Tag: Nandish Reddy

  • ಬಡವರು ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಉಳಿಸುವುದಕ್ಕಾಗಿ ಸಲಹೆ ನೀಡಿದ್ದೇನೆ ಅಷ್ಟೇ: ನಂದೀಶ್ ರೆಡ್ಡಿ

    ಬಡವರು ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಉಳಿಸುವುದಕ್ಕಾಗಿ ಸಲಹೆ ನೀಡಿದ್ದೇನೆ ಅಷ್ಟೇ: ನಂದೀಶ್ ರೆಡ್ಡಿ

    ಬೆಂಗಳೂರು: ನನ್ನ ವಾದ ಹಾಗಾಗಿರಲಿಲ್ಲ. ಕಳೆದ 8 ವರ್ಷಗಳ ಹಿಂದೆ ನೀರು ಹೋಗಲು ಮೋರಿ ಕಟ್ಟಿದ್ದಾರೆ. ಇದೀಗ ನೀರು ಹೋಗುತ್ತಿರುವ ಜಾಗ ಬಿಟ್ಟು ಬೇರೆ ಜಾಗ ಗುರುತಿಸುತ್ತಿದ್ದಾರೆ. ಅಲ್ಲಿ ಮನೆಗಳಿವೆ ಹಾಗಾಗಿ ಬಡವರು ಕಷ್ಟಪಟ್ಟು ಕಟ್ಟಿರುವ ಮನೆಗಳನ್ನು ಉಳಿಸುವುದಕ್ಕಾಗಿ ಸಲಹೆ ನೀಡಿದ್ದೇನೆ ಅಷ್ಟೇ. ನಾನು ಅಲ್ಲಿ ವಾದಿಸಿದ್ದಲ್ಲ. ನನ್ನ ಅಭಿಪ್ರಾಯ ಹೇಳಿದ್ದು ಎಂದು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ವಿಚಾರವಾಗಿ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಸ್ಪಷ್ಟನೇ ನೀಡಿದ್ದಾರೆ.

    ಮಹದೇವಪುರದಲ್ಲಿ ತೆರವು ವೇಳೆ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಕಿರಿಕ್ ಮಾಡಿದ್ದರು. ಚಿನ್ನಪ್ಪನಹಳ್ಳಿ (Chinnapana Halli) ಒತ್ತುವರಿ ತೆರವು (Demolition Of Illegal Structures) ಕಾರ್ಯಚರಣೆ ವೇಳೆ ಮಧ್ಯಪ್ರವೇಶ ಮಾಡಿದ ಅವರು, ಪಾಲಿಕೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿದ ಅವರು, ಬಸವನಪುರ ವಾರ್ಡ್‍ನಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದರು. ನಾನು ಶಾಸಕನಾದ ಕೆಲವೇ ತಿಂಗಳಲ್ಲಿ ಅಲ್ಲಿ ನೀರು ನಿಂತು ಸಮಸ್ಯೆ ಆಗಿತ್ತು. ಬಡವರೆಲ್ಲ ಅಲ್ಲಿ ಮನೆ ಕಟ್ಟಿಕೊಂಡಿದ್ದರು. ಅವರಿಗೆ ರಾಜಕಾಲುವೆ ಒತ್ತುವರಿ ಬಗ್ಗೆ ಗೊತ್ತಿರಲಿಲ್ಲ. ಈ ವೇಳೆ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ರಸ್ತೆಯ ಒಳಭಾಗದಲ್ಲಿ ನೀರು ಹೋಗುವ ರೀತಿಯ ಕಾಮಗಾರಿ ಮಾಡಿಸಿದ್ದೇನೆ. ನಿಯಮದ ಪ್ರಕಾರ ಮನೆಗಳನ್ನು ಕೆಡವಬೇಕಾಗಿತ್ತು. ಆದರೆ ಆರೀತಿ ಮಾಡದೆ ಪರಿಹಾರ ಕಂಡುಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಇಂದು ಬಿಜೆಪಿ ಮುಖಂಡನಿಂದಲೇ ತೆರವು ಕಾರ್ಯಕ್ಕೆ ಅಡ್ಡಿ- ಪಾಲಿಕೆ ಅಧಿಕಾರಿಗಳ ಜೊತೆ ಕಿರಿಕ್

    ಹಾಗಾಗಿ ಚಿನ್ನಪ್ಪನಹಳ್ಳಿಯಲ್ಲೂ ಈ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಪರಿಹಾರ ಸೂಚಿಸಿದ್ದೇನೆ. ಇದೀಗ ಇರುವ ಮ್ಯಾಪ್‍ನ್ನು ಗುರುತಿಸಲು ಸಾಧ್ಯವಿಲ್ಲ. ಈ ಹಿಂದಿನ ಸರ್ವೇ ಕಲ್ಲು ಇದೀಗ ಎಲ್ಲೂ ಸಿಗಲ್ಲ. ಕೆರೆ ನೀರು, ರಾಜಕಾಲುವೆ ನೀರು ಹೇಗೆ ಹೋಗಬೇಕೆಂಬುದಕ್ಕೆ ಇದೀಗ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದೀಗ ಬಂದಿರುವ ತಂತ್ರಜ್ಞಾನಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಟ್ಟಿಂಗ್ ಮೆಷಿನ್‍ಗಳ ಮೂಲಕ ಎಷ್ಟು ಜಾಗ ಬೇಕು ಅಷ್ಟನ್ನು ಮಾತ್ರ ತೆರವುಗೊಳಿಸಬಹುದಾಗಿದೆ ಅಂತಹ ಕ್ರಮಗಳನ್ನು ಅಳವಡಿಸಿ ಎಂದು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!

    ರಾಜಕಾಲುವೆಯನ್ನು ಗೊತ್ತಿದ್ದು ಒತ್ತುವರಿ ಮಾಡಿದ್ದರೆ ಅಂತದ್ದನ್ನು ತೆರವುಗೊಳಿಸಿ. ಪ್ರಭಾವಿಗಳನ್ನು ಬಿಟ್ಟು ಬಡವರ ಮನೆಗಳನ್ನು ಒಡೆಯುವುದಲ್ಲ. ಯಾರೆಲ್ಲ ಒತ್ತುವರಿ ಮಾಡಿದ್ದಾರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕೆಂದರು.

    Live Tv
    [brid partner=56869869 player=32851 video=960834 autoplay=true]

  • ಇಂದು ಬಿಜೆಪಿ ಮುಖಂಡನಿಂದಲೇ ತೆರವು ಕಾರ್ಯಕ್ಕೆ ಅಡ್ಡಿ- ಪಾಲಿಕೆ ಅಧಿಕಾರಿಗಳ ಜೊತೆ ಕಿರಿಕ್

    ಇಂದು ಬಿಜೆಪಿ ಮುಖಂಡನಿಂದಲೇ ತೆರವು ಕಾರ್ಯಕ್ಕೆ ಅಡ್ಡಿ- ಪಾಲಿಕೆ ಅಧಿಕಾರಿಗಳ ಜೊತೆ ಕಿರಿಕ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಪರೇಷನ್ ಬುಲ್ಡೋಜರ್ (Operation Buldozer) ಕಾರ್ಯಾಚರಣೆ 3ನೇ ದಿನಕ್ಕೆ ಮುಂದುವರಿದ್ದು, ಇಂದು ಬಿಜೆಪಿ (BJP) ಮುಖಂಡರೊಬ್ಬರು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ.

    ಸರ್ಕಾರ ಮುಲಾಜಿಲ್ಲದೇ ತೆರವು ಕ್ರಮದ ಹೇಳಿಕೆ ನೀಡಿದ್ರೆ, ಇತ್ತ ಬಿಜೆಪಿ ಮುಖಂಡನೇ ಒತ್ತುವರಿ ತೆರವಿಗೆ ಅಡ್ಡಿಯಾಗಿದ್ದಾರೆ. ಇಂದು ಮಹದೇವಪುರದಲ್ಲಿ ತೆರವು ವೇಳೆ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಕಿರಿಕ್ ಮಾಡಿದ್ದಾರೆ. ಚಿನ್ನಪ್ಪನಹಳ್ಳಿ ಒತ್ತುವರಿ ತೆರವು ಕಾರ್ಯಚರಣೆ ವೇಳೆ ಮಧ್ಯಪ್ರವೇಶ ಮಾಡಿದ ಅವರು, ಪಾಲಿಕೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

    ಇದೀಗ ನಿಮ್ಮದೇ ಪಕ್ಷದ ಮಾಜಿ ಶಾಸಕರು ಹೀಗ್ಯಾಕೆ ವರ್ತನೆ ಮಾಡ್ತಾರೆ?. ಬಿಬಿಎಂಪಿ (BBMP) ತೆರವು ಕೆಲಸಕ್ಕೆ ಅಡ್ಡಿ ಪಡಿಸುವ ಅಗತ್ಯತೆ ಏನಿದೆ ಎಂದು ಇದೀಗ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!

    ಬೆಂಗಳೂರಿನಲ್ಲಿ ಮಳೆ ಅವಾಂತರ, ಒತ್ತುವರಿ ವಿರುದ್ಧ ಮೊನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammad Nalapad) ನಿನ್ನೆಯಷ್ಟೇ ತಮ್ಮ ಅಕಾಡೆಮಿ ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮ ನಡೆಸಿದ್ದರು. ರಾಜಕಾಲುವೆ ಒತ್ತುವರಿ ಆಗಿಲ್ಲ. ನೀವು ತಪ್ಪು ಮಾಡುತ್ತಿದ್ದೀರಿ’ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು.

    ಹ್ಯಾರಿಸ್ ಮಾಲೀಕತ್ವದ ನಲಪಾಡ್ ಅಕಾಡೆಮಿ (Nalapad Academy) ಯ ಕಾಂಪೌಂಡ್‍ನ್ನು ಧರೆಗೆ ಉರುಳಿಸಲಾಗಿತ್ತು. ಈ ವೇಳೆ ಹ್ಯಾರಿಸ್ ಪಿಎ ಸ್ಥಳದಲ್ಲಿ ಒತ್ತುವರಿ ಸ್ಥಗಿತಗೊಳಿಸಲು ಹೈಡ್ರಾಮಾ ನಡೆಸಿದ್ದರು. ನೋಟಿಸ್ ಕೊಟ್ಟಿಲ್ಲ, ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದ್ದರು. ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಟ್ಟಿರಲಿಲ್ಲ. ಈ ವಿಚಾರ ‘ಪಬ್ಲಿಕ್ ಟಿವಿ’ ಭಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರ ಬೃಹತ್ ಕಾಲ್ನಡಿಗೆ ಜಾಥಾ

    ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರ ಬೃಹತ್ ಕಾಲ್ನಡಿಗೆ ಜಾಥಾ

    ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಇಂದು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.

    ಲಾಲ್ ಬಾಗ್ ಗೇಟ್‍ನ ಕೆಂಗಲ್ ಹನುಮಂತಯ್ಯ ವೃತ್ತದಿಂದ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯವರೆಗೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಕಾಲ್ನಡಿಗೆ ಜಾಥಾ ನಡೆಸಿದರು. ಈ ಕಾಲ್ನಡಿಗೆ ಜಾಥಾದಲ್ಲಿ ಹಿರಿಯ ಸಾಹಿತಿ ಹಂ.ಪ ನಾಗರಾಜಯ್ಯ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಭಾಗಿಯಾಗಿದ್ದರು.

    ಜಾಥಾದಲ್ಲಿ ಸಾವಿರಾರು ನೌಕರರು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸರ್ಕಾರಕ್ಕೆ ವರದಿ ನೀಡಿ ಎಂದು ಒತ್ತಾಯಿಸಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂದೀಶ್ ರೆಡ್ಡಿ ಅವರು, ನೌಕರರ ವಿಷಯ ಕುರಿತು ಸಿಎಂ ಗಮನಕ್ಕೆ ತರುತ್ತೇನೆ. ಸಾರಿಗೆ ನೌಕರರ ಬಹಳ ದಿನಗಳ ಬೇಡಿಕೆ ಇದು. ಕಾನೂನಿನ ನಿಯಮಗಳಂತೆ ಶಾಶ್ವತ ಪರಿಹಾರ ಕೊಡಬೇಕು ಎಂದು ಸಿಎಂ ಅವರಿಗೆ ನನ್ನ ಮನವಿಯೂ ಇದೆ ಎಂದು ಹೇಳಿದರು.

  • ಕೆ.ಆರ್.ಪುರಕ್ಕೆ ಭೈರತಿ, ನಂದೀಶ್ ರೆಡ್ಡಿ ಜೋಡೆತ್ತು- ಆರ್.ಅಶೋಕ್

    ಕೆ.ಆರ್.ಪುರಕ್ಕೆ ಭೈರತಿ, ನಂದೀಶ್ ರೆಡ್ಡಿ ಜೋಡೆತ್ತು- ಆರ್.ಅಶೋಕ್

    ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಬಂಡಾಯವನ್ನು ಶಮನ ಮಾಡುವತ್ತ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದು, ದಿನಕ್ಕೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಸಂಧಾನ ಕಾರ್ಯ ಮಾಡುತ್ತಿದ್ದಾರೆ.

    ಇಂದು ಕಂದಾಯ ಸಚಿವ ಆರ್.ಅಶೋಕ್ ಕೆ.ಆರ್.ಪುರಕ್ಕೆ ಭೇಟಿ ನೀಡಿದ್ದು, ಭೈರತಿ ಬಸವರಾಜ್ ಹಾಗೂ ನಂದೀಶ್ ರೆಡ್ಡಿ ನಡುವಿನ ಅಸಮಾಧನವನ್ನು ತಿಳಿಸಿಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೆ.ಆರ್.ಪುರಕ್ಕೆ ಭೈರತಿ- ನಂದೀಶ್ ರೆಡ್ಡಿ ಜೋಡೆತ್ತು. ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾರ್ಯಕರ್ತರೇ ಇಲ್ಲ. ಬಸವರಾಜ್ ಅವರನ್ನು ಕರೆದುಕೊಂಡು ಬಂದಿದ್ದು ನಾನೇ ಮುಂಬೈನಲ್ಲಿ ಅನರ್ಹರ ಕಾವಲಿಗಿದ್ದಿದ್ದು ಭೈರತಿ ಬಸವರಾಜ್ ಎಂದರು.

    ನಂದೀಶ್ ರೆಡ್ಡಿ ನನ್ನ ಶಿಷ್ಯ, ಅವರ ಮನೆಯಲ್ಲಿ ಚಾಯ್ ಪೇ ಚರ್ಚಾ ಮಾಡುತ್ತೇವೆ. ಭೈರತಿ ಬಸವರಾಜ್ ಸಚಿವರಾಗುತ್ತಾರೆ. ಹಿಂದೆ ನಡೆದ ಘಟನೆಯನ್ನು ಮರೆಯಿರಿ. ದೇಶ, ರಾಜ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ಕಮಲ ಗೆಲ್ಲಿಸಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಕಾರ್ಪೋರೇಟರ್ ಗಳಿಗೂ ಸಮನಾದ ಗೌರವ ಇರುತ್ತದೆ. ಬಸವ-ನಂದಿಯರನ್ನು ಹೊಲ ಬೆಳೆಯೋಕೆ ಬಿಡುತ್ತಿದ್ದೇವೆ ಎಂದು ಉಲ್ಲೇಖಿಸಿದರು.

    ಈ ಮೂಲಕ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಬಂಡಾಯವು ಶಮನವಾದಂತಾಗಿದ್ದು, ನಂದೀಶ್ ರೆಡ್ಡಿ ನಿವಾಸದಲ್ಲಿ ಸಂಧಾನ ಸಭೆ ನಡೆಸಿ ಸಚಿವ ಆರ್.ಅಶೋಕ್ ಬಂಡಾಯ ಶಮನಗೊಳಿಸಿದ್ದಾರೆ. ಭೈರತಿ ಬಸವರಾಜ್, ನಂದೀಶ್ ರೆಡ್ಡಿಯನ್ನು ಒಟ್ಟಿಗೆ ಕೂರಿಸಿ ಆರ್.ಅಶೋಕ್ ಸಂಧಾನ ಮಾಡಿದ್ದಾರೆ. ಅಲ್ಲದೆ ಒಟ್ಟಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಸಂಧಾನದ ನಂತರ ಭೈರತಿ ಬಸವರಾಜ್ ಪರ ಕೆಲಸ ಮಾಡಲು ನಂದೀಶ್ ರೆಡ್ಡಿ ಒಪ್ಪಿಕೊಂಡಿದ್ದಾರೆ. ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ ಬಳಿಕವೂ ನಂದೀಶ್ ರೆಡ್ಡಿ ಮುನಿಸು ಮುಂದುವರಿಸಿದ್ದರು.