Tag: nanjanagoodu

  • ಕುಡುಕ ಲಾರಿ ಚಾಲಕನ ಅವಾಂತರ – ಡ್ರೈವರ್ ನನ್ನ ಚೇಸ್ ಮಾಡಿ ಹೊಡೆದ ಸ್ಥಳೀಯರು

    ಕುಡುಕ ಲಾರಿ ಚಾಲಕನ ಅವಾಂತರ – ಡ್ರೈವರ್ ನನ್ನ ಚೇಸ್ ಮಾಡಿ ಹೊಡೆದ ಸ್ಥಳೀಯರು

    ಮೈಸೂರು: ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸುತ್ತಾ ರದ್ಧಾಂತ ಸೃಷ್ಟಿಸಿದ ಲಾರಿ ಚಾಲಕನನ್ನು ಗ್ರಾಮಸ್ಥರು ಚೇಸಿಂಗ್ ಮಾಡಿ ಹಿಡಿದು ಗೂಸಾ ನೀಡಿರುವ ಘಟನೆ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಲಾರಿ ಚಾಲಕ ಹಾಗೂ ಕ್ಲೀನರ್ ಈ ಅವಾಂತರ ಮಾಡಿದ್ದಾರೆ. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ದಾರಿಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ರಾದ್ಧಾಂತ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.

    ಇವರನ್ನು ನಂಜನಗೂಡು ರಸ್ತೆಯಲ್ಲಿನ ಕಡಕೊಳ ಗ್ರಾಮದ ಟಿವಿಎಸ್ ಕಾರ್ಖಾನೆ ಬಳಿ ಹಿಡಿಯಲಾಗಿದೆ. ಸಿಕ್ಕಿಬಿದ್ದ ಡ್ರೈವರ್ ಮತ್ತು ಕ್ಲೀನರ್ ಗೆ ಸಾರ್ವಜನಿಕರು ಸಖತ್ ಗೂಸಾ ನೀಡಿದ್ದಾರೆ. ಪಾನಮತ್ತರಾಗಿದ್ದ ಇಬ್ಬರನ್ನ ಪೊಲೀಸರ ವಶಕ್ಕೆ ನೀಡಲಾಗಿದೆ.

    ಸುಮಾರು 10 ಕಿ.ಮೀ ವರೆಗೂ ಅಡ್ಡಾದಿಡ್ಡಿ ಲಾರಿ ಓಡಿಸಿದ ಚಾಲಕ, ಅಡ್ಡ ಬಂದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದ್ದಾನೆ. ಲಾರಿ ಅಡ್ಡಗಟ್ಟಲು ಯತ್ನಿಸಿದವರ ಮೇಲೆ ಕೂಡ ದರ್ಪ ತೋರಿದ್ದಾನೆ.

    https://www.youtube.com/watch?v=5Rr6V-OQ7aM

  • ಲಕ್ಷಾಂತರ ರೂ. ಅವ್ಯವಹಾರ ಬಯಲು- ಅಧಿಕಾರಿಗಳ ಮುಂದೆ ಮಾತ್ರೆ ನುಂಗಿದ ನಂಜನಗೂಡು ದೇವಾಲಯದ ಸಿಬ್ಬಂದಿ

    ಲಕ್ಷಾಂತರ ರೂ. ಅವ್ಯವಹಾರ ಬಯಲು- ಅಧಿಕಾರಿಗಳ ಮುಂದೆ ಮಾತ್ರೆ ನುಂಗಿದ ನಂಜನಗೂಡು ದೇವಾಲಯದ ಸಿಬ್ಬಂದಿ

    ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಹೈಡ್ರಾಮಾ ನಡೆದಿದ್ದು ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ತುಲಾಭಾರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿಲಾಷ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅವ್ಯವಹಾರದ ಆರೋಪ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಲೆಕ್ಕ ಪರಿಶೋಧನೆ ಮಾಡುತ್ತಿದ್ದರು. ಈ ವೇಳೆ ಲಕ್ಷಾಂತರ ರೂ. ಅವ್ಯವಹಾರ ಬಯಲಾದ ಹಿನ್ನೆಲೆಯಲ್ಲಿ ಗಲಿಬಿಲಿಗೊಂಡ ಅಭಿಲಾಷ್ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಪರಿಶೀಲನೆ ನಡೆಸಲು ಬಂದ ಅಧಿಕಾರಿಗಳ ಮುಂದೆಯೇ ಮಾತ್ರೆ ನುಂಗಿ ಅಭಿಲಾಷ್ ಆತ್ಮಹತ್ಯೆ ಯತ್ನಿಸಿದ್ದಾರೆ. ಸದ್ಯ ಖಾಸಗಿ ಕ್ಲಿನಿಕ್ ಗೆ ಅಭಿಲಾಷ್ ದಾಖಲಾಗಿದ್ದಾರೆ.

  • ತಂಬಾಕು ಬ್ಯಾರನ್‍ಗೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ತಂಬಾಕು ಸುಟ್ಟು ನಾಶ

    ತಂಬಾಕು ಬ್ಯಾರನ್‍ಗೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ತಂಬಾಕು ಸುಟ್ಟು ನಾಶ

    ಮೈಸೂರು: ತಂಬಾಕು ಬ್ಯಾರನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ತಂಬಾಕು ಸುಟ್ಟು ನಾಶವಾಗಿರೋ ಘಟನೆ ಮೈಸೂರಿನಲ್ಲಿ ನಡೆದಿದೆ.

    ನಂಜನಗೂಡಿನ ಮಡುವಿನಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿದ್ದ ತಂಬಾಕು ಬ್ಯಾರನ್‍ಗೆ ಬೆಂಕಿ ಬಿದ್ದಿದ್ದು, ಬಹುತೇಕ ತಂಬಾಕು ಸುಟ್ಟು ಕರಕಲಾಗಿದೆ. ಕಿಡಿಗೇಡಿಗಳು ಬೆಂಕಿ ಹಂಚಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

    ರೈತ ಸಿದ್ದಪ್ಪ ಕಳೆದ 10 ವರ್ಷಗಳಿಂದ ಇದೇ ಸ್ಥಳದಲ್ಲಿ ತಂಬಾಕು ಹದ ಮಾಡಿ ನಂತರ ನೇರವಾಗಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಇದೀಗ 5 ಲಕ್ಷ ರೂ. ಮೌಲ್ಯದ ತಂಬಾಕು ಬೆಂಕಿಗಾಹುತಿಯಾಗಿರೋ ಶಂಕೆಯಿದೆ.

    ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

     

  • ಶ್ರೀಕಂಠನ ಸನ್ನಿಧಾನದಲ್ಲಿ ಉಪ ಕದನ – ಶ್ರೀನಿವಾಸ್‍ಪ್ರಸಾದ್, ಕಳಲೆ ಕೇಶವಮೂರ್ತಿ ಹಣಾಹಣಿ

    ಶ್ರೀಕಂಠನ ಸನ್ನಿಧಾನದಲ್ಲಿ ಉಪ ಕದನ – ಶ್ರೀನಿವಾಸ್‍ಪ್ರಸಾದ್, ಕಳಲೆ ಕೇಶವಮೂರ್ತಿ ಹಣಾಹಣಿ

    ಮೈಸೂರು: ನಂಜನಗೂಡು ಉಪ ಚುನಾವಣೆಯಲ್ಲಿ ಮತದಾನ ಆರಂಭವಾಗಿದೆ. ಸಚಿವ ಸ್ಥಾನ ಕಳೆದುಕೊಂಡು ಕುಪಿತಗೊಂಡ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ನಂಜನಗೂಡಿನಲ್ಲಿ ಬಿಜೆಪಿಯಿಂದ ಸ್ಫರ್ಧೆಗೆ ಇಳಿದಿದ್ದಾರೆ.

    ಸ್ವತಃ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಡೀ ಸರ್ಕಾರವೇ ಪ್ರಚಾರ ನಡೆಸಿದ್ರೆ, ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಾಳಯ ಪ್ರತಿಷ್ಠೆಯ ಕಣದಲ್ಲಿ ಸವಾಲೊಡ್ಡಿದೆ.

    ಬಿಜೆಪಿ ಚಿಹ್ನೆಯ ಅಡಿಯಲ್ಲಿ ಶ್ರೀನಿವಾಸ್‍ಪ್ರಸಾದ್ ಮತ್ತೊಮ್ಮೆ ಅದೃಷ್ಟ ಮತ್ತು ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ಇತ್ತ ಜೆಡಿಎಸ್‍ನಿಂದ ಪಕ್ಷಾಂತರಗೊಂಡಿದ್ದ ಕಳಲೆ ಕೇಶವಮೂರ್ತಿರನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿದೆ. ಉಪ ಯುದ್ಧದಿಂದ ಜೆಡಿಎಸ್ ದೂರ ಸರಿದಿದೆ. ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 506 ಮತದಾರರಿದ್ದಾರೆ. ಅವರಲ್ಲಿ 1 ಲಕ್ಷದ 1 ಸಾವಿರದ 267 ಮಂದಿ ಪುರುಷರು, 99 ಸಾವಿರದ 231 ಮಹಿಳೆಯರಿದ್ದಾರೆ. ಒಟ್ಟು 236 ಮತಗಟ್ಟೆಗಳಲ್ಲಿ ಮತ ಹಕ್ಕಿನ ಚಲಾವಣೆಯಾಗಲಿದೆ.

    ಕಳಲೆಯಿಂದ ನೀತಿ ಸಂಹಿತೆ ಉಲ್ಲಂಘನೆ: ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಳಲೆ ಕೇಶವಮೂರ್ತಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಆದ್ರೆ ಮತದಾನದ ವೇಳೆ ಮತಗಟ್ಟೆಯೊಳಗೆ ಪಕ್ಷದ ಶಾಲು ಧರಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

  • ವಿಡಿಯೋ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ – ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್‍ವೈ

    ವಿಡಿಯೋ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ – ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್‍ವೈ

    ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ. ನಗದು ಹಣ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಗುಂಡ್ಲುಪೇಟೆಯ ಅಣ್ಣೂರು ಕೇರಿ ಬಳಿಯ ವಡ್ಡರ ಹೊಸಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನಿರ್ದೇಶನದಂತೆ ಗ್ರಾಮಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಎಲ್ಲರೆದುರೇ ಎರಡು ಸಾವಿರ ರೂ. ಮುಖಬೆಲೆಯ 50 ನೋಟುಗಳನ್ನು ಮೃತ ರೈತನ ಕುಟುಂಬದವರಿಗೆ ನೀಡಿದ್ರು. ಆದ್ರೆ ಹಣ ನೀಡುವಾಗ ಕ್ಯಾಮೆರಾಗಳನ್ನು ಆಫ್ ಮಾಡಿಸಿದ್ರು ಎನ್ನಲಾಗಿದೆ.

    ಇದೀಗ ಬಿಎಸ್ ಯಡಿಯೂರಪ್ಪ ಹಣ ನೀಡುತ್ತಿರುವ ವಿಡಿಯೋ ತುಣುಕು ವಾಟ್ಸಪ್ ನಲ್ಲಿ ಹರದಾಡಿ ವೈರಲ್ ಆಗಿದೆ. ಒಂದು ಲಕ್ಷ ರೂಪಾಯಿ ಪಕ್ಷದಿಂದ ನೆರವು ನೀಡಿದ್ದೇವೆ ಎಂದು ಸ್ವತಃ ಯಡಿಯೂರಪ್ಪನವರೇ ಮಾಧ್ಯಮದವರಿಗೆ ಹೇಳಿದ್ದಾರೆ. ಇದು ಒಂದು ಸಮುದಾಯದವನ್ನು ಓಲೈಕೆ ಮಾಡುವ ತಂತ್ರ ಎನ್ನಲಾಗ್ತಿದೆ.

    https://www.youtube.com/watch?v=3eATukzwo_g