Tag: Nanjundaswamy

  • Exclusive- ರೈತಪರ ಚಿಂತಕ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ : ಸುದೀಪ್, ಧನಂಜಯ್, ನಾನಾ ಪಾಟೇಕರ್ ಯಾರಾಗ್ತಾರೆ ಹೀರೋ?

    Exclusive- ರೈತಪರ ಚಿಂತಕ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ : ಸುದೀಪ್, ಧನಂಜಯ್, ನಾನಾ ಪಾಟೇಕರ್ ಯಾರಾಗ್ತಾರೆ ಹೀರೋ?

    ರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಯೋಪಿಕ್ ರೆಡಿಯಾಗುತ್ತಿದೆ. ಐದಾರು ವರ್ಷಗಳಿಂದ ಹಲವು ಹಂತಗಳಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಸದ್ಯ ಸ್ಕ್ರಿಪ್ಟ್ ರೆಡಿಯಾಗಿದೆ. ಮುಂದಿನ ಹಂತಕ್ಕಾಗಿ ಹಲವು ಕಸರತ್ತುಗಳನ್ನು ಮಾಡುತ್ತಿದ್ದಾರೆ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ.

    ಜೀವನವಿಡೀ ಸ್ವದೇಶಿ ಪ್ರಚಾರ ಮಾಡಿದ ಅಪರೂಪದ ಹೋರಾಟಗಾರ ನಂಜುಂಡಸ್ವಾಮಿ. ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು, ಸಮಾಜವಾದಿ ಯುವಜನ ಸಭಾ ಹುಟ್ಟು ಹಾಕಿ ನಿರಂತರ ಹೋರಾಟ ಮಾಡುತ್ತಾ ಬಂದವರು. ಪ್ರಖರ ವಿಚಾರ ಲಹರಿ, ಅದ್ಭುತ ಕನ್ನಡ ಭಾಷಾ ಬಳಕೆ, ಖಚಿತ ಅಂಕಿ ಅಂಶಗಳಿಂದ ಕೂಡಿದ ಭಾಷಣ, ನ್ಯಾಯಾಂಗದ ಬಗ್ಗೆ ಇದ್ದ ತಿಳುವಳಿಕೆ, ಜ್ಯಾತಿ ವ್ಯವಸ್ಥೆಯ ಬಗೆಗಿನ ಆಕ್ರೋಶದ ಒಟ್ಟು ಮೊತ್ತ ಆಗಿದ್ದವರು ನಂಜುಂಡಸ್ವಾಮಿ. ಜ್ಯಾತ್ಯಾತೀಯ ರಾಷ್ಟ್ರದಲ್ಲಿ ಜಾತಿ ಸಮ್ಮೇಳನ ಆಗಬಾರದೆಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕಪ್ಪು ಬಾವುಟ ಪ್ರದರ್ಶನ, ವಂಶಪಾರಂಪರ್ಯವಾಗಿ ಆಡಳಿತ ನಡೆಸುವುದರ ವಿರುದ್ಧ ಪ್ರತಿಭಟನೆ, ಕಾರ್ಮಿಕರಿಗೆ ಕಾನೂನುಬದ್ಧ ವೇತನ ಕೊಡದಿದ್ದರೆ ಪ್ರತಿಭಟನೆ, ರೈತರಿಗೆ ಅನ್ಯಾಯವಾದಾಗೆಲ್ಲ ನಂಜುಂಡಸ್ವಾಮಿ ಅವರು ಇದ್ದೇ ಇರುತ್ತಿದ್ದರು. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ರೈತರಿಗೆ ದೋಖಾ ಮಾಡುತ್ತಿದ್ದ ಹಲವು ಖಾಸಗಿ ಕಂಪೆನಿಗಳ ವಿರುದ್ಧ ಹೋರಾಟ, ಸರಕಾರಗಳ ಕ್ರಮದ ವಿರುದ್ಧ ಹೋರಾಟ ಹೀಗೆ ಹಠಾತ್ ದಾಳಿಗಳನ್ನು ಮಾಡುತ್ತಲೇ ಬೆಚ್ಚಿ ಬೀಳಿಸುತ್ತಿದ್ದರು ನಂಜುಂಡಸ್ವಾಮಿ. ಅದರಲ್ಲೂ ರೈತರಿಗೆ ಬ್ಯಾಂಕ್ ಗಳು ನೀಡುವ ಕಿರುಕುಳಕ್ಕೆ ನಿರಂತರವಾಗಿ ಪ್ರತಿಭಟನೆ ಇದ್ದೇ ಇರುತ್ತಿತ್ತು. ರೈತ ಸಂಘವೆಂದರೆ ನಂಜುಂಡಸ್ವಾಮಿ, ನಂಜುಂಡ ಸ್ವಾಮಿ ಅಂದರೆ ರೈತ ಸಂಘ ಎನ್ನುವಷ್ಟರ ಮಟ್ಟಿಗೆ ಅವರು ರೈತರೊಂದಿಗೆ ಬೆರೆತು ಹೋಗಿದ್ದರು.

    ಇಂತಹ ಹೋರಾಟಗಾರರ ಬಯೋಪಿಕ್ ಸಿನಿಮಾವಾಗಬೇಕು ಎನ್ನುವುದು ಹಲವರ ಆಶಯವಾಗಿತ್ತು. ಅದಕ್ಕೆ ಮೊದಲು ನೀರೆರೆದದ್ದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ. ಹಲವು ವರ್ಷಗಳ ಹಿಂದಿಯೇ ಪ್ರೊಫೆಸರ್ ಕುಟುಂಬವನ್ನು ಮಂಸೋರೆ ಸಂಪರ್ಕಿಸಿದರು. ಆದರೆ, ನಾನಾ ಕಾರಣಗಳಿಂದಾಗಿ ಅದು ಆಗಲಿಲ್ಲ. ಈ ಹಿಂದೆ ಖ್ಯಾತ ಬರಹಗಾರ ನಟರಾಜ್ ಹುಳಿಯಾರ್  ಅವರು ನಂಜುಂಡ ಸ್ವಾಮಿ ಅವರು ಕುರಿತಾದ ನಾಟಕ ಮತ್ತು ಚಿತ್ರಕಥೆ ರೆಡಿ ಮಾಡಿದರು. ಸಿನಿಮಾಗೆ ಮತ್ತೊಂದು ವೇಗ ಸಿಕ್ಕಿತು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ನಂಜುಂಡಸ್ವಾಮಿ ಅವರ ಪಾತ್ರವನ್ನು ಡಾ.ವಿಷ್ಣುವರ್ಧನ್ ಮಾಡಬೇಕು ಎನ್ನುವುದು ಹಲವರ ಆಸೆಯಾಗಿತ್ತು. ಯಾಕೆಂದರೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ಹೂವಯ್ಯನ ಪಾತ್ರ ಹೆಣೆದಿದ್ದರಲ್ಲ, ಅದು ಪ್ರೊಫೆಸರ್ ನಂಜುಂಡಸ್ವಾಮಿ ಅವರ ಬದುಕನ್ನೇ ಆಧರಿಸಿತ್ತು. ಆದರೆ, ಡಾ.ವಿಷ್ಣುವರ್ಧನ್ ಕಾಲವಾದರು.

    ಕೆಲ ವರ್ಷಗಳ ಹಿಂದೆ ನಿರ್ದೇಶಕ ಕೇಸರಿ ಹರವು ಕೂಡ ಈ ಸಿನಿಮಾದ ಬಗ್ಗೆ ಆಸಕ್ತಿ ತಗೆದುಕೊಂಡು ನಂಜುಂಡಸ್ವಾಮಿ ಅವರ ಪಾತ್ರವನ್ನು ನಾನಾ ಪಾಟೇಕರ್ ಮಾಡಿದರೆ ಸರಿಯಾಗಿರುತ್ತದೆ ಎಂದು ಅವರನ್ನು ಅಪ್ರೋಚ್ ಮಾಡಿದ್ದರು. ನಾನಾ ಕೂಡ ಪ್ರೊಫೆಸರ್ ಅವರ ಹೋರಾಟದ ವಿಡಿಯೋಗಳನ್ನು ಗಮನಿಸಿದ್ದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಅಲ್ಲದೇ, ಡಾಲಿ ಧನಂಜಯ್ ಅವರಿಗೂ ಈ ಸ್ಕ್ರಿಪ್ಟ್ ಕಳುಹಿಸಲಾಗಿತ್ತು. ಈ ಇಬ್ಬರೂ ಕಲಾವಿದರ ಮಧ್ಯೆ ಇದೀಗ ಮತ್ತೊಂದು ಯೋಜನೆ ಸಿದ್ಧವಾಗುತ್ತಿದೆ. ನಂಜುಂಡಸ್ವಾಮಿ ಅವರ ಪಾತ್ರವನ್ನು ಸುದೀಪ್ ಅವರು ಮಾಡಲಿ ಎನ್ನುವುದು ಪ್ರೊಫೆಸರ್ ಕೆಲ ಅಭಿಮಾನಿಗಳ ಬೇಡಿಕೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ನಂಜುಂಡಸ್ವಾಮಿ ಅವರ ಪತ್ನಿಯ ಪಾತ್ರದಲ್ಲಿ ರಮ್ಯಾ ಇರಲಿ ಎಂದೂ ಯೋಚಿಸಲಾಗಿದೆಯಂತೆ. ಈ ಇಬ್ಬರೂ ಕಲಾವಿದರನ್ನು ಭೇಟಿ ಮಾಡುವ ಆಲೋಚನೆ ಕೂಡ ಇದೆ. ಆದರೆ, ಇನ್ನೂ ಅವರಿಗೆ ಈ ವಿಷಯವನ್ನು ತಲುಪಿಸಿಲ್ಲ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ‘ರೈತರು, ಕಾರ್ಮಿಕರು ಮತ್ತು ನಿರ್ಗತಿಕರ ಬದುಕಿಗೆ ನಂಜುಂಡ ಸ್ವಾಮಿ ಅವರು ದೊಡ್ಡ ಶಕ್ತಿಯಾಗಿದ್ದರು. ಅವರ ಸಿನಿಮಾ ಬರಬೇಕು ಎನ್ನುವುದು ನಮ್ಮ ಕುಟುಂಬದ ಆಸೆ. ಹಾಗಾಗಿ ಹಲವರು ಹಲವು ಕಲಾವಿದರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾರೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೋ? ಯಾವಾ ಸಿನಿಮಾ ಆಗುತ್ತದೆಯೋ ಕಾದು ನೋಡಬೇಕು’ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿ.

  • ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬಳ್ಳಾರಿ: ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ್ ಎಂದು ಬಳ್ಳಾರಿ ವಲಯದ ಐಜಿ ನಂಜುಂಡಸ್ವಾಮಿ ಅಗಲಿದ ಗೆಳೆಯನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಂತಾಪ ಸೂಚಿಸಿದ್ದಾರೆ.

    ಈ ಪತ್ರದಲ್ಲಿ ಸಿದ್ಧಾರ್ಥ್ ಅವರನ್ನು ಭೇಟಿಯಾದ ದಿನಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಅಪಾರವಾಗಿ ಹೇಳಿಕೊಂಡಿರುವ ನಂಜುಂಡಸ್ವಾಮಿ ತನ್ನ ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳವಂತಹ ವ್ಯಕ್ತಿಯಲ್ಲ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಪತ್ರದಲ್ಲೇನಿದೆ?
    ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಗೆಳೆಯ ಶಶಿಕುಮಾರ್ ಮತ್ತು ನಾನು ಒಂದು ರಾತ್ರಿ ಊಟ ಮಾಡಿದ ನಂತರ ಕಾಫಿ ಡೇಗೆ ಹೋದಾಗ, ಆಗ ಅದೊಂದೆ ಕಾಫಿ ಡೇ ಆಗಿತ್ತು. ಶಶಿ ಮೋಹನ್ ನನಗೆ ಸಿದ್ಧಾರ್ಥ ಅವರನ್ನು ಪರಿಚಯ ಮಾಡಿಸಿದ.

    ನಾನು ಆಗ ತಾನೇ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಬೆಂಗಳೂರು ಜೀವನ ಹೊಸದಾಗಿತ್ತು. ಸಿದ್ಧಾರ್ಥ್ ಅಂದು ಕೆಫೆ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟೀ-ಶರ್ಟ್ ಧರಿಸಿದ್ದ. ಮೊದಲನೇ ಭೇಟಿಯಲ್ಲೇ ನಾವಿಬ್ಬರು ಬಹಳ ಮಾತನಾಡಿದ್ದೇವು. ಆಗ ಅವರ ಮಾವ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿರಲಿಲ್ಲ. ಸಿದ್ಧಾರ್ಥ್ ಹಳೆಯ ಗೆಳೆಯನಂತೆ ನನ್ನ ಜೊತೆ ತುಂಬಾ ಹೊತ್ತು ಖುಷಿಯಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಯ ಸರಪಣಿ (chain of restaurant) ಮಾಡುವುದಾಗಿ ಹೇಳುತ್ತಿದ್ದರು. ಸಿದ್ಧಾರ್ಥ್ ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದವರು. ಅವರು ಪರಿಚಯವಾದ ಮೇಲೆ ನಾವು ತುಂಬಾ ಸಲ ಬೇರೆ-ಬೇರೆ ಕಡೆ ಭೇಟಿ ಆಗಿದ್ದೇನೆ.

    ಸಿದ್ಧಾರ್ಥ್ ಒಂದು ಬಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್‍ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲಾ ಅತಿಥಿಗಳನ್ನು ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ ಭವ್ಯವಾದ ಬ್ರಿಟಿಷ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷ್ ಕಾಫಿ ತೋಟ ಸ್ವಾತಂತ್ರ್ಯ ನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು.

    ಸಿದ್ಧಾರ್ಥ್ ಅವರಲ್ಲಿ ಅದಮ್ಯ ಸಾಹಸದ ಮನೋಭಾವನೆ ಇತ್ತು. ಅವರ ಕಂಡಾಗಲೆಲ್ಲ ನಾನು ಇವರರಂತೆ ಆಗಬೇಕು ನಾನು ತುಂಬಾ ಆಕ್ಟೀವ್ ಆಗಿ ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ. ಅಂತಹ ವ್ಯಕ್ತಿ ನನ್ನ ಭಾಷಣ-ಬರಹಗಳ ಅಭಿಮಾನಿಯಾಗಿದ್ದರು. ಅವರ ತಂದೆ ಮತ್ತು ನಾನು ಒಂದು ಬಾರಿ ಪೂರ್ಣ ಪ್ರಜ್ಞಾ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೇವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ನಿಮ್ಮ ಮಾತು ಕೇಳಿದರೆ ನಾನು ಒಮ್ಮೆ ದ.ರಾ ಬೇಂದ್ರೆ ಅವರ ಭಾಷಣ ಕೇಳಿದ್ದೆ ಅವರಂತೆ ನೀವು ಮಾತನಾಡುತ್ತೀರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ ಎಂದಿದ್ದರು. ಆಗ ನಾನು ನಿಮ್ಮೊಡನೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಅದ್ದರಿಂದ ನನಗೆ ಒಳ್ಳೆಯ ಭಾಷಣ ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ನನಗಿದೆ ಎಂದಿದ್ದರು.

    ಸಿದ್ಧಾರ್ಥ್ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯತೆ ರಾಜಕಳೆಯಿಂದ ಬದುಕಿದ. ಆದರೆ ಇಂದು ಕಳೆಬರವಾಗಿದ್ದಾನೆ. ಈ ಸಿದ್ಧಾರ್ಥ ಬುದ್ಧನಾಗಲು ಹೊರಟ್ಟಿದ್ದ ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನು ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವಿಗೆ ಬಂದ ಸತ್ಯಗಳ ತಿಳಿಸುವ ಮೊದಲೇ ಬುದ್ಧನಾಗುವ ದಾರಿಯಲ್ಲಿ ನಡೆದು ಬಿಟ್ಟ.

    ಆತನ ಮನದೊಳಗಿದ್ದ ಆ ಸತ್ಯಗಳೆಲ್ಲ ಹೊರಕ್ಕೆ ಬರಬೇಕು ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡುಹಿಡಿಯಲೇ ಬೇಕು ಯಾವ ವ್ಯಕ್ತಿ, ಸಂಘ, ಸಂಸ್ಥೆ, ಇಲಾಖೆಗಳಿಂದ ನೊಂದಿದ್ದ. ಆತ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣ ಹೊರಬರಬೇಕಾಗಿದೆ. ನಮ್ಮ ಕಾಫಿ ಡೇ ಸಿದ್ಧಾರ್ಥ ಬುದ್ಧನಾಗಲೇ ಹೊರಟವನು. ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಆತನೇ ಹೀಗಾದ ಎಂದರೆ ಆತನನ್ನು ನಂಬಿದ್ದವರಿಗೆ, ಆತನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಇದರ ಸಂಪೂರ್ಣ ತನಿಖೆ ಆಗಲಿ ಸತ್ಯ ಹೊರ ಬರಲಿ ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದಿಗೂ ಬುದ್ಧನೇ.

  • ಮಂಡ್ಯ ಜಿಲ್ಲಾಧಿಕಾರಿಗೆ ಮತ್ತೊಂದು ಸಂಕಷ್ಟ

    ಮಂಡ್ಯ ಜಿಲ್ಲಾಧಿಕಾರಿಗೆ ಮತ್ತೊಂದು ಸಂಕಷ್ಟ

    ಮಂಡ್ಯ: ಸುಮಲತಾ ಅಂಬರೀಶ್ ಬೆನ್ನಲ್ಲೇ ಮಂಡ್ಯ ಜಿಲ್ಲಾಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಎಸ್‍ಪಿ ಅಭ್ಯರ್ಥಿ ಕಂಪ್ಲೆಂಟ್ ನೀಡಿದ್ದಾರೆ.

    ಲೋಕಸಭಾ ಚುನಾವಣೆಯ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ನಂಜುಂಡಸ್ವಾಮಿ ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರ ವಿರುದ್ಧ ದೂರು ನೀಡಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾದ ನನಗೆ ಮತಯಂತ್ರದಲ್ಲಿ ಕ್ರಮಸಂಖ್ಯೆ 1 ನೀಡಬೇಕಿತ್ತು. ಆದರೆ ನನಗೆ ಕ್ರಮಸಂಖ್ಯೆ ಎರಡನ್ನ ನೀಡಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಕ್ರಮಸಂಖ್ಯೆ 1 ನ್ನು ನೀಡಲಾಗಿದೆ. ಡಿಸಿಯವರು ಜೆಡಿಎಸ್ ಪಕ್ಷದ ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಂಡ್ಯ ಡಿಸಿಯನ್ನ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.

    ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಂಜುಂಡಸ್ವಾಮಿ, ನನಗೆ ಮತಯಂತ್ರದಲ್ಲಿ ಮೊದಲನೇ ನಂಬರ್ ಸಿಗಬೇಕಿತ್ತು. ಆದರೆ ನನ್ನನ್ನು ಎರಡನೇ ನಂಬರಿಗೆ ತಳ್ಳಿದ್ದಾರೆ. ಹೀಗಾಗಿ ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದ್ದಕ್ಕೆ ರಾಷ್ಟ್ರೀಯ ಪಕ್ಷವಾದರೂ ಸ್ಥಳೀಯ ಪಕ್ಷದ ಜೊತೆ ಸೇರಿಸಿ ಕ್ರಮ ಸಂಖ್ಯೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ನನ್ನ ಹೆಸರು ಎನ್ ಆಗಿದೆ. ಹೀಗಾಗಿ ನನಗೆ ಮೊದಲನೇ ಸ್ಥಾನ ಕಡ್ಡಾಯವಾಗಿ ಕೊಡಬೇಕಿತ್ತು. ಇದರಿಂದ ನಾನು ವಂಚಿತನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಡಿಸಿ ಆಡಳಿದ ಬಗ್ಗೆ ನಾನು ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದೇನೆ.

    ಈಗಾಗಲೇ ಸುಮಲತಾ ಅಂಬರೀಶ್ ಪರ ಏಜೆಂಟ್ ಅವರು ಕೂಡ ಮಂಡ್ಯ ಜಿಲ್ಲಾಧಿಕಾಯನ್ನು ವರ್ಗಾವಣೆ ಮಾಡಿ ಬೇರೆ ಡಿಸಿಯನ್ನು ಹಾಕಿಕೊಡಿ ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೆ ಈಗ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ನಂಜುಂಡಸ್ವಾಮಿ ಮಂಡ್ಯ ಡಿಸಿ ಎನ್. ಮಂಜುಶ್ರೀ ಅವರ ವಿರುದ್ಧ ದೂರು ನೀಡಿದ್ದಾರೆ.