Tag: Nani

  • ದುಲ್ಕರ್ ಸಲ್ಮಾನ್ ಹೊಸ ಚಿತ್ರಕ್ಕೆ ಚಾಲನೆ : ನಟ ನಾನಿ ಸಾಥ್

    ದುಲ್ಕರ್ ಸಲ್ಮಾನ್ ಹೊಸ ಚಿತ್ರಕ್ಕೆ ಚಾಲನೆ : ನಟ ನಾನಿ ಸಾಥ್

    ಲಯಾಳಂನ ಖ್ಯಾತ ನಟ, ಸ್ಟಾರ್ ಇಂಡಿಯಾ ಸ್ಟಾರ್, ಯೂತ್ ಐಕಾನ್ ದುಲ್ಕರ್ ಸಲ್ಮಾನ್ (Dulquer Salmaan) ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ದುಲ್ಕರ್ ಸಲ್ಮಾನ್ ಸಿನಿಮಾಗಳೆಂದರೆ ಕುತೂಹಲ ಜಾಸ್ತಿನೆ ಇರತ್ತೆ. ಯಾಕೆಂದರೆ ದುಲ್ಕರ್ ಸಿನಿಮಾ ಆಯ್ಕೆಗಳೇ ವಿಭಿನ್ನವಾಗಿರುತ್ತೆ. ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ. ಹಾಗಾಗಿ ದುಲ್ಕರ್ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುತ್ತೆ. ಇದೀಗ ಮತ್ತೊಂದು ಹೃದಯಸ್ಪರ್ಶಿ ಲವ್ ಸ್ಟೋರಿ ಮೂಲಕ ಸಿನಿ ರಸಿಕರ ಮುಂದೆ ಬರಲು ರೆಡಿಯಾಗಿದ್ದಾರೆ.

    ದುಲ್ಕರ್ ನಟನೆಯ 41ನೇ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. DQ41 ಚಿತ್ರಕ್ಕೆ ತೆಲುಗಿನ ಖ್ಯಾತ ನಟ ನ್ಯಾಚುರಲ್ ಸ್ಟಾರ್ ನಾನಿ ದುಲ್ಕರ್ ಹೊಸ ಸಿನಿಮಾಗೆ ಕ್ಲಾಪ್ ಮಾಡುವ ಮೂಲಕ ಸಿನಿಮಾತಂಡಕ್ಕೆ ಶುಭಹಾರೈಸಿದರು. ಮುಹೂರ್ತ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಅಂದಹಾಗೆ ದುಲ್ಕರ್ ಹೊಸ ಸಿನಿಮಾಗೆ ರವಿ ನೆಲಕುಡಿತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ರವಿ ಅವರಿಗೆ ಇದು ಮೊದಲ ಸಿನಿಮಾ. ಯುವ ನಿರ್ದೇಶಕ ಜೊತೆ ದುಲ್ಕರ್ 41ನೇ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಹೃದಯಸ್ಪರ್ಶಿ ಪ್ರೇಮಕಥೆಯಾಗಿದೆ. ಸೀತಾ ರಾಮಂ ಸಿನಿಮಾ ಬಳಿಕ ದುಲ್ಕರ್ ಮತ್ತೊಂದು ಲವ್ ಸ್ಟೋರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

    ದುಲ್ಕರ್ 41ನೇ ಸಿನಿಮಾ ಎಸ್ಎಲ್ವಿ ಬ್ಯಾನರ್ ನಲ್ಲಿ ಮೂಡಿಬರುತ್ತಿದೆ. ನಟ ದುಲ್ಕರ್ ಸಲ್ಮಾನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗು ಸಿನಿಮಾರಂಗದಲ್ಲಿ ದುಲ್ಕರ್ ಮಿಂಚುತ್ತಿದ್ದಾರೆ. ದುಲ್ಕರ್ ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ. ಹೀಗುರುವಾಗಿ ಚೊಚ್ಚಲ ನಿರ್ದೇಶಕರಿಗೆ ತನ್ನ ಕಾಲ್ ಶೀಟ್ ನೀಡಿದ್ದಾರೆ ಎಂದರೆ ಕಥೆ ಅದ್ಭುತವಾಗಿರಲಿದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

    ಸ್ಟಾರ್ ಕಾಸ್ಟ್ ವಿಚಾರದಲ್ಲಿ ಮಾತ್ರದಲ್ಲದೆ ತಂತ್ರಜ್ಞರ ವಿಚಾರದಲ್ಲೂ ದುಲ್ಕರ್ ಸಿನಿಮಾ ಭಾರಿ ನಿರೀಕ್ಷೆಮೂಡಿಸಿದೆ. ಚಿತ್ರಕ್ಕೆ 2 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ತೆಲುಗು, ಮಲಯಾಳಂ ಸೇರಿದಂತೆ ಕನ್ನಡ ತಮಿಳು ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ದುಲ್ಕರ್ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ಸದ್ಯದಲ್ಲೇ ಚಿತ್ರದಿಂದ ಮತ್ತಷ್ಟು ಅಪ್ ಡೇಟ್ ಹೊರಬೀಳಲಿದೆ.

  • ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್

    ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್

    ಮಲ್ ಹಾಸನ್ (Kamal Haasan) ಕನ್ನಡ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ತೆಲುಗು ನಟ ನ್ಯಾಚುರಲ್ ಸ್ಟಾರ್ (Natural Star Nani) ನಾನಿ ಸಾಕು ಸರ್ ಎಂದು ಬರೆದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

    ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಇದೀಗ ರಾಜ್ಯದಲ್ಲಿ ಮಾತ್ರವಲ್ಲದೇ ಹೊರರಾಜ್ಯದಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ನಾನಿ, ಸಾಕು ಸರ್ ಸಾಕು ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

    ಸಾಕು ಸರ್ ಎಂದು ಬರೆದುಕೊಳ್ಳುವ ಮೂಲಕ ಭಾಷಾ ವಿವಾದವನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂಬರ್ಥದಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ಕುರಿತು ಪ್ರತಿಕ್ರಿಯೆ ನೀಡಿದ ನಟ ಶಿವರಾಜಕುಮಾರ್ (ShivarajKumar)  ಬರೀ ಬಾಯಿಯಲ್ಲಿ ಮಾತ್ರ ಕನ್ನಡ ಕನ್ನಡ ಅನ್ನಬಾರದು. ಕನ್ನಡಕ್ಕಾಗಿ ನಾನು ಹೋರಾಟ ಮಾಡುತ್ತೇನೆ, ಕನ್ನಡಕ್ಕಾಗಿ ನಾನು ಸಾಯುತ್ತೇನೆ. ಕನ್ನಡ ಅಂತೀರಾ, ಸ್ಟಾರ್ ನಟರಿಗೆ ಮಾತ್ರ ಬೆಂಬಲಿಸೋದು. ಹೊಸಬರನ್ನೂ ಕೂಡ ಬೆಳೆಸಬೇಕು. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು.

    ಏನಿದು ವಿವಾದ?
    ಮೇ 27ರಂದು `ಥಗ್ ಲೈಫ್’ (Thug Life) ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು.ಇದನ್ನೂ ಓದಿ: ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

  • 100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್‌

    100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್‌

    ತೆಲುಗು ಆಕ್ಷನ್ ಥ್ರಿಲ್ಲರ್ ʻಹಿಟ್- 3ʼ ಸಿನಿಮಾ (HIT 3 Cinema) ತೆರೆಕಂಡು ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ನಾನಿ (Nani) ನಿರ್ಮಿಸಿ ನಟಿಸಿರುವ ಈ ಸಿನಿಮಾ ಕೇವಲ ನಾಲ್ಕೇ ದಿನಗಳಲ್ಲಿ ನೂರು ಕೋಟಿ ಕ್ಲಬ್‌ ಸೇರಿದೆ.

    ʻಕೆಜಿಎಫ್‌ʼ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ನಾಯಕಿಯಾಗಿ ಮಿಂಚುತ್ತಿರುವ ಈ ಸಿನಿಮಾ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಕೇವಲ 4 ದಿನಗಳಲ್ಲಿ ನೂರು ಕೋಟಿ ಬಾಚಿಕೊಂಡಿದೆ. ಸರಿಪೋದ ಶನಿವಾರಂ, ದಸರಾ ಬಳಿಕ ನಾನಿ ಕೆರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್‌ ಮಾಡಿದ 3ನೇ ಸಿನಿಮಾ ಇದಾಗಿದೆ ಈ ಕುರಿತು ನಿರ್ಮಾಪಕರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೋನು ನಿಗಮ್‌ಗೆ ಫಿಲ್ಮ್ಂ ಚೇಂಬರ್ ಶಾಕ್ – ಸ್ಯಾಂಡಲ್‌ವುಡ್‌ನಿಂದ ಗಾಯಕನಿಗೆ ಅಸಹಕಾರ

    ಐಪಿಎಲ್ ಅಬ್ಬರದ ನಡುವೆಯೂ ವೀಕೆಂಡ್ ಟಾರ್ಗೆಟ್ ಮಾಡಿ ಮೇ 1ರಂದು ʻಹಿಟ್- 3ʼ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಶೈಲೇಶ್ ಕೋಲನು ನಿರ್ದೇಶನದ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ವೈಲೆನ್ಸ್ ಅತಿಯಾಯಿತು ಎನ್ನುವ ಆರೋಪದ ನಡುವೆಯೂ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: `ಹೌಸ್‌ ಅರೆಸ್ಟ್‌’ ಶೋನಲ್ಲಿ ಸೆಕ್ಸ್‌ ಪೊಸಿಷನ್‌ಗೆ ಒತ್ತಾಯ – ನಟ ಅಜಾಜ್ ಖಾನ್‌ಗೆ ಸಮನ್ಸ್

    ʻದಸರಾʼ, ʻಹಾಯ್ ನಾನ್ನʼ, ʻಶನಿವಾರಂ ಸರಿಪೋದʼ ಹೀಗೆ ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ನಾನಿ ಇಡೀಗ ಹಿಟ್‌-3ನಲ್ಲೂ ಅದೇ ಖದರ್‌ ಮೇಂಟೇನ್‌ ಮಾಡಿದ್ದಾರೆ. ಅಲ್ಲದೇ ನಾನಿ ಕೆರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್‌ ಮಾಡಿರುವ ಸಿನಿಮಾ ಸಹ ಇದಾಗಿದೆ. ಇನ್ನು ತಮಿಳಿನ ‘ರೆಟ್ರೋ’ ಹಾಗೂ ಬಾಲಿವುಡ್‌ನ ‘ರೈಡ್‌-2’ ಸಿನಿಮಾ ಗಳಿಕೆಯನ್ನು ಕೂಡ ‘ಹಿಟ್- 3’ ಸಿನಿಮಾ ಹಿಂದಿಕ್ಕಿದೆ.

    ರೊಮ್ಯಾಂಟಿಕ್, ಕ್ಲಾಸ್, ಕಾಮೆಡಿ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದವರು ನಾನಿ. ಆದರೆ ಇತ್ತೀಚೆಗೆ ಮಾಸ್ ಇಮೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸೋನು ನಿಗಮ್ ಮಾಡಿದ್ದು ಕ್ಷಮಿಸುವಂತಹ ಅಪರಾಧ ಅಲ್ಲ- ಶಮಿತಾ ಮಲ್ನಾಡ್

  • ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ

    ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ

    ಟಿ ಶ್ರೀನಿಧಿ ಶೆಟ್ಟಿ ‘ಹಿಟ್ 3’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಪ್ರಚಾರ ಕಾರ್ಯದ ವೇಳೆ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ (Pahalgam Terrorist Attack) ದಾಳಿ ಬಗ್ಗೆ ನಟಿ ಖಂಡಿಸಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಶ್ರೀನಿಧಿ (Srinidhi Shetty) ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಸಕ್ಸಸ್‌ಗಾಗಿ ಅದೃಷ್ಟ ಪರೀಕ್ಷೆಗಿಳಿದ ಸೋನಾಕ್ಷಿ ಸಿನ್ಹಾ

    ಶ್ರೀನಿಧಿ ಶೆಟ್ಟಿ ಮಾತನಾಡಿ, ಈ ಥರ ವಿಚಾರದ ಬಗ್ಗೆ ಮಾತನಾಡುವ ದಿನಗಳು ಮತ್ತೆ ಬರಬಾರದು. ಇದರ ಬಗ್ಗೆ ಅಭಿಪ್ರಾಯ ಕೊಡೋ ಹಾಗೇ ಆಗಬಾರದು. ನೊಂದ ಕುಟುಂಬಗಳಿಗೆ ದೇವರು ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಇದನ್ನೆಲ್ಲಾ ಮಾಡಿದವರಿಗೆ ಶಿಕ್ಷೆ ಆಗಲಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯುದ್ಧ ಆಗಲಿ ಅಂತ ಹೇಳೋಕೆ ನಾನ್ಯಾರು, ನಾನು ಡಿಫೆನ್ಸ್ ಅಲ್ಲಿ ಇಲ್ಲ. ಇಂತಹ ಘಟನೆ ಮತ್ತೆ ನಡೆಯಬಾರದು ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

    ಅಂದಹಾಗೆ, ನಾನಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌ ಆಗ್ತಿದೆ. ಈ ಸಿನಿಮಾಗೆ ಸುದೀಪ್ ಪುತ್ರಿ ಸಾನ್ವಿ ಹಾಡಿದ್ದಾರೆ. ಈ ಚಿತ್ರವನ್ನು ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ.

  • ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ತೆಲುಗಿನ ಖ್ಯಾತ ಡೈರೆಕ್ಟರ್ ರಾಜಮೌಳಿ (Rajamouli) ಅವರು ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದರ ನಡುವೆ ಮುಂದಿನ ಚಿತ್ರದ ಬಗ್ಗೆ ಅವರು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಮಹಾಭಾರತ’ (Mahabharat) ಸಿನಿಮಾ ಮಾಡೋದಾಗಿ ‘ಬಾಹುಬಲಿ’ ಡೈರೆಕ್ಟರ್ ರಾಜಮೌಳಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ

    ನ್ಯಾಚುರಲ್ ಸ್ಟಾರ್ ನಾನಿ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಾಜಮೌಳಿ ಮಾತನಾಡಿ, ‘ಮಹಾಭಾರತ’ 3 ಭಾಗಗಳಲ್ಲಿ ಬರಲಿದೆ. ಪ್ರತಿಯೊಂದು ಭಾಷೆಯ ಪ್ರೇಕ್ಷಕರು ನೋಡಬೇಕು. ಹಾಗಾಗಿ ಬಹುಭಾಷೆಗಳಲ್ಲಿ ಮಹಾಭಾರತ ಚಿತ್ರ ಮಾಡೋದಾಗಿ ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್

    ನಾನಿ ಕೂಡ ‘ಮಹಾಭಾರತ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸೋದಾಗಿ ರಾಜಮೌಳಿ ತಿಳಿಸಿದ್ದಾರೆ. ಯಾವ ಪಾತ್ರ ಎಂಬುದನ್ನು ಅವರು ಬಿಟ್ಟು ಕೊಟ್ಟಿಲ್ಲ. ತಂದೆ ವಿಜೇಂದ್ರ ಪ್ರಸಾದ್ ಅವರು 3 ಭಾಗಗಳಲ್ಲಿ ‘ಮಹಾಭಾರತ’ ತರಲು ಪ್ಲ್ಯಾನ್ ಮಾಡಿದ್ದಾರೆ. ಇದರ ಸ್ಕ್ರೀಪ್ಟ್‌ ಕೆಲಸವು ಕೆಲವು ವರ್ಷಗಳಿಂದ ನಡೆಯುತ್ತಿದೆ ಎಂದಿದ್ದಾರೆ ರಾಜಮೌಳಿ.

    ಅಂದಹಾಗೆ, ಇತ್ತೀಚೆಗೆ ‘ಮಹಾಭಾರತ’ ಸಿನಿಮಾ ಮಾಡೋದು ನನ್ನ ಕನಸು ಎಂದು ಆಮೀರ್ ಖಾನ್ ಹೇಳಿದ್ದರು. ಇದೀಗ ರಾಜಮೌಳಿ ಕೂಡ ‘ಮಹಾಭಾರತ’ ಬರುವ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಎರಡೆರಡು ಮಹಾಭಾರತ ಹೆಸರಿನಲ್ಲಿ ಸಿನಿಮಾ ಬರ‍್ತಾವಾ? ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ರಾಜಮೌಳಿ ಮತ್ತು ಆಮೀರ್ ನಡೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಬಗ್ಗೆ ಇಬ್ಬರೂ ಕ್ಲ್ಯಾರಿಟಿ ಕೊಡ್ತಾರಾ ಕಾಯಬೇಕಿದೆ.

  • ಟಾಲಿವುಡ್‌ ಸಿನಿಮಾದಲ್ಲಿ ಸುದೀಪ್‌ ಪುತ್ರಿ ಸಾನ್ವಿ- ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಟಾಲಿವುಡ್‌ ಸಿನಿಮಾದಲ್ಲಿ ಸುದೀಪ್‌ ಪುತ್ರಿ ಸಾನ್ವಿ- ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಟಾಲಿವುಡ್ ನಟ ನಾನಿ (Nani) ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ (Hit 3) ಸಿನಿಮಾ ಇದೇ ಮೇ 1ರಂದು ರಿಲೀಸ್‌ಗೆ ಸಜ್ಜಾಗಿದೆ. ಇದೀಗ ಸಂರ್ದಶವೊಂದರಲ್ಲಿ ನಾನಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ‘ಹಿಟ್ 3’ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾನಿ ಬಿಗ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್‌ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ

    ಸಂದರ್ಶನವೊಂದರಲ್ಲಿ ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಸುದೀಪ್ ಅವರು ನನ್ನ ಕುಟುಂಬ. ನಿನ್ನೆಯಷ್ಟೇ ನಾವು ಭೇಟಿಯಾಗಿದ್ದೇವು. ಆ ನಂತರ ಅವರು ‘ಬಿಲ್ಲಾ ರಂಗ ಭಾಷಾ’ ಶೂಟಿಂಗ್‌ಗೆ ತೆರಳಿದರು ಎಂದು ಮಾತನಾಡಿದ್ದಾರೆ. ಈ ವೇಳೆ, ನಿರೂಪಕಿಗೆ ನೀವು ‘ಹಿಟ್ 3’ ಟ್ರೈಲರ್ ನೋಡಿದ್ರಾ ಅದರಲ್ಲಿ ಗಾಯಕಿಯ ಧ್ವನಿ ಕೇಳಿಸುತ್ತದೆ. ಅದು ಸಾನ್ವಿಯ (Sanvi Sudeep) ವಾಯ್ಸ್ ಎಂದು ನಾನಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಪೊರಕೆ ಹಿಡಿದು ಹೊಸ ಅವತಾರದಲ್ಲಿ ಯುವ ಎಂಟ್ರಿ- ‘‌ಎಕ್ಕ’ ಚಿತ್ರದ ಟೀಸರ್‌ ಔಟ್

    ನಾನು ಸಾನ್ವಿ ವಾಯ್ಸ್‌ಗೆ ಅಭಿಮಾನಿ, ಆಕೆ ಅದ್ಭುತ ಹಾಡುಗಾರ್ತಿ ಎಂದು ನಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನಿ ಅವರ ಮೆಚ್ಚುಗೆ ಮಾತುಗಳು ಕಿಚ್ಚನ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ‘ಹಿಟ್ 3’ ಸಿನಿಮಾ ನೋಡಲು ಕಾತರದಿಂದ ಫ್ಯಾನ್ಸ್ ಕಾಯುತ್ತಿದ್ದಾರೆ.

    ಅಂದಹಾಗೆ, 2012ರಲ್ಲಿ ನಾನಿ ಹಾಗೂ ಸಮಂತಾ ನಟನೆಯ ‘ಈಗ’ ಸಿನಿಮಾದಲ್ಲಿ ಸುದೀಪ್ (Sudeep) ನಟಿಸಿದ್ದರು. ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಹಾಗಾಗಿ ಸುದೀಪ್ ಜೊತೆ ನಾನಿಗೆ ಉತ್ತಮ ಒಡನಾಟವಿದೆ.

  • ನ್ಯಾಚುರಲ್ ನಾನಿಯ ಮಾಸ್ ಟೀಸರ್ ಹಿಟ್ 3

    ನ್ಯಾಚುರಲ್ ನಾನಿಯ ಮಾಸ್ ಟೀಸರ್ ಹಿಟ್ 3

    ತೆಲುಗಿನಲ್ಲಿ ರೊಮ್ಯಾಂಟಿಕ್‌ ಸಿನಿಮಾಗಳ ಜೊತೆಗೆ ಮಾಸ್‌ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನ್ಯಾಚುರಲ್ ಸ್ಟಾರ್ ನಾನಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ನಾನಿ ಹುಟ್ಟುಹಬ್ಬದ ವಿಶೇಷವಾಗಿ ಹಿಟ್-3  (Hit 3) ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಗಿದೆ. ಒಂದು ಸೀರಿಯಲ್ ಕಿಲ್ಲರ್‌ನ ಹಿಡಿಯೋದಕ್ಕೆ ನಡೆಯುವ ಇನ್ವೆಸ್ಟಿಗೇಶನ್ ಈ ಸಿನಿಮಾದ ಕಥೆ. ಅರ್ಜುನ್ ಸರ್ಕಾರ್ ಆಗಿ ಮಾಸ್ ಅವತಾರದಲ್ಲಿ ನಾನಿ (Nani) ಅಬ್ಬರಿಸಿದ್ದಾರೆ.

    ‘ಹಿಟ್ 3`.. ಇದು ಹಿಟ್ ಫ್ರಾಂಚೈಸಿ ಇಂದ ಬರುತ್ತಿರುವ  ಸಿನಿಮಾ. ಈ ಚಿತ್ರಕ್ಕೆ ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಿಟ್ ಮೊದಲನೇ ಸಿನಿಮಾದಲ್ಲಿ ವಿಶ್ವಕ್ ಸೇನ್ ಹೀರೋ ಆಗಿ ನಟಿಸಿದ್ದಾರೆ. ಹಿಟ್ 2 ರಲ್ಲಿ ಅಡವಿಶೇಷು ನಟಿಸಿದ್ದಾರೆ.  ಮೂರನೇ ಫ್ರಾಂಚೈಸಿಯಲ್ಲಿ ನಾನಿ ಸಖತ್ ರಡಗ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

     

    ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ. ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ‌ ಮೂಡಿ ಬಂದಿದ್ದು, ಮಿಕ್ಕಿ ಜೆ ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಹಿಟ್-3 ಚಿತ್ರಕ್ಕಿದೆ. ಟೀಸರ್ ಮೈ ಜುಮ್ ಅನ್ನೋ ಹಾಗೆ ಇದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದ್ದು, ಮೇ 1ರಂದು ಚಿತ್ರ ಬಿಡುಗಡೆಯಾಗಲಿದೆ.

  • HIT 3: ಸ್ಟೈಲೀಶ್‌ ಗೆಟಪ್‌ನಲ್ಲಿ ಕಾಣಿಸಿಕೊಂಡ ನಾನಿ- ಪೋಸ್ಟರ್‌ ಔಟ್

    HIT 3: ಸ್ಟೈಲೀಶ್‌ ಗೆಟಪ್‌ನಲ್ಲಿ ಕಾಣಿಸಿಕೊಂಡ ನಾನಿ- ಪೋಸ್ಟರ್‌ ಔಟ್

    ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಸರಾ, ಹಾಯ್ ನಾನಾ, ಸರಿಪೋಧಾ ಸನಿವಾರಮ್ ಸಿನಿಮಾಗಳ ಸಕ್ಸಸ್ ಕಂಡ ನಾನಿ ಇದೀಗ ‘ಹಿಟ್ 3’ ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ

    ‘ಹಿಟ್: ದಿ ಥರ್ಡ್ ಕೇಸ್’ (Hit 3) ಸಿನಿಮಾವನ್ನು ಕೈಗೆತ್ತಿಕೊಂಡಿರುವ ಬಗ್ಗೆ ಅಧಿಕೃತವಾಗಿ ನಟ ತಿಳಿಸಿದ್ದಾರೆ. ಸಸ್ಪೆನ್ಸ್ ಜೊತೆ ಥ್ರಿಲ್ ಆಗೋವಂತಹ ಕಥೆ ಹೇಳೋಕೆ ನಾನಿ ಹೊರಟಿದ್ದಾರೆ. ಇನ್ನೂ ನಾನಿ ಕುದುರೆಯ ಪಕ್ಕದಲ್ಲಿ ಕುಳಿತು ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Nani (@nameisnani)

    ಸದ್ಯ ಈ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ನಾನಿಗೆ ನಾಯಕಿಯಾಗಿ ‘ಕೆಜಿಎಫ್’ ಚೆಲುವೆ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ‘ಹಿಟ್ ಪಾರ್ಟ್ 3’ ಮುಂದಿನ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ. ಹಿಟ್ ಪಾರ್ಟ್ 1 & 2 ಸಿನಿಮಾ ಸಕ್ಸಸ್ ಕಂಡಿದೆ. ‘ಹಿಟ್ 3’ ಮೇಲೆ ಭಾರೀ ನಿರೀಕ್ಷೆಯಿದೆ. ನಾನಿ ಮತ್ತು ಕನ್ನಡತಿ ಶ್ರೀನಿಧಿ ಶೆಟ್ಟಿ (Srinidhi Shetty) ಈ ಸಿನಿಮಾ ಮೂಲಕ ಗೆಲ್ತಾರಾ? ಎಂದು ಕಾಯಬೇಕಿದೆ.

  • ನಾನಿ ನಿರ್ಮಾಣದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಮೆಗಾಸ್ಟಾರ್

    ನಾನಿ ನಿರ್ಮಾಣದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಮೆಗಾಸ್ಟಾರ್

    ನ್ಯಾಚುರಲ್ ನಾನಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಡೈರೆಕ್ಟರ್ ಶ್ರೀಕಾಂತ್ ಒಡೆಲ ನಿರ್ದೇಶನದ ಸಿನಿಮಾಗೆ ನಾನಿ (Nani) ಸಾಥ್ ನೀಡುತ್ತಿದ್ದಾರೆ. ಇದೀಗ ಚಿತ್ರತಂಡ ಚಿರಂಜೀವಿ ಜೊತೆಗಿನ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಇದನ್ನೂ ಓದಿ:ಮಾದಕ ವ್ಯಸನಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಉಪೇಂದ್ರ

    ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ (Srikanth Odela) ಇಬ್ಬರೂ ಕೈಯನ್ನು ರಕ್ತದಲ್ಲಿ ಅದ್ದಿ ಪರಸ್ಪರ ಕೈ ಹಿಡಿದುಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಇದು ರಕ್ತದಲ್ಲಿ ಮಾಡಿದ ಪ್ರತಿಜ್ಞೆ’ ಎಂಬ ಅಡಿಬರಹ ಕೊಟ್ಟಿದ್ದಾರೆ. ಪೋಸ್ಟರ್‌ನಲ್ಲಿ ‘ಇವನಿಗೆ ಶಾಂತಿ ಸಿಗುವುದು ಹಿಂಸೆಯಲ್ಲೇ’ ಎಂಬ ಸಾಲು ಬರೆಯಲಾಗಿದೆ. ರಕ್ತದ ಮೆತ್ತಿದ ಕೈನ ಚಿತ್ರ ಪೋಸ್ಟರ್‌ನಲ್ಲಿದೆ.

     

    View this post on Instagram

     

    A post shared by Nani (@nameisnani)

    ಇನ್ನೂ ಚಿರಂಜೀವಿ ಎಂದೂ ನಟಿಸಿರದ ಪವರ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ನಾನಿ ನಿರ್ಮಾಣ ಮಾಡುವುದರ ಜೊತೆಗೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಪಕ್ಕಾ ವಯಲೆನ್ಸ್ ಕತೆಯನ್ನು ಹೇಳೋಕೆ ಮುಂದಾಗಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    ‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    ನ್ನಡದ ‘ಕೆಜಿಎಫ್’ ಬ್ಯೂಟಿ ಶ್ರೀನಿಧಿ ಶೆಟ್ಟಿ (Srinidhi Shetty) ‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚಿದಾಯ್ತು, ತಮಿಳಿನ ಸ್ಟಾರ್‌ನ ಜೊತೆ ನಟಿಸಿದ್ದು ಆಯ್ತು, ಈಗ ಟಾಲಿವುಡ್‌ನತ್ತ ನಟಿ ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ (Nani) ಹೀರೋಯಿನ್ ಆಗಿದ್ದಾರೆ.

    ನಾನಿ ನಟನೆಯ ‘ಹಿಟ್ -3’ (Hit 3) ಸಿನಿಮಾಗೆ ಶ್ರೀನಿಧಿ ಶೆಟ್ಟಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಈ ವಿಚಾರವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಹೃದಯದ ಒಂದು ಭಾಗ’ ಈ ಸಿನಿಮಾದ ಭಾಗವಾಗಿರುವ ಕುರಿತು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ನಟ ಗೋವಿಂದ ಡಿಸ್ಚಾರ್ಜ್

    ಕಳೆದ ಕೆಲ ತಿಂಗಳುಗಳಿಂದ ನಾನಿ ಸಿನಿಮಾಗೆ ಇವರೇ ಹೀರೋಯಿನ್ ಎಂಬ ಸುದ್ದಿ ಹರಿದಾಡಿತ್ತು.ಆದರೆ ತಂಡವಾಗಲಿ, ನಟಿಯಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಈಗ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಶೇರ್ ಮಾಡಿ ಸಿಹಿಸುದ್ದಿ ತಿಳಿಸಿದ್ದಾರೆ.

    ಅಂದಹಾಗೆ, ಯಶ್ (Yash) ನಟನೆಯ ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ (KGF 2) ಸಿನಿಮಾಗಳ ಮೂಲಕ ನಾಯಕಿಯಾಗಿ ಶ್ರೀನಿಧಿ ಶೆಟ್ಟಿಗೆ ಸಕ್ಸಸ್ ಸಿಕ್ಕಿದೆ.