Tag: Nandini

  • ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ತುಮಕೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಂದಿನಿ ಧಾರಾವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೊರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ `ಯಾರೇ ನೀ ಮೋಹಿನಿ’ ಯ ಕಥೆ ಕೇಳಿ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ.

    ಹೌದು. ತುಮಕೂರು ನಗರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಇಂಡೋಕಿಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಧಾರಾವಾಹಿಯಲ್ಲಿನ ಭೂತದ ಕಥೆ ಕೇಳಿ ಇಬ್ಬರು ಮಕ್ಕಳು ಹೆದರಿ ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಇದನ್ನೂ ಓದಿ: ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತಿಕ್ಷಾಗೆ ಹೇಳಿದ್ದಾಳೆ. ಧಾರಾವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರಿದ್ದಲ್ಲದೇ ಪ್ರತಿಕ್ಷಾಗೂ ಹೆದರಿಸಿದ್ದಾಳೆ.

    ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಚಿಕಿತ್ಸೆ ನೀಡಿ ವಿಚಾರಿಸಿದಾಗ ಪ್ರತಿಕ್ಷಾ ಧಾರಾವಾಹಿಯಲ್ಲಿನ ಭೂತದ ಕಥೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

  • ಕೋಲಾರಕ್ಕೆ ನಂದಿನಿ ಭೇಟಿ- ಓದಿದ ಶಾಲೆಯ ಶಿಕ್ಷಕರು, ಮಕ್ಕಳೊಂದಿಗೆ ಬೆರೆತು ಖುಷಿ ಪಟ್ಟ ಯುಪಿಎಸ್‍ಸಿ ಟಾಪರ್

    ಕೋಲಾರಕ್ಕೆ ನಂದಿನಿ ಭೇಟಿ- ಓದಿದ ಶಾಲೆಯ ಶಿಕ್ಷಕರು, ಮಕ್ಕಳೊಂದಿಗೆ ಬೆರೆತು ಖುಷಿ ಪಟ್ಟ ಯುಪಿಎಸ್‍ಸಿ ಟಾಪರ್

    ಕೋಲಾರ: ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ ಕೆಆರ್ ನಂದಿನಿ 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದ ನಂತರ ಇದೇ ಮೊದಲ ಬಾರಿಗೆ ಇಂದು ಕೋಲಾರಕ್ಕೆ ಆಗಮಿಸಿದ್ರು.

    ಕೋಲಾರ ನಗರದಲ್ಲಿ 1 ರಿಂದ 10 ನೇ ತರಗತಿವರೆಗೆ ಓದಿದ ಚಿನ್ಮಯ ಶಾಲೆಯಲ್ಲಿ ನಂದಿನಿ ತನ್ನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಸಂತೋಷ ಹಂಚಿಕೊಂಡ್ರು. ಅಲ್ಲದೆ ತನ್ನ ವಿದ್ಯಾಭ್ಯಾಸಕ್ಕೆ ಕಾರಣೀಭೂತರಾದ ಶಿಕ್ಷಕರೆಲ್ಲರಿಗೆ ಕೆಆರ್ ನಂದಿನಿ ಅವರು ಕೃತಜ್ಞತೆಗಳನ್ನ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ನಂದಿನಿ ಅವರಿಗೆ ಚಿನ್ಮಯ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ್ರು.

    ಕೆಆರ್ ನಂದಿನಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ ಕೋಲಾರದ ಚಿನ್ಮಯ ಶಾಲೆಯಲ್ಲಿ ಮುಗಿಸಿದ್ದು, ನಂತರ ಮೂಡಬಿದಿರೆಯಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ರು.

    ಸರಳ ಹಾಗೂ ಸಜ್ಜನಿಕೆಗೆ ಮತ್ತೊಂದು ಹೆಸರಾಗಿರೋ ನಂದಿನಿ, ಚಿಕ್ಕಂದಿನಿಂದಲೂ ಏನಾದ್ರು ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಇಂದು ಮಕ್ಕಳೊಂದಿಗೆ ತಾವೂ ಮಗುವಾಗಿ ಬೆರೆತು ಸಂತಸ ವ್ಯಕ್ತಪಡಿಸಿದ್ರು.

    ಇದೇ ವೇಳೆ ಮಾತನಾಡಿದ ಅವರು, ನಾನು ಯುಪಿಎಸ್‍ಸಿ ಟಾಪರ್ ಆದ್ರೂ ಶಾಲೆಗೆ ವಿದ್ರ್ಯಾಥಿನಿಯೇ. ವಿದ್ಯಾರ್ಥಿ ದೆಸೆಯಲ್ಲಿ ಸಿಕ್ಕ ಮೌಲ್ಯಗಳು ಇಂದು ನನ್ನನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ನಾನು ಕರ್ನಾಟಕಕ್ಕೆ ಬಂದ್ರೆ ನಾನು ಕಲಿತ ಶಾಲೆಗೆ ಭೇಟಿ ಮಾಡುವುದು ಹವ್ಯಾಸ ಎಂದ್ರು.

    https://www.youtube.com/watch?v=0uWtEOTyjF8

    https://www.youtube.com/watch?v=4Sx6iXwxex0

  • ಆದಿಚುಂಚನಗಿರಿಗೆ ಯುಪಿಎಸ್‍ಸಿ ಟಾಪರ್ ನಂದಿನಿ ಭೇಟಿ

    ಆದಿಚುಂಚನಗಿರಿಗೆ ಯುಪಿಎಸ್‍ಸಿ ಟಾಪರ್ ನಂದಿನಿ ಭೇಟಿ

    ಮಂಡ್ಯ: 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದ ಕೋಲಾರದ ಕೆ.ಆರ್. ನಂದಿನಿ ಅವರು ಶುಕ್ರವಾರ ಸಂಜೆ ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ.

    ಕುಟಂಬ ಸಮೇತ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಆರ್.ನಂದಿನಿ, ಮಠದಲ್ಲಿ ನಡೆದ ಪೌರ್ಣಿಮೆ ಪೂಜೆಯಲ್ಲಿ ಭಾಗವಹಿಸಿದ್ರು. ಬಳಿಕ ನಿರ್ಮಲಾನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದ್ರು. ಪರೀಕ್ಷೆಯಲ್ಲಿ ಟಾಪರ್ ಆಗಿ ಅತ್ಯುತ್ತಮ ಸಾಧನೆ ಮಾಡಿದ ನಂದಿನಿ ಅವರನ್ನ ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದಿಸಿದ್ರು.

    ಇದನ್ನೂ ಓದಿ: ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್ ವಿಡಿಯೋ ನೋಡಿ

    ಚಿನ್ನದ ಗಣಿ ನಾಡಿನ ಖ್ಯಾತಿಯ ಕೋಲಾರದ ಹೆಣ್ಣು ಮಗಳು ನಂದಿನಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಯುಪಿಎಸ್‍ಸಿ ಇತಿಹಾಸದಲ್ಲಿ ಎರಡನೇ ಬಾರಿಗೆ ಕನ್ನಡತಿಯೊಬ್ಬರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದಂತಾಗಿದೆ. ಕೋಲಾರ ಜಿಲ್ಲೆ ಕೆಂಬೋಡಿ ಗ್ರಾಮದ ಕೆ.ಆರ್ ನಂದಿನಿ ಸದ್ಯ ಹರ್ಯಾಣಾದ ಫರೀದಾಬಾದ್‍ನಲ್ಲಿ ಐ.ಆರ್.ಎಸ್ ತರಬೇತಿಯಲ್ಲಿದ್ದಾರೆ. ಕೆ.ಆರ್. ನಂದಿನಿ, ನಿವೃತ್ತ ಹೈಸ್ಕೂಲ್ ಶಿಕ್ಷಕರಾದ ರಮೇಶ್ ಅವರ ಪುತ್ರಿ.

    ಕೋಲಾರದ ಚಿನ್ಮಯ ಸ್ಕೂಲ್‍ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ನಂದಿನಿ, ಪಿಯುಸಿಯನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿದರು. ನಂತ್ರ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಬಿಇ ಪದವಿ ಪಡೆದ್ರು. ನಂತರ ದೆಹಲಿ ಕರ್ನಾಟಕ ಭವನದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ರು. ಕಳೆದ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 849ನೇ ಸ್ಥಾನ ಪಡೆದು ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿದ್ದರು. ಐಆರೆಸ್ ಅಧಿಕಾರಿಯಾಗಿದ್ದುಕೊಂಡೇ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಕೆ.ಆರ್. ನಂದಿನಿ ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    https://www.youtube.com/watch?v=uGLO7ROjcVg

  • ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್

    ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್

    ಕೋಲಾರ: ಯುಪಿಎಸ್‍ಸಿ ಟಾಪರ್ ಆಗಿ ಕೆ.ಆರ್.ನಂದಿನಿ ಅವರು ಹೊರಹೊಮ್ಮಿದ ಬಳಿಕ ಕೋಲಾರದ ಮುನೇಶ್ವರ ನಗರಕ್ಕೆ ಕಾಯಕಲ್ಪ ಸಿಕ್ಕಿದೆ.

    ಹೌದು. ದೇಶಕ್ಕೆ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದ ನಂದಿನಿ ಅವರ ಫಲಿತಾಂಶದಿಂದಾಗಿ ತಂದೆ ತಾಯಿ ವಾಸವಿರುವ, ತಾವು ಹುಟ್ಟಿ ಬೆಳೆದ ವಠಾರದ ಚಿತ್ರಣ ಈಗ ಬದಲಾಗುತ್ತಿದೆ.

    ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರ ಈಗ ರಾತ್ರೋರಾತ್ರಿ ಹೈ-ಟೆಕ್ ಸ್ಪರ್ಶ ಪಡೆದುಕೊಂಡಿದೆ. ನಗರಕ್ಕೆ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಗಳನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.

    ಈ ಹಿಂದೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಬದಲಾವಣೆಯಾಗದ ವ್ಯವಸ್ಥೆ ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ ಎಂದು ಮುನೇಶ್ವರ ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=uGLO7ROjcVg