Tag: Nandini

  • ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಶ್ವಂತ್ ಮತ್ತು ನಂದಿನಿ ನಿಜವಾಗಿಯೂ ಪ್ರೇಮಿಗಳು ಆಗಿರುವ ಕಾರಣದಿಂದಾಗಿ, ಈ ಇಬ್ಬರನ್ನೂ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿತ್ತು ವಾಹಿನಿ. ಅದೊಂದು ಕ್ಯೂಟ್ ಕಪಲ್ ಕೂಡ ಆಗಿದ್ದರಿಂದ ನಂದಿನಿ ಮತ್ತು ಜಶ್ವಂತ್ ಬಗ್ಗೆ ವಿಶೇಷ ಪ್ರೀತಿಯನ್ನೂ ನೋಡುಗರು ಹೊಂದಿದ್ದರು. ಆದರೆ, ಈಗ ಇಬ್ಬರ ನಡುವೆ ಹೊಂದಾಣಿಕೆ ಕಷ್ಟ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿಯೇ ನಂದಿನಿ ನೇರವಾಗಿಯೇ ತನ್ನ ಬಾಯ್ ಫ್ರೆಂಡ್ ಗೆ ನನ್ನಿಂದ ದೂರವಾಗ್ತಿದ್ದೀಯಾ ಎನ್ನುವ ಪ್ರಶ್ನೆ ಮಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಬಂದಾಗ ನಂದಿನಿ ಮತ್ತು ಜಶ್ವಂತ್ ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದರು. ಈ ಕುರಿತು ಬಿಗ್ ಬಾಸ್ ವಾರ್ನ್ ಕೂಡ ಮಾಡಿತ್ತು. ಇದೀಗ ನಂದಿನಿಯಿಂದ ಜಶ್ವಂತ್ ದೂರವಾಗುತ್ತಿದ್ದಾನೆ ಎನ್ನುವ ಅನುಮಾನ ಸ್ವತಃ ನಂದಿನಿಗೆ ಶುರುವಾಗಿದೆ. ಜಶ್ವಂತ್ ಹೆಚ್ಚಾಗಿ ಸಾನ್ಯ ಜೊತೆಯೇ ಇರುತ್ತಾನೆ, ಅವಳ ಜೊತೆಯೇ ಹೆಚ್ಚು ಮಾತನಾಡುತ್ತಾನೆ ಎನ್ನುವುದು ನಂದಿನಿ ಆರೋಪವಾಗಿತ್ತು. ಅದನ್ನು ನೇರವಾಗಿಯೇ ಕೇಳಿದ್ದೂ ಇದೆ. ಈ ವಿಷಯವಾಗಿಯೇ ಗಲಾಟೆ ಕೂಡ ಆಗಿದೆ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ಜಶ್ವಂತ್ ಬಗ್ಗೆ ನಂದಿನಿ ಪೊಸೆಸಿವ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಶ್ವಂತ್ ಯಾವುದೇ ಹುಡುಗಿಯ ಜೊತೆ ಮಾತನಾಡಿದರೂ, ಅದಕ್ಕೆ ನಂದಿನಿ ಬೇಸರ ವ್ಯಕ್ತ ಪಡಿಸುತ್ತಾಳೆ. ಅದರಲ್ಲೂ ಸಾನ್ಯ ಜೊತೆ ತನ್ನ ಹುಡುಗ ಇರುವುದನ್ನು ಆಕೆಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಹಲವಾರು ಬಾರಿ ಜಶ್ವಂತ್ ಗೆ ನನ್ನಿಂದ ದೂರವಾಗುತ್ತಿದ್ದೀಯಾ ಎಂದು ಕೇಳುತ್ತಿದ್ದಾಳೆ ನಂದಿನಿ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ. ಇನ್ನು ಮನೆಯಲ್ಲಿನ ಸ್ಪರ್ಧಿಗಳ ಸ್ನೇಹ, ಜಗಳ ಹೀಗೆ ಸಾಕಷ್ಟು ವಿಚಾರಗಳು ಸದ್ದು ಮಾಡುತ್ತಿದೆ. ಇದೀಗ ಇತ್ತೀಚಿನ ಜಯಶ್ರೀ ಆರಾಧ್ಯ ಮತ್ತು ನಂದಿನಿ ಜಗಳ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ. ಇನ್ನು ʻಹೇಳಿದ್ದನ್ನೇ ಹೇಳಿ ಹೇಳಿ ಮೆಂಟಲ್ ಆಗೋಗ್ತಿಯಾʼ ಎಂದು ಜಯಶ್ರೀಗೆ ನಂದು ಎಚ್ಚರಿಕೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಾಗಿನಿಂದಲೂ ಜಯಶ್ರೀ ಮತ್ತು ನಂದಿನಿ ನಡುವೆ ಆಗಾಗ ಮನಸ್ತಾಪ ಆಗುತ್ತಲೇ ಇದೆ. ನಂದಿನಿ, ಜಶ್ವಂತ್ ಬೋಪಣ್ಣ ಮತ್ತು ಜಯಶ್ರೀ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಅದರಲ್ಲೂ ಈ ವಾರದ ಕ್ಯಾಪ್ಟೆನ್ಸಿಯಲ್ಲಿ ತಿರುಗುವ ಕುರ್ಚಿ ಟಾಸ್ಕ್ ವೇಳೆ ನಂದಿನಿ ಕಣ್ಣಿಗೆ ಜಯಶ್ರೀ ಆರಾಧ್ಯ ಸ್ಪ್ರೇ ಮಾಡಿಬಿಟ್ಟರು. ಬೇಡ ಎಂದು, ಇತರೆ ಸ್ಪರ್ಧಿಗಳು ಹೇಳಿದ್ದರು ಕೂಡ ಪದೇ ಪದೇ ನಂದಿನಿ ಮುಖಕ್ಕೆ ಜಯಶ್ರೀ ಸ್ಪ್ರೇ ಹಾಕಿದರು. ಜಯಶ್ರೀ ಮಾನವೀಯತೆ ಇಲ್ಲ ಅಂತ ನಂದಿನಿ ಎಲ್ಲರ ಮುಂದೆಯೇ ಹೇಳಿದರು. ಇದನ್ನೂ ಓದಿ:ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಆಟದಲ್ಲಿ ಜಯಶ್ರೀ ಆಡಿರುವ ರೀತಿ ನೋಡಿ, ಕಳಪೆ ಹಣೆಪಟ್ಟಿಯನ್ನ ಸ್ಪರ್ಧಿಗಳು ನೀಡಿದ್ದರು. ಈ ಪರಿಣಾಮ, ಜಯಶ್ರೀ ಆರಾಧ್ಯ ಜೈಲಿಗೆ ತೆರಳಿದರು. ಜೈಲಿನಲ್ಲಿದ್ದ ಜಯಶ್ರೀ ಆರಾಧ್ಯ ಜೊತೆ ಮಾತನಾಡಲು ಬಂದ ನಂದಿನಿ, ಹೇಳಿದ್ದನ್ನೇ ಹೇಳಿ ಹೇಳಿ ಮೆಂಟಲ್ ಆಗೋಗ್ತಿಯಾ ಎಂದರು. ಇಬ್ಬರ ಕಿತ್ತಾಟವನ್ನ ನೋಡುತ್ತಿದ್ದ ಸೋನು, ಈ ಮನೆಯಲ್ಲಿ ಎಲ್ಲಾ ಇದೆ. ಒಬ್ಬರು ಲಾಯರ್ ಕೂಡ ಇರಬೇಕಿತ್ತು. ಆಗ ಇನ್ನೂ ಸಖತ್ತಾಗಿರೋದು ಎಂದರು.

    ಇನ್ನು ಜಯಶ್ರೀ ಮತ್ತು ನಂದಿನಿ ಮಾತನಾಡುವಾಗ ಸೋನು ಮೂಗು ತೂರಿಸಿದ್ದಾರೆ. ಬಳಿಕ ಇಬ್ಬರು ಮಾತನಾಡಬೇಕಾದರೆ ಮಧ್ಯೆ ಮಾತನಾಡಬೇಡ ಎಂದು ಜಯಶ್ರೀ, ಸೋನುಗೆ ವಾರ್ನಿಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆಯೂ ಕೂಡ ಜಟಾಪಟಿ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್: ಗರ್ಲ್ ಫ್ರೆಂಡ್ ವಿಚಾರದಲ್ಲಿ ಜಶ್ವಂತ್ ಗೆ ಖಡಕ್ ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್

    ಬಿಗ್ ಬಾಸ್: ಗರ್ಲ್ ಫ್ರೆಂಡ್ ವಿಚಾರದಲ್ಲಿ ಜಶ್ವಂತ್ ಗೆ ಖಡಕ್ ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್

    ಬಿಗ್ ಬಾಸ್ ಮನೆಯಲ್ಲಿರುವ ಜಶ್ವಂತ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಪ್ರಸಂಗ ನಿನ್ನೆ ಸುದೀಪ್ ಪಂಚಾಯತಿಯಲ್ಲಿ ನಡೆಯಿತು. ವಾರಾಂತ್ಯದಲ್ಲಿ ನಡೆಯುವ  ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಸುದೀಪ್, ನೇರವಾಗಿಯೇ ಜಶ್ವಂತ್ ಗೆ ಎಚ್ಚರಿಕೆ ನೀಡಿದರು. ಇದೇ ರೀತಿ ಮುಂದುವರೆದರೆ, ಮನೆಯ ಬಾಗಿಲು ತೋರಿಸಬೇಕಾಗುತ್ತದೆ ಎಂದು ನೇರವಾಗಿಯೇ ಸಂದೇಶ ರವಾನಿಸಿದರು.

    ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಾಗ ಯಾರೂ, ಯಾರೊಂದಿಗೂ ಚರ್ಚೆ ಮಾಡುವಂತಿಲ್ಲ. ತಮ್ಮ ಸ್ವಂತ ನಿರ್ಧಾರದಿಂದ ಆಯ್ಕೆ ಮಾಡಬೇಕು. ಆದರೆ, ಜಶ್ವಂತ್ ತನ್ನ ಲವರ್ ನಂದು ಜೊತೆ ಚರ್ಚೆ ಮಾಡಿ, ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯ ನಿಯಮವನ್ನು ಅವರು ಮುರಿದಿದ್ದಾರೆ. ಪದೇ ಪದೇ ಜಶ್ವಂತ್ ಹೀಗಿಯೇ ಮಾಡುತ್ತಿರುವುದರಿಂದ ಸುದೀಪ್ ಇಂಥದ್ದೊಂದು ಎಚ್ಚರಿಕೆ ಕೊಟ್ಟಿದ್ದಾರೆ. ಲವರ್ ಅನ್ನುವುದು ಮನೆಯಿಂದ ಆಚೆ, ಮನೆಯೊಳಗೆ ಇಬ್ಬರೂ ಸ್ಪರ್ಧಿ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ. ಇದನ್ನೂ ಓದಿ: ವಿಜ್ಞಾನ ಮತ್ತು ಪುರಾಣ ಮಿಶ್ರಣದ ಧ್ರುವ 369 ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ರಾಜ್ಯಪಾಲ

    ಸುದೀಪ್ ಇಂಥದ್ದೊಂದು ಎಚ್ಚರಿಕೆ ಕೊಟ್ಟಾಗ ನಂದು ಮತ್ತು ಜಶ್ವಂತ್ ಇಬ್ಬರೂ ಡಲ್ ಆದಂತೆ ಕಂಡು ಬಂದರು. ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ನಂದು ಪರ ನಿಲ್ಲುವ ಜಶ್ವಂತ್, ಮನೆಯಲ್ಲೂ ಅವರು ಲವರ್ ರೀತಿಯಲ್ಲೇ ಕಾಣುತ್ತಿದ್ದಾರೆ. ಅಲ್ಲದೇ, ಮನೆಯಾಚೆ ನಂದು ಜೊತೆ ಜಶ್ವಂತ್ ಹೇಗಿರುತ್ತಿದ್ದರೊ, ಅದೇ ರೀತಿಯಲ್ಲಿ ಮನೆಯಲ್ಲೂ ಇರುತ್ತಾರೆ. ಮುಂದೆ ಹೀಗೆ ಆಗಬಾರದು ಎನ್ನುವ ಎಚ್ಚರಿಕೆ ಸುದೀಪ್ ಮಾತಿನಲ್ಲಿತ್ತು.

    Live Tv
    [brid partner=56869869 player=32851 video=960834 autoplay=true]

  • `ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    `ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    ನ್ಯಾಷನಲ್ ಸ್ಟಾರ್ ಯಶ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಯಶ್ ಮನೆಯಲ್ಲಿ ರಕ್ಷಾ ಬಂಧನ ಹಬ್ಬವನ್ನ ಆಚರಿಸಿದ್ದಾರೆ. ಸದ್ಯ ಹಬ್ಬದ ಸಂಭ್ರಮದ ಫೋಟೋವನ್ನ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸುತ್ತಿದ್ದಾರೆ. `ಕೆಜಿಎಫ್’ ಸ್ಟಾರ್ ಯಶ್ ಮನೆಯಲ್ಲೂ ರಾಖಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ವರ್ಷವು ಕೂಡ ರಾಖಿ ಹಬ್ಬವನ್ನ ಆಚರಿಸಿದ್ದಾರೆ. ಸಹೋದರ ಸಹೋದರಿಯ ಬಂಧವನ್ನ ತೋರಿಸುವಂತಹ ಹಬ್ಬ ಇದಾಗಿದ್ದು, ಈ ಹಬ್ಬವನ್ನ ಯಶ್ ಮತ್ತು ಸಹೋದರಿ ನಂದಿನಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

     

    View this post on Instagram

     

    A post shared by Yash (@thenameisyash)

    ಸಹೋದರ ಯಶ್‌ಗೆ ಆರತಿ ಬೆಳಗಿದ ನಂತರ ರಾಖಿ ಕಟ್ಟಿ, ಖುಷಿ ಖುಷಿಯಿಂದ ಹಬ್ಬ ಆಚರಿಸಿದ್ದಾರೆ. ಈ ಫೋಟೋಗಳನ್ನ ಯಶ್ ಕೂಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ರೋಡೀಸ್’ ರಿಯಾಲಿಟಿ ಶೋ ಗೆದ್ದ ಬೆಂಗಳೂರಿನ ಹುಡುಗಿ : ಗೆಲುವು ಸುಲಭದ್ದಲ್ಲ ಎಂದ ನಂದಿನಿ

    ‘ರೋಡೀಸ್’ ರಿಯಾಲಿಟಿ ಶೋ ಗೆದ್ದ ಬೆಂಗಳೂರಿನ ಹುಡುಗಿ : ಗೆಲುವು ಸುಲಭದ್ದಲ್ಲ ಎಂದ ನಂದಿನಿ

    ಬಾಲಿವುಡ್ ನ ಸುಪ್ರಸಿದ್ಧ ರಿಯಾಲಿಟಿ ಶೋ ರೋಡೀಸ್ ಮುಕ್ತಾಯವಾಗಿದೆ. ಈ ಬಾರಿ ಸೌತ್ ಆಫ್ರಿಕಾದಲ್ಲಿ ನಡೆದ ಈ ರಿಯಾಲಿಟಿ ಶೋನಲ್ಲಿ ಸಾಕಷ್ಟು ಸ್ಪರ್ಧಿಗಳು ಭಾಗಿಯಾಗಿದ್ದರು. ಅದರಲ್ಲೂ ಬೆಂಗಳೂರಿನ ನಂದಿನಿ ಮತ್ತು ಆಶೀಶ್ ಭಾಟಿಯಾ ಜೋಡಿ ಇಡೀ ಶೋನಲ್ಲಿ ಉತ್ತಮವಾಗಿ ಆಡಿದ್ದರು. ಅನೇಕ ಸಾಹಸಮಯ ಟಾಸ್ಕ್ ಗಳನ್ನು ಪೂರ್ಣಿಗೊಳಿಸಿದ್ದರು. ಈ ಜೋಡಿಯ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಂಬಿಕೆ ಇತ್ತು. ಕೊನೆಗೂ ಆ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಈ ಜೋಡಿ.

    ಸೌತ್ ಆಫ್ರಿಕಾದ ಪ್ರಮುಖ ಸ್ಥಳಗಳಲ್ಲಿ ನಡೆದ ಸಾಹಸಮಯ ಟಾಸ್ಕ್ ಗಳನ್ನು ಆಶೀಶ್ ಮತ್ತು ನಂದಿನಿ ಸಮರ್ಥವಾಗಿಯೇ ನಿಭಾಯಿಸಿದ್ದರಿಂದ, ಇವರಿಗೆ ಗೆಲುವಿನ ಪಟ್ಟ ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಅದು ಈಗ ನಿಜವಾಗಿದೆ ರೋಡೀಸ್ 18 ಪಟ್ಟವನ್ನು ಆಶೀಶ್ ಭಾಟಿಯಾ ಮತ್ತು ಬೆಂಗಳೂರಿನ ನಂದಿನಿ ಅಲಂಕರಿಸಿದ್ದಾರೆ. ಇದೊಂದು ಅಡ್ವೆಂಚರ್ ರಿಯಾಲಿಟಿ ಶೋ ಆಗಿದ್ದು, ಈ ಹಿಂದೆ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ ಕೂಡ ಈ ಶೋನಲ್ಲಿ ಭಾಗಿಯಾಗಿದ್ದರು. ಆದರೆ, ಅವರಿಗೆ ಗೆಲುವು ಆಗಿರಲಿಲ್ಲ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ

    ತಮ್ಮ ಗೆಲುವಿಗೆ ಕಾರಣವನ್ನು ಹಂಚಿಕೊಂಡಿರುವ ನಂದಿನಿ, ಈ ಶೋನಲ್ಲಿ ಅನೇಕ ಟಾಸ್ಕ್ ಗಳು ಸಾಹಸಮಯವಾಗಿದ್ದವು. ಆದರೂ, ನಾನು ಹೆದರಲಿಲ್ಲ. ಅನೇಕ ಎಲಿಮಿನೇಷನ್ ನಿಂದ ಪಾರಾದೆ, ಕಾರ್ಯಕ್ರಮದ ಆಯೋಜಕರು ನೀಡುತ್ತಿದ್ದ ತಿರುವುಗಳನ್ನು ಅರ್ಥ ಮಾಡಿಕೊಂಡು ಆಡಿದೆ. ಹಾಗಾಗಿ ಗೆಲುವು ಸಾಧ್ಯವಾಗಿದೆ ಎಂದಿದ್ದಾರೆ. ಈ ಬಾರಿ ಇಡೀ ಶೋ ಆಫ್ರಿಕಾದಲ್ಲಿ ನಡೆದಿದ್ದು, ಸೋನು ಸೂದ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ನೇಹಾ ಧೂಪಿಯಾ, ವಿಜೇಂದರ್ ಸಿಂಗ್, ನಿಖಿಲ್ ಚಿನ್ನಪ್ಪ ಸೇರಿದಂತೆ ಹಲವರು ಈ ಶೋನಲ್ಲಿ ಭಾಗಿಯಾಗಿದ್ದರು.

    ಈ ಶೋ ಗೆದ್ದ ನಂದಿನಿ ಮತ್ತು ಆಶೀಶ್ ಜೋಡಿಗೆ ಒಟ್ಟು ಹತ್ತು ಲಕ್ಷ ರೂಪಾಯಿಗಳ ಬಹುಮಾನ ಸಿಕ್ಕಿದೆ. ಅಲ್ಲದೇ, ಸ್ಮಾರ್ಟ್ ಫೋನ್, ಇನ್ ಫಿನಿಕ್ಸ್ ಇನ್ ಬುಕ್ ಮತ್ತು ಅನೇಕ ಉಡುಗೆಗಳನ್ನೂ ನೀಡಲಾಗಿದೆ. ಈ ಬಾರಿ ಕರ್ನಾಟಕವನ್ನು ಇಬ್ಬರು ಪ್ರತಿನಿಧಿಸಿದ್ದು, ಬೆಂಗಳೂರಿನ ನಂದಿನಿ ಜೊತೆ ಕೊಡಗಿನ ಜಶ್ವಂತ್ ಬೋಪಣ್ಣ ಕೂಡ ಭಾಗಿಯಾಗಿದ್ದರು. ಜಶ್ವಂತ್ ಈ ಶೋನಲ್ಲಿ ರನರ್ ಅಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಎಂಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ

    ಕೆಎಂಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ

    ಬೆಳಗಾವಿ: ಕೆಎಂಎಫ್ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯವಾಗಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಾಲಿನ ಪ್ಯಾಕೆಟ್ ಮುದ್ರಣ ಮಾಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.

    ಕಳೆದ ಕೆಲ ದಿನಗಳಿಂದ ಕೆಎಂಎಫ್ ಸರಬರಾಜು ಮಾಡುವ ಹಾಲಿನ ಪ್ಯಾಕೆಟ್ ಮೇಲೆ ಕನ್ನಡದಲ್ಲಿ ಬರೆಯಲಾಗಿದ್ದ ಅಕ್ಷರಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ಕೆಎಂಎಫ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ನಂದಿನಿ ಪ್ರೊಡೆಕ್ಟ್ ಕರ್ನಾಟಕದ್ದೋ, ಅಲ್ವೋ ಎಂದು ಪ್ರಶ್ನೆ ಮಾಡಿರುವ ಕನ್ನಡಿಗರು ಕೆಎಂಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರನ್ನ ಮದುವೆಯಾದ್ರೆ SSK ಸಮಾಜದಿಂದ ಬಹಿಷ್ಕರಿಸಿ: ನಾಗೇಶ್‌

    ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಹಾಲಿನ ಪ್ಯಾಕೆಟ್ ಮುದ್ರಣವನ್ನು ತಕ್ಷಣ ನಿಲ್ಲಿಸಿ ಕನ್ನಡ ಭಾಷೆಯಲ್ಲಿ ಮುದ್ರಣ ಮಾಡುವಂತೆ ಆಗ್ರಹಿಸಿದ್ದಾರೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಂದರೆ ಹಳೆಯ ಪಾಕೆಟ್ ಮೇಲೆ ಈ ಮೊದಲು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿಯೇ ನಂದಿನ ಮುದ್ರಣವಾಗಿತ್ತು. ಆದರೀಗ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗಿರುವುದರಿಂದ ನಾಡಿನ ಜನರಿಗೆ ಆಕ್ರೋಶ ತರಿಸಿದೆ. ಇದನ್ನೂ ಓದಿ: ಬಿಜೆಪಿಯಲ್ಲೇ ಆರಗ ಜ್ಞಾನೇಂದ್ರ ವಿರುದ್ಧ ಅಪಸ್ವರ- ಬದಲಾಗುತ್ತಾ ಸಚಿವರ ಖಾತೆ..?

  • ನೀರು ಮಿಶ್ರಿತ ಹಾಲು ಕೇಸ್  – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಮಂಡ್ಯ: ಮನ್‍ಮುಲ್‍ಗೆ ಪೂರೈಕೆ ಆಗುತ್ತಿದ್ದ ನೀರು ಮಿಶ್ರಿತ ಹಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‍ಮುಲ್‍ನ ಎಂಡಿಯನ್ನು ವರ್ಗಾವಣೆ ಮಾಡಿ ಏಳು ಮಂದಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

    ಮಂಡ್ಯದ ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲನ್ನು ಹಲವು ತಿಂಗಳಿನಿಂದ ಸರಬರಾಜು ಆಗುತ್ತಿತ್ತು. ಈ ಬಗ್ಗೆ ಮನ್‍ಮುಲ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಹಲವು ದಿನಳ ತನಿಖೆ ಬಳಿಕ ಈ ಜಾಲವನ್ನು ಭೇದಿಸಿ ಪೊಲೀಸರಿಗೂ ದೂರು ನೀಡಿದ್ದರು. ಈ ನಡುವೆ ಕೆಎಂಎಫ್ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದರು. ಇದನ್ನೂ ಓದಿ: ನೀನು ಎಲ್ಲಿದ್ದರೂ ನಿನ್ನ ನಗು ಜೀವಂತ ಚಿರು ಮಗನೆ: ಅರ್ಜುನ್ ಸರ್ಜಾ ಭಾವುಕ

    ಮನ್‍ಮುಲ್‍ನಲ್ಲಿ ನಡೆದಿರುವ ಈ ಹಗರಣಕ್ಕೆ ಅಧಿಕಾರಿಗಳೇ ಕಾರಣ ಎಂದು ಕೆಎಂಎಫ್ ವರದಿ ನೀಡಿ, ಏಳು ಮಂದಿಯನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ ಮನ್‍ಮುಲ್‍ನ ಮದ್ದೂರಿನ ಉಪಕಚೇರಿ ವ್ಯವಸ್ಥಾಪಕ ಮರಿರಾಚಯ್ಯ, ಭರತ್‍ರಾಜ್, ರಾಮಕೃಷ್ಣಯ್ಯ, ವಿಸ್ತಾರಣಾಧಿಕಾರಿಗಳಾದ ಮಧುಕುಮಾರ್, ರಮೇಶ್, ಟ್ರಾನ್ಸ್ ಪೋರ್ಟ್ ವಿಭಾಗದ ಡಾ.ವೆಂಕಟೇಶ್ ಅವರುಗಳನ್ನು ಅಮಾನತು ಮಾಡಲಾಗಿದೆ.

    ಮನ್‍ಮುಲ್‍ನ ಎಂಡಿಯನ್ನು ಸಹ ವರ್ಗಾವಣೆ ಮಾಡಿ ಮೈಸೂರಿನ ಮೈಮುಲ್‍ನ ಎಂಡಿ ಆಗಿದ್ದ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.

  • ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

    ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

    – ಒಬ್ಬರ ಕಥೆಯಲ್ಲಿ, ಹಲವು ರೈತರಿಗೆ ಅನ್ಯಾಯ
    – ಗ್ರಾಮದ ಬೇರೆ ರೈತರಿಂದ ಹಾಲು ಖರೀದಿ

    ಚಿಕ್ಕಮಗಳೂರು:“ನೀವು ನಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲ್ಲ. ಹಾಗಾಗಿ, ಸದ್ಯಕ್ಕೆ ನಿಮ್ಮ ಹಾಲು ಬೇಡ” ಎಂದು ರೈತರಿಂದ ಡೈರಿ ಸಿಬ್ಬಂದಿ ಹಾಲು ಹಾಕಿಸಿಕೊಳ್ಳದ ಹಿನ್ನೆಲೆಯಲ್ಲಿ ರೈತ ಪ್ರತಿದಿನ ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾನೆ.

    ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ರೈತ ತಿರುಮಲೇಶ್ ಕಳೆದ ಆರು ವರ್ಷಗಳಿಂದ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 2016ರಿಂದಲೂ ತೇಗೂರು ಗ್ರಾಮದಲ್ಲಿರುವ ಡೈರಿಗೆ ಹಾಲು ಹಾಕುತ್ತಿದ್ದಾರೆ. ಆದರೆ, ಕಳೆದೊಂದು ತಿಂಗಳಿಂದ ಡೈರಿಯವರು ತಿರುಮಲೇಶ್ ಅವರ ಹಾಲನ್ನ ಹಾಕಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ, ನೀವು ನಮ್ಮ ಡೈರಿಯಲ್ಲಿ ಹಸುವಿಗೆ ಫೀಡ್ಸ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಸದ್ಯಕ್ಕೆ ಹಾಲು ಬೇಡ. ಬೇಕಾದಾಗ ಫೋನ್  ಮಾಡುತ್ತೇವೆ ತಂದು ಹಾಕಿ ಎಂದು ಹೇಳಿದ್ದಾರೆ. ಇದರಿಂದ ರೈತ ತಿರುಮಲೇಶ್ ಕಂಗಾಲಾಗಿದ್ದಾರೆ.

    ಮೊದಲೇ ಕಳೆದೊಂದು ವರ್ಷದಿಂದ ರೈತ ಸಮುದಾಯ ಕೊರೋನಾದ ಅಬ್ಬರದಲ್ಲಿ ಸಂಕಷ್ಟಕ್ಕೀಡಾಗಿದೆ. ಹೀಗಿರುವಾಗ ಡೈರಿ ಸಿಬ್ಬಂದಿ ತಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲಿಲ್ಲ ಎಂದು ಹಾಲನ್ನ ಹಾಕಿಸಿಕೊಳ್ಳದಿರುವುದರಿಂದ ರೈತ ತಿರುಮಲೇಶ್ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಕೂಲಿ ಇಲ್ಲ. ಮತ್ತೊಂದೆಡೆ ಡೈರಿಯಲ್ಲಿ ಹಾಲು ಖರೀದಿಸಲ್ಲ. ಇತ್ತ ಹೊಲದಲ್ಲಿ ಜೋಳವೂ ಇಲ್ಲ. ಅತ್ತ ಬಣವೆಯಲ್ಲಿ ಹುಲ್ಲೂ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲದಂತಾಗಿದ್ದು ರೈತ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನ್ನದಾತನ ಜೊತೆ ರೈತನ ಬೆನ್ನೆಲುಬು ಎಂದು ಕರೆಸಿಕೊಳ್ಳೋ ರಾಸುಗಳು ಕೂಡ ಉಪವಾಸದ ಸ್ಥಿತಿ ನಿರ್ಮಾಣವಾಗಿದೆ.

    ತೇಗೂರು ಗ್ರಾಮದ ಡೈರಿಯಲ್ಲಿ ಫೀಡ್ಸ್ ತಂದರೆ ಹಸು ತಿನ್ನಲ್ಲ. ಅದಕ್ಕೆ ತಿರುಮಲೇಶ್ ಬೇರೆಡೆಯಿಂದ ಫೀಡ್ಸ್ ತಂದು ರಾಸುಗಳಿಗೆ ಕೊಡುತ್ತಾರೆ. ಆದರೆ, ತೇಗೂರಿನ ಡೈರಿಯವರು ಲಾಕ್‍ಡೌನ್ ಇದೆ. ಹೋಟೆಲ್‍ಗಳೂ ಕೂಡ ಬಂದ್ ಆಗಿದೆ. ಹಾಲನ್ನ ಯಾರೂ ಖರೀದಿಸಲ್ಲ. ಬೇಕಾದಾಗ ಫೋನ್ ಮಾಡುತ್ತೇವೆ ಆಗ ತೆಗೆದುಕೊಂಡು ಬನ್ನಿ ಎಂದಿದ್ದಾರೆ.

    ಈ ಡೈರಿ ಇರೋದೆ ತೇಗೂರು, ಗವನಹಳ್ಳಿ ಹಾಗೂ ನಲ್ಲೂರು ಗ್ರಾಮದ ರೈತರಿಗಾಗಿ. ಆದರೆ, ಎಂಟತ್ತು ಕಿ.ಮೀ. ದೂರದ ಹಾಗೂ ಈ ಡೈರಿಗೆ ಸಂಬಂಧವೇ ಇಲ್ಲದ ಊರುಗಳ ಹಾಲನ್ನೂ ಖರೀದಿ ಮಾಡುವ ಡೈರಿ ಸಿಬ್ಬಂದಿ ಈ ರೈತನ ಹಾಲನ್ನ ಮಾತ್ರ ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ನಮ್ಮ ಡೈರಿಯಲ್ಲೇ ಫೀಡ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಅವರ ಹಾಲನ್ನ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ನಿಮ್ಮ ಹಾಲು ಬೇಡ ಎಂದಿದ್ದಾರೆ. ಬೇರೆ ದಾರಿ ಇಲ್ಲದ ಈ ಹೈನುಗಾರ ಬೆಳಗ್ಗೆ-ಸಂಜೆ ಸುಮಾರು ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾರೆ. ಇದು ಇವರೊಬ್ಬರ ಸಮಸ್ಯೆಯಲ್ಲ.  ಈ ರೀತಿ ಹಲವು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

    ತೇಗೂರಿನ ಡೈರಿಯಲ್ಲಿ ಯಾರು ಫೀಡ್ಸ್ ತೆಗೆದುಕೊಳ್ಳುತ್ತಾರೆ ಅವರ ಹಾಲನ್ನು ತೆಗೆದುಕೊಳ್ಳುತ್ತಾರೆ. ಯಾರೂ ಖರೀದಿಸಲ್ಲ ಅವರ ಹಾಲು ಇವರಿಗೆ ಭಾರವಾಗುತ್ತೆ. ಡೈರಿಯವರ ಈ ನಡೆಯಿಂದ ತೇಗೂರು, ಗವನಹಳ್ಳಿ, ನಲ್ಲೂರಿನ ಹಲವು ರೈತರು ಕಂಗಾಲಾಗಿದ್ದಾರೆ. ಈಗ ಕೂಲಿ ಇಲ್ಲ. ಹಾಲು ತೆಗೆದುಕೊಳ್ಳುತ್ತಿಲ್ಲ. ಮಳೆ ಇಲ್ಲದೆ ಹೊಲಗದ್ದೆಗಳಲ್ಲಿ ಜೋಳವೂ ಇಲ್ಲ. ಬಣವೆ ಹುಲ್ಲೂ ಖಾಲಿಯಾಗಿದೆ. ಖಾಸಗಿಯಾಗಿ ಹುಲ್ಲು ಖರೀದಿಸಲು ಒಂದು ಹೊರೆಗೆ 150-200 ರೂಪಾಯಿ ಹಣ ಕೊಡಬೇಕು. ಹುಸುಗಳನ್ನ ತಂದ ಲೋನ್ ಕಟ್ಟಬೇಕು. ದಾರಿ ಕಾಣದೆ ಹೈನುಗಾರರು ತಲೆಮೇಲೆ ಕೈಹೊದ್ದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕೂಡಲೇ ಡೈರಿಯವರು ಎಲ್ಲಾ ರೈತರ ಹಾಲನ್ನ ಖರೀದಿಸಿ ರಾಸುಗಳ ಜೊತೆ ನಮ್ಮ ಹೊಟ್ಟೆಯನ್ನೂ ತುಂಬಿಸಬೇಕೆಂದು ಮನವಿ ಮಾಡಿದ್ದಾರೆ. ಡೈರಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಹಾಲು ಹಾಕಿಸಿಕೊಳ್ಳುವ ಡೈರಿ ಸಿಬ್ಬಂದಿ ಕೂಡ ವ್ಯವಹಾರ ಬಿಟ್ಟು ರೈತರ ಕಷ್ಟವನ್ನು ಅರಿಯಬೇಕಿದೆ.

  • ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

    ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ.

    ಹೌದು..ಯಶ್ ಸಹೋದರಿ ನಂದಿನಿ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ಅಲ್ಲದೇ ಯಶ್ ಮತ್ತೊಮ್ಮೆ ಮಾವ ಆಗಿದ್ದಾರೆ.

    ಯಶ್ ಸಹೋದರಿ ನಂದಿನಿ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಎರಡನೇ ಮಗುವಿಗೆ ತಾಯಿಯಾಗಿದ್ದೀನಿ. ಎರಡನೇ ಮಗು ಕೂಡ ಗಂಡು ಮಗು” ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಮುದ್ದಾದ ಮಗುವಿನ ಪಾದಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ.

    ಯಶ್ ಸಹೋದರಿ ನಂದಿನಿ ಉದ್ಯಮಿಯೊಬ್ಬರ ಜೊತೆ ಮದುವೆಯಾಗಿದ್ದು, ಇವರ ವಿವಾಹವಾಗಿ 8 ವರ್ಷ ಕಳೆದಿದೆ. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದೆ. ಇತ್ತೀಚಿಗಷ್ಟೆ ಅಂದರೆ ಏಪ್ರಿಲ್ ತಿಂಗಳಲ್ಲಿ ನಂದಿನಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಯಶ್ ಮನೆಗೆ ಮತ್ತೊಂದು ಮಗು ಆಗಮಿಸಿದ್ದಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    https://www.instagram.com/p/CC3BDQdHvns/?utm_source=ig_embed

    ನಟ ಯಶ್‍ಗೆ ಸಹೋದರಿ ಎಂದರೆ ತುಂಬಾ ಪ್ರೀತಿ. ನಂದಿನಿ ಅವರು ಕೂಡ ಪ್ರತಿವರ್ಷ ರಕ್ಷಾಬಂಧನ ದಿನ ಪ್ರೀತಿಯ ಅಣ್ಣನಿಗೆ ರಾಕಿ ಕಟ್ಟುತ್ತಾರೆ. ಆ ಫೋಟೋಗಳನ್ನು ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

    ಈಗಾಗಲೇ ಯಶ್ ಮತ್ತು ರಾಧಿಕಾ ದಂಪತಿಗೆ 2018 ಡಿಸೆಂಬರ್‌ನಲ್ಲಿ ಐರಾ ಯಶ್ ಜನಿಸಿದ್ದಳು. ಒಂದು ವರ್ಷದೊಳಗೆ ಅಂದರೆ 2019 ಅಕ್ಟೋಬರ್‌ನಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯಕ್ಕೆ ಎರಡು ಮಕ್ಕಳ ಲಾಲನೆ-ಪಾಲನೆಯಲ್ಲಿ ರಾಕಿಂಗ್ ದಂಪತಿ ಬ್ಯುಸಿಯಾಗಿದ್ದಾರೆ.

  • ಕಾಫಿ ಡೇ ಮಾದರಿಯಲ್ಲಿ ನಂದಿನಿ ಕೆಫೆ- ಮಾರುಕಟ್ಟೆಗೆ ಬರಲಿದೆ ನಂದಿನಿ ಚಾಕ್ಲೇಟ್

    ಕಾಫಿ ಡೇ ಮಾದರಿಯಲ್ಲಿ ನಂದಿನಿ ಕೆಫೆ- ಮಾರುಕಟ್ಟೆಗೆ ಬರಲಿದೆ ನಂದಿನಿ ಚಾಕ್ಲೇಟ್

    ಬೆಂಗಳೂರು: ತನ್ನದೇ ಆದ ಬ್ರ್ಯಾಂಡ್ ಮೌಲ್ಯ ಹೊಂದಿರುವ ಕೆಎಂಎಫ್ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ. ಕಾಫಿ ಡೇ ಮಾದರಿಯಲ್ಲಿ ನಂದಿನಿ ಔಟ್‍ಲೆಟ್ ತೆರೆಯಲು ತೀರ್ಮಾನಿಸಿದೆ. ಈ ಕುರಿತಂತೆ ಕೆಎಂಎಫ್ ಆಡಳಿತ ಮಂಡಳಿ ಈಗಾಗಲೇ ಯೋಜನೆಯ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ರಾಜ್ಯಾದ್ಯಂತ ಕೆಎಂಎಫ್ ಮಾದರಿಯ ನಂದಿನಿ ಔಟ್‍ಲೆಟ್ ತೆರೆಯಲು ನಿರ್ಧರಿಸಿದೆ.

    ಅಂದಹಾಗೆ ಸಾಮಾನ್ಯ ವರ್ಗದಿಂದ ಹಿಡಿದು ಎಲ್ಲ ವರ್ಗದವರಿಗೂ ಕೆಎಂಎಫ್ ಉತ್ಪನ್ನಗಳು ಲಭ್ಯವಾಗುವಂತೆ ಕಾಫಿ ಡೇ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ನಂದಿನಿ ಕೆಫೆ` ತೆರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರಿನ ಜಯ ನಗರದಲ್ಲಿ ನಂದಿನಿ ಕೆಫೆ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ಕನಿಷ್ಠ 25ರಿಂದ 30 ನಂದಿನಿ ಕೆಫೆಗಳನ್ನು ತೆರೆಯಲು ಕೆಎಂಎಫ್ ನಿರ್ಧರಿಸಿದೆ. ಇದರೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

    ಈಗ ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ಕೆಎಂಎಫ್ ನಂದಿನಿ ಹಾಲು ಮಾರಾಟ ಕೇಂದ್ರಗಳಿವೆ. ಮುಂದಿನ ಐದು ವರ್ಷದಲ್ಲಿ ಎಲ್ಲ ಕೇಂದ್ರಗಳನ್ನು ಕಾಫಿ ಡೇ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ನಂದಿನಿ ಉತ್ಪನ್ನ ಮಾರಾಟ ಮಾಡುವ ಸಿಬ್ಬಂದಿಗೂ ಆಕರ್ಷಣೀಯ ಯೂನಿಫಾರ್ಮ್, ಕಾಫಿ ಡೇ ಮಾದರಿಯಲ್ಲಿ ಅಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ಏರ್ ಪೋರ್ಟ್ ಗಳು, ಮಾಲ್‍ಗಳಲ್ಲಿ ನಂದಿನಿ ಕೆಫೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

    ರಾಜ್ಯದಲ್ಲಿ ಸದ್ಯ ಪ್ರತಿ ದಿನ 70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಉತ್ಪನ್ನಗಳಿಂದ ಪ್ರತಿ ವರ್ಷ ಸುಮಾರು 15 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ಆದರೆ ಉತ್ತಮ ಗುಣಮಟ್ಟ ಹಾಗೂ ಆರೋಗ್ಯಯುತ ಉತ್ಪನ್ನಗಳನ್ನು ತಯಾರಿಸಿದರೂ, ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗದ ಕಾರಣ ನಂದಿನಿ ಉತ್ಪನ್ನಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಸೃಷ್ಠಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೊಸ ಮಾದರಿಯಲ್ಲಿ ಬ್ರ್ಯಾಂಡ್ ಸೃಷ್ಠಿಸಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಕೆಎಂಎಫ್ ಆಡಳಿತ ಮಂಡಳಿ ನಿರ್ಧರಿಸಿದ್ದು, ಆ ಮೂಲಕ ಮುಂದಿನ ಐದು ವರ್ಷದಲ್ಲಿ ಮಂಡಳಿಯ ವಾರ್ಷಿಕ ವಹಿವಾಟು ಸುಮಾರು 35 ಸಾವಿರ ಕೋಟಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.