Tag: narayana guru

  • ಬಜೆಟ್‌ನಲ್ಲಿ ಕಡೆಗಣನೆ – ರಾಜ್ಯ ಸರ್ಕಾರಕ್ಕೆ ಈಡಿಗ ಸಮುದಾಯದಿಂದ ಎಚ್ಚರಿಕೆ

    ಬಜೆಟ್‌ನಲ್ಲಿ ಕಡೆಗಣನೆ – ರಾಜ್ಯ ಸರ್ಕಾರಕ್ಕೆ ಈಡಿಗ ಸಮುದಾಯದಿಂದ ಎಚ್ಚರಿಕೆ

    ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಬಜೆಟ್‌ನಲ್ಲಿ(Budget) ಕಡೆಗಣಿಸಿರುವುದನ್ನು ವಿರೋಧಿಸಿ ಈಡಿಗ ಸಮುದಾಯ (Idiga Community) ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಬಿಲ್ಲವ, ನಾಮಧಾರಿ ಸೇರಿದಂತೆ 26 ಉಪ ಪಂಗಡಗಳಿರುವ ಈಡಿಗ ಸಮುದಾಯ ಸರಿಸುಮಾರು 70 ರಿಂದ 80 ಲಕ್ಷ ಸಂಖ್ಯಾಬಲ ಹೊಂದಿದ್ದು, ನಮ್ಮದೇ ಆದ ನಿಗಮ ನೀಡುವುದಾಗಿ ಸರ್ಕಾರ ಭರವಸೆ ನೀಡಿ ಮಾತು ತಪ್ಪಿದೆ ಎಂದು ಈಡಿಗ ಸಮುದಾಯ ಆರೋಪಿಸಿದೆ.

    ಬೆಂಗಳೂರಿನಲ್ಲಿ‌ ಮಾತನಾಡಿದ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಸುಂಟ್ರಳ್ಳಿ , ಮೊದಲಿನಿಂದಲೂ ಸಾಮಾಜಿಕ, ಶೈಕ್ಷಣಿಕವಾಗಿ ಈಡಿಗ ಸಮುದಾಯ ತುಳಿತಕ್ಕೊಳಗಾಗುತ್ತಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯರ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿ.ಎಂ ಬಂಗಾರಪ್ಪನವರ ಹೆಸರಿಡುವಂತೆ ಈಡಿಗ ಸಮುದಾಯ ಇಟ್ಟಿದ್ದ ಬೇಡಿಕೆಗಳು ಈಡೇರಿಲ್ಲ. ಉದ್ಯೋಗದ ವಿಚಾರ ಬಂದಾಗ ನಿಗಮ ಮಂಡಳಿಯನ್ನು ನೀಡುವುದಾಗಿ ಮೂರು ವರ್ಷದಿಂದ ಸರ್ಕಾರ ಹೇಳಿಕೊಂಡು ಬಂದಿದ್ದು ಈ ಬಾರಿಯೂ ನೆರವೇರಿಲ್ಲ. ಯಾವಾಗ ಈಡಿಗ ಸಮುದಾಯ ಎಚ್ಚೆತ್ತುಕೊಂಡು ಪ್ರತಿಭಟನೆಗೆ ಮುಂದಾಯಿತೋ ಆಯಾ ಭಾಗದ ಜನನಾಯಕರ ಮೂಲಕ ಭರವಸೆಯ ನೆಪದಲ್ಲಿ ಪ್ರತಿಭಟನೆಯನ್ನ ತಣ್ಣಗಾಗಿಸಲಾಗಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸಿಎಂ ಮಾಡ್ಬೇಕು: ಭೈರತಿ ಸುರೇಶ್

    ರಾಜ್ಯ ಸರ್ಕಾರ ಬಜೆಟ್ ನಲ್ಲಿ ನಾರಾಯಣಗುರು (Narayana Guru) ವಸತಿ ಶಾಲೆಗೆ ನೀಡಿರುವ ಅನುದಾನದ ಬಗ್ಗೆ ಹೇಳಲಾಗಿದೆ. ಆದರೆ ನಾರಾಯಣಗುರು ವಸತಿ ಶಾಲೆಯಲ್ಲಿ ಕೇವಲ ಈಡಿಗ ಸಮುದಾಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿಲ್ಲ. ಅದು ಈಡಿಗ ಸಮುದಾಯಕ್ಕೆ ಸರ್ಕಾರದ ಕೊಡುಗೆಯೂ ಅಲ್ಲ. ಆದ್ದರಿಂದ ಇನ್ನುಮುಂದೆ ಈಡಿಗ ಸಮುದಾಯ ಸರಿಯಾದ ಪಾಠ ಕಲಿಸಲು ಮುಂದಾಗಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ಯಾಬ್ಲೋ ಡ್ಯಾಮೇಜ್ ಕಂಟ್ರೋಲ್ – ನಾರಾಯಣ ಗುರು ಹೆಸರಿನಲ್ಲಿ ಶಾಲೆ ಆರಂಭ

    ಟ್ಯಾಬ್ಲೋ ಡ್ಯಾಮೇಜ್ ಕಂಟ್ರೋಲ್ – ನಾರಾಯಣ ಗುರು ಹೆಸರಿನಲ್ಲಿ ಶಾಲೆ ಆರಂಭ

    ಬೆಂಗಳೂರು: ಗಣರಾಜ್ಯೋತ್ಸವದ ವೇಳೆ ಕೇರಳದ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಬಿಜೆಪಿ ಟೀಕೆಗೆ ಗುರಿಯಾಗಿತ್ತು. ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಕರ್ನಾಟಕ ಸರ್ಕಾರ ನಾರಾಯಣ ಗುರುಗಳ ಹೆಸರಿನಲ್ಲಿ ಶಾಲೆ ಆರಂಭಿಸಲು ಮುಂದಾಗಿದೆ.

    ಮಾನವೀಯತೆ, ಸಮಾನತೆ ಹರಿಕಾರ, ಶ್ರೀನಾರಾಯಣ ಗುರುವರರರ ಸ್ಮರಣಾರ್ಥಕ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಪ್ರಾಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

    ಬಜೆಟ್‍ನಲ್ಲಿ ಏನಿದೆ?
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ನಿಗಮಗಳ ಮೂಲಕ 400 ಕೋಟಿ ರೂಪಾಯಿ ಮೊತ್ತದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ನಿಗಮಗಳ ಮೂಲಕ 400 ಕೋಟಿ ರೂಪಾಯಿ ಮೊತ್ತದಲ್ಲಿ ಈ ಯೋಜನೆಯಮನ್ನು ಹಮ್ಮಿಕೊಳ್ಳಲಾಗುವುದು. ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ ಹಾಗೂ ಅತೀ ಹಿಂದುಳಿದ ಸಮುದಾಯಗಳಾದ ತಿಗಳ, ಮಾಳಿ, ಮಾಳಿ ಮಾಲಗಾg, ಕುಂಬಾರ, ಯಾದವ, ದೇವಾಡಿಗ, ಸಿಂಪಿ, ಕ್ಷತ್ರಿಯ, ಮೇದಾರ, ಕಂಚಿ, ಕುರ್ಮ, ಪಿಂಜಾರ/ ನದಾಫ್, ಕುರುಬ, ಬಲಿಜ, ಈಡಿಗ, ಹಡಪ ಹಾಗೂ ಇತರ ಜನಾಂಗದ ಅಭಿವೃದ್ಧಿಗೆ 400 ಕೋಟಿ ರೂಪಾಯಿ ಮೊತ್ತದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು.

    ಎಸ್.ಸಿ/ಎಸ್.ಟಿ ಮಹಿಳೆಯಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಇಲಾಖೆಗಳ ಅಡಿಯಲ್ಲಿರುವ ಎಲ್ಲಾ ಅಭಿವೃದ್ಧಿ ನಿಗಮಗಳ ಸ್ವಯಂ ಉದ್ಯೋಗ ಮತ್ತು ಇತರೆ ಕಾರ್ಯಕ್ರಮಗಳಲ್ಲಿನ ಗುರಿಯಲ್ಲಿ ಎಸ್.ಟಿ/ಎಸ್/ಟಿ ಮಹಿಳೆಯರಿಗೆ ಶೇ.25 ರಷ್ಟು ಕಾಯ್ದಿರಿಸಲಿದೆ. ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಳೆಗಳ ವ್ಯಾಪ್ತಿಗೆ ಬರುವ ವಿವಿಧ ಅಭಿವೃದ್ಧಿ ನಿಗಮಗಳಿಂದ ಒಟ್ಟಾರೆ 800 ಕೋಟಿ ರೂಪಾಯಿಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು

    ದುರ್ಬಲ ವರ್ಗಗಳ ಸಬಲೀಕರಣ:
    • ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ 800 ಕೋಟಿ ರೂ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಿಗಾಗಿ 250 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮಥ್ರ್ಯದ ಬಹುಮಹಡಿಯ ದೀನ್‍ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣ.
    • ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಯನ್ನು ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಾಗಿ ಮರುನಾಮಕರಣ; ಪದವಿ ಪೂರ್ವ ತರಗತಿ ಪ್ರಾರಂಭ: ಸಿಬಿಎಸ್‍ಇ ಮಾನ್ಯತೆ ಪಡೆಯಲು ಕ್ರಮ. 25 ಕೋಟಿ ರೂ. ಅನುದಾನ.
    • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆ ಪ್ರಾರಂಭ.


    • ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಅಡಿಯಲ್ಲಿರುವ ಎಲ್ಲಾ ಅಭಿವೃದ್ಧಿ ನಿಗಮಗಳ ಸ್ವಯಂ ಉದ್ಯೋಗ ಮತ್ತು ಇತರೆ ಕಾರ್ಯಕ್ರಮಗಳ ಗುರಿಯಲ್ಲಿ ಶೇ.25ರಷ್ಟು ಮಹಿಳೆಯರಿಗೆ ಮೀಸಲು.
    • ಗಂಗಾ ಕಲ್ಯಾಣ ಯೋಜನೆಯಲ್ಲಿ ಸುಧಾರಣೆ; ಬೋರ್ ವೆಲ್ ಕೊರೆಯಲು ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆ; ವಿದ್ಯುದೀಕರಣ ಶುಲ್ಕ ಸರ್ಕಾರದಿಂದ ಪಾವತಿ. 2022-23ರಲ್ಲಿ ಒಟ್ಟಾರೆ 1,115 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
    • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ನಿಗಮಗಳಡಿ 400 ಕೋಟಿ ರೂ. ಅಭಿವೃದ್ಧಿ ಯೋಜನೆ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಬರುವ ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ. ಯೋಜನೆ
    • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ. ಯೋಜನೆ.
    • ಮರಾಠಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ 50 ಕೋಟಿ ರೂ.
    • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ 50 ಕೋಟಿ ರೂ. ಯೋಜನೆ ಹಾಗೂ ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ. ಯೋಜನೆ.

  • ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

    ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

    ಉಡುಪಿ: ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಈ ಬೆಳವಣಿಗೆ ವಿರುದ್ಧ ಇಂದು ಕರಾವಳಿಯಯಲ್ಲಿ ಸ್ವಾಭಿಮಾನ ನಡಿಗೆ ನಡೆಯುತ್ತಿದೆ. ಈ ಬಗ್ಗೆ ಮೀನುಗಾರಿಕಾ ಬಂದರು ಸಚಿವ ಎಸ್.ಅಂಗಾರ ಮಾತನಾಡಿದ್ದಾರೆ.

    ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾರಾಯಣ ಗುರುಗಳ ಬಗ್ಗೆ ದೇಶದಲ್ಲಿ ಎಲ್ಲರಿಗೂ ಅಭಿಮಾನ ಇದೆ. ನಾರಾಯಣ ಗುರುಗಳ ವಿಚಾರದಲ್ಲಿ ರಾಜಕೀಯ ದೃಷ್ಟಿಕೋನಗಳು ಪ್ರತಿಭಟನೆ ಮಾಡುವುದು ಸರಿಯಲ್ಲ. ಇದಕ್ಕೆ ನನ್ನ ವಿರೋಧ ಇದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

    ನಾರಾಯಣ ಗುರುಗಳ ಬಗ್ಗೆ ಯಾರಿಗೂ ಗೌರವ ಕಡಿಮೆಯಾಗಿಲ್ಲ. ಗುರುಗಳು ಸಮಾಜಕ್ಕೆ ಪ್ರಮುಖರು. ಇತಿಹಾಸದಲ್ಲಿ ಅವರ ಎಲ್ಲ ವಿಚಾರವನ್ನು ಎಲ್ಲರೂ ಒಪ್ಪುವಂಥದ್ದು. ಈ ಹಿಂದೆ ಈ ವಿಚಾರಗಳು ಯಾಕೆ ಚರ್ಚೆಯಾಗಿಲ್ಲ? ಈಗ ರಾಜಕೀಯಕ್ಕೆ ಇಳಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

    ಈ ಎಲ್ಲವನ್ನು ಆಲೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿಗೆ ನಮಗೆ ಮತ್ತು ನಮ್ಮ ಸಂಘಟನೆಗೆ ನಾರಾಯಣ ಗುರುಗಳ ಬಗ್ಗೆ ಗೌರವವಿದೆ. ನಾರಾಯಣ ಗುರುಗಳ ವಿಚಾರದಲ್ಲಿ ಮುಂದೆ ಏನೇನು ಮಾಡಬೇಕು ಇದನ್ನು ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

  • ಅಧಿಕಾರ ಹೋದ ಮೇಲೆ ಸಿದ್ದರಾಮಯ್ಯಗೆ ಮಹನೀಯರು ನೆನಪಾಗ್ತಾರೆ: ಪ್ರತಾಪ್ ಸಿಂಹ

    ಅಧಿಕಾರ ಹೋದ ಮೇಲೆ ಸಿದ್ದರಾಮಯ್ಯಗೆ ಮಹನೀಯರು ನೆನಪಾಗ್ತಾರೆ: ಪ್ರತಾಪ್ ಸಿಂಹ

    ಮೈಸೂರು: ಅಧಿಕಾರ ಹೋದ ಬಳಿಕ ಸಿದ್ದರಾಮಯ್ಯ ಅವರಿಗೆ ಮಹನೀಯರು ನೆನಪಾಗುತ್ತಾರೆ ಎಂದು ವಿಪಕ್ಷ ನಾಯಕರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

    siddaramaiah

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ಸಿಗದ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ವರ್ತನೆ ಕಾಮಾಲೆ ಕಣ್ಣಿಗೆ ನೋಡುವುದೆಲ್ಲಾ ಹಳದಿ ಎಂಬಂತಾಗಿದೆ. ರಾಜ್ಯದಲ್ಲಿ ಕ್ಯಾಂಟೀನ್ ಗೆ ಹೆಸರಿಡುವಾಗ ಈ ನೆಲದ ಮಹಾ ಪುರುಷರ ಹೆಸರು ಅವರಿಗೆ ನೆನಪಾಗಲಿಲ್ಲ. ಸಿದ್ದರಾಮಯ್ಯಗೆ ಆಗ ನೆನಪಾಗಿದ್ದು ಇಂದಿರಾಗಾಂಧಿ ಹೆಸರು ಮಾತ್ರ ಎಂದರು.

    ಅಧಿಕಾರದಲ್ಲಿ ಇರುವಾಗ ಅವರಿಗೆ ಮಹನೀಯರು ನೆನಪಾಗುವುದಿಲ್ಲ. ಅಧಿಕಾರ ಹೋದ ಮೇಲೆ ಮಹನೀಯರು ನೆನಪಾಗುತ್ತಾರೆ. ನಾರಾಯಣ ಗುರುಗಳು, ಒನಕೆ ಓಬವ್ವ, ಮೈಸೂರು ಮಹಾರಾಜರು ಎಂದಿಗೂ ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಇದ್ದಾಗ ನೆನಪಾಗಲಿಲ್ಲ. ಈಗ ಭೂತದ ಬಾಯಲ್ಲಿ ಭಗವದ್ಗಿತೆ ಎಂಬಂತೆ ಮಹನೀಯರಿಗೆ ಗೌರವ ಕೊಡುವುದನ್ನು ನಮಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

    ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿದ್ದಾರೆ. ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ಧಚಿತ್ರ ಮಾಡಿರುತ್ತಾರೋ ಗುಣಮಟ್ಟದ ಆಧಾರದ ಮೇಲೆ ಅದರ ಆಯ್ಕೆ ಆಗುತ್ತದೆ. ಆಯ್ಕೆ ಪ್ರಕ್ರಿಯೆ ಪಾರದಾರ್ಶಕವಾಗಿರುತ್ತೆ. ಇಲ್ಲಿ ಯಾರ ಅವಮಾನದ ಪ್ರಶ್ನೆಯೆ ಇರುವುದಿಲ್ಲ. ಸಿದ್ದರಾಮಯ್ಯ ಅವರು ಮೊದಲು ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳ ಮಾರ್ಗ ಸೂಚಿ ಓದಿಕೊಳ್ಳಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ, ಅಖಿಲೇಶ್ ಯಾದವ್ ನಾದಿನಿ ಬಿಜೆಪಿ ಸೇರ್ಪಡೆ

    ಕೇರಳ ಸರ್ಕಾರವು ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಪ್ರಸ್ತಾಪವನ್ನು ಕಳಿಸಿತ್ತು. ಆದರೆ ಇದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಕೇರಳ ಗಣರಾಜ್ಯೋತ್ಸವ ಪರೇಡ್‍ನಿಂದ ಹೊರಗುಳಿದಿದೆ. ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಮಾಜಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

  • ನಾರಾಯಣಗುರು ಮಂದಿರಕ್ಕೆ ನುಗ್ಗಿ ಹುಂಡಿ ಹೊತ್ತೊಯ್ದ ಕಳ್ಳರು

    ನಾರಾಯಣಗುರು ಮಂದಿರಕ್ಕೆ ನುಗ್ಗಿ ಹುಂಡಿ ಹೊತ್ತೊಯ್ದ ಕಳ್ಳರು

    – ಪೊಲೀಸರಿಗೆ ಸವಾಲಾಗಿದೆ ಕೇಸ್

    ಉಡುಪಿ: ಇಲ್ಲಿನ ನಾರಾಯಣಗುರು ಮಂದಿರಕ್ಕೆ ಕಳ್ಳರು ನುಗ್ಗಿ ಹುಂಡಿ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಇಲ್ಲದ ಕಾರಣ ಕಳ್ಳರ ಪತ್ತೆ ಪೊಲೀಸರಿಗೆ ಸವಾಲಾಗಿದೆ.

    ಕಾಪು ತಾಲೂಕು ಮೂಳೂರು ಬಿಲ್ಲವ ಸಂಘದ ನಾರಾಯಣಗುರು ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯನ್ನು ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅರ್ಚಕರು ಬೆಳಗ್ಗೆ ಪೂಜೆಗಾಗಿ ಆಗಮಿಸಿದ ವೇಳೆ ವಿಚಾರ ಬಯಲಾಗಿದೆ.

    ನಾರಾಯಣ ಗುರು ಸಂಘದ ಪ್ರಮುಖರು ಕಾಪು ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ. ಬೆರಳಚ್ಚು ತಜ್ಞರು ಕಳ್ಳರ ಜಾಡು ಹಿಡಿಯಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ವಾನದಳ ಸ್ಥಳಕ್ಕೆ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ನಿವಾಸಿಗಳ ಬಳಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

    ಸ್ಥಳೀಯ ಬಿಲ್ಲವ ಸಮುದಾಯದ ಮುಂದಾಳುಗಳಾದ ಪ್ರಮೋದ್ ಮತ್ತು ಪುರುಷೋತ್ತಮ್ ಮಾತನಾಡಿ, ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕು. ಹುಂಡಿಯಲ್ಲಿ ಇದ್ದ ಹಣವು ಭಕ್ತರು ಗುರುಗಳಿಗೆ ಸಮರ್ಪಿಸಿದ್ದು, ಹಣದಲ್ಲಿ, ಹರಕೆ ರೂಪದಲ್ಲಿ ಹಾಕಿದ್ದ ವಸ್ತುಗಳಲ್ಲಿ ಭಕ್ತರ ಭಾವನೆ ಇದೆ. ಮಂದಿರಕ್ಕೆ ಸಿಸಿಟಿವಿ ಅಳವಡಿಸುವ ಅವಶ್ಯಕತೆ ಇದೆ ಎಂದರು.