Tag: narayana gowda

  • ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ

    ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ

    ಬೆಂಗಳೂರು: ಇನ್ಮುಂದೆ ಕಮಲ್ ಹಾಸನ್‌ಗೆ ಕರ್ನಾಟಕಕ್ಕೆ ಪ್ರವೇಶವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ (Narayana Gowda) ಹೇಳಿದ್ದಾರೆ.

    `ಥಗ್‌ಲೈಫ್’ (Thug Life) ಸಿನಿಮಾ ರಿಲೀಸ್ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಮತ್ತು ನ್ಯಾಯಾಧೀಶರು ಕಮಲ್ ಹಾಸನ್‌ಗೆ ಸರಿಯಾದ ಪಾಠ ಕಲಿಸಿದ್ದಾರೆ. ನ್ಯಾಯಾಧೀಶರು ಕನ್ನಡಿಗರ ಭಾವನೆ, ಕನ್ನಡ ಜನರ ಕಳಕಳಿಯನ್ನ ಅರ್ಥ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ತೀರ್ಪು ಕೂಡ ಭಾಷಾ ವಿರೋಧಿಗಳಿಗೆ ತಕ್ಕ ಪಾಠ ಆಗಲಿದೆ ಎಂದರು.ಇದನ್ನೂ ಓದಿ: ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ

    5ನೇ ತಾರೀಖಿನಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮಾತ್ರ ಅಲ್ಲ, ಇನ್ಮುಂದೆ ಕಮಲ್ ಹಾಸನ್ ಯಾವುದೇ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದಿಲ್ಲ. ಆಗಲು ನಾವು ಬಿಡುವುದಿಲ್ಲ. ಕ್ಷಮೆ ಕೇಳದೇ, ದುರಹಂಕಾರ ಮೆರೆದಿದ್ದಾರೆ. ಇನ್ನೂ ಕಮಲ್ ಹಾಸನ್ ಯಾವತ್ತೂ ಕರ್ನಾಟಕಕ್ಕೆ ಬರಲ್ಲ ಹಾಗೂ ಒಂದು ವೇಳೆ ಬಂದರೆ ನಾವು ತಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ? ನೆಲ, ಭಾಷೆಯ ಜೊತೆ ಜನರ ಭಾವನೆ ಇರುತ್ತದೆ. ಜನರ ಭಾವನೆಗೆ ಯಾರೂ ಧಕ್ಕೆ ತರಬಾರದು. 350 ಕೋಟಿ ರೂ. ಸಿನಿಮಾಗೆ ಹಾಕಿದ್ದೀರಿ ಎನ್ನುತ್ತೀರಿ. ಭಾವನೆಗೆ ಧಕ್ಕೆ ಮಾಡಿ ಇಲ್ಲಿ ಸಂಪಾದನೆ ಮಾಡಬೇಕಾ? ಎಲ್ಲವೂ ಸರಾಗವಾಗಿ ಆಗಬೇಕು ಅಂದರೆ ಕ್ಷಮೆಯನ್ನು ಕೋರಿ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಭಾವನೆ ಧಕ್ಕೆ ಆಗಬಾರದು. ಕೋಟ್ಯಂತರ ರೂ. ಹಾಕಿದ್ದೀರಿ. ಕರ್ನಾಟಕದಲ್ಲಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಕರ್ನಾಟಕವನ್ನು ಬಿಟ್ಟು ಬಿಡಿ ಎಂದರು.

    ಚಿತ್ರ ಮಂದಿರಕ್ಕೆ ಭದ್ರತೆ ಬೇಕಾ? ಬೇಡ್ವಾ ಎಂದು ಆದೇಶ ಮಾಡುವ ಮೊದಲು ಕ್ಷಮೆ ಕೇಳಲಿ. ಒಂದು ವೇಳೆ ಇತಿಹಾಸಕಾರ ದಾಖಲೆ ಸಮೇತ ಹೇಳಿದರೆ ಚರ್ಚೆ ವಿಷಯ ಆಗುತ್ತಿತ್ತು. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಡ್ಜ್ ಖಡಕ್ ಆಗಿ ಸೂಚಿಸಿದರು.

    ಏನಿದು ವಿವಾದ?
    ಮೇ 27ರಂದು `ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ಕುರಿತು ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಅವರು, ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಹೇಳಿದ್ದರು.

    ಅದಾದ ಬಳಿಕ ಮತ್ತೆ ಮಾತನಾಡಿದ್ದ ಕಮಲ್ ಹಾಸನ್, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.ಇದನ್ನೂ ಓದಿ: ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ

  • ನಮ್ಮ ವರಿಷ್ಠರು ಸಂಸದೆ ಸುಮಲತಾರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ: ವಿಜಯೇಂದ್ರ

    ನಮ್ಮ ವರಿಷ್ಠರು ಸಂಸದೆ ಸುಮಲತಾರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ: ವಿಜಯೇಂದ್ರ

    – ಸುಮಲತಾರಿಗೆ ಟಿಕೆಟ್ ಮಿಸ್ ಆದ ಬಗ್ಗೆ ನಾನೇನು ಮಾತಾಡಲ್ಲ ಎಂದ ನಾರಾಯಣಗೌಡ

    ಬೆಂಗಳೂರು: ನಮ್ಮ ವರಿಷ್ಠರು ಸಂಸದೆ ಸುಮಲತಾ (Sumalatha) ಅವರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ತಿಳಿಸಿದರು.

    ಮಂಡ್ಯದಲ್ಲಿ (Mandya) ಜೆಡಿಎಸ್‌ಗೆ ಬೆಂಬಲಿಸುವ ವಿಚಾರವಾಗಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ನಡೆದ ಸಭೆಗೂ ಮುನ್ನ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಲ್ಲಿ ಎದುರಿಸಿ ಎಲ್ಲ ಕ್ಷೇತ್ರ ಗೆಲ್ಲಲು ಹೊರಟಿದ್ದೇವೆ. ನಮ್ಮ ನಾರಾಯಣಗೌಡರು ಬಿಜೆಪಿಗೆ ಬಂದು ಸಚಿವರಾಗಿ ಕೆಲಸ ಮಾಡಿದ್ದಾರೆ. ನಮ್ಮೆಲ್ಲ ಮುಖಂಡರೂ ಜತೆಗೆ ಸೇರಿ ಸಭೆ ಮಾಡಿದ್ದೇವೆ. ಮಂಡ್ಯ ಗೆಲ್ಲಬೇಕು, ಮೋದಿ ಕೈಬಲಪಡಿಸಬೇಕು ಅನ್ನೋದು ನಮ್ಮ ಗುರಿ. ನಾರಾಯಣ ಗೌಡರಾದಿಯಾಗಿ ಎಲ್ಲರೂ ಒಗ್ಗಟ್ಟಾಗಿ ಹೋಗುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭಾವಚಿತ್ರ

    ನಮ್ಮ ವರಿಷ್ಠರು ಸಂಸದೆ ಸುಮಲತಾ ಅವರ ಮೇಲೆ ಅಪಾರ ಗೌರವ ಇಟ್ಕೊಂಡಿದ್ದಾರೆ. ನಾನು ಮೈಸೂರು, ಮಂಡ್ಯ ಪ್ರವಾಸ ಬಳಿಕ ಸುಮಲತಾ ಅವರ ಭೇಟಿ ಮಾಡ್ತೇನೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ತೇವೆ ಎಂದರು. ಇದೇ ವೇಳೆ, ನಾರಾಯಣ ಗೌಡರು ಪಕ್ಷ ಬಿಡಲ್ಲ. ಅವರು ಬಿಜೆಪಿಯಲ್ಲೇ ಇರ್ತಾರೆ ಎಂದು ಸ್ಪಷ್ಟಪಡಿಸಿದರು.

    ಮಾಜಿ ಸಚಿವ ನಾರಾಯಣಗೌಡ ಮಾತನಾಡಿ, ನನ್ನನ್ನು ಕಾಂಗ್ರೆಸ್‌ನವರು ಕರೆಯುತ್ತಿದ್ದಾರೆ. ಆದರೆ ನಾನು ಪಕ್ಷಕ್ಕೆ ಬರ್ತೇನೆ ಅಂತ ಹೇಳಿಲ್ಲ. ಕಾಂಗ್ರೆಸ್‌ನವರ ಬಳಿ ಚಿಕ್ಕಪುಟ್ಟ ಸಮಸ್ಯೆ ಇದ್ದಾಗ ಹೋಗಲೇಬೇಕಾಗುತ್ತದೆ. ಚೆಲುವರಾಯಸ್ವಾಮಿ ಅವರೂ ಪಕ್ಷಕ್ಕೆ ಕರೆಯುತ್ತಿದ್ದಾರೆ ಎಂದರು. ಅಲ್ಲದೇ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ಇನ್ನೂ ನಾವು ತೀರ್ಮಾನ ಮಾಡಿಲ್ಲ, ಯೋಚನೆ ಮಾಡಿಲ್ಲ. ಜೆಡಿಎಸ್ ಜತೆ ಹೊಂದಿಕೊಂಡು ಹೋಗಲು ಆಗುತ್ತಾ, ಇಲ್ವಾ ಅಂತ ನೋಡಬೇಕು. ನಮ್ಮ ಕುಟುಂಬದ ನಿರ್ಧಾರವೂ ಮುಖ್ಯ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಬೋರ್‌ವೆಲ್‌ಗಳ ವಿರುದ್ಧ ಜಲಮಂಡಳಿ ಕಟ್ಟುನಿಟ್ಟಿನ ಕ್ರಮ – 20 ಜನರ ವಿರುದ್ಧ ದೂರು

    ಸುಮಲತಾ ಅವರಿಗೆ ಟಿಕೆಟ್ ಮಿಸ್ ಆದ ಬಗ್ಗೆ ನಾನು ಏನೂ ಮಾತಾಡಲ್ಲ. ಸುಮಲತಾ ಅವರು ನಮ್ಮ ಸಂಪರ್ಕದಲ್ಲಿ ಇಲ್ಲ. ಅವರು ಟಿಕೆಟ್ ಸಿಕ್ಕಿಲ್ಲ ಅಂತ ನೋವಲ್ಲಿದ್ದಾರೆ. ಅವರಿಗೆ ಟಿಕೆಟ್ ಬೇಕು ಅಂತ ಆರಂಭದಲ್ಲಿ ಹೋರಾಟ ಮಾಡಿದ್ದೇ ನಾವು. ಅವರಿಗೆ ಟಿಕೆಟ್ ಬೇಡಿಕೆ ಸಂದರ್ಭ ಇದ್ದಾಗ ನಾವು ಬೇಕಾಗಿತ್ತು. ಇದೂ ನಮಗೆ ನೋವಿದೆ. ಮಂಡ್ಯದಲ್ಲಿ ಶುಗರ್ ಫ್ಯಾಕ್ಟರಿ ತರುವ ಬಗ್ಗೆ ಹೆಚ್ಚಿನ ಶಕ್ತಿ ತುಂಬಿದವನು ನಾನು. ನನ್ನ ಹೆಸರನ್ನೇ ಅವರು ಹೇಳಲಿಲ್ಲ ಎಂದು ಸಂಸದೆ ಸುಮಲತಾ ನಡೆಗೆ ನಾರಾಯಣ ಗೌಡ ಅಸಮಾಧಾನ ಹೊರಹಾಕಿದರು.

    ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಮೈತ್ರಿ ಧರ್ಮ ಪಾಲಿಸಲೇಬೇಕು. ಹೈಕಮಾಂಡ್ ನಿರ್ಣಯಕ್ಕೆ ಗೌರವಿಸಿ ಅಂತ ವಿಜಯೇಂದ್ರ ಹೇಳಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಮುಂದೆ ಪರಿಹಾರ ಮಾಡ್ತೇವೆ, ಬೆಂಬಲ ಕೊಡಿ ಅಂದಿದ್ದಾರೆ. ನನಗೆ ಇದುವರೆಗೆ ಕಾಂಗ್ರೆಸ್‌ನಿಂದ ಪಕ್ಷ ಸೇರಲು ಆಹ್ವಾನ ಬಂದಿಲ್ಲ. ಜೆಡಿಎಸ್‌ನಿಂದಲೂ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಕೂತು ಚರ್ಚೆ ಮಾಡ್ತೇನೆ. ಕುಮಾರಸ್ವಾಮಿ ಅಭ್ಯರ್ಥಿ ಆಗ್ತಿದ್ದಾರೆ, ಅವರು ನಮ್ಮ ನಾಯಕರು. ಮುಂದಿನ ನಿರ್ಧಾರ ಚರ್ಚಿಸಿ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

  • ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    – ನಾಳೆಯೊಳಗೆ ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡ್ತೀವಿ
    – ಅಂಗಡಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಎಚ್ಚರಿಕೆ

    ಬೆಂಗಳೂರು: ಕಡ್ಡಾಯ ಕನ್ನಡ ನಾಮಫಲಕ (Kannada Name Board) ಅಳವಡಿಕೆಗೆ ಇಂದು ಕೊನೆಯ ದಿನವಾಗಿದ್ದು, ಈ ಗಡುವನ್ನು ಒಂದು ದಿನ ವಿಸ್ತರಣೆ ಮಾಡಿ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಆದೇಶ ಹೊರಡಿಸಿದ್ದಾರೆ.

    ಇಂದು ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆದರೆ ಇದನ್ನು ಕಮೀಷನರ್ ಒಂದು ದಿನ ವಿಸ್ತರಣೆ ಮಾಡಿದ್ದಾರೆ. 3,000 ಅಂಗಡಿಗಳು ಇನ್ನೂ ಕನ್ನಡ ನಾಮಫಲಕ ಹಾಕಿಲ್ಲ. ನಾಳೆಯೊಳಗೆ (ಫೆ.29) ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡುತ್ತೇವೆ. ಕೂಡಲೇ ನಾಮಫಲಕ ಬದಲಾಯಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್‌ – ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌

    ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆಯವರೆಗೆ ನಾಮಫಲಕ ಬದಲಾವಣೆಗೆ ಅವಕಾಶ ನೀಡಿದ್ದು, ನಾಳೆಯೊಳಗೆ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ಕೊಡಲಾಗಿದೆ. ಈಗಾಗಲೇ 90% ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರೋದು 3 ಸಾವಿರ ನಾಮಫಲಕ ಮಾತ್ರ. ಅವರು ನಾಳೆ ಸಂಜೆಯೊಳಗೆ ಬದಲಾಯಿಸಬೇಕು. ಕೆಲವು ಅಂತಾರಾಷ್ಟ್ರೀಯ ಕಂಪನಿಗಳು ಹಾಗೂ ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಕೊಟ್ಟಿವೆ. ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಇನ್ನು ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿದ್ದು, ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಬಿಬಿಎಂಪಿ ಹಾಗೂ ಸರ್ಕಾರ ನಾಮಫಲಕ ಜಾರಿಗೊಳಿಸಲು ಇವತ್ತಿನವರೆಗೂ ಗಡುವು ಕೇಳಿತ್ತು. ಒಟ್ಟು 50,216ಗಳಲ್ಲಿ 40,600 ಉದ್ಯಮಿಗಳಿಗೆ ನೋಟಿಸ್ ಕೊಟ್ಟಿದ್ದೇವೆ. 3,600 ಉದ್ಯಮಿಗಳು ಕನ್ನಡ ನಾಮಫಲಕ ಹಾಕಿಕೊಳ್ಳಬೇಕು. ಒಂದು ವೇಳೆ ನಾಳೆಯೊಳಗೆ ಕನ್ನಡ ನಾಮಫಲಕ ಜಾರಿಯಾಗದಿದ್ದರೆ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಕಮೀಷನರ್ ಹೇಳಿದ್ದಾರೆ. 100% ಕನ್ನಡೀಕರಣ ಆಗದಿದ್ದರೇ ಮತ್ತೆ ಬೀದಿಗೆ ಇಳಿಯುತ್ತೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಕನ್ನಡ ನಾಮಫಲಕಗಳು ಇರಬೇಕು. ಇಲ್ಲದಿದ್ದರೆ ಎಲ್ಲಾ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಬೀದಿಗಿಳಿಯುತ್ತಾರೆ. ಬೆಂಗಳೂರಲ್ಲಿ 3,500-4,000 ಉದ್ಯಮಿಗಳು ಕನ್ನಡ ಬಳಸದೇ ಇರೋರು ನಾಮಫಲಕದಲ್ಲಿ 60% ಕನ್ನಡ ನಾಮಫಲಕ ಹಾಕಬೇಕು. ನುಡಿದಂತೆ ನಡೆಯದಿದ್ದರೇ, ಕನ್ನಡ ಬಳಸದೇ ಇದ್ದರೇ ಮತ್ತೆ ಬೆಂಗಳೂರಲ್ಲಿ ಕರವೇ ಕಾರ್ಯಕರ್ತರು ಬೀದಿಗೆ ಇಳಿಯುತ್ತೇವೆ. ನಾಮಫಲಕ ಹಾಕದೇ ಇರೋರ ಮೇಲೆ ಮಾರ್ಚ್ 1 ರವರೆಗೂ ಬಿಬಿಎಂಪಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡುತ್ತೇವೆ. ಬಿಬಿಎಂಪಿಯಿಂದ ಯಾವುದೇ ಕ್ರಮ ಆಗದಿದ್ದರೇ ಮತ್ತೆ ಮಾರ್ಚ್ 5 ರಂದು ಬೀದಿಗಿಳಿಯುತ್ತೇವೆ. ಮಾರ್ಚ್ 5 ರಂದು ಬಿಬಿಎಂಪಿ ವಿರುದ್ಧ ಕರವೇ ಪ್ರೊಟೆಸ್ಟ್ ಮಾಡುವುದಾಗಿ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್‌

  • ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

    ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ (Lok Sabha Election) ಚುನಾವಣೆ ರಾಜಕೀಯ ಗರಿಗೆದರಿದೆ. ಇದರ ಮಧ್ಯೆ ಜೆಡಿಎಸ್-ಬಿಜೆಪಿ (BJP-JDS) ದೋಸ್ತಿಗಳ ಮಧ್ಯೆ ಸೀಟು ಹಂಚಿಕೆ ಗೊಂದಲ ಹೆಚ್ಚಾಗಿದೆ.

    ಜೆಡಿಎಸ್ ಕಣ್ಣಿಟ್ಟ ಕ್ಷೇತ್ರಗಳನ್ನು ಬಿಟ್ಟುಕೊಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ (Mandya), ಹಾಸನ (Hassan) ಕ್ಷೇತ್ರಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಂತೆ ಸ್ಥಳೀಯ ಕಮಲ ಮುಖಂಡರಿಂದ ಆಗ್ರಹ ವ್ಯಕ್ತವಾಗಿದೆ. ಇದನ್ನೂ ಓದಿ: ಡಿಕೆಸು ಪ್ರತ್ಯೇಕ ದೇಶ ಹೇಳಿಕೆ; ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ – ನಿವಾಸ ಮುತ್ತಿಗೆಗೆ ಯತ್ನಿಸಿದವರ ಮೇಲೆ ಲಾಠಿ ಪ್ರಹಾರ

    ಹಾಸನ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಂ ಗೌಡ ಒತ್ತಾಯಿಸಿದ್ದಾರೆ. ಇತ್ತ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಮಾಜಿ ಸಚಿವ ನಾರಾಯಣ ಗೌಡರಿಂದ ಆಗ್ರಹ ಕೇಳಿಬಂದಿದೆ.

    ಹಾಸನ ಬಳಿಕ ಮಂಡ್ಯದಲ್ಲೂ ಕ್ಷೇತ್ರ ಬಿಟ್ಟುಕೊಡದಂತೆ ಪ್ರೀತಂ ಗೌಡ ಗುಡುಗಿದ್ದಾರೆ. ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿಯ ಪಕ್ಷ ಸಂಘಟನೆ ಬಲಗೊಂಡಿದ್ದು, ಪಕ್ಷದಿಂದಲೇ ಅಭ್ಯರ್ಥಿ ಹಾಕಲು ಒತ್ತಡ ವ್ಯಕ್ತವಾಗಿದೆ. ಇದನ್ನೂ ಓದಿ: ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

    ಹಾಸನದಲ್ಲಿ ಜೆಡಿಎಸ್ ಸಂಸದರು ಇದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್ ಕೇಳುತ್ತಿದೆ. ಹಾಗಾದರೆ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅವರು ಸಂಸದರು, ಮಂಡ್ಯ ಬಿಟ್ಟುಕೊಡಲಿ ಎಂದು ಪ್ರೀತಂ ಗೌಡ ಠಕ್ಕರ್‌ ಕೊಟ್ಟಿದ್ದಾರೆ.

    ಕ್ಷೇತ್ರ ಉಳಿಸಿಕೊಳ್ಳಿ ಎನ್ನುವುದು ಎರಡೂ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಒತ್ತಾಯ. ಸೀಟು ಹಂಚಿಕೆ ಅಂತಿಮವಾಗುವ ಮುನ್ನವೇ ಕ್ಷೇತ್ರಗಳಲ್ಲಿ ಜೆಡಿಎಸ್ ಚುನಾವಣಾ ಸಿದ್ಧತೆಗೂ ಆಕ್ಷೇಪ ವ್ಯಕ್ತವಾಗಿದೆ. ಮಂಡ್ಯ, ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಕೊಡಲು ಸ್ಥಳೀಯ ಬಿಜೆಪಿ‌ ಮುಖಂಡರು, ಕಾರ್ಯಕರ್ತರು ವಿರೋಧಿಸಿದ್ದಾರೆ. ಸ್ಥಳೀಯರ ವಿರೋಧವು ಬಿಜೆಪಿಗೆ ತಲೆನೋವಾಗಿದೆ.

    ಎರಡೂ ಲೋಕಸಭೆ ಕ್ಷೇತ್ರಗಳ ವಿರೋಧ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವ ಆತಂಕದಲ್ಲಿ ಕಮಲ ನಾಯಕರು ಇದ್ದಾರೆ. ಹೈಕಮಾಂಡ್ ಅಂಗಳಕ್ಕೆ ರಿಪೋರ್ಟ್ ಕಳಿಸಲು ಕಮಲ ಪಡೆ ಮುಂದಾಗಿದೆ. ಕ್ಷೇತ್ರ ಹಂಚಿಕೆ ಜಟಾಪಟಿ ಹೈಕಮಾಂಡ್ ಕೋರ್ಟಿನಲ್ಲಿ ಬೇಗ ಇತ್ಯರ್ಥ ಮಾಡಿ ಎಂದು ಮನವಿ ಮಾಡಲು ಮುಂದಾಗಿದ್ದಾರೆ. ಇದೇ ತಿಂಗಳ ಎರಡನೇ ವಾರದಲ್ಲಿ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

    ಅಮಿತ್ ಶಾ ಸಮ್ಮುಖದಲ್ಲೂ ಕ್ಷೇತ್ರ ಜಟಾಪಟಿ ಪ್ರಸ್ತಾಪ ಮಾಡಲು ಪ್ಲ್ಯಾನ್‌ ನಡೆದಿದೆ. ಸದ್ಯಕ್ಕೆ ಈ ವಿಚಾರದಲ್ಲಿ ಹೆಚ್ಚಿಗೆ ಮೂಗು ತೂರಿಸದಿರಲು ರಾಜ್ಯ ಬಿಜೆಪಿ ನಾಯಕರು ನಿಶ್ಚಯಿಸಿದ್ದಾರೆ. ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠರ‌ ತೀರ್ಮಾನಕ್ಕೆ ಬಿಡಲು ರಾಜ್ಯ ಬಿಜೆಪಿ ಘಟಕ ಮುಂದಾಗಿದೆ. ಸದ್ಯ ಪರಿಸ್ಥಿತಿ ತಿಳಿ ಮಾಡುವ ಪ್ರಯತ್ನ ಅಥವಾ ಕಾರ್ಯಕರ್ತರ ಮನವರಿಕೆಗೂ ಕೈಹಾಕಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೈಕಮಾಂಡ್‌ನಿಂದಲೇ ತೀರ್ಮಾನ ಬರಲಿ ಎಂದು ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

  • ಜೈಲಿಂದ ಹೊರ ಬಂದ ತಕ್ಷಣ ಕ್ಷಮೆ ಕೇಳಿದ ಕರವೇ ನಾರಾಯಣಗೌಡ

    ಜೈಲಿಂದ ಹೊರ ಬಂದ ತಕ್ಷಣ ಕ್ಷಮೆ ಕೇಳಿದ ಕರವೇ ನಾರಾಯಣಗೌಡ

    ಬೆಂಗಳೂರು: ಕನ್ನಡ ನಾಮಫಲಕ ಹೋರಾಟದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಿಡುಗಡೆಯಾಗಿ ಮತ್ತೆ ಜೈಲು ಸೇರಿ ಇದೀಗ ಮತ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ (Jail) ರಿಲೀಸ್ ಆದ ಬಳಿಕ ನಾರಾಯಣ ಗೌಡರು (KaRaVe Narayana Gowda) ತಮ್ಮ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ದಾರೆ.

    ಬಿಡುಗಡೆಯ ಬಳಿಕ ಫೇಸ್ ಬುಕ್ ಮೂಲಕ ಲೈವ್ ಬಂದ ಕರವೇ ಅಧ್ಯಕ್ಷ, ಆರೋಗ್ಯದ ಸಮಸ್ಯೆಯಿಂದ ಇಂದು ಯಾರ ಜೊತೆಯೂ ಮಾತನಾಡೋಕೆ ಆಗ್ಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನನ್ನ ದೇಹದ ಕೊನೆಯ ಹನಿ ರಕ್ತ ಇರುವವರೆಗೂ ಕನ್ನಡದ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕನ್ನಡ ನಾಮಫಲಕ ಆಂದೋಲನ ಯಶಸ್ವಿಯಾಗಿದೆ. ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕನ್ನಡಿಗರ ಜಯ, ಕರವೇಯ ಜಯ. ಕಾನೂನಿನ ಚೌಕಟ್ಟಿನೊಳಗೆ ಈ ಹೋರಾಟ ಮುಂದುವರಿಸಿಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕರವೇ ನಾರಾಯಣಗೌಡ ಜೈಲ್‌ ಗೇಟ್‌ನಲ್ಲಿ ಮತ್ತೆ ಅರೆಸ್ಟ್‌

    ಕೆಲವೊಮ್ಮೆ ಹೋರಾಟದಲ್ಲಿ ತೊಡಕಾಗುವುದು ಸಹಜ. ಪ್ರಾಮಾಣಿಕ ಹೋರಾಟದಲ್ಲಿ ಹೀಗೆಲ್ಲಾ ಆಗುತ್ತೆ. ಈಗ ಹದಿನೈದು ದಿನ ನಾನು ಮತ್ತು ನಮ್ಮ ಕಾರ್ಯಕರ್ತರು ಜೈಲು ಶಿಕ್ಷೆ ಅನುಭವಿಸಿದ್ದೇವೆ. ಇನ್ನೂ ಅನೇಕ ಮೊಕದ್ದಮೆಗಳಿವೆ. ಅದಕ್ಕಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.

    ಇದೇ ವೇಳೆ ನಾರಾಯಣ ಗೌಡರು ಕನ್ನಡ ಪರ ಚಳುವಳಿಗಾರರು, ಕರವೇ ಮುಖಂಡರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  • ಮತ್ತೆ ಜೈಲು ಸೇರ್ತಾರಾ ಕರವೇ ಅಧ್ಯಕ್ಷ ನಾರಾಯಣ ಗೌಡ..?

    ಮತ್ತೆ ಜೈಲು ಸೇರ್ತಾರಾ ಕರವೇ ಅಧ್ಯಕ್ಷ ನಾರಾಯಣ ಗೌಡ..?

    ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣಗೌಡರಿಗೆ (Karave Narayana Gowda) ಮತ್ತೊಂದು ಸಂಕಷ್ಟ ಎದುರಾದಂತಿದೆ. ಕರವೇ ರಾಜ್ಯಾಧ್ಯಕ್ಷರನ್ನು ಮತ್ತೊಮ್ಮೆ ಬಂಧಿಸಲು ಬೆಂಗಳೂರು ಪೊಲೀಸರು ತಯಾರಿ ನಡೆಸಿದ್ದಾರೆ.

    ಹಳೇ ಕೇಸ್‍ಗಳನ್ನು ಕೆದಕಿರೋ ಕುಮಾರಸ್ವಾಮಿ ಲೇಔಟ್ (Kumaraswamy Lay Out) ಮತ್ತು ಹಲಸೂರು ಗೇಟ್ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಹಲಸೂರು ಗೇಟ್‍ನಲ್ಲಿ 2017ರಲ್ಲಿ ದಾಖಲಾಗಿದ್ದ ಎನ್‍ಡಿಎಂಎ ಆಕ್ಟ್ ನಡಿ ದಾಖಲಾಗಿದ್ದ ಪ್ರಕರಣ ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಎನ್‍ಆರ್ ಡಬ್ಲೂ ಜಾರಿಯಾಗಿತ್ತು.

    ಈ ಹಿನ್ನಲೆ ಈ ಎರಡು ಠಾಣೆಗಳಿಂದ ಕಸ್ಟಡಿ ಪಡೆಯಲು ಸಿದ್ಧತೆ ನಡೆದಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಾರಾಯಣಗೌಡ ವಿರುದ್ಧಧ ಹಳೇ ಕೇಸ್‍ಗಳನ್ನು ಪೊಲೀಸರು ಕೆದಕುತ್ತಿದ್ದಾರೆ. ಬೆಂಗಳೂರು ನಗರದ ಎಲ್ಲಾ ಠಾಣೆಗಳ ಕೇಸ್ ರೀ ಓಪನ್ ಮಾಡಿ ಕಸ್ಟಡಿಗೆ ಪಡೆಯಲು ಚಿಂತನೆ ನಡೆಸಿದ್ದಾರಂತೆ. ಇದನ್ನೂ ಓದಿ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ಜಾಮೀನು

    ಅನ್ಯ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ ಪ್ರಕರಣದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಅನೇಕರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಜಾಮೀನು ಅರ್ಜಿ ವಿಚಾರಣೆ ಇಂದು (ಶನಿವಾರ) ದೇವನಹಳ್ಳಿಯ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯಾದಲ್ಲಿ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಿರಾದರ್ ದೇವೆಂದ್ರಪ್ಪ ಅವರು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.

  • ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ಜಾಮೀನು

    ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ಜಾಮೀನು

    ಚಿಕ್ಕಬಳ್ಳಾಪುರ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ (Narayana Gowda) ಸೇರಿದಂತೆ 36 ಮಂದಿಗೆ ಜಾಮೀನು ಮಂಜೂರಾಗಿದೆ. ದೇವನಹಳ್ಳಿಯ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

    ಜಾಮೀನು ಮಂಜೂರಾದರೂ ಇಂದು ನಾರಾಯಣಗೌಡರ ಬಿಡುಗಡೆ ಇಲ್ಲದಂತಾಗಿದ್ದು, ಬಹುತೇಕ ಸೋಮವಾರ ಸಂಜೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ನಾರಾಯಣಗೌಡ ಸೇರಿದಂತೆ ಎಲ್ಲಾ ಕಾರ್ಯಕರ್ತರ ಬಿಡುಗಡೆ ಮಾಡಿ – ಡಿಸಿಎಂಗೆ ಕರವೇ ಮನವಿ

    ಅನ್ಯ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ ಪ್ರಕರಣದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಅನೇಕರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.

    ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಜಾಮೀನು ಅರ್ಜಿ ವಿಚಾರಣೆ ಇಂದು (ಶನಿವಾರ) ದೇವನಹಳ್ಳಿಯ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯಾದಲ್ಲಿ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಿರಾದರ್ ದೇವೆಂದ್ರಪ್ಪ ಅವರು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಜೈಲು ಸೇರಿದ್ದ 15 ಕರವೇ ಕಾರ್ಯಕರ್ತರು ಬಿಡುಗಡೆ

  • ಕರವೇ ನಾರಾಯಣಗೌಡರನ್ನು ಸರಿಯಾಗಿ ನಡೆಸಿಕೊಳ್ಳೋದು ಅಂದ್ರೆ ಹೇಗೆ?: ಪರಮೇಶ್ವರ್ ಗರಂ

    ಕರವೇ ನಾರಾಯಣಗೌಡರನ್ನು ಸರಿಯಾಗಿ ನಡೆಸಿಕೊಳ್ಳೋದು ಅಂದ್ರೆ ಹೇಗೆ?: ಪರಮೇಶ್ವರ್ ಗರಂ

    ಬೆಂಗಳೂರು: ನಾರಾಯಣಗೌಡರನ್ನು (Narayana Gowda) ಸರಿಯಾಗಿ ನಡೆಸಿಕೊಳ್ಳೋದು ಅಂದರೆ ಹೇಗೆ? ಪೊಲೀಸರು ಹೇಗೆ ನಡೆಸಿಕೊಳ್ಳಬೇಕು ಎಂದು ಅವರನ್ನೇ ಕೇಳುತ್ತೇನೆ ಹೇಳಲಿ. ಹೀಗೆ ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರೋದಕ್ಕೆ ಆಗುತ್ತಾ? ಪ್ರತಿಭಟನೆಗೆ ಅರ್ಧಗಂಟೆ ಸಮಯ ಕೊಡಬಹುದು. ಆದರೆ ರಸ್ತೆಯಲ್ಲಿ ಇದ್ದರೆ ಏನು ಮಾಡಬಹುದು ಎಂದು ಕರವೇ (Karnataka Rakshana Vedike) ನಾರಾಯಣಗೌಡ ವಿರುದ್ಧ ಗೃಹ ಸಚಿವ ಪರಮೇಶ್ವರ್ (G Parameshwar) ಗರಂ ಆಗಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರವೇ ಹೋರಾಟಗಾರರು ಬಲವಂತವಾಗಿ ಬೋರ್ಡ್ ತೆಗೆಯೋದು, ಒಡೆದು ಹಾಕುವುದು ಮಾಡಿದ್ದಾರೆ. ಪೊಲೀಸರು ಸುಮ್ಮನೆ ಇರೋದಕ್ಕೆ ಆಗಲ್ಲ. ಕರವೇ ಹೋರಾಟಗಾರರು ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಾಗಿತ್ತು. ಅದಕ್ಕೆ ಪೊಲೀಸರು ಸುಮ್ಮನೆ ಇರಲು ಆಗಲ್ಲ. ಕನ್ನಡ ನಾಮಫಲಕ ಕಡ್ಡಾಯ ಮಾಡೋದಕ್ಕೆ ಬಿಬಿಎಂಪಿಯವರು ಫೆಬ್ರವರಿ 28ರ ಗಡುವು ನೀಡಿದ್ದಾರೆ. ಸ್ವಲ್ಪ ಸಂಯಮ ಇರಬೇಕಲ್ವಾ? ಕಾನೂನಿನ ಉಲ್ಲಂಘನೆ ಮಾಡಿದರೆ ಸುಮ್ಮನಿರೋಕೆ ಆಗಲ್ಲ. ಇದನ್ನು ಸರ್ಕಾರ ಸಹಿಸಲ್ಲ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಆರ್‌ಎಸ್‌ಎಸ್‌ಗೂ ರಾಮಮಂದಿರಕ್ಕೂ ಏನೂ ಸಂಬಂಧವಿಲ್ಲ: ಡಿಕೆಶಿ

    ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಕಾನೂನನ್ನು ಯಾರೇ ಉಲ್ಲಂಘಿಸಿದ್ದರೂ ಸುಮ್ಮನಿರಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೆ ಪೊಲೀಸರು ಸುಮ್ಮನೆ ಕೂರಬೇಕಾ? ಇಡೀ ವಿಶ್ವಕ್ಕೆ ಬೆಂಗಳೂರು ಮಾದರಿ ನಗರ. ವಿಶ್ವದಿಂದ ಜನ ಬರುತ್ತಾರೆ. ಅವರಿಗೆಲ್ಲ ಏನು ಸಂದೇಶ ಕೊಟ್ಟ ಹಾಗೆ ಆಗುತ್ತದೆ? ಅದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸರ್ಕಾರದ ಗಮನಕ್ಕೆ ತರಬೇಕು, ಬಿಬಿಎಂಪಿ ಗಮನಕ್ಕೆ ತರಬೇಕಿತ್ತು. ಪ್ರತಿಭಟನೆ ಕಾನೂನಿನ ಅಡಿಯಲ್ಲಿ ಮಾಡಬೇಕಿತ್ತು. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಆಗುವುದನ್ನು ನೋಡಿಕೊಂಡು ಸುಮ್ಮನೆ ಕೂರಬೇಕು ಅಂದರೆ ಆಗಲ್ಲ. ಮಾಲ್‌ಗಳ ಮುಂದೆ ಹೋಗಿ ಗಲಾಟೆ ಮಾಡಿದರೆ ಅವರು ರಕ್ಷಣೆ ನೀಡಿ ಎಂದು ಕೇಳುತ್ತಾರೆ, ಅದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು – ಬಿಜೆಪಿ ಸಭೆಯ ನಿರ್ಣಯಗಳೇನು?

    ಕನ್ನಡ (Kannada) ರಕ್ಷಣೆ ವಿಚಾರದಲ್ಲಿ ಕನ್ನಡದ ಪರವಾಗಿ ಸರ್ಕಾರ ನಿಂತಿದೆ. ಕನ್ನಡದಲ್ಲಿ ಆಡಳಿತ ತೀರ್ಮಾನ ಮಾಡಿದ್ದೇವೆ, ಅನುಷ್ಠಾನ ಮಾಡುತ್ತಿದ್ದೇವೆ. ಕನ್ನಡ ನಾಮಫಲಕ ಹಾಕುವ ಬಗ್ಗೆ ಟ್ರೇಡ್ ಲೈಸೆನ್ಸ್ ಕೊಡುವಾಗಲೂ ಸರ್ಕಾರ ಸೂಚನೆ ಕೊಡುತ್ತಿದೆ. ಈ ನಡುವೆ ಕರವೇ ಕನ್ನಡ ನಾಮಫಲಕ ಹಾಕಬೇಕು ಎಂದು ಒತ್ತಾಯಪೂರ್ವಕವಾಗಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇದು ಅವಶ್ಯಕತೆ ಇರಲಿಲ್ಲ. ಹಾಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಕರವೇ ಕಾರ್ಯಕರ್ತರ ಬಂಧನವನ್ನು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಚುನಾವಣಾ ರಣತಂತ್ರದ ಮಾರ್ಗಸೂಚಿ ಬಗ್ಗೆ ಚರ್ಚೆಯಾಗಿದೆ: ಸಿ.ಟಿ.ರವಿ

  • ಇಂಗ್ಲಿಷ್ ಬೋರ್ಡ್ ಹರಿದು, ಕಲ್ಲು ತೂರಾಟ ಮಾಡಿ ಆಕ್ರೋಶ- ಕರವೇ ಕಾರ್ಯಕರ್ತರ ಮೇಲೆ FIR

    ಇಂಗ್ಲಿಷ್ ಬೋರ್ಡ್ ಹರಿದು, ಕಲ್ಲು ತೂರಾಟ ಮಾಡಿ ಆಕ್ರೋಶ- ಕರವೇ ಕಾರ್ಯಕರ್ತರ ಮೇಲೆ FIR

    ಬೆಂಗಳೂರು: ಕನ್ನಡ ನಾಮಫಲಕ (Kannada Board) ಹಾಕದ ಅಂಗಡಿ ಮುಂಗಟ್ಟುಗಳ ಮುಂದೆ ಇಂಗ್ಲಿಷ್ ಬೋರ್ಡ್ (English Board) ಹರಿದು, ಕಲ್ಲು ತೂರಾಟ ನಡೆಸಿದ್ದ ಕರವೇ, ಆಕ್ರೋಶ ಹೊರಹಾಕಿತ್ತು. ಇದೀಗ ಕಾನೂನು ಉಲ್ಲಂಘನೆ ಆರೋಪದ ಮೇಲೆ ಕರವೇ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಕನ್ನಡ ಬಳಸಿ ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ, ಅಂಗಡಿ ಮುಂಗಟ್ಟುಗಳ ಬೋರ್ಡ್ ಕನ್ನಡದಲ್ಲಿರಬೇಕು. ಕನ್ನಡ ಭಾಷೆ (Kannada Language) ಬಳಕೆಗಾಗಿ ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಗೆ ಇಳಿದಿದ್ರು. ಬೆಂಗಳೂರಿನಲ್ಲಿ ಇರುವ ಇಂಗ್ಲಿಷ್ ನಾಮಫಲಕ ಹರಿದು ಆಕ್ರೋಶ ಹೊರಹಾಕಿದ್ರು. ಈ ಮಧ್ಯೆ ಉದ್ರಿಕ್ತಗೊಂಡ ಕಾರ್ಯಕರ್ತರು ಇಂಗ್ಲೀಷ್ ಬೋರ್ಡ್‍ಗಳ ಮೇಲೆ ಹಲವೆಡೆ ಕಲ್ಲು ತೂರಾಟ ಕೂಡ ಮಾಡಿದ್ರು. ಕರವೇ ಪ್ರತಿಭಟನೆ ಹತ್ತಿಕ್ಕಲು ಮಧ್ಯಾಹ್ನದಿಂದ ವಶಕ್ಕೆ ಪಡೆದ ಕಾರ್ಯಕರ್ತರನ್ನ ಸಂಜೆ ಆಗ್ತಿದ್ದಂತೆ ಬಿಡುಗಡೆ ಮಾಡಲಾಯ್ತು. ಅವರ ಜೊತೆಗೆ 250 ಕಾರ್ಯಕರ್ತರನ್ನ ಸಹ ಪೊಲೀಸ್ ವಾಹನ ತರಬೇತಿ ಶಾಲೆಯಲ್ಲೇ ಇರಿಸಲಾಗಿತ್ತು. ಹೀಗಾಗಿ ತಡ ಆಗಿದ್ರಿಂದ ದೂರದೂರುಗಳಿಗೆ ತೆರಳುವ ಕಾರ್ಯಕರ್ತರಿಗೆ ಕಷ್ಟ ಆಗತ್ತೆ ಅಂತಾ ಪೊಲೀಸ್ ವಾಹನ ಚಾಲನಾ ಕೇಂದ್ರದಲ್ಲಿಯೇ ರಾತ್ರಿ ಉಳಿದುಕೊಳ್ಳುವ ನಿರ್ಧಾರ ಮಾಡಿದರು.

    ಲ್ಯಾವೆಲ್ಲೆ ರಸ್ತೆಯಲ್ಲಿ ಇಂಗ್ಲಿಷ್ ನಾಮಫಲಕ ಹರಿದಿದ್ದಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 15 ಜನ ಕರವೇ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಇನ್ನುಳಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಂಪೈರ್ ಹೋಟೆಲ್‍ಗೆ ಕಲ್ಲು ತೂರಾಟ ನಡೆಸಿದಕ್ಕೆ ಎಫ್‍ಐಆರ್ ದಾಖಲಾದ್ರೆ, ಅಶೋಕನಗರದಲ್ಲಿ ಲ್ಯಾವೆಲೆ ರಸ್ತೆ ಇಂಗ್ಲಿಷ್ ಬೋರ್ಡ್ ಧ್ವಂಸ ಮಾಡಿದಕ್ಕಾಗಿ ದೂರು ದಾಖಲಾಗಿದೆ. ಕಾಟನ್ ಪೇಟೆಯಲ್ಲಿ ಒಂದು ಎಫ್‍ಐಆರ್ ಆದ್ರೆ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಬಸ್ ಗಾಜು ಒಡೆದಿದ್ದಕ್ಕೆ ಸೇರಿದಂತೆ, ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಉಗುಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮತ್ತು ರಸ್ತೆತಡೆ ನಡೆಸಿ ಗಲಾಟೆ ಮಾಡಿ ಅಡಚಣೆ ಮಾಡಿದ್ದಕ್ಕೆ ಮೂರು ಪ್ರತ್ಯೇಕ ಎಫ್‍ಐಆರ್ ದಾಖಲಿಸಲಾಗಿದೆ.

    ಇನ್ಸ್ ಪೆಕ್ಟರ್ ಗಿರೀಶ್ ವಿರುದ್ಧ ಕರವೇ ಕಿಡಿ: ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರ ಮೇಲೆ ಕಬ್ಬನ್ ಪಾರ್ಕ್ ಠಾಣೆ ಇನ್ಸ್ ಪೆಕ್ಟರ್ ಗಿರೀಶ್ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಲಾಠಿ ಚಾರ್ಜ್‍ನಲ್ಲಿ ಓರ್ವನ ಕೈ ಮೂಳೆ ಮುರಿದಿದ್ರೆ, ಮತ್ತೋರ್ವನ ಕಾಲಿಗೆ ಇನ್ಸ್ ಪೆಕ್ಟರ್ ಹೊಡೆದು ಗಾಯ ಮಾಡಿದ್ದಾರಂತೆ. ಅಲ್ಲದೇ 15 ಜನ ಅಮಾಯಕರ ವಿರುದ್ಧ ಎಫ್‍ಐಆರ್ ಮಾಡಿ ಬಂಧಿಸಿದ್ದಾರೆಂದು ಆರೋಪಿಸಿ ಠಾಣೆ ಎದುರು ಅರೆಬೆತ್ತಲೆಯಾಗಿಯೇ ಪ್ರತಿಭಟಿಸಿದ್ರು.

  • ರಾತ್ರೋರಾತ್ರಿ ನಾರಾಯಣಗೌಡ ಅರೆಸ್ಟ್, 14 ದಿನ ನ್ಯಾಯಾಂಗ ಬಂಧನ- ಇಂದೂ ಪ್ರತಿಭಟನೆಗೆ ಕರೆ

    ರಾತ್ರೋರಾತ್ರಿ ನಾರಾಯಣಗೌಡ ಅರೆಸ್ಟ್, 14 ದಿನ ನ್ಯಾಯಾಂಗ ಬಂಧನ- ಇಂದೂ ಪ್ರತಿಭಟನೆಗೆ ಕರೆ

    ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರ ಹೋರಾಟದ ಕಿಚ್ಚು ಜೋರಾಗಿದೆ. ಬುಧವಾರ ರಾತ್ರೋರಾತ್ರಿ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಬಂಧಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

    ಇಂದು ನಸುಕಿನ ಜಾವ ಕರವೇ (Karve) ಅಧ್ಯಕ್ಷ ನಾರಾಯಣಗೌಡ (Narayan Gowda) ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಬಳಿಕ ನಾರಾಯಣಗೌಡರು ಸೇರಿದಂತೆ  29 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

     ಇತ್ತ ಕರವೇ ಅಧ್ಯಕ್ಷ ನಾರಾಯಣಗೌಡ ಬಂಧನ ಹಿನ್ನೆಲೆಯಲ್ಲಿ ಸಿಎಂ ಮನೆ ಮುಂದೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಅಲರ್ಟ್ ಆದ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಸಿಎಂ ಮನೆ, ಗೃಹ ಕಚೇರಿ ಮುಂದೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸದ ಬಳಿ ಹೆಚ್ಚು ಬ್ಯಾರಿಕೇಡ್ ಹಾಕಲಾಗಿದೆ. ಇಂದು 10 ಗಂಟೆ ನಂತರ ನಗರದ ಹಲವೆಡೆ ಕರವೇ ಪ್ರತಿಭಟನೆ ಸಾಧ್ಯತೆ ಇದೆ. ಇತ್ತ ಮುತ್ತಿಗೆಗೆ ಮುಂದಾದವರ ವಶಕ್ಕೆ ಪಡೆಯಲು ಬಿಎಂಟಿಸಿ (BMTC) ಬಸ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಇಂಗ್ಲಿಷ್ ಬೋರ್ಡ್‍ಗಳು ಉಡೀಸ್- ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ

    ಏನಿದು ಘಟನೆ..?: ಬುಧವಾರ ಇಂಗ್ಲಿಷ್ ನಾಮಫಲಕಗಳ (Englih Board) ವಿರುದ್ಧ ಹೋರಾಟ ಮಾಡಿದ ಕರವೇ ನಾರಾಯಣಗೌರನ್ನ ಅರೆಸ್ಟ್ ಮಾಡಿ ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ಡಿಸಿಪಿ ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ನಾರಾಯಣಗೌಡ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ನಾರಾಯಣಗೌಡರನ್ನ ಅರೆಸ್ಟ್ ಮಾಡೋ ಮೊದಲು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣಗೌಡರನ್ನ ಅರೆಸ್ಟ್ ಮಾಡಿದ್ರೆ ನಾವು ಸುಮ್ಮನೆ ಇರಲ್ಲ. ಅರೆಸ್ಟ್ ಮಾಡಿದ್ರೆ ಪರಿಸ್ಥಿತಿ ಬೇರೆ ತರ ಇರುತ್ತೆ. ನಾಡಲ್ಲಿ ಬೆಂಕಿ ಹತ್ಕೊಂಡು ಉರಿಯುತ್ತೆ ಎಂದಿದ್ದರು.

    ಜೈಲಿಗೆ ಹಾಕಿದ್ರೆ ನಾವು ಸುಮ್ಮನಿರಲ್ಲ. ಒಬ್ಬ ಸಚಿವನೂ ಬಂದು ನಮ್ಮ ಕೂಗನ್ನು ಕೇಳಲಿಲ್ಲ. ಸಚಿವರು ಅಯೋಗ್ಯರು. ಸಚಿವರ ಮನೆಮುಂದೆ ಧಿಕ್ಕಾರ ಕೂಗಿ ಪ್ರಾಣತ್ಯಾಗ ಮಾಡ್ತೇವೆ ಎಂದು ಕಿಡಿಕಾರಿದರು. ಇದೇ ವೇಳೆ ಬಿಎಂಟಿಸಿ ಬಸ್‍ನಲ್ಲಿ ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗುವಾಗ ಕರವೇ ಕಾರ್ಯಕರ್ತರು ಬಸ್‍ನ ತಡೆದು ಗಾಜನ್ನು ಪುಡಿ ಪುಡಿ ಮಾಡಿದರು. ಇದೇ ವೇಳೆ ನಾರಾಯಣಗೌಡ ಅವರು ಇಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟಿದ್ದು, ಇಂದು ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಸಿಎಂ ಹಾಗೂ ಸಚಿವರ ಮನೆ ಮುಂದೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆಗಳಿವೆ.

    ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರ ದೌರ್ಜನ್ಯದ ವಿರುದ್ಧ ನಾರಾಯಣಗೌಡ ಕಿಡಿಕಾರಿದ್ರು. ಮೊಬೈಲ್ ಕಿತ್ತುಕೊಂಡಿದ್ದಲ್ಲದೇ ಊಟ ಕೊಟ್ಟಿಲ್ಲ. ಸಿಎಂ ಸಾಹೇಬ್ರೇ ನಿಮಗೆ ನಾವು ಉತ್ತರ ಕೊಡ್ತೇವೆ. ಬುಧವಾರ ಬೆಳಗ್ಗೆ ಹೋರಾಟಕ್ಕೆ ಬಂದ ನಾವು ಯಾರೂ ಊಟ ಮಾಡಿಲ್ಲ. ನನಗೆ ಆರೋಗ್ಯ ಸರಿಯಿಲ್ಲ. ಮೆಡಿಸಿನ್ ತೆಗೆದುಕೊಳ್ಳಬೇಕು. ಇಂದು ಗುಂಡಿಟ್ಟು ಕೊಂದ್ರೂ ಹೋರಾಟ ಮಾಡೇ ಮಾಡ್ತೇವೆ ಎಂದು ಸರ್ಕಾರದ ವಿರುದ್ಧ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.