Tag: nandigiridhama

  • ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯುವಕನ ಆತ್ಮಹತ್ಯೆ ಪ್ರಕರಣ ಬಯಲು

    ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯುವಕನ ಆತ್ಮಹತ್ಯೆ ಪ್ರಕರಣ ಬಯಲು

    ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನವೇ (Valentine Day) ನಂದಿಬೆಟ್ಟದ ಟಿಪ್ಪು ಡ್ರಾಪ್‌ನಿಂದ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ಬೆಳಕಿಗೆ ಬಂದಿದೆ.

    ಮೂರು ದಿನಗಳಿಂದ ಅನಾಥವಾಗಿದ್ದ ಬೈಕ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಯುವಕನ ಆತ್ಮಹತ್ಯೆ ಪ್ರಕರಣ ತಿಳಿದಿದೆ. ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಬಂದು ಅರುಣ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಸಹ ಪತ್ತೆಯಾಗಿದೆ. ಇದನ್ನೂ ಓದಿ: ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು

    ಪ್ರಕರಣ ಏನು?
    ಕಳೆದ ಶನಿವಾರ ತನ್ನ ಸ್ನೇಹಿತನ ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಬಂದ ಅರುಣ್, ಪಾರ್ಕಿಂಗ್ ಪ್ಲಾಟ್‌ನಲ್ಲಿ ಬೈಕ್ ನಿಲ್ಲಿಸಿ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ಶನಿವಾರ ಬೆಟ್ಟದ ಮೇಲೆ ಹೋದವನು ಮರಳಿ ವಾಪಸ್ ಬಂದಿಲ್ಲ. ಶನಿವಾರ, ಭಾನುವಾರ, ಸೋಮವಾರ ಕಾದರೂ ಅರುಣ್ ವಾಪಸ್ ಬಾರದ ಹಿನ್ನೆಲೆ ಅನುಮಾನಗೊಂಡ ಹೆಲ್ಮೆಟ್ ಲಾಕ್ ರೂಂ ಮಾಲೀಕರು, ಪೊಲೀಸರಿಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅರುಣ್ ಹೋಗಿರೋ ವೀಡಿಯೋ ಸಿಕ್ಕಿದೆ. ಆದರೆ ವಾಪಾಸ್ ಬಂದಿರೋ ವೀಡಿಯೋ ಸಿಕ್ಕಿಲ್ಲ. ಹೀಗಾಗಿ ಬೆಟ್ಟವೆಲ್ಲಾ ತಡಿಕಾಡಿದಾಗ ಟಿಪ್ಪು ಡ್ರಾಪ್‌ನ ಜಾಗದಲ್ಲಿ ಅರುಣ್ ಬ್ಯಾಗ್ ಪತ್ತೆಯಾಗಿದೆ.

    ಬ್ಯಾಗ್‌ನಲ್ಲಿ ಡೆತ್‌ನೋಟ್ ಸಹ ಪತ್ತೆಯಾಗಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ಬರೆದಿಲ್ಲ. “ತಾನು ಸಂತೋಷವಾಗಿ ಸಾಯುತ್ತಿದ್ದೇನೆ. ರಾಜಕೀಯ ವ್ಯವಸ್ಥೆ ಸರಿ ಇಲ್ಲ. ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ದಾಂತಗಳನ್ನ ಜನ ಬೆಂಬಲಿಸಿಬೇಕು” ಎಂದು ಡೆತ್‌ನೋಟ್‌ನಲ್ಲಿ ಯುವಕ ಬರೆದಿದ್ದಾರೆ. ಇದನ್ನೂ ಓದಿ: ವೃದ್ಧ ಪ್ರಯಾಣಿಕರ ಮೇಲೆ ರೈಲ್ವೆ ಮಹಿಳಾ ಪೊಲೀಸ್ ಸಿಬ್ಬಂದಿಯ ದರ್ಪ- ಅವಾಚ್ಯ ಶಬ್ದಗಳಿಂದ ನಿಂದನೆ

    ಆತ್ಮಹತ್ಯೆ ಮಾಡಿಕೊಂಡಿರುವ ಅರುಣ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ನಿವಾಸಿಯಾಗಿದ್ದು, ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆ ಪಿಜಿಯಲ್ಲಿ ಉಳಿದುಕೊಂಡಿದ್ದ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೈಕ್ಲೋನ್ ಎಫೆಕ್ಟ್ ನಲ್ಲೂ ನಂದಿಬೆಟ್ಟಕ್ಕೆ ಹೋದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ಸೈಕ್ಲೋನ್ ಎಫೆಕ್ಟ್ ನಲ್ಲೂ ನಂದಿಬೆಟ್ಟಕ್ಕೆ ಹೋದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ಚಳಿಯಿಂದ ನಡುಗುತ್ತಿದೆ. ತುಂತುರ ಮಳೆಹನಿಯಿಂದ ನೆನೆದು ಹೋಗಿದೆ. ಈ ನಡುವೆ ಸೈಕ್ಲೋನ್ ಎಫೆಕ್ಟ್ ಗೆ ನರಳುತ್ತಿದೆ. ಇಷ್ಟರ ಮಧ್ಯೆಯೂ ರಾಕಿಂಗ್‍ಸ್ಟಾರ್ ಯಶ್ ದಂಪತಿ ನಂದಿಗಿರಿಧಾಮ ಸೌಂದರ್ಯ ಸವಿದಿದ್ದಾರೆ. ವಿವಾಹ ವಾರ್ಷಿಕೋತ್ಸವದ ನೆನಪಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೆಲ ಹೊತ್ತು ನಂದಿ ಗಿರಿಧಾಮದಲ್ಲಿ ಕಳೆದಿದ್ದಾರೆ.

    ವಿಶ್ವವಿಖ್ಯಾತ ನಂದಿಗಿರಿಧಾಮ, ಪ್ರೇಮಿಗಳ ಪಾಲಿನ ಹಾಟ್ ಫೇವರೆಟ್ ತಾಣ, ಬೆಂಗಳೂರಿಗರ ಪಾಲಿನ ವಿಕೇಂಡ್ ಹಾಟ್ ಸ್ಪಾಟ್. ಹಾಗಾಗಿ ನಂದಿಬೆಟ್ಟಕ್ಕೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಭೇಟಿ ನೀಡಿ ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ. ಅಂದಹಾಗೆ ಕಳೆದ ಎರಡು ದಿನಗಳಿಂದ ಮಾಂಡೌಸ್ ಸೈಕ್ಲೋನ್ ಎಫೆಕ್ಟ್ ನಿಂದ ಕೂಲ್ ಕೂಲ್ ನಂದಿಬೆಟ್ಟ ಮತ್ತಷ್ಟು ಮಗದಷ್ಟು ಕೂಲ್ ಆಗಿದ್ದು, ನಿನ್ನೆ ಬೆಳಿಗ್ಗೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಪತ್ನಿ ರಾಧಿಕಾ ಪಂಡಿತ್ ನಂದಿಬೆಟ್ಟಕ್ಕೆ ಆಗಮಿಸಿ ನಂದಿಬೆಟ್ಟದ ಪ್ರಾಕೃತಿಕ ಸೊಬಗನ್ನ ಸವಿದಿದ್ದಾರೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    ಬೆಳಿಗ್ಗೆ 6.30 ರ ಸುಮಾರಿಗೆ ನಂದಿಗಿರಿಧಾಮಕ್ಕೆ ಆಗಮಿಸಿರುವ ದಂಪತಿ ನಂದಿಬೆಟ್ಟದ ಮೇಲಿ ಕೆಲ ಕಾಲ ರೌಂಡ್ಸ್ ಹಾಕಿದ್ದು, ಮಯೂರ ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿ ವಾಪಾಸ್ಸಾಗಿದ್ದಾರೆ. ಇನ್ನೂ ಸಹಜವಾಗಿ ನಟ ಯಶ್ ಹಾಗೂ ರಾಧಿಕಾ ಪಂಡಿತ್ ರನ್ನ ನೋಡುತ್ತಿದ್ದಂತೆ ಪ್ರವಾಸಿಗರು ಸಹ ನಾ ಮುಂದು ತಾ ಮುಂದು ಅಂತ ನೋಡಲು ಮುಗಿಬಿದ್ದಿದ್ದಾರೆ. ಕೆಲವರು ಪೋಟೋ ಸೆಲ್ಫಿ ತಗೊಂಡು ಖುಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾಚರಣೆಗೆ ನಂದಿಗಿರಿಧಾಮದ ಸುತ್ತಮುತ್ತ ಹೈಅಲರ್ಟ್

    ಹೊಸ ವರ್ಷಾಚರಣೆಗೆ ನಂದಿಗಿರಿಧಾಮದ ಸುತ್ತಮುತ್ತ ಹೈಅಲರ್ಟ್

    ಚಿಕ್ಕಬಳ್ಳಾಪುರ: ಇನ್ನೇನು 2021 ಕಳೆದು 2022 ರನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗುತ್ತಿದೆ. ಹೀಗಾಗಿ ಒಂದೆಡೆ ಸಂತಸ ಮತ್ತೊಂದೆಡೆ ಹೊಸವರ್ಷವನ್ನು ಸಾರ್ವಜನಿಕವಾಗಿ ಆಚರಿಸಲಾಗದೆ ಅಸಮಾಧಾನ ಎದ್ದಿದೆ. ಕಫ್ರ್ಯೂ ಮಧ್ಯೆಯೂ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸಬಾರದು, ಆಚರಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ಇತ್ತ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಮಾಲೀಕರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್

    ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಅದ್ಧೂರಿ ಹೊಸ ವರ್ಷಾಚರಣೆ ಮಾಡಲು ನಿರ್ಬಂಧ ಇರುವ ಹಿನ್ನೆಲೆ ಕಳ್ಳ ಮಾರ್ಗದ ಮೂಲಕ ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಗಳಲ್ಲಿ ಹೊಸ ವರ್ಷಾಚರಣೆ ಮಾಡುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರು ಜಂಟಿ ಸಭೆ ನಡೆಸಿದ್ದಾರೆ. ಈ ವೇಳೆ ಹೋಟೆಲ್, ರೆಸಾರ್ಟ್, ಕೆಫೆ ಹಾಗೂ ಹೋಮ್ ಸ್ಟೇ ಮಾಲಿಕರಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

    ಮತ್ತೊಂದೆಡೆ ನಂದಿಗಿರಿಧಾಮವನ್ನು ಜನವರಿ 2ರ ಬೆಳಗ್ಗೆ ಆರು ಗಂಟೆವರೆಗೂ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ನಂದಿಗಿರಿಧಾಮಕ್ಕೆ ಬಂದವರು ಅಕ್ಕ-ಪಕ್ಕದ ಬೆಟ್ಟ ಗುಡ್ಡಗಳತ್ತ ಮುಖ ಮಾಡಿ ಕುಡಿದು ಕುಣಿದು ತೂರಾಡಬಹುದು. ಇದರಿಂದ ಸಮಸ್ಯೆ ಆಗುತ್ತೆ ಅಂತ ಅರಣ್ಯ ಇಲಾಖೆ ರಾತ್ರಿ ವೇಳೆ ಅರಣ್ಯ ಪ್ರವಾಸೋದ್ಯಮವನ್ನು ಬಂದ್ ಮಾಡಿದೆ. ಬೆಳಗ್ಗಿನ ಜಾವದಲ್ಲಿ ಮಾತ್ರ ಸ್ಕಂದಗಿರಿ, ಚನ್ನಗಿರಿ ಹಾಗೂ ಬ್ರಹ್ಮಗಿರಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಅಂತ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಸಹ ಪ್ರವಾಸಿಗರು ಬಾರದಂತೆ ಬೆಟ್ಟ ಗುಡ್ಡಗಳ ಕಡೆ ಬಂದೋಬಸ್ತ್ ಮಾಡಿದೆ.

  • ಇಂದಿನಿಂದ ಒಂದು ವಾರ ನಂದಿ ಬೆಟ್ಟದ ಬಾಗಿಲು ಬಂದ್

    ಇಂದಿನಿಂದ ಒಂದು ವಾರ ನಂದಿ ಬೆಟ್ಟದ ಬಾಗಿಲು ಬಂದ್

    ಚಿಕ್ಕಬಳ್ಳಾಪುರ: ದೇಶದಲ್ಲಿ ಕೊರೊನಾ ವೈರಸ್‍ಗೆ ಎರಡನೇ ಬಲಿಯಾಗಿದ್ದು, ಕರುನಾಡಿನಲ್ಲೂ ಕೊರೊನಾ ವೈರಸ್ ಓರ್ವನನ್ನ ಬಲಿ ಪಡೆದಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಒಂದು ವಾರ ರಾಜ್ಯದಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಮಾಲ್, ಥಿಯೇಟರ್‌ಗಳು ಬಂದ್ ಆಗಲಿವೆ. ಅಂತೆಯೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮದ ಬಾಗಿಲು ಸಹ ಬಂದ್ ಆಗಿದೆ.

    ಹೌದು..ಇಂದಿನಿಂದ ಒಂದು ವಾರ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇಂದಿನಿಂದಲೇ ನಂದಿಗಿರಿಧಾಮದ ಬಾಗಿಲು ಸಂಪೂರ್ಣ ಬಂದ್ ಆಗಿದೆ. ಅಂದಹಾಗೆ ವಿಕೇಂಡ್‍ನಲ್ಲಿ 6 ರಿಂದ 7 ಸಾವಿರ ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಭೇಟಿ ನೀಡುತ್ತಿದ್ದರು. ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ನಂದಿಗಿರಿಧಾಮಕ್ಕೆ ಬರುವವರ ಸಂಖ್ಯೆಯೂ ಜಾಸ್ತಿಯಾಗುವ ಸಾಧ್ಯತೆಯಿತ್ತು.

    ಆದರೆ ಕೊರೊನಾ ಭೀತಿಯಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದೆ. ಹೀಗಾಗಿ ನಂದಿಗಿರಿಧಾಮಕ್ಕೆ ಬರೋ ಪ್ರವಾಸಿಗರು ಒಂದು ವಾರ ನಂದಿಬೆಟ್ಟದ ಕಡೆ ಬಾರದೆ ಇರುವುದು ಒಳಿತು. ಸಾಮಾನ್ಯವಾಗಿ ಬೆಂಗಳೂರಿಗೆ ಕೂಗಳತೆ ದೂರದ ನಂದಿ ಬೆಟ್ಟಕ್ಕೆ ವಿಕೇಂಡ್‍ನಲ್ಲಿ ಬೆಂಗಳೂರಿಗರು ಅದರಲ್ಲೂ ಟೆಕ್ಕಿಗಳು ಜಾಸ್ತಿ ಆಗಮಿಸುತ್ತಾರೆ.

    ಇಂದು ಬೆಳಿಗ್ಗೆಯಿಂದಲೇ ಗೇಟ್ ಬಂದ್ ಮಾಡಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನ ಸಹ ನಿಯೋಜಿಸಲಾಗಿದೆ. ಹೀಗಾಗಿ ನಂದಿಬೆಟ್ಟದತ್ತ ಪ್ರವಾಸಿಗರ ಬರಬಾರದು ಅಂತ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಮನವಿ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಬಂದಿದ್ದ ಎಲ್ಲಾ ಪ್ರವಾಸಿಗರನ್ನ ವಾಪಸ್ ಕಳುಹಿಸಲಾಗಿದೆ.

  • ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

    ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ಜಿಲ್ಲೆಯ ನಂದಿಗಿರಿಧಾಮದ ರಸ್ತೆಯಲ್ಲಿ ಅಂಕು ಡೊಂಕಿನ ರಸ್ತೆಯಲ್ಲಿ ಬೈಕಿನ ಹಿಂಬದಿ ಸೀಟಿನಲ್ಲಿ ಕೂತು ಸಾಗಬೇಕಾದ ಯುವತಿಯೊಬ್ಬಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಸಾಗಿದ್ದಾಳೆ.

    ಪ್ರೇಮಿಗಳಿಬ್ಬರು ನಂದಿಗಿರಿಧಾಮದ ರಸ್ತೆಯಲ್ಲಿ ಅಸಭ್ಯವಾಗಿ ಬೈಕ್ ಚಲಾಯಿಸಿರುವ ವಿಡಿಯೋವೊಂದು ಲಭ್ಯವಾಗಿದೆ. ತನ್ನ ಪ್ರೇಮಿಯನ್ನು ಬೈಕಿನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರಿಯಕರ ಬೈಕ್ ಓಡಿಸಿದ್ದಾನೆ. ಪ್ರೇಮಿಗಳ ಜಾಲಿ ರೈಡನ್ನು ಅವರ ಹಿಂದೆ ಬರುತ್ತಿದ್ದ ಸವಾರರು ವಿಡಿಯೋ ಮಾಡಿದ್ದಾರೆ.

    ಯುವತಿಯೊಬ್ಬಳು ತನ್ನ ಪ್ರಿಯಕರನ್ನ ತನ್ನ ತೋಳಲ್ಲಿ ಬಂಧಿ ಮಾಡಿಕೊಂಡು ಬೈಕಿನ ಟ್ಯಾಂಕ್ ಮೇಲೆ ಕುಳಿತು ಹೋಗಿದ್ದಾಳೆ. ಇತ್ತ ಬೈಕ್ ರೈಡ್ ಮಾಡುತ್ತಿದ್ದ ಪ್ರಿಯಕರ ಲೋಕದ ಪರಿವೇ ಇಲ್ಲದಂತೆ ಬೈಕ್ ರೈಡ್ ಮಾಡುತ್ತಿದ್ದನು. ಅಸಲಿಗೆ ಕಾನೂನನ್ನ ಗಾಳಿಗೆ ತೂರಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಜೋಡಿಯ ಹುಚ್ಚಾಟ ಇತರೆ ಪ್ರವಾಸಿಗರಿಗೆ ಇರುಸು ಮುರುಸು ಉಂಟುಮಾಡಿತ್ತು ಎಂದು ಪ್ರವಾಸಿಗ ಚಿಕ್ಕ ಅಂಜಿನಪ್ಪ ಹೇಳಿದ್ದಾರೆ.

    ಪ್ರೇಮಿಗಳ ಪಾಲಿನ ಸ್ವರ್ಗ ತಾಣದಲ್ಲಿ ವಿಹರಿಸಿ ಬಂದಿದ್ದ ಈ ಜೋಡಿ ಇಡೀ ಲೋಕದ ಪರಿವೆಯನ್ನ ಮರೆತಿದ್ದರು. ಬೈಕಿನ ಮುಂಭಾಗದ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನ್ನ ಬಿಗಿದಪ್ಪಿಕೊಂಡಿದ್ದು, ತನ್ನ ಪ್ರಿಯತಮೆಯ ತೋಳಲ್ಲಿ ಬಂಧಿಯಾಗಿದ್ದ ಆ ಯುವಕ ಜಾಂ ಜೂಮ್ ಅಂತ ಬೈಕ್ ರೈಡ್ ಮಾಡುತ್ತಿದ್ದನು. ನಡುರಸ್ತೆಯಲ್ಲಿ ಯಾರಿಗೂ ಡೋಂಟ್ ಕೇರ್ ಎಂಬಂತೆ ಬೈಕಿನಲ್ಲಿ ಸಾಗುತ್ತಿದ್ದ ಈ ಜೋಡಿಯ ಹುಚ್ಚಾಟ ಇತರೆ ವಾಹನ ಸವಾರರಿಗೆ ಮುಜುಗರವನ್ನುಂಟು ಮಾಡಿತ್ತು. ಇದು ಇದೊಂದು ಜೋಡಿಯ ಕಥೆ ಅಲ್ಲ ಬಹುತೇಕರದ್ದು ಇದೆ ತರ ಅಂತ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

    ನಂದಿಗಿರಿಧಾಮ ಹೇಳಿ ಕೇಳಿ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಪ್ರೇಮದ ಹೆಸರಲ್ಲಿ ನಡುರಸ್ತೆಯಲ್ಲೇ ಯಾರಿಗೂ ಡೋಂಟ್ ಕೇರ್ ಮಾಡದ ಜೋಡಿ ಹಕ್ಕಿಗಳು ಸಭ್ಯತೆಯ ಎಲ್ಲೆಯನ್ನೇ ಮೀರಿ ನಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಂದಿ ಗಿರಿಧಾಮದಲ್ಲಿ ಆರಂಭವಾಯ್ತು ಹೈಟೆಕ್ ಅತಿಥಿ ಗೃಹ

    ನಂದಿ ಗಿರಿಧಾಮದಲ್ಲಿ ಆರಂಭವಾಯ್ತು ಹೈಟೆಕ್ ಅತಿಥಿ ಗೃಹ

    – ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಟ್ಟಡ ನಿರ್ಮಾಣ

    ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿ ಗಿರಿಧಾಮದಲ್ಲಿ ಇದೀಗ ಹೈಟೆಕ್ ಮಾದರಿಯ ಅತ್ಯಾಕರ್ಷಕ ನೂತನ ಅತಿಥಿ ಗೃಹಗಳು ಪ್ರವಾಸಿಗರ ಸೌಲಭ್ಯಕ್ಕೆ ಲಭ್ಯವಾಗಲಿವೆ. ನಂದಿಗಿರಿಧಾಮದ ಗಾಂಧಿ ನಿಲಯದ ಪಕ್ಕದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ.

    ಕಟ್ಟಡದಲ್ಲಿ 14 ಕೊಠಡಿಗಳು ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದ್ದು, ಬೃಹತ್ ಸಭಾಂಗಣ ಕೂಡ ಇದೆ. ನಂದಿ ಗಿರಿಧಾಮದಲ್ಲಿ ತಂಗಲು ಸಮರ್ಪಕ ಕೊಠಡಿಗಳ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಪರದಾಡುವಂತಾಗಿತ್ತು. ಇದನ್ನ ಮನಗಂಡ ಪ್ರವಾಸೋದ್ಯಮ ಇಲಾಖೆ ಇದೀಗ ನೂತನ ಕಟ್ಟಡ ನಿರ್ಮಾಣ ಮಾಡಿ ಪ್ರವಾಸಿಗರ ಸೌಲಭ್ಯಕ್ಕೆ ಅನೂಕೂಲ ಮಾಡಿಕೊಟ್ಟಿದೆ.

    ಅಂದ ಹಾಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ ಸುಧಾಕರ್ ನೂತನ ಕಟ್ಟಡದ ಉದ್ಘಾಟನೆಯನ್ನ ನೇರವೇರಿಸಿದ್ರು. ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅನ್‍ಲೈನ್ ಮೂಲಕ ಕೊಠಡಿಗಳನ್ನ ಕಾಯ್ದಿರಿಬಹುದಾಗಿದ್ದು. ಒಂದು ಕೊಠಡಿಗೆ ದಿನಕ್ಕೆ 2000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ ಅಂತ ಆಧಿಕಾರಿಗಳು ತಿಳಿಸಿದ್ದಾರೆ.