Tag: narayana netralaya

  • ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಭುಜಂಗಶೆಟ್ಟಿ ಇನ್ನಿಲ್ಲ

    ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಭುಜಂಗಶೆಟ್ಟಿ ಇನ್ನಿಲ್ಲ

    ಬೆಂಗಳೂರು: ನಾರಾಯಣ ನೇತ್ರಾಲಯ (Narayana Netralaya) ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಕೆ.ಭುಜಂಗ ಶೆಟ್ಟಿ (Bhujang Shetty) (69) ಹೃದಯಾಘಾತದಿಂದ ಇಂದು ನಿಧನರಾದರು.

    ಸಂಜೆ 6:30 ರ ವೇಳೆಗೆ ಮನೆಯಲ್ಲಿದ್ದಾಗ ಹೃದಯಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮುಂದೆ ಪ್ರಧಾನಿ ಆದ್ರೂ ಆಗ್ಬೋದು – ಯಾದಗಿರಿ ಕೆಂಚಪ್ಪ ಪೂಜಾರಿ ಭವಿಷ್ಯ

    ಸದ್ಯ ತುರ್ತುಚಿಕಿತ್ಸಾ ವಿಭಾಗದಲ್ಲೇ‌ ಮೃತದೇಹವನ್ನು ಇರಿಸಲಾಗಿದೆ. ನಾರಾಯಣ ನೇತ್ರಾಲಯದ ಸಿಬ್ಬಂದಿಗಳಿಂದ ಅಂತಿಮ ನಮನ ಸಲ್ಲಿಸಿದ್ದಾರೆ.

    ಡಾ. ರಾಜಕುಮಾರ್ ಐ ಬ್ಯಾಂಕ್ ತೆರೆದು ನೇತ್ರದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದ ಖ್ಯಾತ ವೈದ್ಯ ಇವರಾಗಿದ್ದರು. ಇದನ್ನೂ ಓದಿ: ಪ್ರಮಾಣವಚನ ಹಿನ್ನಲೆ ಟ್ರಾಫಿಕ್‌ ಜಾಮ್‌ ಸಾಧ್ಯತೆ; ಸಿಇಟಿ ಪರೀಕ್ಷೆ ಕೇಂದ್ರಗಳಿಗೆ ಬೇಗನೇ ಹೋಗಿ – ವಿದ್ಯಾರ್ಥಿಗಳಲ್ಲಿ ಡಿಕೆಶಿ ಮನವಿ

    ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. “ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು.

    ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು.

    ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೆ 2010 ರಲ್ಲಿ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

    ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ವ್ಯಕ್ತಿಯ ಕಣ್ಣಿನ ಪೊರೆ ಚಿಕಿತ್ಸೆ ಯಶಸ್ವಿ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ವ್ಯಕ್ತಿಯ ಕಣ್ಣಿನ ಪೊರೆ ಚಿಕಿತ್ಸೆ ಯಶಸ್ವಿ

    ಬೆಂಗಳೂರು: ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುವ ಪಬ್ಲಿಕ್ ಟಿವಿಯ ಜನಪ್ರಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದ ಮೂಲಕ ಅದೆಷ್ಟೋ ಜನರಿಗೆ ಸಹಾಯವಾಗಿದೆ. ಈ ಸಾಲಿನಲ್ಲಿ ಇದೀಗ ಕಣ್ಣಿನ ಪೊರೆಯಿಂದ ಅಂಧಕಾರದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಬೆಳಕು ನೀಡಿದೆ.

    ನಂಜುಂಡೇಶ್ವರಯ್ಯನವರಿಗೆ ಕಣ್ಣಿನ ಪೊರೆಯ ಸಮಸ್ಯೆಯಿತ್ತು. ಇವರಿಗೆ ಮಕ್ಕಳು ಇರಲಿಲ್ಲ. ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ಕ್ಕೆ ಕರೆ ಮಾಡಿ ಸಹಾಯ ಕೇಳಿದ್ದರು. ಈ ಹಿನ್ನೆಲೆ ನಾರಾಯಣ ನೇತ್ರಾಲಯದ ಸಹಕಾರದಿಂದ ಕಣ್ಣಿನ ಪೊರೆ ಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿಸಲಾಗಿದೆ. ಇದೀಗ ನಂಜುಂಡೇಶ್ವರಯ್ಯನವರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಎಲ್ಲರಂತೆ ಪ್ರಪಂಚವನ್ನು ನೋಡುತ್ತಿದ್ದಾರೆ.

    ಈ ಕುರಿತು ನಾರಾಯಣ ನೇತ್ರಾಲಯದ ನಿರ್ದೇಶಕ ಭುಜಂಗ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದು, ಕೊರೊನಾ ಲಾಕ್‍ಡೌನ್‍ನಿಂದಾಗಿ ನಂಜುಂಡಯ್ಯನವರಿಗೆ ತುಂಬಾ ಸಮಸ್ಯೆಯಾಗಿತ್ತು. ರೇಷನ್ ಇರಲಿಲ್ಲ, ಅಗತ್ಯ ವಸ್ತುಗಳ ಕೊರತೆ ಇತ್ತು. ಪಬ್ಲಿಕ್ ಟಿವಿಯವರು ಇದನ್ನು ವ್ಯವಸ್ಥೆ ಮಾಡಿದರು. ಈ ವೇಳೆ ನಂಜುಂಡಯ್ಯನವರು ನಾನೊಬ್ಬ ಕಲಾವಿದ ನನಗೆ ಕಣ್ಣು ಕಾಣುವುದಿಲ್ಲ. ತುಂಬಾ ತೊಂದರೆಯಾಗಿದೆ, ಏನೂ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಪಬ್ಲಿಕ್ ಟಿವಿಯವರು ನಮ್ಮನ್ನು ಸಂಪರ್ಕಿಸಿ, ನೀವೇನಾದರೂ ಅವರಿಗೆ ಸಹಾಯ ಮಾಡಬಹುದಾ ಎಂದು ಕೇಳಿದರು.

    ಆಗ ತುಂಬಾ ಸಂತೋಷದಿಂದ ನನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಕಳುಹಿಸಿಕೊಡಿ ಎಂದು ಹೇಳಿದೆ. ಅವರು ಬಂದ ತಕ್ಷಣ ಎರಡೂ ಕಣ್ಣನ್ನು ಪರೀಕ್ಷೆ ಮಾಡಲಾಯಿತು. ಆಗ ಪೊರೆ ಇರುವುದು ಕಂಡು ಬಂತು. ಹೀಗಾಗಿ ಅವರಿಗೆ ಏನೂ ಕಾಣುತ್ತಿರಲಿಲ್ಲ. ಪೊರೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಆದರೆ ಆಗ ಅವರಿಗೆ ಶುಗರ್ ತುಂಬಾ ಜಾಸ್ತಿ ಇತ್ತು. ಹೀಗಾಗಿ ಒಂದು ವಾರ ಸಮಯಾವಕಾಶ ತೆಗೆದುಕೊಂಡು ಶುಗರ್ ನಿಯಂತ್ರಣಕ್ಕೆ ಬಂದ ಬಳಿಕ ಶನಿವಾರ ಅವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿದೆವು. ನಂತರ ಪರೀಕ್ಷೆ ನಡೆಸಿದಾಗ ಅವರಿಗೆ ತುಂಬಾ ಚೆನ್ನಾಗಿ ದೃಷ್ಟಿ ಬಂದಿದೆ. ಮನೆಯೇ ಮಂತ್ರಾಲಯ ತುಂಬಾ ಒಳ್ಳೆಯ ಕಾರ್ಯಕ್ರಮ, ಇದರಿಂದ ಹಲವು ಜನರಿಗೆ ನಾನಾ ರೀತಿಯ ಸಹಾಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಈ ಕುರಿತು ನಂಜುಂಡೇಶ್ವರಯ್ಯನವರು ಮಾತನಾಡಿ, ಸೈನ್ ಬೋರ್ಡ್ ಹಾಗೂ ಬ್ಯಾನರ್ ಆರ್ಟಿಸ್ಟ್. ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸ ನಿಂತಿತ್ತು. ಆದಾಯವಿಲ್ಲದೆ ಮನೆ ಬಾಡಿಗೆ ಕಟ್ಟಲೂ ಅಸಾಧ್ಯವಾಗಿತ್ತು. ಅಲ್ಲದೆ ನನಗೆ ಕಣ್ಣು ಕಾಣುತ್ತಿರಲಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿತ್ತು. ಶುಗರ್ ಸಹ ಇದ್ದಿದ್ದರಿಂದ ಶಸ್ತ್ರಚಿಕಿತ್ಸೆಗೆ ತಡವಾಯಿತು. ನಂತರ ಶಸ್ತ್ರಚಿಕಿತ್ಸೆ ಮಾಡಿ ಕಣ್ಣು ಕಾಣುವ ಹಾಗಾಗಿದೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಕೊಡಿಸಿ ಸಹಾಯ ಮಾಡಿದರು. ಇದಕ್ಕೆಲ್ಲ ಕಾರಣ ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ. ಪಬ್ಲಿಕ್ ಟಿವಿಗೆ ಧನ್ಯವಾದ ಹೇಳುತ್ತೇನೆ ಎಂದರು.

    ನಂಜುಂಡೇಶ್ವರಯ್ಯನವರ ಪತ್ನಿ ನಿರ್ಮಲಾ ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪತಿಗೆ ಕಣ್ಣು ಕಾಣುತ್ತಿರಲಿಲ್ಲ. ನಾರಾಯಣ ನೇತ್ರಾಲಯದಿಂದ ಶಸ್ತ್ರಚಕಿತ್ಸೆ ಮಾಡಿಸಿದ ಬಳಿಕ ಕಣ್ಣು ಕಾಣಿಸುತ್ತಿದೆ. ಪಬ್ಲಿಕ್ ಟಿವಿ ಹಾಗೂ ಭುಜಂಗ ಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

  • ಸಂಧಾನದ ಚಾನ್ಸೇ ಇಲ್ಲ- ಶಾಸಕ ಆನಂದ್ ಸಿಂಗ್ ಮೊದಲ ಪ್ರತಿಕ್ರಿಯೆ

    ಸಂಧಾನದ ಚಾನ್ಸೇ ಇಲ್ಲ- ಶಾಸಕ ಆನಂದ್ ಸಿಂಗ್ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಈಗಲ್ ಟನ್ ರೆಸಾರ್ಟ್ ನಲ್ಲಿ ಹಲ್ಲೆಗೊಳಗಾಗಿರೋ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಕೊಂಚ ಚೇತರಿಸಿಕೊಳ್ಳುತ್ತಿದ್ದು, ಸಂಧಾನದ ಚಾನ್ಸೇ ಇಲ್ಲ ಎಂದು ಹೇಳಿದ್ದಾರೆ.

    ಶುಕ್ರವಾರ ಅಪೋಲೋ ಆಸ್ಪತ್ರೆಯಿಂದ ನಾರಾಯಣ ನೇತ್ರಾಲಯಕ್ಕೆ ಹೋಗುವ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದ್ಯ ನಾನು ಚೇತರಿಸಿಕೊರ್ಳಳುತ್ತಿದ್ದೇನೆ. ಆದ್ರೆ ಪೂರ್ತಿಯಾಗಿ ಚೇತರಿಸಿಕೊಳ್ಳಲು ಇನ್ನು 15-20 ದಿನ ಬೇಕಾಗಬಹುದು. ತುಂಬಾ ಕ್ರ್ಯಾಕ್ ಹಾಗೂ ಎದೆಯ ಭಾಗಕ್ಕೆ ನೋವಾಗಿದೆ ಎಂದು ಹೇಳಿದ್ರು.

    ಇದೇ ವೇಳೆ ಕಂಪ್ಲಿ ಗಣೇಶ್ ಬಗ್ಗೆ ಕೇಳಿದಾಗ, ಅವರು ಎಲ್ಲಿದ್ದಾರೋ ಗೊತ್ತಿಲ್ಲ, ಕಾನೂನು ಪ್ರಕಾರ ಕೈಗೊಳ್ಳಲಿ. ಸಂಧಾನದ ಚಾನ್ಸೇ ಇಲ್ಲ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ:  12 ದಿನವಾದ್ರೂ ಅರೆಸ್ಟ್ ಆಗಿಲ್ಲ ಶಾಸಕ ರೌಡಿ ಗಣೇಶ್ – ಇತ್ತ ಆನಂದ್ ಸಿಂಗ್ ಸಂಧಾನಕ್ಕೆ ಜಮೀರ್ ಸರ್ವಯತ್ನ

    ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಶಾಸಕ ಗಣೇಶ್ ಕೋಪಗೊಂಡು ಬಾಟಲ್ ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆನಂದ್ ಸಿಂಗ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv