Tag: Nanjavadutha Swamiji

  • LKGಯಿಂದ ಸ್ನಾತಕೋತ್ತರ ಪದವಿವರೆಗೂ ಕೆಂಪೇಗೌಡರ ಪಠ್ಯ ಸೇರಿಸಿ: ನಂಜಾವಧೂತ ಶ್ರೀ

    LKGಯಿಂದ ಸ್ನಾತಕೋತ್ತರ ಪದವಿವರೆಗೂ ಕೆಂಪೇಗೌಡರ ಪಠ್ಯ ಸೇರಿಸಿ: ನಂಜಾವಧೂತ ಶ್ರೀ

    ಬೆಂಗಳೂರು: ನಾಡಪ್ರಭು ಕೆಂಪೇಗೌಡರ (Kempegowda) 514ನೇ ಜಯಂತಿಯನ್ನು ವಿಧಾನಸೌಧದಲ್ಲಿ (Vidhana Soudha) ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ (Nanjavadutha Swamiji) ಸರ್ಕಾರ ಪಠ್ಯದಲ್ಲಿ ಎಲ್‍ಕೆಜಿಯಿಂದ ಪಿಜಿವರೆಗೂ ಕೆಂಪೇಗೌಡರ ಪಠ್ಯ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಮುಂದುವರೆದು ಮಾತನಾಡಿದ ಅವರು, ಕೆಂಪೇಗೌಡರ ಫೋಟೋವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಬೇಕು. ಲಾಲ್ ಬಾಗ್ ಗೋಪುರದ ಬಳಿ ಕೆಂಪೇಗೌಡರ ಥೀಮ್ ಪಾರ್ಕ್ ಸ್ಥಾಪನೆ ನಿರ್ಮಿಸಬೇಕು. ಇಂಗ್ಲೆಂಡ್‍ನಲ್ಲಿ ಕೆಂಪೇಗೌಡರ ಪುತ್ಥಳಿ ಮಾಡಲು ಅಲ್ಲಿನ ಮೇಯರ್ ಸಿದ್ದರಿದ್ದಾರೆ. ಸರ್ಕಾರ ಪತ್ರ ವ್ಯವಹಾರ ಮಾಡಿ ಅದನ್ನು ಮಾಡಿಸಬೇಕು. ಸಂಕ್ರಾಂತಿ ಹಬ್ಬದ ವೇಳೆ ಕೆಂಪೇಗೌಡರ ಹೆಸರಲ್ಲಿ ಅಂತರಾಷ್ಟ್ರೀಯ ಬೆಂಗಳೂರು ಹಬ್ಬ ಆಚರಿಸಬೇಕು. ಕೆಂಪೇಗೌಡರ ಹೆಸರಲ್ಲಿ ಒಂದು ಜಿಲ್ಲೆ ಸ್ಥಾಪನೆಯಾಗಬೇಕು. ಅವರ ಹೆಸರಲ್ಲಿ ಒಂದು ವಿಶ್ವವಿದ್ಯಾಲಯ ಪ್ರಾರಂಭ ಮಾಡಬೇಕು. ಬೆಂಗಳೂರು ವಿವಿ ಸೆಂಟ್ರಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೋದಿ ಪ್ರಶ್ನಿಸಿದ್ದ ಅಮೆರಿಕ ಪತ್ರಕರ್ತೆಗೆ ಕಿರುಕುಳ – ವೈಟ್‍ಹೌಸ್ ಪ್ರತಿಕ್ರಿಯೆ

    ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar), ಕೆಂಪೇಗೌಡರನ್ನ ಕೇವಲ ಒಕ್ಕಲಿಗರಿಗೆ ಸೀಮಿತ ಮಾಡುವುದು ಬೇಡ. ಅವರು ರಾಷ್ಟ್ರದ ಆಸ್ತಿಯಾಗಿದ್ದಾರೆ. ಬಹಳ ಉತ್ಸಾಹದಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆ ತೆಗೆದುಕೊಂಡಿದ್ದೇನೆ. ಬೆಂಗಳೂರನ್ನು ಮಾದರಿ ನಗರವನ್ನಾಗಿಸಲು ಸಲಹೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ನಿಂತು ಹೋಗಿದ್ದ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.

    ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಡಿ.ಕೆ ಶಿವಕುಮಾರ್ ಅವರು ಕೆಂಪೇಗೌಡರಂತೆ ದಿಟ್ಟ ನಾಯಕ ಎಂದು ಬಣ್ಣಿಸಿದರು. ಅವರು ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಯುವ ಉದ್ಯಮಿ ನಿತಿನ್ ಕಾಮತ್, ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಜಯದೇವ ಹೃದ್ರೋಗ ಸಂಸ್ಥೆಗೆ ಈ ವರ್ಷದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಅಕ್ಕಪಕ್ಕ ಕೂರಿಸಿಕೊಂಡು ಡಿಕೆಶಿ-ಅಶ್ವಥ್‍ಗೆ ನಿರ್ಮಲಾನಂದ ಶ್ರೀಗಳು ಕಿವಿಮಾತು

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಒಕ್ಕಲಿಗರಿಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು: ನಂಜಾವಧೂತ ಶ್ರೀ

    ಒಕ್ಕಲಿಗರಿಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು: ನಂಜಾವಧೂತ ಶ್ರೀ

    ಮಂಡ್ಯ: ಒಕ್ಕಲಿಗರ (Vokkaliga) ತಾಳ್ಮೆ ಪರೀಕ್ಷೆ ಮಾಡಬೇಡಿ, ನಮಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು ಎಂದು ಸರ್ಕಾರಕ್ಕೆ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಶ್ರೀ (Nanjavadutha swamiji) ಎಚ್ಚರಿಕೆ ನೀಡಿದ್ದಾರೆ.

    ಮಂಡ್ಯದ (Mandya) ಮದ್ದೂರಿನಲ್ಲಿ ಒಕ್ಕಲಿಗರ ಮೀಸಲಾತಿ (Reservation) ಹೋರಾಟದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಇದೀಗ ಹೋರಾಟ ಆರಂಭವಾಗಿದೆ. ಮಂಡ್ಯದ ಮದ್ದೂರಿನಲ್ಲಿ ನಮ್ಮ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ನಮ್ಮದು 30 ವರ್ಷಗಳ ಹಿಂದಿನ ಬೇಡಿಕೆ. ಎಲ್ಲಾ ಸಮುದಾಯಗಳ ಹಿತ ಬಯಸುವವರು ಒಕ್ಕಲಿಗರು. ಆದರೆ ಒಕ್ಕಲಿಗರಿಗೆ ಮೀಸಲಾತಿ ತಾರತಮ್ಯ ಆಗಿದೆ. ನಾವು 16% ಜನಸಂಖ್ಯೆ ಇದ್ದರೂ ತಾರತಮ್ಯವಾಗಿದೆ. ಮೂವತ್ತರಡಿ 4% ನೀಡಿದ್ದಾರೆ. ಆದರೆ ಮೂವತ್ತರಡಿ ಅಡಿ ಬೇರೆ ಸಮುದಾಯಗಳನ್ನು ಸೇರಿಸಲಾಗಿದೆ. ಆ 4% ಕೂಡ ಒಕ್ಕಲಿಗರು ಬಳಸಿಕೊಳ್ಳಲು ಆಗುತ್ತಿಲ್ಲ. ಶೈಕ್ಷಣಿಕ, ಉದ್ಯೋಗಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. 3ಎ ಮೀಸಲಾತಿ 4% ರಿಂದ 12% ಹೆಚ್ಚಿಸಿ. ನಗರಪ್ರದೇಶದಲ್ಲಿರುವ ಒಕ್ಕಲಿಗರಿಗೆ OBC ಮೀಸಲಾತಿ ನೀಡಬೇಕು. ಬೇರೆ ಬೇರೆ ಸಮುದಾಯಕ್ಕೆ ಮೀಸಲಾತಿ ಸ್ವಾಗತಾರ್ಹ, ಆದರೆ ನಮಗೂ ನಮ್ಮ ಪಾಲು ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಟಿ.ಬಿ ಜಯಚಂದ್ರ ಮನವಿ

    ಒಕ್ಕಲಿಗರಲ್ಲಿ ಎಲ್ಲಾ ದೇವರ ಅಂಶವಿದೆ, ನಮಗೆ ರಾಮ-ಕೃಷ್ಣ ರಂತೆ ಬದುಕುವುದು ಗೊತ್ತು. ಉಗ್ರ ನರಸಿಂಹ ಅವತಾರ ತಾಳುವುದು ಗೊತ್ತು ಸರ್ಕಾರ ನಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತೋ ಆ ರೀತಿ ನಡೆಯುತ್ತೇವೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದಿನ ದಿನಗಳ ಹೋರಾಟ ಯಾವ ರೂಪ ಬೇಕಾದರೂ ತಾಳಬಹುದು. ಚುನಾವಣೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ. ಎಲ್ಲಾ ಪಕ್ಷಗಳಿಗೂ ಒಕ್ಕಲಿಗ ಸಮುದಾಯ ಒತ್ತು ನೀಡಿದೆ. ಎಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು. ಒಕ್ಕಲಿಗರು ಶಾಂತಸಾಗರ ಯಾವಾಗ ಬೇಕಾದರೂ ಅಲೆಗಳು ಎದ್ದೇಳಬಹುದು ಎಂದು ಸರ್ಕಾರಕ್ಕೆ ಶ್ರೀಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ನಾನು ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ – ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಸಿಬಿಐ ದಾಳಿಯ ಮರುದಿನವೇ ಡಿಕೆಶಿ ಮನೆಗೆ ನಂಜಾವದೂತ ಸ್ವಾಮೀಜಿ

    ಸಿಬಿಐ ದಾಳಿಯ ಮರುದಿನವೇ ಡಿಕೆಶಿ ಮನೆಗೆ ನಂಜಾವದೂತ ಸ್ವಾಮೀಜಿ

    ಬೆಂಗಳೂರು: ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ನಂಜಾವದೂತ ಸ್ವಾಮೀಜಿ ಡಿಕೆಶಿಯನ್ನು ಭೇಟಿ ಮಾಡಿದ್ದಾರೆ.

    ಸ್ಪಟಿಕಪುರ ಮಠದ ನಂಜಾವದೂತ ಸ್ವಾಮೀಜಿ ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಗೆ ಬಂದಿದ್ದು, ಡಿಕೆಶಿಯನ್ನು ಭೇಟಿ ಮಾಡಿದ್ದಾರೆ. ಸಿಬಿಐ ದಾಳಿ ಮರುದಿನವೇ ಸ್ವಾಮೀಜಿ ಭೇಟಿಯಾಗಿದ್ದಾರೆ. ಈ ವೇಳೆ ನಂಜಾವದೂತ ಸ್ವಾಮೀಜಿ ಜೊತೆ ಕೆಲ ಕಾಲ ಮಾತನಾಡಿದ್ದಾರೆ.

    ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬುಲಾವ್ ನೀಡಿದ್ದಾರೆ. ನಿನ್ನೆ ದಾಳಿ ಮುಕ್ತಾಯವಾದ ಬಳಿಕ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಹೀಗಾಗಿ ಕನಕಪುರ ಬಂಡೆ ಇಂದು ಬೆಳಗ್ಗೆ 11 ಗಂಟೆಗೆ ಡಿಕೆಶಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

    ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಡಿಕೆ ಬ್ರದರ್ಸ್ ಗೆ ಶಾಕ್ ನೀಡಿದ್ದರು. ಏಕಕಾಲದಲ್ಲಿ 14 ಕಡೆ ಸುಮಾರು 60ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ವೇಳೆ 57 ಲಕ್ಷ ಹಣ ಹಾಗೂ ಕೆಲವೊಂದು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

    ಮತ್ತೊಂಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸಿಬಿಐ ದಾಳಿಗೆ ಕಾರಣ ಅಂತ ಡಿ.ಕೆ ಶಿವಕುಮಾರ್ ನೇರ ಆರೋಪ ಮಾಡಿದ್ದಾರೆ. ಸಿಬಿಐಗೆ ಅನುಮತಿ ಕೊಡೋದು ಬೇಡ. ಇದರ ಬಗ್ಗೆ ಐಟಿ, ಸಿಐಡಿ ತನಿಖೆ ನಡೆಸಬಹುದು ಅಂತ ಅಡ್ವೋಕೇಟ್ ಜನರಲ್ ತಿಳಿಸಿದರು ಕೂಡ ಸರ್ಕಾರ ಅದ್ಯಾರ ಒತ್ತಡದಿಂದ್ಲೋ ಏನೋ, ಸಿಬಿಐ ತನಿಖೆಗೆ ಅನುಮತಿ ಕೊಟ್ಟಿದೆ. ಮುಖ್ಯಮಂತ್ರಿಗಳೇ ನನಗೆ ಎಷ್ಟು ಕಿರುಕುಳ ಕೊಡಬೇಕೋ ಕೊಟ್ಟಿದ್ದೀರಿ ಎಂದಿದ್ದಾರೆ.

  • ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ: ಎಚ್‍ಡಿಕೆ

    ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ: ಎಚ್‍ಡಿಕೆ

    ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಹೋಗಿರಬಹುದು. ಆದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಪರಮಪೂಜ್ಯರ ಆಶೀರ್ವಾದ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು. ಬಮೂಲ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಕೆಎಂಎಫ್ ರಾಜ್ಯಕ್ಕೆ ಬರಲು ತಮ್ಮ ತಂದೆ, ಜೆಡಿಎಸ್ ವರಿಷ್ಠ ಎಚ್.ದೇವೇಗೌಡ ಅವರೇ ಕಾರಣ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಂಜಾವಧೂತ ಸ್ವಾಮೀಜಿಗಳು ಮಾತನಾಡಿ, ಎಚ್‍ಡಿ ಕುಮಾರಸ್ವಾಮಿ ಅವರು 20 ತಿಂಗಳ ಅಧಿಕಾರವನ್ನು ಜನರು ಇನ್ನೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಜನರು ಅಭಿಮಾನದಿಂದ ಮಾತನಾಡುತ್ತಾರೆ. ಅದಕ್ಕೂ ಹೆಚ್ಚಿನ ಆಡಳಿತವನ್ನು 14 ತಿಂಗಳಲ್ಲಿ ನೀಡಿದ್ದರು. ಅದನ್ನ ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳು ಸಹಕಾರ ನೀಡಲಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.

    ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಆದರೆ ಅವಕಾಶ ಸಿಗಲಿಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವೇದಿಕೆಯಲ್ಲಿಯೇ ಸಿಎಂ ಆಗ್ತಾರೆ ಎಂದು ತಿಳಿಸಿದ್ದೆ. ಈಗಲೂ ಹೇಳುತ್ತೇನೆ ಮುಂದೆ ಇನ್ನೊಮ್ಮೆ ರಾಜ್ಯವನ್ನು ಆಳುವ ಯೋಗ ಕುಮಾರಸ್ವಾಮಿ ಅವರಿಗೆ ಬರುತ್ತೆ ಎಂದು ತಿಳಿಸಿದರು.

    ಇದೇ ವಿಚಾರವನ್ನು ಪ್ರಸ್ತಾಪಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ಬಾರಿ ಚಿಕಿತ್ಸೆ ಆಗಿರುವಂತಹ ಹಿನ್ನೆಲೆಯಲ್ಲಿ ಸಣ್ಣ ಸಮಸ್ಯೆಯಿದ್ದು ಹಿಂದೆ ಓಡಾಡುತ್ತಿದ್ದ ಸ್ಪೀಡ್ ನನ್ನಲ್ಲಿಲ್ಲ. ನಾನೂ ಕೂಡ ಸೀನಿಯರ್ ಸಿಟಿಜನ್ 60 ವರ್ಷ ದಾಟಿದ್ದೇನೆ ಎಂದು ತಿಳಿಸಿದರು.

    ಪರಮಪೂಜ್ಯ ಸ್ವಾಮೀಜಿಗಳು ಹೇಳಿದಂತೆ ಅವರ ಆರ್ಶೀವಾದ, ನಮ್ಮ ತಂದೆ ದೇವೇಗೌಡರು ಹಾಗೂ ನನ್ನನ್ನ ಪ್ರೀತಿಯಿಂದ ಕಾಣುವ ಲಕ್ಷಾಂತರ ಕುಟುಂಬದ ಜನರಿದ್ದಾರೆ. ನಿಮ್ಮ ಆರ್ಶೀವಾದದಿಂದ ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸವಿದೆ. ಅದಕ್ಕೆ ಕಾರಣ ನಿಮ್ಮ ಆರ್ಶೀವಾದ ಹಾಗೂ ಪರಮಪೂಜ್ಯರ ಆರ್ಶಿವಾದ ಎಂದು ತಿಳಿಸಿದರು.

  • ಡಿಕೆಶಿ ಏಕೆ ಮುಖ್ಯಮಂತ್ರಿ ಆಗಬಾರದು: ನಂಜಾವಧೂತ ಶ್ರೀ

    ಡಿಕೆಶಿ ಏಕೆ ಮುಖ್ಯಮಂತ್ರಿ ಆಗಬಾರದು: ನಂಜಾವಧೂತ ಶ್ರೀ

    – ಕೆಣಕಿದರೆ ಡಿಕೆಶಿ ದೊಡ್ಡ ಶಕ್ತಿಯಾಗಿ ಹೊರ ಬರುತ್ತಾರೆ
    – ಪ್ರಧಾನಿ ಮೋದಿಯಿಂದ ವೈಯಕ್ತಿಕ ಟಾರ್ಗೆಟ್

    ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾದ ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.

    ಪಟ್ಟನಾಯಕನಹಳ್ಳಿ ಮಠದ ಆವರಣದಲ್ಲಿ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಮುಂದಿನ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಕೂಗಿದರು. ಮಠಕ್ಕೆ ಆಗಮಿಸಿದ ಮಾಜಿ ಸಚಿವರು ಮೊದಲಿಗೆ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಡಿಕೆ ಶಿವಕುಮಾರ್ ಅವರಿಗೆ ಸಂಸದ ಡಿ.ಕೆ.ಸುರೇಶ್, ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಸಾಥ್ ನೀಡಿದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವರೆಗೂ ಮದುವೆಯಾಗಲ್ಲ: ಅಭಿಮಾನಿ ಶಪಥ

    ಮಾಜಿ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಕೆಣಕಿದರೆ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಶಕ್ತಿಯಾಗಿ ಹೊರ ಬರುತ್ತಾರೆ. ಎಲ್ಲರಿಗೂ ಒಳ್ಳೆಯ ಸಮಯ, ಕೆಟ್ಟ ಸಮಯ ಅಂತ ಇರತ್ತದೆ. ಡಿಕೆ ಶಿವಕುಮಾರ್ ಅವರಿಗೆ ಇದ್ದ ಕೆಟ್ಟ ಗಳಿಗೆ ಹೋಗಲಿ ಅಂತ ಪ್ರಾರ್ಥಿಸಿದ್ದೇವೆ. ಅವರು ನಾಡಿನ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದಷ್ಟು ನೋವಾಗಿದೆ, ಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಡಿಕೆ ಶಿವಕುಮಾರ್, ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಯಾವುದೇ ಧ್ವನಿಗೆ ಪೆಟ್ಟು ಬಿದ್ದಾಗ ಪಕ್ಷಾತೀತವಾಗಿ ಬೆಂಬಲಿಸುತ್ತೇವೆ. ಒಕ್ಕಲಿಗರು ಒಂದಾಗಿ ಧ್ವನಿ ಬಲಪಡಿಸುತ್ತೇವೆ ಎಂದು ಹೇಳಿದರು.

    ಡಿಕೆ ಶಿವಕುಮಾರ್ ಅವರು ಏಕೆ ಮುಖ್ಯಮಂತ್ರಿ ಆಗಬಾರದು. ಅವರಿಗೆ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ, ಶಕ್ತಿ ಇದೆ. ಒಕ್ಕಲಿಗ ಸಮುದಾಯದ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಖುಷಿಪಡುತ್ತೇವೆ. ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾರೆ. ಅವರು ಚನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ವೈಯಕ್ತಿಕ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಶ್ರೀಗಳು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಮೋದಿ ಟಾರ್ಗೆಟ್ ಮಾಡಿದ್ದಾರೆ ಅಂತ ಛಾಟಿ ಬೀಸಿದರು.

  • ಡಿಕೆಶಿ ಎರಡನೇ ಸಿದ್ಧಾರ್ಥ್ ಆಗಬಾರದು: ನಂಜಾವಧೂತ ಸ್ವಾಮೀಜಿ

    ಡಿಕೆಶಿ ಎರಡನೇ ಸಿದ್ಧಾರ್ಥ್ ಆಗಬಾರದು: ನಂಜಾವಧೂತ ಸ್ವಾಮೀಜಿ

    – ಸಮೂದಾಯ ಹತ್ತಿಕ್ಕುವ ಕೆಲಸ ನಡೆದ್ರೆ ಮಠಾಧೀಶರಿಂದ ಪ್ರತಿಭಟನೆಗೆ ಕರೆ

    ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೆ ಬಂದ ಸ್ಥಿತಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬರಬಾರದು ಎಂದು ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

    ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ಧಾರ್ಥ್ 1,000 ಕೋಟಿ ರೂ. ಸಾಲ ತೀರಿಸಲಾಗದ ವ್ಯಕ್ತಿಯೇನಲ್ಲ. ಆದರೆ ಮಾನಸಿಕವಾಗಿ ಕುಗ್ಗಿದಾಗ ಮನುಷ್ಯ ಬಗ್ಗಿಹೋಗುತ್ತಾರೆ. ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಎಲ್ಲವನ್ನೂ ಸಮರ್ಥವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.

    ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ನಾವು ಪ್ರತಿಭಟನೆಗೆ ಇಳಿದಿಲ್ಲ. ಸಿದ್ಧಾರ್ಥ್ ಕುಟುಂಬ ಹಾಗೂ ಡಿ.ಕೆ.ಶಿವಕುಮಾರ್ ಅವರ ನೋವಿನಲ್ಲಿ ನಾವು ಇದ್ದೇವೆ ಎಂದು ತಿಳಿಸಲು ಇಲ್ಲಿ ಸೇರಿದ್ದೇವೆ. ಡಿ.ಕೆ.ಶಿವಕುಮಾರ್ ಅವರು ಹೊರ ಬಂದರೆ ಸಂತೋಷ ಪಡುವ ವ್ಯಕ್ತಿಗಳಲ್ಲಿ ನಾನು ಕೂಡ ಒಬ್ಬ. ಸಮೂದಾಯವನ್ನು ಹತ್ತಿಕ್ಕುವ ಕೆಲಸವನ್ನು ಯಾರಾದರು ಮಾಡಿದರೆ ಮಠಾಧೀಶರು ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ ಎಂದು ಗುಡುಗಿದರು.

    ನಾಡು, ನುಡಿಗಾಗಿ ಹೋರಾಟ ಮಾಡಿದ ನೀವು ಈಗ ಒಂದು ಧರ್ಮ, ವ್ಯಕ್ತಿಯ ಪರ ಹೋರಾಟ ಮಾಡುವುದು ಸರಿಯೇ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರನ್ನು ಕೇಳಿದೆ. ಆಗ ಅವರು, ಕಾವೇರಿ ಹೋರಾಟದ ವೇಳೆ ಕನ್ನಡಪರ ಹೋರಾಟಗಾರರನ್ನು ಚೆನ್ನೈನಲ್ಲಿ ಬಂಧಿಸಲಾಗಿತ್ತು. ಯಾರು ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಸ್ವಂತ ಹಣದಿಂದ ನಮಗೆ ಬೇಲ್ ಕೊಡಿಸಿ ಬಂಧನ ಮುಕ್ತಗೊಳಿಸಿದರು. ಅಂತಹ ನಾಯಕನನ್ನು ಬಂಧಿಸಿದಾಗ ಸುಮ್ಮನೆ ಕೂರುವುದು ಸರಿಯಲ್ಲ ಅಂತ ಪ್ರತಿಭಟನೆಗೆ ಇಳಿದಿದ್ದೇವೆ ಅಂತ ತಿಳಿಸಿದರು. ಅವರ ಮಾತು ಕೇಳಿ ನನಗೂ ಕೂಡ ಸ್ಫೂರ್ತಿ ಬಂತು ಎಂದು ಸ್ವಾಮೀಜಿ ಹೇಳಿದರು.

  • ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಕಾಗಿನೆಲೆ ಶ್ರೀ

    ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಕಾಗಿನೆಲೆ ಶ್ರೀ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪರ ಹಾಗೂ ವಿರೋಧ ಹೇಳಿಕೆ ನೀಡುವ ಮೂಲಕ ಸ್ವಾಮೀಜಿಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಾರೆ. ನಂಜಾವಧೂತ ಸ್ವಾಮೀಜಿ ಎಚ್‍ಡಿಕೆಯನ್ನು ಬೆಂಬಲಿಸಿದ ಬೆನ್ನಲ್ಲೇ ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ, ಸಮ್ಮಿಶ್ರ ಸರ್ಕಾರ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಸ್ಥಾನಮಾನ ನೀಡಿಲ್ಲ. ಅಷ್ಟೇ ಅಲ್ಲದೇ ಈಗ ಕುರುಬ ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

    ಸಮ್ಮಿಶ್ರ ಸರ್ಕಾರವು ಒಂದು ಜಾತಿ, ಸಮುದಾಯದ ಅಧಿಕಾರಿಗಳ ವಿರುದ್ಧ ದ್ವೇಷ ಸಾಧಿಸುತ್ತಿದೆ. ಇಂತಹ ಬೆಳವಣಿಗೆಯನ್ನು ಕೂಡಲೇ ಕುಮಾರಸ್ವಾಮಿಯವರು ನಿಲ್ಲಿಸಬೇಕು. ಇಲ್ಲವೇ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಕೆ ನೀಡಿದರು.

    ಸರ್ಕಾರ ಸಮುದಾಯದ ದ್ವೇಷ ಸಾಧನೆ ಮಾಡುತ್ತಿದೆಯೇ ಹೊರತು, ರೈತರ ಆತ್ಮಹತ್ಯೆ ತಡೆಯುವ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಶ್ರೀಗಳು ಸಮ್ಮಿಶ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

    ಸರ್ಕಾರಕ್ಕೆ ಎಚ್ಚರಿಕೆ: ಆರಂಭದಲ್ಲಿ ಕುರುಬ ಸಮಾಜದ ಮುಖಂಡರಾದ ಸಿದ್ದರಾಮಯ್ಯರನ್ನು ಸರ್ಕಾರ ಕಡೆಗಣಿಸಿದ್ದ ಸರ್ಕಾರ ಈಗ ಕುರುಬ ಜನಾಂಗದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಕುರುಬ ಸಮಾಜ ಬಹಳ ಮಹತ್ವದ ಪಾತ್ರ ವಹಿಸಿದೆ. ನಮ್ಮ ಸಮಾಜ ಕಡೆಗಣಿಸಿದರೆ ಹೋರಾಟ ಮಾಡಬೇಕಾದೀತು ಎಂದು ಕುರುಬ ಸಮಾಜದ ಮುಖಂಡ ಸಣ್ಣಕ್ಕಿ ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಬುಧವಾರ ನಡೆದಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರು ಸಮ್ಮಿಶ್ರ ಸರ್ಕಾರದ ಪರವಾಗಿ ಮಾತನಾಡಿದ್ದರು. ಅಲ್ಲದೇ ಸರ್ಕಾರ ಉಳಿಸಿಕೊಂಡು ಹೋಗುವಂತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈಗ ಸಮ್ಮಿಶ್ರ ಸರ್ಕಾರ ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಯಿತೇ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.