Tag: Nandi Betta

  • ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ವಿಕೇಂಡ್ ಕರ್ಫ್ಯೂ ರದ್ದು

    ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ವಿಕೇಂಡ್ ಕರ್ಫ್ಯೂ ರದ್ದು

    ಚಿಕ್ಕಬಳ್ಳಾಪುರ: ಕೊರೊನಾ ಹಿನ್ನೆಲೆ ವಿಕೇಂಡ್‍ನಲ್ಲಿ ನಂದಿಗಿರಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧವಿತ್ತು. ಆದರೆ ಶನಿವಾರದಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

    ಕೋವಿಡ್ ಲಾಕ್‌ಡೌನ್ ನಂತರ ಬಹುದಿನಗಳ ನಂತರ ವಿಶ್ವವಿಖ್ಯಾತ ನಂದಿಗಿರಿಧಾಮ ವಿಕೇಂಡ್ ಲಾಕ್‌ಡೌನ್ ತೆರವು ಮಾಡಲಾಗಿದೆ. ಶನಿವಾರದಿಂದ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿ 1,000 ಬೈಕ್ ಹಾಗೂ 300 ಕಾರುಗಳಿಗಷ್ಟೇ ಅವಕಾಶ ಕೊಡಲಾಗುತ್ತಿದೆ. ಇದನ್ನೂ ಓದಿ:  ಅಪ್ಪು ಜೊತೆ ನನಗೆ ಸಿನಿಮಾ ಮಾಡೋ ಭಾಗ್ಯ ಸಿಗಲಿಲ್ಲ: ಉಪೇಂದ್ರ 

    Nandi Hills: Discover The Paradise With This Handy Guide

    ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿಯೇ ಟಿಕೆಟ್ ನೀಡಲಾಗುತ್ತಿದೆ. ಅಲ್ಲದೇ ನಂದಿಗಿರಿಧಾಮಕ್ಕೆ ಬರೋ ಪ್ರವಾಸಿಗರಿಗೆ ಆನ್‍ಲೈನ್ ಹಾಗೂ ಆಫ್‍ಲೈನ್ ಟಿಕೆಟ್ ವ್ಯವಸ್ಥೆ ಸಹ ಮಾಡಲಾಗಿದೆ.

  • ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

    ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

    ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಪ್ರವಾಸಿಗ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ಏರ್ ಫೋರ್ಸ್ ಅಧಿಕಾರಿಗಳು ಆತನನ್ನು ರಕ್ಷಣೆ ಮಾಡಿದ್ದಾರೆ.

    ದೆಹಲಿ ಮೂಲದ 19 ವರ್ಷದ ನಿಶಾಂತ್ ಗುಲ್ ಅವರನ್ನು ಏರ್ ಫೋರ್ಸ್ ಅಧಿಕಾರಿಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಬೆಟ್ಟದಿಂದ ಅಪಾಯಕಾರಿ ಜಾಗಕ್ಕೆ ಬಿದ್ದ ಹಿನ್ನೆಲೆ ನಿಶಾಂತ್ ಬೆನ್ನಿಗೆ ಗಂಭೀರ ಗಾಯವಾಗಿದೆ. ಪರಿಣಾಮ ಹೆಲಿಕಾಪ್ಟರ್ ಮೂಲಕವೇ ಯಲಹಂಕ ಏರ್ ಬೇಸ್‍ಗೆ ನಿಶಾಂತ್‍ನನ್ನು ರವಾನೆ ಮಾಡಲಾಗಿತ್ತು. ಅಲ್ಲಿಂದ ಅಸ್ಟರ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಲಾಗಿದೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಬಂದು ಅಪಾಯಕ್ಕೆ ಸಿಲುಕಿದ ಪ್ರವಾಸಿಗ!

    ಹೆಲಿಕಾಪ್ಟರ್ ಮೂಲಕ ನಿಶಾಂತ್ ರಕ್ಷಣೆಗಾಗಿ ವಿಂಗ್ ಕಮಾಂಡರ್ ಹರಸಾಹಸ ಪಡುತ್ತಿದ್ರು. ಅಲ್ಲದೆ ಈ ವೇಳೆ ನಿಶಾಂತ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಹುಡುಕಲು ಇನ್ನೂ ಕಷ್ಟವಾಗುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯಲ್ಲಿ NDRF ತಂಡ ಸಹ ನಿಶಾಂತ್ ಸಹಾಯಕ್ಕೆ ಆಗಮಿಸಿತು. ಈ ಎಲ್ಲದರ ಪರಿಣಾಮವಾಗಿ ಆತ ಇಂದು ಬದುಕುಳಿದಿದ್ದಾನೆ.

    ಏನಿದು ಘಟನೆ?
    ದೆಹಲಿ ಮೂಲದ ನಿಶಾಂತ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ವೀಕೆಂಡ್ ಎಂದು ಸ್ನೇಹಿತರ ಜೊತೆ ನಂದಿಬೆಟ್ಟಕ್ಕೆ ಬಂದಿದ್ದಾನೆ. ಈ ವೇಳೆ ಅವರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಟ್ರೆಕ್ಕಿಂಗ್ ಮಾಡುವ ವೇಳೆ ನಿಶಾಂತ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತನೇ ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾನೆ. ಪರಿಣಾಮ ನಿಶಾಂತ್ ಉಳಿಸಲು ಆಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ. ಅವರಿಗೆ ಈ ಯುವಕ ಕಡಿದಾದ ಪ್ರದೇಶ ದುರ್ಗಮ ಹಾದಿಯಲ್ಲಿ ಪತ್ತೆಯಾಗಿದ್ದನು. ಇದನ್ನೂ ಓದಿ: ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

  • ನಂದಿಬೆಟ್ಟಕ್ಕೆ ಬಂದು ಅಪಾಯಕ್ಕೆ ಸಿಲುಕಿದ ಪ್ರವಾಸಿಗ!

    ನಂದಿಬೆಟ್ಟಕ್ಕೆ ಬಂದು ಅಪಾಯಕ್ಕೆ ಸಿಲುಕಿದ ಪ್ರವಾಸಿಗ!

    ಚಿಕ್ಕಬಳ್ಳಾಪುರ: ನಂದಿಬೆಟ್ಟ ನೋಡಲು ಬಂದು ಪ್ರವಾಸಿಗ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಆತನ ರಕ್ಷಣೆಗಾಗಿ ಆಗ್ನಿಶಾಮಕದಳ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ.

    ದೆಹಲಿ ಮೂಲದ ನಿಶಾಂತ್ ಅಪಾಯಕ್ಕೆ ಸಿಲುಕಿಕೊಂಡಿರುವ ಯುವಕ. ವೀಕೆಂಡ್ ಎಂದು ನಂದಿಬೆಟ್ಟಕ್ಕೆ ಬಂದ ಹಿನ್ನೆಲೆ ನಿಶಾಂತ್ ಮತ್ತು ಆತನ ಸ್ನೇಹಿತರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಟ್ರೆಕ್ಕಿಂಗ್ ಮಾಡುವ ವೇಳೆ ನಿಶಾಂತ್ ಕಾಲು ಜಾರಿ ಬಿದ್ದಿದ್ದಾನೆ. ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಯುವಕ ಕರೆ ಮಾಡಿದ್ದಾನೆ. ಪರಿಣಾಮ ನಿಶಾಂತ್ ಉಳಿಸಲು ಆಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!

    ಕರೆ ಮಾಡಿದ ತಕ್ಷಣ ಪೊಲೀಸರು ಹಾಗೂ ಆಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಅವರಿಗೆ ಈ ಯುವಕ ಕಡಿದಾದ ಪ್ರದೇಶ ದುರ್ಗಮ ಹಾದಿಯಲ್ಲಿ ಪತ್ತೆಯಾಗಿದ್ದಾನೆ.

    ಪ್ರಸ್ತುತ ಸಿಬ್ಬಂದಿ, ನಿಶಾಂತ್ ರಕ್ಷಣೆ ಮಾಡಲು ಯತ್ನನಿಸುತ್ತಿದ್ದಾರೆ.