Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
Tag: nannamma super star
-

BREAKING: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಕ್ಕೆ ವನ್ಷಿಕಾ ನಿರೂಪಕಿ
‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಮತ್ತು ‘ಗಿಚ್ಚಿ ಗಿಲಿ ಗಿಲಿ’ (Gichi Gili Gili) ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ವನ್ಷಿಕಾ ಅಂಜನಿ ಕಶ್ಯಪ ಮತ್ತೆ ಸುದ್ದಿಯಲ್ಲಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಶೋ ನಂತರ ಇದೀಗ ಮತ್ತೆ ತೆರೆಯ ಮೇಲೆ ಮಿಂಚಲು ವನ್ಷಿಕಾ ರೆಡಿಯಾಗಿದ್ದಾರೆ.

‘ಗಿಚ್ಚಿ ಗಿಲಿ ಗಿಲಿ’ ಶೋ ನಂತರ ಇದೀಗ ಅಭಿಮಾನಿಗಳ ಮುಂದೆ ನಿರೂಪಕಿಯಾಗಿ ಬರಲು ರೆಡಿಯಾಗಿದ್ದಾರೆ. ಹೌದು.. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ಪುಟಾಣಿ ಪ್ರತಿಭೆ ವನ್ಷಿಕಾ (Vanshika anjani kashyapa) ನಿರೂಪಣೆಯ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಇದನ್ನೂ ಓದಿ: `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

ವಿದ್ಯಾಭ್ಯಾಸದ ಜೊತೆ ನಟನೆಯನ್ನು ಸರಿದೂಗಿಸಿಕೊಂಡು ಹೋಗಿರುವ ಬಾಲ ಪ್ರತಿಭೆ ವನ್ಷಿಕಾ, ನಿರೂಪಣೆಯ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಲು ತಯಾರಿ ನಡೆಸುತ್ತಿದ್ದಾರೆ.

ಇನ್ನೂ ಟಿವಿ ಶೋಗಳ ಮೂಲಕ ರಂಜಿಸಿದ್ದ ವನ್ಷಿಕಾ ಇದೀಗ ‘love.. ಲಿ’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ವಶಿಷ್ಠ ಸಿಂಹ (Vasishta N. Simha) ಮಗಳಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true] -

ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!
– ದೂಷಿಸುವವರಲ್ಲಿ ಕೈಮುಗಿದು ಬೇಡ್ಕೊಂಡ ಸಮನ್ವಿ ತಾಯಿ
– ಮಗಳಿಗಾಗಿ ಪ್ರಾರ್ಥಿಸಿ ಅಂತ ಕೈಮುಗಿದ ನಟಿಬೆಂಗಳೂರು: ಪ್ರತಿಯೊಬ್ಬರೂ ಈ ವಿಚಾರವಾಗಿ ಕಾಳಜಿಯ ಮಾತನ್ನಾಡಿದ್ದಾರೆ. ಆದರೆ ಜನರು ಎಲ್ಲೋ ಕೂತು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೀಗಾಗಬೇಕಾಗಿತ್ತು, ಹೀಗೆ ಮಾಡಬಹುದಿತ್ತು ಎನ್ನುವುದು ಸುಲಭ. ತಾಯಿಯಾಗಿ ನನಗೂ ಅನಿಸಿದೆ. ಆ ಸಂದರ್ಭದಲ್ಲಿ ಹೀಗೆ ಮಾಡಬೇಕಾಗಿತ್ತು ಎಂದು ನನಗೂ ಅನಿಸಿದೆ ಎಂದು ಮೃತ ಸಮನ್ವಿ ತಾಯಿ ಅಮೃತಾ ನಾಯ್ಡು ಕಂಬನಿ ಮಿಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಪಘಾತ ಸಂಭವಿಸಿದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟರು. ಅಂದು ಟಿಪ್ಪರ್ ಸಮನ್ವಿಗೆ ಡಿಕ್ಕಿ ಹೊಡೆದು ಆಕೆ ಮೂರ್ಛೆ ತಪ್ಪಿ ಬಿದ್ದಾಗಲೂ ಲಾರಿ ಡ್ರೈವರ್ ಮೇಲೆ ನನಗೆ ಎಳ್ಳಷ್ಟೂ ಕೋಪ ಬಂದಿರಲಿಲ್ಲ. ತಕ್ಷಣ ನನಗೆ ಮನಸ್ಸಿಗೆ ಬಂದಿದ್ದು, ಭಗವಂತನೇ ಇಂತಹ ಸಂದರ್ಭ ಕಲ್ಪಿಸಿ ಕೊಟ್ಟನೇನೋ ಎಂದು. ದೇವರು ಹೀಗೆ ಆಗಬೇಕು ಎಂದು ಮೊದಲೇ ನಿರ್ಧಾರ ಮಾಡಿದ್ದ. ಈ ಘಟನೆ ನಡೆದಿದ್ದು ನಿನ್ನಿಂದ, ನನ್ನಿಂದ ಎನ್ನೋದ್ರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ

ನನ್ನ ನೋವನ್ನು ಅರ್ಥ ಮಾಡಿಕೊಂಡವರು ಈ ಕ್ಷಣ ನನ್ನ ಜೊತೆ ಇದ್ದಾರೆ. ನನ್ನನ್ನು ನೋವಿನಿಂದ ಹೊರಗಡೆ ತರಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ಎಲ್ಲೋ ಕೂತು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಯಾರನ್ನೂ ದೂಷಿಸಬೇಡಿ. ನಾನು ಗರ್ಭಿಣಿಯಾಗಿದ್ದರಿಂದ ಗಾಡಿ ತಗೊಂಡು ಹೋಗಬಾರದಿತ್ತು ಅಂತೆಲ್ಲ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳನ್ನಾಡಿ ನನ್ನ ಮೇಲೆ ಆರೋಪಗಳನ್ನು ಮಾಡಬೇಡಿ ಎಂದು ಕಣ್ಣೀರಾಕುತ್ತಲೇ ಬೇಡಿಕೊಂಡರು.

ಯಾವುದೇ ತಾಯಿ ತನ್ನ ಮಗುವನ್ನು ಬಲಿ ಕೊಡೋದಕ್ಕೆ ಹೋಗಲ್ಲ. ನೋವಲ್ಲಿರೋ ನಮನ್ನ ಈ ರೀತಿ ದೂಷಿಸಿ ಮತ್ತಷ್ಟು ನೋವು ಕೊಡಬೇಡಿ. ಹಲವರು ಇದಕ್ಕೆ ಸಲಹೆ ನೀಡಿದ್ದಾರೆ. ಆದರೆ ಈ ಸಲಹೆಗಳಿಂದ ಸಮನ್ವಿ ಮರಳಿ ಬರಲು ಸಾಧ್ಯವಿಲ್ಲ. ನನ್ನ ಹತ್ತಿರದವರು ಜೊತೆಯಲ್ಲಿದ್ದು ಸಹಾಯ ಮಾಡುತ್ತಾ ಇದ್ದಾರೆ. ಸಾಧ್ಯವಾದರೆ ಅವಳಿಗೆ ಆಶೀರ್ವಾದ ಮಾಡಿ, ಅವಳಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ

ಅಂದು ಏನಾಗಿತ್ತು?
ನನ್ನ ತಾಯಿ ಮನೆ ರಾಜಾಜಿನಗರದಲ್ಲಿದೆ. ಹೀಗಾಗಿ ಅಷ್ಟು ದೂರ ಬೈಕ್‌ನಲ್ಲಿ ಹೋಗುವುದು ನನಗೆ ಕಷ್ಟವಾಗಿದ್ದರಿಂದ ಮೆಟ್ರೋ ಹತ್ತಿ ಹೋಗುವುದಾಗಿ ನಿರ್ಧರಿಸಿದ್ದೆ. ಮನೆಯಿಂದ ಮೆಟ್ರೋ ನಿಲ್ದಾಣಕ್ಕೆ ಕೇವಲ 2 ನಿಮಿಷಗಳ ದಾರಿ. ಸಮನ್ವಿಗೆ ಕಾರ್ ಪ್ರಯಾಣ ಇಷ್ಟ ಆಗಲ್ಲ ಎಂಬ ಕಾರಣಕ್ಕೆ ಮೆಟ್ರೋ ಸ್ಟೇಷನ್ ವರೆಗೆ ಬೈಕ್‌ನಲ್ಲಿ ಹೋಗಲು ನಿರ್ಧರಿಸಿದ್ವಿ ಎಂದರು.
ಆಕೆಯನ್ನ ಎಲ್ಲಿಗೇ ಕರೆದುಕೊಂಡು ಹೋಗುವಾಗಲೂ ಬಹಳ ಜಾಗ್ರತೆಯಿಂದಲೇ ಕರೆದುಕೊಂಡು ಹೋಗುತ್ತಿದ್ದೆವು. ಈ ರೀತಿ ಅನಾಹುತ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಸಮನ್ವಿಯನ್ನ ಮೊದಲು ಬೈಕ್‌ನ ಎದುರುಗಡೆಯೇ ಕೂರಿಸಿಕೊಳ್ಳುತ್ತಾ ಇದ್ದೆ. ಆದರೆ ಇತ್ತೀಚೆಗೆ ಆಕೆ ಸ್ವಲ್ಪ ಉದ್ದ ಬೆಳೆದಿದ್ದಾಳೆ. ಅಲ್ಲದೆ ಆಕೆಯ ತಲೆ ನನಗೆ ಅಡ್ಡ ಆಗ್ತಾ ಇದ್ದಿದ್ದರಿಂದ ಜೋಪಾನವಾಗಿನೇ ಹಿಂದುಗಡೆ ಕೂರಿಸಿಕೊಳ್ಳುತ್ತಾ ಇದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಅಂದು ನಾವಿಬ್ರೂ ತುಂಬಾ ಮಾತಾಡ್ತಾ ಇದ್ವಿ. ಮೆಟ್ರೋ ನಿಲ್ದಾಣ ನನಗೆ ಕಣ್ಣಿಗೆ ಕಾಣಿಸ್ತಾನೇ ಇತ್ತು. ಒಂದು ಕ್ಷಣ ನನಗೆ ಸಿಕ್ಕಿದ್ದಿದ್ರೆ ಎಡಕ್ಕೆ ತಿರುಗಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿ ದೊಡ್ಡ ಗಾಡಿಯೊಂದು ಬಂತು. ಆ ಕ್ಷಣಕ್ಕೆ ನನಗೆ ಅಷ್ಟು ಮಾತ್ರ ಗೊತ್ತಾಗಿದ್ದು. ಆಕೆ ರೋಡ್‌ಗೆ ಬಿದ್ದಿದ್ದಳು. ನಾನೂ ಕೂಡಾ ಬಿದ್ದಿದ್ದೆ. ಮಗು ಬಿದ್ದಿದೆ, ಆಕೆ ಭಯ ಪಟ್ಟಿರುತ್ತಾಳೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಆಕೆ ಮೂರ್ಛೆ ತಪ್ಪಿ ಹೋಗಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಗೊತ್ತಾಗಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಹೇಳುತ್ತಾ ಬೇಸರಗೊಂಡರು.
ಆಕೆಯ ತೊಡೆ ಭಾಗಕ್ಕೆ ಸ್ವಲ್ಪ ಗಾಯ ಆಗಿತ್ತು. ಡಾಕ್ಟರ್ ಕೂಡಾ ಹೇಳಿದ್ದರು ಅದು ಅಷ್ಟೆನೂ ದೊಡ್ಡ ಗಾಯ ಅಲ್ಲ ಎಂದು. ಬಹುಶಃ ಆ ಘಟನೆಯ ಶಾಕ್‌ನಿಂದ ಆಕೆಗೆ ಹೀಗಾಗಿರಬಹುದು ಎಂದು ಅಮೃತಾ ಮಗಳ ಸಾವಿನ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

ನಾವು ಮಗುವನ್ನು ಕಳೆದುಕೊಂಡಿದ್ದೇವಾ ಅಥವಾ ಯಾರೋ ಹಿರಿಯರನ್ನ ಕಳೆದುಕೊಂಡಿದ್ದೇವಾ ಎಂಬುದೇ ತಿಳೀತಾ ಇಲ್ಲ. ಆಕೆಗೆ ಏನು ಹೇಳಿದ್ರೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾ ಇದ್ದಳು. ಆಕೆಯನ್ನ ತುಂಬಾ ಜೋಪಾನ ಮಾಡಿ ಸಾಕಿದ್ವಿ. ಆಕೆಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಅಂತ ಒಳ್ಳೆ ಶಾಲೆಗೂ ಸೇರಿಸಿದ್ವಿ. ಅಪರೂಪದಲ್ಲಿ ಅವಳಿಗೆ ಸುಲಭವಾಗಿ ಸೀಟ್ ಕೂಡಾ ಸಿಕ್ಕಿತ್ತು. ಭಗವಂತ ಆಕೆಯ ಜೀವನದ ಎಲ್ಲಾ ಹಂತವನ್ನೂ ಸುಲಭವಾಗಿ ಪಾರು ಮಾಡಿಸಿದ್ದಾನೆ. ಆದರೆ ಸಾವನ್ನ ಮಾತ್ರ ಪಾರು ಮಾಡಿಸದೇ ಹೋದ ಅಮೃತಾ ಕಂಬನಿ ಮಿಡಿದರು. ಇದನ್ನೂ ಓದಿ: ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಈ ನೋವು ಒಂದು ಕಡೆಯಾದರೆ ಮನಸ್ಸಿಗೆ ಸಮಾಧಾನವನ್ನು ತಂದುಕೊಟ್ಟಿರುವ ಕೆಲಸವನ್ನು ಮಾಧ್ಯಮದವರು ಮಾಡಿದ್ದಾರೆ. ಸಮನ್ವಿಯನ್ನು ಜನರಿಗೆ ತಲುಪಿಸುವ ಕೆಲಸದೊಂದಿಗೆ ಜನರು ಅವಳಿಗೋಸ್ಕರ ಪ್ರಾರ್ಥಿಸುವಂತೆ ಮಾಡಿದ್ದಾರೆ. ಇಷ್ಟು ಪ್ರೀತಿಯ ಜೊತೆ ಅವಳನ್ನು ಕಳುಹಿಸಿ ಕೊಡುವಂತೆ ಸಹಾಯ ಮಾಡಿರುವ ಮಾಧ್ಯಮಗಳಿಗೆ ಹಾಗೂ ಪಬ್ಲಿಕ್ ಟಿವಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.
-

ಹೊಟ್ಟೆಗೆ ಗಾಯ, ತೀವ್ರ ರಕ್ತಸ್ರಾವದಿಂದ ಸಮನ್ವಿ ಸಾವು: ಡಿಸಿಪಿ ಕುಲದೀಪ್ ಜೈನ್
ಬೆಂಗಳೂರು: ಗುರುವಾರ ನಡೆದ ದುರ್ಘಟನೆಯಲ್ಲಿ ಟಿಪ್ಪರ್‌ನ ಮಡ್‌ಗಾರ್ಡ್ ಬಾಲಕಿ ಸಮನ್ವಿಯ ಹೊಟ್ಟೆಗೆ ತಾಗಿದ್ದರಿಂದ ತೀವ್ರವಾದ ಗಾಯವಾಗಿದೆ. ಇದರಿಂದ ಹೆಚ್ಚಿನ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮಗು ಸಾವನ್ನಪ್ಪಿದೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಗುರುವಾರ ಸಂಜೆ ಕೋಣನಕುಂಟೆ ಕ್ರಾಸ್ ಬಳಿ ತಾಯಿ-ಮಗಳು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಸ್ಕೂಟಿಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟಿಯಲ್ಲಿದ್ದ ಮಗು-ತಾಯಿ ಇಬ್ಬರು ಬಿದ್ದಿದ್ದರಿಂದ ಅಫಘಾತವಾಗಿದೆ. ತನಿಖೆಯಲ್ಲಿ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಇರುವುದು ತಿಳಿದುಬಂದಿದ್ದು, ಟಿಪ್ಪರ್ ಗಾಡಿ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಮಗು ರಿಯಾಲಿಟಿ ಶೋ ಒಂದರಲ್ಲಿ ಗುರುತಿಸಿಕೊಂಡಿದ್ದು, ಅವರ ತಂದೆ ಕೂಡಾ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೂ ಈ ಘಟನೆ ನೋವು ತಂದಿದೆ ಎಂದು ಡಿಸಿಪಿ ಕುಲದೀಪ್ ಜೈನ್ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್
-

ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್
ಬೆಂಗಳೂರು: ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ರಸ್ತೆ ಅಪಘಾತದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದು, ಇಂದು ತಂದೆ ರೂಪೇಶ್ ಕಿಮ್ಸ್ ಆಸ್ಪತ್ರೆಯ ಬಳಿ ಗೋಗರೆದಿದ್ದಾರೆ. ಸಮನ್ವಿಯ ಮೃತ ದೇಹವನ್ನು ಬಾಚಿ ತಬ್ಬಿ ಐ ಆಮ್ ವೆರಿ ಸಾರಿ, ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ ಎಂದು ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈಚೆ ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿ ತಾಯಿ ಅಮೃತಾ ನಾಯ್ಡು ನಿತ್ರಾಣ ಸ್ಥಿತಿಗೆ ಜಾರಿದ್ದಾರೆ. ಬಿಗ್ ಬಾಸ್ ಹಾಗೂ ಕೆಲ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಋಷಿಕುಮಾರ್ ಅಲಿಯಾಸ್ ಕಾಳಿ ಸ್ವಾಮಿ ಸಮನ್ವಿ ಅಂತಿಮ ದರ್ಶನ ಪಡೆಯಲು ಬಂದಿದ್ದು, ಅಮೃತಾಗೆ ಸಾಂತ್ವಾನ ಹೇಳಿದ್ದಾರೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಮಗು ಚೂಟಿಯಾಗಿತ್ತು:
ನಾವು ಮಗುವನ್ನು ಟಿವಿಯಲ್ಲಿ ನೋಡುತ್ತಿದ್ದೆವು. ತುಂಬಾ ಇಷ್ಟ ಪಡುತ್ತಿದ್ದೆವು. ಮಗು ಚೂಟಿಯಾಗಿತ್ತು. ಶೋ ಅಲ್ಲಿ ಕೂಡ ಚೂಟಿ ಆಗಿದ್ಲು. ಆದರೆ ಯಾಕೆ ಹೀಗಾಯ್ತು! ನಾವು ಟಿವಿಯಲ್ಲಿ ನೋಡುತ್ತಿದ್ದ ಮಗು ಇನ್ಮೇಲೆ ಇಲ್ಲ ಅನ್ನೋ ನೋವನ್ನು ತಡೆದುಕೊಳ್ಳೋಕೆ ಆಗುತ್ತಿಲ್ಲ ಎಂದು ಸಮನ್ವಿ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿ ಲಕ್ಷ್ಮಮ್ಮ ಹೇಳಿಕೆ ನೀಡಿದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವುಸಮನ್ವಿ ಅಂತಿಮ ದರ್ಶನಕ್ಕೆ ಲಿಬರ್ಟಿ ಅಪಾರ್ಟ್ಮೆಂಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ್ಟ್ಮೆಂಟ್‌ನಲ್ಲಿ 20 ಮಂದಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಪಾರ್ಟ್ಮೆಂಟ್‌ನ ಪ್ರವೇಶದ್ವಾರದಲ್ಲಿ ಮಧ್ಯಾಹ್ನ 1 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆಯಿದ್ದು, ಸಂಬಂಧಿಕರು ಹಾಗೂ ಸಿನಿಮಾ – ಸೀರಿಯಲ್ ಕಲಾವಿದರು ಅಂತಿಮ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನದ ಬಳಿಕ ಸಮನ್ವಿ ಅಂತ್ಯ ಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ
-

ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ
ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ನೆನೆದು ನಟ ಸೃಜನ್ ಲೋಕೇಶ್ ಭಾವುಕರಾದರು.
ಪುಟಾಣಿ ಸಾವಿನ ಸುದ್ದಿ ಕೇಳಿ ಮನಸ್ಸು ತುಂಬಾ ಡಿಸ್ಟರ್ಬ್ ಆಗಿದೆ. ರಾತ್ರಿ ಕೂಡ ನಿದ್ರೆ ಮಾಡಲಾಗಲಿಲ್ಲ. ಕಣ್ಣು ಮುಚ್ಚಿದರೂ ಆ ಮಗುವಿನ ಬಿಂಬವೇ ಬರುತ್ತಿತ್ತು. ಇಂತಹ ಸನ್ನಿವೇಶಗಳನ್ನು ನೋಡಿದಾಗ ನಮ್ಮ ಮಕ್ಕಳ ವಿಚಾರದಲ್ಲೂ ನಾವು ಜಾಗೃತರಾಗಬೇಕು ಎನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಮುದ್ದಾದ ಮಗು ಅದು. ಕಾರ್ಯಕ್ರಮದಲ್ಲಿ ಬಹಳ ಖುಷಿ ಖುಷಿಯಾಗಿ ಇರುತ್ತಿದ್ದಳು. ಅಂಥ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದು ನಿಜಕ್ಕೂ ಘೋರ. ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ದುಃಖಿಸಿದರು.
ಪರದೆಯ ಮುಂದೆ ಚೆನ್ನಾಗಿ ಅಭಿನಯಿಸುತ್ತಿದ್ದ ಸಮನ್ವಿ, ತುಂಬಾ ಪ್ರತಿಭಾವಂತೆ. ಮುಗ್ದತೆ, ಪ್ರೀತಿ ಎಲ್ಲವನ್ನೂ ತುಂಬಿಕೊಂಡಿದ್ದ ಮಗು. ಮುಂದೆ ದೊಡ್ಡ ಸ್ಟಾರ್ ಆಗುತ್ತಾಳೆ ಎನ್ನುತ್ತಿದ್ದೆವು. ಕಾರ್ಯಕ್ರಮ ಮುಗಿಸಿ ಹೊರಬಂದಾಗ ನನ್ನನ್ನು ಜಡ್ಜ್ ಬಾಯ್ ಅಂತ ಪ್ರೀತಿಯಿಂದ ಕರೆಯುತ್ತಿದ್ದಳು ಎಂದು ನೆನೆದರು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಕೊರೊನಾ ವೈರಸ್ ಬಂದಾಗಲೂ ನಮ್ ಜೀವನ ನಮ್ಮ ಕೈಯಲ್ಲಿಲ್ಲ. ವಾಹನ ಓಡಿಸುತ್ತಿದ್ದಾಗಲೂ ಹೀಗೆಯೇ ಅಂದುಕೊಳ್ಳಬೇಕು. ಅಪ್ಪು ಅವರು ತೀರಿಕೊಂಡ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಇದರ ಮಧ್ಯೆಯೇ ಮಗು ಸಾವನ್ನಪ್ಪಿದ ಸುದ್ದಿ ಬಂದು, ಬರೆ ಮೇಲೆ ಬರೆ ಹಾಕಿದಂತಾಗಿದೆ ಎಂದು ವಿಷಾದಿಸಿದರು.
ಇಂತಹ ಸಂದರ್ಭದಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಪರಿಸ್ಥಿತಿ ನೆನೆದರೆ ನೋವಾಗುತ್ತದೆ. ಅಮೃತಾ ಮೊದಲು ಒಂದು ಮಗುವನ್ನು ಕಳೆದುಕೊಂಡಿದ್ದರು. ನಂತರ ಸಮನ್ವಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ಸಮನ್ವಿ ಒಂಟಿಯಾಗುತ್ತಾಳೆ ಎಂಬ ಕಾರಣಕ್ಕೆ ಮತ್ತೊಂದು ಮಗು ಹೊಂದಲು ಯೋಜಿಸಿದ್ದೇವೆ ಅಂತ ಅಮೃತ ಹೇಳುತ್ತಿದ್ದಳು. ಆ ದಂಪತಿ ಈ ನೋವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂದು ನೊಂದು ನುಡಿದರು.
-

ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿ ಸಮನ್ವಿ ಸಾವಿಗೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಲಾರಿ ಚಾಲಕ ಮಂಚೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಸಮನ್ವಿ ಮೃತದೇಹ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು, ಪರೀಕ್ಷೆಯ ಬಳಿಕ ಆಸ್ಪತ್ರೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರವಾಗಲಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವಿಗೆ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಫೇಸ್‌ಬುಕ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ತೊಂದರೆಯಾಗುತ್ತಿದೆ. ಮಗುವನ್ನು ಕಳೆದುಕೊಂಡಿರುವ ತಾಯಿಯ ಬಗ್ಗೆ ಯೋಚಿಸಲೂ ಆಗುತ್ತಿಲ್ಲ. ಮಗುವನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ
ದುರ್ಘಟನೆ ಹೇಗಾಯಿತು?
ಕನಕಪುರ ರಸ್ತೆಯ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿರುವ ಅಮೃತ ನಾಯ್ಡು ಗುರುವಾರ ಸಂಜೆ ಹೋಂಡಾ ಆಕ್ಟಿವಾದಲ್ಲಿ ಮಗಳೊಂದಿಗೆ ಮನೆಯಿಂದ ಹೊರಗಡೆ ಹೊರಟಿದ್ದರು. ವಾಜರಹಳ್ಳಿ ಮೆಟ್ರೋ ಸ್ಟೇಶನ್ ಬಳಿ ಆಕ್ಟಿವಾ ಪಾರ್ಕ್ ಮಾಡಿ ಇಬ್ಬರೂ ಗಾಯತ್ರಿ ನಗರಕ್ಕೆ ಹೋಗಬೇಕಿತ್ತು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ
ಮೆಟ್ರೋ ನಿಲ್ದಾಣಕ್ಕೆ 100 ಮೀ. ದೂರ ಇರುವಂತೆ ತಾಯಿ ಮಗಳು ಟಾಟಾ ಸುಮೋ ಹಾಗೂ ಲಾರಿ ಮಧ್ಯೆ ಸಿಲುಕಿದ್ದರು. ಟಿಪ್ಪರ್ ಲಾರಿ ಚಾಲಕ ಎಡಕ್ಕೆ ಗಾಡಿಯನ್ನು ತಿರುಗಿಸಿದ್ದಾನೆ. ಪರಿಣಾಮ ಎಡಭಾಗದ ಬಂಪರ್ ಡಿಕ್ಕಿ ಹೊಡೆದಿದ್ದರಿಂದ ಅಮೃತ ನಾಯ್ಡು ಮತ್ತು ಮನ್ವಿ ರಸ್ತೆಗೆ ಬಿದ್ದಿದ್ದಾರೆ. ಮಾನ್ವಿಯ ಸೊಂಟಕ್ಕೆ ಲಾರಿ ಬಂಪರ್ ಬಲವಾಗಿ ಗುದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಸಮನ್ವಿ ಮೃತಪಟ್ಟಿದ್ದಳು. ಕುಮಾರ ಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-

ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ
ಬೆಂಗಳೂರು: ಭೀಕರ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಸಮನ್ವಿ ಸಾವಿಗೆ ಹಿರಿಯ ನಟಿ ತಾರಾ ಕಂಬನಿ ಮಿಡಿದಿದ್ದಾರೆ.
ಸಮನ್ವಿ ತುಂಬಾ ಪ್ರತಿಭಾವಂತೆ. ಮಾಡೆಲ್ ಥರಾನೆ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳಿಲ್ಲ ಎಂಬ ಸುದ್ದಿಯನ್ನು ನನ್ನಿಂದ ನಂಬುವುದಕ್ಕೇ ಆಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ನಟಿ ವಿಷಾದಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

ನಾನು ಬೆಂಗಳೂರಿನಲ್ಲಿಲ್ಲ, ಹೊರಗಡೆ ಇದ್ದೇನೆ. ಅದ್ಯಾಕೋ ಒಂದೇ ಸಮನೆ ಫೋನ್ ಕರೆಗಳು ಬರುತ್ತಿದ್ದವು. ಏನು ಅಂತ ವಿಚಾರಿಸಿದಾಗ ಸಮನ್ವಿ ಇಲ್ಲ ಅಂತ ಹೇಳಿದರು. ಈ ಸುದ್ದಿ ಕೇಳಿ ನನಗೆ ಶಾಕ್ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ತಾಯಿ-ಮಕ್ಕಳು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು. ಎಲ್ಲರೂ ನನ್ನ ಜೊತೆ ಚೆನ್ನಾಗಿದ್ದರು ಎಂದು ನೆನೆದಿದ್ದಾರೆ.
ಸಮನ್ವಿ ತಾಯಿ ಅಮೃತಾ ನಾಯ್ಡು ತುಂಬು ಗರ್ಭಿಣಿ. ಶೋನಲ್ಲಿ ಅವಳಿಂದ ಹೆಚ್ಚು ಡ್ಯಾನ್ಸ್ ಮಾಡಿಸಲು ಆಗಲ್ಲ. ಆಕೆಗೆ ತುಂಬಾ ಒತ್ತಡ ಹಾಕಿದಂತಾಗುತ್ತದೆ ಎಂಬ ಕಾರಣಕ್ಕೆ ಶೋನಿಂದ ಎಲಿಮಿನೇಷನ್ ಮಾಡಿದ್ದೆವು. ಅದಾದ ಬಳಿಕವೂ ಆಕೆ ಫೋನ್ ಮಾಡಿ ನನ್ನೊಟ್ಟಿಗೆ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಒಮ್ಮೆ ನನ್ನನ್ನು ಭೇಟಿಯಾಗಬೇಕು ಎನ್ನುತ್ತಿದ್ದಳು. ನನಗೆ ಲೊಕೇಷನ್ ಕಳುಹಿಸಿ, ನಾನೇ ಕಾರು ಕಳುಹಿಸುತ್ತೇನೆ ಬಾ ಎಂದು ತಿಳಿಸಿದ್ದೆ. ಇಲ್ಲ ಅಮ್ಮ ಇನ್ನೊಮ್ಮೆ ಭೇಟಿಯಾಗುತ್ತೇನೆ ಎಂದಿದ್ದಳು. ಆಗ ಸಮನ್ವಿ ಕೂಡ ನನ್ನ ಜೊತೆ ಮಾತನಾಡಿದ್ದಳು ಎಂದು ನೆನೆಯುತ್ತಾ ತಾರಾ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೀಟೂ ಕೇಸಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್

ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ದಾರುಣವಾಗಿ ಮೃತಪಟ್ಟ ಘಟನೆ ಕೋಣನ ಕುಂಟೆ ಬಳಿ ನಡೆದಿದೆ.
