Tag: Nandini

  • KMF ನಂದಿನಿಯ ಹೊಸ ದಾಖಲೆ – ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ಸಿಹಿಉತ್ಪನ್ನಗಳ ಮಾರಾಟ

    KMF ನಂದಿನಿಯ ಹೊಸ ದಾಖಲೆ – ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ಸಿಹಿಉತ್ಪನ್ನಗಳ ಮಾರಾಟ

    ಬೆಂಗಳೂರು: ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಕೆಎಂಎಫ್‌ನ ನಂದಿನಿ (KMF Nandini) ಬ್ರ್ಯಾಂಡ್‌ ಹೊಸ ದಾಖಲೆ ನಿರ್ಮಿಸಿದೆ ಎಂದು ಸಚಿವ ಕೆ.ವೆಂಕಟೇಶ್ (K Venkatesh) ತಿಳಿಸಿದರು.

    ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿನಿಸುಗಳಿಗೆ ರಾಜ್ಯದಾದ್ಯಂತ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಈ ಹಬ್ಬದ ಅವಧಿಯಲ್ಲಿ ನಂದಿನಿ ಬ್ರ್ಯಾಂಡ್‌ನಡಿಯಲ್ಲಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಮುಂಚಿತ ಸಿದ್ಧತೆ ಕೈಗೊಂಡಿತ್ತು. 2025ರ ಹಬ್ಬದ ಅವಧಿಗೆ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗಿದಪಡಿಸಲಾಯಿತು. ಸದರಿ ಗುರಿಯನ್ನು ಮೀರಿ ಈ ವರ್ಷ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ 46.00 ಕೋಟಿ ರೂ.ಗಳ ದಾಖಲೆಯ ವಹಿವಾಟು ಸಾಧಿಸುವ ಮೂಲಕ ಒಂದು ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ.38ರಷ್ಟು ವಹಿವಾಟು ಪ್ರಗತಿಯಾಗಿದ್ದು, ಇದು ಕೆ.ಎಂ.ಎಫ್ ಇತಿಹಾಸದಲ್ಲಿಯೇ ಸರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಬಲಪಂಥೀಯ ನಾಯಕಿ ಸನೆ ತಾಕೈಚಿ ಆಯ್ಕೆ

    ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (KMF) ಸಂಸ್ಥೆಯು ಕಳೆದ ಐದು ದಶಕಗಳಿಂದ ರಾಜ್ಯದ ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪ್ರತಿದಿನ ರಾಜ್ಯದ ವಿವಿಧ ಹೈನುಗಾರ ರೈತರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್ ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದರು.

    ನಂದಿನಿ ಬ್ರ್ಯಾಂಡ್‌ನಡಿಯಲ್ಲಿ ಹಾಲಿನೊಂದಿಗೆ ತುಪ್ಪ ಬೆಣ್ಣೆ, ಪನೀರ್, ಸಿಹಿ ತಿನಿಸುಗಳು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 175ಕ್ಕೂ ಅಧಿಕ ಬಗೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಾಜ್ಯ ನೆರೆರಾಜ್ಯಗಳು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ದೆಹಲಿ, ಅಸ್ಸಾಂ ಮತ್ತು ಕೆಲ ಹೊರದೇಶಗಳ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯು “ನಂದಿನಿ” ಬ್ರ್ಯಾಂಡ್‌ ಅನ್ನು ಗ್ರಾಹಕರ ವಿಶ್ವಾಸದ ಪ್ರತೀಕವನ್ನಾಗಿ ಮಾಡಿದೆ ಎಂದು ತಿಳಿಸಿದರು.

    ಈ ಸಾಧನೆ “ನಂದಿನಿ” ಬ್ರ್ಯಾಂಡ್‌ನ ಗುಣಮಟ್ಟ ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಹಣ ತರಲ್ಲ – ಸಿಎಂ

  • ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ

    ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ

    – ನಂದಿನಿ ತುಪ್ಪ, ಬೆಣ್ಣೆ, ಚೀಸ್‌, ಕುರುಕು ತಿಂಡಿ ಬೆಲೆ ಇಳಿಕೆ

    ಬೆಂಗಳೂರು: ಕೆಎಂಎಫ್ (KMF) ಗ್ರಾಹಕರಿಗೆ ನವರಾತ್ರಿ ಸಿಹಿಸುದ್ದಿ ಸಿಕ್ಕಿದೆ. ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ (Nandini Products) ದರ ಇಳಿಕೆಯಾಗಲಿದ್ದು, ಉತ್ಪನ್ನಗಳ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

    ನೂತನ ಜಿಎಸ್‌ಟಿ ಇಳಿಕೆಯ ಹಿನ್ನಲೆಯಲ್ಲಿ ಕೆಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಜಿಎಸ್‌ಟಿ ದರ ಶೇ.12 ರಿಂದ 5 ಕ್ಕೆ ಇಳಿಕೆ ಮತ್ತು ಕೆಲ ಉತ್ಪನ್ನಗಳ 5 ರಿಂದ 0 ಗೆ ತರಲಾಗಿದೆ. ಹೀಗಾಗಿ, ಸೆ.22 ರಿಂದ ನಂದಿನಿ ಉತ್ಪನ್ನಗಳ ಇಳಿಕೆಗೆ ಕೆಎಂಎಫ್ ನಿರ್ಧರಿಸಿದೆ. ಇದನ್ನೂ ಓದಿ: ಗ್ರಾಹಕರಿಗೆ ಗುಡ್‌ನ್ಯೂಸ್‌- ನಂದಿನಿಯ ಕೆಲ ಉತ್ಪನ್ನಗಳ ಬೆಲೆ ಸೋಮವಾರದಿಂದ ಇಳಿಕೆ

    ತುಪ್ಪ, ಬೆಣ್ಣೆ, ಚೀಸ್ ಸೇರಿ ವಿವಿಧ ಉತ್ಪನ್ನ ದರ ಇಳಿಕೆಯಾಗಿದೆ. ಪನ್ನಿರ್ ಮತ್ತು ಯುಹೆಚ್‌ಟಿ ಮಿಲ್ಕ್ (ಗುಡ್ ಲೈಫ್) ಬೆಲೆ ಕೂಡ ಕಡಿಮೆಯಾಗಿದೆ. ಶೇ.5 ರಷ್ಟು ಇದ್ದ ಜಿಎಸ್ಟಿ ಶೂನ್ಯಕ್ಕೆ ಕೇಂದ್ರ ಸರ್ಕಾರ ತಂದಿದೆ. ಬೆಣ್ಣೆ, ತುಪ್ಪ, ಚೀಸ್ ಮೇಲೆ ಶೇ.12 ರಷ್ಟಿದ್ದ ಜಿಎಸ್‌ಟಿ ಸೋಮವಾರದಿಂದ ಶೇ.5 ಕ್ಕೆ ಇಳಿಕೆಯಾಗಿದೆ.

    ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಈಗಾಗಲೇ ಜಿಎಸ್‌ಟಿ ಕಡಿಮೆ ಮಾಡಿರುವ ಉತ್ಪನ್ನಗಳ ದರ ನಿಗದಿಗೆ ಕಾರ್ಯಾರಂಭ ಮಾಡಲಾಗಿದೆ. ದರ ಇಳಿಕೆ ಬಗ್ಗೆ ಕೆಎಂಎಫ್ ಮಾಹಿತಿ ಹಂಚಿಕೊಂಡಿದೆ.

    ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿ ಮೇಲೆ 12 ರಿಂದ 5% ಗೆ ಇಳಿಕೆಯಾಗಿದೆ. ಕುಕ್ಕಿಸ್, ಚಾಕಲೇಟ್, ಐಸ್ಕ್ರೀಮ್ ಮೇಲೆ 18 ರಿಂದ 5%ಕ್ಕೆ ಹಾಗೂ ಪನ್ನೀರ್ 5 ರಿಂದ 0% ಗೆ ಇಳಿಕೆ ಕಂಡಿದೆ.

    ಯಾವ್ಯಾವ ಉತ್ಪನ್ನಗಳ ದರ ಇಳಿಕೆ?
    ತುಪ್ಪ- ( 1000- ಮಿ.ಲಿ)
    650 – ಹಳೆ ದರ
    610 – ಈಗಿನ ದರ

    ಬೆಣ್ಣೆ- 500 ಗ್ರಾಂ

    ಹಳೆ ದರ – 305
    ಹೊಸ ದರ – 286

    ಪನ್ನೀರ್ – 1000 ಗ್ರಾಂ

    ಹಳೆ ದರ – 425
    ಹೊಸ – 408

    ಗುಡ್ ಲೈಫ್ ಹಾಲು -1000 (ಮಿ.ಲೀ)

    ಹಳೆ ದರ – 70
    ಹೊಸ ದರ – 68

    ಸಂಸ್ಕರಿಸಿದ ಚೀಸ್

    ಹಳೆ ದರ – 530
    ಹೊಸ ದರ – 497

    ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್ (5000 ಮಿ.ಲೀ)
    ಹಳೆ ದರ – 645
    ಹೊಸ ದರ – 574

    ಐಸ್‌ಕ್ರೀಮ್ ವೆನಿಲಾ ಟಬ್ (1000 ಮಿ.ಲೀ)
    ಹಳೆ ದರ – 200
    ಹೊಸ ದರ – 178

    ಐಸ್‌ಕ್ರೀಮ್ ಚಾಕಲೇಟ್ ಸಂಡೇ
    ಹಳೆ ದರ – 115
    ಹೊಸ ದರ – 102

    ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್
    ಹಳೆ ದರ – 35
    ಹೊಸ ದರ – 31

    ಖಾರಾ ಉತ್ಪನ್ನಗಳು
    ಹಳೆ ದರ – 60
    ಹೊಸ ದರ – 56

    ಮಫಿನ್‌ಗಳು
    ಹಳೆ ದರ – 50
    ಹೊಸ ದರ – 45

    ನಂದಿನಿ ನೀರು (1000 ಮಿ.ಲೀ)
    ಹಳೆ ದರ – 20
    ಹೊಸ ದರ – 18

    ಜಾಮೂನು ಮಿಶ್ರಣ
    ಹಳೆ ದರ – 80
    ಹೊಸ ದರ – 71

    ಬಾದಾಮ್ ಹಾಲಿನ ಪುಡಿ – (200 ಗ್ರಾಂ)
    ಹಳೆ ದರ – 120
    ಹೊಸ ದರ – 107

    ಕುಕೀಸ್ (100 ಗ್ರಾಂ)
    ಹಳೆ ದರ – 35
    ಹೊಸ ದರ – 31

    ರೈಸ್ ಕ್ರಿಪಿ ಮಿಲ್ಕ್ ಚಾಕೋ (80 ಗ್ರಾಂ)
    ಹಳೆ ದರ – 65
    ಹೊಸ ದರ – 58

    ಕೇಕ್‌ಗಳು (200 ಗ್ರಾಂ)
    ಹಳೆ ದರ – 110
    ಹೊಸ ದರ – 98

    ಬೌನ್ಸ್ (200 ಮಿ.ಲೀ)
    ಹಳೆ ದರ – 15
    ಹೊಸ ದರ – 15

  • ಗ್ರಾಹಕರಿಗೆ ಗುಡ್‌ನ್ಯೂಸ್‌- ನಂದಿನಿಯ ಕೆಲ ಉತ್ಪನ್ನಗಳ ಬೆಲೆ ಸೋಮವಾರದಿಂದ ಇಳಿಕೆ

    ಗ್ರಾಹಕರಿಗೆ ಗುಡ್‌ನ್ಯೂಸ್‌- ನಂದಿನಿಯ ಕೆಲ ಉತ್ಪನ್ನಗಳ ಬೆಲೆ ಸೋಮವಾರದಿಂದ ಇಳಿಕೆ

    ಬೆಂಗಳೂರು: ಕೆಎಂಎಫ್ ಗ್ರಾಹಕರಿಗೆ ಸಿಹಿ ಸುದ್ದಿ. ಜಿಎಸ್‌ಟಿ (GST) ಪರಿಷ್ಕರಣೆಯಾದ ಬೆನ್ನಲ್ಲೇ ಸೋಮವಾರದಿಂದಲೇ (ಸೆ.22) ನಂದಿನಿಯ (Nandini) ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ.

    ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.

    ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.

    ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆ ಈಗಿನಂತೆ  ಮುಂದುವರಿಯಲಿದೆ.

    ಈಗಾಗಲೇ ಜಿಎಸ್‌ಟಿ ಕಡಿಮೆ‌ಯಾಗಿರುವ ಉತ್ಪನ್ನಗಳ ದರ ನಿಗಧಿ ಸಂಬಂಧ ಕೆಎಂಎಫ್‌ ಕೆಲಸ ಶುರು ಮಾಡಿದ್ದು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಇದನ್ನೂ ಓದಿ:  ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್‌ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ

     

    ಸೆ.22 ರಿಂದ ಇಳಿಕೆ ಯಾಕೆ?
    ಸೆಪ್ಟೆಂಬರ್‌ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಪರಿಷ್ಕರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದವು.

    2017ರಲ್ಲಿ ಜಾರಿಯಾದ ಜಿಎಸ್‌ಟಿಯಲ್ಲಿ 0, 5%, 12%, 18%, 28% ಅಡಿಯಲ್ಲಿ ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿತ್ತು. ಆದರೆ ಈಗ 12% ಮತ್ತು 28% ಸ್ಲ್ಯಾಬ್‌ ಅನ್ನು ತೆಗೆಯಲಾಗಿದ್ದು ಈ ಪಟ್ಟಿಯಲ್ಲಿದ್ದ ಬಹುತೇಕ ವಸ್ತುಗಳನ್ನು 5% ಮತ್ತು 18% ಶಿಫ್ಟ್‌ ಮಾಡಲಾಗಿದೆ. ಇದರ ಜೊತೆ ಐಷಾರಾಮಿ ವಸ್ತುಗಳು (ತಂಬಾಕು, ಐಷಾರಾಮಿ ಕಾರುಗಳು ಇತ್ಯಾದಿ) ಮೇಲೆ 40% ತೆರಿಗೆ ಹಾಕಲಾಗುತ್ತದೆ.

    ತೆರಿಗೆ ಪರಿಷ್ಕರಣೆಯಾದ ದರಗಳು ಸೆ.22 ರಿಂದ ಜಾರಿಗೆ ಬರಬೇಕು ಎಂಬ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್‌ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಾದ್ಯಂತ 99% ರಷ್ಟು ವಸ್ತುಗಳ ಬೆಲೆ ಇಳಿಕೆಯಾಗಲಿದೆ.

  • ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ `ನಂದಿನಿ’ ಪಾರ್ಲರ್ – ಗ್ರಾಹಕರಿಗೆ 175ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ `ನಂದಿನಿ’ ಪಾರ್ಲರ್ – ಗ್ರಾಹಕರಿಗೆ 175ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ

    ಬೆಂಗಳೂರು: ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಇದೀಗ ನಂದಿನಿ ಪಾರ್ಲರ್‌ಗಳು (Nandini Parlour) ಆರಂಭವಾಗಿದ್ದು, 175ಕ್ಕೂ ಅಧಿಕ ನಂದಿನಿ ಉತ್ಪನ್ನಗಳು (Nandini Products) ಗ್ರಾಹಕರಿಗೆ ಲಭ್ಯವಾಗುತ್ತಿವೆ.

    ಹೌದು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ನಂದಿನಿ ಪಾರ್ಲರ್‌ಗೆ ಅವಕಾಶ ಕೊಡದೇ ಅಮುಲ್ (Amul) ಪಾರ್ಲರ್‌ಗಳಿಗೆ ಅವಕಾಶ ಕೊಟ್ಟಿದೆ ಎಂದು ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಇದೆಲ್ಲದರ ನಂತರ ಕಡೆಗೂ ನಂದಿನಿ ಪಾರ್ಲರ್‌ಗಳು ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾರಂಭ ಮಾಡಿವೆ.ಇದನ್ನೂ ಓದಿ: ಕರ್ನಾಟಕದ ಗಡಿಯಿಂದ 19 ಕಿ.ಮೀ ದೂರದಲ್ಲಿ ನಿರ್ಮಾಣವಾಗಲಿದೆ ಹೊಸೂರು ವಿಮಾನ ನಿಲ್ದಾಣ!

    ಕೆಎಂಎಫ್ (KMF) ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲದೇ ಇದ್ದದ್ದೇ ಇದಕ್ಕೆ ಕಾರಣ ಅನ್ನೋದು ಗೊತ್ತಾಗಿತ್ತು. ಬೆಂಗಳೂರು ಮೆಟ್ರೋ ರೈಲು ನಿಗಮ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ನಂತರ ನಂದಿನಿ ಪಾರ್ಲರ್‌ಗೆ 10 ಕಡೆ ಅವಕಾಶ ಮಾಡಿಕೊಡಲಾಗಿತ್ತು. ಈಗ ಕೊನೆಗೂ ಮೂರು ಕಡೆ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.

    ಪ್ರಾರಂಭಿಕವಾಗಿ ಮೂರು ಪಾರ್ಲರ್‌ಗಳನ್ನ ಸಿಎಂ, ಕೆಎಂಎಫ್ ಎಂಡಿ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಅವರು ನಾಡಪ್ರಭು ಕೆಂಪೇಗೌಡ ಮೆಟ್ರೋ (Nadaprabhu Kempegowda Metro Station) ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದರು. ಅದರಂತೆ ಮೆಜೆಸ್ಟಿಕ್, ಕೋಣನಕುಂಟೆ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜು ಬಳಿ ಪ್ರಾರಂಭಗೊಂಡಿವೆ.

    ಇನ್ನು ಈ ನಂದಿನಿ ಪಾರ್ಲರ್‌ಗಳಲ್ಲಿ ಸುಮಾರು 175ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳು ದೊರೆಯುತ್ತಿವೆ. ಇದರ ಜೊತೆಗೆ ಹಲವು ಹೊಸ ಉತ್ಪನ್ನಗಳನ್ನೂ ಪರಿಚಯಿಸಲಾಗಿದೆ. ಗೌರಿ-ಗಣೇಶ ಹಬ್ಬ, ದಸರಾ ಹಬ್ಬಗಳಲ್ಲಿ ಹೆಚ್ಚಾಗಿ ನಂದಿನಿ ಉತ್ಪನ್ನ ಬಳಸಿ ನಮ್ಮ ರೈತರಿಗೆ ಪರೋಕ್ಷವಾಗಿ ಸಪೋರ್ಟ್ ಮಾಡಿ ಎಂದು ಕೆಎಂಎಫ್ ಎಂಡಿ ತಿಳಿಸಿದ್ದಾರೆ.

    ಇನ್ನುಳಿದ 7 ಪಾರ್ಲರ್‌ಗಳನ್ನು ಆದಷ್ಟು ಬೇಗ ಶುರು ಮಾಡಲು ಸಿದ್ಧತೆತೆಗಳು ನಡೆಯುತ್ತಿದ್ದು, ಇನ್ನಷ್ಟು ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಪ್ರಾರಂಭಿಸಲು ಕೆಎಂಎಫ್ ಜಾಗ ಕೇಳಲು ನಿರ್ಧರಿಸಿದೆ. ಜೊತೆಗೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಪಾರ್ಲರ್ ಶುರು ಮಾಡುವ ಗುರಿಯನ್ನು ಕೆಎಂಎಫ್ ಹೊಂದಿದೆ.ಇದನ್ನೂ ಓದಿ: ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ – ಪೊಲೀಸರಿಂದ ತೀವ್ರ ಶೋಧ

  • KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್

    KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್

    ಬೆಂಗಳೂರು: ಕೆಎಂಎಫ್ (KMF) ನಿರ್ಲಕ್ಷ್ಯದಿಂದಾಗಿ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಸಾಧ್ಯವಾಗಿಲ್ಲ ಎಂದು ಮಾಜಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ (Bhima Naik) ಆರೋಪಿಸಿದ್ದಾರೆ.

    ನಮ್ಮ ಮೆಟ್ರೋದಲ್ಲಿ ನಂದಿನಿ (Nandini) ಮಳಿಗೆಗೆ ಅವಕಾಶ ಕೊಡದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕೆಎಂಎಫ್ ಕಡೆಯಿಂದ ನಿರ್ಲಕ್ಷ್ಯ ಆಗಿರಬಹುದು. ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈಗ ನಂದಿನಿಗೆ ಅವಕಾಶ ಕೊಡಲಾಗುತ್ತದೆ ಎಂದು ಮಾತುಕತೆ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕು ಎಂದಿದ್ದಾರೆ.ಇದನ್ನೂ ಓದಿ: ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್

    ಕೆಎಂಎಫ್ ಟೆಂಡರ್‌ನಲ್ಲಿ ಭಾಗಿಯಾಗಬೇಕಿತ್ತು. ಆದರೆ ಯಾಕೆ ಭಾಗಿಯಾಗಿಲ್ಲ ಎಂದು ಗೊತ್ತಿಲ್ಲ. ಟೆಂಡರ್‌ನಲ್ಲಿ ಭಾಗಿಯಾಗದೇ ಇರುವುದು ತಪ್ಪು. ನಮ್ಮ ಲೋಪ ಇದೆ. ಮೊದಲೇ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡಬೇಕಿತ್ತು. ಮಾಹಿತಿ ಕೊರತೆಯಿಂದಾಗಿ ಹೀಗೆ ಆಗಿರಬಹುದು ಎಂದು ತಿಳಿಸಿದ್ದಾರೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ನಂದಿನಿಗೆ ಮನ್ನಣೆ ಕೊಡದೇ ಹೊರರಾಜ್ಯದ ಅಮುಲ್‌ಗೆ ಆದ್ಯತೆ ಕೊಟ್ಟು ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು ಕನ್ನಡಿಗರ ಆಕ್ರೋಶ ಕಾರಣವಾಗಿತ್ತು. ಗುಜರಾತ್ (Gujarat) ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ (BMRCL) ಸಹಿ ಹಾಕಿದೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್‌ನ ಅಮುಲ್ ಬ್ರ‍್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಇದರಿಂದ ನಮ್ಮೂರ ನಂದಿನಿಗೆ ಬಿಎಂಆರ್‌ಸಿಎಲ್ ಅವಕಾಶ ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದರು.ಇದನ್ನೂ ಓದಿ: ಹೊಸ ಸಿನಿಮಾದ ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಅಜಯ್ ರಾವ್

  • ನಮ್ಮ ಮೆಟ್ರೋದಲ್ಲಿ ನಂದಿನಿಗೆ ಮೊದಲ ಆದ್ಯತೆ ಕೊಡಬೇಕು: ರಾಮಲಿಂಗಾ ರೆಡ್ಡಿ

    ನಮ್ಮ ಮೆಟ್ರೋದಲ್ಲಿ ನಂದಿನಿಗೆ ಮೊದಲ ಆದ್ಯತೆ ಕೊಡಬೇಕು: ರಾಮಲಿಂಗಾ ರೆಡ್ಡಿ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ನಂದಿನಿ (Nandini) ಮಳಿಗೆಗೆ ಮೊದಲ ಆದ್ಯತೆ ಕೊಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಆಗ್ರಹ ಮಾಡಿದ್ದಾರೆ.

    ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆಗೆ ಅವಕಾಶ ನೀಡದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಂದಿನಿ ಉತ್ಪನ್ನ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಉತ್ತಮ ಗುಣಮಟ್ಟದ ಪದಾರ್ಥಗಳು ಇವೆ. ಅಮುಲ್‌ಗೆ ಅವಕಾಶ ಕೊಟ್ಟಿದ್ದಾರೆ. ಇದು ಸರಿಯಲ್ಲ. ಮೊದಲು ನಂದಿನಿಗೆ ಕೊಡಬೇಕಿತ್ತು ಎಂದು ತಿಳಿಸಿದರು. ಇದನ್ನೂ ಓದಿ: 400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

    ಇನ್ನುಮುಂದೆ ರೈಲ್ವೆ, ಮೆಟ್ರೋ, ಎಲ್ಲೇ ಆದರೂ ಪ್ರಥಮ ಆದ್ಯತೆ ನಂದಿನಿಗೆ ಕೊಡಬೇಕು. ನಾವು ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಕಡೆ ನಂದಿನಿಗೆ ಆದ್ಯತೆ ಕೊಟ್ಟಿದ್ದೇವೆ. ಅಮುಲ್ ಹೆಚ್ಚು ಹಣ ಕೊಟ್ಟಿದ್ದಾರೆ ಅಂತ ಅವರಿಗೆ ಕೊಡಬೇಡಿ. ನಂದಿನಿಗೆ ಮೊದಲ ಆದ್ಯತೆ ಕೊಡಬೇಕು. ಸಿಎಂ, ಡಿಸಿಎಂ ಗಮನಕ್ಕೂ ಇದು ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಸ್‍ನಲ್ಲಿ ಕಿಟಕಿ ಪಕ್ಕದ ಸೀಟಿಗಾಗಿ ಯುವಕನಿಗೆ ಚಾಕು ಇರಿತ – ಇಬ್ಬರು ಅಪ್ರಾಪ್ತರು ಅರೆಸ್ಟ್

  • ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಬೆಂಗಳೂರು: ಕರ್ನಾಟಕದ ಬ್ರ್ಯಾಂಡ್‌ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ.

    BMRCL ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಅಮೂಲ್ ಸಂಸ್ಥೆಯ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಈ ಬಗ್ಗೆ ಗುಜರಾತ್ ಮಿಲ್ಕ್ ಫೆಡರೇಶನ್ ಜೊತೆ ಒಪ್ಪಂದಕ್ಕೆ ಸಹಿ ಕೂಡ ಹಾಕಿತ್ತು. ರಾಜ್ಯದ ರೈತರ ಹೆಮ್ಮೆಯ ಕೆಎಂಎಫ್ ನಂದಿನಿಗೆ ಮಣೆ ಹಾಕಿರಲಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಗೆದ್ದು ಬಂದಿದ್ದ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

    ಈ BMRCLನ ನಿರ್ಧಾರದ ಬಗ್ಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಮಧ್ಯೆ ಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು, BMRCL ಗ್ಲೋಬಲ್ ಟೆಂಡರ್ ಕರೆದಿದ್ದರು. ಅದಕ್ಕೆ ಅಮೂಲ್‌ನವರು ಅರ್ಜಿ ಹಾಕಿದ್ದರು. ಬೇರೆ ಯಾರೂ ಅರ್ಜಿ ಹಾಕಿದ ಕಾರಣ ಅವರಿಗೆ ಕೊಟ್ಟಿದ್ದರು. ಈಗ 10ರಲ್ಲಿ 8 ಕೆಎಂಎಫ್‌ಗೆ ಕೊಡೋಕೆ ಹೇಳಿದ್ದೇನೆ ಎಂದಿದ್ದರು. ಅಲ್ಲದೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹ ನಮ್ಮ ಬೆಂಬಲ ಯಾವತ್ತಿಗೂ ನಂದಿನಿಗೆ ಎಂದು ಹೇಳಿದರು. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

    ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ BMRCL ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ ಕೆಎಂಎಫ್ ಎಂಡಿ ಶಿವಸ್ವಾಮಿ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದರು. ಡಿಸಿಎಂ ಹೇಳಿದಂತೆ 8 ಕಡೆ ನಂದಿನಿ ಮಳಿಗೆಗಳು ಓಪನ್ ಮಾಡಲು ಹಾಗೂ ಸರ್ಕಾರದ ನಿರ್ದೇಶನದಂತೆ 2 ಕಡೆಗಳಲ್ಲಿ ಮಾತ್ರ ಅಮೂಲ್‌ಗೆ ಅವಕಾಶ ನೀಡಲಾಗುವುದು ಎಂದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ರದ್ದು – ವಿಧಾನಸೌಧಕ್ಕೆ ಶಿಫ್ಟ್

    ಇನ್ನೂ ಮೀಟಿಂಗ್ ನಂತರ ಮಾತನಾಡಿದ ಕೆಎಂಎಫ್ (KMF) ಎಂಡಿ ಶಿವಸ್ವಾಮಿ, ನಗರದ 20 ಮೆಟ್ರೋ ನಿಲ್ದಾಣದಲ್ಲಿ ರಿಯಾಯಿತಿ ದರದಲ್ಲಿ ನಂದಿನಿ ಮಳಿಗೆ ತೆಗೆಯಲು BMRCL ಅವಕಾಶ ಕೊಡ್ತೇವೆ. ಈ ಹಿಂದೆ 2020-22ರಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮಳಿಗೆ ತೆರೆಯಲು BMRCL ಟೆಂಡರ್ ಕರೆದಿತ್ತು. ಆಗ ಕೆಎಂಎಫ್ ಈ ಟೆಂಡರ್‌ನಲ್ಲಿ ಭಾಗಿ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಇರಲಿದೆ ಎಂದಿದ್ದಾರೆ.

  • ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

    ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

    ಬೆಂಗಳೂರು: ಈ ಹಿಂದೆ ಮೆಟ್ರೋ (Namma Metro) ನೇಮಕಾತಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದ ಬಿಎಂಆರ್‌ಸಿಎಲ್ (BMRCL) ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಹೊರರಾಜ್ಯದ ಅಮುಲ್ (Amul) ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು, ನಮ್ಮ ನಂದಿನಿಗೆ (Nandini) ಮನ್ನಣೆ ಕೊಟ್ಟಿಲ್ಲ. ಇಷ್ಟಾದರೂ ಅಧಿಕಾರ ಬರೋ ಮುಂಚೆ ಸೇವ್ ನಂದಿನಿ ಅಭಿಯಾನ ಮಾಡಿದ್ದ ಕಾಂಗ್ರೇಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

    ಬೆಂಗಳೂರಿಗರ ಪ್ರಮುಖ ಸಂಚಾರ ನಾಡಿಯೆಂದರೆ ಅದು ನಮ್ಮ ಮೆಟ್ರೋ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 6-7 ಲಕ್ಷ ಮೆಟ್ರೋ ಪ್ರಯಾಣಿಕರು ಸಂಚರಿಸಿ, ಬಿಎಂಆರ್‌ಸಿಎಲ್ ಅನ್ನು ಬೆಂಗಳೂರಿಗರು ಬೆಳೆಸುತ್ತಿದ್ದಾರೆ. ಆದರೆ ಕನ್ನಡಿಗರಿಗೆ, ಕರ್ನಾಟಕದ ಬ್ರ‍್ಯಾಂಡ್ ನಂದಿನಿಗೆ ಬೆಂಗಳೂರು ಮೆಟ್ರೋ ನಿಗಮ ಮನ್ನಣೆ ಕೊಡದೇ, ಗುಜರಾತ್‌ನ ಅಮುಲ್‌ಗೆ ಆದ್ಯತೆ ಕೊಟ್ಟು ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ನೀಡಿದೆ. ಇದನ್ನೂ ಓದಿ: KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

    ಇತ್ತೀಚಿಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಸಹಿ ಹಾಕಿದೆ. ಈ ಬಗ್ಗೆ ಜೂನ್ 16ರಂದು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

    ನಗರದ ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ ನಿಲ್ದಾಣ ,ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿಗಳಲ್ಲಿ ಕಿಯೋಸ್ಕ್ಗಳು ಆರಂಭವಾಗಲಿವೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್‌ನ ಅಮುಲ್ ಬ್ರ‍್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಈಗಾಗಲೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಕಿಯೋಸ್ಕ್ ಸ್ಥಾಪನೆಯಾಗಿದ್ದು, ಈಗಾಗಲೇ ಅಮುಲ್ ಮಳಿಗೆಯಲ್ಲಿ ಐಸ್‌ಕ್ರೀಮ್, ಚಾಕಲೇಟ್, ಸ್ಯಾಂಡ್ ವಿಚ್, ಟೀ, ಪಿಜ್ಜಾ ಸೇರಿದಂತೆ ಹಲವು ಇನ್‌ಸ್ಟೆಂಟ್ ತಿಂಡಿಗಳನ್ನು ಮಾರಲಾಗುತ್ತಿದೆ. ಇದನ್ನೂ ಓದಿ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾದ ಮೋದಿ – ಹೊಸ ಹೈಕಮೀಷನರ್ ನೇಮಿಸಲು ಸಮ್ಮತಿ

    ಇನ್ನೂ ಈಗೀನ ಕಾಂಗ್ರೆಸ್ ಸರ್ಕಾರ 2023ರ ಕರ್ನಾಟಕ ಚುನಾವಣೆಗೆ ಮುನ್ನ ಅಮುಲ್ ಅನ್ನು ಬೆಂಗಳೂರು ಮಾರುಕಟ್ಟೆಗೆ ಪ್ರವೇಶಿಸುವುದನ್ನು ವಿರೋಧಿಸಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರ್ಕಾರವು ಅಮುಲ್‌ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಬ್ರ‍್ಯಾಂಡ್ ಮತ್ತು ಡೈರಿ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿತ್ತು. ಸೇವ್ ನಂದಿನಿ ಅಭಿಯಾನವನ್ನು ಆರಂಭಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಯಾನ ನಡೆಸಿದ್ದರು. ರಾಹುಲ್ ಗಾಂಧಿ ಸಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

    ಈ ರಾಜಕೀಯ ಗುದ್ದಾಟ ಮರೆತು, ಈಗ ತನ್ನ ಮಾತಿಗೆ ಫುಲ್ ಉಲ್ಟಾ ಎನ್ನುವಂತೆ ಕಾಂಗ್ರೆಸ್ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಅಮುಲ್ ಮಳಿಗೆಗಳು ಸ್ಥಾಪಿಸಲು ಅವಕಾಶ ನೀಡಿದೆ. ಇನ್ನೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ, ದೇಶ ವಿದೇಶದಲ್ಲಿ ಹೆಸರಾದ ನಮ್ಮ ಕನ್ನಡಿಗರ, ಕರ್ನಾಟಕದಲ್ಲಿ ‘ನಂದಿನಿ’ ಬ್ರಾಂಡ್ ಹೆಸರಾಗಿದೆ. ಆದರೆ ನಮ್ಮೂರ ನಂದಿನಿಗೆ ಬಿಎಂಆರ್‌ಸಿಎಲ್ ಅವಕಾಶ ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದಾರೆ. ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

  • ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಸಾಧ್ಯತೆ – ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆಗೆ ಚರ್ಚೆ?

    ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಸಾಧ್ಯತೆ – ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆಗೆ ಚರ್ಚೆ?

    ಬೆಂಗಳೂರು: ರಾಜ್ಯದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾದ ಬಳಿಕ ಇದೀಗ ಮತ್ತೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಸರ್ಕಾರ (State Government) ಮತ್ತೆ ಜನರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.

    ಹೌದು, ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆಯನ್ನು ಸರ್ಕಾರ ಲೀಟರ್‌ಗೆ 4 ರೂ. ಏರಿಕೆ ಮಾಡಿ, ಜನರಿಗೆ ಶಾಕ್ ಕೊಟ್ಟಿತ್ತು. ಈ ದರ ಏರಿಕೆಯ ಭಾರ ಹೊರುತ್ತಿರುವಾಗಲೇ ಮತ್ತೆ ಹಾಲಿನ ದರ ಏರಿಕೆ ವಿಚಾರ ಚರ್ಚೆಗೆ ಬಂದಿದ್ದು, ಮತ್ತೆ ದರ ಹೆಚ್ಚಳವಾಗುತ್ತಾ ಎನ್ನುವಂತಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 18-05-2025

    ಇದೇ ತಿಂಗಳ 21ಕ್ಕೆ ಈಗಿನ ಕೆಎಂಎಫ್ (KMF) ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಲಿದೆ. ಅದರ ಬೆನ್ನಲ್ಲೇ ಇದೇ 25ಕ್ಕೆ ಹೊಸ ನಿರ್ದೇಶಕರ ಆಯ್ಕೆ ಆಗಲಿದೆ. ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ಮುಂದೆ ಮತ್ತೆ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲು ಚರ್ಚೆ ನಡೆಯುತ್ತಿದೆ.

    ಈ ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಸುಳಿವು ನೀಡಿದ್ದಾರೆ. ಬಮುಲ್‌ನ 18 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಕನಕಪುರ ತಾಲೂಕು ನಿರ್ದೇಶಕ ಸ್ಥಾನಕ್ಕೆ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಿದ್ದಾರೆ. ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ, ಡಿಕೆ ಸುರೇಶ್ ಕೆಎಂಎಫ್ ಅಧಿಕಾರ ಹಿಡಿಯಲು ಹಲವು ಬದಲಾವಣೆ ಮಾಡಬೇಕಿದೆ. ರೈತರಿಗೆ ಒಳ್ಳೆಯದನ್ನು ಮಾಡಬೇಕಿದೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗಿ ಬಂದರೆ, ಸಿಎಂ, ಡಿಸಿಎಂಗೆ ಹತ್ತಿರವಿರುವ ಕಾರಣ ರೈತರಿಗೆ ದರ ಹೆಚ್ಚಳ ಮಾಡಲು ಸಹಕಾರಿಯಾಗಲಿದ್ದು, ಇನ್ನೂ ಹತ್ತು ರೂ. ಹೆಚ್ಚಳ ನೀಡಬೇಕಿದೆ. ಡಿಕೆ ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಿಎಂ ಜೊತೆ ಮಾತನಾಡಿ 5 ರೂ. ಆದರೂ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

    ಕೆಎಂಎಫ್ ಆಡಳಿತ ಮಂಡಳಿ ಬದಲಾವಣೆ ಬಳಿಕ ಈ ಎಲ್ಲಾ ಬೆಳವಣಿಗೆಗಳು ಶೀಘ್ರವೇ ಆರಂಭವಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಜನ ಈಗಾಗಲೇ ದರ ಏರಿಕೆಯಿಂದ ಕಂಗೆಟ್ಟಿದ್ದು, ಈ ಮಧ್ಯೆ ಮತ್ತೆ ಸರ್ಕಾರ ದರ ಏರಿಕೆ ಬಗ್ಗೆ ಯೋಚನೆ ಮಾಡುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.ಇದನ್ನೂ ಓದಿ: ಸ್ವಾದಿಷ್ಟವಾದ ಕಡಾಯಿ ಪನ್ನೀರ್‌ ಹೀಗೆ ಮಾಡಿ..

     

  • ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಹೆಚ್ಚಿದ ಡಿಮ್ಯಾಂಡ್ – ಇ-ಕಾಮರ್ಸ್‌ಗೆ ಲಗ್ಗೆಯಿಟ್ಟ ಕೆಎಂಎಫ್

    ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಹೆಚ್ಚಿದ ಡಿಮ್ಯಾಂಡ್ – ಇ-ಕಾಮರ್ಸ್‌ಗೆ ಲಗ್ಗೆಯಿಟ್ಟ ಕೆಎಂಎಫ್

    – ಆನ್‌ಲೈನ್‌ನಲ್ಲೂ ಸಿಗುತ್ತೆ ನಂದಿನಿ ದೋಸೆ, ಇಡ್ಲಿ ಹಿಟ್ಟು

    ಬೆಂಗಳೂರು: ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಬೇಡಿಕೆ ಜಾಸ್ತಿಯಾಗಿದ್ದು, ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಾರಾಟ ಮಾಡುವ ಉದ್ದೇಶದಿಂದ ಕೆಎಂಎಫ್ (KMF) ಇದೀಗ ಇ-ಕಾಮರ್ಸ್ (E-Commerce) ಸೈಟ್‌ಗೆ ಲಗ್ಗೆಯಿಟ್ಟಿದೆ.ಇದನ್ನೂ ಓದಿ:ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

    ಇತ್ತೀಚಿನ ದಿನಗಳಲ್ಲಿ ನಂದಿನಿ (Nandini) ಇಡ್ಲಿ ಹಾಗೂ ದೋಸೆ ಹಿಟ್ಟಿನ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನ÷ಲ್ಲೇ ಕೆಎಂಎಫ್ ಸಂಸ್ಥೆಯು ಉತ್ಪಾದನೆ ಜೊತೆಗೆ ಮಾರಾಟವನ್ನು ಹೆಚ್ಚಿಸಲು ಪ್ಲ್ಯಾನ್‌ ಮಾಡಿದೆ. ಇದೀಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಆನ್‌ಲೈನ್‌ನಲ್ಲಿಯೂ ಸಿಗಲಿದ್ದು, ನಿಮ್ಮ ಮನೆಗೆ ಬಂದು ತಲುಪಲಿದೆ.

    ಇಷ್ಟು ದಿನ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ನಂದಿನಿ ಪಾರ್ಲರ್‌ನಲ್ಲಿ ಮಾತ್ರ ಸಿಗುತ್ತಿತ್ತು. ಇದೀಗ ನಂದಿನಿ ಪ್ರಾಡಕ್ಟ್ ಇ-ಕಾಮರ್ಸ್‌ಗೆ ಲಗ್ಗೆಯಿಟ್ಟಿದ್ದು, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಬಹುದಾಗಿದೆ. ಇ-ಕಾಮರ್ಸ್ ವೆಬ್‌ಸೈಟ್ ಅಥವಾ ಆಪ್ ಮೂಲಕ ಆರ್ಡರ್ ಮಾಡಬಹುದು. ಸದ್ಯ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಉತ್ಪಾದನೆ ಹೆಚ್ಚಿಸಿ, ಇ-ಕಾಮರ್ಸ್ ಮೂಲಕ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ.ಇದನ್ನೂ ಓದಿ: ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ