Tag: Narasimha Raju

  • ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ

    ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ

    ನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಹಿರಿಯ ಪುತ್ರಿ ಧರ್ಮವತಿ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಈ ಕುರಿತು ಧರ್ಮವತಿ ಅವರ ಪುತ್ರ, ಸಿನಿಮಾ ನಿರ್ದೇಶಕ ಅರವಿಂದ್ ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಇಂದು ಮುಂಜಾನೆ 5.30ಕ್ಕೆ ಧರ್ಮಾವತಿ ಅವರು ಕೊನೆಯುಸಿರು ಎಳೆದಿದ್ದಾರಂತೆ.

    ಧರ್ಮವತಿಗೆ ಮೂವರು ಮಕ್ಕಳದ್ದು, ಪುತ್ರ ಅರವಿಂದ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಮತ್ತು ಸಂಗೀತ ಸಂಯೋಜನೆ ಕೂಡ ಮಾಡುತ್ತಿದ್ದಾರೆ. ಕಿರಿಯ ಪುತ್ರ ಅವಿನಾಶ್ ನರಸಿಂಹರಾಜು ನಟನಾಗಿ ಗುರುತಿಸಿಕೊಂಡಿದ್ದಾರೆ. ಲಾಸ್ಟ್ ಬಸ್ ಸೇರಿದಂತೆ ಹಲವು ಚಿತ್ರಗಳನ್ನು ಇವರು ಮಾಡಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಧರ್ಮವತಿ ಅವರ ಅಂತ್ಯಸಂಸ್ಕಾರವು ಇಂದು ಸಂಜೆ ಹೆಬ್ಬಳದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನರಸಿಂಹರಾಜು ಕುಟುಂಬ ಕನ್ನಡ ಸಿನಿಮಾ ರಂಗಕ್ಕೆ ಅಪಾರ ಕೊಡುಗೆ ನೀಡಿದೆ. ನರಸಿಂಹರಾಜು ಕುಟುಂಬದ ಅನೇಕ ಕಲಾವಿದರು ಈ ಹೊತ್ತಿಗೂ ಸಿನಿಮಾ ರಂಗದಲ್ಲಿ ನಟರಾಗಿ, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

  • ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’

    ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’

    ದ್ಯ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸುದ್ದಿ. ಬಾಹುಬಲಿ, ಕಜಿಎಫ್ ಸಿನಿಮಾಗಳು ಬರುವ ಮುಂಚೆ ಇಂಥದ್ದೊಂದು ಶಬ್ದವನ್ನು ಕೇಳಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಬಾಹುಬಲಿ ಸಿನಿಮಾ ರಿಲೀಸ್ ಆದಾಗಲೂ ಈ ಶಬ್ದಕ್ಕೆ ಅಷ್ಟೊಂದು ತೂಕವಿರಲಿಲ್ಲ. ಆದರೆ, ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುತ್ತಿದ್ದಂತೆಯೇ ‘ಪ್ಯಾನ್ ಇಂಡಿಯಾ’ ಶಬ್ದಕ್ಕೆ ತೂಕ ಹೆಚ್ಚಾಯಿತು. ಈಗಂತೂ ತಲೆ ಚಿಟ್ಟು ಅನ್ನುವಷ್ಟರ ಮಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ರಾರಾಜಿಸುತ್ತಿವೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಏನಿದು ಪ್ಯಾನ್ ಇಂಡಿಯಾ?

    ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿವೆ, ಆಯಾ ಭಾಷೆಯ ನೋಡುಗರಿಗೆ ಒಂದೇ ಸಲ ಸಿನಿಮಾ ತೋರಿಸುವ ಸಿದ್ಧಾಂತವೇ ‘ಪ್ಯಾನ್ ಇಂಡಿಯಾ’. ಸಾಮಾನ್ಯವಾಗಿ ಎಲ್ಲ ಭಾಷೆಯ ನೋಡುಗರನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ಸಿನಿಮಾ ಮಾಡುತ್ತಾರೆ. ಕಥೆಯ ಆಯ್ಕೆಯಿಂದ ಹಿಡಿದು ಅದರ ಗುಣಮಟ್ಟದವರೆಗೂ ಅದ್ಧೂರಿತನವನ್ನು ಕಾಪಾಡಿಕೊಂಡು ಬರಲಾಗುತ್ತದೆ. ಅಥವಾ ಆಯಾ ನೋಡುಗನ ಅಭಿರುಚಿಯನ್ನು ಮನದಲ್ಲಿಟ್ಟು ಸಿನಿಮಾ ಕಟ್ಟಲಾಗುತ್ತಿದೆ.

    ಆರು ದಶಕಗಳ ಹಿಂದೆಯೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಈಗೀಗ ಪಾಪ್ಯುಲರ್ ಆದರೂ, ಅರವತ್ತೆರಡು ವರ್ಷಗಳ ಹಿಂದೆಯೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಂದಿದೆ. ಅದೂ ಈವರೆಗೂ ಕನ್ನಡದಲ್ಲಿ ಬಾರದೇ ಇರುವಷ್ಟು ಭಾಷೆಗಳಲ್ಲಿ ತೆರೆ ಕಂಡಿದೆ. ಬರೀ ತೆರೆ ಕಾಣುವುದು ಮಾತ್ರವಲ್ಲ ಬಾಕ್ಸ್ ಆಫೀಸ್ ಕಲೆಕ್ಷನ್ ವಿಷಯದಲ್ಲೂ ಅದು ದಾಖಲೆ ಬರೆದಿದೆ. ಆ ಸಿನಿಮಾ ಬೇರೆ ಯಾವುದೂ ಅಲ್ಲ, ಡಾ.ರಾಜ್ ಕುಮಾರ್ ನಟನೆಯ ‘ಮಹಿಷಾಸುರ ಮರ್ಧಿನಿ’. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಅದು 1959ರ ಬ್ಲ್ಯಾಕ್ ಅಂಡ್ ವೈಟ್ ಯುಗದ ಸಿನಿಮಾ. ಈ ವೇಳೆಯಲ್ಲಿ ಸಿನಿಮಾ ನಿರ್ಮಾಣಗಳ ಸಂಖ್ಯೆಯೂ ತೀರಾ ಕಡಿಮೆ. 1959ರಲ್ಲಿ ತೆರೆಕಂಡ ಸಿನಿಮಾಗಳ ಸಂಖ್ಯೆ ಕೇವಲ ಆರೇ ಆರು. ಆ ಆರು ಸಿನಿಮಾಗಳಲ್ಲಿ ಮಹಿಷಾಸುರ ಮರ್ಧಿನಿ ಕೂಡ ಒಂದು. ಇದು ಪೌರಾಣಿಕ ಚಿತ್ರವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಎಂಟು ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ಡಾ.ರಾಜ್ ಕುಮಾರ್ ಅವರ ಜತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ತಾಯಿ ಶ್ರೀಮತಿ ಸಂಧ್ಯಾ ಅವರು ಕೂಡ ನಟಿಸಿದ್ದಾರೆ. ಮಹಿಷಾಸುರನ ಪಾತ್ರವನ್ನು ಡಾ.ರಾಜ್ ನಿರ್ವಹಿಸಿದ್ದರೆ, ಚಾಮುಂಡೇಶ್ವರಿಯಾಗಿ ಸಂಧ್ಯಾ ಕಾಣಿಸಿಕೊಂಡಿದ್ದರು. ಉದಯಕುಮಾರ್, ಸಾಹುಕಾರ ಜಾನಿ, ನರಸಿಂಹರಾಜು ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾ ಬಳಗದಲ್ಲಿದ್ದರು. ಇದನ್ನೂ ಓದಿ: ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ಈ ಸಿನಿಮಾ ಹಲವು ಪ್ರಥಮಗಳಿಗೆ ಕಾರಣವೂ ಆಯಿತು. ಈ ಸಿನಿಮಾದ ಮೂಲಕ ಡಾ.ರಾಜ್ ಕುಮಾರ್ ಅವರು ಗಾಯಕರಾಗಿ ಸಿನಿಮಾ ರಂಗಕ್ಕೆ ಪರಿಚಯವಾದರು. ಆ ಕಾಲದಲ್ಲೇ ಈ ಸಿನಿಮಾ ಬೆಂಗಳೂರಿನಲ್ಲಿ ನೂರು ದಿನಗಳ ಪ್ರದರ್ಶನ ಕಂಡಿತು. ಮದರಾಸಿನ ವಿಕ್ರಂ ಸ್ಟುಡಿಯೋದಲ್ಲಿ ಚಿತ್ರೀಖರಣಗೊಂಡ ಮೊಟ್ಟ ಮೊದಲ ಸಿನಿಮಾ ಕೂಡ ಇದಾಗಿದೆ. ನಿರ್ಮಾಪಕರಾದ ಬಿ.ಎಸ್.ರಂಗಾ ಅವರು ನಿರ್ಮಾಣ ಮಾಡುವುದರ ಜತೆಗೆ ಸಿನಿಮಾಟೋಗ್ರಾಫರ್ ಆಗಿಯೂ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.