Tag: Naragunda

  • ತಲೆ ಮೇಲೆ ಹರಿದ ಸರ್ಕಾರಿ ಬಸ್- ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ತಲೆ ಮೇಲೆ ಹರಿದ ಸರ್ಕಾರಿ ಬಸ್- ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಗದಗ: ಸರ್ಕಾರಿ ಬಸ್ ತಲೆ ಮೇಲೆ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ನರಗುಂದ (Naragunda) ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

    ರಾಘವೇಂದ್ರ ಮನಿಕಟ್ಟಿ (20) ಮೃತ ವಿದ್ಯಾರ್ಥಿ. ಶಕ್ತಿಯೋಜನೆ ಪ್ರಭಾವದಿಂದ ಬಸ್ ಪೂರ್ತಿ ಪ್ರಯಾಣಿಕರು ತುಂಬಿದ್ದರು. ರಾಘವೇಂದ್ರ ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತಿದ್ದ. ಬಸ್ ಕೊಣ್ಣೂರ (Konnur) ನಿಲ್ದಾಣದಿಂದ ಹೊರಡುವ ವೇಳೆ ತಿರುವಿನಲ್ಲಿ ಆಯಾತಪ್ಪಿ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಬಸ್ಸಿನ ಹಿಂದಿನ ಚಕ್ರಗಳಿಗೆ ವಿದ್ಯಾರ್ಥಿ ಸಿಲುಕಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲಾಬಿ ಎಟಿಎಂ ಮಷಿನ್‌ನಲ್ಲಿ ಹಣ ಹಾಕಲು ಬಂದು 39,500 ರೂ. ಕಳೆದುಕೊಂಡ ವ್ಯಕ್ತಿ

    ಕೊಣ್ಣೂರ ನರಗುಂದ ಪಟ್ಟಣದ ಸರ್ಕಾರಿ ಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ರಾಘವೇಂದ್ರ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗದಿಂದ ಕೊಣ್ಣೂರ, ನರಗುಂದ, ಗದಗ ಮಾರ್ಗವಾಗಿ ಹೊಸಪೇಟೆಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್, ಮಿತ್ರಪಕ್ಷಗಳಿಂದ ಪಿಹೆಚ್‌ಡಿ: ಮೋದಿ ವಾಗ್ದಾಳಿ

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ (Gadaga) ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Kalaburagi| ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

  • ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು

    ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು

    ಗದಗ: ಲಾರಿ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಾಯಗೊಂಡಿರುವ ದಾರುಣ ಘಟನೆ ಗದಗ (Gadaga) ಜಿಲ್ಲೆ ನರಗುಂದ (Naragunda) ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

    ಬಾಗಲಕೋಟೆ ಮೂಲದ ಸಿದ್ದರಾಮ ಹಾಗೂ ಹೇಮಾ ಮೃತ ದಂಪತಿ. ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾ ಗಾಯಾಳುಗಳು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: MUDA Case: ಇಂದು ಮೈಸೂರು ‘ಲೋಕಾ’ ಕಚೇರಿಯಲ್ಲಿ ಸಿಎಂ ವಿಚಾರಣೆ

    ಮೃತ ಕುಟುಂಬಸ್ಥರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ. ಲಾರಿ ಹುಬ್ಬಳ್ಳಿ ಕಡೆಗೆ ಹೊರಟಿತ್ತು, ಕಾರು ಬಾಗಲಕೋಟೆಗೆ ಹೊರಟಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನಕ್ಕೆಂದು ಹೋದವರು ಶಾಶ್ವತವಾಗಿ ದೇವರ ಪಾದ ಸೇರಿದ್ದಾರೆ. ಮಕ್ಕಳು ಅನಾಥರಾಗಿದ್ದು ನಿಜಕ್ಕೂ ದುರಂತವೆ ಸರಿ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಡ್ರೈ ಪೋರ್ಟ್ ಎಂದರೇನು?  ಬಿಹಾರದಲ್ಲಿ ಅದರ ಅವಶ್ಯಕತೆ ಏನಿತ್ತು? 

  • 5ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ

    5ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ

    ಗದಗ: 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿರುವ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ (Naragunda Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಸರ್ಕಾರಿ ಉರ್ದು ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಅಲ್ಲಿಯ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಶಾಲಾ ಅವಧಿ ಮುಗಿದ ನಂತರ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯನ್ನು ತನ್ನ ಕಚೇರಿಗೆ ಕರೆಸಿಕೊಳ್ಳುತ್ತಿದ್ದ. ಶನಿವಾರ ಸಹ ಮನೆಗೆ ತಡವಾಗಿ ಹೋಗುವಂತೆ ಹೇಳಿ ತನ್ನ ಆಫೀಸ್‌ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ. ಈ ವಿಷಯ ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದ ಎಂದು ಆರೋಪಿಸಲಾಗಿದೆ.

    ಇದಾದ ಬಳಿಕ ಬಾಲಕಿ ಇನ್ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಮನೆಯವರ ಬಳಿ ಅಳುತ್ತಾ ಹೇಳಿದ್ದಾಳೆ. ಈ ಬಗ್ಗೆ ಪೋಷಕರು ಯಾಕೆ, ಏನು ಎಂದು ವಿಚಾರಿಸಿದಾಗ ಮುಖ್ಯ ಶಿಕ್ಷಕನ ಕಾಮ ಪುರಾಣವನ್ನು ಬಾಲಕಿ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ನಂತರ ಬಾಲಕಿಯ ಕುಟುಂಬಸ್ಥರು ಸಹಾಯವಾಣಿ ಮೂಲಕ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ- ಕಡಲತೀರದಲ್ಲಿ ರಾಶಿ ರಾಶಿ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ – ತಾಯಿ ನೇಣಿಗೆ ಶರಣು

    ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ – ತಾಯಿ ನೇಣಿಗೆ ಶರಣು

    ಗದಗ: ಪ್ರೀತಿಸಿದ ಯುವಕನೊಂದಿಗೆ ಮಗಳು ಮನೆ ತೊರೆದು ಹೋಗಿದ್ದಕ್ಕೆ ಬೇಸತ್ತ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೋಳದಲ್ಲಿ ನಡೆದಿದೆ.

    ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿದ್ದ ಸುನೀತಾ ವೀರಣ್ಣ ನಾಯಕವಾಡಿ (48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಅನೇಕ ತಿಂಗಳಿಂದ ಅದೇ ಊರಿನ ಯುವಕನೊಬ್ಬನನ್ನು ಮಗಳು ಪ್ರೀತಿಸುತ್ತಿದ್ದಳು. ಯುವಕ ಅನ್ಯ ಜಾತಿಯವನು ಎಂಬ ಕಾರಣಕ್ಕೆ ಸುನಿತಾ ಮಗಳ ನಿರ್ಧಾರವನ್ನು ಒಪ್ಪಿರಲಿಲ್ಲ. ಇದನ್ನೂ ಓದಿ: ಸದನದಲ್ಲಿ ಸಿದ್ದರಾಮಯ್ಯ-ಹೆಚ್‌ಡಿಕೆ ಮಧ್ಯೆ ಬೆಂಕಿ ಫೈಟ್‌

    ಇತ್ತೀಚೆಗೆ ಯುವತಿ ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದಳು. ಇದರಿಂದ ಬೇಸರಕ್ಕೊಳಗಾಗಿದ್ದ ಸುನೀತಾ ಅದೇ ಕೊರಗಿನಲ್ಲಿದ್ದರು ಎನ್ನಲಾಗಿದೆ. ಇದೀಗ ಸಹೋದರಿಯ ಮನೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಈ ಸಂಬಂಧ ನರಗುಂದ (Naragunda) ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯದ ಹಣ ವರ್ಗಾವಣೆ – ಷರತ್ತು ವಿಧಿಸಿದ ಸರ್ಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೂ ಕುಸಿತದಿಂದ ಮಣ್ಣಿನ ಅವಶೇಷದಡಿ ಸಿಲುಕಿದ್ದ ಬಾಲಕಿಯ ರಕ್ಷಣೆ

    ಭೂ ಕುಸಿತದಿಂದ ಮಣ್ಣಿನ ಅವಶೇಷದಡಿ ಸಿಲುಕಿದ್ದ ಬಾಲಕಿಯ ರಕ್ಷಣೆ

    ಗದಗ: ಭೂ ಕುಸಿತದಿಂದ ಮನೆಯ ಒಳಾಂಗ ಕುಸಿತವಾಗಿ ಮಣ್ಣಿನ ಅವಶೇಷದಡಿ ಸಿಲುಕಿ ನರಳಾಡಿದ್ದ ಬಾಲಕಿಯ ರಕ್ಷಣೆ ಮಾಡಿರುವ ಘಟನೆ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಕುರಬಗೇರಿ ಪ್ರದೇಶದ ನಿಂಗಪ್ಪ ನುಗ್ಗಾನಟ್ಟಿ ಎಂಬುವರ ಮನೆಯಲ್ಲಿ ಭೂಕುಸಿತವಾಗಿ, ಸ್ವಲ್ಪ ಭಾಗ ಮನೆಯ ಒಳಾಂಗಣ ಸಹ ಕುಸಿದಿದೆ. ಈ ವೇಳೆ ಮನೆಯ ಮುಂಗಾದಲ್ಲಿದ್ದ 14 ವರ್ಷದ ಕಾವ್ಯಾ ನುಗ್ಗಾನಟ್ಟಿ ಮಣ್ಣಿನ ಅವಶೇಷಗಳಡಿ ಸಿಲುಕಿ ಸುಮಾರು ಎರಡು ಗಂಟೆ ನರಳಾಡಿದ್ದಳು.

    ಮನೆ ಕುಸಿದ ತಕ್ಷಣ ಬಾಲಕಿಯ ರಕ್ಷಣೆಗೆ ಕಾರ್ಯಪ್ರವೃತ್ತರಾದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಬಾಲಕಿಯ ಮೇಲೆ ಬಿದ್ದ ಕಲ್ಲು, ಮಣ್ಣು, ಕಟ್ಟಿಗೆಗಳನ್ನ ತೆರುವುಗೊಳಿಸಿ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಬಾಲಕಿ ಕಾವ್ಯಾ ಬದುಕುಳಿದಿದ್ದಾಳೆ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂ ಕುಸಿತದ ಅನೇಕ ದುರ್ಘಟನೆಗಳು ಸಂಭವಿಸುತ್ತಲೇ ಇವೆ. ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅಂತರ್ಜಲ ಹೆಚ್ಚಳದಿಂದ ಪದೇ ಪದೇ ಭೂಕುಸಿತವಾಗುತ್ತಿದೆ ಎನ್ನುವ ಕಾರಣ ಒಂದಾದರೆ, ನರಗುಂದ ಬಾಬಾಸಾಹೇಬ್ ಆಳ್ವಿಕೆಯ ಸುರಂಗ ಮಾರ್ಗಗಳಿದ್ದವು ಮತ್ತು ದವಸ-ಧಾನ್ಯಗಳನ್ನು ಸಂಗ್ರಹಿಸಿಡಲು ಕಣಿಜಗಳಿದ್ದವು ಎನ್ನಲಾಗುತ್ತಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಸಿ.ಸಿ ಪಾಟೀಲ್ ತವರಲ್ಲೆ ಭೂಕುಸಿತ ಆಗುತ್ತಿದ್ದರೂ ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

     

  • ನರಗುಂದದಲ್ಲಿ 20 ಅಡಿಯಷ್ಟು ಭೂಮಿ ಕುಸಿತ- ಜನರಲ್ಲಿ ಆತಂಕ

    ನರಗುಂದದಲ್ಲಿ 20 ಅಡಿಯಷ್ಟು ಭೂಮಿ ಕುಸಿತ- ಜನರಲ್ಲಿ ಆತಂಕ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮನೆಯ ಮುಂದೆ ಭೂ ಕುಸಿತವಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತವರಲ್ಲೇ ಭೂ ಕುಸಿತ ಸಂಭವಿಸಿದೆ. ಜಿಲ್ಲೆಯ ನರಗುಂದದ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆಯವರ ಮನೆ ಮುಂದೆ ಭೂಮಿ ಕುಸಿದಿದೆ. ಬೆಳಗ್ಗೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಬಾರಿ ಅನಾಹುತ ತಪ್ಪಿದೆ. ಸುಮಾರು 20 ಅಡಿಯಷ್ಟು ಭೂಮಿ ಕುಸಿತವಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

    ಅಂತರ್ಜಲ ಹೆಚ್ಚಳ, ನರಗುಂದ ಬಾಬಾಸಾಹೇಬ್ ಆಳ್ವಿಕೆಯ ಸುರಂಗ ಮಾರ್ಗ, ಧಾನ್ಯಗಳ ಸಂಗ್ರಹಣೆಗೆ ತೆಗೆದ ಕಣಿಜ ಇರಬಹುದು. ಹೀಗಾಗಿ ಭೂಮಿ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಭೂ ತಜ್ಞರಿಂದಲೂ ಸ್ಪಷ್ಟನೆ ಸಿಗುತ್ತಿಲ್ಲ. ಘಟನೆ ನಡೆದ ವಿಷಯ ತಿಳಿದ ನರಗುಂದ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ಇದೇ ಕ್ಷೇತ್ರದವರಾಗಿರುವುದರಿಂದ ಕಾಳಜಿ ವಹಿಸಿ ಇದರಿಂದ ಮುಕ್ತಿ ಕೊಡಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

  • ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

    ನರಗುಂದದಲ್ಲಿ ಮತ್ತೆ ಭೂಕುಸಿತ – 15 ಅಡಿ ಆಳದಲ್ಲಿ ಸಿಲುಕಿ ನರಳಾಡಿದ ಎತ್ತು

    ಗದಗ: ರೈತರೊಬ್ಬರ ಮನೆ ಮುಂದಿನ ರಸ್ತೆ ಪಕ್ಕದಲ್ಲಿ ಎತ್ತು ಕಟ್ಟಿದ್ದ ಸ್ಥಳದಲ್ಲಿಯೇ ಭೂಕುಸಿತ ಸಂಭವಿಸಿ, 15 ಅಡಿ ಆಳದಲ್ಲಿ ಎತ್ತು ಸಿಲುಕಿಕೊಂಡು ಒದ್ದಾಗಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ದಂಡಾಪೂರ ಮಸೀದಿ ಬಳಿ ನಡೆದಿದೆ.

    ನರಗುಂದ ನಿವಾಸಿ ಸಿದ್ದಪ್ಪ ಕುರಿ ಅವರಗೆ ಸೇರಿದ ಎತ್ತು ಭೂಕುಸಿತದಲ್ಲಿ ಸಿಲುಕಿಕೊಂಡಿತ್ತು. ಸುಮಾರು 15 ಅಡಿಯ ಆಳದವರೆಗೂ ಮಣ್ಣು ಕುಸಿದಿದ್ದು, ಎತ್ತು ಗುಂಡಿಯಲ್ಲಿ ಸಿಲುಕಿಕೊಂಡು ನರಳಾಡಿದೆ. ಎತ್ತು ಕೂಗುತ್ತಿದ್ದ ಶಬ್ಧ ಕೇಳಿ ಹೊರಗೆ ಬಂದ ರೈತ, ಭೂಕುಸಿತ ನೋಡಿ ದಿಗ್ಭ್ರಾಂತರಾಗಿದ್ದಾರೆ. ನಂತರ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳಿಯರು ಭೂಕುಸಿತದ ಗುಂಡಿಯಲ್ಲಿ ಸಿಲುಕಿದ್ದ ಎತ್ತನ್ನು ಮೇಲೆಕ್ಕೆ ಕರೆತರಲು ಹರಸಾಹಸ ಪಟ್ಟಿದ್ದಾರೆ.

    ಘಟನೆ ನಡೆದ ಒಂದು ಗಂಟೆ ನಂತರ ಜೆಸಿಬಿ ಬಳಸಿಕೊಂಡು ಎತ್ತನ್ನು ರಕ್ಷಣೆ ಮಾಡಲಾಯಿತು. ಸ್ಥಳೀಯರು, ಅಗ್ನಿಶಾಮಕದಳ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸಿ ಎತ್ತನ್ನು ರಕ್ಷಣೆ ಮಾಡಿದರು. ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂಕುಸಿತವಾಗುತ್ತಿದ್ದು, ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.

  • ಡಿವೈಡರ್‌ಗೆ ಬೈಕ್ ಡಿಕ್ಕಿ- ಗೆಳೆಯನ ಜೊತೆಗೆ ಪ್ರವಾಸ ಕೈಗೊಂಡಿದ್ದ ಪ್ರೇಮಿ ಸಾವು

    ಡಿವೈಡರ್‌ಗೆ ಬೈಕ್ ಡಿಕ್ಕಿ- ಗೆಳೆಯನ ಜೊತೆಗೆ ಪ್ರವಾಸ ಕೈಗೊಂಡಿದ್ದ ಪ್ರೇಮಿ ಸಾವು

    ಗದಗ: ಸವಾರನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನರಗುಂದ ಹೊರವಲಯದಲ್ಲಿ ನಡೆದಿದೆ.

    ಮಹಾರಾಷ್ಟ್ರ ರಾಜ್ಯ ಪುಣೆ ಮೂಲದ ರತ್ನಮಾಲಾ (21) ಮೃತ ದುರ್ದೈವಿ. ಈ ಘಟನೆಯಲ್ಲಿ ನಿಖಿಲ್ ಹಾತಪಡೆ (25)ತಲೆಗೆ ಪೆಟ್ಟು ಬಿದ್ದಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.

    ನಿಖಿಲ್ ಹಾಗೂ ರತ್ನಮಾಲಾ ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿಯು ಕರ್ನಾಟಕದ ಐತಿಹಾಸಿಕ ಸ್ಥಳಗಳ ವೀಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದರು. ಮಹಾರಾಷ್ಟ್ರದಿಂದ ಹಂಪಿ, ಬಾದಾಮಿ, ಬನಶಂಕರಿ ವೀಕ್ಷಿಸಿದ್ದ ಪ್ರೇಮಿಗಳು ನರಗುಂದ ಮಾರ್ಗವಾಗಿ ಹುಬ್ಬಳ್ಳಿ ಹೊರಟಿದ್ದರು. ಆದರೆ ವೇಗವಾಗಿ ಬೈಕ್ ಓಡಿಸುತ್ತಿದ್ದ ಪರಿಣಾಮ ನರಗುಂದ ಹೊರವಲಯದಲ್ಲಿ ಸವಾರನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

    ರತ್ನಮಾಲಾ ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಖಿಲ್ ತಲೆಗೂ ಹೊಡೆತ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರೇಮಿಗಳನ್ನು ರಕ್ಷಿಸಲು ಸಹಾಯ ಮಾಡಿ ಮಾನವೀಯತೆ ಮೆರದಿದ್ದಾರೆ. ನಿಖಿಲ್ ಸ್ಥಿತಿ ಚಿಂತಾಚನಕವಾಗಿದ್ದರಿಂದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಾಗಿದೆ. ಈ ಕುರಿತು ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ – ಮಣ್ಣಿನಡಿ ಸಿಲುಕಿತು ಮನೆಮುಂದಿದ್ದ ಟ್ರ್ಯಾಕ್ಟರ್

    ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ – ಮಣ್ಣಿನಡಿ ಸಿಲುಕಿತು ಮನೆಮುಂದಿದ್ದ ಟ್ರ್ಯಾಕ್ಟರ್

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಮನೆಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಭೂಕುಸಿತದಲ್ಲಿ ಸಿಲುಕಿದ ಘಟನೆ ನಡೆದಿದೆ.

    ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಭೂಕುಸಿತ ಸಂಭವಿಸಿದೆ. ಕಸಬಾ ಓಣಿಯ ನಿವಾಸಿ ಮಹಾಂತೇಶಗೌಡ, ಪ್ರಭುಗೌಡ ಅವರ ಮನೆ ಮುಂಭಾಗದಲ್ಲಿ ಭೂಮಿ ಕುಸಿದಿದೆ. ಪರಿಣಾಮ ಆ ಸ್ಥಳದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮಣ್ಣಿನಡಿ ಸಿಲುಕಿಕೊಂಡಿತ್ತು. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಆಳಕ್ಕೆ ಇಳಿಯುತ್ತಿದ್ದ ಟ್ರ್ಯಾಕ್ಟರ್‌ನನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆ ಎತ್ತಿದ್ದಾರೆ. ಇದನ್ನೂ ಓದಿ:ದಿಢೀರ್ ಭೂಕುಸಿತ – 10 ಅಡಿ ಗುಂಡಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ

    2 ವಾರದ ಹಿಂದೆ ಕೂಡ ನರಗುಂದ ಕಸಬಾ ಓಣಿಯಲ್ಲಿ ಭೂಕುಸಿತವಾಗಿತ್ತು. ಈ ವೇಳೆ ರತ್ನಾಕರ ದೇಶಪಾಂಡೆ ಎಂಬವರು ಗುಂಡಿಯಲ್ಲಿ ಸಿಲುಕಿಕೊಂಡಿದ್ದರು. ರತ್ನಾಕರ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಹೂ ಕಿತ್ತು ತರುವ ವೇಳೆ ದಿಢೀರ್ ಭೂ ಕುಸಿತವಾಗಿತ್ತು. ಪರಿಣಾಮ ರತ್ನಾಕರ ಅವರು ಸುಮಾರು 10 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ಅವರ ನರಳಾಟ, ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ರಕ್ಷಣೆ ಮಾಡಿದ್ದರು.

    ದೇಶಪಾಂಡೆ ಅವರನ್ನು ಏಣಿ ಹಾಗೂ ಹಗ್ಗದ ಮೂಲಕ ಮೇಲೆ ಎತ್ತಿದ್ದರು. ನರಗುಂದ ಪಟ್ಟಣದಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 15 ಕಡೆಗಳಲ್ಲಿ ಭೂಕುಸಿತವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

  • ಗದಗದಲ್ಲಿ ನಿಲ್ಲದ ಪ್ರವಾಹ ಪೀಡಿತರ ಕಣ್ಣೀರು – ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

    ಗದಗದಲ್ಲಿ ನಿಲ್ಲದ ಪ್ರವಾಹ ಪೀಡಿತರ ಕಣ್ಣೀರು – ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

    -ಸಂತ್ರಸ್ತರ ಬಾಳ ನೋವಿನ ಪಯಣದ ಬುತ್ತಿ

    ಗದಗ: ನೆರೆ ಬಂದುಹೋದ್ರು ನೆರೆ ಸಂತ್ರಸ್ತರ ಕಣ್ಣಿರು ಮಾತ್ರ ಇನ್ನೂ ನಿಲ್ಲದಾಗಿದೆ. ಆಳುವ ಸರ್ಕಾರಗಳು, ಜನಪ್ರತಿನಿಧಿಗಳು ನೆರೆಸಂತ್ರಸ್ತರನ್ನ ಮರೆತಂತಿದೆ. ಸಂತ್ರಸ್ತ ಮಹಿಳೆಯರ ಸ್ನಾನಸ್ಥಳ, ಶೌಚಾಲಯ, ವಾಸ ಮಾಡುವ ಸ್ಥಳದ ಸ್ಥಿತಿ ನೋಡಿದ್ರೆ ಇಡೀ ಮನುಕುಲವೆ ತಲೆತಗ್ಗಿಸುವಂತಿದೆ. ನೆರೆಬಂದು ಎರಡು ತಿಂಗಳಾದರೂ ನೊಂದ ಜನರ ಧ್ವನಿಯಾಗಬೇಕಾದ ವೋಟುಪಡೆದ ಮಹಾನ್ ಧನಿಗಳು ಎಲ್ಲಿಹೋದ್ರು? ಸಂತ್ರಸ್ತರ ಬಾಳ ನೋವಿನ ಪಯಣದ ಬುತ್ತಿ ಕುರಿತಾದ ಒಂದು ವರದಿ ಇಲ್ಲಿದೆ.

    ಗದಗ ಜಿಲ್ಲೆ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆಯಾಗಿದೆ. ಮಲಪ್ರಭಾ ನದಿಯ ನೆರೆಯಿಂದಾಗಿ ಸಂತ್ರಸ್ತ ಮಹಿಳೆಯರ ಕಷ್ಟ ಹೇಳತೀರದಾಗಿದೆ. ನೆರೆ ಬಂದು 2 ತಿಂಗಳಾದರೂ ಸೂಕ್ತ ವಾಸ್ತವ್ಯ, ಪರಿಹಾರ ಸಿಗದೇ ಮಹಿಳೆಯರು ಪರದಾಡುತ್ತಿದ್ದಾರೆ. ಇದ್ದ ಮನೆ, ಜಮೀನು, ಆಸ್ತಿ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಸಂತ್ರಸ್ತರ ಕರುಳು ಹಿಂಡುವ ಅಸಲಿ ಬದುಕನ್ನು ಬಿಚ್ಚಿಡ್ತಿದೆ.

    ಸಂತ್ರಸ್ತ ಮಹಿಳೆಯರು ಸ್ನಾನ ಮಾಡಬೇಕೆಂದರೆ ಸುತ್ತಲು ಪರದೆಯಂತೆ ಸೀರೆ ಹಿಡಿದು ಮರೆಮಾಡಿ ಸ್ನಾನ ಮಾಡಬೇಕು. ಶೌಚಾಲಯ ಸ್ಥಿತಿ ಇದಕ್ಕಿಂತ ಕೆಟ್ಟದಾಗಿದೆ. ವಯಸ್ಕ ಮಹಿಳೆಯರು ರಾತ್ರಿ ಹೊತ್ತು ನಿದ್ರೆ ಮಾಡಲು ಹೆದರುತ್ತಿದ್ದಾರೆ. ಕತ್ತಲಾದರೆ ಮಹಿಳೆಯರು, ವಯೋವೃದ್ಧರು, ಮಕ್ಕಳು ಗುಡಿಸಲಿನಿಂದ ಹೊರಗೆ ಬರಲಾಗದೇ ಪರದಾಡುವಂತಾಗಿದೆ.

    ಮಲಪ್ರಭೆ ಕೆರಳಿ ಇದ್ದ ಬದುಕು ಕಸಿದು ಕೊಂಡಾಯ್ತು. ಆದರೆ ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಿ ಕೊಡಬೇಕಿದ್ದ ಜನಪ್ರತಿನಿಧಿಗಳು, ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಆದರೆ ನೆರೆಗಿಂತಲೂ ಭೀಕರ ಪರಿಸ್ಥಿತಿ ಎದುರಿಸುತ್ತಿರುವುದು ಸಂತ್ರಸ್ತ ಮಹಿಳೆಯರು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ. ಕಾದು ನೋಡಬೇಕಿದೆ.