Tag: Nandini

  • ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಆದ್ರೆ ಅಮುಲ್ ಭಾರತದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಇವರಿಗೇನು ತೊಂದರೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಿಡಿ ಕಾರಿದ್ದಾರೆ.

    ನಂದಿನಿ-ಅಮುಲ್ (Nandini-Amul) ಜಟಾಪಟಿ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಅಮುಲ್ ಭಾರತದ ಬ್ರ್ಯಾಂಡ್, ಇಲ್ಲೇ ಮಾರಾಟ ಮಾಡಿದ್ರೆ ಇವರಿಗೇನು ತೊಂದರೆ. ಇದೆಂಥ ಸೋತವರ ಗುಂಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಟ್ವೀಟ್ ಮೂಲಕವೂ ಆಕ್ಷೇಪ ವ್ಯಕ್ತಪಡಿಸಿರುವ ಸಿ.ಟಿ ರವಿ, ಕಾಂಗ್ರೆಸ್ ನಮ್ಮ ತಾಯಂದಿರು ಹಾಗೂ ಅಕ್ಕಂದಿರನ್ನು ಕೇವಲ ಸಗಣಿ ಬಾಚಲು ಬಿಟ್ಟಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟು ಗ್ರಾಮೀಣ ಕುಟುಂಬಗಳ ಬದುಕನ್ನು ಸಮೃದ್ಧಿಗೊಳಿಸಿತು. ನಂದಿನಿ ಈಗಾಗಲೇ 12 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದು, ಇನ್ನೂ ಹೆಚ್ಚು ರಾಜ್ಯಗಳಲ್ಲಿ ಉತ್ಪನ್ನಗಳನ್ನ ಮಾರಾಟ ಮಾಡಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಏನಿದು ವಿವಾದ?
    ಅಮುಲ್ ಕುಟುಂಬ ಬೆಂಗಳೂರು (Bengaluru) ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.

    ಅಮುಲ್ ಪರ ವಾದವೇನು?
    ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ.

  • ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟ ನಾವೂ ಮಾಡಿದ್ದೇವೆ; ಇದ್ರಲ್ಲಿ ರಾಜಕಾರಣ ಸಲ್ಲದು: ಬೊಮ್ಮಾಯಿ

    ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟ ನಾವೂ ಮಾಡಿದ್ದೇವೆ; ಇದ್ರಲ್ಲಿ ರಾಜಕಾರಣ ಸಲ್ಲದು: ಬೊಮ್ಮಾಯಿ

    ನವದೆಹಲಿ: ನಂದಿನಿ (Nandini) ನಂಬರ್ ಒನ್ ಬ್ರ‍್ಯಾಂಡ್ ಆಗಲಿದ್ದು, ಅಮುಲ್ (Amul) ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡಾ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಅಭ್ಯರ್ಥಿಗಳ ಬಗ್ಗೆ ಚರ್ಚೆ: ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳ ವಿಚಾರ ಚರ್ಚೆ ಮಾಡಲಾಗುವುದು. ಭಾನುವಾರ ಸಂಜೆ 5 ಗಂಟೆಗೆ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.

    ಸಭೆಯಲ್ಲಿ ನಿರ್ಧಾರ: ಕೆಲ ಎಂಎಲ್‌ಸಿ ಮತ್ತು ಸಂಸದರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಎಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು.

    ನಮ್ಮ ಶಕ್ತಿ ಮೇಲೆ ನಂಬಿಕೆ ಇದೆ: ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯ ಗೊಂದಲದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇದೆ. ಸಹಜವಾಗಿಯೇ ಅದರ ಲಾಭ ಆಗಲಿದೆ ಎಂದರು. ಇದನ್ನೂ ಓದಿ: ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ- ಕಾಂತಾದೇವಿ ಛೋಪ್ರಾ ಕಣ್ಣೀರು

    ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ: ನಟ ಸುದೀಪ್ ಬಿಜೆಪಿ ಬೆಂಬಲ ನೀಡುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ ನಟರನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿದ್ದಾರೆ. ಅಂಬರೀಶ್ ಪ್ರಚಾರ ಮಾಡಲಿಲ್ಲವೇ? ಶಾಸಕರಾಗಿರಲಿಲ್ಲವೇ? ಎಂದು ಪ್ರಶ್ನಿಸಿದರು. ಬಿಜೆಪಿಗೆ ಬೆಂಬಲ ನೀಡುವ ಮುಂಚೆ ಅದರಿಂದಾಗುವ ಎಲ್ಲಾ ಪರಿಣಾಮದ ಬಗ್ಗೆ ಮಾಹಿತಿ ಇದೆ. ಸುದೀಪ್ ಅವರು ನಮಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ ಎಂದು ಟಾಂಗ್ ನೀಡಿದರು.

    ಹಾಲಿ ಶಾಸಕರಿಗೆ ಟಿಕೆಟ್: ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಆ ತರಹದ ಲೆಕ್ಕಾಚಾರ ಚರ್ಚೆಯಲ್ಲಿ ಮಾಡಿದಾಗಲೇ ತಿಳಿಯುವುದು ಎಂದು ಹೇಳಿದರು. ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಸಾವಿರ ಅಂತರದಿಂದ ಕೊನೆಗೆ ಲಕ್ಷ ಮತ ಪಡೆದ ರೋಚಕ ಕಥೆ!

  • ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

    ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

    – ಆರೋಗ್ಯಕರ ಸ್ಪರ್ಧೆಗೆ ಅಮುಲ್‌ ಬಂದರೆ ಸಮಸ್ಯೆ ಏನು?
    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಗುಜರಾತ್‌ನ ಅಮುಲ್‌  ಸಂಸ್ಥೆ ಬೆಂಗಳೂರಿನಲ್ಲಿ ಹಾಲಿನ ವ್ಯವಹಾರಕ್ಕೆ ಇಳಿದಿರುವುದರ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

    ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಅಮುಲ್‌ ಪರ ಕೆಲವರು ಬ್ಯಾಟಿಂಗ್‌ ಮಾಡಿದ್ದು ಅಮುಲ್‌ ವ್ಯವಹಾರದಂತೆ ನಂದಿನಿ ಯಾಕೆ ಆನ್‌ಲೈನ್‌ ಮೂಲಕ ಹಾಲನ್ನು ವಿತರಣೆ ಮಾಡಬಾರದು. ಆರೋಗ್ಯಕರ ಸ್ಪರ್ಧೆ ಇದ್ದರೆ ಸಮಸ್ಯೆ ಏನು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

    ಏನಿದು ವಿವಾದ?
    ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್‌ ಕನ್ನಡ ಏಪ್ರಿಲ್‌ 5 ರಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್‌ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದೇನು?
    ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ.

    ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ?


    ನಮ್ಮ ಸರ್ಕಾರವು ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿತ್ತು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣವೇನು? ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸಬೇಕು.

    ಅಮುಲ್‌ ಪರ ವಾದವೇನು?
    ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್‌ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ  ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಯಾವುದೇ ಸಂಸ್ಥೆಯದರೂ ಸರಿಯಾದ ಸ್ಪರ್ಧೆ ಇಲ್ಲದೇ ಇದ್ದರೆ ಗುಣಮಟ್ಟದ ಉತ್ಪನ್ನ ನೀಡಲು ಸಾಧ್ಯವಿಲ್ಲ. ಕೆಎಂಎಫ್‌ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತದೆ. ರಾಜಕೀಯ ಪಕ್ಷಗಳ ಮುಖಂಡರೇ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ. ಮುಖ್ಯವಾಗಿ ವಿಚಾರದ ಬಗ್ಗೆ ನಾವು ಚರ್ಚೆಯೇ ಮಾಡುವುದಿಲ್ಲ. ಮಂಡ್ಯದಲ್ಲಿ ನೀರು ಮಿಶ್ರಿತ ಹಾಲು ವಿತರಣೆ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿದೆ. ಹೀಗಾಗಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿ ಗುಣಮಟ್ಟದ ಹಾಲನ್ನು ಕೆಎಂಎಫ್‌ ನೀಡಬೇಕು. ಸ್ಪರ್ಧೆ ಇದ್ದಷ್ಟು ಗುಣಮಟ್ಟ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಲಾಭ ರೈತರಿಗೆ ಮತ್ತು ಗ್ರಾಹಕರಿಗೆ ಆಗುತ್ತದೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಕರ್ನಾಟಕ ಚುನಾವಣೆಯ ಸಮಯದಲ್ಲಿ ಅಮುಲ್‌ ಆನ್‌ಲೈನಿನಲ್ಲಿ ಹಾಲನ್ನು ಮಾರಾಟ ಮಾಡಲು ಮುಂದಾಗಿರುವುದು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ.

  • ಅಮುಲ್ ಜೊತೆ ಕೆಎಂಎಫ್‌ ವಿಲೀನ ಇಲ್ಲ: ಸಿಎಂ  ಬೊಮ್ಮಾಯಿ

    ಅಮುಲ್ ಜೊತೆ ಕೆಎಂಎಫ್‌ ವಿಲೀನ ಇಲ್ಲ: ಸಿಎಂ ಬೊಮ್ಮಾಯಿ

    ಬೆಂಗಳೂರು: ಗುಜರಾತ್‌ನ ಅಮುಲ್(Amul) ಜೊತೆ ಕೆಎಂಎಫ್‌(KMF) ವಿಲೀನ ಮಾಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

    ಗೃಹ ಸಚಿವ ಅಮಿತ್‌ ಶಾ(Amit Shah) ಹೇಳಿಕೆ ಸಂಬಂಧ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಆಗಿ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅಮುಲ್ ಕೆಎಂಎಫ್‌ ವಿಲೀನ ಮಾಡುವುದಿಲ್ಲ. ಅಮಿತ್ ಶಾ ತಮ್ಮ ಭಾಷಣದಲ್ಲಿ ವಿಲೀನ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: `ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತೆ HDK ಎಚ್ಚರಿಕೆ

    ಯಾರಿಗೂ ತಪ್ಪು ಕಲ್ಪನೆ ‌ಬೇಡ. ಮುಂದೆ 100 ವರ್ಷವಾದರೂ ಕೆಎಂಎಫ್‌ ಹಾಗೆಯೇ ಇರುತ್ತದೆ. ಊಹೆ ಮಾಡಿ ಟೀಕೆ ಮಾಡುವವರಿಗೆ ಏನು ಹೇಳುವುದು? ಒಬ್ಬರಿಗೊಬ್ಬರು ತಾಂತ್ರಿಕ ಸಹಾಯದಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಯಾರಿಗೂ ತಪ್ಪು ತಿಳುವಳಿಕೆ ಬೇಡ ಎಂದು ತಿಳಿಸಿದರು.

    ಕೆಲ ಭಾಗದಲ್ಲಿ ತಾಂತ್ರಿಕ, ಆಡಳಿತ ವಿಚಾರಗಳನ್ನು ಹಂಚಿಕೊಂಡು ಕೆಲಸ ಮಾಡಬೇಕು ಎಂದು ಅಮಿತ್‌ ಶಾ ಹೇಳಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿಎಂ ಹೇಳಿದರು.

    ಶಾ ಹೇಳಿದ್ದೇನು?
    ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಮಿಲ್ಕ್ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್ ಶಾ, ಗುಜರಾತ್‌ನ `ಅಮುಲ್’ ಜತೆ ಕರ್ನಾಟಕದ `ನಂದಿನಿ’ಯನ್ನು ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

    ಗುಜರಾತ್‌ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975 ರಿಂದಲೂ ಕೆಎಂಎಫ್ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮೂಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಪ್ರಾಥಮಿಕ ಡೈರಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪನೆ ಮಾಡಲಾಗುವುದು. ಆ ಮೂಲಕ ಹಾಲಿನ ಉತ್ಪನ್ನಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ

    ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ

    ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ(Nandini) ಹಾಲು ಮತ್ತು ಮೊಸರಿನ(Milk and Curd) ದರ 3 ರೂ. ಏರಿಕೆಯಾಗಲಿದೆ

    ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲಾನ್ ಮಾಡಲಾಗಿದೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!


    ಬೆಲೆ ಏರಿಕೆಗೆ ಕಾರಣ?
    ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ , ವಿದ್ಯುತ್ , ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಾಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ಬಿಗ್ ಬಾಸ್ ಮನೆಯಲ್ಲಿ ಟಫ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ನಂದಿನಿ ಈ‌ ವಾರ ಬಿಗ್ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ದೊಡ್ಮನೆಯಲ್ಲಿ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗಿರುವ ಸ್ಪರ್ಧಿ ನಂದಿನಿ ಎಲಿಮಿನೇಟ್ ಆಗಿದ್ದಾರೆ.

    ಹಿಂದಿ ರಿಯಾಲಿಟಿ ಶೋ ‘ರೋಡೀಸ್’ ಶೋ ವಿನ್ನರ್ ನಂದಿನಿ ಇದೀಗ ಬಿಗ್ ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್, ಮನರಂಜನೆ, ಹೀಗೆ ಪ್ರತಿಯೊಂದು ವಿಚಾರದಲ್ಲೂ ನಂದಿನಿ ಆಕ್ಟೀವ್ ಆಗಿದ್ದರು. ಇದನ್ನೂ ಓದಿ: ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರವಾಗಿ ಕುಗ್ಗಿದ್ದರು. ದಿನದಿಂದ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಜಟಾಪಟಿ ಕೂಡ ಜೋರಾಗಿತ್ತು.‌ ಇದೀಗ ಪ್ರತಿ ವಾರದ ಎಲಿಮಿನೇಷನ್ ಪದ್ಧತಿಯಂತೆ ಈ ವಾರ, ನಂದಿನಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    Live Tv
    [brid partner=56869869 player=32851 video=960834 autoplay=true]

  • ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ರೂಪೇಶ್ ಬಿಗ್‍ಬಾಸ್(BiggBoss) ಮನೆಗೆ ಬಂದಾಗ ಹೆಚ್ಚು ಕ್ಲೋಸ್ ಆಗಿದ್ದು ಸಾನ್ಯಾ(Sanya). ಆದರೆ ರೂಪೇಶ್ ಹೆಸರು ಬಂದಾಗಲೆಲ್ಲಾ ಸಾನ್ಯಾ ಹೆಸರು ತಳುಕಿ ಹಾಕಿಕೊಳ್ಳುತ್ತಿರುವುದು ರೂಪೇಶ್ ಗೆ ಇಷ್ಟವಿಲ್ಲ. ಅದಕ್ಕಾಗಿಯೇ ಸಾಕಷ್ಟು ಬಾರಿ ಸಾಕಷ್ಟು ಸದಸ್ಯರಿಗೆ ರೂಪೇಶ್ ಆ ಬಗ್ಗೆ ಸಮರ್ಥನೆ ಕೊಡುವುದಕ್ಕೆ ಟ್ರೈ ಮಾಡಿದ್ದಾರೆ. ಆದರೆ ಒಂದಷ್ಟು ದಿನ ತಣ್ಣಗಾಗಿದ್ದ ಸಾನ್ಯಾ ಆ್ಯಂಡ್ ರೂಪೇಶ್(Rupesh) ಎಂಬ ಹೆಸರು ಈಗ ಮತ್ತೆ ಮತ್ತೆ ಓಡಾಡುತ್ತಿದೆ. ರೂಪೇಶ್ ಯಾರು ಏನೇ ಹೇಳಲಿ ಸಆನ್ಯಾ ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ ಎಂದು ಹೇಳಿದ್ದಾರೆ. ಈ ಮಧ್ಯೆ ಮಂಗಳೂರಿನಿಂದ ಬಂದ ವೀಡಿಯೋ ಮೆಸೇಜ್ ಒಂದು ರೂಪೇಶ್ ತನ್ನ ಇಮೇಜ್ ಬಗ್ಗೆ ಚಿಂತೆ ಮಾಡುವಂತೆ ಮಾಡಿಟ್ಟಿದೆ.

    ರೂಪೇಶ್‍ಗೆ ಗರ್ಲ್ ಫ್ರೆಂಡ್ ಇಲ್ಲ ಅದನ್ನು ರೂಪೇಶ್ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಆ್ಯಂಡ್ ಗರ್ಲ್ ಫ್ರೆಂಡ್ ಜೊತೆ ಹೇಗೆ ಇರಬೇಕು ಎಂಬುದು ಗೊತ್ತಿಲ್ಲ ಎಂಬುದನ್ನು ಇತ್ತೀಚೆಗೆ ಸಾನ್ಯಾ ಬಳಿ ಹಂಚಿಕೊಂಡಿದ್ದರು. ಜೊತೆಗೆ ಗರ್ಲ್ ಫ್ರೆಂಡ್ ಸಿಕ್ಕಿದರೆ ಅವಳಿಗೆ ಹರ್ಟ್ ಆಗುವಂತ ಯಾವ ಕೆಲಸವನ್ನು ಮಾಡುವುದಿಲ್ಲ ಎಂದು ಸಹ ಹೇಳಿಕೊಂಡಿದ್ದರು. ಇದನ್ನು ಕೇಳಿಸಿಕೊಂಡ ಹೆಣ್ಣು ಮಕ್ಕಳು ರೂಪೇಶ್ ಹೊರಗೆ ಬರುತ್ತಿದ್ದಂತೆ ಪ್ರಪೋಸ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿರಬೇಕು. ನಿರ್ದೇಶನ, ಸಿನಿಮಾ ಅಂತ ಯಾವಾಗಲೂ ಬ್ಯುಸಿ ಇರುವ ರೂಪೇಶ್‍ಗೆ ಇಮೇಜ್ ಬಗ್ಗೆ ಸಾಕಷ್ಟು ಕಾಳಜಿ. ಆದರೆ ಮಂಗಳೂರಿನ ಆ ಬೆಡಗಿ ಹೇಳಿದ ಇಮೇಜ್ ಸಾನ್ಯಾನ ಎಂಬುದೇ ರೂಪೇಶ್ ಗೊಂದಲ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ರೂಪೇಶ್ ಮತ್ತು ರಾಕೇಶ್(Rakesh) ನಡುವೆ ಸಖತ್ ಡೀಪ್ ಆಗಿ ಮಾತುಕತೆ ನಡೆಯುತ್ತಿತ್ತು. ಯಾರು ಯಾರಿಗೂ ಮಾತು ನಿಲ್ಲಿಸುವ ರೀತಿ ಕಾಣಲೇ ಇಲ್ಲ. ಸಮರ್ಥನೆಗಳು ಹೆಚ್ಚಾಗುತ್ತಿದ್ದಂತೆ ಬಿಗ್‍ಬಾಸ್ ಕಡೆಯಿಂದ ಎಲ್ಲರೂ ಸೋಫಾ ಮೇಲೆ ಕುಳಿತುಕೊಳ್ಳಲು ಆರ್ಡರ್ ಬಂತು. ಬಿಗ್‍ಬಾಸ್ ಮಾತಿನಂತೆ ಎಲ್ಲರು ಆಸಿನರಾದರೂ. ಬಿಗ್‍ಬಾಸ್ ಆಗಾಗ ಪಬ್ಲಿಕ್ ಬೈಟ್ ಅನ್ನು ಕಳುಹಿಸಿಕೊಡುತ್ತಾರೆ. ಮನೆಯ ಸದಸ್ಯರಲ್ಲಿ ಜನಕ್ಕೆ ಯಾರು ಇಷ್ಟವೋ ಅವರ ಬಗ್ಗೆ, ಅವರ ಆಟದ ಬಗ್ಗೆ ಮಾತನಾಡಿ ಒಂದು ವೀಡಿಯೋ ಕಳುಹಿಸುತ್ತಾರೆ. ಇವತ್ತು ಎರಡು ವೀಡಿಯೋ ಬಂದಿತ್ತು. ಒಂದು ನಂದಿನಿಗೆ ಮತ್ತೊಂದು ರೂಪೇಶ್‍ಗೆ. ಮೊದಲಿಗೆ ಸಂಜೀವಿನಿ ಎಂಬುವವರು ಮಾತನಾಡಿ ನನ್ನ ಫೇವರಿಟ್ ನಂದಿನಿ(Nandini). ನಂದು ಟಾಸ್ಕ್ ಬಿಟ್ಟು ನಿಮಗೆ ಒಂಟಿತನ ಕಾಡುತ್ತಿದೆ. ನೀವೂ ಬೇರೆಯವರ ಜೊತೆಗೆ ಸಮಯ ಕಳೆದರೆ ನಿಮ್ನನ್ನು ನೀವೂ ಮನರಂಜನಾತ್ಮಕವಾಗಿ ಇಟ್ಟುಕೊಳ್ಳಬಹುದು ಎಂದಿದ್ದಾರೆ. ಇಲ್ಲೂ ನನಗೆ ವಿಶ್ ಮಾಡುವವರು ಇದ್ದಾರಾ ಅಂತ ನಂದು ಫುಲ್ ಖುಷಿ ಆಗಿ ಕುಣಿದಾಡಿ ಬಿಟ್ಟರು. ಇದನ್ನೂ ಓದಿ: ‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ನೆಕ್ಸ್ಟ್ ಬಂದಿದ್ದೆ ಸೌಮ್ಯ ಅವರ ಬೈಟ್, ಹಲೋ ನನ್ನ ಹೆಸರು ಸೌಮ್ಯ ಅಂತ. ನಾನು ಮಂಗಳೂರಿನವರು. ಇವತ್ತು ರೂಪೇಶ್ ಜೊತೆಗೆ ಮಾತನಾಡಬೇಕು ಎಂದುಕೊಂಡಿದ್ದೇನೆ. ಚೆನ್ನಾಗಿ ಆಟ ಆಡುತ್ತಿದ್ದೀರಾ. ಆದರೆ ನನ್ನ ಪರ್ಸನಲ್ ಮೆಸೇಜ್ ಏನು ಅಂದರೆ, ಎಲ್ಲೋ ಈ ವೀಕ್ ನಿಮ್ಮ ಇಮೇಜ್ ಮಿಸ್ಸಾಯಿತು ಎನಿಸುತ್ತದೆ. ಫ್ರೆಂಡ್ಶಿಪ್ ಏನಿದೆ ಅದನ್ನು ಹೊರಗಡೆ ಬಂದು ಕೂಡ ನಿಭಾಯಿಸಬಹುದು. ಜಾಸ್ತಿ ಗೇಮ್ ಬಗ್ಗೆ ಗಮನ ನೀಡಿ ಎಂದಿದ್ದಾರೆ. ಇದಾದ ಮೇಲೆ ನಂದಿನಿ ಅಂಡ್ ರೂಪೇಶ್ ಥ್ಯಾಂಕ್ಸ್ ಹೇಳಿದ್ದಾರೆ. ನಾನು ಫ್ರೆಂಡ್ಶಿಪ್ ಅಂತ ಬಂದರೆ ಸದಾ ನಿಂತುಕೊಳ್ಳುತ್ತೇನೆ. ನಿಮಗೆ ಆ ರೀತಿ ಅನ್ನಿಸಿದರೆ ಖಂಡಿತ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಓವರ್ ಲ್ಯಾಪ್ ಆಗದಂತೆ ಟ್ರೈ ಮಾಡುತ್ತೇನೆ ಎಂದಿದ್ದಾರೆ.

    ಮಧ್ಯಾಹ್ನ ಇದೇ ವಿಚಾರವನ್ನು ರೂಪೇಶ್, ಸಾನ್ಯಾ ಬಳಿ ಡಿಸ್ಕಸ್ ಮಾಡುತ್ತಿದ್ದನು. ಏನು ಅವರು ಹೇಳಿದ ವರ್ಡ್ ಎಂದಾಗ ಸಾನ್ಯಾ, ಇಮೇಜ್ ಅಂದರು. ಅದು ರಾಂಗ್ ವರ್ಡ್. ಅವರಿಗೆ ಫ್ರೇಮ್ ಮಾಡುವುದಕ್ಕೆ ಬಂದಿಲ್ಲ ಎಂದಿದ್ದಾಳೆ. ಆದರೆ ರೂಪೇಶ್ ಗೊಂದಲದಲ್ಲಿದ್ದಾರೆ. ಈ ವಾರದ್ದು ಹೇಳಿದ್ದ ಅಥವಾ ಕಳೆದ ವಾರದ್ದು ಹೇಳಿದ್ದ. ಮೇ ಬಿ ಯಾವ ಇಮೇಜ್ ಇದೆ. ಮಂಗಳೂರು ಕಡೆ ನಾನು ಯಾವ ಹುಡುಗಿಯರ ಜೊತೆ ಹೋಗಲ್ಲ ಎಂಬ ಇಮೇಜ್ ಇದೆ. ಹೀಗಾಗಿ ಆ ರೀತಿ ಹೇಳಿರಬಹುದು ಎಂದಾಗ ಸಾನ್ಯಾ ಅದೇನು ಅಂತ ಹೇಳು ಹೇಳು ಎಂದಿದ್ದಾರೆ. ಅದರಿಂದ ಏನು ತಿದ್ದುಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಆ ಇಮೇಜ್ ಬಗ್ಗೆಯೇ ಯೋಚನೆ ಮಾಡುತ್ತಾ ಕೂತಿದ್ದಾರೆ. ಆದರೆ ಸಾನ್ಯಾ ಅವಳ ಬಗ್ಗೆ ಎಂಬುದನ್ನು ಬುದ್ದಿವಂತಿಕೆಯಿಂದ ಹೈಡ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ರೂಪೇಶ್ ಬುದ್ಧಿವಂತ ಎಂಬುದು ಮನೆಯವರಿಗೆ ಈಗಾಗಲೇ ಗೊತ್ತು. ಆದರೆ ರೂಪೇಶ್(Rupesh) ಫ್ರೆಂಡ್ ಲೈಫ್ ಹಳ್ಳ ಹಿಡಿಯುತ್ತಿದ್ದರೆ ಅದನ್ನು ಸರಿ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಒಬ್ಬ ಫ್ರೆಂಡ್ ಎಂದರೆ ಹೀಗೂ ಇರಬೇಕು ಎಂಬ ಮಾದರಿಯಾಗಿದ್ದಾನೆ. ಯಾಕೆಂದ್ರೆ ಬಿಗ್ ಬಾಸ್(Bigg Boss) ಮನೆಯಲ್ಲಿ ನಡೆದದ್ದು, ನಾಲ್ಕು ಜನ ಬೆಸ್ಟ್ ಫ್ರೆಂಡ್ಸ್‍ಗಳ ಮನಸ್ತಾಪ. ಇತ್ತ ಫ್ರೆಂಡ್ಶಿಪ್ ಹಾಳಾಗಬಾರದು, ಸಂಬಂಧವೂ ಕೆಡಬಾರದು, ಒಂದು ಪ್ರೀತಿಯೂ ಬ್ರೇಕಪ್ ಆಗಬಾರದು ಎಂದು ಎಲ್ಲವನ್ನು ತುಂಬಾ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾನೆ ಎಂದೇ ಹೇಳಬಹುದು.

    ಸಾನ್ಯಾ ನಡೆದುಕೊಳ್ಳುತ್ತಿರುವ ರೀತಿ ನಂದಿನಿಗೆ(Nandini) ಖಂಡಿತ ಹರ್ಟ್ ಆಗಿದೆ. ಜೊತೆಗೆ ರೂಪೇಶ್ ಗಮನಕ್ಕೂ ಸಾನ್ಯಾ ಮತ್ತು ಜಶ್ವಂತ್ ತುಂಬಾ ಕ್ಲೋಸ್ ಆಗುತ್ತಿರುವುದು ಬಂದಿದೆ. ಈ ಕಡೆ ಅದನ್ನು ಕಂಡು ನಂದಿನಿ ತುಂಬಾನೆ ಹರ್ಟ್ ಆಗಿದ್ದಾಳೆ. ಡಿಸ್ಟೆನ್ಸ್ ಮೆಂಟೈನ್ ಮಾಡುತ್ತಿದ್ದಾಳೆ. ಇದೆಲ್ಲವನ್ನು ಗಮನಿಸಿದಾಗ ಸಾನ್ಯಾಳನ್ನು ಜಶ್ವಂತ್‍ನಿಂದ(Jashwanth) ದೂರ ಇಡಬೇಕು ಎಂಬುದು ರೂಪೇಶ್‍ಗೆ ಅರಿವಾಗಿದೆ. ಆದರೆ ಹೇಗೆ? ನೇರವಾಗಿ ಹೇಳಿದರೆ ನನ್ನ ಬಗ್ಗೆಯೇ ತಪ್ಪಾಗಿ ತಿಳಿದುಕೊಳ್ತಿಯಾ ಅಂತ ಸಾನ್ಯಾ(Sanya) ಹರ್ಟ್ ಮಾಡಿಕೊಳ್ಳುತ್ತಾಳೆ. ಆದರೆ ರೂಪೇಶ್ ಸಖತ್ ಐಡಿಯಾ ಮಾಡಿದ್ದ. ಸಾನ್ಯಾಳ ಬಳಿ ಬೇಸರವಾದವನಂತೆ ನಟಿಸಿದ. ನಿನ್ನ ನಾನು ಬೆಸ್ಟ್ ಫ್ರೆಂಡ್ ಅಂತ ಹೇಳಿಕೊಂಡಿದ್ದೆ. ಆದರೆ ನೀನು ನನ್ನ ಜೊತೆಗಿಂತ ಹೆಚ್ಚು ಜಶ್ವಂತ್ ಜೊತೆಗೆ ಇರ್ತೀಯಾ. ಆ ಪದಕ್ಕೆ ತೂಕ ಇರುವುದಿಲ್ಲ ಎಂದು ಹರ್ಟ್ ಮಾಡಿಕೊಂಡವನಂತೆ ಮಾಡಿದಾಗ ಸಾನ್ಯಾ ಪ್ರಾಮೀಸ್ ಮಾಡಿದ್ದಳು. ಸರಿ ಇನ್ನು ಮುಂದೆ ಅವನ ಸಂಘ ಸೇರಲ್ಲ ಅಂತ.

    ಆದರೆ ಮತ್ತೆ ಅದೇ ತಪ್ಪು ಮಾಡುತ್ತಿದ್ದಳು. ಇಲ್ಲಿ ರೂಪೇಶ್ ಮತ್ತು ನಂದಿನಿ ಗೇಮ್ ಆಡುವುದಕ್ಕೆ ಶುರು ಮಾಡಿದರು. ಇದು ಜಶ್ವಂತ್‍ಗೆ ಬೇಗ ಅರ್ಥವಾಯಿತು. ನಂದಿನಿ ಒಬ್ಬಳೆ ಬೆಡ್ ಮೇಲೆ ಇದ್ದಾಗ ಮಾತನಾಡುವುದಕ್ಕೆ ಹೋದ. ಆಗಲೂ ನಂದಿನಿ ಆಯ್ತಪ್ಪ ನಾನೇ ಸರಿ ಇಲ್ಲ. ನಂದೆ ತಪ್ಪು ನನ್ನ ಬಿಟ್ ಬಿಡು ಎಂದಳು. ಒಂದು ಹಗ್ ಮಾಡ್ತೀನಿ ಎಂದಾಗಲೂ ಅವಳು ಒಪ್ಪಲೇ ಇಲ್ಲ. ಆಗಲೇ ಜಶ್ವಂತ್‍ಗೆ ಕೊಂಚ ರಿಯಲೈಸ್ ಆಗಿತ್ತು. ಆಮೇಲೆ ಸ್ವಲ್ಪ ರೂಪೇಶ್ ಹಾಗೂ ನಂದಿನಿ ಸೇರಿ ಉರಿಸುವುದಕ್ಕೆ ಮುಂದಾದರು. ಇಲ್ಲಿಗೆ ಜಶ್ವಂತ್ ಕೊಂಚ ಮಟ್ಟಿಗೆ ಸರಿ ಹೋದ. ನಂದಿನಿ ಇದ್ದ ಕಡೆಗೆ ಹೋಗುತ್ತಿದ್ದ, ನಂದಿನಿ ಯಾವ ಜಾಗದಲ್ಲಿ ಇರುವುದಿಲ್ಲವೋ ಅಲ್ಲಿ ಕುಳಿತುಕೊಳ್ಳಲೆ ಇರುತ್ತಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ರಿಚಾ ಚಡ್ಡಾ, ಅಲಿ ಫಜಲ್

    ಆದರೆ ನಂದಿನಿ ಇನ್ನು ಕೂಡ ಸಂಪೂರ್ಣ ಮೊದಲಿನಂತೆ ಆಗಿಲ್ಲ. ಜಶ್ವಂತ್‍ಗೆ ಎಲ್ಲವನ್ನು ಅರಿವು ಮಾಡಿಸಬೇಕು ಎಂಬುದೇ ಅವಳ ಉದ್ದೇಶವಾಗಿತ್ತು. ಅತ್ತ ರೂಪೇಶ್ ಹತ್ತಿರ ಸಾನ್ಯಾ, ಜಶ್ವಂತ್ ಬಗ್ಗೆಯೇ ಹೇಳುತ್ತಿದ್ದಾಳೆ. ನಂದಿನಿ ತುಂಬಾ ಎಮೋಷನಲ್ ಆದರೆ ಜಶ್ವಂತ್ ತುಂಬಾ ಪ್ರಾಕ್ಟಿಕಲ್. ಅವನು ಹೇಳುತ್ತಿದ್ದ ನನಗಿನ್ನು 24 ವರ್ಷ. ಸಾಧಿಸುವುದು ತುಂಬಾ ಇದೆ ಅಂತ ಎಂದಾಗ ಏನಾದರೂ ಇರಲಿ ಅವರಿಬ್ಬರ ನಡುವೆ ಹೋಗುವುದು ತಪ್ಪು. ಮೊದಲು ಅವನು ಅವಳನ್ನ ಅರ್ಥ ಮಾಡಿಕೊಳ್ಳಬೇಕು. ಅವಳ ಫೀಲಿಂಗ್ಸ್‌ಗೆ ಬೆಲೆ ಕೊಡುವವನು ಅಲ್ಲವೇ ಅಲ್ಲ ಆತ ಎಂದು ರೂಪೇಶ್ ಹೇಳಿದ್ದಾನೆ. ಇದನ್ನೂ ಓದಿ: ತನ್ನ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಪಾಪರಾಜಿಗಳ ಮೇಲೆ ಉರ್ಫಿ ಖಡಕ್‌ ಕ್ಲಾಸ್

    ಮಾತು ಮುಂದುವರಿಸಿದ ಸಾನ್ಯಾ, ಇದು ಗೇಮ್. ಪರ್ಸನಲ್ ತಲೇಲಿ ಇಟ್ಟುಕೊಳ್ಳಬಾರದು. ಈಗ ಹೊರಗಡೆ ನಿನ್ನ ಗರ್ಲ್ ಫ್ರೆಂಡ್ ಇದ್ದು. ಪೊಸೆಸಿವ್ ಆಗಿದ್ದರೇ, ನೀನು ನನ್ನ ಹಗ್ ಮಾಡೋದು, ಹೆಗಲ ಮೇಲೆ ಕೈ ಹಾಕೋದು ಮಾಡುತ್ತಾ ಇರಲಿಲ್ಲವಾ ಎಂಬ ಪ್ರಶ್ನೆಗೆ ರೂಪೇಶ್, ಖಂಡಿತ ಅವಳಿಗೆ ಇದೆಲ್ಲಾ ಇಷ್ಟ ಇಲ್ಲ ಎಂದಿದ್ದರೆ ಅವಳಿಗೆ ನಾನು ಗೌರವ ಕೊಡಲೇಬೇಕು. ಹೀಗಾಗಿ ನಾನು ಅವಾಯ್ಡ್ ಮಾಡುತ್ತಿದ್ದೆನೇನೋ ಎಂದಿದ್ದಾನೆ.

    Live Tv

    [brid partner=56869869 player=32851 video=960834 autoplay=true]

  • ನಂದಿನಿ ಜಶ್ವಂತ್‍ನಿಂದ ದೂರವಾಗುತ್ತಿರಲು ಸಾನ್ಯಾ ಕಾರಣನಾ?

    ನಂದಿನಿ ಜಶ್ವಂತ್‍ನಿಂದ ದೂರವಾಗುತ್ತಿರಲು ಸಾನ್ಯಾ ಕಾರಣನಾ?

    ನಂದಿನಿ ಬದಲಾಗಿದ್ದು, ಜಶ್ವಂತ್‍ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ನೋಡುಗರಿಗೆ ಗೊತ್ತಾಗುತ್ತಿದೆ. ಜಶ್ವಂತ್ ಹೆಚ್ಚು ರಿಪ್ಲೇ ಮಾಡದೆ ಇರುವುದೆಲ್ಲವನ್ನು ಕಂಡಾಗ ಏನೋ ಮಿಸ್ ಹೊಡಿತಿದೆ ಎನಿಸುತ್ತದೆ. ಆದರೆ ಇದಕ್ಕೆಲ್ಲಾ ಕಾರಣ ಸಾನ್ಯಾ ಎಂಬ ಮನದಾಳದ ನೋವಂತು ಹೊರಬಂದಿದೆ.

    ಜಶ್ವಂತ್ ರಾತ್ರಿ ಊಟ ಮಾಡುವಾಗ ನಂದಿನಿಯ ಕೈಹಿಡಿದುಕೊಂಡು ಹೋಲ್ಡ್ ಮೈ ಹ್ಯಾಂಡ್ ಅಂತ ಕೂಡ ಹೇಳಿದ್ದ. ಅದಕ್ಕೆ ನಂದಿನಿ ಪ್ರತಿಕ್ರಿಯಿಸಿ, ನಾನು ಯಾವತ್ತು ಹಿಡಿದ ಕೈಬಿಡುವುದಿಲ್ಲ. ಆದರೆ ಜೀವನ ಪೂರ್ತಿ ಜೊತೆಯಾಗಿರುತ್ತೀನಿ ಎಂದು ಅನ್ನಿಸಿದಾಗ ಮಾತ್ರ ಹ್ಯಾಂಡ್ ಹೋಲ್ಡ್ ಮಾಡಬೇಕು ಎಂದಿದ್ದಳು. ಆಗ ಜಶ್ವಂತ್, ನಂಬಿಕೆ ಇದೆ ಎಂದು ಹೇಳಿದ್ದ. ಇದಕ್ಕೆ ಜೋರು ನಕ್ಕ ನಂದಿನಿ, ನೀನೇ ತಾನೇ ಭವಿಷ್ಯದ ಬಗ್ಗೆ ಗೊತ್ತಿಲ್ಲ ಎಂದವನು ಎಂದಿದ್ದಳು. ಇದೆಲ್ಲ ಮುಗಿದ ಮೇಲೂ ನಂದಿನಿ, ಜಶ್ವಂತ್‍ನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಏನೋ ಬೇಸರ ಅವಳ ಮನಸ್ಸನ್ನು ಕಾಡುತ್ತಿದೆ. ನೋವು ಆದರೂ, ದುಃಖ ಬಂದರೂ ಅದನ್ನು ಅದುಮಿಟ್ಟುಕೊಳ್ಳುತ್ತಿದ್ದಾಳೆ. ಅದೇ ಕಾರಣಕ್ಕೆ ಜಶ್ವಂತ್ ಬಿಟ್ಟು, ಸೋನು ಟೀಂನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾಳೆ.

    ಇದಕ್ಕೆ ಉದಾಹರಣೆ ಎಂಬಂತೆ ಮಳೆ ಜೋರು ಸುರಿಯುತ್ತಿತ್ತು. ಆ ವೇಳೆ ಜಯಶ್ರೀ, ರಾಕೇಶ್, ಸೋನು ಕುಳಿತಿದ್ದರು. ಆಗ ಅಲ್ಲಿಗೆ ಬಂದ ನಂದಿನಿ, ಸ್ವಿಮ್ ಮಾಡುವುದಕ್ಕೆ ಸೋನುಳನ್ನು ಕರೆದಳು. ಖುಷಿಯಾಗುವಷ್ಟು ಸ್ವಿಮ್ ಮಾಡಿದಳು. ಅಲ್ಲಿಗೆ ಮಧ್ಯರಾತ್ರಿ 12 ಆಗಿತ್ತು. ನೇರ ಅಡುಗೆ ಮನೆಗೆ ಹೋದಳು. ಅಲ್ಲಿ ರೂಪೇಶ್‍ಗೆ ನಂದಿನಿಯ ಬದಲಾವಣೆ, ಮನಸ್ಸಿನ ನೋವು ಕೊಂಚ ಅರ್ಥವಾಗಿದೆ. ನೀನು ಸಾನ್ಯಾ ಹತ್ತಿರ ಮಾತನಾಡಿಲ್ವಾ ಎಂದಾಗ ಸಾನ್ಯಾ ಹತ್ರ ಅಲ್ಲ ಎಂದು ನಂದು ಮಾತು ಬದಲಾಯಿಸಿದ್ದಾಳೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಆಗ ರೂಪೇಶ್ ಮತ್ತೆ ಬಲವಂತ ಮಾಡಿ ಕೇಳಿದ್ದಾನೆ. ಅದಕ್ಕೆ ಉತ್ತರ ಕೊಟ್ಟ ನಂದು ಅವನು ಹೊರಗಡೆ ಹೇಗೆ ಇದ್ದ ಆ ರೀತಿ ಇಲ್ಲಿ ಒಳಗಡೆ ಇಲ್ಲ. ಅವನಿಗೆ ಕಂಫರ್ಟ್ ನನ್ನ ಜೊತೆಗಿಂತ ಸಾನ್ಯಾ ಬಳಿ ಇದೆ ಅನಿಸುತ್ತಿದೆ ಎಂದಾಗ ರೂಪೇಶ್ ಸಮಾಧಾನ ಮಾಡಿದ್ದಾನೆ. ಏನು ಗೊತ್ತಾ ನಂಗೆ ಕೆಲವೊಂದು ವಿಚಾರಗಳು ಗೊತ್ತಾಗುತ್ತಿದೆ. ನಿಂಗೆ ಕಂಫರ್ಟ್ ಆಗುತ್ತಾ ಇಲ್ಲ. ನನಗೆ ಬೇಜಾರು ಆಗುತ್ತಾ ಇದೆ. ನನಗೆನೋ ಸಾನ್ಯಾಗೆ ಹೇಳಬೇಕು ಎನಿಸುತ್ತಿದೆ. ನಿನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು ಏನಾದರೂ ಮಾಡಬೇಕು ಎನಿಸುತ್ತಿದೆ ಎಂದು ರೂಪೇಶ್ ಹೇಳಿದಾಗ, ಒಂದು ಅವನು ತಾನಾಗಿ ಅರ್ಥ ಆಗಬೇಕು. ಇಲ್ಲ ಅವಳಿಗೆ ಅರ್ಥ ಆಗಬೇಕು. ನಾನು ಈ ದೃಶ್ಯವನ್ನೆಲ್ಲಾ ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಿದ್ದೇನೆ. ಈಗ ಹೊರಗಡೆಯೂ ಈ ರೀತಿ ಆಗಬಹುದು. ನಾನು ಆ ಹುಡುಗಿಯರ ಬಳಿ ಹೋಗುವುದಕ್ಕೆ ಆಗಲ್ಲ. ನಾನು ಸರಿ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾಳೆ.

    ಒಂದು ಕಡೆ ಅವನು ನಿನ್ನ ಬಾಯ್ ಫ್ರೆಂಡ್, ಇನ್ನೊಂದು ಕಡೆ ಇವಳು ನಿನ್ನ ಬೆಸ್ಟ್ ಫ್ರೆಂಡ್ ಇದೆ ಆಗುತ್ತಾ ಇರೋದು ಎಂದು ರೂಪೇಶ್ ಸಮಾಧಾನ ಅಷ್ಟರಲ್ಲಿ ಅಲ್ಲಿ ಬಂದ ಸಾನ್ಯಾ, ಜಶ್ವಂತ್ ಬಂದು ಹಳೆಯ ಶೋ ಬಗ್ಗೆ ಮಾತು ಪ್ರಾರಂಭಿಸುತ್ತಾರೆ. ರೋಡೀಸ್‍ನಲ್ಲಿದ್ದಾಗಲೂ ತುಂಬಾ ಟ್ರೈ ಮಾಡಿದ್ದೀನಿ. ಆ ಶೋನಿಂದ ಅವರ ಫ್ಯಾಮಿಲಿಯಲ್ಲಿ ನಿನ್ನ ಬಗ್ಗೆ ಬ್ಯಾಡ್ ಓಪಿನಿಯನ್ ಇತ್ತಂತೆ. ಅದನ್ನು ಇನ್ನೂ ಜಾಸ್ತಿ ಮಾಡುವುದಕ್ಕೆ ಇಷ್ಟ ಇಲ್ಲ ಎಂದಿದ್ದ ಎಂದು ಜಶ್ವಂತ್ ಬಗ್ಗೆ ಹೇಳಿದ್ದಾಳೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಆಗ ಮಾತನಾಡಿದ ನಂದಿನಿ, ಫ್ಯಾಮಿಲಿ ಪ್ರೆಶರ್ ಇದೆ. ಇಬ್ಬರಿಗೂ ಫ್ಯಾಮಿಲಿನೇ ಫಸ್ಟ್. ಹಾಗಂತ ನನ್ನ ಜೊತೆ ಇದ್ದ ಕಂಫರ್ಟ್ ಬೇರೆಯವರ ಜೊತೆ ಇದ್ದರೆ ಹೆಂಗ್ ಅನಿಸಿತ್ತೆ ಅಂತ ಇನ್ ಡೈರೆಕ್ಟ್ ಆಗಿ ಸಾನ್ಯಾಗೆ ತಿರುಗೇಟು ನೀಡಿದ್ದಾಳೆ. ಇಲ್ಲಿ ನಾವೂ ಸ್ಟ್ರಾಂಗ್ ಆಗಿ ಇದ್ದರೆ ಅವರನ್ನು ಒಪ್ಪಿಸಬಹುದು. ಎಂಡ್ ಆಫ್ ದಿ ಡೇ ಅವರಿಗೆ ಬೇಕಾಗಿರುವುದು ಏನು ಮಗ ಹ್ಯಾಪಿಯಾಗಿರಬೇಕು. ಹ್ಯಾಪಿಯಾಗಿ ನಾನು ಇಟ್ಟುಕೊಳ್ಳುತ್ತೇನೆ ಎಂದಿದ್ದಾಳೆ.

    ತಡರಾತ್ರಿಯಾದರೂ ಹೀಗೆ ಮುಂದುವರಿದ ಮಾತುಕತೆಯಲ್ಲಿ ನಂದಿನಿ ಡೈರೆಕ್ಟ್ ಆಗಿ ಸಾನ್ಯಾಗೆ ಹೇಳಿದ್ದಾಳೆ. ನಾವಿಬ್ಬರೆ ಡಿಫಿಕಲ್ಟ್ ಮಾಡಿಕೊಳ್ಳುತ್ತಾ ಇದ್ದೀವಿ. ನಾನೇನಾದರೂ ರೂಪಿ ಜೊತೆ ಮಾತನಾಡುವಾಗ ಜಶುನ ಕರೀತಿನಿ. ಆದರೆ ನೀವಿಬ್ಬರು ಮಾತನಾಡುವಾಗ ನಂಗೆ ಆ ಫೀಲ್ ಬರುತ್ತಾ ಇಲ್ಲ. ನೀವಿಬ್ಬರು ಮಾತನಾಡುವಾಗ ಬರಬೇಕು ಎನಿಸುತ್ತಿಲ್ಲ. ಇಟ್ಸ್ ಓಕೆ ಏನಾದರೂ ಮಾತನಾಡಿಕೊಳ್ಳಲಿ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೀನಿ ಅಂದಿದ್ದಾಳೆ. ಇಬ್ಬರು ಒಂದು ಹಗ್‍ನಲ್ಲಿ ಮಾತುಕತೆ ಮುಗಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಬಿಗ್‍ಬಾಸ್ ಮನೆಯಲ್ಲಿ ಒಂದು ಕ್ಯೂಟ್ ಜೋಡಿ ಇದೆ. ಅದು ಯಾರು ಅಂತ ಕೇಳಿದರೆ ನಂದು ಅಂಡ್ ಜಶು ಅಂತ ಎಲ್ಲರೂ ಹೇಳುತ್ತಾರೆ. ನಂದಿನಿ ಹಾಗೂ ಜಶ್ವಂತ್ ಬಿಗ್‍ಬಾಸ್ ಮನೆಗೆ ಬಂದ ಮೇಲೆ ಪ್ರೀತಿಯಲ್ಲಿ ಬಿದ್ದವರಲ್ಲ. ಪ್ರೀತಿಯಲ್ಲಿ ಬಿದ್ದಿದ್ದವರನ್ನು ಬಿಗ್‍ಬಾಸ್ ಮನೆಗೆ ಕರೆತಂದದ್ದು. ಇಬ್ಬರು ಈಗಲೂ ಬಿಗ್‍ಬಾಸ್ ಮನೆಯಲ್ಲಿ ಲವ್ ಬರ್ಡ್ಸ್‌ಗಳು ಹಾರಾಡಿದಂತೆಯೇ ಹಾರಾಡುತ್ತಿರುತ್ತಾರೆ. ಆದರೆ ಅದ್ಯಾಕೋ ಜಶ್ವಂತ್‍ಗೆ ಹಳೇ ಗರ್ಲ್ ಫ್ರೆಂಡ್ ನೆನಪಾಗಿದ್ದಾಳೆ.

    ಹಳೇ ಗರ್ಲ್ ಫ್ರೆಂಡ್ ಎಂದಾಕ್ಷಣಾ ಬೇರೆ ಇನ್ನೇನನ್ನೋ ಅರ್ಥೈಸಿಕೊಳ್ಳಬೇಡಿ. ಜಶ್ವಂತ್‍ಗೆ ಹಳೆ ನಂದಿನಿ ಬೇಕು ಎಂಬ ಹಂಬಲ ಹೆಚ್ಚಾಗಿದೆ. ಇಂದು ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಅಡುಗೆ ಯಾರು ಮಾಡಬೇಕು ಎಂಬುದು ವೂಟ್‍ನಲ್ಲಿ ಜನರಿಂದ ಬಂದ ಉತ್ತರದ ಮೇಲೆಯೇ ನಿರ್ಧಾರವಾಗುತ್ತದೆ. ಅದರಂತೆ ಇಂದು ಅಡುಗೆ ಮಾಡುವ ಜವಾಬ್ದಾರಿ ನಂದಿನಿ ಅವರ ಮೇಲೆ ಬಂದಿದೆ. ಬಿಗ್‍ಬಾಸ್ ಸೂಚನೆಯಂತೆ ನಂದಿನಿ ಅನ್ನ, ಟೊಮೇಟೊ ಗೊಜ್ಜು ಮಾಡಿದ್ದಾಳೆ. ಎಲ್ಲರೂ ಖುಷಿಯಾಗಿ ತಿಂದಿದ್ದಾರೆ. ಕ್ಯಾಮೆರಾಗೆ ಖುಷಿಯಿಂದ ಹೇಳಿಕೊಂಡ ನಂದಿನಿ, ಮಮ್ಮಿ, ಪಪ್ಪಾ ನೋಡಿ ಇಲ್ಲಿ ನಾನು ಟೊಮೇಟೊ ಅನ್ನ ಮಾಡಿದ್ದೀನಿ. ಕರಿಬೇವಿನ ಸೊಪ್ಪನ್ನು ಸೀಯಿಸಿ ಬಿಟ್ಟಿದ್ದೀನಿ. ಸೋ ನಿಮ್ಮ ಮಗಳೇ ಎಂಬುದು ಅರ್ಥ ಆಯ್ತು ಎಂದಿದ್ದಾರೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಅದಕ್ಕೂ ಮುನ್ನ ಟೊಮೇಟೊ ಹಚ್ಚಿಕೊಡಲು ಜಶ್ವಂತ್ ಸಹಾಯ ಮಾಡಿದ್ದಾರೆ. ಈ ವೇಳೆ ಜಶ್ವಂತ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಎಂದು ಟೊಮೇಟೊದಲ್ಲಿ ಹಾರ್ಟ್ ಶೇಪ್ ಕೂರಿಸಿ ನಂದಿನಿಗೆ ಖುಷಿ ಕೊಟ್ಟಿದ್ದಾರೆ. ಆದರೆ ತಿನ್ನುವುದಕ್ಕೆ ಜಶ್ವಂತ್ ಬಂದಿದ್ದಾರೆ. ತಿಂಡಿ ಹೇಗಿದೆ ಅಂತ ಜಶ್ವಂತ್ ಹೇಳದೇ ಇರುವುದಕ್ಕೆ ನಂದಿನಿ ಬೇಸರ ಮಾಡಿಕೊಂಡಿದ್ದಾರೆ. ಆ ಮಧ್ಯೆ ಸಣ್ಣ ಚೇಷ್ಟೆಯ ಜಗಳವೂ ಆಗಿದೆ. ತಿಂಡಿ ತಿನ್ನುತ್ತಿದ್ದ ಜಶ್ವಂತ್ ಅನ್ನು ಹಗ್ ಮಾಡಲು ಬಂದಿದ್ದಾರೆ. ಆದರೆ ಜಶ್ವಂತ್ ಸರಿಯಾದ ಹಗ್ ಕೊಡದೇ ಇದ್ದಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ. ನೀನು ಹಗ್ ಬೇರೆಯವರ ಹತ್ತಿರವೇ ತೆಗೆದುಕೋ ಎಂದು ಮುಂದೆ ಸಾಗಿದ್ದಾರೆ.

    ನಂತರ ಕೂಡಲೇ ಅಲ್ಲಿಂದ ಎದ್ದು ಜಶ್ವಂತ್ ನಂದಿನಿಯನ್ನು ಸಮಾಧಾನ ಮಾಡಲು ಹೋಗಿ ವಿವರಣೆ ನೀಡಲು ಯತ್ನಿಸಿದಾಗ ನಂದಿನಿ ಕೂಡ ನಿನ್ನೆ ಆಗಿದ್ದನ್ನು ವಿವರಿಸಿದ್ದಾರೆ. ನಿನ್ನೆ ಹಗ್ ಮಾಡಲು ಬಂದರೆ ಹಗ್ ಕೊಡದೇ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದೆ ಅದಕ್ಕೆ ನಂಗೆ ಬೇಸರ ಆಯ್ತು ಎಂದಿದ್ದಾರೆ. ಬಳಿಕ ಬೇಸರದಲ್ಲಿದ್ದ ನಂದಿನಿಯನ್ನು ಗಟ್ಟಿಯಾಗಿ ತಬ್ಬಿ ಸಮಾಧಾನ ಮಾಡಿದ್ದಾರೆ. ಚಿವುಟಿದ ನಂದಿನಿ ಅಲ್ಲಿಂದ ಮುಂದೆ ಸಾಗಿದ್ದಾರೆ. ನಂದಿನಿ ಚಿವುಟಿದ ನೋವು ಹಾಗೆ ಇದ್ದಿದ್ದರಿಂದ ಕೆರೆದುಕೊಂಡು ಕುಳಿತಿದ್ದ ಜಶು, ಸೋಮಣ್ಣ ಬಂದ ಮೇಲೆ ನಂಗೆ ಹಳೇ ಗರ್ಲ್ ಫ್ರೆಂಡ್ ಬೇಕು ಎಂದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್: ಸೋನು ಶ್ರೀನಿವಾಸ್ ಗೌಡಗೆ ಜೈಲು ಫಿಕ್ಸ್

    ಯಾಕೆಂದರೆ ನಂದಿನಿ ಅಲ್ಲಿಂದ ಹೋಗುವಾಗ ಚಮಕಾಯಿಸುವಂತೆ ಹೋಗಿದ್ದಾರೆ. ಆದರೆ ಆ ಸ್ಟೈಲ್ ರೂಪೇಶ್ ನದ್ದಾಗಿತ್ತು. ಇದು ಜಶ್ವಂತ್‍ಗೆ ಉರಿದಿದೆ. ಅಯ್ಯೋ ರೂಪೇಶ್ ಯಾಕೆ. ಅದು ಅವನೇ ಮಾಡುವುದು ಎಂದಿದ್ದಾನೆ. ಅದಕ್ಕೆ ನಂದು ಅದು ರೂಪೇಶ್ ರೀತಿ ಅಲ್ಲ ಎಂದು ಹೇಳಿ ಹೋಗುತ್ತಾರೆ. ಅಲ್ಲಿಗೆ ಬಂದ ಸೋಮಣ್ಣನ ಬಳಿ ಜಶ್ವಂತ್ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ರೂಪೇಶ್ ಮತ್ತು ನಂದು ಚಿಲ್ ಮಾಡುತ್ತಾರಲ್ವಾ. ಈಗ ನಂದು ಸ್ವಲ್ಪ ರೂಪೇಶ್ ಥರನೇ ಮಾಡುವುದು. ನಂಗೆ ಏನಪ್ಪ ಇದು ಅಂತ ಇಷ್ಟ ಆಗುತ್ತಿಲ್ಲ. ಆಕ್ಚುಲಿ ನಂದು ಕ್ಯೂಟ್ ಆಗಿ ಇದು ಅದು ಮಾಡುತ್ತಾಳೆ. ಆದರೆ ಈಗ ರೂಪೇಶ್ ಥರ ಇದು ಅದು ಮಾಡುತ್ತಾಳೆ. ನಂಗೆ ನನ್ನ ಗರ್ಲ್ ಫ್ರೆಂಡ್ ವಾಪಾಸ್ ಬೇಕು ಎಂದು ಬೇಜಾರು ಮಾಡಿಕೊಂಡು ನಂದು ಮಾಡಿದ ತಿಂಡಿ ತಿಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]