Tag: Nandihill

  • ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    – ಭೂಕುಸಿತ.. ಇದು ಎಚ್ಚರಿಕೆ ಗಂಟೆ?
    – ಬೆಟ್ಟದ ತಪ್ಪಲಲ್ಲಿ ಭೂದಾಹವೇ ಕುಸಿತಕ್ಕೆ ಕಾರಣನಾ?

    ಚಿಕ್ಕಬಳ್ಳಾಪುರ: ಬುಧವಾರ ನಂದಿಬೆಟ್ಟದ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಭೂಕುಸಿತ ಆಗಿತ್ತು. ಆದ್ರೆ ಭೂಕುಸಿತ ಆಗೋಕೆ ಭಾರೀ ಪ್ರಮಾಣದ ಮಳೆ ಅನ್ನೋದು ಬಹುತೇಕರ ಅಭಿಪ್ರಾಯವಾದ್ರೂ ಕೆಲವರ ವಾದವೇ ಬೇರೆ ಇದೆ. ಭಾರೀ ಪ್ರಮಾಣದ ಭೂಕುಸಿತಕ್ಕೆ ಕಲ್ಲು ಗಣಿಗಾರಿಕೆ-ಬೆಟ್ಟದ ತಪ್ಪಲಲ್ಲಿ ಭೂಮಿ ಮಾಡೋಕೆ ಭೂಗಳ್ಳರ ಮಾಡ್ತಿರೋ ಕೃತ್ಯಗಳೇ ಕಾರಣ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.

    ವಿಶ್ವವಿಖ್ಯಾತ ನಂದಿಬೆಟ್ಟದ ಬಳಿ ಭೂಕುಸಿತ ಉಂಟಾಗಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಪರಿಣಾಮ ನಂದಿಗಿರಿಧಾಮಕ್ಕೆ ಶಾಶ್ವತವಾಗಿ ರಸ್ತೆ ನಿರ್ಮಾಣ ಮಾಡೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಮಧ್ಯೆ ಹಿಂದೆಂದೂ ಆಗದ ಅಷ್ಟೊಂದು ದೊಡ್ಡ ಮಟ್ಟದ ಭೂ ಕುಸಿತ ಆಗಿದ್ದಾದ್ರೂ ಹೇಗೆ ಅನ್ನೋ ಅನುಮಾನ ಹಲವರದ್ದಾಗಿದೆ. ಬಹುತೇಕರು ಭಾರೀ ಮಳೆಯ ಪರಿಣಾಮ ಗುಡ್ಡ ಕುಸಿತ ಆದ್ರೂ, ಕಾರಣ ಬೇರೆಯೇ ಇದೆ ಅಂತಾರೆ.

    ನಂದಿಗಿರಿ, ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ಚನ್ನಗಿರಿಗಳು ಒಂದಕ್ಕೊಂದು ಆಂಟಿಕೊಂಟಿವೆ. ಒಂದೆಡೆ ಚಿಕ್ಕಬಳ್ಳಾಪುರದ ಕಣಿವೆನಾರಾಯಣಪುರದ ಬಳಿ, ಮತ್ತೊಂದೆಡೆ ದೇವನಹಳ್ಳಿಯ ತೈಲಗೆರೆ ಬಳಿ ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಲಾಗ್ತಿದೆ. ಇದುವೇ ಭೂಕುಸಿತಕ್ಕೆ ಕಾರಣ ಆಗಿರಬಹುದು ಅಂತಾ ಪರಿಸರವಾದಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ದೋಸೆ ಮಾಡುವಾತ ಲಕ್ಷಾಂತರ ರೂಪಾಯಿ ವಂಚನೆ-ಕಡಬದಿಂದ ಮೈಸೂರಿಗೆ ಪರಾರಿ

    ನಂದಿಗಿರಿಧಾಮದ ತಪ್ಪಲಿನ ಭೂಮಿಗೆ ಬಂಗಾರದ ಬೆಲೆಯಿದೆ. ಹೀಗಾಗಿ ನಂದಿಬೆಟ್ಟದ ಸುತ್ತಲೂ ಬೆಟ್ಟದ ಬುಡಕ್ಕೆ ಕನ್ನ ಹಾಕ್ತಿರೋ ಭೂಗಳ್ಳರು, ರಾಜಾರೋಷವಾಗಿ ಕಲ್ಲು ಬಂಡೆ ಕರಗಿಸಿ, ಬೆಟ್ಟದ ಬುಡವನ್ನ ಅಗೆದು ಬಗೆದು ಸಮತಟ್ಟು ಮಾಡಿ ಜಮೀನು ಮಾಡಿಕೊಳ್ಳುತ್ತಿದ್ದಾರೆ. ಇದು ಸಹ ಬೆಟ್ಟದ ಹಿಡಿತವನ್ನ ಕಡಿಮೆ ಮಾಡಿ ಭೂಕುಸಿತ ಆಗೋಕೆ ಕಾರಣ ಆಗುತ್ತಿದೆ ಎಂದು ಸ್ಥಳೀಯರಾದ ಚಿಕ್ಕೇಗೌಡ ಹೇಳುತ್ತಾರೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

    ಒಟ್ಟಿನಲ್ಲಿ ನಂದಿಬೆಟ್ಟದ ತಪ್ಪಲಲ್ಲಿ ಮೇಲ್ನೋಟಕ್ಕೆ ಭಾರೀ ಪ್ರಮಾಣದ ಮಳೆ ಬಂದು ಭೂ ಕುಸಿತ ಆಗಿದೆ ಅನ್ನೋದು ಅಧಿಕಾರಿಗಳ ಪ್ರಾಥಮಿಕ ಮಾಹಿತಿ. ಪರಿಸರವಾದಿಗಳು, ಪ್ರಜ್ಞಾವಂತರ ಅನುಮಾನಗಳನ್ನ ಸುಖಾಸುಮ್ಮನೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆದು ಆಸಲಿ ಸತ್ಯ ಹೊರಬರಬೇಕಿದೆ.

  • ನಂದಿಗಿರಿಧಾಮಕ್ಕೆ ಕೊಡುಗೆ ನೀಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ

    ನಂದಿಗಿರಿಧಾಮಕ್ಕೆ ಕೊಡುಗೆ ನೀಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ

    ಚಿಕ್ಕಬಳ್ಳಾಪುರ: ಸಮಾಜಸೇವೆಯಲ್ಲಿ ಸದಾ ಮುಂದಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸಿಗರ ಕಾಲು ದಾರಿ ಹಾಗೂ ತಡೆಗೋಡೆಗಳ ಕಾಮಾಗಾರಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

    ಸುಧಾಮೂರ್ತಿಯವರು ತಮ್ಮ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡಿದ್ದರು. ಸುಮಾರು 70 ರಿಂದ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಾಲುದಾರಿಗಳು ಹಾಗೂ ತಡೆಗೋಡೆಯ ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಇಂದು ಲೋಕಾರ್ಪಣೆ ಮಾಡಿದ್ದಾರೆ. ಸುಧಾಮೂರ್ತಿಯವರಿಗೆ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಹಾಗೂ ಅರಣ್ಯ ಸಚಿವ ಶಂಕರ್ ಸಾಥ್ ನೀಡಿದ್ದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ನಾನು ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದೇ. ಈ ವೇಳೆ ನಂದಿಗಿರಿಧಾಮದ ವಾಕಿಂಗ್ ಫುಟ್‍ಪಾತ್ ನ ಸ್ಥಿತಿ ನೋಡಿ ಬೇಸರವಾಗಿತ್ತು. ಅಲ್ಲದೇ ನಮ್ಮ ಫೌಂಡೇಷನ್ ವತಿಯಿಂದಲೇ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಈಗ 70 ರಿಂದ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಲು ದಾರಿ ಹಾಗೂ ತಡೆಗೋಡೆಗಳ ನವೀಕರಣ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಹೇಳಿದರು.

    ಬೆಂಗಳೂರಿಗೆ ಹತ್ತಿರವಿರುವ ಈ ನಂದಿಗಿರಿಧಾಮ ಊಟಿ ಎಂದೇ ಪ್ರಖ್ಯಾತಿ ಪಡೆದಿದೆ. ಹೀಗಾಗಿ ನಾನು ಬಹಳಷ್ಟು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ವಿಕೇಂಡ್‍ನಲ್ಲಿ ಇಲ್ಲಿ ಕಾಲಿಡೋಕೆ ಜಾಗ ಇರಲ್ಲ. ಹೀಗಾಗಿ ಸರ್ಕಾರ ಸುತ್ತಮುತ್ತಲೂ ಇರುವ ಇತರೆ ಬೆಟ್ಟಗಳನ್ನ ಇದೇ ರೀತಿ ಅಭಿವೃದ್ಧಿಪಡಿಸಿದರೆ ಎಷ್ಟು ಚೆನ್ನಾಗಿರುತ್ತದೆಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv