Tag: Nandi Idol

  • ಹಾಲು, ನೀರು ಕುಡಿಯುತ್ತಿರುವ ಕಲ್ಲಿನ ನಂದಿ ವಿಗ್ರಹ – ಬೀದರ್‌ನಲ್ಲಿ ವಿಸ್ಮಯಕಾರಿ ಘಟನೆ!

    ಹಾಲು, ನೀರು ಕುಡಿಯುತ್ತಿರುವ ಕಲ್ಲಿನ ನಂದಿ ವಿಗ್ರಹ – ಬೀದರ್‌ನಲ್ಲಿ ವಿಸ್ಮಯಕಾರಿ ಘಟನೆ!

    ಬೀದರ್: ಕಲ್ಲಿನ ನಂದಿ ವಿಗ್ರಹ (Nandi Idol) ಹಾಲು ಮತ್ತು ನೀರು ಕುಡಿಯುತ್ತಿರುವ ಸುದ್ದಿ ಹರಡಿದ್ದು, ವಿಸ್ಮಯಕಾರಿ ಘಟನೆ ಕಣ್ತುಂಬಿಕೊಳ್ಳಲು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.

    ಗಡಿ ಜಿಲ್ಲೆ ಬೀದರ್‌ನಲ್ಲಿರುವ (Bidar) ದೇವಸ್ಥಾನದಲ್ಲಿ ವಿಸ್ಮಯವನ್ನು ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ. ಜಿಲ್ಲೆಯ ಹಲವು ದೇವಸ್ಥಾನಗಳು ಈ ವಿಸ್ಮಯಕಾರಿ ಘಟನೆಗೆ‌ ಸಾಕ್ಷಿಯಾಗಿದೆ. ಬೀದರ್ ತಾಲೂಕಿನ ಧೂಮಸಾಪೂರ್, ಮರಕುಂದ, ಕಪಲಾಪೂರ್ ಹಾಗೂ ಚಿಟ್ಟಗುಪ್ಪ ತಾಲೂಕಿನ ನಿರ್ಣಾ, ಮಂಗಲಗಿ ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಸೇರಿದಂತೆ ಜಿಲ್ಲೆಯ ಹಲವೆಡೆ ವಿಸ್ಮಯಕಾರಿ ಘಟನೆಯಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗಿ – ಅಹವಾಲು ಕೊಡಲು ಮುಗಿಬಿದ್ದ ಜನ

    ಕಲ್ಲಿನ‌ ನಂದಿ ವಿಗ್ರಹ ಹಾಲು ಮತ್ತು ನೀರು ಕುಡಿಯುತ್ತೆ ಎನ್ನುವ ವದಂತಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಕಡೆ ಮಹಿಳಾ ಭಕ್ತರು ಮುಖ ಮಾಡುತ್ತಿದ್ದಾರೆ. ಕಲ್ಲಿನ‌ ನಂದಿ ವಿಗ್ರಹಕ್ಕೆ ಭಕ್ತಾದಿಗಳು ಅಚ್ಚರಿಯಿಂದಲೇ ಹಾಲು ಮತ್ತು ನೀರು ಕುಡಿಸುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಡಿಗೇಡಿಗಳಿಂದ ನಂದಿ ಮೂರ್ತಿಗೆ ಚಪ್ಪಲಿ ಹಾರ

    ಕಿಡಿಗೇಡಿಗಳಿಂದ ನಂದಿ ಮೂರ್ತಿಗೆ ಚಪ್ಪಲಿ ಹಾರ

    ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ಮೂರ್ತಿಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ.

    ಇಂದು ಬೆಳಗ್ಗಿನ ಜಾವ ಪೂಜಾ ವಿಧಿ-ವಿಧಾನದ ಮಾಡುವಾಗ ಚಪ್ಪಲಿ ಹಾರ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಪೂಜೆ ಮಾಡಿದ ಬಳಿಕ ದೇವಸ್ಥಾನಕ್ಕೆ ಬಾಗಿಲು ಹಾಕಲಾಗಿತ್ತು. ಆದರೆ ಇಂದು ಬೆಳಗ್ಗೆ ಮತ್ತೆ ದೇವಾಲಯದ ಬಾಗಿಲು ತೆರೆದಾಗ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡು ಬಂದಿದೆ.

    ರಾತ್ರಿ ದೇವಸ್ಥಾನದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದ್ದು, ಕೂಡಗಿ ಎನ್‍ಟಿಪಿಸಿ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಸವ ಭಕ್ತರು ಶ್ವಾನದಳ ಬಂದು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆ ಕೂಡಗಿ ಎನ್‍ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಚಾಮುಂಡಿ ಬೆಟ್ಟದಲ್ಲಿರೋ ಕರಿ ಬಸವ ಬಿಳಿ ಬಸವ ಆಯ್ತು!

    ಚಾಮುಂಡಿ ಬೆಟ್ಟದಲ್ಲಿರೋ ಕರಿ ಬಸವ ಬಿಳಿ ಬಸವ ಆಯ್ತು!

    ಮೈಸೂರು: ನಗರದ ಚಾಮುಂಡಿ ಬೆಟ್ಟದ ಮಧ್ಯ ಭಾಗದಲ್ಲಿ ಮಂಡಿಯೂರಿ ಕುಳಿತಿರುವ ಬೃಹತ್ ಗಾತ್ರದ ಕಪ್ಪು ನಂದಿ ವಿಗ್ರಹ ಈಗ ಬಿಳಿ ನಂದಿ ವಿಗ್ರಹವಾಗಿದೆ.

    ವಿಗ್ರಹ ಯಾವ ಬಣ್ಣದಲ್ಲಿದೆ ಅಂತಾ ಕೇಳಿದರೆ ಬಹುತೇಕರ ಉತ್ತರ ಕಪ್ಪು. ಏಕೆಂದರೆ ಕಳೆದ ಐದಾರು ದಶಕಗಳಿಂದ ಈ ವಿಗ್ರಹ ಇರುವುದು ಕಪ್ಪು ಬಣ್ಣದಲ್ಲಿ. ಹೀಗಾಗಿ ಬೆಟ್ಟದ ನಂದಿಯ ಯಾವುದೇ ಫೋಟೋ ನೋಡಿದರೂ ಅದು ಕಪ್ಪು ಬಣ್ಣದಲ್ಲೇ ಇದೆ. ಆದರೆ ಇಂತಹ ನಂದಿಯ ಬಣ್ಣ ಈಗ ಬಿಳಿ ಬಣ್ಣಕ್ಕೆ ಬದಲಾಗಿದೆ.

    ಹೌದು. ಈ ವಿಗ್ರಹದ ಮೂಲ ಬಣ್ಣ ಬಿಳಿ. ಆದರೆ ಎಣ್ಣೆ ಮಜ್ಜನ ಮಾಡಿಸಿ ಮಾಡಿಸಿ ಈ ವಿಗ್ರಹ ಮೂಲ ಬಣ್ಣವನ್ನು ಕಳೆದುಕೊಂಡು ಕಪ್ಪಾಗಿತ್ತು. ಈಗ ಧಾರ್ಮಿಕ ದತ್ತಿ ಇಲಾಖೆಯವರು ರಾಸಾಯನಿಕ ಬಳಸಿ ವಿಗ್ರಹವನ್ನು ಸ್ವಚ್ಛಗೊಳಿಸಿ ಮೂಲರೂಪಕ್ಕೆ ತಂದಿದ್ದಾರೆ. ಇದರಿಂದ ನಂದಿ ವಿಗ್ರಹ ಬಿಳಿ ಬಣ್ಣದಲ್ಲಿ ಮಿಂಚುತ್ತಿದೆ.

    ಈ ನಂದಿ ವಿಗ್ರಹಕ್ಕೆ ಸುಮಾರು 350 ವರ್ಷಗಳ ಇತಿಹಾಸ ಇದೆ. ನಂದಿ ವಿಗ್ರಹ ಸುಮಾರು 16 ಅಡಿ ಎತ್ತರ ಹಾಗೂ 24 ಅಡಿ ಅಗಲವಿದೆ. ಇದು ದೇಶದ ಮೂರನೇ ಅತಿ ಎತ್ತರದ ನಂದಿ ವಿಗ್ರಹವಾಗಿದೆ. 1659 ರಲ್ಲಿ ಯದುವಂಶದ ದೊಡ್ಡ ದೇವರಾಜ ಒಡೆಯರ್ ಅವರು ಈ ವಿಗ್ರಹ ಪ್ರತಿಷ್ಠಾಪಿಸಿದ್ದರು.