Tag: narayana gowda

  • ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು

    ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಏಪ್ರಿಲ್ 1 ರಂದು ಲೋಗೋ, ಥೀಮ್ ಸಾಂಗ್ ಹಾಗೂ ಜೆರ್ಸಿ ಬಿಡುಗಡೆಗೊಳಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದರು.

    ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಎರಡನೇ ಆವೃತ್ತಿಯನ್ನು ಆಯೋಜಿಸುವುದು ನಮ್ಮ ಕರ್ನಾಟಕಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಏಪ್ರಿಲ್ 24 ರಿಂದ ಮೇ 03 ವರೆಗೂ ನಡೆಯಲಿದ್ದು, ಏಪ್ರಿಲ್ 1 ರಂದು ಕ್ರೀಡಾಕೂಟದ ಲೋಗೋ, ಥೀಮ್ ಸಾಂಗ್, ಜೆರ್ಸಿ, ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಯುವಜನ ಮತ್ತು ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಂದ್ರ ಗೃಹ ಇಲಾಖೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ

    ಏಪ್ರಿಲ್ 24 ರಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉದ್ಘಾಟನೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ. ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 10 ದಿನಗಳ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಜುಡೋ, ವಾಲಿಬಾಲ್, ಕಬಡ್ಡಿ, ಬಾಸ್ಕೆಟ್ ಬಾಲ್, ಕರಾಟೆ, ಮಲ್ಲಕಂಬ ಸೇರಿದಂತೆ 20 ಕ್ರೀಡೆಗಳು ನಡೆಯಲಿದ್ದು, ದೇಶದ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 8 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಜೈನ್ ವಿವಿ ಕ್ಯಾಂಪಸ್, ಕಂಠೀರವ ಕ್ರೀಡಾಂಗಣದಲ್ಲಿ ಗೇಮ್ಸ್‍ಗಳು ನಡೆಯಲಿವೆ. ಈ ಕ್ರೀಡಾಕೂಟವನ್ನು ಅದ್ಧೂರಿಯಾಗಿ ಆಯೋಜಿಸಲು ಆರು ತಿಂಗಳಿನಿಂದ ಸಿದ್ಧತೆ ನಡೆಸುತ್ತಿದ್ದು, ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ವಿಶೇಷ ನಿಗಾವಹಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಕನ್ನಡ ಮತ್ತು ಹಿಂದಿಯಲ್ಲಿ ಸರೋಜಿನಿ ನಾಯ್ಡು ಬಯೋಪಿಕ್ : ಭಾರತದ ಕೋಗಿಲೆ ಪಾತ್ರದಲ್ಲಿ ಇಬ್ಬರು ನಟಿಯರು

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಾ ಥೀಮ್ ಸಾಂಗ್‍ನ್ನು ಕನ್ನಡದ ಖ್ಯಾತ ರಾರ್ಪರ್, ಗಾಯಕ ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದಾರೆ. ಕ್ರೀಡೆ ಜೊತೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಸರ್ಕಾರದ ಉದ್ದೇಶವಾಗಿದ್ದು ಈ ಕಾರಣಕ್ಕಾಗಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ಅನ್ನು ಹಸಿರು ಕ್ರೀಡಾಕೂಟ (ಗ್ರೀನ್ ಗೇಮ್ಸ್)ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

    MODi

    ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರೀತಿಯ ಸಹಕಾರ ನೀಡ್ತಿದ್ದು, ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಮಾರ್ಗದರ್ಶನ ನೀಡುತ್ತಿದ್ದಾರೆ. ಅದರ ಜೊತೆಗೆ ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕೂಡ ಪ್ರತಿನಿತ್ಯ ಮಾಹಿತಿ ಪಡೆಯುತ್ತಿದ್ದು, ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಹಕ್ಕು ಟೆಂಡರ್ ಆಹ್ವಾನ – ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಾಧನೆ ಕುರಿತ ‘ಕಾರ್ಯಪಥ’ ಪುಸ್ತಕವನ್ನು ಅನುರಾಗ್ ಠಾಕೂರ್ ಬಿಡುಗಡೆಗೊಳಿಸಲಿದ್ದಾರೆ. ಇದೇ ದಿನ ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೊಸ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‌ ಉದ್ಘಾಟನೆಗೊಳಿಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜೈನ್ ವಿವಿ ವೈಸ್ ಚಾನ್ಸಲರ್ ಉಪಸ್ಥಿತರಿದ್ದರು.

  • ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ನಾರಾಯಣಗೌಡ

    ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ನಾರಾಯಣಗೌಡ

    ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಿಖಿಲ್ ಸೋಲುವುದಕ್ಕೆ ಅವರ ದೊಡ್ಡಪ್ಪ ರೇವಣ್ಣನೇ ಕಾರಣ ಎಂದು ಸಚಿವ ಕೆ.ಸಿ. ನಾರಾಯಣ ಹೇಳಿದ್ದಾರೆ.

    ನಗರದ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ. ನಿಖಿಲ್ ಕುಮಾರಸ್ವಾಮಿ ಬಗ್ಗೆ ನನಗೆ ಗೌರವ ಇದೆ. ಅವರು ಸುಮ್ಮನೆ ಮಾತನಾಡುವುದು ತಪ್ಪು. ಕುಮಾರಸ್ವಾಮಿ ಸುಪುತ್ರ ನಿಖಿಲ್ ಇನ್ನೂ ಚಿಕ್ಕ ರಾಜಕಾರಣಿ. ಪ್ರತಿಯೊಂದರ ಬಗ್ಗೆ ಮಾಹಿತಿ ತಿಳಿದಕೊಂಡು ನಿಖಿಲ್ ಮಾತನಾಡಬೇಕು. ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಅಂತ ಹೇಳುತ್ತಾರೆ. ಆದರೆ ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಒಂದೇ ಒಂದು ಬಾರಿ ಎನರ್ಜಿ ಮಿನಿಸ್ಟರ್ ಆಗಿ ತೋರಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ

    Revanna

    ಚನ್ನರಾಯಪಟ್ಟಣ ತಾಲೂಕು – ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಕೊಟ್ಟುಕೊಂಡಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರ ಸ್ವಾಮಿ ಅವರ ದೊಡ್ಡಪ್ಪನನ್ನೇ ಕೇಳಲಿ. ಮಾಹಿತಿ ನೀಡಿ ಎಂಬ ಹಕ್ಕಿನಲ್ಲಿ ಕೇಳಲಿ. ಅವರ ದೊಡ್ಡಪ್ಪ ಬಂದ ಅನುದಾನವನ್ನು ಹಾಸನಕ್ಕೆ ಹಾಕಿಕೊಂಡಿರುವ ಬಗ್ಗೆ ಪಾಪ ನಿಖಿಲ್‍ಗೆ ವಿಷಯ ಗೊತ್ತಿಲ್ಲ. ಮಂಡ್ಯವನ್ನು ಖಾಲಿ ಬಿಟ್ಟರು. ನಿಖಿಲ್ ಕುಮಾರಸ್ವಾಮಿ ಸೋಲಬೇಕಾದರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ಹಿಡಿದುಕೊಂಡು ಇಷ್ಟು ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿಕೊಂಡು ಬಂದರು. ಆದರೆ ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹುಡುಕಿಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡಿಕೊಂಡರು. ಅಲ್ಲಿ ಅವರ ಮಗನನ್ನು ಗೆಲ್ಲಿಸಿಕೊಂಡಿರು. ನಿಖಿಲ್‍ನ ಸೋಲಿಸಿದರು. ಅದಕ್ಕಿಂತ ನಮ್ಮ ನಿಖಿಲ್ ಕುಮಾರಣ್ಣಂಗೆ ಪಾಠ ಬೇಕಾ? ಈಗಲಾದರೂ ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

  • ಏಪ್ರಿಲ್‍ನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್: ನಾರಾಯಣ ಗೌಡ

    ಏಪ್ರಿಲ್‍ನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್: ನಾರಾಯಣ ಗೌಡ

    ಬೆಂಗಳೂರು: ಬಹು ನಿರೀಕ್ಷಿತ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಕ್ಕೆ ದಿನಗಣನೆ ಆರಂಭವಾಗಿದ್ದು, ಬಹುತೇಕ ಏಪ್ರಿಲ್ 24 ರಿಂದ ಮೇ 3 ರವೆರೆಗೆ ನಡೆಯುವ ಸಾಧ್ಯತೆ ಇದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಇಂದು ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ಜೈನ್ ವಿ.ವಿ ಕುಲಪತಿಗಳೊಂದಿಗೆ ಸಚಿವರು ಸಭೆ ನಡೆಸಿ, ಕ್ರೀಡಾ ಕೂಟ ಆಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ:  ಪಾಕ್ ಕ್ರಿಕೆಟ್ ಲೀಗ್‍ಗಿಂತ ಐಪಿಎಲ್ ದುಬಾರಿ – ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದು, ಬಹುತೇಕ ಅವರು ಬರುವುದು ನಿಚ್ಚಳವಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ

    ಇದೇ ಮೊದಲ ಬಾರಿಗೆ 23 ಗೇಮ್‍ಗಳನ್ನು ಆಯೋಜಿಸುತ್ತಿದ್ದು, ರಾಷ್ಟ್ರಾದ್ಯಂತ ಸುಮಾರು 8,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕರ್ನಾಟಕದ ಮಲ್ಲಕಂಬ, ಯೋಗ, ಕರಾಟೆ ಕ್ರೀಡೆಗಳನ್ನು ಇದೇ ಮೊದಲ ಬಾರಿಗೆ ಈ ಕ್ರೀಡಾ ಕೂಟದಲ್ಲಿ ಪರಿಚಯಿಸಲಾಗುತ್ತಿದೆ. ಕ್ರೀಡಾ ಕೂಟದ ಲೋಗೋಗೆ ಕೇಂದ್ರ ಕ್ರೀಡಾ ಸಚಿವಾಲಯವು ಅನುಮೋದನೆ ನೀಡಿದ್ದು, ಸದ್ಯದಲ್ಲಿಯೇ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅದ್ಧೂರಿ ಕ್ರೀಡಾ ಕೂಟವನ್ನು ಆಯೋಜಿಸುವ ಅವಕಾಶ ಸಿಕ್ಕಿದ್ದು ಅತ್ಯುತ್ತಮವಾಗಿ ಕ್ರೀಡಾಕೂಟವನ್ನು ಸಂಘಟಿಸಲಾಗುವುದು ಎಂದರು.

     

  • ಬೆಳಗ್ಗಿನ ಜಾವ ಎರಡು ಆಟೋ, ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ: ನಾರಾಯಣ ಗೌಡ

    ಬೆಳಗ್ಗಿನ ಜಾವ ಎರಡು ಆಟೋ, ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ: ನಾರಾಯಣ ಗೌಡ

    ಶಿವಮೊಗ್ಗ: ನಿನ್ನೆ ಭಜರಂಗಿದಳದ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2 ದಿನ ಕಫ್ರ್ಯೂ ವಿಧಿಸಲಾಗಿತ್ತು. ಈ ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ಬೆಳಗ್ಗಿನ ಜಾವ ಎರಡು ಆಟೋ ಮತ್ತು ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ ಎಂದು ಸಚಿವ ನಾರಾಯಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಗಾನಗರದಲ್ಲಿ ವೆಹಿಕಲ್‍ಗಳಿಗೆ ಬೆಂಕಿ ಹಾಕಿರೊ ಕಿಡಿಗೇಡಿಗಳು, ಎರಡು ಆಟೋ ಮತ್ತು ಒಂದು ಬೈಕ್‍ಗೆ ಬೆಂಕಿ ಹಾಕಿದ್ದಾರೆ. ವೆಹಿಕಲ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ರಾತ್ರಿಯಡಿ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಪೊಲೀಸರ ಬಂದೋಬಸ್ತ್ ನಡುವೆ ಈತರಹದ ಘಟನೆ ನಡೆದಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಶಿವಮೊಗ್ಗ ಇದೀಗ ಶಾಂತವಾಗಿದೆ. ಬೆಳಗಿನ ಜಾವ ಎರಡು ಆಟೊ ಮತ್ತು ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ. ಈ ತರಹದ ಘಟನೆ ನಡೆಯಬಾರದು
    ನೈಟ್ ಕಂಟ್ರೋಲ್‍ನಲ್ಲಿತ್ತು, ಬೆಳಗಿನ ಜಾವ ಈ ರೀತಿಯ ಘಟನೆ ನಡೆದಿದೆ. ಕೊಲೆ ಪ್ರಕರಣ ಸಂಬಂಧ ಈವರೆಗೆ 12 ಜನರನ್ನ ವಶಕ್ಕೆ ಪಡೆಯಲಾಗಿದೆ . ಐವರ ಕೃತ್ಯ ಸಾಭೀತಾಗಿದ್ದು, ಉಳಿದವರ ವಿಚಾರಣೆ ನಡೆಯುತ್ತಿದೆ. ಮೆರವಣಿಗೆ ವೇಳೆ ಕಲ್ಲು ತೂರಿ ಸಾರ್ವಜನಿಕ ಆಸ್ತಿಪಾಸ್ತಿಯನ್ನ ಹಾನಿಮಾಡಿದವರ ಮೇಲೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವೊಂದು ವೀಡಿಯೋಗಳು ರೆಕಾರ್ಡ್ ಆಗಿವೆ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಅಂತವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

  • ಭದ್ರಾವತಿಯಲ್ಲಿ ಕಮಲ ಅರಳಿಸೋಕೆ ಎಲ್ಲರೂ ದುಡಿಯೋಣ : ನಾರಾಯಣಗೌಡ

    ಭದ್ರಾವತಿಯಲ್ಲಿ ಕಮಲ ಅರಳಿಸೋಕೆ ಎಲ್ಲರೂ ದುಡಿಯೋಣ : ನಾರಾಯಣಗೌಡ

    ಶಿವಮೊಗ್ಗ : ಭದ್ರಾವತಿಗೂ, ಕೆ.ಆರ್. ಪೇಟೆಗೂ, ಮಂಡ್ಯ ಜಿಲ್ಲೆಗೂ ಅವಿನಾಭಾವ ಸಂಬಂಧ ಇದೆ. ಇವತ್ತು ಭದ್ರಾವತಿಯ ಜೆಡಿಎಸ್, ಕಾಂಗ್ರೆಸ್ ಹಲವು ಮುಖಂಡರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇದು ಅವರು ಮಾಡಿರುವ ಒಳ್ಳೆಯ ತೀರ್ಮಾನ ಎಂದು ರೇಷ್ಮೆ ಮತ್ತು ಯುವಜನ ಸೇವಾ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.

    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್ ಬಗ್ಗೆ ಮಾತೇ ಆಡಲ್ಲ. ಭದ್ರಾವತಿಯಲ್ಲಿ ಕಮಲ ಅರಳಿಸೋಣ, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದುಡಿಯೋಣ ಎಂದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್

    ಭದ್ರಾವತಿಯ ಜೆಡಿಎಸ್ ಮುಖಂಡ ಎಸ್. ಕುಮಾರ್, ಕಾಂಗ್ರೆಸ್ ಮುಖಂಡ ಸತೀಶ್ ಸೇರಿದಂತೆ ಹಲವರು ಬಿಜೆಪಿ ಸೇರಿದರು. ಇದೇ ವೇಳೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್‍ನ ಹಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಇದನ್ನೂ ಓದಿ: ಸ್ಟೇಷನ್‍ನಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ – ಹೊತ್ತಿ ಉರಿದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್

    ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಮೇಘರಾಜ್, ಎಂಎಲ್‍ಸಿ ಡಿ.ಎಸ್.ಅರುಣ್, ಮಾಜಿ ಎಂಎಲ್‍ಸಿ ಭಾನುಪ್ರಕಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ: ನಾರಾಯಣಗೌಡ

    ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ: ನಾರಾಯಣಗೌಡ

    ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ, ಹೀಗಾಗಿ ಏನೇನೋ ಹೇಳುತ್ತಾರೆ ಎಂದು ರೇಷ್ಮೆ ಹಾಗೂ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿರುಗೇಟು ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಕೆಲಸ ಇಲ್ಲ. ಹೀಗಾಗಿ ಏನೇನೋ ಹೇಳುತ್ತಿರುತ್ತಾರೆ. ಆದರೆ ನಮಗೆ ಮಾಡಲು ತುಂಬಾ ಕೆಲಸ ಇದೆ. ಸರ್ಕಾರ ನಮಗೆ ಜವಾಬ್ಧಾರಿ ಕೊಟ್ಟಿದೆ. ನಾವು ಪುನಾಃ ಕಾಂಗ್ರೆಸ್‍ಗೆ ಹೋಗುವುದಾದರೆ ಅಲ್ಲಿಂದ ಬಿಟ್ಟು ಇಲ್ಲಿಗೆ ಏಕೆ ಬರುತ್ತಿದ್ದೇವು ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಗೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:  ಖುತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್‌ ಆಗಿ ಬಳಸುತ್ತೇನೆ

    ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಆಗಿರುವ ನಾವೆಲ್ಲರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಬಂದಿದ್ದೇವೆ. ಯಡಿಯೂರಪ್ಪ ಅವರಿಂದ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿದೆ. ಬಿಜೆಪಿಗೆ ಸೇರ್ಪಡೆಯಾಗಿರುವ ಯಾರೊಬ್ಬರೂ ಇತರೆ ಪಕ್ಷಗಳಿಗೆ ಹೋಗುವುದಿಲ್ಲ. ಕಾಂಗ್ರೆಸ್‍ಗೆ ಹೋಗುತ್ತೇವೆ ಎನ್ನುವುದು ಅವರ ಭ್ರಮೆ. ನಾವು ಯಾರ ಸಂಪರ್ಕದಲ್ಲಿ ಇಲ್ಲ. ಆದರೆ ನಮ್ಮನ್ನೆಲ್ಲಾ ದಾರಿ ತಪ್ಪಿಸುವ ಸಲುವಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು. ಇದನ್ನೂ ಓದಿ: ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

  • ಪಾದಯಾತ್ರೆಗೆ ಹೊರಟ್ಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ: ನಾರಾಯಣ ಗೌಡ

    ಪಾದಯಾತ್ರೆಗೆ ಹೊರಟ್ಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ: ನಾರಾಯಣ ಗೌಡ

    ಮಂಡ್ಯ: ಗೊಂದಲ ಸೃಷ್ಟಿಸಿ ಸರ್ಕಾರಕ್ಕೆ ಟೆನ್ಷನ್ ಕೊಡೋಣ ಅಂತ ಅಂದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ನಾರಾಯಣಗೌಡರು ಕಿಡಿಕಾರಿದರು.

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ಗೊಂದಲ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸಿಗರು ಹಠ ಮಾಡ್ತಿದ್ದಾರೆ. ಪಾದಯಾತ್ರೆಗೆ ಹೊರಟ್ಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ. ಅರೆಸ್ಟ್ ಮಾಡಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸೋದಕ್ಕೆ ಪ್ಲಾನ್ ಮಾಡಿದ್ದಾರೆ. ಗೊಂದಲ ಸೃಷ್ಟಿ ಸರ್ಕಾರಕ್ಕೆ ಟೆನ್ಷನ್ ಕೊಡೋಣ ಅಂತ ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ – ಪ್ರಭು ಚವ್ಹಾಣ್ ವಿರುದ್ಧ ದೂರು

    ಈ ಬಗ್ಗೆ ಸಿಎಂ ಬೊಮ್ಮಾಯಿ ಬುದ್ಧಿವಂತಿಕೆಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಪಾದಯಾತ್ರೆಯಿಂದ ನಮ್ಮ ಪಾರ್ಟಿ, ಸರ್ಕಾರಕ್ಕೆ ಏನೂ ಎಫೆಕ್ಟ್ ಆಗಲ್ಲ. ಪಾದಯಾತ್ರೆ ಅಗತ್ಯ ಇಲ್ಲ ಅನ್ನೋದು ರಾಜ್ಯದ ಜನರಿಗೆ ತಿಳಿದಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಕೆಲವರು ಲಸಿಕೆ ತೆಗೆದುಕೊಳ್ಳದೇ ಇರುವವರು ಇರುತ್ತಾರೆ. ಅಂತವರೆಗೆ ತೊಂದರೆ ಆಗುತ್ತೆ ಎಂದು ತಿಳಿಸಿದರು.

    ಮತ್ತೆ ಜೈಲಿಗೆ ಕಳುಹಿಸಲು ಪ್ಲಾನ್ ಮಾಡ್ತಿದ್ದಾರೆ ಎಂದು ಡಿಕೆಶಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಯಾತಕ್ಕಾಗಿ ಈ ರೀತಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಅಂತ ನಮಗೂ ಅರ್ಥ ಆಗಲಿಲ್ಲ. ಅರೆಸ್ಟ್ ಮಾಡೋದಾಗಿದ್ರೆ ಒಂದು ನಿಮುಷದಲ್ಲಿ ಮಾಡಬಹುದಾಗಿತ್ತು. ಇದು ಗೊಂದಲ ಸೃಷ್ಟಿಸುವ ಸಂದರ್ಭವಲ್ಲ. ಎಷ್ಟು ದಿನ ಪಾದಯಾತ್ರೆ ಮಾಡೋದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಾಲ್ಕು ದಿನದಲ್ಲಿ ತಣ್ಣಗೆ ಆಗುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

  • MES ಪುಂಡರನ್ನು ಬಗ್ಗು ಬಡಿಯಬೇಕು: ಕರವೇ ನಾರಾಯಣಗೌಡ

    MES ಪುಂಡರನ್ನು ಬಗ್ಗು ಬಡಿಯಬೇಕು: ಕರವೇ ನಾರಾಯಣಗೌಡ

    ಧಾರವಾಡ: ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರನ್ನು ಬಗ್ಗು ಬಡಿಯಬೇಕು ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಕಾರ್ಯಕರ್ತರು ರಾತ್ರೋರಾತ್ರಿ ಬೆಳಗಾವಿಗೆ ಬಂದಿದ್ದಾರೆ, ಇನ್ನು ಹಲವು ಕಾರ್ಯಕರ್ತರು ಬರುತ್ತಿದ್ದಾರೆ. ಮೊದಲು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಂತರ 12 ಗಂಟೆಗೆ ಸುವರ್ಣ ಸೌಧಕ್ಕೆ ಪಾದಯಾತ್ರೆ ಮೂಲಕ ಹೋಗುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರು ಈಗ ಕನ್ನಡದ ಬಾವುಟ ಸುಡುವುದು, ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡುವುದು, ಕನ್ನಡಿಗರ ವಾಹನ ಸುಡುವ ಪುಂಡಾಟಿಕೆ ಮಾಡುತ್ತಲೇ ಬಂದಿದ್ದಾರೆ. ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಎಂಇಎಸ್ ಪುಂಡರಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾವು ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ

    ನಮ್ಮ ಸರ್ಕಾರಗಳು ಎಂಇಎಸ್ ಒಲೈಸುತ್ತಲೇ ಬಂದಿದ್ದಾರೆ. ಇದರಿಂದ ಅವರು ಮಿತಿಮೀರಿ ಗುಂಡಾಗಿರಿ ದಾದಾಗಿರಿ ಮಾಡುತ್ತಿದ್ದಾರೆ. ಸಿಎಂಗೆ ಹಾಗೂ ಗೃಹ ಸಚಿವರಿಗೆ ಭೇಟಿ ಮಾಡಿ ಹೇಳಲು ಈಗ ಬಂದಿದ್ದೇವೆ. 1999 ರಿಂದ ಇದನ್ನು ಎದುರಿಸಿಕೊಂಡೇ ಬಂದಿದ್ದೇವೆ. ಬೆಳಗಾವಿಗೆ 7 ಜನ ಎಂಇಎಸ್ ಶಾಸಕರು ಆಯ್ಕೆ ಆಗುತ್ತಿದ್ದರು, ಪಾಲಿಕೆಯಲ್ಲಿ ಸದಸ್ಯರು ಇರುತ್ತಿದ್ದರು. ಈಗ ಅವರು ಯಾರೂ ಇಲ್ಲ, ನೆಲಕಚ್ಚಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದೇ ಅವರು ಗುಡಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಇವರನ್ನು ಬೇರು ಸಮೇತ ಕಿತ್ತು ಹಾಕಬೇಕು. ನಮ್ಮ ಸರ್ಕಾರ ರಣ ಹೇಡಿ ಸರ್ಕಾರ ಆಗಬಾರದು. ನಮ್ಮ ಪೊಲೀಸ್ ವ್ಯವಸ್ಥೆ ರಣಹೇಡಿ ಅಲ್ಲ, ಇವರು ಪಾಕಿಸ್ತಾನದ ಭಯೋತ್ಪಾದಕರಂತೆ ಶಿವಸೇನೆ ಹಾಗೂ ಎಂಇಎಸ್‍ನವರು ಮಾಡುತ್ತಿದ್ದಾರೆ. ಅದಕ್ಕೆ ಇವರನ್ನು ಬಗ್ಗು ಬಡಿಯ ಬೇಕು. ಪೊಲೀಸರು ಏನಾದರೂ ಮಾಡಲಿ ನಾನು ಅಂಜಲ್ಲ, ಹಿಂದೆ ಸರಿಯಲ್ಲ, ಉದ್ದೇಶದಂತೆ ಬೆಳಗಾವಿಗೆ ಹೋಗಿ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ

    ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ

    ಬೆಳಗಾವಿ: ಸಚಿವ ಕೆ.ಸುಧಾಕರ್ ನಮ್ಮ ಲೀಡರ್ ಅಲ್ಲ. ಅವರಿಗೆ ಮಂಡ್ಯದ ಬಗ್ಗೆ ಏನು ಮಾಹಿತಿ ಇದೆ ಎಂದು ಸಚಿವ ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

    ಬೆಳಗಾವಿಯ ಸುವರ್ಣಸೌಧದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರುವ ಮಾತೇ ಇಲ್ಲ. ಹಣದ ಹೊಳೆಯಿಂದ ಮಂಡ್ಯದಲ್ಲಿ ಸೋಲು ಆಗಿದೆ. ನಮ್ಮ ಬಿಜೆಪಿ ಈಗ ಈಗ ಬೆಳೆಯುತ್ತಿದೆ. ನಾನು ಕಾಂಗ್ರೆಸ್- ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ

    ನಾವೂ ಹಣದಿಂದ ಚುನಾವಣೆ ಮಾಡಬಾರದು. ನಮ್ಮ ಸರ್ಕಾರ ಮಂಡ್ಯ ಜಿಲ್ಲೆಗೆ 3 ಸಾವಿರ ಕೋಟಿ ಪ್ಯಾಕೇಜ್ ನೀಡಿದೆ. ಮಂಡ್ಯದಲ್ಲಿ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನವರು ಈ ಬಾರಿ ವೀಕ್ ಆದ್ರು. ಹೀಗಾಗಿ ಕಾಂಗ್ರೆಸ್ ನವರ ಗೆಲುವು ಆಯ್ತು. ಕುಮಾರಸ್ವಾಮಿ ದೊಡ್ಡ ಲೀಡರ್. ನಮ್ಮ ಅಭ್ಯರ್ಥಿ ದೈರ್ಯ ಮಾಡಲಿಲ್ಲ ಎಂದರು. ಇದನ್ನೂ ಓದಿ: ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ

    ಸುಧಾಕರ ನಮ್ಮಲೀಡರ್ ಅಲ್ಲ. ಮಂಡ್ಯದ ಬಗ್ಗೆ ಅವರಿಗೆ ಏನ್ ಮಾಹಿತಿ ಇದೆ. ಯಾರು ಹಣದ ಹೊಳೆ ಹರಿಸಿದ್ರೋ ಅವರು ಗೆಲುವು ಕಂಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾವು ಹಣ ಹಂಚಿಲ್ಲ. ನಾವೂ ಅಭಿವೃದ್ಧಿ ಮೇಲೆ ಚುನಾವಣೆ ಮಾಡಿದ್ದೇವೆ. ಮಂಡ್ಯದ ಸೋಲಿನ ಹೊಣೆ ಹೊರುವ ಬಗ್ಗೆ ದಿನಗಳಲ್ಲಿ ಉತ್ತರಿಸುವೆ. ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವರು ಯಾರು ಎಂದು ಸುಧಾಕರ್ ವಿರುದ್ಧ ನಾರಾಯಣಗೌಡ ಕಿಡಿಕಾರಿದರು.

  • ಕೆಎಸ್‍ಎಂಬಿ ಬ್ರಾಂಚ್‍ಗೆ ಜಾಗ ಗುರುತಿಸಿದ ಯುಪಿ ಸರ್ಕಾರ

    ಕೆಎಸ್‍ಎಂಬಿ ಬ್ರಾಂಚ್‍ಗೆ ಜಾಗ ಗುರುತಿಸಿದ ಯುಪಿ ಸರ್ಕಾರ

    ವಾರಣಾಸಿ: ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ರೇಷ್ಮೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸ್ಪಂದಿಸಿದೆ.

    ವಾರಣಾಸಿಯ ಸಾರಂಗ್ ತಲಾಬ್ ಪ್ರದೇಶದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಶಾಖೆ ತೆರೆಯಲು ಯುಪಿ ಸರ್ಕಾರ ಜಾಗ ನೀಡಲು ಒಪ್ಪಿದೆ. ಸಾರಂಗ್ ತಲಾಬ್ ಪ್ರದೇಶದಲ್ಲಿ ಕೆಎಸ್‍ಎಂಬಿ ಶಾಖೆ ತೆರೆಯಲು ಒಪ್ಪಿಗೆ ನೀಡಲಾಗಿದ್ದು, ಕಟ್ಟಡದ ಜಾಗಕ್ಕೆ ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಕೆಎಸ್‍ಎಂಬಿ ಕಚೇರಿ ಹಾಗೂ ಗೋದಾಮಿಗೆ ನೀಡಲು ಉದ್ದೇಶಿತ ಕಟ್ಟಡ ಪರಿಶೀಲನೆ ನಡೆಸಿ, ಶೀಘ್ರವೇ ಯುಪಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡು, ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಇದನ್ನೂ ಓದಿ: ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತೆಗೆಯಿರಿ – ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ