Tag: Nandini

  • ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್‌ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ

    ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್‌ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ

    ಬೆಂಗಳೂರು: ಅಸಮರ್ಥ ಕಾಂಗ್ರೆಸ್ (Congress) ಸರ್ಕಾರಕ್ಕೆ ಧನ್ಯವಾದಗಳು. ನಂದಿನಿ ಇನ್ನು ಮುಂದೆ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು (Tirupati Laddu) ತಯಾರಿಸಲು ತುಪ್ಪವನ್ನು ಪೂರೈಸುವುದಿಲ್ಲ ಎಂದು ಹೇಳಿ ಸಿಟಿ ರವಿ (CTRavi) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಂದಿನಿ (Nandini) ವಿಷಯವನ್ನು ನಾಚಿಕೆಯಿಲ್ಲದೆ ರಾಜಕೀಯ ಮಾಡಿ ಅಮುಲ್‌ (Amul)ದೂಷಿಸಲು ಹಾಲುಣಿಸಿತು. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿತು. ಇದರಿಂದಾಗಿ ನಂದಿನಿಯು ಟಿಟಿಡಿ (TTD) ಮಂಡಳಿಗೆ ತುಪ್ಪವನ್ನು ಹಿಂದಿನ ಬೆಲೆಗೆ ಪೂರೈಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

    ನಂದಿನಿ ಇನ್ನು ಮುಂದೆ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ತಯಾರಿಸಲು ತುಪ್ಪವನ್ನು ಪೂರೈಸುವುದಿಲ್ಲ. ಕಾಂಗ್ರೆಸ್ ತನ್ನ ಅಜೆಂಡಾವನ್ನು ಅನುಸರಿಸಲು ಸುವರ್ಣ ಕರ್ನಾಟಕವನ್ನು ನಾಶಮಾಡಲು ಹವಣಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

    ಸುಮಾರು 50 ವರ್ಷಗಳ ಬಳಿಕ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಕೆಎಂಎಫ್‌ನಿಂದ (KMF) ನಂದಿನಿ ತುಪ್ಪದ ಖರೀದಿಯನ್ನು ಸ್ಥಗಿತ ಮಾಡಿದೆ. ಇದರಿಂದಾಗಿ ವಿಶ್ವ ಪ್ರಸಿದ್ಧ ಲಾಡುಗಳಲ್ಲಿ ಇನ್ನು ಮುಂದೆ ನಂದಿನಿ ತುಪ್ಪದ ಘಮ ಇರುವುದಿಲ್ಲ. ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ್‌, ಕೆಎಂಎಫ್ ಸಲ್ಲಿಸಿದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ತಿರುಮಲ ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತುಪ್ಪ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಟೆಂಡರ್‌ನಿಂದ ಕೆಎಂಎಫ್‌ ದೂರ ಉಳಿದಿದೆ ಎಂದಿದ್ದಾರೆ.

     

    ಆರು ತಿಂಗಳಿಗೆ 14 ಲಕ್ಷ ಕೆಜಿ ತುಪ್ಪ ನಂದಿನಿಯಿಂದ ಸರಬರಾಜು ಆಗುತ್ತಿತ್ತು. ಈ ಹಿಂದೆ ರಿಯಾಯಿತಿ ದರದಲ್ಲಿ ತಿಮ್ಮಪ್ಪನ ಸನ್ನಿಧಿಗೆ ತುಪ್ಪ ಹೋಗುತ್ತಿತ್ತು. ಆದರೆ ಈಗ ಕೆಎಂಎಫ್‌ ಹಾಲಿನ ಬೆಲೆ ಏರಿಕೆ ಮಾಡಿದ್ದರಿಂದ ತಪ್ಪದ ದರವನ್ನು ಏರಿಸಿತ್ತು. ದರದ ಗೊಂದಲದಿಂದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸರಲಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿಯಲ್ಲಿ ನಂದಿನಿ ಸಿಗಲ್ಲ, ಬೇರೆ ಉತ್ಪನ್ನ ಮುಟ್ಟಲ್ಲ ಎನ್ನೋಕಾಗುತ್ತಾ?: ನಿರ್ಮಲಾ ಸೀತಾರಾಮನ್

    ದೆಹಲಿಯಲ್ಲಿ ನಂದಿನಿ ಸಿಗಲ್ಲ, ಬೇರೆ ಉತ್ಪನ್ನ ಮುಟ್ಟಲ್ಲ ಎನ್ನೋಕಾಗುತ್ತಾ?: ನಿರ್ಮಲಾ ಸೀತಾರಾಮನ್

    – ಸಿದ್ದರಾಮಯ್ಯ ಕಾಲದಲ್ಲೇ ರಾಜ್ಯಕ್ಕೆ ಅಮುಲ್ ಎಂಟ್ರಿಯಾಗಿತ್ತು

    ಬೆಂಗಳೂರು: ಹಾಲಿನ ಉತ್ಪನ್ನಗಳಾದ ನಂದಿನಿ (Nandini) ಹಾಗೂ ಅಮುಲ್ (Amul) ವಿಲೀನ ವಿಚಾರವಾಗಿ ನಡೆಯುತ್ತಿರುವ ಗಲಾಟೆಯನ್ನು ಕಾಂಗ್ರೆಸ್ (Congress) ರಾಜಕೀಯಗೊಳಿಸುತ್ತಿದೆ. ಸಿದ್ದರಾಮಯ್ಯ (Siddaramaiah) ಅವಧಿಯಲ್ಲೇ ಅಮುಲ್ ಕರ್ನಾಟಕಕ್ಕೆ (Karnataka) ಎಂಟ್ರಿಯಾಗಿತ್ತು. ಈಗ ಅವರೇ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹರಿಹಾಯ್ದಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಹೇಳಿಕೆ ನೀಡಿದ ಸೀತಾರಾಮನ್, ಅಮುಲ್ ಹಾಗೂ ನಂದಿನಿ ಉತ್ಪನ್ನಗಳ ಗಲಾಟೆಯನ್ನು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಈ ಎರಡು ಉತ್ಪನ್ನಗಳ ವಿಚಾರವಾಗಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದು ಸಲಹೆ ನೀಡಿದರು.

    ನಾನು ಕರ್ನಾಟಕಕ್ಕೆ ಬಂದಾಗ ನಂದಿನ ಹಾಲು, ಪೇಡಾ ಹಾಗೂ ಇತರ ಉತ್ಪನ್ನಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತೇನೆ. ದೆಹಲಿಗೆ ಹೋದಾಗ ಅಯ್ಯೋ ಇಲ್ಲಿ ನಂದಿನಿ ಸಿಗಲ್ಲ, ಬೇರೆ ಯಾವ ಉತ್ಪನ್ನಗಳನ್ನೂ ನಾನು ಮುಟ್ಟಲ್ಲ ಎಂದು ಹೇಳಲು ಆಗುತ್ತಾ? ಹೀಗಾಗಿ ದೆಹಲಿಗೆ ಹೋದಾಗ ಅಮುಲ್ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪ

    ನಂದಿನಿ ಈಗ ಬೇರೆ ರಾಜ್ಯಗಳಲ್ಲಿಯೂ ಮಾರಾಟವಾಗುತ್ತಿದೆ. ರೈತರಿಗೆ ಹಾಲಿಗೆ ಅತಿ ಹೆಚ್ಚು ದುಡ್ಡು ಸಿಗುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಸೀತಾರಾಮನ್ ಹೇಳಿದರು. ಇದನ್ನೂ ಓದಿ: ಲಿಂಗಾಯತರೆಲ್ಲಾ ಭ್ರಷ್ಟರು ಎಂದು ನಾನು ಹೇಳಲೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

  • ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

    ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

    – ನಂದಿನಿ ಐಸ್‌ಕ್ರೀಮ್ ಸವಿದ ರಾಗಾ

    ಬೆಂಗಳೂರು: ಚುನಾವಣೆ (Election) ಹೊತ್ತಲ್ಲಿ ಅಮುಲ್ (Amul) ಮತ್ತು ನಂದಿನಿ (Nandini) ವಿಲೀನ ವಿವಾದ ಕಾವು ಪಡೆದಿದ್ದ ಬೆನ್ನಲ್ಲೇ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಬೆಂಗಳೂರಿನ (Bengaluru) ನಂದಿನಿ ಔಟ್‌ಲೆಟ್‌ನಲ್ಲಿ ನಂದಿನಿ ಐಸ್‌ಕ್ರೀಮ್ (Ice Cream) ಹಾಗೂ ಸಿಹಿಯನ್ನು ಸೇವಿಸಿ ಆನಂದಿಸಿದ್ದಾರೆ. ಅಲ್ಲದೇ ಈ ಕುರಿತು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಟ್ವೀಟ್ ಕೂಡಾ ಮಾಡಿದ್ದಾರೆ.

    ಭಾನುವಾರ ಕೋಲಾರದಲ್ಲಿ (Kolar) ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿನ ಜೆಪಿ ನಗರದಲ್ಲಿ (J.P.Nagar) ಪೌರ ಕಾರ್ಮಿಕ ಹಾಗೂ ಬೀದಿ ಬದಿ ವ್ಯಾಪಾರಿಗಳೊಂದಿಗೆ ನಗರದ ಆರ್.ವಿ ಡೆಂಟಲ್ ಕಾಲೇಜ್‌ನಲ್ಲಿ ರಾಹುಲ್ ಗಾಂಧಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ಹಾಗೂ ವೇಣುಗೋಪಾಲ್ ಅವರೊಂದಿಗೆ ನಂದಿನಿ ಐಸ್‌ಕ್ರೀಮ್ ಸವಿದು ಖುಷಿಪಟ್ಟಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು ಬೂತ್ ಮಾಲೀಕರಿಗೆ 1 ಸಾವಿರ ಹಣವನ್ನು ನೀಡಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ 

    ನಂದಿನಿ-ಅಮುಲ್ ವಿವಾದ ವಿಚಾರವಾಗಿ ಟ್ವೀಟ್ (Tweet) ಮಾಡಿರುವ ರಾಹುಲ್ ಗಾಂಧಿ, ಕರ್ನಾಟಕದ ಹೆಮ್ಮೆ.. ನಂದಿನಿ ಅತ್ಯುತ್ತಮ ಎಂದು ಬಣ್ಣಿಸಿದ್ದಾರೆ. ಅಲ್ಲದೇ ತಾವು ಐಸ್‌ಕ್ರೀಮ್ ಸವಿಯುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕೆಎಂಎಫ್ (KMF) ಬ್ರ್ಯಾಂಡ್‌ ಬೆಂಬಲಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ 

    ಐಸ್‌ಕ್ರೀಮ್ ಸವಿಯುತ್ತಿದ್ದ ವೇಳೆ ಬೂತ್ ಮಾಲೀಕರೊಂದಿಗೆ ಈ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ? ನೀವು ಎಷ್ಟು ವರ್ಷದಿಂದ ಈ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬೂತ್ ಮಾಲೀಕ ಈ ಉತ್ಪನ್ನಗಳು ಬಳ್ಳಾರಿಯಿಂದ ಬರುತ್ತವೆ ಎಂದು ಉತ್ತರಿಸಿ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಫೋಟೋವನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್ 

    ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಕುರಿತು ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡಪರ ಸಂಘಗಳು ಈ ಕುರಿತು ಹೋರಾಟ ನಡೆಸುತ್ತಿವೆ. ಈ ಕ್ರಮವನ್ನು ಸಮರ್ಥಿಸಿಕೊಂಡ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿದ್ದವು. ಇದನ್ನೂ ಓದಿ: ಕೆಎಂಎಫ್‌ನಿಂದ ಫೆಡರಲ್‌ ತತ್ವ ಉಲ್ಲಂಘನೆ – ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ

  • ಕೆಎಂಎಫ್‌ನಿಂದ ಫೆಡರಲ್‌ ತತ್ವ ಉಲ್ಲಂಘನೆ – ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ

    ಕೆಎಂಎಫ್‌ನಿಂದ ಫೆಡರಲ್‌ ತತ್ವ ಉಲ್ಲಂಘನೆ – ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ

    ತಿರುವನಂತಪುರಂ: ಕರ್ನಾಟಕದಲ್ಲಿ ಅಮೂಲ್‌ ಹಾಲಿಗೆ (Amul Milk) ವಿರೋಧ ವ್ಯಕ್ತವಾಗುತ್ತಿದಂತೆ ಕೇರಳದಲ್ಲಿ (Kerala) ಈಗ ನಂದಿನಿ ಹಾಲಿಗೆ (Nandini Milk) ವಿರೋಧ ವ್ಯಕ್ತವಾಗುತ್ತಿದೆ.

    ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (KCMMF) ಕೇರಳದಲ್ಲಿ ಮಿಲ್ಮಾ ಹಾಲನ್ನು (Milma Milk) ಮಾರಾಟ ಮಾಡುತ್ತಿದೆ. ಈಗ ಕೆಸಿಎಂಎಂಎಫ್ ಕೇರಳದಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿರುವುದನ್ನು ಅನೈತಿಕ ಎಂದು ಹೇಳಿದೆ.

     

    ಕೇರಳದ ಕೆಲವು ಭಾಗಗಳಲ್ಲಿ ನಂದಿನಿ ಬ್ರಾಂಡ್‌ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡಲು ಕರ್ನಾಟಕ ಹಾಲು ಒಕ್ಕೂಟ (KMF) ಮಳಿಗೆಗಳನ್ನು ತೆರೆದಿದೆ. ಇದು ಭಾರತದ ಡೈರಿ ಕ್ಷೇತ್ರದ ಮೂಲಾಧಾರವಾಗಿರುವ ಸಹಕಾರಿ ಮನೋಭಾವವನ್ನು ಉಲ್ಲಂಘಿಸಿದೆ ಎಂದು ಕೆಸಿಎಂಎಂಎಫ್ ಆರೋಪಿಸಿದೆ. ಇದನ್ನೂ ಓದಿ: ವೋಟರ್ ಕಾರ್ಡ್‌ ತಗೊಳ್ಳೋಕೆ 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನ ಕೂಡಿ ಹಾಕಿದ ಪತ್ನಿ

    ಈ ಸಂಬಂಧ ಮಿಲ್ಮಾ ಅಧ್ಯಕ್ಷ ಕೆಎಸ್‌ ಮಣಿ ಪ್ರತಿಕ್ರಿಯಿಸಿ, ಇತ್ತೀಚೆಗೆ ಕೆಲವು ರಾಜ್ಯಗಳ ಹಾಲು ಮಾರಾಟ ಒಕ್ಕೂಟಗಳು ತಮ್ಮ ಪ್ರಮುಖ ಉತ್ಪನ್ನಗಳನ್ನು ತಮ್ಮ ರಾಜ್ಯದ ಹೊರಗಡೆ ಮಾರಾಟ ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಫೆಡರಲ್ ತತ್ವಗಳು ಮತ್ತು ಸಹಕಾರ ಮನೋಭಾವವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

     

    ಕರ್ನಾಟಕ ಹಾಲು ಮಾರಾಟ ಒಕ್ಕೂಟವು ಇತ್ತೀಚೆಗೆ ತನ್ನ ನಂದಿನಿ ಬ್ರಾಂಡ್ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆದಿದೆ. ಇದನ್ನು ಹೇಗೆ ಸಮರ್ಥಿಸಬಹುದು? ಇದನ್ನು ಯಾರೇ ಮಾಡಿದರೂ, ಇದು ಅತ್ಯಂತ ಅನೈತಿಕ ಕೆಲಸ. ಇದು ಭಾರತದ ಡೈರಿ ಚಳುವಳಿಯ ಉದ್ದೇಶವನ್ನು ಸೋಲಿಸುತ್ತದೆ. ಮತ್ತು ರೈತರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುತ್ತದೆ ಎಂದಿದ್ದಾರೆ.

    ಒಂದು ರಾಜ್ಯದ ಸಂಘ ಇನ್ನೊಂದು ರಾಜ್ಯದಲ್ಲಿ ತನ್ನ ಉತ್ಪನ್ನವನ್ನು ಮಾರಾಟ ಮಾಡುವುದು ರಾಜ್ಯ ರಾಜ್ಯಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

  • ನಂದಿನಿ ‘ನಮ್ಮವಳು’ ಅಲ್ಲ, ‘ನನ್ನವಳು’ : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

    ನಂದಿನಿ ‘ನಮ್ಮವಳು’ ಅಲ್ಲ, ‘ನನ್ನವಳು’ : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

    ಮೂಲ್ (Amul) ಮತ್ತು ನಂದಿನಿ (Nandini) ಹಾಲಿನ ಜಟಾಪಟಿ ತಾರಕಕ್ಕೇರಿದೆ. ಕರ್ನಾಟಕದಲ್ಲಿ ತನ್ನ ಉದ್ಯಮವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಅಮೂಲ್ ಹಲವು ರೀತಿಯಲ್ಲಿ ಕಸರತ್ತು ಮಾಡುತ್ತಿದೆ. ಇದಕ್ಕೆ ತೀವ್ರ ವಿರೋಧವು ವ್ಯಕ್ತವಾಗಿದೆ. ವಿರೋಧದ ಕಾವು ಜೋರಾಗುತ್ತಿದ್ದಂತೆಯೇ  ಅಮೂಲ್ ಕಂಪೆನಿಯ ಎಂ.ಡಿ ಸದ್ಯಕ್ಕೆ ಒಂದಷ್ಟು ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದರೂ, ಹೋರಾಟಗಾರರು ಮಾತ್ರ ಸುಮ್ಮನಾಗಿಲ್ಲ.

    ನಂದಿನಿ ಉಳಿವಿಗಾಗಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದು, ನಿರ್ದೇಶಕ ಮಂಸೋರೆ, ಚಿತ್ರಸಾಹಿತಿ ಕವಿರಾಜ್ ಸೇರಿದಂತೆ ಹಲವರು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಇನ್ನೂ ಹಲವರು ಡಾ.ರಾಜ್ ಕುಟುಂಬ ನಂದಿನಿ ಡೈರಿಗೆ ಸಪೋರ್ಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ರೈತರ ಉಳಿವಿಗಾಗಿ ಎಂತಹ ಹೋರಾಟಕ್ಕೂ ಸಿದ್ಧ ಎಂದು ಕನ್ನಡಪರ ಹೋರಾಟಗಾರರು ಕರೆಕೊಟ್ಟಿದ್ದಾರೆ. ಈ ನಡುವೆ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) , ನಂದಿನಿ ಜೊತೆಗಿನ ಸಂಬಂಧವನ್ನು ಹೇಳಿಕೊಂಡಿದ್ದಾರೆ.

    ನಂದಿನಿ ಕುರಿತಾಗಿ ಟ್ವೀಟ್ ಮಾಡಿರುವ ನಾಗತಿಹಳ್ಳಿ, ‘ನಂದಿನಿ ನಮ್ಮವಳು ಅಲ್ಲ, ನನ್ನವಳು. ಆರೋಗ್ಯದಾಯಿನಿ. ನಾನು ಕೆಎಂಎಫ್ ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ

    ನಾಗತಿಹಳ್ಳಿ ಮೇಷ್ಟ್ರು ಶಾಲಾ ದಿನಗಳಲ್ಲಿ ನಂದಿನಿ ಡೈರಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಆರು ವರ್ಷಗಳ ಕಾಲ ಡೈರಿಯಲ್ಲಿ ಅವರು ಕೆಲಸ ಮಾಡಿದ್ದಾರಂತೆ. ಹಾಗಾಗಿ ಅದರೊಂದಿಗೆ ತಮ್ಮದು ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ. ಅದು ಎಲ್ಲರ ಬದುಕನ್ನು ಕಟ್ಟಿಕೊಟ್ಟಿದೆ ಎಂದು ವಿವರಿಸಿದ್ದಾರೆ.

  • KMF ನಷ್ಟದಲ್ಲಿಲ್ಲ, 200 ಕೋಟಿ ಲಾಭದಲ್ಲಿದೆ – ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌

    KMF ನಷ್ಟದಲ್ಲಿಲ್ಲ, 200 ಕೋಟಿ ಲಾಭದಲ್ಲಿದೆ – ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌

    ಬೆಳಗಾವಿ: ರಾಜ್ಯದ ಕೆಎಂಎಫ್ (KMF) ನಷ್ಟದಲ್ಲಿಲ್ಲ, ಈ ವರ್ಷ 200 ಕೋಟಿ ರೂ. ಲಾಭದಲ್ಲಿದೆ. ಹೀಗಾಗಿ ಅಮುಲ್ ಜೊತೆಗೆ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಆಗಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ (Balachandra Jarkiholi) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಹಾಗೂ ರಾಜ್ಯದ 15 ಒಕ್ಕೂಟಗಳು ಈ ವರ್ಷ 22 ಸಾವಿರ ಕೋಟಿ ರೂ. ವಹಿವಾಟು ನಡೆಸಿವೆ. ಅದರಲ್ಲಿ ಕೆಎಂಎಫ್‌ಗೆ ‌100 ಕೋಟಿ ರೂ. ಹಾಗೂ ಇತರೇ 15 ಒಕ್ಕೂಟಗಳ ಲಾಭ 100 ಕೋಟಿ ರೂ. ಸೇರಿ 200 ಕೋಟಿ ಲಾಭದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇವೇಗೌಡರ ತೀರ್ಮಾನವೇ ಅಂತಿಮ, ಅವರು ಹಾಕಿದ ಗೆರೆ ದಾಟಲ್ಲ : ಹೆಚ್.ಡಿ ರೇವಣ್ಣ

    ಯಾವುದೇ ಕಾರಣಕ್ಕೂ ನಂದಿನಿ-ಅಮುಲ್ (Amul) ವಿಲೀನ ಆಗಲ್ಲ. ಬೇಕಾದಷ್ಟು ಕಂಪನಿಗಳು ಬಂದರೂ ನಂದಿನಿಗೆ (Nandini) ಯಾರೂ ಕಾಂಪಿಟೇಷನ್ ಕೊಡಲು ಆಗಲ್ಲ. 10 ಅಮುಲ್ ನಂಥ ಕಂಪನಿಗಳು ಬಂದರೂ ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ನಾವು ಸಿದ್ಧರಿದ್ದೇವೆ. ರಾಜಕೀಯ (Politics) ಕಾರಣಕ್ಕೆ ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಈ ರೀತಿ ಮಾಡುತ್ತಿವೆ. ‌ನಮ್ಮ ಗ್ರಾಹಕರು, ರೈತರು ಹಾಗೂ ಉದ್ಯೋಗಿಗಳ ಹಿತ ಕಾಯಲು ನಾವು ಸಿದ್ಧರಿದ್ದೇವೆ. ಒಂದು ವಾರದಿಂದಲೂ ಗೊಂದಲವಿದೆ. ಈ ಗೊಂದಲ ಏಕೆ ಆಗ್ತಿದೆ ಎಂಬುದು ಗೊತ್ತಾಗ್ತಿಲ್ಲ. ನಾನು ರಾಜ್ಯದ ರೈತರು, ಗ್ರಾಹಕರಿಗೆ ಸಂದೇಶ ನೀಡುತ್ತೇನೆ, ಅಮುಲ್ ಜೊತೆಗೆ ನಂದಿನಿ ವಿಲೀನ ಆಗಲ್ಲ ಎಂದು ಬಾಲಚಂದ್ರ ಹೇಳಿದರು. ಇದನ್ನೂ ಓದಿ: ಆಕಾಶದಲ್ಲಿ ಜಾಗ ಸಿಕ್ಕಿಲ್ಲ, ಸಿಕ್ಕಿದ್ರೆ ಅಲ್ಲೂ ಭ್ರಷ್ಟಚಾರ ಮಾಡುತ್ತಿದ್ದರು: ಸಿ.ಟಿ.ರವಿ ವಿರುದ್ಧ ತಮ್ಮಯ್ಯ ವಾಗ್ದಾಳಿ

  • ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ

    ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ

    ಹಾಸನ: ಗುಜರಾತ್ ಮೂಲದ ಅಮುಲ್ (Amul) ಹಾಲು ಉತ್ಪನ್ನಗಳನ್ನು ವಿರೋಧಿಸಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೋಮವಾರ ನಂದಿನಿ (Nandini) ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಿ ಅದನ್ನು ಹಂಚಿದ್ದರು. ಇದೀಗ ಹಾಲು ಖರೀದಿ ಮಾಡಿ ಹಂಚಿರುವ ಡಿಕೆಶಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಬಿಸಿ ತಟ್ಟಿದೆ.

    ಸೋಮವಾರ ಡಿಕೆ ಶಿವಕುಮಾರ್ ಅವರು ಹಾಸನದ (Hassan) ಮಹಾರಾಜ ಪಾರ್ಕ್ ಬಳಿಯ ನಂದಿನಿ ಡೈರಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಿದ್ದರು. ಸುಮಾರು ಎರಡೂವರೆ ಸಾವಿರ ರೂ. ಮೌಲ್ಯದ ಹಾಲಿನ ಉತ್ಪನ್ನಗಳನ್ನು ಡಿಕೆಶಿ ಖರೀದಿ ಮಾಡಿದ್ದರು. ಇದೀಗ ಸಾರ್ವಜನಿಕ ದೂರು ವಿಭಾಗದ ರಾಜ್ಯ ನೋಡಲ್ ಅಧಿಕಾರಿಯಿಂದ ಹಾಸನ ಜಿಲ್ಲಾ ಎಂಸಿಎಂಸಿ ತಂಡಕ್ಕೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ.

    ಡಿಕೆಶಿ ನಂದಿನಿ ಹಾಲನ್ನು ಹಂಚುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಈ ವೀಡಿಯೋವನ್ನಾಧರಿಸಿ ಪರಿಶೀಲನೆ ಮಾಡಿ ವರದಿ ನೀಡಲು ನಿರ್ದೇಶಿಸಲಾಗಿದೆ. ಹಾಲು ಖರೀದಿ ಮಾಡಿ ಹಂಚಿರುವಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ- IAS ಅಧಿಕಾರಿ ವಿರುದ್ಧ ಪತ್ನಿಯಿಂದ ದೂರು

    ಆದರೆ ವರದಿ ಕೇಳಿರುವ ಪತ್ರದಲ್ಲಿ ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ರಾಜಕೀಯ ಪಕ್ಷ ಎಂದು ಉಲ್ಲೇಖಿಸಿ ಆಯೋಗ ವರದಿ ಕೇಳಿದೆ. ಈ ಬಗ್ಗೆ ಪರಿಶೀಲನೆ ಮಾಡಿ 24 ಗಂಟೆಯೊಳಗೆ ವರದಿ ನೀಡಲು ಸೂಚನೆ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುವುದಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

  • ನಂದಿನಿ ಬೇಕು; ಅಮುಲ್ ಬೇಡ- ಕನ್ನಡ ಪರ ಸಂಘಟನೆಗಳಿಂದ ಭುಗಿಲೆದ್ದ ಆಕ್ರೋಶ

    ನಂದಿನಿ ಬೇಕು; ಅಮುಲ್ ಬೇಡ- ಕನ್ನಡ ಪರ ಸಂಘಟನೆಗಳಿಂದ ಭುಗಿಲೆದ್ದ ಆಕ್ರೋಶ

    ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಉಳಿಸಿ (#SaveNandini) ಅಭಿಯಾನ ಜೋರಾಗುತ್ತಿದೆ. ಇದರ ಮಧ್ಯೆ ಅಮುಲ್ (Amul) ಆನ್‍ಲೈನ್‍ನಲ್ಲಿ ವಿಸ್ತರಣೆಗೊಳ್ಳುತ್ತಿದೆ. ಅತ್ತ ಕೆಎಂಎಫ್ (KMF)- ಅಮುಲ್ ಹೆಸರಲ್ಲಿ ಮತ್ತೆ ರಾಜಕೀಯ ಜಟಾಪಟಿ ಜೋರಾಗುತ್ತಿದೆ.

    ಬೆಂಗಳೂರಲ್ಲಿ ಅಮುಲ್ ವಿರುದ್ಧ ಧಿಕ್ಕಾರದ ಕೂಗು ಮೊಳಗಿದೆ. ಅಮುಲ್ ಉತ್ಪನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು. ಅಮುಲ್ ಚೀಸ್, ಅಮುಲ್ ಬೆಣ್ಣೆ, ತುಪ್ಪ ಹೀಗೆ ಅಮುಲ್ ಪ್ರಾಡಕ್ಟ್ ಗಳನ್ನು ನೆಲಕ್ಕೆಸೆದು ಆಕ್ರೋಶ ಹೊರಹಾಕಿದ್ರು. ಮಗದೊಂದು ಕಡೆಗೆ ಅಮುಲ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಅಮುಲ್‍ಗೆ ವಿರೋಧ – ನಂದಿನಿ ಉತ್ಪನ್ನ ಖರೀದಿಸಿ ಹಂಚಿದ ಡಿಕೆಶಿ

    ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‍ (Mysuru Bank Circle) ನಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಅಮುಲ್ ಉತ್ಪನ್ನ ಆನ್‍ಲೈನ್ ಮಾರಾಟ ಖಂಡಿಸಿದೆ. ಶೀಘ್ರದಲ್ಲಿಯೇ ಅಮುಲ್ ಫ್ಯಾಕ್ಟರಿ, ಅಮುಲ್ ಹಾಲಿನ ಮಾರಾಟ ಘಟಕಕ್ಕೆ ದಾಳಿ ಮಾಡೋದಾಗಿ ಕನ್ನಡ ಪರ ಸಂಘಟನೆ ಎಚ್ಚರಿಕೆ ನೀಡಿದೆ.

    ನಂದಿನಿ (Nandini) ಯನ್ನು ಮುಚ್ಚುವ ಹುನ್ನಾರ.. ರಾಜಕೀಯ ಷಡ್ಯಂತ್ರ ಅಂತಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಕೊನೆಗೆ ಅಮುಲ್ ಹೆಸರು ಬೋರ್ಡ್ ಇರುವ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸರು ಪ್ರತಿಭಟನೆಕಾರರನ್ನು ವಶಕ್ಕೆ ಪಡೆದುಕೊಂಡ್ರು.  ಇದನ್ನೂ ಓದಿ: ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

    ಹೆಚ್‍ಡಿಕೆ ವ್ಯಂಗ್ಯ: ಬಿಜೆಪಿ ಅವರಿಗೆ ಅಮುಲ್ ಪರಿಣಾಮದ ಮಾಹಿತಿ ಇಲ್ಲ. ಬಿಜೆಪಿ ಅವರ ಕಣ್ಣಿಗೆ ಮೋದಿ ಬಿಟ್ಟರೆ ಏನೂ ಕಾಣಲ್ಲ ಅಂತ ಹೆಚ್‍ಡಿಕೆ (HD Kumaraswamy) ಟೀಕಿಸಿದ್ದಾರೆ. ಈ ವಿಚಾರದಲ್ಲಿ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳದೆ ಇದ್ರೆ ನಂದಿನಿ ಮುಳುಗಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಅತ್ತ ಸಿಎಂ ಬೊಮ್ಮಾಯಿ (Basavaraj Bommai) ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರಾಂಡ್ ನಂಬರ್ 1 ಆಗಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಂದಿನಿ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದ್ದು, ಅಮೂಲ್ ಬಗ್ಗೆ ಯಾವುದೇ ಭಯ ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಅಮುಲ್ ಕಿಡಿ ಜ್ವಾಲೆಯಾಗಿ ಹಬ್ಬಿದೆ. ಕನ್ನಡಿಗರ ಆಕ್ರೋಶ ಸ್ಫೋಟಗೊಂಡಿದೆ. ನಂದಿನಿ ಉಳಿಸಿ ಅಮುಲ್ ತೊಲಗಿಸಿ ಕ್ಯಾಂಪೇನ್ ಜೋರಾಗಿ ಸದ್ದು ಮಾಡುತ್ತಿದೆ.

  • ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು

    ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು

    ಬೆಂಗಳೂರು: ಕಾಡಿಗೆ ಸಫಾರಿಗೆಂದು (Safari) ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು. ನಾಡಿಗೆ ಬಂದಾಗ ನಾಡಿನ ಡ್ರೆಸ್‌ನಲ್ಲಿ ಇರಬೇಕು. ಆದರೆ ಕುಮಾರಸ್ವಾಮಿ (H.D.Kumaraswamy) ಅವರಿಗೆ ಅದು ಎರಡೂ ಹಾಕಲು ಬರುವುದಿಲ್ಲವಲ್ಲ, ಏನುಮಾಡುವುದು ಎಂದು ಮೋದಿ (Narendra Modi) ಬಂಡೀಪುರ (Bandipur) ಅರಣ್ಯ ಭೇಟಿಗೆ ಕುಮಾರಸ್ವಾಮಿ ವ್ಯಂಗ್ಯ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ (C.N.Ashwath Narayan) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಯಾವ ಯಾವ ಜಾಗಕ್ಕೆ ಯಾವ ಯಾವ ವೇಷಗಳನ್ನು ಹಾಕಬೇಕೋ ಅದಕ್ಕೆ ಸೂಕ್ತವಾದ ಬಟ್ಟೆಗಳನ್ನು ಹಾಕುತ್ತಾರೆ. ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನರಿಗೆ ನಾಯಕ ಅವರು. ಅಂತಹ ರೋಲ್ ಮಾಡೆಲ್‌ಗೆ (Roll Model) ರೋಲ್ ಮಾಡೆಲ್ ತರಹ ಇರಬೇಡಿ ಸ್ವಾಮಿ ಎಂದು ಹೇಳಲಾಗುವುದಿಲ್ಲ ಎಂದರು. ಇದನ್ನು ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ 

    ಕೋವಿಡ್ (Covid) ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು? ಕಾಂಗ್ರೆಸ್‌ನವರು (Congress) ಲಸಿಕೆ ತೆಗೆದುಕೊಳ್ಳಬೇಡಿ ಎಂದಿದ್ದರು. ಇಡೀ ವಿಶ್ವದಲ್ಲಿ ಭಾರತ ಮಾದರಿಯಾಗಿ ಕೋವಿಡ್ ನಿರ್ವಹಣೆ ಮಾಡಿದೆ. ಸುಮ್ಮನೆ ಪಾಪ ಏನೋ ಹೇಳಬೇಕು ಎಂದು ಹೇಳುತ್ತಿದ್ದಾರೆ ಅಷ್ಟೇ. ಆದರೆ ಜನರು ಬುದ್ದಿವಂತರಿದ್ದಾರೆ ಎಂಬುದು ಗೊತ್ತಿರಲಿ. ಇಂತಹ ಹೇಳಿಕೆಗಳಿಂದ ಅವರು ಸೆಲ್ಫ್ ವಿಕೆಟ್ ಹೊಡೆದುಕೊಳ್ಳುತ್ತಿದ್ದಾರೆ. ಮೋದಿಯವರ ಬಗ್ಗೆ ಕಿಡಿಕಾರಿದರೆ ಅದು ಇವರಿಗೆ ರಿವರ್ಸ್ ಗೇರ್ ಆಗುತ್ತದೆ ಎಂದು ಹರಿಹಾಯ್ದರು. ಇದನ್ನು ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ 

     

    ನಂದಿನಿ (Nandini) ಉಳಿಸಿ ಅಭಿಯಾನ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮ ನಂದಿನಿಗೆ ಯಾರೂ ಸರಿಸಾಟಿಯಲ್ಲ. ನಂದಿನಿಯ ಗುಣಮಟ್ಟಕ್ಕಾಗಲಿ, ಬೆಲೆಯಲ್ಲಾಗಲಿ, ವ್ಯವಸ್ಥೆಯಲ್ಲಾಗಲಿ ಯಾವುದೂ ಸರಿಸಾಟಿಯಲ್ಲ. ಇದನ್ನು ರಾಜ್ಯಸರ್ಕಾರವೇ ಸಂಪೂರ್ಣವಾಗಿ ಕೈಗೆತ್ತಿಕೊಂಡು ನಂದಿನಿಗೆ ಎಲ್ಲಾ ರೀತಿಯಾದ ಸಹಕಾರವನ್ನು ನೀಡುತ್ತಿದೆ. ನಂದಿನಿಗೆ ಜಮೀನು ಹಾಗೂ ಹಣ ನೀಡುವ ವಿಚಾರದಲ್ಲಿ ರಾಜ್ಯಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಒಂದು ಲೀಟರ್ ಹಾಲಿಗೆ 5 ರೂ. ಸಬ್ಸಿಡಿಯನ್ನೂ ಕೊಟ್ಟಿದೆ. ಈ ರೀತಿಯಾಗಿ ನಮ್ಮ ರಾಜ್ಯದ ಹಾಲು ಉತ್ಪಾದಕರು ಮತ್ತು ರೈತರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದೇವೆ. ನಮ್ಮ ಅಭಿಮಾನದ ಸಂಕೇತ ನಂದಿನಿ. ಆದ್ದರಿಂದ ನಂದಿನಿಗೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಹೀಗಾಗಿ ಎಂತಹ ಸ್ಪರ್ಧೆ ಬಂದರೂ ನಮ್ಮ ಹತ್ತಿರ ಯಾರೂ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಮಾಜಿ, ಹಾಲಿ ಶಾಸಕರ ಕೊನೆಯ ಕಸರತ್ತು  

    ಬಿಜೆಪಿ (BJP) ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಬಿಜೆಪಿಯ ಟಿಕೆಟ್ ಪ್ರಕಟವಾಗುವ ಸಾಧ್ಯತೆಯಿದೆ. ನಾಳೆ ಮೊದಲ ಲಿಸ್ಟ್ ಬಿಡುಗಡೆಯಾಗಲಿದ್ದು, ಎರಡನೇ ಲಿಸ್ಟ್ 13ನೇ ದಿನಾಂಕದಂದು ಬಿಡುಗಡೆಯಾಗಲಿದೆ ಎಂದರು.

    ಹೊಸಬರಿಗೆ ಟಿಕೆಟ್ ಸಿಗಲಿದೆಯಾ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಉತ್ತರಿಸಿದರು. ಇದನ್ನು ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ