Tag: Narayana Nethralaya

  • ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

    ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

    ಬೆಂಗಳೂರು: ದೀಪಾವಳಿ (Diwali) ಹಿನ್ನೆಲೆ ಪಟಾಕಿ (Firecrackers) ಸಿಡಿಸಲು ಹೋಗಿ ಅನಾಹುತ ಸಂಭವಿಸಿ ನಾರಾಯಣ ನೇತ್ರಾಲಯದಲ್ಲಿ (Narayana Nethralaya) ಒಟ್ಟು 20 ಪ್ರಕರಣಗಳು ದಾಖಲಾಗಿವೆ.

    ನಾರಾಯಣ ನೇತ್ರಾಲಯದಲ್ಲಿ ಸೋಮವಾರ 5 ಕೇಸ್ ದಾಖಲಾಗಿತ್ತು. ತಡರಾತ್ರಿ 15 ಕೇಸ್ ದಾಖಲಾಗಿದೆ. ಪಟಾಕಿ ಸಿಡಿಸಲು ಹೋಗಿ ಮಕ್ಕಳು ಗಾಯಗೊಂಡಿದ್ದಾರೆ. ಇನ್ನು ಪಟಾಕಿಯಿಂದ ಅನಾಹುತ ಸಂಭವಿಸಿದ ಪರಿಣಾಮ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: Chitradurga | ಪೋಷಕರಿಗೆ ಕರೆ ಮಾಡಿ ಮಾತನಾಡಿದ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ – ವೀಡಿಯೋ ವೈರಲ್

    ದೀಪಾವಳಿ ಸಂಭ್ರಮ ವೇಳೆ ಪಟಾಕಿ ಹೊಡೆಯುವಾಗ ಹುಷಾರಾಗಿ ಅಂತ ನೇತ್ರಾ ತಜ್ಞರು ಸಲಹೆ ಮಾಡಿದ್ದಾರೆ. ಒಂದು ವೇಳೆ, ಪಟಾಕಿ ಸಿಡಿತದಿಂದ ಕಣ್ಣೆಗೆ ಹಾನಿಯಾದ್ರೆ, ಈ ಕೆಳಗಿನ ನಿಯಮಗಳನ್ನು ಪಾಲಿಸಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ

    ವೈದ್ಯರು ಕೊಟ್ಟಿರೋ ಸಲಹೆಗಳೇನು?
    – ಕೋಲ್ಡ್, ಸ್ವಚ್ಛ ನೀರಿನಿಂದ ಕಣ್ಣನ್ನು ಸ್ವಚ್ಛಗೊಳಿಸಿ
    – ಕಣ್ಣನ್ನು ಕೈಯಿಂದ ಉಜ್ಜಿಕೊಳ್ಳಬೇಡಿ
    – ತಕ್ಷಣ ನೇತ್ರ ತಜ್ಞರನ್ನು ಭೇಟಿ ಮಾಡಿ
    ಕಣ್ಣು ಸೂಕ್ಷ್ಮವಾಗಿರುವುದರಿಂದ ಗಾಯವಾದ್ರೂ ನಿರ್ಲಕ್ಷಿಸಬೇಡಿ ಎಂದು ನಾರಾಯಣ ನೇತ್ರಾಲಯ ನಿರ್ದೇಶಕ ಡಾ. ನರೇನ್ ಶೆಟ್ಟಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್‌!

  • ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ – ಅಣ್ಣಾವ್ರ ಹಾದಿಯಲ್ಲೇ ಸರೋಜಾದೇವಿ ನೇತ್ರದಾನ

    ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ – ಅಣ್ಣಾವ್ರ ಹಾದಿಯಲ್ಲೇ ಸರೋಜಾದೇವಿ ನೇತ್ರದಾನ

    ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರಿಂದು ವಿಧಿವಶವಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ʻಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎನ್ನುವಂತೆ ಸರೋಜಾ ದೇವಿ ಅವರು ನೇತ್ರದಾನ (Eye Donate) ಮಾಡಿದ್ದಾರೆ.

    ಬೆಂಗಳೂರಿನ (Bengaluru) ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ಇಂದು ಸರೋಜಾದೇವಿ ಅವರ ಕಣ್ಣುಗಳನ್ನು ಪಡೆಯಲಾಗುತ್ತಿದೆ. ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮೆನೆಗೆ ಆಗಮಿಸಿದ್ದು, ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗುತ್ತಿದೆ. ನೇತ್ರದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ದರ್ಶನ ಮತ್ತೆ ನಡೆಯಲಿದೆ. ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ

    ಕನ್ನಡ ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಅಳವಡಿಸಲಾಗಿದೆ. ಆ ಮೂಲಕ ಇಬ್ಬರ ಬಾಳಿಗೆ ಪುನೀತ್ ರಾಜ್‌ಕುಮಾರ್ ಬೆಳಕಾಗಿದ್ದಾರೆ. ಇದೀಗ ರಾಜ್‌ಕುಮಾರ್‌, ಪುನೀತ್‌ ಅವರ ಹಾದಿಯಾಗಿ ಸರೋಜಾದೇವಿ ಅವರೂ ನೇತ್ರದಾನ ಮಾಡಿದ್ದು, ಬದುಕಿನ ಪಯಣ ಮುಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

    ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ

  • ಬೆಳಕಿನ ಹಬ್ಬ ಹಲವರ ಬಾಳಿಗೆ ಕತ್ತಲು – ಪಟಾಕಿ ಸಿಡಿದು ಕಣ್ಣಿಗೆ ಕುತ್ತು

    ಬೆಳಕಿನ ಹಬ್ಬ ಹಲವರ ಬಾಳಿಗೆ ಕತ್ತಲು – ಪಟಾಕಿ ಸಿಡಿದು ಕಣ್ಣಿಗೆ ಕುತ್ತು

    – ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಳ
    – ಶನಿವಾರ ಒಂದೇ ದಿನ 20 ಪ್ರಕರಣ ದಾಖಲು

    ಬೆಂಗಳೂರು: ದೀಪಾವಳಿ (Deepavali) ಹಬ್ಬ ಹಿನ್ನೆಲೆ ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಾಗಿದ್ದು, ಆಪರೇಷನ್ ಸಂಖ್ಯೆಯೂ ಹೆಚ್ಚಾಗಿದೆ.

    ಮಿಂಟೋ ಆಸ್ಪತ್ರೆಯಲ್ಲಿ (Minto Hospital) 5 ದಿನಗಳಲ್ಲಿ 49 ಪಟಾಕಿ ಸಿಡಿತ ಪ್ರಕರಣ ದಾಖಲಾಗಿದೆ. ಪಟಾಕಿ ಅವಘಡದಿಂದ 35 ಮಂದಿ ಚಿಕಿತ್ಸೆ ಪಡೆದು ಹೋಗಿದ್ದರೇ 14 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 32 ಮಕ್ಕಳು ಪಟಾಕಿಯಿಂದ ಕಣ್ಣಿಗೆ ಏಟು ಮಾಡಿಕೊಂಡಿದ್ದಾರೆ. 17 ಮಂದಿ ವಯಸ್ಕರೂ ಸಹ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. 23 ಮಂದಿಗೆ ಪಟಾಕಿಯಿಂದ ಗಂಭೀರ ಸಮಸ್ಯೆಯಾಗಿದೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ; ಅಪ್ರಾಪ್ತೆ ಕೊಂದು, ಶೌಚಾಲದಲ್ಲಿ ಶವ ಇಟ್ಟು ಗಂಡ-ಹೆಂಡ್ತಿ ಎಸ್ಕೇಪ್‌

    26 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, 4 ಮಂದಿಗೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಇನ್ನೂ 10 ಮಂದಿಗೆ ಸರ್ಜರಿಯ ಅವಶ್ಯಕತೆಯಿದೆ. 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದು, 22 ಮಂದಿ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಶನಿವಾರ ಒಂದೇ ದಿನ 20 ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಈ ಪೈಕಿ 15 ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲೂ (Narayana Nethralaya) 64ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್‌ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್‌

  • ಇಬ್ಬರ ಬಾಳಿಗೆ ಬೆಳಕು ನೀಡಿದ ಡಾ. ಭುಜಂಗಶೆಟ್ಟಿ ಕಣ್ಣುಗಳು

    ಇಬ್ಬರ ಬಾಳಿಗೆ ಬೆಳಕು ನೀಡಿದ ಡಾ. ಭುಜಂಗಶೆಟ್ಟಿ ಕಣ್ಣುಗಳು

    ಬೆಂಗಳೂರು: ಹೃದಯಾಘಾತಕ್ಕೀಡಾಗಿ ನಿಧನರಾದ ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ (Dr. Bhujanga Shetty) ಯವರ ಕಣ್ಣುಗಳು ಇಬ್ಬರ ಬಾಳಿಗೆ ಬೆಳಕಾಗಿದೆ.

    ಲಕ್ಷಾಂತರ ಕಣ್ಣುಗಳನ್ನ ದಾನ ಮಾಡುವ ಮೂಲಕ ನೇತ್ರದಾನ (Eye Donate) ದ ಕ್ರಾಂತಿ ಮಾಡಿದ್ದ ನೇತ್ರ ತಜ್ಞರಿಂದಲೇ ಇದೀಗ ನೇತ್ರದಾನವಾಗಿದೆ. ಬದುಕಿದ್ದಾಗ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂಧಕಾರವನ್ನ ನೀಗಿಸಿದ್ದರು.

    ಶುಕ್ರವಾರ ತಡರಾತ್ರಿ ಡಾ. ರಾಜ್ ಕುಮಾರ್ ಕಣ್ಣಿನ ಬ್ಯಾಂಕ್ ಗೆ ನೇತ್ರದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ಭುಜಂಗ ಶೆಟ್ಟಿಯವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಭುಜಂಗಶೆಟ್ಟಿ ಇನ್ನಿಲ್ಲ

    ನಿನ್ನೆ ಸಂಜೆ 7:30 ರ ವೇಳೆಗೆ ಮನೆಯಲ್ಲಿದ್ದಾಗ ಡಾ. ಭುಜಂಗ ಶೆಟ್ಟಿಯವರಿಗೆ ಹೃದಯಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

     

  • ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ: ಡಾ.ಭುಜಂಗ ಶೆಟ್ಟಿ

    ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ: ಡಾ.ಭುಜಂಗ ಶೆಟ್ಟಿ

    ಬೆಂಗಳೂರು: ನೇತ್ರದಾನ ಮಾಡೋದು ರಾಜ್ ಫ್ಯಾಮಿಲಿ ಟ್ರೆಡಿಷನ್ ಆಗಿದೆ ಎಂದು ಹೇಳುವ ಮೂಲಕ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿಯವರು ಅಣ್ಣಾವ್ರ ಕುಟುಂಬವನ್ನು ಶ್ಲಾಘಿಸಿದರು.

    ನಾರಾಯಣ ನೇತ್ರಾಲಯ ಕಣ್ಣುದಾನ ಮಾಡಲು ಬಯಸುವವರಿಗಾಗಿ ಸುಲಭ ವಿಧಾನವನ್ನು ಕಂಡುಹಿಡಿದಿದ್ದು, ಆ ಯೋಜನೆಯನ್ನು ಅಪ್ಪು ಸಮಾಧಿ ಬಳಿ ನೆರವೇರಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಅಪ್ಪುದು ಟ್ರ್ಯಾಜಿಕ್ ಡೆತ್ ಆಯ್ತು. ತಕ್ಷಣ ರಾಘಣ್ಣ ನನಗೆ ಕರೆ ಮಾಡಿ ತಿಳಿಸಿದರು. ಆಗ ನಾವು ಅಪ್ಪು ಕಣ್ಣನ್ನು ತೆಗೆದುಕೊಂಡೆವು. ಮರುದಿನವೇ ಅವರ ಕಣ್ಣನ್ನು ಇಬ್ಬರಲ್ಲ ನಾಲ್ವರಿಗೆ ಜೋಡಿಸಿದ್ದೇವೆ ಎಂದರು. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ

    ಈ ಜಾಗದಲ್ಲಿಯೇ ನಾವು ಏಕೆ ಹೈ ಪ್ಲೇಡ್ಜಿಂಗ್ ಜಸ್ಟ್ ಕಾಲ್ ನಂಬರ್ ನ ಉದ್ಘಾಟನೆ ಮಾಡುತ್ತಿದ್ದೇವೆ, ನೇತ್ರದಾನ ಮಾಡುವುದು ಈ ಫ್ಯಾಮಿಲಿ ಟ್ರೆಡಿಷನ್. ಈ ಹಿಂದೆಯೂ ಅಣ್ಣಾವ್ರು, ಪಾರ್ವತಮ್ಮನವರು ಮತ್ತು ಅಪ್ಪು ನೇತ್ರದಾನ ಮಾಡಿದ್ದರು. ಅವರು ಇರುವ ಸ್ಥಳ ಇದು. ಅದಕ್ಕೆ ನಾವು ಇಲ್ಲೇ ಈ ಯೋಜನೆಗೆ ಚಾಲನೆಯನ್ನು ನೀಡುತ್ತಿದ್ದೇವೆ. ಇದಕ್ಕೆ ನಾವು ರಾಘಣ್ಣ, ಶಿವಣ್ಣ ಮತ್ತು ಅವರ ಕುಟುಂಬಕ್ಕೆ ವಂದನೆಗಳನ್ನು ತಿಳಿಸಬೇಕು ಎಂದರು.

    ಅಪ್ಪು ಕಣ್ಣು ಕೊಟ್ಟ ಮೇಲೆ 440ಕ್ಕೂ ಹೆಚ್ಚು ಮಂದಿ ಕಣ್ಣುದಾನ ಮಾಡಿದ್ದಾರೆ. ಯಾವತ್ತು ಇಷ್ಟು ಆಗಿರಲಿಲ್ಲ. 12 ಸಾವಿರ ಜನ ಕಣ್ಣುದಾನ ಮಾಡುವುದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಜನ ಕಣ್ಣುದಾನ ಮಾಡಬೇಕು ಎಂದು ಕಾಲ್ ಮಾಡುತ್ತಿರುತ್ತಾರೆ. ಹೀಗಾಗಿ ನಾವು ಹೈ ಪ್ಲೇಡ್ಜಿಂಗ್ ಜಸ್ಟ್ ಕಾಲ್ ನಂಬರ್ ನ ಉದ್ಘಾಟನೆ ಮಾಡ್ತಾ ಇದ್ದೀವಿ. ನೇತ್ರದಾನ ಮಾಡಲು ಬಯಸುವವರು ‘ರಾಜ್‍ಕುಮಾರ್ ನೇತ್ರ ಬ್ಯಾಂಕ್’ ಗೆ ಮಿಸ್ ಕಾಲ್ ಕೊಟ್ಟು ನೋಂದಣಿ ಮಾಡಿಕೊಳ್ಳಬಹುದು ಎಂದು ವಿವರಿಸಿದರು. ಇದನ್ನೂ ಓದಿ:  ಅಪ್ಪು ಅಗಲಿ ಇಂದಿಗೆ 2 ತಿಂಗಳು – ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಅಭಿಮಾನಿಗಳ ದಂಡು

    ನಟ, ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಈ ವಿನೂತನ ಯೋಜನೆಗೆ ಚಾಲನೆ ನೀಡಿದ್ದು, ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಘವೇಂದ್ರ ಅವರು ನೇತ್ರದಾನದ ಯೋಜನೆಯ ನಂಬರ್ ಬಿಡುಗಡೆಗೊಳಿಸಿದರು.

  • ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಬೆಂಗಳೂರು: ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ನಿಧನದ ನಂತರ ನೇತ್ರದಾನ ಮಾಡಲು ನೂರಾರು ಸಂಖ್ಯೆಯಲ್ಲಿ ಜನ ಮುಂದಾಗಿದ್ದಾರೆ.

     puneeth rajkumar

    ಪುನೀತ್ ರಾಜ್‍ಕುಮಾರ್ ಅವರು, ವಿಧಿವಶರಾದ ಬಳಿಕ ನೇತ್ರದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಪ್ರತಿದಿನ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ಮಾಡಲು ಜನರ ದಂಡು ಹರಿದು ಬರುತ್ತಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಜನ ನೊಂದಾಯಿಸಿದ್ದಾರೆ ಎಂದು ಡಾ. ಭುಜಂಗ ಶೆಟ್ಟಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

     puneeth rajkumar

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಪುನೀತ್ ಸಮಾಧಿಗೆ ಭೇಟಿ ಕೊಟ್ಟು ಬಂದವರೆಲ್ಲ ಬಹುತೇಕರು ನೇರವಾಗಿ ನಾರಾಯಣ ನೇತ್ರಾಲಯಕ್ಕೆ ಬಂದು ಕಣ್ಣಿನ ದಾನ ಮಾಡುತ್ತಿದ್ದಾರೆ. ದಿನಕ್ಕೆ 3 ರಿಂದ 4 ಜನ ನೇತ್ರದಾನ ಮಾಡಿದರೆ ಅದೇ ದೊಡ್ಡದು. ಆದರೀಗ ನಿತ್ಯ 200 ಜನದಂತೆ ನೇತ್ರದಾನ ಮಾಡಲು ಬರುತ್ತಿದ್ದಾರೆ. ಇದು ಅಪ್ಪು ಬಿಟ್ಟು ಹೋದ ಸ್ಫೂರ್ತಿ. ಪುನೀತ್ ಸಾವಿನ ಬಳಿಕ 30 ಜನರ ಕಣ್ಣನ್ನು ನಾವು ಬೇರೆಯವರಿಗೆ ಜೋಡಿಸಿದ್ದೇವೆ. ಸಾವಿನ ಮನೆಯಿಂದಲೂ ಕರೆ ಬರುತ್ತಿದೆ. ಇಷ್ಟರಮಟ್ಟಿಗೆ ಜನ ಜಾಗೃತಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

  • ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಬೆಂಗಳೂರು: ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಕಣ್ಣನ್ನು ನಾಲ್ವರಿಗೆ ಅಳವಡಿಸಿದ್ದೇವೆ ಎಂದು ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಅವರು ಹೇಳಿದ್ದಾರೆ.

     

    ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಹೃದಯ ಸ್ತಂಭದಿಂದ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಆದರೆ ಸತ್ತ ಮೇಲೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮಾನವೀಯತೆ ಮೆರೆದಿದ್ದಾರೆ. ಇದೀಗ ಪುನೀತ್ ಅವರ ಕಣ್ಣು ನಾಲ್ವರ ಅಂಧಕಾರವನ್ನು ದೂರ ಮಾಡಿದೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯ ಡಾ.ಭುಜಂಗಶೆಟ್ಟಿ ಅವರು, ರಾಜ್ ಕುಮಾರ್ ಕುಟುಂಬದವರಿಗೆ ವಂದನೆ ಹೇಳೋಕೆ ಬಯಸುತ್ತೇನೆ. ಮೊದಲಿಗೆ ರಾಜ್‍ಕುಮಾರ್ ಅವರು ಬಂದು ನೇತ್ರಾದಾನ ಶುರು ಮಾಡಿದರು. ಬಳಿಕ ಪಾರ್ವತಮ್ಮನವರು, ಇದೀಗ ಪುನೀತ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

    ಶನಿವಾರವೇ ಅಪರೇಷನ್ ಮಾಡಿ ಪುನೀತ್ ಅವರ ಕಣ್ಣನ್ನು ಬೇರೆಯವರಿಗೆ ನೀಡಿದ್ದೇವೆ. ಸಾಮಾನ್ಯವಾಗಿ ಕಣ್ಣುದಾನ ಮಾಡಿದರೆ ಇಬ್ಬರಿಗೆ ಕೊಡುತ್ತೇವೆ. ಆದರೆ ಅಪ್ಪು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಿದ್ದೇವೆ. ಕರ್ನಿಯಾದ ಮುಂಭಾಗ ಮತ್ತು ಹಿಂಭಾಗದ ಪದರವನ್ನು ಎರಡು ಭಾಗವಾಗಿ ಮಾಡಿ ನಾಲ್ಕು ಜನರಿಗೆ ಕೊಟ್ಟಿದ್ದೇವೆ. ಅಂದರೆ ಕಣ್ಣಿನ ಮುಂದಿನ ಭಾಗ ಮತ್ತು ಬ್ಯಾಕ್ ಪೋಷನ್ ಬೇರ್ಪಡಿಸಿ ಅವಶ್ಯಕತೆ ಇರುವ ನಾಲ್ವರಿಗೆ ಕೊಟ್ಟಿದ್ದೇವೆ. ಒಬ್ಬರ ಕಣ್ಣನ್ನು ಒಂದೇ ದಿನ, ನಾಲ್ವರಿಗೆ ಕೊಟ್ಟಿರುವುದು ಇದೇ ಮೊದಲಾಗಿದೆ. ನಾಲ್ವರು ಇದೀಗ ತುಂಬಾ ಚೆನ್ನಾಗಿದ್ದಾರೆ. ಇದಕ್ಕೆ ಕಣ್ಣು ತುಂಬಾ ಚೆನ್ನಾಗಿ ಇರಬೇಕಾಗುತ್ತದೆ. ಪುನೀತ್ ಕಣ್ಣು ತುಂಬಾ ಚೆನ್ನಾಗಿದ್ದ ಕಾರಣ ಇದನ್ನು ನಾಲ್ವರಿಗೆ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.

    ಐದು ಜನರ ತಂಡದ ಡಾಕ್ಟರ್‌ಗಳು ಆಪರೇಷನ್ ಅನ್ನು ಮಾಡಿದ್ದಾರೆ. ಈ ಮೊದಲು ಈ ರೀತಿಯ ಆಪರೇಷನ್ ಅನ್ನು ಬೇರೆ, ಬೇರೆ ದಿನ ಮಾಡಲಾಗುತ್ತಿತ್ತು. ಆದರೆ ಅಪ್ಪು ಕಣ್ಣಿಗೆ ಪೂರಕವಾದ ನಾಲ್ವರ ಕಣ್ಣುಗಳಿಗೆ ಮ್ಯಾಚ್ ಆಗಬೇಕು. ಇದೀಗ ಒಬ್ಬ ಯುವತಿ, ಮೂವರು ಯುವಕರಿಗೆ ಅಪ್ಪು ಕಣ್ಣು ನೀಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಆರು ಗಂಟೆ ತನಕ ಆಪರೇಷನ್ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ

  • ಲಸಿಕೆ ಪಡೆದು ಜಾಗೃತಿ ಮೂಡಿಸಿದ ಡಾ. ಭುಜಂಗ ಶೆಟ್ಟಿ

    ಲಸಿಕೆ ಪಡೆದು ಜಾಗೃತಿ ಮೂಡಿಸಿದ ಡಾ. ಭುಜಂಗ ಶೆಟ್ಟಿ

    ಬೆಂಗಳೂರು: ನಾರಾಯಣ ನೇತ್ರಾಲಯದ ನಿರ್ದೇಶಕ ಡಾ.ಭುಜಂಗ ಶೆಟ್ಟಿ ಇಂದು ಕೋವಿಡ್‌ ಲಸಿಕೆಯನ್ನು ಪಡೆದು ಜಾಗೃತಿ ಮೂಡಿಸಿದ್ದಾರೆ.

    ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮದ ಮೂರನೇ ದಿನವಾದ ಇಂದು ಬೆಂಗಳೂರಿನ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ವ್ಯಾಕ್ಸಿನ್ ವಿತರಣೆ ನಡೆಯುತ್ತಿದೆ.

    ನಗರದ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಕೋವಿಡ್ ಲಸಿಕೆ ಹಂಚಿಕೆಗೆ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಖಾತೆಯ ಸಚಿವ ಗೋಪಾಲಯ್ಯ ಚಾಲನೆ ನೀಡಿದರು. ಈ ವೇಳೆ  ಡಾ.ಭುಜಂಗ ಶೆಟ್ಟಿ ಎರಡನೇ ಲಸಿಕೆಯನ್ನು ತೆಗೆದುಕೊಂಡು ಕೊರೊನಾ ಲಸಿಕೆಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

    ಲಸಿಕಾ ಅಭಿಯಾನವನ್ನು ಉದ್ಘಾಟಿಸಿದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಲ್ಲೆಡೆ ವ್ಯಾಕ್ಸಿನ್ ಹಂಚಿಕೆಯಾಗುತ್ತಿದ್ದು, ನಾರಾಯಣ ನೇತ್ರಾಲಯದಲ್ಲಿ ಭುಜಂಗ ಶೆಟ್ಟಿ ಹಾಗೂ ಅವರ ಸಿಬ್ಬಂದಿಗೆ ಕೊರೊನಾ ಲಸಿಕೆ‌ ನೀಡಲಾಗುತ್ತಿದೆ ಇದು ಉತ್ತಮ ಅಭಿಯಾನ ಎಂದು ಅಭಿಪ್ರಾಯಪಟ್ಟರು.

    ಈ ವೇಳೆ ನಾರಾಯಣ ನೇತ್ರಾಲಯದ ನಿರ್ದೇಶಕ ಭುಜಂಗ ಶೆಟ್ಟಿ ಮಾತನಾಡಿ, ನನಗೆ ತುಂಬ ಖುಷಿಯಾಗುತ್ತಿದೆ. ಭಾರತದಲ್ಲಿ ತಯಾರಾಗಿರುವ ಮೊದಲ ಲಸಿಕೆಯಿದು. ಈ ಕಾರಣಕ್ಕೆ ನಮ್ಮ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ಒಳ್ಳೆಯ ಲಸಿಕೆ. ಎಲ್ಲರೂ ಲಸಿಕೆ ಪಡೆಯಬೇಕು. ವ್ಯಾಕ್ಸಿನ್ ಪಡೆದ ನಂತರವೂ ಕೊರೊನಾ ಮುಂಜಾಗ್ರತಾ ಕ್ರಮ ಇರಲೇಬೇಕು ಎಂದರು.

    ಬಿಬಿಎಂಪಿ ಅವರ ಈ ಕೆಲಸ ತುಂಬ ಪ್ರಮುಖವಾಗಿದೆ.  ಲಸಿಕೆ ತೆಗೆದುಕೊಂಡ ನಂತರ ಮದ್ಯಪಾನ ಮಾಡಬಾರದು ಹಾಗೂ ಸಿಗರೇಟ್ ಸಹ ಸೇದಬಾರದು ಎಂದು ಡಾ. ಭುಜಂಗಶೆಟ್ಟಿ ಸಲಹೆ ನೀಡಿದರು. ಇವತ್ತು 200 ಜನ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಲಿದ್ದಾರೆ.