Tag: Nandamuri Balakrishna

  • ಅಪ್ಪನ ವಯಸ್ಸಿನ ನಟನಿಗೆ ಮತ್ತೆ ನಾಯಕಿಯಾದ ಸೋನಾಕ್ಷಿ ಸಿನ್ಹಾ

    ಅಪ್ಪನ ವಯಸ್ಸಿನ ನಟನಿಗೆ ಮತ್ತೆ ನಾಯಕಿಯಾದ ಸೋನಾಕ್ಷಿ ಸಿನ್ಹಾ

    ಬಾಲಿವುಡ್ (Bollywood) ಬ್ಯೂಟಿ ಸೋನಾಕ್ಷಿ ಸಿನ್ಹಾ (Sonakshi Sinha) ಇದೀಗ ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ತಲೈವಾ ಜೊತೆ `ಲಿಂಗ'(Linga) ಚಿತ್ರದಲ್ಲಿ ಸೋನಾಕ್ಷಿ ನಟಿಸಿದ್ದರು. ಅಪ್ಪನ ವಯಸ್ಸಿನ ನಟನ ಜೊತೆ ಕಾಣಿಸಿಕೊಂಡಿದ್ದೀರಾ ಎಂದು ನಟಿಯನ್ನ ಸಖತ್ ಟ್ರೋಲ್ ಮಾಡಲಾಗಿತ್ತು. ಇದೀಗ ಮತ್ತೆ ಅಪ್ಪನ ವಯಸ್ಸಿನ ನಟನ ಜೊತೆ ಸೋನಾಕ್ಷಿ ಕಾಣಿಸಿಕೊಂಡಿದ್ದಾರೆ.

    ಸೋನಾಕ್ಷಿ ಕಡೆಯದಾಗಿ ಡಬಲ್ ಎಕ್ಸ್ಎಲ್ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಅಪ್ಪನ ವಯಸ್ಸಿನ ಸ್ಟಾರ್ ನಟನಿಗೆ ಸೋನಾಕ್ಷಿ ನಾಯಕಿಯಾಗ್ತಿದ್ದಾರೆ. 2014ರಲ್ಲಿ ರಜನಿಕಾಂತ್ ನಟನೆಯ ʻಲಿಂಗʼ ಚಿತ್ರದಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡಿದ್ದರು. ಅಂದು ಅಪ್ಪನ ವಯಸ್ಸಿನ ನಟನಿಗೆ ನಾಯಕಿನಾ ಅಂತಾ ನಟಿಯನ್ನ ಸಖತ್ ಟ್ರೋಲ್ ಮಾಡಲಾಗಿತ್ತು.

    ಬಳಿಕ ತಮಗಿಂತ ಜಾಸ್ತಿ ವಯಸ್ಸಿನ ಅಂತರ ಇರುವ ನಟನ ಜೊತೆ ಸೋನಾಕ್ಷಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ತನಗಿಂತ ಜಾಸ್ತಿ ವಯಸ್ಸಿನ ಅಂತರವಿರುವ ತೆಲುಗಿನ ಸ್ಟಾರ್ ನಟ ಬಾಲಯ್ಯ ಚಿತ್ರಕ್ಕೆ ಓಕೆ ಅಂದಿದ್ದಾರೆ. `ವೀರ ಸಿಂಹ ರೆಡ್ಡಿ’ ಸಿನಿಮಾಗೆ ಈ ನಟಿ ನಾಯಕಿ. ಈ ಮುನ್ನ ಬಾಲಯ್ಯ ಚಿತ್ರದಲ್ಲಿ ನಟಿಸಲ್ಲ ಎಂದು ನಿರ್ದೇಶಕರಿಗೆ ಹೇಳಿದ್ದರಂತೆ ಈಗ ಮತ್ತೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಾದಷಾ ಶಾರುಖ್ ಖಾನ್ ನಿವಾಸದ ಗೇಟ್‌ಗೆ ವಜ್ರದ ಅಲಂಕಾರ

    ಮುಂದಿನ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ತಿಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಟಾಲಿವುಡ್ ಲೆಜೆಂಡ್‌ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ

    ಟಾಲಿವುಡ್ ಲೆಜೆಂಡ್‌ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ

    ತೆಲುಗಿನ ಲೆಜೆಂಡರಿ ನಂದಮೂರಿ ಬಾಲಕೃಷ್ಣ(Nandamuri Balakrishna) `ಅಖಂಡ’ ಸಕ್ಸಸ್ ನಂತರ `ವೀರ ಸಿಂಹ ರೆಡ್ಡಿ'(Veera Simha Reddy) ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಬಾಲಯ್ಯ ಅವರ ಮುಂದೆ ಘರ್ಜಿಸಲು ಘಟಾನುಘಟಿಗಳನ್ನೇ ಕರೆಸಲಾಗುತ್ತಿದೆ. ದುನಿಯಾ ವಿಜಯ್ (Duniya Vijay) ಆನ್‌ಬೋರ್ಡ್ ಆಗಿರುವ ಬೆನ್ನಲ್ಲೇ ಈಗ `ಕೆಜಿಎಫ್ 2′ (Kgf 2) ನಟ ಕೂಡ ಈ ತಂಡಕ್ಕೆ ಸೇರಿಕೊಂಡಿದ್ದಾರೆ.

    `ಅಖಂಡ'(Akanda Film) ಚಿತ್ರದ ಸಕ್ಸಸ್ ನಂತರ ತಮ್ಮ 107ನೇ ಸಿನಿಮಾ `ವೀರ ಸಿಂಹ ರೆಡ್ಡಿ’ಗೆ ಬಾಲಯ್ಯ ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಸಖತ್ತಾಗಿ ಶೂಟಿಂಗ್ ಕೂಡ ನಡೆಯುತ್ತಿದೆ. ಶ್ರುತಿ ಹಾಸನ್(Shruti Haasan) ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ಬಾಲಯ್ಯಗೆ ಖಡಕ್ ವಿಲನ್ ಆಗಿ ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್ ಎಂಟ್ರಿ ಕೊಟ್ಟ ಬೆನ್ನಲ್ಲೇ `ಕೆಜಿಎಫ್ 2′ ನಟ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.

     

    View this post on Instagram

     

    A post shared by B.s. Avinash (@avinashbs)

    `ಕೆಜಿಎಫ್ 2′ ಸಿನಿಮಾದಲ್ಲಿ ಖಳನಾಯಕ ಆಂಡ್ರೂಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವಿನಾಶ್ ಈಗ ಬಾಲಯ್ಯ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗಂಗಿ ರೆಡ್ಡಿ ಎಂಬ ವಿಲನ್ ಪಾತ್ರದಲ್ಲಿ ಟಾಲಿವುಡ್ ಲೆಜೆಂಡ್‌ಗೆ ಕಿಕ್ ಕೊಡಲಿದ್ದಾರೆ. ಇದೀಗ ನಿರ್ದೇಶಕ ಗೋಪಿ ಚಂದ್ ಮಲಿನೇನಿ ಜೊತೆಗಿರುವ ಅವಿನಾಶ್ ಫೋಟೋ ಕೂಡ ವೈರಲ್ ಆಗುತ್ತಿದೆ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

     

    View this post on Instagram

     

    A post shared by B.s. Avinash (@avinashbs)

    ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಜತೆ ಶ್ರುತಿ ಹಾಸನ್, ದುನಿಯಾ ವಿಜಯ್, ವರಲಕ್ಷ್ಮಿ ಶರತ್‌ಕುಮಾರ್, ಅವಿನಾಶ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿ ಇರಲಿದೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದ ಟಾಲಿವುಡ್ ಸ್ಟಾರ್ ಬಾಲಯ್ಯ

    ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದ ಟಾಲಿವುಡ್ ಸ್ಟಾರ್ ಬಾಲಯ್ಯ

    ಟಾಲಿವುಡ್ (Tollywood) ಸ್ಟಾರ್ ಬಾಲಯ್ಯ(Balayya) ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವುದರ ಜೊತೆಗೆ ಒಟಿಟಿಯಲ್ಲಿ ಚಾಟ್ ಶೋನ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ಸದ್ಯ ತಮ್ಮ ಶೋನಲ್ಲಿ ನಟ ಬಾಲಯ್ಯ ತಮ್ಮ ಕ್ರಶ್ ಯಾರೆಂದು ರಿವೀಲ್ ಮಾಡಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ(Rashmika Mandanna) ನನ್ನ ಕ್ರಶ್ ಅಂತಾ ಬಾಲಯ್ಯ ಹೇಳಿದ್ದಾರೆ.

    `ಅಖಂಡ'(Akanda Film) ಸೂಪರ್ ಸಕ್ಸಸ್ ನಂತರ ಒಟಿಟಿಯಲ್ಲಿ `ಅನ್‌ಸ್ಟಾಪಬಲ್ 2′ (Unstoppable 2) ಚಾಟ್ ಶೋನ ಬಾಲಯ್ಯ ನಡೆಸಿಕೊಡುತ್ತಿದ್ದಾರೆ. ಈ ಶೋನ ಮೊದಲ ಸಂಚಿಕೆಯ ಅತಿಥಿಯಾಗಿ ನಟ ವಿಶ್ವಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಬಾಲಯ್ಯ ಅವರ ನಿದ್ದೆಗೆಡಿಸಿರುವ ಸುಂದರಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಆಕೆ ತನ್ನ ಕ್ರಶ್ ಎಂದು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಈ ಶೋನಲ್ಲಿ ನಟ ಬಾಲಯ್ಯಗೆ ವಿಶ್ವಕ್ ಮತ್ತು ಸಿದ್ಧು ಬಾಲಯ್ಯ ಅವರಿಗೆ ನಿಮ್ಮ ಕ್ರಶ್ ಯಾರೆಂದು ಕೇಳಿದರು. ಇದಕ್ಕೆ ಉತ್ತರಿಸಿದ ಬಾಲಯ್ಯ ರಶ್ಮಿಕಾ ಮಂದಣ್ಣ ಎಂದು ಹೇಳಿದರು. ರಶ್ಮಿಕಾ ತೆಲುಗಿನಲ್ಲಿ(Tollywood) ಮಿಂಚಿ ಸದ್ಯ ಬಾಲಿವುಡ್‌ಗೆ(Bollywood) ಹಾರಿದ್ದಾರೆ.

    ತೆಲುಗು, ತಮಿಳು ಜೊತೆಗೆ ಬಾಲಿವುಡ್‌ನಲ್ಲೂ ನಟಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ರಶ್ಮಿಕಾ ಎಂದರೆ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟ. ಈ ಬಗ್ಗೆ ಸ್ವತಃ ಬಾಲಯ್ಯ(Nandamuri Balakrishna) ಅವರೇ ರಿವೀಲ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲಿದ್ದಾರೆ ದಕ್ಷಿಣದ ಸ್ಟಾರ್ಸ್

    `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲಿದ್ದಾರೆ ದಕ್ಷಿಣದ ಸ್ಟಾರ್ಸ್

    `ಗಂಧದ ಗುಡಿ’ (Gandadagudi) ಇದೇ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಜೊತೆ ದಕ್ಷಿಣದ ಸ್ಟಾರ್ಸ್ ಸಾಥ್ ಕೊಡಲಿದ್ದಾರೆ. `ಪುನೀತ ಪರ್ವ’ (Puneetha Parva) ಕಾರ್ಯಕ್ರಮದಲ್ಲಿ ಸೌತ್ ಸ್ಟಾರ್‌ಗಳ ದಂಡೇ ಬೆಂಗಳೂರಿಗೆ ಬರಲಿದೆ.

    ಅಪ್ಪು ನಟನೆಯ ಕೊನೆಯ ಕನಸಿನ ಸಿನಿಮಾ `ಗಂಧದ ಗುಡಿ’ಗೆ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಇಡೀ ಅಣ್ಣಾವ್ರ ಕುಟುಂಬವೇ ಕೈ ಜೋಡಿಸಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ತಯಾರಿ ನಡೆಯುತ್ತಿದೆ. ಚಿತ್ರದ ಪ್ರೀ -ರಿಲೀಸ್ ಇವೆಂಟ್‌ಗೆ ಕರ್ನಾಟಕದ ಮೂಲೆ ಮೂಲೆಯಿಂದ ಅಪ್ಪು ಫ್ಯಾನ್ಸ್ ಬರಲಿದ್ದಾರೆ. ಇನ್ನೂ ಕಾರ್ಯಕ್ರಮ ರಂಗು ಹೆಚ್ಚಿಸಲು ಸೌತ್‌ನ ಸೂಪರ್ ಸ್ಟಾರ್ಸ್ ಕೂಡ ಸಾಥ್ ಕೊಡಲಿದ್ದಾರೆ.‌ ಇದನ್ನೂ ಓದಿ:ಮತ್ತೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್ ರಶ್ಮಿಕಾ ಮಂದಣ್ಣ

    ಅಪ್ಪು ಸ್ನೇಹಜೀವಿ ಆಗಿದ್ದರು. ಎಲ್ಲಾ ಚಿತ್ರರಂಗದ ಕಲಾವಿದರ ಜೊತೆಗೆ ಒಡನಾಟವಿದ್ದ ಕಾರಣ ದಕ್ಷಿಣದ ಸ್ಟರ‍್ಸ್ಗಳಾದ ನಂದಮುರಿ  ಬಾಲಕೃಷ್ಣ(Nandamuri Balakrishna), ಸೂರ್ಯ(Surya), ಕಮಲ್ ಹಾಸನ್ (Kamal Hassan), ರಾಣಾ ದಗ್ಗುಬಾಟಿ (Rana Daggubati) ಅವರಿಗೆ ಅಣ್ಣಾವ್ರ ಕುಟುಂಬದಿಂದ ಆಹ್ವಾನ ನೀಡಲಾಗಿದೆ. ಅಪ್ಪು ನಟನೆಯ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಈ ಎಲ್ಲಾ ಸ್ಟಾರ್‌ಗಳು ಬರಲಿದ್ದಾರೆ.

    ಅಕ್ಟೋಬರ್ 21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. 5 ಲಕ್ಷಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ.

    Live Tv
    [brid partner=56869869 player=32851 video=960834 autoplay=true]

  • ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

    ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

    ನ್ನಡದ ಬ್ಯೂಟಿ ಶ್ರೀಲೀಲಾಗೆ ಟಾಲಿವುಡ್ ಸೂಪರ್‌ಸ್ಟಾರ್ ಜೊತೆ ನಟಿಸುವ ಅದೃಷ್ಟ ಖುಲಾಯಿಸಿದೆ. ಕನ್ನಡದ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವಾಗಲೇ ಸೌತ್‌ನಿಂದ ಸಾಲು ಸಾಲು ಸಿನಿಮಾಗಳಿಗೆ ಆಫರ್‌ಗಳು ಅರಸಿ ಬರುತ್ತಿದೆ. ಸದ್ಯ ನಂದಮೂರಿ ಬಾಲಕೃಷ ಅವರ ಜೊತೆ ಕಾಣಿಸಿಕೊಳ್ಳುವ ಅವಕಾಶ ನಟಿ ಶ್ರೀಲೀಲಾ ಗಿಟ್ಟಿಸಿಕೊಂಡಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈ ಟು ಲವ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟಿ ಶ್ರೀಲೀಲಾ, ಅದ್ಯಾವಾಗ ತೆಲುಗಿನ ಲೆಜೆಂಡರಿ ಡೈರೆಕ್ಟರ್ ರಾಘವೇಂದ್ರ ರಾವ್ ಅವರ ಕಣ್ಣಿಗೆ ಬಿದ್ರೋ ಅಲ್ಲಿಂದ ಅದೃಷ್ಟನೇ ಚೇಂಜ್ ಆಯ್ತು. `ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟಿಸಿದ ಮೊದಲ ಚಿತ್ರ ಅಷ್ಟೇನು ಸೌಂಡ್ ಮಾಡದೇ ಇದ್ರು, ಶ್ರೀಲೀಲಾ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ರು. ಈಗ ನಂದಮೂರಿ ಬಾಲಕೃಷ ಅವರ ಜೊತೆ ನಟಿಸೋದಕ್ಕೆ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

    ಸೂಪರ್ ಸ್ಟಾರ್ ನಂದಮೂರಿ ಬಾಲಯ್ಯ ಅವರಿಗೆ `ಸರಿಲೇರು ನೀಕೆವ್ವರು’ ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶನ ಮಾಡ್ತಿದ್ದಾರೆ. ಡಿಫರೆಂಟ್ ಕಥೆಯಲ್ಲಿ ವಯೋವೃದ್ಧನ ಪಾತ್ರಕ್ಕೆ ಬಾಲಯ್ಯ ಜೀವ ತುಂಬ್ತಿದ್ದಾರೆ. ಈ ಚಿತ್ರದಲ್ಲಿ ಬಾಲಯ್ಯಗೆ ತಂಗಿ ರೋಲ್‌ನಲ್ಲಿ ಶ್ರೀಲೀಲಾ ಮಿಂಚಲಿದ್ದಾರೆ. ಬಾಲಯ್ಯ ಈ ಚಿತ್ರದ ಹೈಲೆಟ್ ಆಗಿದ್ದು, ಪ್ರಮುಖ ಪಾತ್ರದಲ್ಲಿ ಭರಾಟೆ ಬ್ಯೂಟಿ ಶ್ರೀಲೀಲಾ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಇನ್ನು ಶ್ರೀಲೀಲಾ ಲಿಸ್ಟ್‌ನಲ್ಲಿ, ನವೀನ್ ಪೋಲಿಶೆಟ್ಟಿ ಜತೆ `ಜಾತಿರತ್ನಾಲು’, ರವಿತೇಜಾ ಜತೆ `ಧಮಾಕ’, ವೈಷ್ಣವ್ ತೇಜ್ ಜತೆ ಹೊಸ ಪ್ರಾಜೆಕ್ಟ್, ಮತ್ತು ಮಹೇಶ್ ಬಾಬು ಚಿತ್ರದಲ್ಲೂ ಕಿಸ್ ನಟಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ ಕನ್ನಡದ ನಟಿ ಪರಭಾಷಾ ಚಿತ್ರಗಳಲ್ಲೂ ಸುದ್ದಿ ಮಾಡ್ತಿರೋದು ನೋಡಿ ಫ್ಯಾನ್ಸ್ ಥ್ರಿಲ್ ಅಗಿದ್ದಾರೆ.

  • ದುನಿಯಾ ವಿಜಯ್ ಮತ್ತು ಬಾಲಯ್ಯ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್

    ದುನಿಯಾ ವಿಜಯ್ ಮತ್ತು ಬಾಲಯ್ಯ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್

    `ಸಲಗ’ ಭರ್ಜರಿ ಸಕ್ಸಸ್ ನಂತರ ಭೀಮನ ಅವತಾರವೆತ್ತಿ ಟಾಲಿವುಡ್ ಲೆಜೆಂಡ್ ಬಾಲಯ್ಯ ಜತೆ ಅಖಾಡಕ್ಕೆ ಇಳಿದಿದ್ದಾರೆ. ಬಾಲಯ್ಯ ಮತ್ತು ದುನಿಯಾ ವಿಜಯ್ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಪವರ್‌ಫುಲ್ ಟೈಟಲ್ ಕೂಡ ಫಿಕ್ಸ್ ಆಗಿದೆ.

    ದುನಿಯಾ ವಿಜಯ್ ಅಭಿನಯದ `ಸಲಗ’ ಸೂಪರ್ ಸಕ್ಸಸ್ ನಂತರ ಇದೀಗ `ಭೀಮ’ ಚಿತ್ರದ ನಿರ್ದೇಶನದ ಜವಬ್ದಾರಿ ಕೂಡ ಕೈಗೆತ್ತಿಕೊಂಡಿದ್ದಾರೆ. ನಟನಾಗಿ ಕಮ್ ನಿರ್ದೇಶಕನಾಗಿ ಪಳಗಿರೋ ವಿಜಯ್‌ಗೆ ತೆಲುಗು ಚಿತ್ರರಂಗ ರೆಡ್ ಕಾರ್ಪೆಟ್ ಹಾಕಿ ಕರೆಯುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರಕ್ಕೆ ದುನಿಯಾ ವಿಜಯ್ ಪ್ರಮುಖ ಪಾತ್ರಕ್ಕೆ ಜೀವ ತುಂಬ್ತಿದ್ದಾರೆ. ಬಾಲಯ್ಯ ನಟನೆಯ ಹೊಸ ಸಿನಿಮಾಗೆ `ಅಣ್ಣಗಾರು’ ಅನ್ನೋ ಪವರ್‌ಫುಲ್ ಟೈಟಲ್ ಇಡಲಾಗಿದೆ.

    `ಅಖಂಡ’ ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಬರಲು ಬಾಲಯ್ಯ ಸಜ್ಜಾಗಿದ್ದಾರೆ. ಇನ್ನು ಗೋಪಿಚಂದ್ ಮಲಾನೇನಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಬಾಲಯ್ಯ ನಟನಯೆ 107ನೇ ಚಿತ್ರಕ್ಕೆ `ಅಣ್ಣಗಾರು’ ಟೈಟಲ್ ಕೂಡ ಫಿಕ್ಸ್ ಫೈನಲ್ ಆಗಿದೆ. ಬಾಲಯ್ಯಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    `ಅಣ್ಣಗಾರು’ ಪವರ್‌ಫುಲ್ ಟೈಟಲ್ ಮೂಲಕ ಬಾಲಯ್ಯ ಮತ್ತು ದುನಿಯಾ ವಿಜಯ್ ಬರುತ್ತಿದ್ದಾರೆ. ಸದ್ಯದಲ್ಲೇ ಚಿತ್ರತಂಡದಿಂದ ಟೈಟಲ್ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ. ಲೆಜೆಂಡರಿ ಆಕ್ಟರ್ ಬಾಲಯ್ಯ ಮತ್ತು ದುನಿಯಾ ವಿಜಯ್ ನಟನೆಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

  • ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ :  ಯಾರದು ಪ್ರತಾಪ್ ರೆಡ್ಡಿ?

    ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?

    ಮೊನ್ನೆಯಷ್ಟೇ ದುನಿಯಾ ವಿಜಯ್ ತೆಲುಗಿನ ತಮ್ಮ ಚೊಚ್ಚಲು ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಒಂದು ವಾರ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಇನ್ನೂ ಹೆಸರಿಡದ ಆ ಸಿನಿಮಾದಲ್ಲಿನ ವಿಜಯ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಈ ಸಿನಿಮಾದಲ್ಲಿ ವಿಜಯ್ ಅವರ ಪಾತ್ರದ ಹೆಸರನ್ನೂ ರಿವಿಲ್ ಮಾಡಲಾಗಿದೆ. ಮುಸಳಿ ಮಡಗು ಪ್ರತಾಪ್ ರೆಡ್ಡಿ ಹೆಸರಿನ ಪಾತ್ರವನ್ನು ವಿಜಯ್ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾ

    ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ಈಗಾಗಲೇ ತೆರಳಿದ್ದಾರೆ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ.

  • ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ಮೊದಲ ಬಾರಿಗೆ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಓದಿದ್ದೀರಿ. ಆ ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನಡೆದಿದೆ. ಅಂದು ದುನಿಯಾ ವಿಜಯ್ ಹೋಗಿರಲಿಲ್ಲ. ಹಾಗಾಗಿ ವಿಜಯ್ ಆ ಚಿತ್ರದಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಈ ಎಲ್ಲದಕ್ಕೂ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ. ನೆನ್ನೆಯಷ್ಟೇ ದುನಿಯಾ ವಿಜಯ್ ತೆಲುಗು ಸಿನಿಮಾದ ಶೂಟಿಂಗ್ ಗಾಗಿ ತೆರಳಿದ್ದಾರೆ. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

    ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ತೆರಳಿದ್ದಾರೆ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ. ಎರಡು ವಾರದಿಂದ ಸಿನಿಮಾದ ಶೂಟಿಂಗ್ ನಡೆದಿದ್ದು, ಇಂದಿನಿಂದ ದುನಿಯಾ ವಿಜಯ್ ಅವರ ದೃಶ್ಯಗಳನ್ನು ಸೆರೆ ಹಿಡಿಯುತ್ತಾರಂತೆ ನಿರ್ದೇಶಕರು.

  • ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಖಂಡ ಸಿನಿಮಾದ ನಂತರ ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿರುವ ನಂದಮೂರಿ ಬಾಲಕೃಷ್ಣ ಜತೆ ಹೊಸ ಸಿನಿಮಾದಲ್ಲಿ ನಟಿಸಲಾರೆ ಎಂದಿದ್ದಾರಂತೆ ಕನ್ನಡದ ಹುಡುಗಿ, ಟಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಕೃತಿ ಶೆಟ್ಟಿ. ಇನ್ನೂ ಹದಿನೆಂಟರ ಆಸುಪಾಸಿನಲ್ಲಿರುವ ಈ ನಟಿಯು ಬಾಲಯ್ಯನವರ ವಯಸ್ಸಿನ ಕಾರಣಕ್ಕಾಗಿ ನಟಿಸಲು ನಿರಾಕರಿಸಿರುವುದು ಭಾರೀ ಸುದ್ದಿ ಮಾಡಿದೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

    “ನಂದಮೂರಿ ಅವರಿಗೆ ವಯಸ್ಸಾಗಿದೆ. ನನಗಿನ್ನೂ ಹದಿನೆಂಟರ ಹರೆಯ. ವಯಸ್ಸಿನ ಭಾರೀ ಅಂತರ ಇರುವ ನಟರ ಜತೆ ಈಗಲೇ ಕೆಲಸ ಮಾಡಿದರೆ, ನನ್ನ ಕೆರಿಯರ್  ತೊಂದರೆ ಆಗುತ್ತದೆ. ಹಾಗಾಗಿ ನಾನು ಬಾಲಯ್ಯ ಅವರ ಚಿತ್ರದಲ್ಲಿ ನಟಿಸಲಾರೆ” ಎಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲು ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಕೃತಿ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೃತಿ ಜಾಗಕ್ಕೆ ಸದ್ಯ ಶ್ರುತಿ ಹಾಸನ್ ಬಂದಿದ್ದಾರಂತೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಕನ್ನಡತಿ ಕೃತಿ ಶೆಟ್ಟಿ ಈ ಸಿನಿಮಾದಿಂದ ಹೊರ ನಡೆದಿದ್ದರೂ, ಮತ್ತೋರ್ವ ಕನ್ನಡದ ನಟ ದುನಿಯಾ ವಿಜಯ್, ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ಗೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ. ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

  • ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

    ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

    ತೆಲುಗಿನ ಹೆಸರಾಂತ ನಟ ನಂದಮೂರಿ ಬಾಲಕೃಷ್ಣ ಅವರ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು. ಒಂದು ಕಡೆ ದುನಿಯಾ ವಿಜಯ್ ಅವರ ಸಲಗ ಚಿತ್ರದ ಯಶಸ್ಸು ಮತ್ತೊಂದು ಕಡೆ ಬಾಲಯ್ಯ ಸಿನಿಮಾ, ಹೀಗಾಗಿ ವಿಜಯ್ ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು


    ಶುಕ್ರವಾರ ಎನ್.ಬಿ.ಕೆ 107 ಚಿತ್ರಕ್ಕೆ ಮುಹೂರ್ತವಾಗಿದೆ. ನಾಯಕ ಬಾಲಯ್ಯ, ನಾಯಕಿ ಶ್ರುತಿ ಹಾಸನ್ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆದರೆ, ದುನಿಯಾ ವಿಜಯ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
    ದುನಿಯಾ ವಿಜಯ್ ಅವರಿಗೆ ಟಾಲಿವುಡ್ ನಲ್ಲಿ ಇದು ಮೊದಲ ಸಿನಿಮಾ. ಹಾಗಾಗಿ ಮುಹೂರ್ತ ಸಮಾರಂಭಕ್ಕೆ ಅವರನ್ನು ಕರೆಯಿಸಿ, ತೆಲುಗು ಸಿನಿಮಾ ರಂಗಕ್ಕೆ ವಿಜಯ್ ಅವರನ್ನು ಪರಿಚಯಿಸುತ್ತಾರೆ ಎನ್ನುವುದು ಅವರ ಅಭಿಮಾನಿಗಳ ನಂಬಿಕೆ ಆಗಿತ್ತು. ಅದು ಹುಸಿಯಾಗಿದೆ. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ


    ಈ ಸಿನಿಮಾದಲ್ಲಿ ವಿಜಯ್ ಅವರಿಗೆ ಬೇರೆ ರೀತಿಯ ಗೆಟಪ್ ನೀಡಲಾಗಿದೆ. ಅಲ್ಲದೇ, ಅದೊಂದು ರೀತಿಯಲ್ಲಿ ನೆಗೆಟಿವ್ ಪಾತ್ರವಾಗಿದ್ದರಿಂದ ವಿಜಯ್ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಗುಟ್ಟುಗಳು ಮುಹೂರ್ತದಲ್ಲಿ ರಟ್ಟಾಗಬಾರದು ಎನ್ನುವ ಉದ್ದೇಶವೂ ಮುಹೂರ್ತದಿನದಂದು ಹೋಗದೇ ಇರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
    ಶುಕ್ರವಾರವಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ದುನಿಯಾ ವಿಜಯ್, ಬಾಲಯ್ಯನ ತಂಡ ಸೇರಲಿದ್ದಾರೆ.