Tag: Nani

  • ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

    ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

    ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ ಮೆಗಾ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ “ದಸರಾ’ (Dasara) ಟೀಸರ್ (Teaser) ಬಿಡುಗಡೆಗೆ ಒಂದೇ‌ ದಿನ ಬಾಕಿ ಇದೆ. ಬಹು ನಿರೀಕ್ಷಿತ ಟೀಸರ್ ಬಿಡುಗಡೆಯನ್ನು ಸಿನಿ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಜನವರಿ 30 ಟೀಸರ್ ಬಿಡುಗಡೆಯ ವಿಶೇಷತೆಯನ್ನು ಚಿತ್ರತಂಡ ರಿವೀಲ್ ಮಾಡಿದ್ದು ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯ ಸ್ಟಾರ್ ನಟರು ಟೀಸರ್ ಬಿಡುಗಡೆ ಮಾಡಲಿದ್ದಾರೆ.

    ಮಾಸ್ ಆಕ್ಷನ್ ಸಬ್ಜೆಕ್ಟ್ ಒಳಗೊಂಡ ‘ದಸರಾ’ ಈಗಾಗಲೇ ಸಿನಿ ಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರ್ತಿರುವ ಚಿತ್ರದಲ್ಲಿ ನಾನಿ ಮಾಸ್ ಅವತಾರದಲ್ಲಿ ರಂಜಿಸಲು ರೆಡಿಯಾಗಿದ್ದು, ಮಾರ್ಚ್ 30ರಂದು ಬಿಡುಗಡೆಯಾಗುತ್ತಿರುವ ಚಿತ್ರದ ಟೀಸರ್ ಝಲಕ್ ನಾಳೆ ಬಿಡುಗಡೆಯಾಗುತ್ತಿದೆ.  ಬಾಲಿವುಡ್ ನಟ ಶಾಹಿದ್ ಕಪೂರ್, ಧನುಷ್ (Dhanush), ರಕ್ಷಿತ್ ಶೆಟ್ಟಿ (Rakshit Shetty), ದುಲ್ಕರ್ ಸಲ್ಮಾನ್ (Dulquer Salmaan) ಚಿತ್ರದ  ಮ್ಯಾಸಿವ್ ಟೀಸರ್ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ವಿಶೇಷ ವೀಡಿಯೋ ಮುಖಾಂತರ ಹಂಚಿಕೊಂಡಿದೆ.

    ನಾನಿ ಹಾಗೂ ಕೀರ್ತಿ ಸುರೇಶ್ ಜೋಡಿಯಾಗಿರುವ ‘ದಸರಾ’ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 30ರಂದು ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ ಟೀಸರ್ ಝಲಕ್ ಮೂಲಕ ಪ್ರೇಕ್ಷಕರ ಮನ ಸೆಳೆಯಲು ಸಜ್ಜಾಗಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ವರ್ಷಕ್ಕೆ ನಾನಿ ನಟನೆಯ 30ನೇ ಸಿನಿಮಾ ಲಾಂಚ್

    ಹೊಸ ವರ್ಷಕ್ಕೆ ನಾನಿ ನಟನೆಯ 30ನೇ ಸಿನಿಮಾ ಲಾಂಚ್

    ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಾನಿ ಮೂವತ್ತನೇ ಸಿನಿಮಾ ಇಂದು ಅಧೀಕೃತವಾಗಿ ಲಾಂಚ್ ಆಗಿದೆ. ಕೆಲ ದಿನಗಳ ಹಿಂದೆ ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಾನಿಯೊಂದಿಗೆ ಮುಂದಿನ ಸಿನಿಮಾ ಮಾಡೋದಾಗಿ ಮಾಹಿತಿ ಹಂಚಿಕೊಂಡಿತ್ತು. ಆದ್ರೆ ಸಿನಿಮಾ ನಿರ್ದೇಶಕರು, ತಾರಾಬಳಗ, ತಂತ್ರಜ್ಞರು ಯಾವುದರ ಬಗ್ಗೆಯೂ ತಿಳಿಸಿರಲಿಲ್ಲ. ಇದೀಗ ಹೊಸ ವರ್ಷದ ಆರಂಭದ ದಿನ ಚಿತ್ರತಂಡ ವೀಡೀಯೋ ತುಣುಕನ್ನು ಬಿಡುಗಡೆ ಮಾಡುವ ಮೂಲಕ ನಾನಿ ಮೂವತ್ತನೇ ಸಿನಿಮಾವನ್ನು ಅಧೀಕೃತವಾಗಿ ಲಾಂಚ್ ಮಾಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

    ನಾನಿ ಮೂವತ್ತನೇ ಸಿನಿಮಾಗೆ ಶೌರ್ಯುವ್ ಆಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಇದನ್ನೂ ಓದಿ: ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

    ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಚೆರುಕುರಿ ವೆಂಕಟ ಮೋಹನ್, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಾನಿ ಮೂವತ್ತನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಯುವ ಹಾಗೂ ಪ್ರತಿಭಾವಂತ ತಂತ್ರಜ್ಞರು ಈ ಚಿತ್ರದ ಭಾಗವಾಗಲಿದ್ದು, ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಜೆರ್ಸಿ’, ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ನಂತರ ನಾನಿ ಜೊತೆ ಇದು ಇವರ ಮೂರನೇ ಸಿನಿಮಾವಾಗಿದೆ. ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

    Live Tv
    [brid partner=56869869 player=32851 video=960834 autoplay=true]

  • ನಾನಿ ಜೊತೆ ಡುಯೆಟ್ ಹಾಡಲು ರೆಡಿಯಾದ್ರು `ಸೀತಾರಾಮಂ’ ನಟಿ

    ನಾನಿ ಜೊತೆ ಡುಯೆಟ್ ಹಾಡಲು ರೆಡಿಯಾದ್ರು `ಸೀತಾರಾಮಂ’ ನಟಿ

    `ಸೀತಾರಾಮಂ’ (Seetharamam) ಮೂಲಕ ಸೂಪರ್ ಸಕ್ಸಸ್ ಕಂಡಿರುವ ನಟಿ ಮೃಣಾಲ್ ಠಾಕೂರ್ (Mrunal Thakaur) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಹೊಸ ವರ್ಷಕ್ಕೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Mrunal Thakur (@mrunalthakur)

    ಮರಾಠಿ, ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮೃಣಾಲ್ ಠಾಕೂರ್ ತೆಲುಗಿನ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಿದ ಬಳಿಕ ನಾನಿ (Actor Nani) ಸಿನಿಮಾಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದ ಪೋಸ್ಟರ್ ಅನೌನ್ಸ್ ಮಾಡುವ ತಮ್ಮ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

     

    View this post on Instagram

     

    A post shared by Mrunal Thakur (@mrunalthakur)

    ನ್ಯಾಚುರಲ್ ಸ್ಟಾರ್ ನಾನಿಗೆ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ನಟಿ ಬರಲಿದ್ದಾರೆ. ತಂದೆ ಮತ್ತು ಮಗಳ ಬಂಧವನ್ನ ಸಾರುವ ಕಥೆ ಇದಾಗಿದೆ. ಸದ್ಯ ಸಿನಿಮಾಗೆ ʼನಾನಿ 30ʼ ಎಂಬ ಟೈಟಲ್ ಇಡಲಾಗಿದೆ. ಇನ್ನೂ ನಾನಿ ಮತ್ತು ಮೃಣಾಲ್ ಕಾಂಬಿನೇಷನ್ ಸಿನಿಮಾ ನೋಡಲು ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಸರಾ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ ಮಹಾ ನಟಿ ಕೀರ್ತಿ ಸುರೇಶ್

    ‘ದಸರಾ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ ಮಹಾ ನಟಿ ಕೀರ್ತಿ ಸುರೇಶ್

    ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ ಮೆಗಾ ಪ್ರಾಜೆಕ್ಟ್ ‘ದಸರಾ’ (Dasara) ಸಿನಿಮಾ ಈಗಾಗಲೇ ಸಿನಿ ಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಮೂಲಕ ನಾನಿ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ತಲುಪಲಿದ್ದು, ಮಾಸ್ ಅವತಾರದಲ್ಲಿ ರಂಜಿಸಲಿದ್ದಾರೆ. ಖಡಕ್ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ನಾನಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.

    ಮಾಸ್ ಸಿನಿಮಾ ‘ದಸರಾ’ದಲ್ಲಿ ಕೀರ್ತಿ ಸುರೇಶ್ (Keerthi Suresh) ಯಾವ ರೀತಿ ಕಾಣಸಿಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿ ಬಳಗದಲ್ಲಿತ್ತು. ಆ ಕುತೂಹಲವನ್ನು ಹಾಗೆ ಕಾಪಾಡಿಕೊಂಡು ಬಂದಿದ್ದ ಚಿತ್ರತಂಡ ಕೀರ್ತಿ ಸುರೇಶ್ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿವೀಲ್ ಮಾಡಿದೆ. ನಾನಿ ಹೊಸ ಅವತಾರ ಖಡಕ್ ಲುಕ್ ಕಂಡು ಫಿದಾ ಆಗಿದ್ದ ಸಿನಿರಸಿಕರಿಗೆ, ಕೀರ್ತಿ ಸುರೇಶ್ ಲುಕ್ ಕೂಡ ಅಷ್ಟೇ ಮನಸೆಳೆದಿದೆ. ಚಿತ್ರದಲ್ಲಿ ವೆನ್ನಲ ಪಾತ್ರವನ್ನು ನಿಭಾಯಿಸುತ್ತಿದ್ದು, ಹಳ್ಳಿ ಹುಡುಗಿಯಾಗಿ ಹಳದಿ ಸೀರೆಯಲ್ಲಿ ಮಿಂಚುತ್ತಿರುವ ಕೀರ್ತಿ ಅವತಾರಕ್ಕೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಈಗಾಗಲೇ ಬಿಡುಗಡೆಯಾಗಿರುವ ನಾನಿ ಫಸ್ಟ್ ಲುಕ್, ಧೂಮ್ ದಾಮ್ ದೊಸ್ತಾನ ಹಾಡು ಸಿನಿ ಪ್ರಿಯರಿಂದ ಅದ್ಭುತ ರೆಸ್ಪಾನ್ ಪಡೆದುಕೊಂಡಿದೆ. ಇದೀಗ ಕೀರ್ತಿ ಸುರೇಶ್ ಲುಕ್ ಕೂಡ ಎಲ್ಲರ ಗಮನ ಸೆಳೆದಿದೆ. ಇವೆಲ್ಲವೂ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.  ಶ್ರೀಕಾಂತ್ ಒಡೆಲಾ ನಿರ್ದೇಶಿಸುತ್ತಿರುವ ಈ ಚಿತ್ರ ಮಾಸ್ ಅಂಡ್ ಆಕ್ಷನ್ ಕಥಾಹಂದರ ಒಳಗೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸಮುದ್ರಕನಿ, ಸಾಯಿಕುಮಾರ್ (Sai Kumar), ಜರೀನಾ ವಹಾಬ್  ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. 2023 ಮಾರ್ಚ್ 30ರಂದು ಸಿನಿಮಾ ಬಿಡುಗಡೆಯಾಗಲಿದೆ.

    ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ, ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

    ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

    ಬಾಲಿವುಡ್ ಮತ್ತು ಸೌತ್ ಚಿತ್ರರಂಗದ ತಾರೆಯರಾದ ಅಮಿತಾಭ್ ಬಚ್ಚನ್, ಪ್ರಭಾಸ್, ದುಲ್ಕರ್ ಸಲ್ಮಾನ್, ಪ್ರಶಾಂತ್ ನೀಲ್, ಮತ್ತು ನಾನಿ ಇತ್ತೀಚೆಗೆ ಖಾಸಗಿ ಪಾರ್ಟಿವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜತೆಗೆ ಬಿಗ್‌ಬಿ ಅವರನ್ನು ʻಕೆಜಿಎಫ್ 2ʼ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ.

    ವೈಜಯಂತಿ ನಿರ್ಮಾಣ ಸಂಸ್ಥೆಗೆ 50 ವರ್ಷ ತುಂಬಿದ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ಹೊಸ ಕಛೇರಿಗೆ ಚಾಲನೆ ಕೊಡಲಾಗಿದೆ. ಹೆಸರಾಂತ ಸಂಸ್ಥೆ ವೈಜಯಂತಿ 50 ವರ್ಷದ ಸಂಭ್ರಮಕ್ಕೆ ಬಿಗ್‌ಬಿ, ಪ್ರಭಾಸ್, ದುಲ್ಕರ್, ಪ್ರಶಾಂತ್ ನೀಲ್, ನಾನಿ ಇವರೆಲ್ಲೂ ಸಾಕ್ಷಿಯಾಗಿದ್ದಾರೆ. ಜತೆಗೆ ಹೆಸರಾಂತ ಸಂಸ್ಥೆ ಶುಭಹಾರೈಸಿದ್ದಾರೆ. ಈ ಎಲ್ಲಾ ಬಿಗ್ ಸ್ಟರ‍್ಸ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಪ್ರಸ್ತುತ ಅಮಿತಾಭ್,ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ವೈಜಯಂತಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ತೆಲುಗು ಮತ್ತು ಹಿಂದಿ ಏಕಕಾಲದಲ್ಲಿ ಸಿನಿಮಾ ತೆರೆ ಕಾಣಲಿದೆ. ಜತೆಗೆ ದುಲ್ಕರ್ ನಟನೆಯ `ಸೀತಾ ರಾಮಂ’ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದೆ.

    Live Tv

  • ಸತ್ಯ ಘಟನೆಯಾಧಾರಿತ ‘ಮಠ’ ಸಿನಿಮಾ : ಗುರುಪ್ರಸಾದ್ ಪಾತ್ರ ಏನು?

    ಸತ್ಯ ಘಟನೆಯಾಧಾರಿತ ‘ಮಠ’ ಸಿನಿಮಾ : ಗುರುಪ್ರಸಾದ್ ಪಾತ್ರ ಏನು?

    ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಮಠ. ಜಗ್ಗೇಶ್ ಹಾಗೂ ಗುರು ಪ್ರಸಾದ್ ಜುಗಲ್ ಬಂದಿಯ ಈ ಚಿತ್ರ ಪ್ರೇಕ್ಷಕರನ್ನು‌ ನಕ್ಕು ನಲಿಸಿತ್ತು. ಇದೀಗ ಇದೇ ಹೆಸ್ರಿನ ಸಿನಿಮಾ ಬರ್ತಿದೆ. ಹಾಗಂತ ಈ ಸಿನಿಮಾಗೂ ಆ ಸಿನಿಮಾಗೂ ಸಂಬಂಧವಿಲ್ಲ. ಇದೇ ಬೇರೆ ಅದೇ ಬೇರೆ. ಫಿಲಾಸಫಿಕಲ್, ಕಾಮಿಡಿ ಸತ್ಯ ಘಟನೆಯಾಧಾರಿತ ಮಠ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಬರೋಬ್ಬರಿ 82 ಜನ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ ಗುರು ಪ್ರಸಾದ್, ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ.

    ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು ಹೀಗೆ. ಸಾಧುಕೋಕಿಲಾ  ಮಾತಾನಾಡಿ, ನಾನು ಸುಮಾರು ಮಾಡಿರಬಹುದು. ಆದ್ರೆ ಲೆಕ್ಕ ಇಟ್ಟಿಲ್ಲ. ಸುಮಾರು 600 ರಿಂದ 700 ಸಿನಿಮಾ ಮಾಡಿರಬಹುದು. ಜಾಸ್ತಿ, ಕಡಿಮೆ ಎರಡು ಇರಬಹುದು. ಆದ್ರೆ ಗುರು ಪ್ರಸಾದ್ ಮಠ ಸಿನಿಮಾದಲ್ಲಿ ನಾನು ಒಂದೆರೆಡು ಸೀನ್ ನಲ್ಲಿ ಮಾಡಿದ್ದೇನೆ. ಆ ಎಲ್ಲಾವೂ ಹಿಟ್. ಆದ್ರೆ ಈ ಮಠ ಹೆಸ್ರು ತೆಗೆದುಕೊಂಡಿದೆ. ಕಥಾವಸ್ತು ಬೇರೆ. ನಾನು ಮೇಜರ್ ರೋಲ್ ಮಾಡಿದ್ದು, ಆದ್ರೆ ಅದು ನನಗೆ ಕಾಮಿಡಿಯಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ‌ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ಗುರು ಪ್ರಸಾದ್ ಮಾತಾನಾಡಿ, ಮನೆ ಕಟ್ಟುವುದು ಸುಲಭ. ಮಠದ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ ಮಠಗಳಿಗೆ ಭೇಟಿ‌ ಕೊಟ್ಟು ಕಥೆ ಮಾಡಿ ಸಿನಿಮಾ ಮಾಡೋದು ಕಷ್ಟ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು. ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಮಠ ಸಿನಿಮಾ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದಾರೆ. ಗುರು ಪ್ರಸಾದ್ ಇಲ್ಲದೇ ಮಠ ಅಪೂರ್ಣ. ಹೀಗಾಗಿ ಅವರನ್ನು ಕೇಳಿದ್ವಿ. ಅವ್ರು ಗ್ರೀನ್ ಸಿಗ್ನಲ್ ಕೊಟ್ಟರು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ, ರಾಜ್ಯಪ್ರಶಸ್ತಿ ವಿಜೇತ ಸಿ.ರವಿಚಂದ್ರನ್ ಸಂಕಲನ, ವಿ ಮನೋಹರ್ ಸಂಗೀತ ನಿರ್ದೇಶನ, ಯೋಗರಾಜ್ ಭಟ್ಟ್, ವಿ‌ ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯ ಸಿನಿಮಾಕ್ಕಿದೆ.

  • ಸೌತ್ ವರ್ಸಸ್ ನಾರ್ತ್ ಎಂದವರಿಗೆ ʻಸ್ಟುಪಿಡ್ʼ ಎಂದ ನ್ಯಾಚುರಲ್ ಸ್ಟಾರ್ ನಾನಿ

    ಸೌತ್ ವರ್ಸಸ್ ನಾರ್ತ್ ಎಂದವರಿಗೆ ʻಸ್ಟುಪಿಡ್ʼ ಎಂದ ನ್ಯಾಚುರಲ್ ಸ್ಟಾರ್ ನಾನಿ

    ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳ ಎದುರು ದಕ್ಷಿಣದ ಚಿತ್ರಗಳು ಸೌಂಡ್ ಮಾಡುತ್ತಿದೆ. ಈ ವೇಳೆ ಭಾಷಾ ಚರ್ಚೆಗಳ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಚಿತ್ರರಂಗವನ್ನ ಸೌತ್‌ ವರ್ಸಸ್‌ ನಾರ್ತ್‌ ಎಂದವರಿಗೆ ಸ್ಟುಪಿಡ್‌ ಎಂದು ನಟ ನಾನಿ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಟೌನ್ ಅಂಗಳದಲ್ಲಿ ಹಿಂದಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲು ಹೆಣಗಾಡುತ್ತಿವೆ. ಆರ್‌ಆರ್‌ಆರ್, ಪುಷ್ಪ, `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳಿಗೆ ನೆಲೆ ಇಲ್ಲದಂತಾಗಿದೆ. ಉತ್ತರ ಮತ್ತು ದಕ್ಷಿಣ ಸಿನಿಮಾಗಳು ಅಂತಾ ವಿಭಜನೆಯಾಗುತ್ತಿದೆ. ಈ ಕುರಿತು ಇದೀಗ ಸ್ಟಾರ್ ನಟ ನಾನಿ ಮಾತನಾಡಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಒಳ್ಳೆಯ ಕಂಟೆಂಟ್ ಸಿನಿಮಾ ಕೊಟ್ಟರೆ ಗೆಲ್ಲುತ್ತದೆ ಅಂತಹ ಚಿತ್ರಗಳನ್ನು ಪ್ರೇಕ್ಷಕರು ಎಂದು ಕೈ ಬಿಡುವುದಿಲ್ಲ. ನಾವುಗಳೇ ಬಾಲಿವುಡ್,ಹಾಲಿವುಡ್, ಟಾಲಿವುಡ್, ಕಾಲಿವುಡ್ ಎಂದು ವಿಭಜಿಸಿದ್ದೇವೆ. ಎಲ್ಲರೂ ಯಾಕೆ ಈ ರೀತಿ ಕರೆಯುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಭಾಷೆಗಳು ವಿಭಿನ್ನವಾಗಿರಬಹುದು ಆದರೆ ನಾವು ಒಂದೇ ರಾಷ್ಟ್ರ. ಭಾಷೆ ಬೇರೆ ಇರಬಹುದು, ನಾವೆಲ್ಲ ಒಂದೇ ಚಿತ್ರರಂಗ ಎಂದು ಮಾತನಾಡಿದ್ದಾರೆ.

    ಸೌರ್ತ್ ಮತ್ತು ನಾರ್ತ್ ಸಿನಿಮಾಗಳು ಎಂದು ಕರೆಯುವವರಿಗೆ `ಸ್ಟುಪಿಡ್’ ಎಂದು ನಟ ನಾನಿ ರಿಯಾಕ್ಟ್ ಮಾಡಿದ್ದಾರೆ. ಒಟ್ನಲ್ಲಿ ನಾನಿ ಹೇಳಿರುವ ವಿಚಾರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  • ಪ್ರಶಾಂತ್ ನೀಲ್ ಕನ್ನಡಕ್ಕೆ ಸಿಗುವುದು ಅನುಮಾನ?: ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ 6ನೇ ಸಿನಿಮಾ

    ಪ್ರಶಾಂತ್ ನೀಲ್ ಕನ್ನಡಕ್ಕೆ ಸಿಗುವುದು ಅನುಮಾನ?: ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ 6ನೇ ಸಿನಿಮಾ

    ಕೆಜಿಎಫ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ಬಹುಬೇಡಿಕೆಯ ನಿರ್ದೇಶಕರಾಗುತ್ತಿದ್ದಾರೆ. ಇದರ ಜೊತೆಗೆ ಅವರು ಕನ್ನಡ ಸಿನಿಮಾಗಳಿಗೆ ಸಿಗುವುದು ಅನುಮಾನ ಎನ್ನುವಂತಹ ಸುದ್ದಿಗಳು ತೆಲುಗು ಸಿನಿಮಾ ರಂಗದಿಂದ ಕೇಳಿ ಬರುತ್ತಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಇನ್ನೂ ಆರೇಳು ವರ್ಷಗಳ ಕಾಲ ಕನ್ನಡ ಸಿನಿಮಾವನ್ನೇ ಮಾಡುವುದಿಲ್ಲ ಎನ್ನುವುದು ಆಘಾತಕಾರಿ ಬೆಳವಣಿಗೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಸದ್ಯ ತೆಲುಗಿನ ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ನಾಯಕನಾದರೆ, ಕನ್ನಡದ್ದೇ ಆದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪ್ರಶಾಂತ್ ನೀಲ್ ಕನ್ನಡದವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಪ್ರಶಾಂತ್ ನೀಲ್ ಚಿತ್ರ ಮಾಡಲಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಈ ಎರಡೂ ಚಿತ್ರಗಳ ನಂತರ ಅವರು ಕನ್ನಡ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಅದಕ್ಕೂ ಇದೀಗ ಕಲ್ಲು ಬಿದ್ದಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಇದೀಗ ತೆಲುಗಿನಲ್ಲಿ ಭಾರೀ ಸುದ್ದಿ ಆಗಿದ್ದು ಪ್ರಶಾಂತ್ ನೀಲ್, ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವುದು. ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಮುಗಿಯುತ್ತಿದ್ದಂತೆಯೇ ನಾನಿಗಾಗಿ ಅವರು ಸಿನಿಮಾ ಮಾಡಲಿದ್ದಾರಂತೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ತೆಲುಗು ಸಿನಿಮಾ ರಂಗದಲ್ಲಿ ಮಾತ್ರ ಈ ಸುದ್ದಿ ಭಾರೀ ಗಿರಿಕಿಯಂತೂ ಹೊಡೆಯುತ್ತಿದೆ. ಇದನ್ನೂ ಓದಿ: ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಅವರು ಮತ್ತೆರಡು ಕನ್ನಡ ಸಿನಿಮಾಗಳನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಒಂದು ಸಿನಿಮಾವನ್ನು ಶ್ರೀಮುರುಳಿಗೆ ಮಾಡಿದರೆ, ಮತ್ತೊಂದು ಸಿನಿಮಾವನ್ನು ಯಶ್ ಗಾಗಿಯೇ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈ ನಡುವೆ ನಾನಿ ಅವರ ಸಿನಿಮಾ ಸೇರ್ಪಡೆಗೊಂಡಿದೆ. ಸುದ್ದಿಗಳು ಏನೇ ಹರಿದಾಡಿದರೂ, ನಿಜ ಏನು ಅನ್ನುವ ಕುರಿತು ಪ್ರಶಾಂತ್ ನೀಲ್ ಅವರೇ ಉತ್ತರಿಸಬೇಕು.

  • ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

    ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

    ಕ್ಷಿಣದ ಬಹುತೇಕ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಆರ್.ಆರ್.ಆರ್, ಪುಷ್ಪಾ, ಕೆಜಿಎಫ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಬೇರೆ ಬೇರೆ ಭಾಷೆಗೆ ಡಬ್ ಆಗಿ, ಸಖತ್ ಕಮಾಯಿ ಮಾಡುತ್ತಿವೆ. ಈ ನಡುವೆ ತೆಲುಗಿನ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ನಾನಿ ನಟನೆಯ ಸಿನಿಮಾವೊಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಕುರಿತು ಮೊನ್ನೆಯಷ್ಟೇ ಪ್ರೆಸ್ ಮೀಟ್ ಕೂಡ ಆಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಸದ್ಯ ನಾನಿ ನಟನೆಯ ‘ಅಂತೆ ಸುಂದರಾನಿಕಿ’ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಎಲ್ಲ ಭಾಷೆಗೂ ನಿಮ್ಮ ಸಿನಿಮಾ ಡಬ್ ಆಗಿದೆ. ಕನ್ನಡಕ್ಕೆ ಯಾಕೆ ಡಬ್ ಆಗಿಲ್ಲ’ ಎಂಬ ಪ್ರಶ್ನೆಯೊಂದು ಎದುರಾಯಿತು. ಈ ಪ್ರಶ್ನೆಗೆ ಧೈರ್ಯದಿಂದಲೇ ಉತ್ತರಿಸಿದ ನಾನಿ, ‘ಕನ್ನಡಿಗರಿಗೆ ತೆಲುಗು ತುಂಬಾ ಚೆನ್ನಾಗಿ ಬರುತ್ತದೆ. ಅವರು ಅದೇ ಭಾಷೆಯಲ್ಲೇ ಸಿನಿಮಾ ನೋಡುತ್ತಾರೆ. ಕನ್ನಡಕ್ಕೆ ಈ ಸಿನಿಮಾವನ್ನು ಡಬ್ ಮಾಡುವುದರ ಅವಶ್ಯಕತೆ ಇಲ್ಲ’ ಎಂದು ಉತ್ತರ ಕೊಟ್ಟಿದ್ದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ನಾನಿ ಈ ಉತ್ತರಕ್ಕೆ ಕನ್ನಡಿಗರ ಗರಂ ಆಗಿದ್ದರು. ‘ಬೈಕಾಟ್ ಅಂತೆ ಸುಂದರಾನಿಕಿ’ ಎನ್ನುವ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಕೆಲವು ಕನ್ನಡಿಗರು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ನಾನಿ, ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ನನಗೆ ಕನ್ನಡದ ಬಗ್ಗೆ ಅಪಾರ ಗೌರವವಿದೆ. ಭಾಷೆಗೆ ನಾನು ಅವಹೇಳನ ಮಾಡಿಲ್ಲ. ಕನ್ನಡಿಗರಿಗೆ ತೆಲುಗು ಚೆನ್ನಾಗಿ ಗೊತ್ತಿದೆ ಎಂದು ಹೆಮ್ಮೆಯಿಂದ ಹೇಳಿದ್ದೆ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಅಪಾಲಜಿ ಕೇಳಿದ ವಿಷಯವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಕನ್ನಡಿಗರ ಬಗ್ಗೆ ತಮಗೆ ಅಪಾರ ಗೌರವ ಇರುವುದಾಗಿಯೂ ನಾನಿ ಹೇಳಿದ್ದಾರೆ. ಕನ್ನಡಿಗರ ಎಲ್ಲ ಭಾಷೆಯನ್ನೂ ಪ್ರೀತಿಸುತ್ತಾರೆ. ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ನಾನಿ.

  • ಕನ್ನಡದಲ್ಲಿ ಚಿತ್ರ ರಿಲೀಸ್ ಮಾಡಲ್ಲ ಅಂದಿದ್ದಕ್ಕೆ ನಟ ನಾನಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್

    ಕನ್ನಡದಲ್ಲಿ ಚಿತ್ರ ರಿಲೀಸ್ ಮಾಡಲ್ಲ ಅಂದಿದ್ದಕ್ಕೆ ನಟ ನಾನಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್

    ಟಾಲಿವುಡ್ ಸ್ಟಾರ್ ನಟ ನಾನಿ `ಶ್ಯಾಮ್ ಸಿಂಗ್ ರಾಯ್’ ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ `ಅಂತೇ ಸುಂದರಾನಿಕಿ’ ಚಿತ್ರದ ಮೂಲಕ ಬರುತ್ತಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ಟೀಸರ್ ರಿಲೀಸ್ ವೇಳೆಯಲ್ಲಿ ಚಿತ್ರವನ್ನ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂದಿರೋದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ನೆಟ್ಟಿಗರು ನಾನಿ ವಿರುದ್ಧ ಫುಲ್‌ ಗರಂ ಆಗಿದ್ದಾರೆ.

    ನಾನಿ ನಟನೆಯ ಮುಂದಿನ ಚಿತ್ರ `ಅಂತೇ ಸುಂದರಾನಿಕಿ’ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆದರೆ ನಟ ನಾನಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡಲ್ಲ ಅಂದಿರೋದು ಸಿನಿಅಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಆದರೆ ಅದಕ್ಕೆ ಸೂಕ್ತ ಕಾರಣ ಕೂಡ ಕೊಟ್ಟಿದ್ದಾರೆ.

    ಇತ್ತೀಚಿಗೆ ತೆರೆಕಂಡ `ಆರ್‌ಆರ್‌ಆರ್’ ಚಿತ್ರ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲೇ ರಿಲೀಸ್ ಆಗಿತ್ತು. ಕರ್ನಾಟಕದಲ್ಲೂ ಹೆಸರಿಗಷ್ಟೇ ಕೆಲವೊಂದು ಥಿಯೇಟರ್‌ನಲ್ಲಿ ಕನ್ನಡದಲ್ಲಿ ರಿಲೀಸ್ ಆಗಿದ್ರೆ ಬಹುತೇಕ ಚಿತ್ರಮಂದಿರದಲ್ಲಿ ತೆಲುಗಿನಲ್ಲೇ ರಿಲೀಸ್ ಆಗಿತ್ತು. ಇದೀಗ `ಅಂತೇ ಸುಂದರಾನಿಕಿ’ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಆಗಿರೋದರಿಂದ ಬೇರೆ ಭಾಷೆಗಳಲ್ಲಿ ಆಗ್ತಿರುವಾಗ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂದರೋದು ನೆಟ್ಟಿಗರನ್ನ ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟ ನಾನಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.

    ಕರ್ನಾಟಕದಲ್ಲಿ `ಅಂತೇ ಸುಂದರಾನಿಕಿ’ ಚಿತ್ರವನ್ನ ಕನ್ನಡದಲ್ಲಿ ಯಾಕೆ ರಿಲೀಸ್ ಮಾಡಲ್ಲ ಎಂಬುದಕ್ಕೆ ನಾನಿ ಸೂಕ್ತ ಕಾರಣ ಕೊಟ್ಟಿದ್ದಾರೆ. ಕರ್ನಾಟಕದಲ್ಲೂ ಬಹುತೇಕ ಮಂದಿ ತೆಲುಗು ಬಲ್ಲವರೇ ಇದ್ದಾರೆ. ಅಲ್ಲಿ ಕನ್ನಡ ಡಬ್ಬಿಂಗ್ ಅವಶ್ಯಕತೆಯಿಲ್ಲ. ಇವರೆಗೂ ತೆಲುಗು ಭಾಷೆಯ ಚಿತ್ರವನ್ನ ನೋಡಿ ಬೆಂಬಲಿಸಿದ್ದಾರೆ ಹಾಗಾಗಿ ನಮ್ಮ ಸಿನಿಮಾವನ್ನ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

    ನಾನಿ, ತಮ್ಮ ಸಿನಿಮಾವನ್ನ ಕನ್ನಡದಲ್ಲಿ ಡಬ್ ಮಾಡೋದಿಲ್ಲ ಅಂತಾ ಹೇಳಿರೋದಕ್ಕೆ ವಿರೋಧ ವ್ಯಕ್ತವಾಗಿದೆ. ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡೋವರೆಗೂ ನಾವು ಚಿತ್ರವನ್ನ ನೋಡೋದಿಲ್ಲ ಅಂತಾ ನಾನಿ ವಿರುದ್ಧ ಕಿಡಿಕಾರಿದ್ದಾರೆ. `ಅಂತೇ ಸುಂದರಾನಿಕಿ’ ಚಿತ್ರದಲ್ಲಿ ನಾನಿಗೆ ಜೋಡಿಯಾಗಿ ನಜ್ರಿಯಾ ನಟಿಸಿದ್ದಾರೆ. ಇದೇ ಜೂನ್ 10ಕ್ಕೆ ಚಿತ್ರ ತೆರೆಗೆ ಅಬ್ಬರಿಸಲಿದೆ. ಪ್ರೇಕ್ಷಕಪ್ರಭುಗಳು ಸಿನಿಮಾ ನೋಡಿ ಬೆಂಬಲ ಸೂಚಿಸ್ತಾರಾ ಎಂಬುದನ್ನ ಕಾದು ನೋಡಬೇಕಿದೆ.