Tag: narayana gowda

  • ನಾನು ಮಂಡ್ಯ ಉಸ್ತುವಾರಿ ತೆಗೆದುಕೊಳ್ಳುವುದಿಲ್ಲ: ನಾರಾಯಣ ಗೌಡ

    ನಾನು ಮಂಡ್ಯ ಉಸ್ತುವಾರಿ ತೆಗೆದುಕೊಳ್ಳುವುದಿಲ್ಲ: ನಾರಾಯಣ ಗೌಡ

    ಮಂಡ್ಯ: ನಾನು ಈಗಾಗಲೇ ಶಿವಮೊಗ್ಗದಲ್ಲಿ (Shivamogga) ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಈಗ ಮಂಡ್ಯ (Mandya) ಉಸ್ತುವಾರಿ ಕೊಟ್ಟರೇ ಒಪ್ಪಿಕೊಳ್ಳಲ್ಲ ಎಂದು ಸಚಿವ ನಾರಾಯಣ ಗೌಡ (Narayana Gowda) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಶಿವಮೊಗ್ಗದಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡ್ತಿದ್ದೇನೆ. ಅಲ್ಲಿ ಅರ್ಧ ಬಿಟ್ಟು, ಇಲ್ಲಿ ಅರ್ಧ ಬಿಟ್ಟು ಕೆಲಸ ಮಾಡುವುದು ಕಷ್ಟ. ಮೂರು ಮೂರು ತಿಂಗಳಿಗೆ ಬದಲಾವಣೆ ಮಾಡಿದ್ರೆ ತೆಗೆದುಕೊಳ್ಳುವುದಕ್ಕೆ ಆಗುತ್ತಾ? ಅಶ್ವಥ್ ನಾರಾಯಣ್, ಅಶೋಕ್ (R Ashok), ಗೋಪಾಲಯ್ಯ (K Gopalaiah) ಮೂವರಲ್ಲಿ ಯಾರಾದ್ರು ಬರಲಿ. ಅದು ಮುಖ್ಯಮಂತ್ರಿಗೆ ಬಿಟ್ಟಂತಹದ್ದು ಎಂದು ಹೇಳಿದರು.

    ಉಸ್ತುವಾರಿ ಪಡೆಯಲು ಯಾರು ಒಪ್ಪುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಶೋಕ್‌, ಅಶ್ವಥ್ ನಾರಾಯಣ್, ಕೆ.ಗೋಪಾಲಯ್ಯ ಭದ್ರಕೋಟೆಯಲ್ಲಿದ್ದಾರೆ. ಅವರು ಚುನಾವಣೆ ಗೆಲ್ಲುವುದಕ್ಕೆ ತೊಂದರೆ ಇಲ್ಲ. ಅವರಲ್ಲಿ ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಕೊಡಲಿ. ನಾವು ಅವರ ಜೊತೆ ಇರ್ತೀನಿ ಎಂದರು. ಇದನ್ನೂ ಓದಿ: ಕಲುಷಿತ ನೀರಿಗೆ ಮೂವರು ಬಲಿ ಪ್ರಕರಣ – ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲು

    ಗೋಪಾಲಯ್ಯಗೆ ಜವಾಬ್ದಾರಿ ಕೊಟ್ಟಾಗ ನಾನು ಅವರ ಜೊತೆ ನಿಂತು ಓಡಾಡಿದ್ದೀನಿ. ಮುಂದೆಯೂ ಉಸ್ತುವಾರಿಯಾದವರಿಗೆ ಕೈ ಜೋಡಿಸ್ತೀನಿ. ನನಗೆ ಶಿವಮೊಗ್ಗ ಉಸ್ತುವಾರಿ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ: ಗೋಪಾಲಯ್ಯ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಷ್ಟ್ರೀಯ ಯುವಜನೋತ್ಸವದ ಲೋಗೋ, ಮಸ್ಕಟ್ ಬಿಡುಗಡೆ ಮಾಡಿದ ಸಿಎಂ

    ರಾಷ್ಟ್ರೀಯ ಯುವಜನೋತ್ಸವದ ಲೋಗೋ, ಮಸ್ಕಟ್ ಬಿಡುಗಡೆ ಮಾಡಿದ ಸಿಎಂ

    ಬೆಂಗಳೂರು: ರಾಷ್ಟ್ರೀಯ ಯುವ ಜನೋತ್ಸವದ (Youth Festival) ಲೋಗೋ, ಮಸ್ಕಟ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ (Narayana Gowda) ಅವರು ಬಿಡುಗಡೆಗೊಳಿಸಿದರು.‌

    ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಲೋಗೋ, ಮಸ್ಕಟ್‌ನ್ನು ಬಿಡುಗಡೆಗೊಳಿಸಲಾಯಿತು. ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ (Anurag Singh Thakur) ಅವರು ವರ್ಚುವಲ್ ಮೂಲಕ ಭಾಗಿಯಾಗಿದ್ದರು.

    ಲೋಗೋ ಬಿಡುಗಡೆ ಬಳಿಕ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದಲ್ಲಿ ಸ್ಟೀರಿಂಗ್ ಕಮಿಟಿ ಸಭೆ ನಡೆಸಲಾಯಿತು. ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಗೊಳಿಸುವ ಸಂಬಂಧಿಸಿದಂತೆ ಉದ್ಘಾಟನೆ, ಸಿದ್ಧತೆ ಸೇರಿದಂತೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ

    ಜನವರಿ 12-16 ರವರೆಗೂ ಹುಬ್ಬಳ್ಳಿ- ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿಯ 20 ಶಾಸಕರಿಗೆ ಟಿಕೆಟ್ ಟೆನ್ಷನ್ – ಹೈಕಮಾಂಡ್ ಕೈ ಸೇರಿದೆ 16 ಜಿಲ್ಲೆಗಳ ಶಾರ್ಟ್ ಲಿಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು: ಕರವೇ ನಾರಾಯಣಗೌಡ

    ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು: ಕರವೇ ನಾರಾಯಣಗೌಡ

    ಬೆಳಗಾವಿ: ಕನ್ನಡ (Kannada) ವಿಷಯದಲ್ಲಿ ಬೆಳಗಾವಿಯ (Belagavi) ರಾಜಕಾರಣಿಗಳು ರಣ ಹೇಡಿಗಳು. ಕನ್ನಡದ ಉಳಿವಿಗಾಗಿ ಕೇವಲ ಕನ್ನಡ ಸಂಘಟನೆಗಳು ಮಾತ್ರ ಹೋರಾಟ ಮಾಡುತ್ತಿವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (Narayana Gowda) ಹರಿಹಾಯ್ದಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಸ್‍ಗಳ ಮೇಲೆ ಮರಾಠಿ ಅಕ್ಷರಗಳಿವೆ. ಆದರೆ ಮಹಾರಾಷ್ಟ್ರದ ಬಸ್‍ಗಳ ಮೇಲೆ ಕನ್ನಡದ ಅಕ್ಷರಗಳಿಲ್ಲ. ಈ ಸಂಬಂಧ ನಿಮ್ಮ ಸಂಘಟನೆ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಬಹುದಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು. ಕನ್ನಡದ ವಿಷಯ, ಕನ್ನಡಿಗರ ಪರವಾಗಿ ಇವರು ಎಂದೂ ಧ್ವನಿ ಎತ್ತಿಲ್ಲ. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡಿದಾಗ ಇಲ್ಲಿನ ರಾಜಕಾರಣಿಗಳ ಮನೆಗೆ ಹೋಗಿ ಬನ್ನಿ ಎಂದರೆ ಒಬ್ಬರೂ ಬರಲಿಲ್ಲ. ಅಂತಹ ರಣಹೇಡಿಗಳಿದ್ದಾರೆ. ಅವರ ವಿರುದ್ಧ ನಾವು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಯುವತಿಯ ರಂಪಾಟ – ತಣ್ಣೀರು ಎರಚಿ ನಶೆ ಇಳಿಸಿದ ಸ್ಥಳೀಯರು

    ಕಲ್ಯಾಣ ಕರ್ನಾಟಕದ ಮತ್ತೊಂದು ಭಾಗದಲ್ಲಿ ಬೆಳ್ಳಿ ಹಬ್ಬ ಆಚರಣೆ ಮಾಡಬೇಕೆಂದು ನಮ್ಮ ಕೇಂದ್ರ ಸಮಿತಿ ನಿರ್ಧಾರ ಮಾಡಿದೆ. ಉತ್ತರ ಕರ್ನಾಟಕ ಎಂದಾಗ ಬೆಳಗಾವಿಯಲ್ಲಿ ಆಯೋಜನೆ ಮಾಡಬೇಕು. ಕಲ್ಯಾಣ ಕರ್ನಾಟಕ ಎಂದಾಗ ಕಲಬುರಗಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ತೀರ್ಮಾನ ಮಾಡಿದ್ದೇವೆ. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಒಮ್ಮತದಿಂದ, ಒಗ್ಗಟ್ಟಿನಿಂದ ಆಚರಣೆ ಮಾಡಿದ್ದೇವೆ. ಅದಕ್ಕಾಗಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

    ಕರ್ನಾಟಕ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರು ಸಭೆ ಮಾಡಿದ್ದಾರೆ. ಇಲ್ಲಿ ಹಾಗೂ ಅಲ್ಲಿ ಇರುವ ಪುಣ್ಯ ಕ್ಷೇತ್ರದಲ್ಲಿ ಅವರು ಅಲ್ಲಿ ಕನ್ನಡ ಹಾಗೂ ಇಲ್ಲಿ ಮರಾಠಿ ಬಳಸಬೇಕು ಎಂದು ಸಭೆಯಲ್ಲಿ ತಿರ್ಮಾನ ಮಾಡಿದ್ದಾರೆ. ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ. ನಾವು ಮರಾಠಿ ಬಳಸಿದರೆ ಸಾಲದು ಅವರು ಅಲ್ಲಿ ಕನ್ನಡ ಬಳಕೆ ಮಾಡಬೇಕು. ಕನ್ನಡ ಪರ ಸಂಘಟನೆಗಳು ಬೆಂಗಳೂರಿಗೆ ಸೀಮಿತ ಆಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಒಂದು ಭಾಷೆಯ ಜನರ ಕಾಟವಾದರೆ ಬೆಂಗಳೂರಿನಲ್ಲಿ ನೂರಾರು ಭಾಷೆಯ ಜನರ ಕಾಟವಿದೆ. ಹಾಗಾಗಿ ನಾವು ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳಿಗೆ ಬೆಳಗಾವಿಯಲ್ಲಿ ಸರ್ಕಾರ ಅನುದಾನ ನೀಡದ ವಿಚಾರಕ್ಕೆ ಮಹಾರಾಷ್ಟ್ರ ಸರ್ಕಾರ ಎಂಇಎಸ್‍ಗೆ (MES) ಕೋಟ್ಯಂತರ ರೂಪಾಯಿ ಅನುದಾನ ನೀಡುವಾಗ ಇಲ್ಲಿ ನಮ್ಮವರಿಗೆ ಅನುದಾನ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!

    ಬೆಳಗಾವಿಯಲ್ಲಿ ರಾಜ್ಯೋತ್ಸವ ಸಮಯದಲ್ಲಿ ನಿರ್ಬಂಧ ಹೇರಿರುವ ವಿಚಾರಕ್ಕೆ, ಅದಕ್ಕೆ ಸ್ಥಳೀಯ ನಾಯಕರು ಉತ್ತರ ನೀಡಬೇಕು. ಕನ್ನಡಿಗರ ಸಂಭ್ರಮಕ್ಕೆ ಯಾರು ಅಡ್ಡಿ ಆಗಬಾರದು. ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಈ ವಿಚಾರವಾಗಿ ಗೃಹ ಸಚಿವರ ಬಳಿ ಚರ್ಚೆ ಮಾಡುತ್ತೇವೆ. ನಮ್ಮ ರಾಜಕಾರಣಿಗಳು ರಣಹೇಡಿಗಳು, ಎಲ್ಲವನ್ನು ನಾವೇ ಒತ್ತಾಯ ಮಾಡಬೇಕು. ಕಾರ್ಯಕ್ರಮಕ್ಕೆ ಬರಲು ಮನೆಗೆ ಹೋಗಿ ಆಹ್ವಾನ ನೀಡಿದರು ಅವರು ಬರುವುದಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಸದೆ ಸುಮಲತಾ ಬಿಜೆಪಿಗೆ ಬಂದ್ರೆ ಸ್ವಾಗತ ಮಾಡ್ತೀನಿ: ನಾರಾಯಣಗೌಡ

    ಸಂಸದೆ ಸುಮಲತಾ ಬಿಜೆಪಿಗೆ ಬಂದ್ರೆ ಸ್ವಾಗತ ಮಾಡ್ತೀನಿ: ನಾರಾಯಣಗೌಡ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇನೆ ಅಂತ ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಮಲತಾ ಅವರು ಪಕ್ಷಕ್ಕೆ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ. ಸುಮಲತಾ ಅವರು ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಈಗ ಬರುವುದಕ್ಕೆ ಆಗುತ್ತಿಲ್ಲ ಅಂತ ಹೇಳಿದ್ದಾರೆ. ನೋಡೋಣ ಮುಂದೆ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂದ ತಿಳಿಸಿದರು. ಇದನ್ನೂ ಓದಿ: ಶೀಘ್ರವೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ನಿಲ್ಲಿಸಲಾಗುತ್ತದೆ: ಅಜಿತ್ ಪವಾರ್

    sumalatha ambarish

    ಇದೇ ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ 3ನೇ ಅಭ್ಯರ್ಥಿಯೂ ಗೆಲ್ಲಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಹಾಕಿದೆ. ಅವರು ಗೆಲ್ಲುವುದಿಲ್ಲ. ನಮಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳು ಇವೆ. ಎರಡನೇ ಪ್ರಾಶಸ್ತ್ಯದ ಮತದಲ್ಲಿ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

    ಮಂಡ್ಯ ಭಾಗದಲ್ಲಿ ಮತ್ತಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು 17 ಜನ ಈಗ ಬಂದಿದ್ದೇವೆ. ಅದು ಮುಂದೆ ಪ್ಲಸ್ ಪ್ಲಸ್ ಆಗುತ್ತದೆ. ಯಾರು, ಯಾರು ಬರುತ್ತಾರೆ ಅಂತ ಈಗ ಹೇಳುವುದಿಲ್ಲ. ಈಗ ಹೇಳಿದರೆ ಅವರನ್ನು ಕೂಡಿ ಹಾಕುತ್ತಾರೆ. ಈಗಾಗಲೇ 4-5 ಜನರ ಹೆಸರು ನೀವೇ ಹಾಕಿದ್ದೀರಾ. ಇನ್ನು ಯಾರು ಯಾರು ಬರ್ತಾರೆ ಅಂತ ಮುಂದೆ ಗೊತ್ತಾಗುತ್ತದೆ ಅಂದರು. ಇದನ್ನೂ ಓದಿ: ಸತೇಂದ್ರ ಜೈನ್ ಬಳಿಕ‌ ಮನೀಷ್ ಸಿಸೋಡಿಯ ಬಂಧನಕ್ಕೆ ತಯಾರಿ : ಮೋದಿ ವಿರುದ್ಧ ಕೇಜ್ರಿವಾಲ್‌ ಕಿಡಿ

    ಮಂಡ್ಯದಲ್ಲಿ ಕೇಂದ್ರ ನಾಯಕರ ಸಮಾವೇಶ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜಿಲ್ಲೆಯಲ್ಲಿ ಅನೇಕರು ಬಿಜೆಪಿ ಸೇರ್ಪಡೆಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿ ಸೇರಿಸಿಕೊಳ್ಳುತ್ತೇವೆ. ಸದ್ಯ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಮಾವೇಶ ಈಗ ಮಾಡುವುದಿಲ್ಲ ಅಂತ ತಿಳಿಸಿದರು. ಇನ್ನು ಮಂಡ್ಯದಲ್ಲಿ ಈ ಬಾರಿ ನಾವು 4 ಸ್ಥಾನ ಗೆಲ್ಲುತ್ತೇವೆ. ಹೇಗೆ ಗೆಲ್ಲುತ್ತೇವೆ ಅಂತ ನಾನು ಹೇಳುವುದಿಲ್ಲ. ಆದರೆ 4 ಸ್ಥಾನ ಬಿಜೆಪಿ ಗೆಲ್ಲುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

  • ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ನಾರಾಯಣ ಗೌಡರಿಗೆ ಕೈ ಪಾಲಿಕೆ ಸದಸ್ಯರಿಂದ ಫುಲ್ ಕ್ಲಾಸ್

    ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ನಾರಾಯಣ ಗೌಡರಿಗೆ ಕೈ ಪಾಲಿಕೆ ಸದಸ್ಯರಿಂದ ಫುಲ್ ಕ್ಲಾಸ್

    -ಬಂದ ಪುಟ್ಟ ಹೋದ ಪುಟ್ಟ ಎಂಬಂತಾದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
    -ಸಚಿವರ ಎದುರೇ ಪಾಲಿಕೆ ಸದಸ್ಯರ ಜಟಾಪಟಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ, ಉಂಟಾದ ಮಳೆಹಾನಿ ಸಮೀಕ್ಷೆ ನಡೆಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರಿಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

    ಶಿವಮೊಗ್ಗಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾಗಿತ್ತು. ಕಳೆದ 4 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಶಿವಮೊಗ್ಗ ತತ್ತರಿಸಿ ಹೋಗಿತ್ತು. ಅನೇಕ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪಡಬಾರದ ಪಾಡು ಪಡುವಂತಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ, ಈ ಕಡೆ ಮುಖ ಕೂಡಾ ಹಾಕಿರಲಿಲ್ಲ. ಇದರಿಂದ ಬೇಸತ್ತ ಜನರು, ಹಿಡಿ ಶಾಪ ಹಾಕಿದ್ದರು. ಅಂದಹಾಗೆ, ಮಳೆ ಮುಗಿದು ನಾಲ್ಕು ದಿನಗಳು ಕಳೆದ ಮೇಲೆ ಬಂದ ಸಚಿವರಿಗೆ ಇಂದು ಪಾಲಿಕೆಯ ವಿಪಕ್ಷದವರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆ ಹಾನಿ ವೀಕ್ಷಿಸಲು ಬಂದ ಸಚಿವರು ನೈಜ ಸಮಸ್ಯೆ ಅರಿಯದೆ ಕಾಟಾಚಾರಕ್ಕೆ ವೀಕ್ಷಿಸಲು ಬಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಕಾರ್ಪೋರೇಟರ್ ಯಮುನಾ ರಂಗೇಗೌಡ ಹಾಗೂ ಮೇಯರ್ ಬೀದಿ ಕಾಳಗಕ್ಕೆ ಇಳಿದಿದ್ದರಿಂದ ಪೊಲೀಸರು ಮಧ್ಯೆ ಪ್ರವೇಶಿಸುವ ಸಂದರ್ಭ ಎದುರಾಗಿದ್ದು, ವಿಪರ್ಯಾಸವಾಗಿತ್ತು. ಯಾವುದೇ ಪೂರ್ವ ಮಾಹಿತಿ ಇಲ್ಲದೇ, ಫೀಲ್ಡ್‍ಗೆ ಇಳಿದ ನಾರಾಯಣಗೌಡರು ಮಾತ್ರ ಕೆಲವೊಂದು ಕಡೆಗಳಲ್ಲಿ ಮೂಕ ಪ್ರೇಕ್ಷಕರಾಗುವಂತಾಗಿದ್ದು, ಸೋಜಿಗವಾಗಿತ್ತು. ಇದನ್ನೂ ಓದಿ: ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

    ಒಂದು ವಾರ ಸುರಿದ ಅಕಾಲಿಕ ಮಳೆಯಿಂದಾಗಿ ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ವ್ಯಾಪಕ ಹಾನಿ ಉಂಟಾಗಿದೆ. ಇದೇ ರೀತಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಳಿಗೂ ಹಾನಿ ಉಂಟಾಗಿದೆ. ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 2139 ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ. 24 ಶಾಲೆಗಳು ಹಾಗೂ 17 ಅಂಗನವಾಡಿ ಕಟ್ಟಡಗಳಿಗೆ ಹಾನಿಯುಂಟಾಗಿದೆ. ಬೆಳೆ ಹಾನಿಗೆ ಪ್ರಸ್ತುತ ಹೆಕ್ಟೇರ್‍ಗೆ 13 ರಿಂದ 15 ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ. ಇದನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಾರಾಯಣ ಗೌಡರು ಹೇಳಿದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

  • ಬಿಜೆಪಿ ಸೇರಿ ಸುಖವಾಗಿದ್ದೇವೆ: ನಾರಾಯಣ ಗೌಡ

    ಬಿಜೆಪಿ ಸೇರಿ ಸುಖವಾಗಿದ್ದೇವೆ: ನಾರಾಯಣ ಗೌಡ

    ಮಂಡ್ಯ: ನಾನು ಹಾಗೂ ಸಚಿವ ಗೋಪಾಲಯ್ಯ ಒಂದೇ ಪಕ್ಷದಲ್ಲಿ ಇದ್ದೆವು. ನಮಗೆ ಕೊಟ್ಟ ಕಾಟ ಭಗವಂತನಿಗೆ ಮಾತ್ರ ಗೊತ್ತು. ಇದರಿಂದ ನಾವು, ಅವರು ಬಿಜೆಪಿ ಸೇರಿ ಸುಖವಾಗಿದ್ದೇವೆ ಎಂದು ಜೆಡಿಎಸ್ ವಿರುದ್ಧ ಸಚಿವ ನಾರಾಯಣ್ ಗೌಡ ಗುಡುಗಿದ್ದಾರೆ.

    ಮದ್ದೂರು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಸೇವೆ ಮಾಡುವ ಶಕ್ತಿಯನ್ನ ಪಕ್ಷ ನೀಡಿದೆ. ಬಿಜೆಪಿ ಸೇರಿದ ಬಳಿಕ ನಮ್ಮನ್ನ ಸಚಿವರನ್ನಾಗಿ ಬಿಜೆಪಿ ಮಾಡಿದೆ. ಈ ಮೂಲಕ ರಾಜ್ಯವನ್ನ ಸುತ್ತಾಡಿ ಜನರ ಸೇವೆ ಮಾಡಲು ಅವಕಾಶ ನೀಡಿದೆ. ಅದೇ ರೀತಿ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನವನ್ನ ಕೊಟ್ಟಿದೆ ಎಂದರು. ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಪ್ರೀತಂ ಗೌಡ Vs ಎಚ್‍.ಡಿ.ರೇವಣ್ಣ ಜಟಾಪಟಿ – ರಾತ್ರೋ ರಾತ್ರಿ ತಾಲೂಕು ಕಚೇರಿ ಡೆಮಾಲಿಶ್

    ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಮದ್ದೂರಿನಲ್ಲಿ ಎಸ್.ಪಿ.ಸ್ವಾಮಿಯವರಿಗೆ ನೀವು ಅಶಿರ್ವಾದ ಮಾಡಿ. ಅವರು ಜೆ.ಡಿ.ಎಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಅವರ ಗಂಡಸ್ತನಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ನಾಲ್ಕೈದು ಸ್ಥಾನವನ್ನ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭಾಗಿಯಾಗಿದ್ದರು. ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ ಕಾರ್ಯಕ್ರಮ ಕೂಡ ಇತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು.

  • ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 – ಪ್ರಚಾರದ ಏರ್ ಕ್ರಾಫ್ಟ್‌ಗೆ ನಾರಾಯಣಗೌಡ ಚಾಲನೆ

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 – ಪ್ರಚಾರದ ಏರ್ ಕ್ರಾಫ್ಟ್‌ಗೆ ನಾರಾಯಣಗೌಡ ಚಾಲನೆ

    ಬೆಂಗಳೂರು: ಕ್ರೀಡಾಪಟುಗಳಿಗೆ ಪ್ಯಾರಾ ಸೈಲಿಂಗ್ ಹಾಗೂ ಕ್ರೀಡಾಕೂಟದ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದರು.

    ಸಚಿವರು ಸಸ್ನಾ 172 ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ಚಾಲನೆ ನೀಡಿದರು. ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗಾಗಿ ಏರ್ಪಡಿಸಿರುವ ಪ್ಯಾರಾ ಸೈಲಿಂಗ್‍ಗೆ ನಾರಾಯಣಗೌಡ ಚಾಲನೆ ನೀಡಿದ್ದು, ಇಂದಿನಿಂದ ಕ್ರೀಡಾಪಟುಗಳಿಗೆ ಉಚಿತವಾಗಿ ಪ್ಯಾರಾ ಸೈಲಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

     

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪ್ರಚಾರಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಕೈಜೋಡಿಸಿದೆ. ಸರ್ಕಾರಿ ವೈಮಾನಿಕ ಶಾಲೆಯ ಎರಡು ವಿಮಾನಗಳ ಮೂಲಕ ಪ್ರಚಾರ ಆರಂಭಿಸಿದೆ. ಈ ಎರಡು ವಿಮಾನ ಪ್ರತಿದಿನ ಸಿಟಿರೌಂಡ್ಸ್ ಮಾಡಲಿವೆ. ಜೈನ್ ವಿವಿ ಸೇರಿದಂತೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಪುಷ್ಪಾನಮನ ಸಲ್ಲಿಸಲಾಗುತ್ತದೆ. ಜೊತೆಗೆ ಸಮಾರೋಪ ಸಮಾರಂಭದ ದಿನ ವಿಮಾನದ ಮೂಲಕ ಪುಷ್ಪ ನಮನ ಸಲ್ಲಿಸಲು ಕೂಡ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರವಾಗಿ ಟ್ವಿಟ್ಟರ್‌ ತಲೆಹಾಕಿದ್ರೆ ಕ್ರಮಕೈಗೊಳ್ಳಿ: ಶಶಿ ತರೂರ್‌

  • ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೆದ್ದಾರಿ ಅಭಿವೃದ್ಧಿಗೆ ಭಾರತ್ ಮಾಲಾ 2ರಲ್ಲಿ ಪರಿಗಣನೆ: ಗಡ್ಕರಿ ಭರವಸೆ

    ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೆದ್ದಾರಿ ಅಭಿವೃದ್ಧಿಗೆ ಭಾರತ್ ಮಾಲಾ 2ರಲ್ಲಿ ಪರಿಗಣನೆ: ಗಡ್ಕರಿ ಭರವಸೆ

    ನವದೆಹಲಿ: ಶ್ರೀರಂಗಪಟ್ಟಣದಿಂದ ಚನ್ನರಾಯಪಟ್ಟಣ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

    ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಚಿವ ಡಾ. ನಾರಾಯಣಗೌಡ, ಶ್ರೀರಂಗಪಟ್ಟಣ- ಕೆ.ಆರ್.ಪೇಟೆ- ಚನ್ನರಾಯಪಟ್ಟಣ- ಅರಸೀಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಮನವಿ ಮಾಡಿದರು. ಸಚಿವ ಡಾ. ನಾರಾಯಣಗೌಡ ಮನವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಇದನ್ನೂ ಓದಿ: ಮೌಖಿಕವಾಗಿ ಕಾಮಗಾರಿಗೆ ಆದೇಶ ನೀಡಿದರೆ ಅಧಿಕಾರಿಗಳು, ಇಂಜಿನಿಯರ್‌ ಹೊಣೆ: ಬೊಮ್ಮಾಯಿ

    ಶ್ರೀರಂಗಪಟ್ಟಣ- ಕೆ.ಆರ್.ಪೇಟೆ- ಚನ್ನರಾಯಪಟ್ಟಣ- ಅರಸೀಕೆರೆ ರಸ್ತೆ ಶಿವಮೊಗ್ಗ, ಮೈಸೂರು ನಗರಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದ್ದೇನೆ. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಭಾರತ್ ಮಾಲಾ -2 ಯೋಜನೆಯಡಿ ಇದನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಮಂಡ್ಯ, ಹಾಸನ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕದ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ಅವರ ʻಪರ್ವʼ ಕಾದಂಬರಿ ಇಂಗ್ಲಿಷ್ ಅನುವಾದಿತ ಪ್ರತಿಯನ್ನು ಸಚಿವ ನಾರಾಯಣಗೌಡ ಉಡುಗೊರೆಯಾಗಿ ನೀಡಿದರು. ಈ ವೇಳೆ ಕುತೂಹಲಭರಿತರಾಗಿ ಕಾದಂಬರಿ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸಚಿವರು, ಇದನ್ನು ಖಂಡಿತವಾಗಿ ಓದುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    Nitin Gadkari

    ಈ ವೇಳೆ ಸಚಿವ ನಾರಾಯಣಗೌಡ ಅವರ ಆಪ್ತ ಕಾರ್ಯದರ್ಶಿ ಹೆಚ್.ಜಿ.ಪ್ರಭಾಕರ್ ಉಪಸ್ಥಿತರಿದ್ದರು.

  • ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ರಾಜ್ಯ ಸರ್ಕಾರದಿಂದ ಸಕಲ ಸಿದ್ಧತೆ: ನಾರಾಯಣ ಗೌಡ

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ರಾಜ್ಯ ಸರ್ಕಾರದಿಂದ ಸಕಲ ಸಿದ್ಧತೆ: ನಾರಾಯಣ ಗೌಡ

    ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಎರಡನೇ ಆವೃತ್ತಿ ಯಶಸ್ವಿ ಆಯೋಜನೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.

    ಖೇಲೋ ಇಂಡಿಯಾ ಯೂನಿವರ್ಸಿಟಿ 2021ರ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಸಚಿವ ಡಾ. ನಾರಾಯಣಗೌಡ ಇಂದು ವಿಧಾನಸೌಧದಲ್ಲಿ ಕೇಂದ್ರ ಯುವಜನ ಹಾಗೂ ಕ್ರೀಡಾ ಇಲಾಖೆ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಸೇರಿದಂತೆ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದರು. ಇದನ್ನೂ ಓದಿ: ಕೇಸರಿ ಕನ್ನಡಕದೊಳಗಿಂದ ಬೊಮ್ಮಾಯಿಗೆ ಜನರ ಕಷ್ಟ ಕಾಣದಿರಬಹುದು, ನಮಗೆ ಕಾಣುತ್ತಿದೆ: ಕಾಂಗ್ರೆಸ್

    ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಗೌಡ, ಏಪ್ರಿಲ್ 24 ರಿಂದ ಮೇ 3 ರವರೆಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ರ ಕ್ರೀಡಾಕೂಟ ನಡೆಯಲಿದ್ದು, ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸರ್ಕಾರದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಸುಮಾರು 4,500 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು

    ಈ ವೇಳೆ ಕೇಂದ್ರ ಕ್ರೀಡಾ ಇಲಾಖೆ ಕಾರ್ಯದರ್ಶಿ ಸುಜಾತಾ ಚತುರ್ತೇದಿ ಮಾತನಾಡಿ, ಶಾಲೆ ಮತ್ತು ಕಾಲೇಜಿನಲ್ಲಿ ಕ್ರೀಡಾ ಸ್ಪೂರ್ತಿ ಮೂಡಿಸಲು ಖೇಲೋ ಇಂಡಿಯಾ ನಡೆಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 35 ಕೋಟಿ ರೂ. ಅನುದಾನ ನೀಡಿದೆ. ದೇಶದ 190 ಯೂನಿವರ್ಸಿಟಿಗಳ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಲ್ಲಗಂಬವನ್ನು ಸೇರಿಸಲಾಗಿದ್ದು, ಯೋಗ, ಕರಾಟೆ ಸೇರಿದಂತೆ 20 ಕ್ರೀಡೆಗಳ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

  • ಕರಣ್ ನಾಯರ್, ಪ್ರಶಾಂತ್ ಕುಮಾರ್ ರೈ, ಅಶ್ವಲ್ ರೈ ಸೇರಿ 15 ಮಂದಿಗೆ ಏಕಲವ್ಯ ಪ್ರಶಸ್ತಿ

    ಕರಣ್ ನಾಯರ್, ಪ್ರಶಾಂತ್ ಕುಮಾರ್ ರೈ, ಅಶ್ವಲ್ ರೈ ಸೇರಿ 15 ಮಂದಿಗೆ ಏಕಲವ್ಯ ಪ್ರಶಸ್ತಿ

    ಬೆಂಗಳೂರು: ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ  ಘೋಷಿಸಿದ್ದಾರೆ.

    ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ನಾರಾಯಣಗೌಡ, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾ ಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಇದನ್ನೂ ಓದಿ: ಆರ್‌ಸಿಬಿ ತಂಡದಿಂದ ಹೊರ ನಡೆದ ಕನ್ನಡಿಗ ಲುವ್ನಿತ್ ಸಿಸೋಡಿಯಾ

    ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿ ಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್, ಅಲಿಸ್ಸಾ ಹೀಲಿ ದಂಪತಿ

    ಏಕಲವ್ಯ ಪ್ರಶಸ್ತಿ ಪುರಸ್ಕೃತರು
    ಜೀವನ್ ಕೆ.ಎಸ್ (ಅಥ್ಲೆಟಿಕ್ಸ್), ನಿತಿನ್(ನೆಟ್‌ಬಾಲ್), ಅಶ್ವಿನಿ ಭಟ್ (ಬ್ಯಾಡ್ಮಿಂಟನ್), ಜಿ. ತರಣ್ ಕಷ್ಣಪ್ರಸಾದ್ (ರೋಯಿಂಗ್), ಲೋಪಮುದ್ರಾತಿಮ್ಮಯ್ಯ (ಬಾಸ್ಕೆಟ್‍ಬಾಲ್), ಲಿಖಿತ್ ಎಸ್.ಪಿ (ಈಜು), ಕರಣ್ ನಾಯರ್ (ಕ್ರಿಕೆಟ್), ಅನಘ್ರ್ಯಮಂಜುನಾಥ್ (ಟೇಬಲ್ ಟೆನ್ನಿಸ್), ದಾನಮ್ಮಚಿಚಖಂಡಿ (ಸೈಕ್ಲಿಂಗ್), ಅಶ್ವಲ್ ರೈ (ವಾಲಿಬಾಲ್), ವಸುಂಧರಾಎಂ.ಎನ್. (ಜುಡೋ), ಪ್ರಧಾನ್ ಸೋಮಣ್ಣ (ಹಾಕಿ), ಪ್ರಶಾಂತ್ ಕುಮಾರ್ ರೈ (ಕಬಡ್ಡಿ), ರಾಧಾ .ವಿ (ಪ್ಯಾರಾ ಅಥ್ಲೆಟಿಕ್ಸ್), ಮುನೀರ್ ಬಾಷಾ (ಖೋ-ಖೋ).

    ಜೀವಮಾನ ಸಾಧನಾ ಪ್ರಶಸ್ತಿ
    ಗಾವಂಕರ್ ಜಿ.ವಿ (ಅಥ್ಲೆಟಿಕ್ಸ್), ಕ್ಯಾಪ್ಟನ್ ದಿಲೀಪ್ ಕುಮಾರ್ (ಕಯಾಕಿಂಗ್ & ಕನೋಯಿಂಗ್).

    ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
    ಪೂಜಾಗಾಲಿ (ಆಟ್ಯಾ-ಪಾಟ್ಯಾ), ಬಿ.ಎನ್. ಕಿರಣ್ ಕುಮಾರ್ (ಬಾಲ್ ಬ್ಯಾಡ್ಮಿಂಟನ್), ಗೋಪಾಲನಾಯ್ಕ್ (ಕಂಬಳ)‌, ದೀಕ್ಷಾಕೆ (ಖೋ-ಖೋ), ಶಿವಯೋಗಿಬಸಪ್ಪಬಾಗೇವಾಡಿ (ಗುಂಡುಕಲ್ಲು ಎತ್ತುವುದು), ಲಕ್ಷ್ಮೀಬಿರೆಡೆಕರ್ (ಕುಸ್ತಿ), ಪಿ.ಗೋಪಾಲಕೃಷ್ಣ (ಯೋಗ ರಾಘವೇಂದ್ರ ಎಸ್ ಹೊಂಡದಕೇರಿ (ಪವರ್ ಲಿಫ್ಟಿಂಗ್), ಸಿದ್ದಪ್ಪ ಪಾಂಡಪ್ಪ ಹೊಸಮನಿ (ಸಂಗ್ರಾಣಿಕಲ್ಲು ಎತ್ತುವುದು), ಸೂರಜ್ ಎಸ್ ಅಣ್ಣಿಕೇರಿ (ಕುಸ್ತಿ), ಶಶಾಂಕ್ಬಿ.ಎಂ (ಪ್ಯಾರಾ ಈಜು), ಡಿ.ನಾಗಾರಾಜು (ಯೋಗ), ಶ್ರೀವರ್ಷಿಣಿ (ಜಿಮ್ನಾಸ್ಟಿಕ್), ಅವಿನಾಶ್ವಿನಾಯ್ಕ (ಜುಡೋ). ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್

    ಕ್ರೀಡಾ ಪೋಷಕ ಪ್ರಶಸ್ತಿ
    ಶ್ರೀಧರ್ಮಸ್ಥಳಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್, ಉಜಿರೆ-ದಕ್ಷಿಣಕನ್ನಡ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಬೆಂಗಳೂರು ನಗರ ಜಿಲ್ಲೆ, ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು ನಗರ ಜಿಲ್ಲೆ, ಹೂಡಿ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು ನಗರ ಜಿಲ್ಲೆ, ಶ್ರೀ ಬಾಲಮಾರುತಿ ಸಂಸ್ಥೆ ಧಾರವಾಡ, ಎಮಿನೆಂಟ್ ಶೂಟಿಂಗ್ ಹಬ್ ಬೆಂಗಳೂರು ನಗರ ಜಿಲ್ಲೆ, ಬಾಲಾಂಜನೇಯ ಜಿಮ್ನಾಸಿಯಂ (ರಿ.) ಮಂಗಳೂರು, ಬಸವನಗುಡಿ ಅಕ್ವಾಟಿಕ್ ಸೆಂಟರ್ ಬೆಂಗಳೂರು ನಗರ ಜಿಲ್ಲೆ, ದ್ರಾವಿಡ್ಪಡುಕೋಣೆಅಕಾಡೆಮಿ ಬೆಂಗಳೂರು ನಗರ ಜಿಲ್ಲೆ, ಪಿಪಲ್ ಎಜುಕೇಷನಲ್ ಟ್ರಷ್ಟ್ ಮಂಡ್ಯ.

    ಏಕಲವ್ಯ ಪ್ರಶಸ್ತಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ 1992ರಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ, 2 ಲಕ್ಷ ನಗದು ಬಹುಮಾನ.

    ಜೀವಮಾನ ಸಾಧನೆ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ನಗದು ಬಹುಮಾನ.

    ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ 2014ರಿಂದ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ರೂ.ನಗದು ಪುರಸ್ಕಾರ.

    ಕ್ರೀಡಾ ಪೋಷಕ ಪ್ರಶಸ್ತಿ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪ್ರವರ್ತಕರನ್ನು ಗುರುತಿಸಿ 2017-18ರಿಂದ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು 5 ಲಕ್ಷ ನಗದು ಪುರಸ್ಕಾರ.