Tag: Nandini Dosa

  • ಮೂರೇ ದಿನದಲ್ಲಿ ದಾಖಲೆಯ ಸೇಲ್ ಆದ ನಂದಿನಿ ದೋಸೆ, ಇಡ್ಲಿ ಹಿಟ್ಟು

    ಮೂರೇ ದಿನದಲ್ಲಿ ದಾಖಲೆಯ ಸೇಲ್ ಆದ ನಂದಿನಿ ದೋಸೆ, ಇಡ್ಲಿ ಹಿಟ್ಟು

    ಬೆಂಗಳೂರು: ನಂದಿನಿ ದೋಸೆ ಇಡ್ಲಿ ಹಿಟ್ಟಿಗೆ (Nandini Dosa, Idli Batter) ಬೆಂಗಳೂರಿಗರು (Bengaluru) ಫಿದಾ ಆಗಿದ್ದಾರೆ. ಗ್ರಾಹಕರು ಭರ್ಜರಿ ರೆಸ್ಪಾನ್ಸ್ ಮಾಡುತ್ತಿದ್ದು, ಮೂರೇ ದಿನದಲ್ಲಿ ದಾಖಲೆಯ ಸೇಲ್ ಆಗಿದೆ.

    ಕಳೆದ ಎರಡು ಮೂರು ದಿನದಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ, ದೋಸೆ ಹಿಟ್ಟು ಸೇಲ್ ಆಗಿದೆ. 5% ವೇ ಪ್ರೋಟೀನ್ ಇರೋದ್ರಿಂದ ಜನ ಖುಷಿಯಿಂದ ಖರೀದಿಗೆ ಬರ್ತಿದ್ದಾರೆ. ಒಮ್ಮೆ ಖರೀದಿಸಿದ ಗ್ರಾಹಕರು ಮತ್ತೆ ಬಂದು ಕೇಳಿ ಖರೀದಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಹಿಟ್ಟು ಸರಬರಾಜು ಮಾಡಲು ಕೆಎಂಎಫ್ (KMF) ಮುಂದಾಗಿದೆ ಎನ್ನಲಾಗಿದೆ.

    ಇಡ್ಲಿ ಹಿಟ್ಟು ವಿತರಣೆಗೆ ಈಗ 5-6 ವಾಹನಗಳು ಇವೆ. ಶೀಘ್ರದಲ್ಲಿಯೇ 18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದ್ದು ಜನರ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೂ ಚಿಂತನೆ ನಡೆಸಲಾಗಿದೆ.‌

    ಹಾಲು ಮೊಸರಿನಂತೆ ನಂದಿನಿ ದೋಸೆ ಇಡ್ಲಿ, ಹಿಟ್ಟು ಕೂಡ ಜನರ ಫೇವರಿಟ್ ಆಗುತ್ತಿದೆ. ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವುದರಿಂದ ಬೇರೆ ಜಿಲ್ಲೆಗಳಿಗೂ ಶೀಘ್ರದಲ್ಲಿಯೇ ವಿಸ್ತರಿಸಲು ಕೆಎಂಎಫ್ ನಿರ್ಧರಿಸಿದೆ.

  • ಬೆಂಗಳೂರು| ನಂದಿನಿ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

    ಬೆಂಗಳೂರು| ನಂದಿನಿ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

    ಬೆಂಗಳೂರು: ಇನ್ಮುಂದೆ ಗ್ರಾಹಕರಿಗೆ ‘ನಂದಿನಿ’ ಹಾಲಷ್ಟೇ ಅಲ್ಲ, ‘ನಂದಿನಿ ಇಡ್ಲಿ ಮತ್ತು ದೋಸೆ’ (Nandini Idli, Dosa Batter) ಹಿಟ್ಟು ಕೂಡ ಸಿಗಲಿದೆ. ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಸಿಎಂ ಸಿದ್ದರಾಮಯ್ಯ (Siddaramaiah) ಬುಧವಾರ ಬಿಡುಗಡೆ ಮಾಡಿದರು.

    ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನಂದಿನಿ’ ವತಿಯಿಂದ ಪ್ರಥಮ ಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ನಂದಿನಿ ವೇ ಪ್ರೊಟೀನ್‌ಯುಕ್ತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಎರಡು ತಿಂಗಳಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಕಾರ್ಗೋ ವಿಮಾನಗಳ ಹಾರಾಟ : ಬಿ.ವೈ ರಾಘವೇಂದ್ರ

    ಸಚಿವರಾದ ವೆಂಕಟೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೆಎಂಎಫ್‌ ಬಿಡುಗಡೆ ಮಾಡಿರುವ ಇಡ್ಲಿ ಮತ್ತು ದೋಸೆ ಹಿಟ್ಟಿನಲ್ಲಿ 5% ರಷ್ಟು ಪ್ರೊಟೀನ್‌ ಅಂಶವನ್ನು ಮಿಶ್ರಣ ಮಾಡಲಾಗಿದೆ. 450 ಗ್ರಾಂ ತೂಕದ ಪ್ಯಾಕೆಟ್‌ಗೆ 40 ರೂ. ಹಾಗೂ 900 ಗ್ರಾಂ ತೂಕದ ಪ್ಯಾಕೆಟ್‌ಗೆ 80 ರೂ. ದರ ನಿಗದಿಪಡಿಸಲಾಗಿದೆ.

    ಬೆಂಗಳೂರು ನಗರದಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಪ್ಯಾಕೆಟ್‌ಗಳಲ್ಲಿ ಪ್ರಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ವಾಜಪೇಯಿ ಜನ್ಮದಿನಕ್ಕೆ ಮೋದಿ ಗಿಫ್ಟ್ – ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಶಿಲಾನ್ಯಾಸ