Tag: Naraka Chaturdashi

  • ಮಂತ್ರಾಲಯ ರಾಯರ ಮಠದಲ್ಲಿ ನರಕಚತುರ್ದಶಿ ಸಂಭ್ರಮ: ಶ್ರೀಗಳಿಂದ ವಿಶೇಷ ಪೂಜೆ

    ಮಂತ್ರಾಲಯ ರಾಯರ ಮಠದಲ್ಲಿ ನರಕಚತುರ್ದಶಿ ಸಂಭ್ರಮ: ಶ್ರೀಗಳಿಂದ ವಿಶೇಷ ಪೂಜೆ

    ರಾಯಚೂರು: ನರಕಚತುರ್ದಶಿಯ ಪ್ರಯುಕ್ತ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿಯ (Mantralaya Sri Guru Raghavendra Swami) ಶ್ರೀ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.

    ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿದರು.ಇದನ್ನೂ ಓದಿ:ಕೊಪ್ಪಳದಲ್ಲೂ ಭುಗಿಲೆದ್ದ ವಿವಾದ – ಜಿಲ್ಲೆಯ ಹಲವು ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು

    ಶ್ರೀ ರಾಯರು ಮತ್ತು ಮಠದ ಇತರ ಬೃಂದಾವನಗಳು ಹಾಗೂ ಮೂಲ ಬೃಂದಾವನಗಳಿಗೆ ಗೋಪೂಜೆ, ತುಳಸಿ ಪೂಜೆ ಮತ್ತು ತೈಲ ಅಭ್ಯಂಜನವನ್ನು ಮಾಡಿದರು.

    ನಂತರ ನರಕೃತ ನೀರಾಜನಂ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮ ಬಳಿಕ ಸುಬುಧೇಂದ್ರ ತೀರ್ಥ ಸ್ವಾಮಿ ಅನುಗ್ರಹ ಸಂದೇಶದ ಮೂಲಕ ನೆರೆದಿದ್ದ ಭಕ್ತರಿಗೆ ಆಶೀರ್ವದಿಸಿದರು.ಇದನ್ನೂ ಓದಿ: IPL Retention | ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ – ಕ್ಯಾಪ್ಟನ್‌ಗಳನ್ನೇ ಹೊರದಬ್ಬುವ ಸಾಧ್ಯತೆ!

  • ನರಕ ಚತುರ್ದಶಿ ಏಕೆ ಆಚರಿಸ್ತಾರೆ?

    ನರಕ ಚತುರ್ದಶಿ ಏಕೆ ಆಚರಿಸ್ತಾರೆ?

    ನರಕ ಚತುರ್ದಶಿ ದೀಪಾವಳಿಯ (Deepavali Festival) 2ನೇ ಮಹತ್ವದ ದಿನವಾಗಿದೆ. ಇದನ್ನು ಪ್ರತಿವರ್ಷ ಕಾರ್ತಿಕ ಮಾಸದ 14ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣ ಮತ್ತು ಸತ್ಯಭಾಮಾ ಇಬ್ಬರೂ ಸೇರಿ ನರಕಾಸುರ ಎಂಬ ರಾಕ್ಷಸನನ್ನು ಸಂಹಾರ (Narakasura Vadha) ಮಾಡಿದರು. ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂದಿತು ಎಂಬ ನಂಬಿಕೆಯಿದೆ. ಇದಕ್ಕೆ ಭಾಗವತ ಪುರಾಣದಲ್ಲಿ ಉಲ್ಲೇಖಗಳಿವೆ ಎನ್ನುತ್ತಾರೆ. ಆದ್ರೆ ಕಾಳಿಕಾ ಪುರಾಣದಲ್ಲಿ ಮಹಾಕಾಳಿ (Mahakali) ಈ ದಿನದಂದು ನರಕಾಸುರನನ್ನು ಸಂಹರಿಸಿದಳು, ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂತು ಎಂಬ ಉಲ್ಲೇಖಗಳಿವೆ.

    ಭಾಗವತಾ ಪುರಾಣ ಕಥೆ ಹೇಳುವಂತೆ, ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ತೊಂದರೆ ಕೊಡುತ್ತಿದ್ದ. ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ. ಇವನ ಆಳ್ವಿಕೆಯಲ್ಲಿ ಸಾಕಷ್ಟು ದೌರ್ಜನ್ಯ ಎಸಗಿದ್ದ, ಜನರಿಗೆ ಮೋಸ ಮಾಡಿದ್ದ. ಭೂಮಿಯ ಮೇಲೆ ತನ್ನದೇ ಆಡಳಿತ ಮಾಡುತ್ತಾ ದುರಹಂಕಾರಕ್ಕೆ ಒಳಗಾಗಿದ್ದ. ನಂತರ ತಾನು ಸ್ವರ್ಗವನ್ನು ಆಳಬೇಕು ಎಂದು ಬಯಸಿದ. ಈ ಬಯಕೆಯ ಪ್ರಯುಕ್ತ ಯುದ್ಧಕ್ಕಾಗಿ ಇಂದ್ರ ದೇವನನ್ನು ಆಹ್ವಾನಿಸಿದನು.

    DEEPAVALI

    ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು. ಅವನು ತಾನು ಜಯಿಸಿ ತಂದಿದ್ದ 16,000 ವಿವಾಹಯೋಗ್ಯ ರಾಜಕನ್ಯೆಯರನ್ನ ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರ ಮಾಡಿದ್ದ. ಈ ವೃತ್ತಾಂತವು ಶ್ರೀಕೃಷ್ಣನಿಗೆ ತಿಳಿದ ಕೂಡಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನನ್ನು ಸಂಹಾರ ಮಾಡಿ, ಸೆರೆಯಲ್ಲಿದ್ದ ರಾಜಕನ್ಯೆಯರನ್ನ ಮುಕ್ತಗೊಳಿಸಿದನು.

    ಏಕೆ ಅಭ್ಯಂಗ ಸ್ನಾನ ಮಾಡಬೇಕು?
    ಕೃಷ್ಣನು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿ ದಿನದಂದು ನರಕಾಸುರನನ್ನು ಸಂಹರಿಸಿದ. 16000 ರಾಜಪುತ್ರಿಯರನ್ನು ಬಂಧನದಿಂದ ಬಿಡಿಸಿ ಬೆಳಗಿನ ಜಾವ ಮನೆಗೆ ಬಂದು ಅಭ್ಯಂಜನ ಸ್ನಾನ ಮಾಡಿದ. ಅಂದಿನಿಂದ ಕೃಷ್ಣ ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ನರಕಾಸುರನನ್ನು ಸಂಹರಿಸಿದಾಗ ದೇಹದ ರಕ್ತದ ಕಲೆಗಳಾಗಿದ್ದರಿಂದ ಅದನ್ನು ಶುಚಿಗೊಳಿಸಲು ಶ್ರೀಕೃಷ್ಣನು ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು. 16000 ರಾಜಪುತ್ರಿಯರು ಕೃಷ್ಣನ ಕಡೆಗೆ ಬಂದು ಕೃತಜ್ಞತೆ ಸಲ್ಲಿಸಿ ಸಂಭ್ರಮದಿಂದ ಕೃಷ್ಣನಿಗೆ ಆರತಿ ಬೆಳಗಿ ಪೂಜಿಸಿದರು.

    ತಾಯಿ ಭೂದೇವಿ ಮಗ ನರಕಾಸುರನನ್ನು ಕಳೆದುಕೊಂಡು ದುಃಖಿಸಿದಳು. ಈ ದಿನವು ನನ್ನ ಮಗನ ಹೆಸರಿನಿಂದ ಆಚರಿಸಲ್ಪಡಲಿ. ಈ ದಿನ ಎಲ್ಲರೂ ನಿನ್ನಂತೆಯೇ ಅಭ್ಯಂಜನ ಸ್ನಾನ ಮಾಡಲಿ ಎಂದು ಕೃಷ್ಣನಲ್ಲಿ ಬೇಡಿದಳು. ಕೃಷ್ಣ ತಥಾಸ್ತು ಎಂದ. ಈ ಕಾರಣಕ್ಕೆ ನರಕಚತುರ್ದಶಿಯಂದು ಜನರು ಅಭ್ಯಂಜನ ಮಾಡುತ್ತಾರೆ. ಬೆಳಗಿನ ಜಾವ ಮಾಡುವ ಅಭ್ಯಂಜನ ಶ್ರಿಕೃಷ್ಣನೊಂದಿಗೆ ಭೂದೇವಿಗೂ ಹಿತಕರ. ಅಂದು ಜನರು ಸೂರ್ಯೋದಯಕ್ಕೂ ಮುಂಚೆ ಎದ್ದು, ಅಭ್ಯಂಗ ಸ್ನಾನ ಮಾಡುತ್ತಾರೆ. ಜೊತೆಗೆ ಬಾಳಿನ ಕತ್ತಲೆಯನ್ನು ತೊಡೆದು ಹಾಕಬೇಕೆಂಬ ನಂಬಿಕೆಯಿಂದ ಮನೆ ಮನೆಯಲ್ಲೂ ದೀಪ ಬೆಳಗಿಸುತ್ತಾರೆ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

    ಅಷ್ಟೇ ಅಲ್ಲದೇ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿಯೂ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲ ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡುವುದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ. ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲೂ ಅಭ್ಯಂಗ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸುತ್ತಾರೆ.

    ಅಂದು ಚಿಕ್ಕಮಕ್ಕಳಾದಿಯಾಗಿ ಎಲ್ಲರೂ ಅಭ್ಯಂಜನ ಸ್ನಾನಮಾಡಿ ಹೊಸವಸ್ತ್ರಗಳನ್ನು ಧರಿಸುತ್ತಾರೆ. ನರಕ ಎಂದರೆ ಅಜ್ಞಾನ. ಚತುರ್ದಶಿ ಎಂದರೆ ಬೆಳಕು. ಅಜ್ಞಾನ ಕಳೆದು ಸುಜ್ಞಾನದ ಬೆಳಕು ದೊರೆಯಲೆಂದೇ ನರಕಚತುರ್ದಶಿಯ ಆಚರಣೆ.

  • ದೀಪಾವಳಿಯಂದು ಎಣ್ಣೆ ಸ್ನಾನ ಮಾಡೋದು ಯಾಕೆ? ನರಕಕ್ಕೆ ಹೋಗಲ್ಲ ಯಾಕೆ?

    ದೀಪಾವಳಿಯಂದು ಎಣ್ಣೆ ಸ್ನಾನ ಮಾಡೋದು ಯಾಕೆ? ನರಕಕ್ಕೆ ಹೋಗಲ್ಲ ಯಾಕೆ?

    ದೀಪಾವಳಿ ಹಿಂದೂಗಳೆಲ್ಲ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಉಳಿದ ಹಬ್ಬಗಳಿಗಿಂತ ವಿಶಿಷ್ಟವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಎಣ್ಣೆನೀರು, ಹೊಸ ಬಟ್ಟೆ, ದೇವರ ಪೂಜೆ, ದೀಪಾಲಂಕಾರ ಹೊಸ ಅಳಿಯನನ್ನು ಹಬ್ಬಕ್ಕೆ ಬರಮಾಡಿಕೊಂಡು ಸತ್ಕರಿಸುವುದು ದೀಪಾವಳಿಯ ವಿಶೇಷತೆ.

    ಮುಂಗಾರು ಬೆಳೆ ಕೊಯ್ಲಿಗೆ ಬರುವ ಕಾಲದಲ್ಲಿ ಈ ಹಬ್ಬ ಬರುತ್ತದೆ. ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೇ ದಿನ ಹಬ್ಬ ನಡೆಯುತ್ತದೆ. ಉತ್ತರ ಭಾರತದಲ್ಲಿ ಇನ್ನೂ ಎರಡು ದಿನ ಹೆಚ್ಚಾಗಿಯೇ ಒಟ್ಟು 5 ದಿನಗಳ ಕಾಲ ಹಬ್ಬ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ದಿವಾಲಿ ಎಂದು ಕರೆಯುತ್ತಾರೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    ದೀಪಾವಳಿಯು ದೀಪಗಳ, ಅರ್ಥಾತ್ ಬೆಳಕಿನ ಹಬ್ಬ. ಕತ್ತಲೆಯನ್ನು ಹೋಗಲಾಡಿಸುವ ಹಬ್ಬ. ಮನೆ ಮನೆಯ, ಮನ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟುಮಾಡುವ ಹಬ್ಬ. ದೀಪಾವಳಿ ನರಕ ಚತುರ್ದಶಿಯಿಂದ ಪ್ರಾರಂಭವಾಗುತ್ತದೆ. ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡಲಾಗುತ್ತದೆ. ಎಣ್ಣೆ ಸ್ನಾನ ಮಾಡುವ ಮಂದಿಗೆ ಯಾಕೆ ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ? ಬೇರೆ ಹಬ್ಬದ ದಿನದಂದು ಯಾಕೆ ಎಣ್ಣೆ ಸ್ನಾನ ಇಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಶ್ರೀಮದ್ಭಾಗವತ ಪುರಾಣ ಕಥೆಯಲ್ಲಿ ಸಿಗುತ್ತದೆ. ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ನರಕಾಸುರನ ಹುಟ್ಟು ಸಾಮಾನ್ಯದ್ದಲ್ಲ. ಶ್ರೀಮನ್ನಾರಾಯಣನು ವರಹಾವತಾರವನ್ನೆತ್ತಿ ಭೂಮಿಯನ್ನು ಉದ್ಧರಿಸಿದ ಬಳಿಕ ಆತನ ಶರೀರದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿಯನ್ನು ಪಡೆಯಿತು. ಈ ಅಕೃತಿಯೇ ಮುಂದೆ ನರಕಾಸುರನಾಗಿ ಬದಲಾಯಿತು.

    ಪ್ರಾಗ್ಜ್ಯೋತಿಷಪುರದಲ್ಲಿ ನರಕಾಸುರ(ಭೌಮಾಸುರ) ರಾಜ್ಯವಾಳುತ್ತಿದ್ದ. ಈತ ದುರುಳತೆಗೂ ಹೆಸರಾದವನು. ಈತನಿಗೆ ಒಮ್ಮೆ ತನ್ನ ಆಯುಸ್ಸು ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಾಯ್ತು. ಬ್ರಹ್ಮನ ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ, “ನನಗೆ ಚಿರಂಜೀವತ್ವದ ವರ ಬೇಡ. ನಾನು ಭೂಮಿ ತಾಯಿಯಿಂದ ಜನಿಸಿದವನು. ನನಗೆ ಆ ತಾಯಿಯಿಂದಲೇ ಸಾವು ಬರುವ ಹಾಗೆ ಮಾಡು” ಎಂದ. ಪ್ರತ್ಯಕ್ಷನಾದ ಬ್ರಹ್ಮ ಈತನ ಬೇಡಿಕೆಯನ್ನು ಈಡೇರಿಸಿ ತಥಾಸ್ತು ಎಂದ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ಭೂಮಿಯ ಅರಸರನ್ನು ಸೋಲಿಸಿ ಅವರ ಸಂಪತ್ತನ್ನು ದೋಚಿದ ನರಕಾಸುರ ದೇವಲೋಕದ ಸ್ತ್ರೀಯರನ್ನೆಲ್ಲ ತನ್ನ ಜೊತೆಗೆ ಬಲವಂತವಾಗಿ ಸೆಳೆದೊಯ್ದ. ಈ ವೇಳೆ ತಾಯಿ ಅದಿತೀ ದೇವಿಯ ಕರ್ಣಾಭರಣಗಳು ಆತನನ್ನು ಆಕರ್ಷಿಸಿದವು. ಅದನ್ನು ಕತ್ತರಿಸಿ ತನ್ನ ವಶಕ್ಕೆ ತೆಗೆದುಕೊಂಡು ಹೋದ. ಇತ್ತ ಖಾಲಿ ಕಿವಿಯಲ್ಲಿ ಅಳುತ್ತಾ ಅದಿತಿಯು ಸತ್ಯಭಾಮೆ ಇರುವಲ್ಲಿಗೆ ಬಂದು ತನ್ನ ತಮ್ಮವರ ವ್ಯಥೆಯನ್ನು ಹೇಳುತ್ತಾಳೆ.

    ಹದಿನಾರು ಸಾವಿರಕ್ಕೂ ಹೆಚ್ಚು ರಾಜ ಕನ್ಯೆಯರನ್ನು ಅಪಹರಿಸಿ ತಂದು, ಅವರನ್ನು ಸೆರೆಮನೆಯಲ್ಲಿ ಇಟ್ಟು, ಅವರನ್ನು ಮದುವೆಯಾಗಲು ಮುಂದಾದನು. ಇದರಿಂದ ಎಲ್ಲೆಡೆ ಹಾಹಾಕಾರವಾಗತೊಡಗಿತು. ನರಕಾಸುರ ದುಷ್ಟ ಕೃತ್ಯವನ್ನು ಸತ್ಯಭಾಮೆ ಕೃಷ್ಣನಿಗೆ ತಿಳಿಸುತ್ತಾಳೆ. ವಿಷಯ ತಿಳಿದು ಕೃಷ್ಣ ನರಕಾಸುರನ ವಿರುದ್ಧ ಯುದ್ಧ ಸಾರುತ್ತಾನೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ 5 ದಿನ ದೀಪಾವಳಿ – ಯಾವ ದಿನ ಯಾವ ಹಬ್ಬ?

    ಯುದ್ಧಕ್ಕೆ ಹೋಗುವ ಮೊದಲು ಸತ್ಯಭಾಮೆ ಬಳಿ ಕೃಷ್ಣ, “ಈ ಹಿಂದೆ ನಾನು ಯುದ್ಧಕ್ಕೆ ಹೋಗುತ್ತಿದ್ದಾಗ ನೀನು ಸಹ ನನ್ನ ಜೊತೆ ಬರುತ್ತೇನೆ ಎಂದು ಹಂಬಲಿಸಿದ್ದೆ. ಇಲ್ಲಿಯವರೆಗೆ ಆ ಅವಕಾಶ ಸಿಕ್ಕಿರಲಿಲ್ಲ. ಈಗ ಆ ಸುಯೋಗ ಬಂದಿದೆ. ನಾವಿಬ್ಬರೂ ಜೊತೆಯಾಗಿ ಹೋಗೋಣ” ಎಂದು ಹೇಳುತ್ತಾನೆ. ಕೃಷ್ಣನ ಮಾತಿಗೆ ಒಪ್ಪಿ ಸತ್ಯಭಾಮೆಯೂ ಯುದ್ಧಕ್ಕೆ ಧುಮುಕಿದಳು. ಭಯಕಂಕರ ಕಾದಾಟದಲ್ಲಿ ನರಕಾಸುರ ಬಿಟ್ಟ ಬಾಣಕ್ಕೆ ಕೃಷ್ಣ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಕೃಷ್ಣ ಕೆಳಗಡೆ ಬಿದ್ದಿರುವುದನ್ನು ನೋಡಿ ದಿಕ್ಕು ತೋಚದೆ ಸತ್ಯಭಾಮೆಯೇ ಹೋರಾಟ ಮಾಡಿ ಬಾಣ ಪ್ರಯೋಗಿಸಿ ನರಕಾಸುರನನ್ನು ಕೊಲ್ಲುತ್ತಾಳೆ.

    ತನ್ನ ಕೊನೆಯುಸಿರು ಎಳೆಯುವಾಗ ನರಕಾಸುರನು ಶ್ರೀ ಕೃಷ್ಣನಲ್ಲಿ ಒಂದು ವರವನ್ನು ಕೇಳುತ್ತಾನೆ. ‘ಈ ದಿನ ಯಾರು ಅಭ್ಯಂಗ ಸ್ನಾನವನ್ನು ಮಾಡುತ್ತಾರೋ ಅವರಿಗೆ ನರಕ ಪ್ರಾಪ್ತಿಯಾಗಬಾರದು’ ಎಂದು ಕೇಳಿಕೊಳ್ಳುತ್ತಾನೆ.

    ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಆವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ಅಭ್ಯಂಗ ಸ್ನಾನ ಮಾಡಿಸಲಾಯಿತು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

    ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳ (ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ) ಹೆಸರು ಹೇಳುತ್ತಾರೆ. ಕಾರಣ ಮನೆಯಲ್ಲಿರುವ ಮಕ್ಕಳು ಮತ್ತು ಕುಟುಂಬದ ಸದಸ್ಯರ ಆರೋಗ್ಯ ಆಯುಷ್ಯ ಚೆನ್ನಾಗಿರಲಿ ಎಂದು ಸ್ನಾನದ ಸಮಯದಲ್ಲಿ ಚಿರಂಜೀವಿಗಳ ಹೆಸರು ಇರುವ ಶ್ಲೋಕವಾದ ಅಶ್ವತ್ಥಾಮೋ ಬಲಿವ್ರ್ಯಾಸೋ ಹನೂಮಾಂಶ್ಚ ವಿಭೀಷಣಃ |.ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || ಹೇಳಿ ಪ್ರಾರ್ಥಿಸಲಾಗುತ್ತದೆ.

    ಸ್ನಾನ ಮಾಡುವ ಮುನ್ನ ಎಣ್ಣೆಯನ್ನು ಏಳು ಚುಕ್ಕಿಗಳಾಗಿ ನಿಮ್ಮ ಉಂಗುರ ಬೆರಳಿನ ಮೂಲಕ ಇರಿಸಿ. ನಂತರ ಶ್ಲೋಕ ಹೇಳುತ್ತಾ, ಏಳು ಚುಕ್ಕಿಗಳನ್ನು ಉಂಗುರು ಬೆರಳಿನ ಮೂಲಕ ಅಳಿಸಿ, ಎಣ್ಣೆಯನ್ನು ನಿಮ್ಮ ತಲೆಯಲ್ಲಿರುವ ಸುಳಿಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ನಂತರ ಮಡಿಯಿಂದ ನಿಮ್ಮ ನಿಮ್ಮ ಕುಲದೇವತೆಗಳನ್ನು ಪ್ರಾರ್ಥನೆ ಮಾಡಬೇಕು.

    ಕಾರ್ತಿಕ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳು ದೀಪಾರಾಧನೆ ಮಾಡಬೇಕು. ಒಂದು ತಿಂಗಳ ದೀಪಾರಾಧನೆಯಿಂದ ನಿಮ್ಮ ಅಭಿವೃದ್ಧಿ ಜ್ಯೋತಿಯಂತೆ ಬೆಳಗುತ್ತದೆ.

    https://www.youtube.com/watch?v=bdq-b9Difjs

  • ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

    ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

    ದೀಪಾವಳಿಯನ್ನು ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯರೆಲ್ಲರೂ ಎಣ್ಣೆ ಸ್ನಾನ ಮಾಡಲೇಬೇಕು. ದೀಪಾವಳಿಯ ಮೊದಲ ದಿನ ನರಕ ಚರ್ತುದಶಿಯನ್ನು ಕೆಲವು ಭಾಗಗಳಲ್ಲಿ ನೀರು ತುಂಬುವ ಹಬ್ಬ ಅಂತಲೂ ಕರೆಯುತ್ತಾರೆ. ಮನೆಯ ಎಲ್ಲ ಪಾತ್ರೆಗಳಲ್ಲಿ ಅಂದು ಮಡಿಯಿಂದ ನೀರು ತುಂಬಲಾಗುತ್ತದೆ.

    ಎಣ್ಣೆ ಸ್ನಾನ ಮಾಡುವ ಮಂದಿಗೆ ಯಾಕೆ ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ? ಬೇರೆ ಹಬ್ಬದ ದಿನದಂದು ಯಾಕೆ ಎಣ್ಣೆ ಸ್ನಾನ ಇಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಪುರಾಣ ಕಥೆಯಲ್ಲಿ ಸಿಗುತ್ತದೆ.

    ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ. ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.

    ದೇವತೆಗಳಿಗೆ ಅಭಯನ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ. ವಾಮನ ಮಹಾರಾಜನ ಬಳಿ,”ತನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬೇಹುದೇ?” ಎಂದು ಕೇಳುತ್ತಾನೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    ಪ್ರಜಾಪರಿಪಾಲನೆಯಲ್ಲಿ ಯಶಸ್ವಿಕಂಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ನನಗಿಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ,”ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ” ಎಂದು ವಚನವನ್ನು ಕೊಡುತ್ತಾನೆ.

    ಸ್ಥಳವನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಇಡು ಎಂದು ಹೇಳುತ್ತಾನೆ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ಶ್ರೀಮನ್ನಾರಾಯಣ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನನ್ನ ಮಕ್ಕಳಂತೆ ನಾನು ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಇದನ್ನೂ ಓದಿ:  ದೀಪಾವಳಿ ಹಬ್ಬದ ಆಚರಣೆ ಹಾಗೂ ಅದರ ಮಹತ್ವ ಏನು?

    https://www.youtube.com/watch?v=bdq-b9Difjs&t=182s

    ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ. ಇದನ್ನೂ ಓದಿ: ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

    ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳ (ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ) ಹೆಸರು ಹೇಳುತ್ತಾರೆ. ಕಾರಣ ಮನೆಯಲ್ಲಿರುವ ಮಕ್ಕಳು ಮತ್ತು ಕುಟುಂಬದ ಸದಸ್ಯರ ಆರೋಗ್ಯ ಆಯುಷ್ಯ ಚೆನ್ನಾಗಿರಲಿ ಎಂದು ಸ್ನಾನದ ಸಮಯದಲ್ಲಿ ಚಿರಂಜೀವಿಗಳ ಹೆಸರು ಇರುವ ಶ್ಲೋಕವಾದ ಅಶ್ವತ್ಥಾಮೋ ಬಲಿವ್ರ್ಯಾಸೋ ಹನೂಮಾಂಶ್ಚ ವಿಭೀಷಣಃ |. ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || ಹೇಳಲಾಗುತ್ತದೆ.

    ಸ್ನಾನ ಮಾಡುವ ಮುನ್ನ ಎಣ್ಣೆಯನ್ನು ಏಳು ಚುಕ್ಕಿಗಳಾಗಿ ನಿಮ್ಮ ಉಂಗುರ ಬೆರಳಿನ ಮೂಲಕ ಇರಿಸಿ. ನಂತರ ಶ್ಲೋಕ ಹೇಳುತ್ತಾ, ಏಳು ಚುಕ್ಕಿಗಳನ್ನು ಉಂಗುರು ಬೆರಳಿನ ಮೂಲಕ ಅಳಿಸಿ, ಎಣ್ಣೆಯನ್ನು ನಿಮ್ಮ ತಲೆಯಲ್ಲಿರುವ ಸುಳಿಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ನಂತರ ಮಡಿಯಿಂದ ನಿಮ್ಮ ನಿಮ್ಮ ಕುಲದೇವತೆಗಳನ್ನು ಪ್ರಾರ್ಥನೆ ಮಾಡಬೇಕು. ಭೂಲೋಕದ ಸಂಚಾರಕ್ಕೆ ಬಂದಿರುವ ಬಲೀಂದ್ರನನ್ನು ಆಹ್ವಾನಿಸಬೇಕು.

    https://www.facebook.com/publictv/videos/3012367555654021/

    ಕಾರ್ತಿಕ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳು ದೀಪಾರಾಧನೆ ಮಾಡಬೇಕು. ಒಂದು ತಿಂಗಳ ದೀಪಾರಾಧನೆಯಿಂದ ನಿಮ್ಮ ಅಭಿವೃದ್ಧಿ ಜ್ಯೋತಿಯಂತೆ ಬೆಳಗುತ್ತದೆ. ಪಟಾಕಿ ಹೊಡೆಯುವ ಬದಲು ದೀಪಗಳನ್ನು ಹಚ್ಚಿ, ನಿಮ್ಮ ಅನಕೂಲಕ್ಕೆ ತಕ್ಕಂತೆ ದೀಪಗಳನ್ನು ದಾನ ಮಾಡಬಹುದು