Tag: Nandini Milk Price

  • ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ: ಭೀಮಾನಾಯ್ಕ್

    ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ: ಭೀಮಾನಾಯ್ಕ್

    ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರೊಂದಿಗೆ ಈಗಾಗಲೇ ಬಸ್‌ ಟಿಕೆಟ್‌ ದರ, ಮೆಟ್ರೋ ಪ್ರಯಾಣ ದರ ಏರಿಕೆ ಕಂಡಿದೆ. ಇನ್ನೂ ಹಾಲಿನ ದರ ಸಹ ಏರಿಕೆಯಾಗುವ (Nandini Milk Price) ಸೂಚನೆಯನ್ನು ಕೆಎಂಎಫ್‌ (KMF) ಅಧ್ಯಕ್ಷ ಭೀಮಾನಾಯ್ಕ್ (Bheema Naik) ನೀಡಿದ್ದಾರೆ.

    ಒಂದು ವಾರದಿಂದ ಹತ್ತು ದಿನಗಳಲ್ಲಿ ಹಾಲಿನ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಹಾಲಿನ ದರ 5 ರೂ. ಏರಿಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

    ಪರಿಷ್ಕೃತ ಹಾಲಿನ ದರ ಹೆಚ್ಚಳ ಮಾಡುವಾಗಲೇ ಹೆಚ್ಚುವರಿ ಹಾಲಿನ ದರ ಕಡಿತ ಜೊತೆಗೆ 50 ML ಹಾಲು ಕಡಿತ ಮಾಡಲಾಗುತ್ತದೆ. ಹೆಚ್ಚುವರಿ ಹಾಲಿನ ದರ 2 ರೂ. ಇದ್ದು, ಅದು ಕಡಿತವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚೆಗೆ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ಈ ಬಗ್ಗೆ ಮಾತನಾಡಿ, ಹಾಲು ಉತ್ಪಾದಕರು ಪ್ರೋತ್ಸಾಹಧನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ. ಪ್ರತಿ ಲೀಟರ್‌ಗೆ 5 ರೂ. ಏರಿಕೆಗೆ ಒತ್ತಡವಿದೆ. 2-3 ರೂ. ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ ಎಂದಿದ್ದರು.

  • ನಂದಿನಿ ಹಾಲಿನ ದರ ಏರಿಕೆ ಬಗ್ಗೆ ರೈತರ ಡಿಮ್ಯಾಂಡ್ ಇದೆ: ಸಚಿವ ವೆಂಕಟೇಶ್

    ನಂದಿನಿ ಹಾಲಿನ ದರ ಏರಿಕೆ ಬಗ್ಗೆ ರೈತರ ಡಿಮ್ಯಾಂಡ್ ಇದೆ: ಸಚಿವ ವೆಂಕಟೇಶ್

    ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ರೈತರ ಡಿಮ್ಯಾಂಡ್ ಇದೆ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ತಿಳಿಸಿದರು.

    ದರ ಎಷ್ಟು ಜಾಸ್ತಿ ಮಾಡ್ತೀವಿ ಅನ್ನೋದರ ಬಗ್ಗೆ ನಾವು ನಿರ್ಧಾರ ಮಾಡಿಲ್ಲ. ದರ ಏರಿಕೆ ಮಾಡ್ತೇವೆ ಎಂದು ಹೇಳಿದರು.

    ಸಿಎಂ ಜೊತೆ ಸಭೆಗೆ ದಿನಾಂಕ ನಿಗದಿಯಾಗಿಲ್ಲ. ನಾವು ಒಕ್ಕೂಟ ಈಗಾಗಲೇ ದರ ಏರಿಕೆ ಎಷ್ಟಾಗಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಬೇಕು. ಮುಂದಿನ ದಿನದಲ್ಲಿ ಮಾಡ್ತೀವಿ ಎಂದರು.

  • ಹಾಲಿನ ಪ್ಯಾಕೇಟ್‌ನಲ್ಲಿ ಹೆಚ್ಚಳ ಆಗಿರೋ 50ml ಹಾಲನ್ನು ಗ್ರಾಹಕರು ಖರೀದಿ ಮಾಡಲೇಬೇಕು: ಸಿಎಂ

    ಹಾಲಿನ ಪ್ಯಾಕೇಟ್‌ನಲ್ಲಿ ಹೆಚ್ಚಳ ಆಗಿರೋ 50ml ಹಾಲನ್ನು ಗ್ರಾಹಕರು ಖರೀದಿ ಮಾಡಲೇಬೇಕು: ಸಿಎಂ

    ಬೆಂಗಳೂರು: ಹಾಲಿನ ದರ (Nandini Milk Price) ಹೆಚ್ಚಾಗಿಲ್ಲ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ  (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ 90 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಇತ್ತು. ಈ ವರ್ಷ 99 ಲಕ್ಷ ಲೀಟರ್ ಆಗಿದೆ. ಇದರಿಂದಾಗಿ ರೈತರಿಂದ ಹೆಚ್ಚುವರಿ ಹಾಲು ಬೇಡ ಎನ್ನಲು ಸಾಧ್ಯವಿಲ್ಲ. ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು. ಇದೇ ಕಾರಣಕ್ಕೆ ಅರ್ಧ ಲೀಟರ್ ಪ್ಯಾಕ್‍ನಲ್ಲಿ 50 ಎಂಎಲ್ ಹೆಚ್ಚಿಗೆ ಕೊಟ್ಟಿದ್ದೇವೆ. 50 ಎಂಎಲ್ ಹಾಲಿಗೆ 2 ರೂ. 10 ಪೈಸೆ ಆಗುತ್ತದೆ. ಅದಕ್ಕೆ 2 ರೂ. ಮಾಡಿದ್ದೇವೆ. ಇದು ಹೇಗೆ ಬೆಲೆ ಏರಿಕೆಯಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳ- ಹಳೆಯ ಪ್ಯಾಕೆಟ್‌ಗೂ ಹೊಸ ಬೆಲೆ, ಗ್ರಾಹಕರ ಆಕ್ರೋಶ

    ಬಿಜೆಪಿಯವರು ಹೇಳ್ತಾರೆ ಎಂದು ನೀವು, ಬೆಲೆ ಏರಿಕೆ ಆಗೋಯ್ತು ಎಂದು ಬರೆಯುತ್ತೀರಾ? ಹೊಟೇಲ್‍ನವರು ಕಾಫಿ, ಟೀ ಮಾಡೋರು ಬೆಲೆ ಹೆಚ್ಚಳ ಮಾಡಿದ್ದಾರಾ? ಕಾಫಿ, ಟೀ ಬೆಲೆ ಹೆಚ್ಚಳ ಮಾಡಲು ಆಗುವುದಿಲ್ಲ. ಹಾಲಿನ ದರ ಹೆಚ್ಚಾಗಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನೂ 550 ಎಂಎಲ್ ಹಾಲು ತೆಗೆದುಕೊಳ್ಳಲೇ ಬೇಕಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಇನ್ನೇನು ಚೆಲ್ಲಲು ಆಗತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.

    ರಾಹುಲ್ ಗಾಂಧಿ ವಿಪಕ್ಷ ನಾಯಕರಾದ ವಿಚಾರಕ್ಕೆ, ವಕಿರ್ಂಗ್ ಕಮಿಟಿಯಲ್ಲಿ ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಬೇಕು ಎಂದು ಸಲಹೆ ನೀಡಿದ್ದೆ. ಕೇಂದ್ರ ಸರ್ಕಾರ ಹಾಗೂ ಮೋದಿಯನ್ನ ಎದುರಿಸಲು ನೀವೇ ಸರಿ ಎಂದು ಒತ್ತಾಯ ಮಾಡಿದ್ದೆ. ರಾಹುಲ್ ಗಾಂಧಿ ಜವಾಬ್ದಾರಿಯುತ ನಾಯಕ. ದೇಶದ ಹಿತ ದೃಷ್ಟಿಯಿಂದ ಬಹಳ ಒಳ್ಳೆಯ ಕೆಲಸ ಮಾಡ್ತಾರೆ. ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಮೂರು ಡಿಸಿಎಂ ಹುದ್ದೆ ವಿಚಾರವಾಗಿ, ಇದರಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

  • ಕಳೆದ ವರ್ಷ 3 ರೂ. ಈಗ 2 ರೂ. ಏರಿಕೆ – ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಕೆಂಡಾಮಂಡಲ

    ಕಳೆದ ವರ್ಷ 3 ರೂ. ಈಗ 2 ರೂ. ಏರಿಕೆ – ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಕೆಂಡಾಮಂಡಲ

    – ಜನರ ಮನೆಯಲ್ಲಿ ಕ್ಷೀರ ಉಕ್ಕೋದನ್ನ ಕ್ಷೀಣಿಸಲು ಹಾಲು ದರ ಉಕ್ಕಿಸಿದೆ – ವಿಜಯೇಂದ್ರ

    ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ಪ್ರತಿ ಲೀಟರ್ ಪ್ಯಾಕೆಟ್ ಹಾಲಿನ ದರವನ್ನು 2.10 ರೂ. ನಷ್ಟು ಹೆಚ್ಚಿಸಿದೆ (Nandini Milk Price Hike). ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು (BJP Leaders) ಮುಗಿಬಿದ್ದಿದ್ದಾರೆ. ತುರ್ತು ಪರಿಸ್ಥಿತಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ ಜನರಿಗೆ ಬೆಲೆ ಏರಿಕೆ ಕೊಡುಗೆ ನೀಡಿದ್ದು, ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ತಮ್ಮ ಸೋಷಿಯಲ್‌ ಮೀಡಿಯಾ X ಖಾತೆಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

    ಬಿ.ವೈ ವಿಜಯೇಂದ್ರ (BY Vijayendra)
    ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ (Congress GovernMent) ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ. ಇತ್ತ ಬಡವರಿಗೂ ಉಪಕಾರಿಯಾಗಲ್ಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ, ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂ 10 ಪೈಸೆ ಹೆಚ್ಚಳ ಮಾಡಲಾಗಿದೆ. ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ.

    ಆರ್‌. ಅಶೋಕ್‌ (R Ashoka)
    ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ನಂದಿನಿ ಹಾಲಿನ ದರವನ್ನ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನ ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ ನಲ್ಲಿ 3 ರೂ. ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ.

    ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ. ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ.

    ಬಿಜೆಪಿ ಕರ್ನಾಟಕ (BJP Karnataka):
    ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡದೇ ಭಂಡತನ ತೋರಿದ ಕಾಂಗ್ರೆಸ್‌ ಸರ್ಕಾರ, ಇದೀಗ ಏಕಾಏಕಿ ಹಾಲಿನ ದರವನ್ನು ಪ್ರತಿ ಲೀ.ಗೆ 2.10 ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ. ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ.

    ಇತ್ತ ಬಡವರಿಗೂ ಉಪಕಾರಿಯಾಗಲ್ಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ, ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2.10 ರೂ. ಪೈಸೆ ಹೆಚ್ಚಳ ಮಾಡಲಾಗಿದೆ. ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ.

    ಸುನಿಲ್‌ ಕುಮಾರ್‌ (Sunil Kumar):
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನಕ್ಕೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರವಷ್ಟೇ ಪೆಟ್ರೋಲ್, ಡೀಸೈಲ್ ಉತ್ಪನ್ನಗಳ ಸೆಸ್ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ ಈಗ ಹಾಲಿನ ಬೆಲೆ ಏರಿಕೆ ಮಾಡಿದೆ.

    ಜೆಡಿಎಸ್‌:
    ತುರ್ತು ಪರಿಸ್ಥಿತಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಬಂಪರ್ ಕೊಡುಗೆ ಕೊಟ್ಟಿದೆ. ಈ ದರ ಏರಿಕೆ ಲಾಭ ಹಾಲು ಉತ್ಪಾದಕರಿಗೆ ಸಿಗಲಿದೆಯೋ ಅಥವಾ ಕೆಎಂಎಫ್ ಜೋಳಿಗೆ ಹೋಗಲಿದೆಯೋ? ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ.

  • ನಂದಿನಿ ಹಾಲಿನ ದರ ಹೆಚ್ಚಳ – ಕಾಫಿ, ಟೀ ಬೆಲೆ ಏರಿಕೆ ಬಗ್ಗೆ ಹೋಟೆಲ್‌ ಮಾಲೀಕರ ಸಂಘ ಹೇಳಿದ್ದೇನು?

    ನಂದಿನಿ ಹಾಲಿನ ದರ ಹೆಚ್ಚಳ – ಕಾಫಿ, ಟೀ ಬೆಲೆ ಏರಿಕೆ ಬಗ್ಗೆ ಹೋಟೆಲ್‌ ಮಾಲೀಕರ ಸಂಘ ಹೇಳಿದ್ದೇನು?

    ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದ್ದು, ಗ್ರಾಹಕರಿಗೆ ಶಾಕ್‌ ನೀಡಿದೆ. ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರವನ್ನು 2 ರೂ. ನಷ್ಟು ಹೆಚ್ಚಿದೆ. ಇನ್ನೂ ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ (Bengaluru Hotel Owners Association) ಅಧ್ಯಕ್ಷ ಪಿ.ಸಿ ರಾವ್ ಮಾತನಾಡಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ಕಾಫಿ ಪುಡಿ, ಟೀ ಪುಡಿ ದರ ಬೆಲೆ ಜಾಸ್ತಿ ಇದೆ. ಈಗ ಹಾಲಿನ ಬೆಲೆಯೂ ಜಾಸ್ತಿಯಾಗಿದೆ. ಆದ್ದರಿಂದ ಹೋಟೆಲ್‌ ಮಾಲೀಕರು ಕಾಫಿ, ಟೀ ಬೆಲೆ ಹೆಚ್ಚಿಸುವುದು (Coffee, Tea Hike) ಅನಿವಾರ್ಯ ಎನ್ನುತ್ತಿದ್ದಾರೆ. ಕಾಫಿ, ಟೀ ಬೆಲೆ 10 ರೂ. ಇದ್ದರೆ, 12 ರೂ.ಗಳಿಗೆ ಹೆಚ್ಚಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸಂಘ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬೆಲೆ ಏರಿಕೆ ಮಾಡುವುದು ಹೋಟೆಲ್ ಮಾಲೀಕರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಪಿ.ಸಿ ರಾವ್‌ ಪ್ರತಿಕ್ರಿಯಿಸಿದ್ದಾರೆ.

    ಕಬಾಬ್‌ಗೆ ಕೃತಕ ಬಣ್ಣ ನಿಷೇಧ ಸ್ವಾಗತಾರ್ಹ:
    ಇನ್ನೂ ಕಾಟನ್‌ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಬಳಿಕ ಕಬಾಬ್‌ ಪದಾರ್ಥಗಳಿಗೆ ಕೃತಕ ಬಣ್ಣ ಬಳಕೆ ನಿಷೇಧಿಸಿರುವ ಆರೋಗ್ಯ ಇಲಾಖೆ ನಿರ್ಧಾರವನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಹೋಟೆಲ್ ಮಾಲೀಕರೂ ಇದನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಘ ಹೇಳಿದೆ.

    ಹಾಲಿನ ದರ ಯಾವುದಕ್ಕೆ ಎಷ್ಟು ಹೆಚ್ಚಳ:
    ಸದ್ಯ ಕೆಎಂಎಫ್‌ ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರ ಹೆಚ್ಚಿಸಿದ್ದು, ಇದರೊಂದಿಗೆ ಪ್ಯಾಕೆಟ್‌ ಹಾಲಿನ ಪ್ರಮಾಣವನ್ನು 50 ಎಂಎಲ್‌ ಹೆಚ್ಚುವರಿ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ. ಪರಿಷ್ಕೃತ ದರ ಜೂನ್‌ 26ರಿಂದಲೇ ಜಾರಿಯಾಗಲಿದೆ.

    ಯಾವುದಕ್ಕೆ ಎಷ್ಟು ದರ ಹೆಚ್ಚಳ?
    ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 44 ರೂ.

    ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
    550 ಎಂಎಲ್‌ – 24 ರೂ.
    1050 ಎಂಎಲ್‌ – 45 ರೂ.

    ಹೋಮೋಜಿನೈಸ್ಡ್‌ ಹಸುವಿನ ಹಾಲು
    550 ಎಂಎಲ್‌ – 26 ರೂ.
    1050 ಎಂಎಲ್‌ – 48 ರೂ.

    ಸ್ಪೆಷಲ್‌ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 50 ರೂ.

    ಸಮೃದ್ಧಿ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 53 ರೂ.

    ಹೋಮೋಜಿನೈಸ್ಡ್‌ ಶುಭಂ ಹಾಲು
    550 ಎಂಎಲ್‌ – 27 ರೂ.
    1050 ಎಂಎಲ್‌ – 51 ರೂ.

    ಸತೃಪ್ತಿ ಹಾಲು
    550 ಎಂಎಲ್‌ – 30 ರೂ.
    1050 ಎಂಎಲ್‌ – 57 ರೂ.

    ಶುಭಂ ಗೋಲ್ಡ್‌ ಹಾಲು
    550 ಎಂಎಲ್‌ – 28 ರೂ.
    1050 ಎಂಎಲ್‌ – 51 ರೂ.

    ಡಬಲ್‌ ಟೋನ್ಡ್‌ ಹಾಲು
    550 ಎಂಎಲ್‌ – 23 ರೂ.
    1050 ಎಂಎಲ್‌ – 43 ರೂ.