ಬೆಂಗಳೂರು\ ಮೈಸೂರು: ಚಲಿಸುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್‍ನಲ್ಲಿ (KSRTC Bus) ಕೇಕ್ ಕಟ್ ಮಾಡಿ, ಕಂಡಕ್ಟರ್ ಹುಟ್ಟುಹಬ್ಬ ಆಚರಿಸಿರುವ ವೀಡಿಯೋ ವೈರಲ್ ಆಗುತ್ತಿದೆ.
ನಂಜನಗೂಡು (Nanjanaguru) ತಾಲೂಕಿನ ಹುಲ್ಲಹಳ್ಳಿ ಕಣೇನೂರು ಮಾರ್ಗವಾಗಿ ಹೆಚ್‍ಡಿ ಕೋಟೆಯ ಕಾರಪುರಕ್ಕೆ ಬಸ್ ತೆರಳುತ್ತಿತ್ತು. ಈ ವೇಳೆ ಇಂಜಿನ್ ಬಾಕ್ಸ್ ಮೇಲೆ ಕೆಕ್ ಕತ್ತರಿಸಿ, ಫ್ಲವರ್ ಬ್ಲಾಸ್ಟ್ ಮಾಡಿ ಬರ್ತಡೇ ಸೆಲೆಬ್ರೇಷನ್ ಮಾಡಲಾಗಿದೆ. ಈ ವೇಳೆ ಬಸ್ ಚಾಲಕನ ಗಮನ ಆ ಕಡೆಗೆ ತಿರುಗಿದೆ. ಇದರೀಂದ ಬಸ್‍ನಲ್ಲಿದ್ದ ಪ್ರಯಾಣಿಕನೊಬ್ಬ ಬಸ್ ಸರಿಯಾಗಿ ಹೋಗ್ತಿದೆಯಾ ಎಂದು ಕೂಗಿದ್ದಾರೆ. ಇದನ್ನೂ ಓದಿ:
ಪ್ರಯಾಣಿಕರಿದ್ದ ಬಸ್‍ನಲ್ಲಿ, ಅದು ಚಲಿಸುತ್ತಿರುವಾಗಲೇ, ಹುಟ್ಟುಹಬ್ಬದ ಆಚರಣೆ ಬೇಕಿತ್ತಾ ಎಂದು ಪ್ರಯಾಣಿಕರು ಹಾಗೂ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:
ಮಗುವನ್ನ ಖರೀದಿ ಮಾಡಿದವರನ್ನು ಸಂಪರ್ಕಿಸಿದಾಗ 14,000 ರೂ.ಗೆ ಮಗು ಮಾರಾಟ ಮಾಡಿರುವುರು ಬೆಳಕಿಗೆ ಬಂದಿದೆ. ನಾವು ನೀಡಿದ ಹಣವನ್ನು ಹಿಂದಿರುಗಿಸಿದರೆ ಮಗು ಕೊಡುವುದಾಗಿ ಮಗು ಖರೀದಿ ಮಾಡಿದವರು ಹೇಳಿದ್ದರು. ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಹೇಳಿ ಮಗುವನ್ನು ವಾಪಸ್ ಪಡೆದುಕೊಂಡಿದ್ದರು. ಇದನ್ನೂ ಓದಿ: 2023-24ನೇ ಸಾಲಿನಲ್ಲಿ ಸಿಎಂ ಹೆಲಿಕಾಪ್ಟರ್ ಪ್ರಯಾಣಕ್ಕೆ 11 ಕೋಟಿ ಹಣ ಖರ್ಚು
ಈವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಮಗುವನ್ನ ಮಾರಾಟ ಮಾಡಿದವರಾಗಲಿ, ಮಧ್ಯವರ್ತಿಯಾಗಲಿ ಅಥವಾ ಖರೀದಿಸಿದವರನ್ನಾಗಲಿ ವಶಕ್ಕೆ ಪಡೆದಿಲ್ಲ. ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಮಗುವನ್ನು ವಾಪಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
– ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ
ಮೈಸೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದ ಬೆನ್ನಲ್ಲೇ ಮೈಸೂರಿನ ನಂಜನಗೂಡಿನಲ್ಲೂ (Nanjanagudu) ಕೂಡ ಕಿಡಿಗೇಡಿಯೊಬ್ಬ ಹಸುವಿನ ಬಾಲ ಕತ್ತರಿಸಿದ್ದಾನೆ.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನಂಜನಗೂಡಿನ ನಂಜುಡೇಶ್ವರ ದೇವಾಲಯಕ್ಕೆ ಹರಕೆ ರೂಪದಲ್ಲಿ ಭಕ್ತರು ಹಸುಗಳನ್ನು ದಾನವಾಗಿ ನೀಡುವ ಪದ್ಧತಿ ಇದೆ. ಹೀಗೆ ದಾನ ನೀಡಿದ ಹಸುಗಳು ದೇವಸ್ಥಾನದ ಆವರಣದಲ್ಲೇ ಇರುತ್ತವೆ. ಹೀಗೆ ಇದ್ದ ಹಸುಗಳನ್ನು ಕದಿಯಲು ಇವತ್ತು ಬೆಳಗಿನ ಜಾವ ಕಳ್ಳ ಬಂದಿದ್ದಾನೆ. ಕಳ್ಳನಿಂದ ಹಸು ತಪ್ಪಿಸಿಕೊಳ್ಳಲು ಮುಂದಾದಾಗ ಮಚ್ಚಿನಿಂದ ಹಸುವಿನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಮಚ್ಚು ಹಸುವಿನ ಬಾಲಕ್ಕೆ ಬಿದ್ದು, ಬಾಲ ತುಂಡಾಗಿ ಹಸುವಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ: ಪ್ರತಾಪ್ ಸಿಂಹ ಕಿಡಿ
ಸ್ಥಳೀಯರಿಗೆ ವಿಚಾರ ತಿಳಿದ ತಕ್ಷಣ ಹಸುವನ್ನು ರಕ್ಷಿಸಲು ಮುಂದಾಗಿದ್ದಾರೆ. ಹಸುವನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಸದ್ಯ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸರು ಕೇಸ್ ದಾಖಲಿಸಿ ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.
ಭಕ್ತರು ದೇವಸ್ಥಾನಕ್ಕೆ ದಾನವಾಗಿ ನೀಡುವ ಹಸುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದೆ. ಗೋಕಳ್ಳರ ಹಾವಳಿಯು ಹೆಚ್ಚಾಗಿದ್ದು, ಇವರಿಂದ ಗೋವುಗಳ ರಕ್ಷಣೆಗೆ ಸೂಕ್ತ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮೈಸೂರು: ಜನವರಿ 4 ರಂದು ನಂಜನಗೂಡು ಬಂದ್‌ಗೆ (Nanjanagudu Bandh) ಕರೆ ನೀಡಲಾಗಿದೆ. ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಗರೀಕರಿಂದ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.
ಏನಿದು ಪ್ರಕರಣ..?: ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದರು. ಆದರೂ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿತ್ತು.
ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು, ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಲಿ: ಸಿದ್ದರಾಮಯ್ಯ
ದೂರಿನಲ್ಲೇನಿದೆ..?: ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನ ಎರಚುವ ಮೂಲಕ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ವಿವರಿಸಿದ್ದೇವೆ. ಆದರೂ ಕೆಲವು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟ್ಲಿಯಿಂದ ನೀರು ಎರಚಿದ್ದಾರೆ. ಇದು ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದಿದ್ದರು.
ಮೈಸೂರು: ವರುಣಾ (Varuna) ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ (Siddaramaiah) ಅವರು ಮತದಾರರಿಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದರಾ? ಇದೇ ಅಂಶವೇ ಅವರ ಗೆಲುವಿಗೆ ಕಾರಣವಾಯ್ತಾ ಎಂಬ ಪ್ರಶ್ನೆಗೆ ಖುದ್ದ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೌದು ಎನ್ನುವ ಉತ್ತರವನ್ನು ಕೊಟ್ಟು, ಬಾಯಿತಪ್ಪಿ ಚುನಾವಣಾ ಸತ್ಯ ಬಹಿರಂಗಪಡಿಸಿದ್ದಾರೆ.
ವರುಣಾ ಕ್ಷೇತ್ರದ ಚುನಾವಣೆ ವೇಳೆ ಕೊಟ್ಟ ಗಿಫ್ಟ್ ಬಗ್ಗೆ ಬಹಿರಂಗ ಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೆ ನೀಡಿದ್ದಾರೆ. ಚುನಾವಣೆ ವೇಳೆ ವರುಣಾ ಕ್ಷೇತ್ರದ ಮಡಿವಾಳ ಸಮುದಾಯ ಸಾವಿರಾರು ಜನರಿಗೆ ಕುಕ್ಕರ್, ಐರನ್ ಬಾಕ್ಸ್ ವಿತರಣೆ ಮಾಡಲಾಗಿತ್ತು ಎಂಬ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ತಮಿಳುನಾಡಿಗೆ ಹರಿದ ಕಾವೇರಿ – KRS, ಕಬಿನಿಯಿಂದ 3,000 ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಮಡಿವಾಳ ಸಮುದಾಯ ಭವನದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, ಭಾಷಣದ ವೇಳೆ ಚುನಾವಣಾ ಸತ್ಯ ಬಹಿರಂಗಪಡಿಸಿದ್ದು ಚುನಾವಣಾ ಸಮಯದಲ್ಲಿ ವರುಣಾ ಕ್ಷೇತ್ರದ ಮಡಿವಾಳ ಸಮುದಾಯ ಮತದಾರರಿಗೆ ಸಮುದಾಯದ ರಾಜ್ಯಾಧ್ಯಕ್ಷ ನಂಜಪ್ಪ ಕುಕ್ಕರ್, ಐರನ್ ಬಾಕ್ಸ್ ವಿತರಿಸಲು ಸಿದ್ದ ಮಾಡಿಕೊಂಡಿದ್ದರು. ಕಾರಣಾಂತರಗಳಿಂದ ಎರಡು ಮೂರು ಬಾರಿ ಮುಂದೂಡಲಾಗಿತ್ತು. ನಂತರ ತಂದೆಯವರಿಂದ ದಿನಾಂಕ ಪಡೆದು, ಅವರ ಕೈಯಲ್ಲೇ ಕುಕ್ಕರ್ ಹಾಗೂ ಐರನ್ ಬಾಕ್ಸ್ ಕೊಡಿಸಿದರು ಎಂದಿದ್ದಾರೆ.
ಆ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು. ಮಡಿವಾಳ ಸಮುದಾಯದ ಹೆಚ್ಚು ಮತ ಬೀಳಲು ಕಾರಣವಾಯಿತು. ಮಡಿವಾಳ ಸಮುದಾಯ ಹೆಚ್ಚಿನ ಬೆಂಬಲ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ ಎಂದು ಯತೀಂದ್ರ ಹೇಳಿದ್ದಾರೆ. ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್
ಮೈಸೂರು: ಹೇ ನಡೀಯಪ್ಪ ನೀನು ನಮಗೆ ತಲೆ ಬಿಸಿಯಾಗಿದೆ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೊರಟ ಪ್ರಸಂಗ ಇಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.
ಹೌದು. ನಂಜನಗೂಡು ಟಿಕೆಟ್ ಟೆನ್ಷನ್ ನಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಇಂದು ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ (Dr. H C Mahadevappa) ದೌಡಾಯಿಸಿದ್ದಾರೆ. ಕೆಲಕಾಲ ನಂಜನಗೂಡು ಟಿಕೆಟ್ ವಿಚಾರವಾಗಿ ಮಾತುಕತೆ ನಡೆದಿದ್ದು, ನಗರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಹೊರಟಿದ್ದು, ಟೆನ್ಶನ್ ನಲ್ಲಿರುವುದಕ್ಕೆ ಪುಷ್ಠಿ ನೀಡಿತ್ತು. ಇದನ್ನೂ ಓದಿ: ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬರುವುದಕ್ಕಿಂತ ವಿಪಕ್ಷದಲ್ಲಿ ಇರೋದೆ ಒಳ್ಳೆಯದು: ಜಾರಕಿಹೊಳಿ
ಧ್ರುವನಾರಾಯಣ (Dhruvanarayan) ಮಗನಿಗೆ ಟಿಕೆಟ್ ನೀಡಬೇಕೆಂದು ಗಲಾಟೆಯಾದ ವಿಚಾರಕ್ಕೆ ನಂಜನಗೂಡು ಟಿಕೆಟ್ ಆಕಾಂಕ್ಷಿ ಡಾ.ಹೆಚ್‍ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಯಾರಿಗೆ ಜೀವನದ ಮೂಲ್ಯದ ಬಗ್ಗೆ ಮಹತ್ವ ಇಲ್ಲವೋ ಅವರೆಲ್ಲಾ ಈ ರೀತಿ ಮಾತನಾಡುತ್ತಾರೆ. ಅಧಿಕಾರ, ಅಂತಸ್ತಿಗಿಂತಾ ಜೀವ ಮುಖ್ಯ. ಜೀವ ಹೋದ್ರೆ ಮತ್ತೊಂದು ಬಾರಿ ಸಿಕ್ಕಲ್ಲ. ಅಘಾಕಾರಿ ಘಟನೆ ನಡೆದು ಧ್ರುವನಾರಾಯಣ ತೀರಿ ಹೋಗಿದ್ದಾರೆ. ಆ ನೋವು ಎಲ್ಲರಲ್ಲೂ ನನ್ನಲ್ಲೂ ಸೇರಿದಂತೆ ಇದೆ. ಜೀವದ ಮುಂದೆ ಪೊಲಿಟಿಕಲ್ ಪವರ್, ಟಿಕೆಟ್ ಯಾವುದೇ ಇಂಪಾರ್ಟೆಂಟ್ ಅಲ್ಲ ಎಂದ ಹೇಳಿದರು.
ಮೈಸೂರು: ತುಂಬಿ ಹರಿಯುತ್ತಿರುವ ಕಪಿಲೆಯಲ್ಲಿ ಈಜಲು ತೆರಳಿ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಹಮದ್ ಕರೀಂ ನಾಪತ್ತೆಯಾದ ಯುವಕ. ನಂಜನಗೂಡು ತಾಲೂಕು ಹೆಜ್ಜಿಗೆ ಗ್ರಾಮದ ಕಪಿಲೆ ಬಲಿ ಘಟನೆ ನಡೆದಿದೆ. ಹೆಜ್ಜಿಗೆ ಸೇತುವೆಯಿಂದ ಮೂವರು ಯುವಕರು ನದಿಗೆ ಹಾರಿ ಹುಚ್ಚಾಟ ಮೆರೆದಿದ್ದಾರೆ. ಇದರಲ್ಲಿ ಇಬ್ಬರು ಈಜಿ ದಡ ಸೇರಿದರೆ ಕರೀಂ ನಾಪತ್ತೆಯಾಗಿದ್ದಾನೆ.
ಬೆಂಗಳೂರು: ನಾವು ದೇವಾಲಯ ಕಟ್ಟಲು ಬಂದವರು, ಕೆಡವಲು ಬಂದವರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಂಜನಗೂಡು ದೇವಾಲಯ ಕೆಡವಿದರ ಕುರಿತು ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಂಜನಗೂಡು ದೇವಸ್ಥಾನ ಕೆಡವಲಾಗಿತ್ತು. ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳ ಭಾವನೆಗೆ ಧಕ್ಕೆ ಆಗಿತ್ತು ಎಂದರು.
ನಮ್ಮ ದೇಶದಲ್ಲಿ ಭಾವನೆಗಳ ಆಧಾರದ ಮೇಲೆಯೇ ನಾವೆಲ್ಲ ಇರೋದು. ಸೃಷ್ಟಿಯೇ ಭಗವಂತ ಅಂತ ನಂಬುವವರು ನಾವು. ದೇವಾಲಯ ಕಟ್ಟಲು ಬಂದೋವ್ರು ನಾವು ಕೆಡವಲು ಬಂದೋವ್ರಲ್ಲ. ಅಚಾತುರ್ಯ ಆಗಿದೆ ಅದು ಹೇಗಾಯ್ತೋ ಗೊತ್ತಿಲ್ಲ. ಆದರೆ ಅದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಸಿ.ಟಿ ರವಿ ಸಮಜಾಯಿಷಿ ನೀಡಿದ್ದಾರೆ. ಇದನ್ನೂ ಓದಿ: ಜೂಜಾಟದ ಬಿಗಿ ಕ್ರಮಕ್ಕೆ, ಪೊಲೀಸ್ ಕಾಯ್ದೆ ತಿದ್ದುಪಡಿ ತರುತ್ತಿದ್ದೇವೆ: ಬೊಮ್ಮಾಯಿ
ಹೊಸ ಮಸೂದೆಯನ್ನು ತರುವ ಮೂಲಕ ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಗಾಗಿ ದೇವಸ್ಥಾನಕ್ಕೆ ರಕ್ಷಣೆ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನೀತಿಯನ್ನು ನಾನು ಸ್ವಾಗತಿಸುತ್ತಿದ್ದೇನೆ. ದೇವಸ್ಥಾನ ಒಡೆದಾಗ ಕಾಂಗ್ರೆಸ್ ಟೀಕೆ ಮಾಡಿತ್ತು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಆದರೆ ಇಷ್ಟು ಬೇಗ ಕಾಂಗ್ರೆಸ್ ಅವರು ಬಣ್ಣ ಬದಲಾಯಿಸಿದ್ರು. ಈಗ ನಾವು ತರುತ್ತಿರುವ ಮಸೂದೆಯನ್ನು ಪ್ರಶ್ನಿಸ್ತಾ ಇದ್ದಾರೆ. ಅವರದ್ದು ಸೋಗಲಾಡಿತನ ಅನ್ನೋದು ಅರ್ಥ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು
ಕಾಂಗ್ರೆಸ್ ಅವರು ಹಿಂದೆಯೂ ಹಿಂದು ಪರ ಇಲ್ಲ. ಈಗಲೂ ಇಲ್ಲ ಅನ್ನೋದು ಗೊತ್ತಾಗ್ತಾ ಇದೆ. ಬಿಜೆಪಿ ಮೇಲೆ ಆರೋಪ ಹೊರಿಸಲು ಅವಕಾಶ ಅಂತ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಹೋರಾಟ ನಾಟಕೀಯವಾಗಿದ್ದು, ಡ್ರಾಮ ಅನ್ನೋದು ಅರ್ಥ ಆಗುತ್ತಿದೆ. ಡ್ರಾಮ ಅಲ್ಲದೇ ಹೋದರೆ ಈಗ್ಯಾಕೆ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಅಂತ ಉತ್ತರಿಸಬೇಕು ಎಂದು ತಿಳಿಸಿದರು.