Tag: Nandamuri Balakrishna

  • ಅಪ್ಪು ಅಂತಿಮ ದರ್ಶನ ಪಡೆದು ತೆರಳಿದ್ದ  ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

    ಅಪ್ಪು ಅಂತಿಮ ದರ್ಶನ ಪಡೆದು ತೆರಳಿದ್ದ ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

    ಹೈದರಾಬಾದ್: ನಟ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನ ಪಡೆದು ತೆರಳಿದ್ದ ಟಾಲಿವುಡ್ ನಟ ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಆರು ತಿಂಗಳಿಂದ ಬಾಲಯ್ಯ ಅವರಿಗೆ ಭುಜದ ನೋವು ಅತಿಯಾಗಿ ಕಾಡುತ್ತಿತ್ತು. ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ ಆಪರೇಷನ್ ಮಾಡಿಸಿಕೊಂಡರೆ ಅವರು ವಿಶ್ರಾಂತಿ ಪಡೆಯಬೇಕು. ಹೀಗೆ ಮಾಡಿದರೆ, ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಬೇಕಾಗುತ್ತದೆ. ಹೀಗಾಗಿ ಅವರು ಇದನ್ನು ಮುಂದೂಡುತ್ತಲೇ ಬರುತ್ತಿದ್ದರು. ಇದನ್ನೂ ಓದಿ: ಪಂಜಾಬ್ ಲೋಕ್ ಕಾಂಗ್ರೆಸ್ -ಅಮರಿಂದರ್ ಸಿಂಗ್ ಹೊಸ ಪಕ್ಷ

    ಇಂದು ಬಾಲಕೃಷ್ಣ ಅವರಿಗೆ ತೀವ್ರವಾಗಿ ಭುಜದ ನೋವು ಬಂದಿತ್ತು. ಇದರಿಂದ ಅವರು ಕೈ ಎತ್ತಲೂ ಆಗದ ಪರಿಸ್ಥಿತಿ ಬಂದೊದಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ. ಬಿಎನ್ ಪ್ರಸಾದ್ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    Puneeth Rajkumar Special Vehicle 5

    ಈ ಆಪರೇಷನ್ ಯಶಸ್ವಿ ಆಗಿದೆ. ಬಾಲಕೃಷ್ಣ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಅವರು ಆರೋಗ್ಯಯುತವಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಅವರು ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.

    ಪುನೀತ್‍ರಾಜ್‍ಕುಮಾರ್ ಅವರು ನಿಧನವಾದ ವಿಚಾರವನ್ನು ತಿಳಿದು ಬೆಂಗಳೂರಿಗೆ ಬಂದು ಅಂತಿಮ ನಮನ ಸಲ್ಲಿಸಿದ್ದರು. ಪುನೀತ್ ಅವರ ಪಾರ್ಥಿವ ಶರೀರವನ್ನು ನೋಡುತ್ತಾ ಕಣ್ಣೀರಿಟ್ಟಿದ್ದರು.

  • ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್

    ಬೆಂಗಳೂರು: ಕನ್ನಡ ಚಿತ್ರರಂಗದ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಕಂಠೀರವ ಸ್ಟೇಡಿಯಂಗೆ ಜನಸಾಗರವೇ ಹರಿದು ಬರುತ್ತಿದೆ.

    ಪುನೀತ್ ರಾಜ್‍ಕುಮಾರ್ ಅವರ ಪಾರ್ಥವ ಶರೀರವನ್ನು ನೋಡುತ್ತಿದ್ದಂತೆ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದಾರೆ ಹಾಗೂ ರಾಜ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಇತ್ತ ಬಾಲಿವುಡ್ ನಟ ಪ್ರಭುದೇವ್ ಅವರು ಕೂಡ ಇಂದು ಬೆಂಗಳೂರಿಗೆ ಆಗಮಿಸಿ ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದದು ದುಃಖಿತರಾಗಿದ್ದಾರೆ. ಮಧ್ಯರಾತ್ರಿಯಿಂದಲೂ ಅಪ್ಪು ಅಭಿಮಾನಿಗಳ ಸಾಗರ ಕರಗಿಲ್ಲ. ಅಭಿಮಾನಿಗಳ ಜೊತೆ ಸೆಲೆಟಬ್ರಿಗಳು ಕೂಡ ನೆಚ್ಚಿನ ನಟನ ಅಂತಿಮ ದರ್ಶನ ಪಡೆದು ಕಣ್ಣೀರಾಗುತ್ತಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಈಗಾಗಲೇ ಅಪ್ಪು ಮೊದಲ ಮಗಳು ಅಮೆರಿಕಾದಿಂದ ಹೊರಟಿದ್ದು, ಸಂಜೆಯ ವೇಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ನಟನ ಅಂತ್ಯಕ್ರಿಯೆಯನ್ನು ಇಂದು ಸಂಜೆ 5.30ರ ಸುಮಾರಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಅಭಿಮಾನಿಗಳಿಗೆ ಇಂದು ಮಧ್ಯಾಹ್ನ 3 ಗಂಟೆಯವರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಹೀಗಾಗಿ ಕುಟುಂಬಸ್ಥರು 3 ಗಂಟೆಯ ಬಳಿಕ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬರದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಪುನೀತ್ ಪುತ್ರಿ ಧ್ರುತಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಸಂಜೆ 4.15ಕ್ಕೆ ಆಗಮಿಸಲಿದ್ದಾರೆ. ಧ್ರುತಿ ಅವರು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಆಪ್ತವಲಯಕ್ಕಷ್ಟೇ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

     

    ಪುನೀತ್ ಒಬ್ಬ ಒಳ್ಳೆ ಮನುಷ್ಯನಾಗಿದ್ದರು. ಅವರ ಅಗಲಿಕೆ ಆತಂಕವನ್ನುಂಟು ಮಾಡಿದೆ. ಅವರು ನನ್ನ ಸಂಬಂಧ ಅಣ್ಣ, ತಮ್ಮನ ಸಂಬಂಧವಾಗಿದೆ. ಒಂದೇ ತಾಯಿ ಮಕ್ಕಳಂತೆ ಇದ್ದೆವು. ಸಹೋದರಂತೆ ಬದುಕಿದ್ದೇವು. ನನ್ನ ಸಹೋದರ ಸಾವು ನನಗೆ ಆಘಾತವನ್ನುಂಟು ಮಾಡಿದೆ. ದೇವರು ಅನ್ಯಾಯವನ್ನು ಮಾಡಿದ್ದಾನೆ. ಅವರು ಅನಾಥಾಶ್ರಮ, ಶಾಲೆ ನಿರ್ಮಾಣ ಮಾಡಿ ಸಾಮಾಜಿ ಕಾರ್ಯವನ್ನು ಬದುಕಿದ್ದಾಗ ಮಾಡಿದ್ದಾರೆ. ಅವರ ನಿಧನದ ನಂತ್ರ ಅವರು ಕಣ್ಣನ್ನು ಧಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ಹೇಳುತ್ತಾ ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

  • ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ: ನಂದಮುರಿ ಬಾಲಕೃಷ್ಣ

    ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ: ನಂದಮುರಿ ಬಾಲಕೃಷ್ಣ

    ಹೈದರಾಬಾದ್: ಸದಾ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕವೇ ಟ್ರೋಲ್‍ಗೆ ಒಳಗಾಗುವ ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರೆಂದು ನನಗೆ ಗೊತ್ತಿಲ್ಲ. ಭಾರತ ರತ್ನ ನನ್ನ ತಂದೆ ಎನ್.ಟಿ.ರಾಮರಾವ್ ಅವರ ಕಾಲಿನ ಬೆರಳಿನ ಉಗುರಿಗೆ ಸಮ ಎಂದಿದ್ದಾರೆ. ಈ ಮೂಲಕ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ.

    ನನಗೆ ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ, ನಾನು ಕೇರ್ ಮಾಡುವುದಿಲ್ಲ. ದಶಕಗಳ ಹಿಂದೆ ಅವರು ಹಿಟ್ ಹಾಡುಗಳನ್ನು ನೀಡಿ ಆಸ್ಕರ್ ಅವಾರ್ಡ್ ಪಡೆದಿರಬಹುದು. ಆದರೆ ಆಸ್ಕರ್ ಪ್ರಶಸ್ತಿ ಮಾತ್ರವಲ್ಲ ಭಾರತ ರತ್ನವನ್ನೂ ನಾನು ಗೌರವಿಸುವುದಿಲ್ಲ. ಭಾರತ ರತ್ನ ನಮ್ಮ ತಂದೆ ಎನ್.ಟಿ.ರಾಮ ರಾವ್ ಅವರ ಕಾಲ್ಬೆರಳಿನ ಉಗುರಿಗೂ ಸಮವಿಲ್ಲ. ಎಲ್ಲ ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ ಎಂದು ಹೇಳಿದ್ದಾರೆ.

    ಟಾಲಿವುಡ್‍ಗೆ ನಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಯಾವುದೇ ಪ್ರಶಸ್ತಿ ಸರಿದೂಗಿಸಲು ಸಾಧ್ಯವಿಲ್ಲ. ಪ್ರಶಸ್ತಿಗಳು ಮಾತ್ರ ಕೆಟ್ಟದ್ದನ್ನು ಅನುಭವಿಸಬೇಕು. ನನ್ನ ಕುಟುಂಬ ಅಥವಾ ನನ್ನ ತಂದೆ ಅಲ್ಲ ಎಂದು ಖಾರವಾಗಿ ಹೇಳಿದ್ದಾರೆ.

    ಎ.ಆರ್.ರೆಹಮಾನ್ ಅವರು 1993ರಲ್ಲಿ ಬಾಲಕೃಷ್ಣ ಅವರ ನಿಪ್ಪು ರವ್ವಾ ಸಿನಿಮಾಗೆ ಹಿನ್ನೆಲೆ ಸಂಗೀತ ಕಂಪೋಸ್ ಮಾಡಿದ್ದರು. ಬಾಲಕೃಷ್ಣ ಅವರ ಸಂದರ್ಶನದ ವೀಡಿಯೋ ನೋಡುತ್ತಿದ್ದಂತೆ ರೆಹಮಾನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.