರು ವಾಸ್ತುಪ್ರಕಾರ ಮತಯಂತ್ರ ತಿರುಗಿಸಿಟ್ಟು ವೋಟ್ ಮಾಡಿದ್ದಾರೆ.

    ಕೆ.ಆರ್ ಪೇಟೆ ತಾಲೂಕಿನ ಬಂಡಿಹೊಳೆ ಮತಗಟ್ಟೆ ಸಂಖ್ಯೆ 151ರಲ್ಲಿ ಮತದಾನ ಮಾಡಿದ ದೇವರಾಜು, ಚುನಾವಣಾ ಸಿಬ್ಬಂದಿ ಮತಯಂತ್ರವಿಟ್ಟಿದ್ದ ವಾಸ್ತು ಸರಿಯಿಲ್ಲವೆಂದು, ಸಿಬ್ಬಂದಿ ಕರೆದು ಇವಿಎಂ ತಿರುಗಿಸಿದ ನಂತರವೇ ವೋಟ್ ಮಾಡಿದರು. ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ವೋಟ್ ಹಾಕಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿ ಆಗಬೇಕೆಂದು ಮನವಿ ಮಾಡಿಕೊಂಡರು.

    ಇತ್ತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ಮತಯಂತ್ರದ ಬಳಿ ಚಪ್ಪಲಿ ಬಿಟ್ಟು ನಂತರ ಮತದಾನ ಮಾಡಿದರು. ಕೆ.ಆರ್ ಪೇಟೆ ಪಟ್ಟಣದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ನಾರಾಯಣಗೌಡರು ಕುಟುಂಬದ ಜೊತೆ ಬಂದು ಮತದಾನ ಮಾಡಿದರು.

    ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಅನರ್ಹ ಶಾಸಕ ನಾರಾಯಣಗೌಡರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಕೆ.ಬಿ.ಚಂದ್ರಶೇಖರ್ ಕಣದಲ್ಲಿದ್ದಾರೆ.

  • ಟೀ ಮಾರಿದ್ದ ಮೋದಿ ಪ್ರಧಾನಿಯಾದ್ರು, ನಾನು ಟೀ ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ

    ಟೀ ಮಾರಿದ್ದ ಮೋದಿ ಪ್ರಧಾನಿಯಾದ್ರು, ನಾನು ಟೀ ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ

    ಮಂಡ್ಯ: ಕೆಆರ್ ಪೇಟೆ ಕದನ ಕಣದಲ್ಲಿ ಮುಂಬೈ ವಿಚಾರ ಸಖತ್ ಸದ್ದು ಮಾಡುತ್ತಿದೆ. ನಾನು ಕೂಲಿ ಮಾಡಿದ್ದೇನೆ. ಹೊಟೇಲ್‍ನಲ್ಲಿಯೂ ಕೆಲಸ ಮಾಡಿದ್ದೇನೆ. ಈಗಲೂ ನಾನು ಲೋಟ ತೊಳೆಯುತ್ತೇನೆ. ನನ್ನ ಹೊಟೇಲಿನಲ್ಲಿ ತಟ್ಟೆ, ಗ್ಲಾಸು ತೊಳೆದ್ರೆ ಏನು ತಪ್ಪು ಅಂತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪ್ರಶ್ನಿಸಿದ್ದಾರೆ.

    ಕೆಆರ್ ಪೇಟೆಯ ವಡ್ಡರಹಳ್ಳಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು. ಈಗ ಅವರು ನಮ್ಮ ದೇಶದ ಪ್ರಧಾನಿ ಆಗಿದ್ದಾರೆ. ತಟ್ಟೆ ಗ್ಲಾಸು ತೊಳೆದ್ರೆ ಏನು ತಪ್ಪು ಅನ್ನೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ಗುದ್ದು ನೀಡಿದ್ದಾರೆ. ಜೊತೆಗೆ ಇದೇ ವಿಚಾರವನ್ನೇ ಪ್ರಚಾರದಲ್ಲಿ ಪ್ರಸ್ತಾಪಿಸಿ ಅನುಕಂಪ ಗಿಟ್ಟಿಸಲು ನಾರಾಯಣಗೌಡ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ದೇವೇಗೌಡರ ಬೀಗರು ಕೆಆರ್ ಪೇಟೆಯನ್ನು ಕಮಾಟಿಪುರ ಮಾಡುವುದಾಗಿ ಹೇಳುತ್ತಾರೆ. ನನ್ನ ಮನಸ್ಸಿನಲ್ಲಿ ಇದುವರೆಗೂ ಅಂತಹ ಭಾವನೆ ಬಂದಿಲ್ಲ. ಡಿ.ಸಿ.ತಮ್ಮಣ್ಣ ಕಮಾಟಿಪುರನಾ ಅವರ ತಾಲೂಕಿನಲ್ಲಿ ಮಾಡಿಕೊಳ್ಳಲಿ. ನನ್ನ ಶರೀರದಲ್ಲಿ ಉಸಿರಿರುವವರೆಗೆ ನನ್ನ ತಾಲೂಕಿನಲ್ಲಿ ಹೀಗೆ ಮಾಡೋಕೆ ಬಿಡಲ್ಲ. ರಾಜ್ಯದಲ್ಲೂ ಹೀಗೆ ಮಾಡೋಕೆ ಬಿಡಲ್ಲ. ವೀರಭದ್ರಸ್ವಾಮಿ ದೇವಸ್ಥಾನದ ಮುಂದೆ ಹೇಳುತ್ತಿದ್ದೀನಿ ಎಂದು ಪ್ರಮಾಣ ಮಾಡಿದರು. ಇದನ್ನೂ ಓದಿ: ನಾನೇನು ತಪ್ಪು ಮಾಡಿದೆ, ನನ್ನನ್ನು ಯಾಕೆ ಕೈ ಬಿಟ್ಟಿರಿ – ಮಂಡ್ಯದಲ್ಲಿ ಎಚ್‍ಡಿಕೆ ಮತ್ತೆ ಕಣ್ಣೀರು

    ನಾನು ಇದುವರೆಗೂ ಸರಿಯಾಗಿ ಕಮಾಟಿಪುರ ನೋಡೇ ಇಲ್ಲ. ಕಾರಲ್ಲಿ ಹೋಗುವಾಗ ನಾನು ದೂರದಿಂದ ನೋಡಿದ್ದೇನೆ ಅಷ್ಟೇ. ಕಮಾಟಿಪುರನಾ ಹತ್ತಿರದಿಂದ ತಮ್ಮಣ್ಣ ಅವರು ನೋಡಿಕೊಂಡು ಬಂದಿದ್ದಾರೆ. ಅದಕ್ಕೆ ಬೇಕಿದ್ರೆ ಅವರ ತಾಲೂಕಿನಲ್ಲಿ ಮಾಡಿಕೊಳ್ಳಲಿ. ನಾನು ಬಿಜೆಪಿ ಸೇರಿದ್ದೇನೆ ಎಂದು ಜೆಡಿಎಸ್ ಕುಟುಂಬ ಮನೆ ಮನೆಗೆ ಪ್ರಚಾರಕ್ಕೆ ಬರುತ್ತಾ ಇದೆ. ಅಂದು ನಾನು ಎಲೆಕ್ಷನ್‍ನಲ್ಲಿ ನಿಂತಾಗ ಯಾಕೆ ಅವರು ಬರಲಿಲ್ಲ. ನನ್ನ ಸೋಲಿಸಲು ಗ್ರೂಪ್ ಮಾಡಿಕೊಂಡು ತಿರುಗಿದರು ಎಂದು ವಾಗ್ದಾಳಿ ನಡೆಸಿದರು.

    ನನ್ನ ಬಾಂಬೆ ಕಳ್ಳ ಅಂತಾರೇ. ಹಾಗಿದ್ರೆ ನನ್ನ ಮನೆಗೆ 15 ವರ್ಷದಿಂದ ಯಾಕೆ ಬರ್ತಾ ಇದ್ರಿ. ಇಡೀ ಕುಟುಂಬ ಯಾಕೆ ನನ್ನ ಹತ್ತಿರ ಬರ್ತಾ ಇದ್ರಿ. ಇಡೀ ಕುಟುಂಬ ಬಾಂಬೆಗೆ ಬಂದ್ರೆ ನನಗೆ ಹೇಳ್ತಾ ಇದ್ರಿ. ಆಗ ನಾನು ಕಳ್ಳ ಆಗಿರಲಿಲ್ವಾ. ನಾನು ಬಿಜೆಪಿಗೆ ಸೇರಿದ ಮೇಲೆ ಕಳ್ಳನಾ. ಬಿಜೆಪಿ ಪಕ್ಷ ಕಳ್ಳತನದ ಪಕ್ಷ ಅಲ್ಲ. ನಾನು ಚೆಕ್ ಮಾಡಿದ್ದೇನೆ. ಮಹಾರಾಷ್ಟ್ರ, ದೆಹಲಿ ಎಲ್ಲಾ ಕಡೆ ಚೆಕ್ ಮಾಡಿದ್ದೇನೆ. ಬಿಜೆಪಿ ಪ್ರಮಾಣಿಕರ ಪಕ್ಷ ಎಂದರು.

     

  • ಹೆಚ್‍ಡಿಕೆಗಿಂತ, ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಅಭಿವೃದ್ಧಿಯಾಗಿತ್ತು- ನಾರಾಯಣ ಗೌಡ

    ಹೆಚ್‍ಡಿಕೆಗಿಂತ, ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಅಭಿವೃದ್ಧಿಯಾಗಿತ್ತು- ನಾರಾಯಣ ಗೌಡ

    – ಕೈ ಎತ್ತಿ ಮತ ಹಾಕಿಸಿದ ಪಕ್ಷವೇ ಅಭಿವೃದ್ಧಿಗೆ ಹಣ ನೀಡಲಿಲ್ಲ
    – ಬಿಎಸ್‍ವೈ ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ

    ಮಂಡ್ಯ: ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಅಭಿವೃದ್ಧಿ ಕೆಲಸಗಳಾಗಿಲ್ಲ, ಬದಲಿಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ನಮ್ಮ ಕ್ಷೇತ್ರಕ್ಕೆ ಅಭಿವೃದ್ದಿ ಕೆಲಸಗಳಾಗಿವೆ ಎಂದು ಹೆಚ್‍ಡಿಕೆ ವಿರುದ್ಧ ಅನರ್ಹ ಶಾಸಕ ನಾರಾಯಣ ಗೌಡ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಇತ್ತು. ಆ ಸರ್ಕಾರಕ್ಕೆ ನಾನೇನು ಕೈ ಎತ್ತಿ ಮತ ಹಾಕಿರಲಿಲ್ಲ. ಆದರೂ ಅವರು ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡಿದ್ದರು. ನಾಲ್ಕು ಮೊರಾರ್ಜಿ ಶಾಲೆ, ಒಂದು ಕಿತ್ತೂರು ರಾಣಿ ಚೆನ್ನಮ್ಮ, ಒಂದು ನವೋದಯ ಶಾಲೆಯನ್ನು ಮಂಜೂರು ಮಾಡಿದ್ದರು. ಆದರೆ ನಾನು ಕೈ ಎತ್ತಿ ಮತ ಹಾಕಿಸಿದ ಸರ್ಕಾರದಲ್ಲಿ ಆ ಶಾಲೆಗಳ ಕಾಂಪೌಂಡ್ ಕಟ್ಟಿಸಲು ಸಹ ಹಣ ಬಿಡುಗಡೆ ಮಾಡಲಿಲ್ಲ ಎಂದು ಹರಿಹಾಯ್ದಿದ್ದಾರೆ.

    ಈ ತಾಲೂಕಿನ ನಾಲ್ಕೈದು ಕಿಡಿಗೇಡಿಗಳು ಪುಣ್ಯಾತ್ಮರು ನನ್ನ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರ, ಕುಮಾರಸ್ವಾಮಿ, ರೇವಣ್ಣ ಅವರ ಕಿವಿ ಊದಿದರು. ಪುಣ್ಯಾತ್ಮ ಕೃಷ್ಣಪ್ಪ ಅವರು 30 ವರ್ಷ ಹೇಗಿದ್ದರೋ ಗೊತ್ತಿಲ್ಲ. ನಾನು ಆರೂವರೆ ವರ್ಷ ಇರಲು ಭಾರೀ ಕಷ್ಟ ಆಯಿತು. ನಾನು ನನ್ನ ತಾಲೂಕಿಗೆ 700 ಕೋಟಿ ರೂ. ಯೋಜನೆ ಸಿದ್ಧಪಡಿಸಿಕೊಂಡಿದ್ದೆ. ಇದಕ್ಕಾಗಿ ಹದಿಮೂರು ತಿಂಗಳು ತಿರುಗಿ ತಿರುಗಿ ನನಗೆ ಸಾಕಾಗಿ ಹೋಯಿತು. ಮನೆಗೆ ಹೋದರೆ ಚಪ್ಪಲಿ ಬಿಡುವ ಜಾಗದಲ್ಲಿ ನನ್ನನ್ನು ನಿಲ್ಲಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ಎರಡನೇ ಬಾರಿಗೆ ನಮ್ಮದೇ ಸರ್ಕಾರ ಇದೆ. ಈಗಲೂ ಅಭಿವೃದ್ಧಿ ಮಾಡಲಿಲ್ಲ ಅಂದರೆ ಜನರಿಗೆ ನಾನು ಏನು ಹೇಳಬೇಕು. ಅದಕ್ಕಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಅದೃಷ್ಟವೋ ಏನೋ ನನ್ನ ತಾಲೂಕಿನ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆಗ ನಾನು ಅವರ ಬಳಿ ಹೋದೆ, 700 ಕೋಟಿ ರೂ. ಅನುದಾನದ ಕೇಳಿದೆ. ಅದಕ್ಕೆ ಅವರು ನಾರಾಯಣ ಗೌಡ ಆ ಕ್ಷೇತ್ರದಲ್ಲಿ ನಮ್ಮ ಶಾಸಕರಿರಲಿಲ್ಲ. ಆದರೂ ಆಗಲೇ 700 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಇದೀಗ 700 ಕೋಟಿ ರೂ. ಜೊತೆಗೆ ನಮ್ಮ ತಂದೆಯ ಹೆಸರಿನಲ್ಲಿ ಇನ್ನೂ 300 ಕೋಟಿ ರೂ. ಹೆಚ್ಚು ಒಟ್ಟು 1 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದರು. ಅಲ್ಲದೆ ನಾನು ಏನೇ ಕೆಲಸ ಕೇಳಿದರೂ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    – ಹಿರಿಯ ಮಗಳು ಅಕೌಂಟಿಗೆ 2 ಲಕ್ಷ ಹಾಕ್ತಿದ್ದಾಳೆ

    ಮಂಡ್ಯ: ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಬಿಎಸ್‌ವೈ ಮಾತನಾಡಿದ್ದ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ 17 ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವ ಅಸಲಿ ಕಾರಣವನ್ನು ಅನರ್ಹ ಶಾಸಕ ನಾರಾಯಣಗೌಡ ಬಿಚ್ಚಿಟ್ಟಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನನ್ನನ್ನು ಯಡಿಯೂರಪ್ಪ ಮನೆಗೆ ಕರೆದೊಯ್ದಿದ್ದರು. ಆಗ ಬಿಎಸ್‌ವೈ ಅವರು ಏನಪ್ಪ ಸಿಎಂ ಆಗೋ ಚಾನ್ಸ್ ಇದೆ ಬೆಂಬಲಿಸ್ತೀಯಾ ಅಂತ ಕೇಳಿದರು. ಅಲ್ಲದೆ ನನ್ನ ತಂದೆ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ ಕೆಆರ್‌ಪೇಟೆ ಅಭಿವೃದ್ಧಿಯಾಗಿಲ್ಲ. ಈಗಲೂ ಕನಸಲ್ಲಿ ಬಂದು ಕಾಡ್ತಿದ್ದಾರೆ. ನೀನು ಕೈ ಜೋಡಿಸಿದರೆ ಕೆಆರ್‌ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯಾ ಎಂದು ಯಡಿಯೂರಪ್ಪ ನನ್ನನ್ನು ಕೇಳಿದ್ದರು. ಅದಕ್ಕೆ ನಾನು ತಾಲೂಕಿನ ಅಭಿವೃದ್ಧಿಗೆ 700 ಕೋಟಿ ಕೇಳಿದ್ದೆ. ಆದರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು ಎಂದು ಸ್ಫೋಟಕ ಸತ್ಯವನ್ನು ಬಯಲು ಮಾಡಿದರು.

    ರೇವಣ್ಣಗೆ ಟಾಂಗ್:
    ಇದೇ ವೇಳೆ, ರೇವಣ್ಣ ಸಾಹೇಬರು ಹೇಳ್ತಾರೆ ಎಂಜಲು ಲೋಟ ತೊಳೆಯೋನು ಅಂತ. ನನಗೆ ಅದೇ ಆಶೀರ್ವಾದ ಮಾಡಿರೋದು. ಎಂಜಲು ತೊಳಿಯೋದಕ್ಕಿಂತ ಪುಣ್ಯ ಕೆಲಸ ಇನ್ನೊಂದಿಲ್ಲ. ಎಂಜಲು ಎತ್ತೋಕೆ ಸುಲಭವಾಗಿ ಸಿಗಲ್ಲ. ನನಗೆ ಇದೇ ಶಕ್ತಿ ಕೊಡಲಿ. ಸದಾ ನಾನು ಸೇವಕನಾಗಿ, ಲಕ್ಷಾಂತರ ಜನರಿಗೆ ಅನ್ನದಾನ ಮಾಡಿ ಎಂಜಲು ಎತ್ತುತ್ತೇನೆ ಎಂದು ಹೇಳುವ ಮೂಲಕ ರೇವಣ್ಣಗೆ ಟಾಂಗ್ ನೀಡಿದರು.

    ದಳಪತಿಗಳಿಗೆ ಸವಾಲು:
    ಕೆಆರ್‌ಪೇಟೆಗೆ ರಾಜಕೀಯ ಮಾಡಲು ನೀವು ಬರುತ್ತಿದ್ದೀರಾ. ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ನಿಮ್ಮ ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ನಾರಾಯಣಗೌಡರು ದಳಪತಿಗಳಿಗೆ ಸವಾಲು ಹಾಕಿದರು.

    ಸುಮ್ಮನೆ ನಾರಾಯಣಗೌಡ ಗೆದ್ದರು, ಸೋತರೂ ಮುಂಬೈಗೆ ಹೋಗುತ್ತಾನೆ ಅಂತಾರೆ. ನಾನು ಹೋದರೂ ನನ್ನ ಹೊಟ್ಟೆ ಪಾಡಿಗೆ ಹೋಗೋದು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಮದುವೆಯಾಗಿದ್ದಾಳೆ. ಇನ್ನೊಬ್ಬಳು ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹಿರಿಯ ಮಗಳು ನನ್ನ ಅಕೌಂಟ್‌ಗೆ 2 ಲಕ್ಷ ಹಾಕುತ್ತಿದ್ದಾಳೆ. ನನಗೆ ಇನ್ನೇನು ಬೇಕು ಹೇಳಿ ಎಂದರು.